Thursday, 19th September 2024

ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಸುವ ಹೆಜ್ಜೆೆಗಳು

ಪ್ರಚಲಿತ

ಗೊರೂರು ಶಿವೇಶ್, ಹವ್ಯಾಸಿ ಬರಹಗಾರರು 

ಸ್ವಚ್ಛಹಾಳೆಗಳಂತಹ ಮಕ್ಕಳ ಮನದಲ್ಲಿ ಮಾತೃಭಾಷೆಯ ಅಭಿಮಾನದ ಮುದ್ರೆೆ ಒತ್ತುವುದರಲ್ಲಿ ಶಿಕ್ಷಕ, ನಾಯಕ, ಲೇಖಕ, ನಿರ್ದೇಶಕರ ಪಾತ್ರ ಪ್ರಮುಖವಾದುದು.

ಮಕ್ಕಳ ಸಂಖ್ಯೆೆ ಎಷ್ಟೇ ಇರಲಿ ಸರಕಾರಿ ಶಾಲೆಗಳನ್ನು ಮುಚ್ಚದೆ ಬಲಿಷ್ಠಗೊಳಿಸುವುದಾಗಿ ಸರಕಾರ ತಿಳಿಸಿದೆ. ಕುಟುಂಬ ಯೋಜನೆಯ ಜಾಗೃತಿ, ನಗರದೆಡೆಗೆ ವಲಸೆ, ಕುಗ್ರಾಾಮಕ್ಕೂ ಬರುತ್ತಿಿರುವ ಖಾಸಗಿ ಶಾಲೆಗಳ ವಾಹನಗಳು, ಶಿಕ್ಷಣ ಹಕ್ಕು ಮಸೂದೆಯಿಂದಾಗಿ ಶೇ.25 ರಷ್ಟು ಬಡ ಮತ್ತು ಹಿಂದುಳಿದ ವಿದ್ಯಾಾರ್ಥಿಗಳಿಗೆ ನೀಡಲಾಗುವ ಮೀಸಲಾತಿಯಿಂದಾಗಿ ಅದೆಷ್ಟೆೆ ಪ್ರಲೋಭನೆ ಒಡ್ಡಿಿದರೂ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆೆ ಕುಸಿದಿದೆ.

ಈ ರೀತಿ ಕೃತಕ ಆಮ್ಲಜನಕವನ್ನು ನೀಡುವುದರ ಮೂಲಕ ಸರಕಾರಿ ಶಾಲೆಗಳನ್ನು ಮತ್ತು ಕನ್ನಡವನ್ನು ಎಷ್ಟು ಕಾಲ ಬದುಕಿಸಿಕೊಳ್ಳಬಹುದು? ಐದು, ಹತ್ತಕ್ಕಿಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳು ಮುಂದಿನ ವರ್ಷಗಳಲ್ಲಿ ಒಂದು-ಎರಡಕ್ಕೆೆ ಕುಸಿದರೆ ಅದಕ್ಕೆೆ ಪರ್ಯಾಯ ಕ್ರಮಗಳೇನು? ‘ಮಗುವಿಗೊಂದು ತರಗತಿ, ತರಗತಿಗೊಬ್ಬ ಶಿಕ್ಷಕ’. ಎಷ್ಟರಮಟ್ಟಿಿಗೆ ಸಾಧು? ಇಂಥ ಅನೇಕ ಪ್ರಶ್ನೆೆಗಳು ಹುಟ್ಟಿಿಕೊಳ್ಳಲಾರಂಭಿಸುತ್ತವೆ. ಇಂದು ಕನ್ನಡವನ್ನು ಉಳಿಸುವ ಕಡೆ ಎಲ್ಲರ ಚಿತ್ತ ಹರಿದಿದೆಯೇ ಹೊರತು ಕನ್ನಡ ಬೆಳೆಸುವ ಕಡೆ ಚಿಂತನೆ ಕಡಿಮೆಯಾಗಿದೆ. ನಮ್ಮ ಅಭಿಮಾನದ ಭಾಷೆ ನಮಗೆ ಅನ್ನ ನೀಡುವುದೆ ಎಂಬುದೇ ಈಗಿನ ಪ್ರಶ್ನೆೆಯಾಗಿದೆ. ಭಾಷಾ ಮಾಧ್ಯಮ ಶಿಕ್ಷಣಕ್ಕೆೆ ಒತ್ತಾಾಯಿಸುತ್ತಿಿರುವ ಸಂದರ್ಭದಲ್ಲಿಯೆ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಮಾಧ್ಯಮವಿರಲಿ ಭಾಷೆಯನ್ನಾಾಗಿಯೂ ಕಲಿಸದೇ ಇರುವುದು ಕಂಡು ಬರುತ್ತಿಿದೆ. ಕಾಲದ ಓಟದಲ್ಲಿ ಮುಂದಿರುವ ಇವರು ಮುಂದೆ ಕರ್ನಾಟಕದಲ್ಲಿ ತಮ್ಮ ಮಗುವಿಗೆ ಉದ್ಯೋೋಗಾವಕಾಶ ಕಡಿಮೆಯಾದರೆ ಎಂದೆಣಿಸಿ ತಮ್ಮ ಮಗುವಿಗೆ ಕನ್ನಡದ ಬದಲು ಹಿಂದಿಯನ್ನೊೊ, ಸಂಸ್ಕೃತಯನ್ನೋೋ ಕಲಿಸುತ್ತಿಿದ್ದಾಾರೆ. ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮಕ್ಕೆೆ ಮಾರುಹೋಗಿ ನ್ಯಾಾಷನಲ್, ಇಂಟರ್ ನ್ಯಾಾಷನಲ್ ಹೆಸರನ್ನು ಹೊತ್ತ ಶಾಲೆಗಳಿಗೆ ದಾಖಲು ಮಾಡುತ್ತಿಿದ್ದಾಾರೆ.

ಎಚ್ಚೆೆತ್ತ ಸರಕಾರ ಕಳೆದ ಸಾಲಿನಿಂದ ಸಿಬಿಎಸ್‌ಸಿ ಪಠ್ಯಕ್ರಮ ಜಾರಿಗೆ ತರುವುದಾಗಿ ತಿಳಿಸಿದೆ. ಈಗ ಮಕ್ಕಳನ್ನು ಆಕರ್ಷಿಸಲು ಖಾಸಗಿ ಶಿಕ್ಷಣ ಸಂಸ್ಥೆೆಗಳು ಇನ್ನಾಾವ ಆಮಿಷಗಳನ್ನೊೊಡ್ಡುತ್ತವೆ ಎಂಬುದನ್ನು ಕುತೂಹಲಕಾರಿ ಸಂಗತಿಯಾಗಿದೆ. ವಿಪರ್ಯಾಸವೆಂದರೆ ಪ್ರಾಾಥಮಿಕ ಶಿಕ್ಷಣವನ್ನು ನೀಡಲು ಖಾಸಗಿ ಶಾಲೆಯನ್ನರಸುವ ಪೋಷಕರು ಉನ್ನತ ಶಿಕ್ಷಣದ ಸಂದರ್ಭದಲ್ಲಿ ಸರಕಾರಿ, ಇಲ್ಲವೆ ಅನುದಾನಿತ ಶಿಕ್ಷಣ ಸಂಸ್ಥೆೆಗಳನ್ನೇ ಆಯ್ಕೆೆ ಮಾಡಿಕೊಳ್ಳುತ್ತಾಾರೆ. ಇದಕ್ಕೆೆ ದುಬಾರಿ ಡೊನೇಷನ್‌ಗಿಂತ ಮುಖ್ಯವಾಗಿ ಉನ್ನತ ಶಿಕ್ಷಣದ ಸಂದರ್ಭದಲ್ಲಿ ವಿದ್ಯಾಾರ್ಥಿಗಳು ಪ್ರಾಾಧ್ಯಾಾಪಕರನ್ನು ಮಾರ್ಗದರ್ಶಕರಂತೆ ಮಾತ್ರ ಪರಿಗಣಿಸಿ, ಸ್ವ ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಿಿರುವುದು.

ಇನ್ನು ಕನ್ನಡವನ್ನು ಜನಪ್ರಿಿಯಗೊಳಿಸುವಲ್ಲಿ ಎಷ್ಟು ಪ್ರಯತ್ನವಾಗಿದೆ? ನಾವೆಲ್ಲ ಕನ್ನಡದ ಹೆಸರಿನಲ್ಲಿ ಕಲಿತದ್ದು ಸಂಸ್ಕೃತವಲ್ಲದೆ ಬೇರೆ ಏನು? ವಿಷಯ ತಜ್ಞರು ಪಠ್ಯಪುಸ್ತಕ ರೂಪಿಸುವ ಸಂದರ್ಭದಲ್ಲಿ ಸಮಾನಾರ್ಥಕ ಪದಗಳಿಗಾಗಿ ಸಂಸ್ಕೃತದ ಕಡೆಗೆ ಮುಖ ಮಾಡಿದ್ದಾಾರೆ. ಹೊರತು ಮೂಲ ಕನ್ನಡದ ಪದಗಳತ್ತ ಅಲ್ಲ. ಹೀಗಾಗಿಯೆ ಇಂದು ಹೊತ್ತಾಾರೆ, ಏರುಹೊತ್ತು, ಇಳಿಹೊತ್ತು ಜಾಗದಲ್ಲಿ ಪ್ರಾಾತಃಕಾಲ, ಅಪರಾಹ್ನ, ಸಾಯಂಕಾಲದಂಥ ಪದಗಳು ಮೂಡಣ, ಪಡುವಣ, ತೆಂಕಣ, ಬಡಗಣದಂಥ ಜಾಗದಲ್ಲಿ ಪೂರ್ವ, ಪಶ್ಚಿಿಮ,

ಇಂದು ಕನ್ನಡವನ್ನು ಉಳಿಸುವ ಕಡೆ ಎಲ್ಲರ ಚಿತ್ತ ಹರಿದಿದೆಯೇ ಹೊರತು ಕನ್ನಡ ಬೆಳೆಸುವ ಕಡೆ ಚಿಂತನೆ ಕಡಿಮೆಯಾಗಿದೆ. ನಮ್ಮ ಅಭಿಮಾನದ ಭಾಷೆ ನಮಗೆ ಅನ್ನ ನೀಡುವುದೆ ಎಂಬುದೇ ಈಗಿನ ಪ್ರಶ್ನೆೆಯಾಗಿದೆ. ಭಾಷಾ ಮಾಧ್ಯಮ ಶಿಕ್ಷಣಕ್ಕೆೆ ಒತ್ತಾಾಯಿಸುತ್ತಿಿರುವ ಸಂದರ್ಭದಲ್ಲಿಯೆ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಮಾಧ್ಯಮವಿರಲಿ ಎಂಬುದು ಆಶಯವಾಗಿದೆ.

ಉತ್ತರ, ದಕ್ಷಿಣದಂಥ ಪದಗಳನ್ನು ಬಳಸುತ್ತಿಿದ್ದೇವೆ. ವಿಜ್ಞಾಾನದ ಕಲಿಕೆಯನ್ನು ಕಷ್ಟವಾಗಿಸಿದ್ದು ಸಂಸ್ಕೃತ ಕಾರಣವೇ ಹೊರತು ಬೇರೇನಿಲ್ಲ. * ಔಅಖಉ್ಕ ಎಂಬ ಪದದ ವಿಸ್ತರಣೆ * ೞಔಜಿಜಠಿ ಅಞ್ಝಜ್ಛಿಿಜ್ಚಿಿಠಿಜಿಟ್ಞ ಆ ಖಠಿಜಿಞ್ಠ್ಝಠಿಛಿ ಉಞಜಿಜಿಟ್ಞ ್ಛ ್ಕಠಿಜಿಟ್ಞ’ ಎಂದು. ಆದರೆ, ಇದು ಕನ್ನಡದಲ್ಲಿ ‘ಚೋದಿತ ಬೆಳಕಿನ ಉತ್ಸರ್ಜನೆ ಮತ್ತು ಸಂವರ್ಧನೆ’ ಎಂದಾಗಿದೆ. ಇದರಲ್ಲಿ ಬೆಳಕು ಎಂಬ ಪದವನ್ನು ಮಾತ್ರ ತಿಳಿದಿದೆಯೆ ಹೊರತು ಉಳಿದ ಪದಗಳ ಅರ್ಥವನ್ನು ತಿಳಿಯುವುದಿರಲಿ, ಉಚ್ಛಾಾರಣೆ ಮಾಡಲು ತಿಣುಕಾಡಬೇಕಾದ ಪರಿಸ್ಥಿಿತಿ. ಇನ್ನು ಪೋಲಿಸ್, ಎಂಜಿನಿಯರ್, ಮುಂತಾದ ಪದಗಳಿಗೆ ಆರಕ್ಷಕ, ಅಭಿಯಂತರ ಮುಂತಾದ ಪದಗಳನ್ನು ಪ್ರಯೋಗಿಸಿ, ಅವು ಆಡುಭಾಷೆಯ ಪ್ರಯೋಗದಲ್ಲಿಲ್ಲದೆ ಕೇವಲ ನಾಮಫಲಕಗಳಲ್ಲಿ ಮಾತ್ರ ಇದೆ.

ಹಾಗೆಯೇ ಭಾಷಾ ತಜ್ಞರು, ವಿಮರ್ಶಕರು ಬಳಸುವ ಭಾಷೆಯಂತೂ ಸಾಮಾನ್ಯ ಜನರಿಂದ ದೂರವೇ ಇದೆ. ಇಂದು ಒಂದು ಸಿನಿಮಾ ವಿಮರ್ಶೆಯಷ್ಟೇ ಒಂದು ಕೃತಿಯ ವಿಮರ್ಶೆಯೂ ಸಾಮಾನ್ಯ ಓದುಗನ ಪಾಲಿಗೆ ಎಟುಕಬೇಕಾಗಿದೆ. ಸಹೃದಯ ಓದುಗ ಕೃತಿಯೆಡೆಗೆ ಆಕರ್ಷಿಸುವಂತೆ ಮಾಡಬೇಕಾಗಿದೆ. ‘ಡಿ.ಆರ್.ನಾಗರಾಜರ ಕನ್ನಡ ಸಂವರ್ಧನೆ’ ಎಂಬ ಪಠ್ಯವಿದೆ. ಬೋಧಕರೆ ಅರ್ಥ ಮಾಡಿಕೊಳ್ಳಲು ತಿಣುಕಬೇಕಾದ ಚಿಂತನೆಯ ವಿದ್ಯಾಾರ್ಥಿಗಳಿಗೆ ಅರ್ಥವಾಗುವ ಬಗೆ ಹೇಗೆ? ಹೀಗಾಗಿ ಸರಳವಾದ ಬಳಕೆಯಲ್ಲಿರುವ ಕನ್ನಡ ಪದಗಳನ್ನು ಇಲ್ಲದಿದ್ದರೆ ನೇರವಾಗಿ ಇಂಗ್ಲಿಿಷ್ ಪದಗಳನ್ನು ಬಳಸಿ ಈ ಗೊಂದಲಗಳನ್ನು ಪರಿಹರಿಸಲು ಸಾಧ್ಯವಿದೆ.

ಇನ್ನು ‘ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಸಹಿ ಮಾಡುವುದನ್ನು ಕಲಿಸಿ’ ಎಂಬ ಸರಕಾರದ ಹಿಂದೆ ಮಾಡಿದ್ದ ನಿರ್ಧಾರವು ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಮೂಡಿಸಲು ಇಟ್ಟ ಪ್ರಮುಖ ಹೆಜ್ಜೆೆ ಎಂದು ನಾನು ಭಾವಿಸುತ್ತೇನೆ. ಸಹಿ ಎಂಬುದು ಪ್ರತಿಯೊಬ್ಬ ವ್ಯಕ್ತಿಿಯನ್ನು ವೈಯಕ್ತಿಿಕವಾಗಿ ಗುರುತಿಸುವ ವಿಭಿನ್ನ ಚಿಹ್ನೆೆಯಾಗಿದ್ದು, ನಮಗೆ ಅದರ ಅರಿವಿಲ್ಲದ ಕಾರಣ ಬಹುತೇಕರು ಇಂಗ್ಲಿಿಷ್‌ನಲ್ಲಿ ಸಹಿ ಮಾಡುವುದನ್ನು ರೂಢಿಸಿಕೊಂಡಿದ್ದಾಾರೆ.

ಸ್ವಚ್ಛಹಾಳೆಗಳಂತಹ ಮಕ್ಕಳ ಮನದಲ್ಲಿ ಮಾತೃ ಭಾಷೆಯ ಅಭಿಮಾನದ ಮುದ್ರೆೆ ಒತ್ತುವುದರಲ್ಲಿ ಶಿಕ್ಷಕ, ನಾಯಕ, ಲೇಖಕ, ನಿರ್ದೇಶಕರ ಪಾತ್ರ ಪ್ರಮುಖವಾದುದು. ಇದರಲ್ಲಿ ಶಿಕ್ಷಕರ ಪಾತ್ರವಂತೂ ಗಣನೀಯವಾದುದು. ನನ್ನ ಪ್ರಾಾಥಮಿಕ ಮತ್ತು ಪ್ರೌೌಢ ಶಾಲೆಯಲ್ಲಿ ರಸವತ್ತಾಾಗಿ ಕನ್ನಡ ಬೋಧನೆ ಮಾಡುತ್ತಿಿದ್ದ ನನ್ನ ಗುರುಗಳು ಈ ಸಂದರ್ಭದಲ್ಲಿ ನೆನಪಾಗುತ್ತಾಾರೆ. ಅನೇಕ ಹಿರಿಯ-ಕಿರಿಯ ಲೇಖಕರು ತಮಗೆ ಕಾವ್ಯ ಪ್ರಜ್ಞೆಯನ್ನು, ಸಾಹಿತ್ಯ ಶಕ್ತಿಿಯನ್ನು ಮೂಡಿಸಿದ ಗುರುಗಳನ್ನು ಪ್ರೀತಿಯಿಂದ ನೆನೆದಿದ್ದಾಾರೆ. ಕೆಲವೊಮ್ಮೆೆ ಗಣಿತ, ವಿಜ್ಞಾಾನ, ಬೋಧಿಸುವ ಶಿಕ್ಷಕರು ತಮಗಿರುವ ಓದುವ ಹವ್ಯಾಾಸವನ್ನು ಮಕ್ಕಳಿಗೆ ರವಾನಿಸಿರುವುದನ್ನು ಗಮನಿಸಿದ್ದೇನೆ, ಓದಿದ್ದೇನೆ.

ಪ್ರೌೌಡಾವಸ್ಥೆೆಯನ್ನು ತಲುಪಿದಂತೆ ನಾಯಕರ ನಟರ ಆರಾಧನೆ ತನ್ನಷ್ಟಕ್ಕೆೆ ತಾನೇ ಮೊಳೆಯುವ ಗುಣ. ಸಿನಿಮಾ ನಟರ ಬಗೆಯಂತೂ ವಿಪರೀತ ಅಭಿಮಾನ. ಒಬ್ಬ ಸಿನಿಮಾ ನಟನ ಕೆಲ ಚಿತ್ರಗಳು ಯಶಸ್ಸಿಿನ ಹಾದಿ ಹಿಡಿದಂತೆ ಅವನಿಗೆ ತನ್ನದೇ ಅಭಿಮಾನಿ ಸಂಘಗಳು ಪ್ರಾಾರಂಭವಾಗುತ್ತವೆ. ಥಿಯೇಟರ್‌ನ ಮುಂದೆ ನಕ್ಷತ್ರಗಳು, ನಟನ ಹುಟ್ಟಿಿದ ಹಬ್ಬದಂದು ರೋಗಿಗಳಿಗೆ ಹಣು-ಹಂಪಲು, ರಕ್ತದಾನ, ಸಿಹಿಹಂಚಿಕೆ, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಕಾಣುತ್ತೇವೆ. ಇಂಥ ನಾಯಕ ನಟರು ಹೇಳಿದ್ದನ್ನೇ ವೇದವಾಕ್ಯವೆಂದು ಅವರು ಪಾಲಿಸುತ್ತಾಾರೆ. ಮಾತೃ ಭಾಷೆಯ ಕುರಿತಾದ ಅವರು ನುಡಿವ, ಹಾಡುವ ಮಾತುಗಳು ಸಹಜವಾಗಿ ರೋಮಾಂಚನವನ್ನುಂಟು ಮಾಡುತ್ತದೆ. ಕನ್ನಡ ನಾಡಿನ ಹಿರಿಮೆ ಕುರಿತಾದ ‘ಹುಟ್ಟಿಿದರೆ ಕನ್ನಡ ನಾಡಲಿ ಹುಟ್ಟಬೇಕು’… ಅಪಾರ ಕೀರ್ತಿ ಗಳಿಸಿರುವ ಭವ್ಯ ನಾಡಿದು, ‘ಜೇನಿನ ಹೊಳೆಯೋ… ಹಾಲಿನ ಹೊಳೆಯೋ’, ‘ಸುಧೆಯೋ ಕನ್ನಡ ಸವಿ ನುಡಿಯೋ’… ಮುಂತಾದ ಗೀತೆಗಳು ಜನಪ್ರಿಿಯವಾಗಿರುವುದರ ಜತೆಗೆ ಅಂದಿಗೂ ಇಂದಿಗೂ ಬಹುತೇಕರಿಗೆ ಕಂಠಪಾಠವಾಗಿ ಹೋಗಿದೆ.

ಇಂಥ ಗೀತೆಗಳನ್ನು ಸೂಕ್ತ ಸನ್ನಿಿವೇಶದಲ್ಲಿ ಇರಿಸಬೇಕಾದ್ದು ನಿರ್ದೇಶಕರ ಜವಾಬ್ದಾಾರಿ. ಹೊಡಿ ಬಡಿ, ಕಡಿ ಸಿನಿಮಾಗಳು ಬಿಟ್ಟರೆ ದಂಡುಪಾಳ್ಯ, ಉಮೇಶ್ ರೆಡ್ಡಿಿಯಂಥ ಸಿನಿಮಾ ನಿರ್ದೇಶನದತ್ತ ಹೊರಳಿರುವ ತಮ್ಮ ನಿರ್ದೇಶಕರಿಗೆ ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯರಂಥ ನಿರ್ದೇಶಕರು ಮಾದರಿಯಾಗಬೇಕಾಗಿದೆ. ಪುಟ್ಟಣ್ಣ ಕಣಗಾಲರಂತೂ ಅನೇಕ ಕವಿಗಳ ಭಾವಗೀತೆಯನ್ನು ಅಪೂರ್ವವಾಗಿ ಚಿತ್ರಿಿಸಿ, ಅವರಿಗೆ ದೃಶ್ಯ ಕಾಣಕೆೆಯನ್ನು ಅರ್ಪಿಸಿದರು. ಇದಕ್ಕೆೆ ‘ಮೂಡಣ ಮನೆಯ ಮುತ್ತಿಿನ ನೀರಿನ ಹಾಗೂ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ’ ಗೀತೆಗಳ ಚಿತ್ರೀಕರಣ ಒಂದೆರಡು ಉದಾಹರಣೆ ಅಷ್ಟೇ. ಕನ್ನಡ ನಾಡಿನ ನಾನಾ ಭಾಗಗಳ ಪರಿಚಯ ಮಾಡುವ ‘ಕಾವೇರಿ… ಕೊಡಗಿನ ಕಾವೇರಿ’, ‘ಕನ್ನಡ ನಾಡಿನ ಕರಾವಳಿ-ಕನ್ನಡ ದೇವಿಯ ಪ್ರಭಾವಳಿ’, ‘ಮೈಸೂರು ದಸರಾ ಎಷ್ಟೊೊಂದು ಸುಂದರ’ಗೀತೆಗಳು ಅಥವಾ ಪ್ರಾಾಂತ್ಯದ ಹಿರಿಮೆ ಗರಿಮೆಗಳನ್ನು ಎತ್ತಿಿ ಹಿಡಿದಿರುವುದು ಪುಟ್ಟಣ್ಣ ಕಣಗಾಲರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಅವರ ಬಹುತೇಕ ಚಿತ್ರಗಳಲ್ಲಿ ಇಂಥ ಪ್ರಯತ್ನವನ್ನು ಹೃದಯ ಪೂರ್ವಕವಾಗಿ ಮಾಡಿದ್ದಾಾರೆ. ಇದಕ್ಕೆೆ ಸುಶ್ರಾಾವ್ಯವಾಗಿ ರಾಗ ಸಂಯೋಜಿಸಿದ ಸಂಗೀತ ನಿರ್ದೇಶಕರನ್ನು ಮತ್ತು ಗಾಯಕರನ್ನು ನಾವು ಮರೆಯುವಂತಿಲ್ಲ.

ನಾಯಕರಿಗೆ ಸರಿಸಮಾನವಾಗಿ ಅಭಿಮಾನಮೂಡಿಸಬೇಕಾದ ಹೊಣೆ ಜನನಾಯಕರಿಗೂ ಇದೆ. ಇದಕ್ಕೆೆ ತಮಿಳುನಾಡಿನ ರಾಜಕಾರಣಿಗಳು ಮಾದರಿಯಾಗಿದ್ದಾಾರೆ. ನಮ್ಮಲ್ಲೂ ದಾಸರ, ಶರಣರ, ಕವಿಗಳ ನುಡಿಮುತ್ತುಗಳನ್ನು ಬಳಸಿ ಮಾಡಿದ ಭಾಷಣಗಳು ಸಹಜವಾಗಿ ಕೇಳುಗರಲ್ಲಿ ಭಾಷೆಯ ಅರಿವು, ಅಭಿಮಾನ ಎರಡನ್ನೂ ಮೂಡಿಸುತ್ತವೆ. ಭಾಷಣದ ಆಕರ್ಷಣೆಯನ್ನು ಹೆಚ್ಚಿಿಸುತ್ತದೆ. ಇದು ನಮ್ಮ ರಾಜಕಾರಣಿಗಳಲ್ಲಿ ಒಡಮೂಡಬೇಕಾದ ಅಂಶವಾಗಿ ಅಭಿಮಾನ ಮೂಡಿಸುತ್ತದೆ.

ಕಡೆಯದಾದರೂ ಕಡೆಗಣಿಸಲಾಗದ ಪಾತ್ರ ವಹಿಸುವವರೆಂದರೆ ಲೇಖಕರು. ತ.ರಾ.ಸು.ರವರು ತಮ್ಮ ಕೃತಿಯಲ್ಲಿ ಚಿತ್ರದುರ್ಗವನ್ನು ಗೊರೂರರು ತಮ್ಮ ಊರು, ಅಲ್ಲಿನ ಸುಂದರ ಪ್ರಕೃತಿಯನ್ನು, ಕುವೆಂಪು ಅವರ ಕಾವ್ಯದಲ್ಲಿ ಒಡಮೂಡುವ ಮಲೆನಾಡು, ಮಲೆನಾಡಿನ ಸಿರಿಯನ್ನು ಕಣ್ಣಿಿಗೆ ಕಟ್ಟುವಂತೆ ಮಾಡುತ್ತದೆ. ದ.ರಾ. ಬೇಂದ್ರೆೆಯವರ ಧಾರವಾಡ, ಕೃಷ್ಣ ಆಲನಹಳ್ಳಿಿ ಕಟ್ಟಿಿಕೊಡುವ ಎಚ್.ಡಿ.ಕೋಟೆ, ದೇವನೂರು ಮಹಾದೇವರ ಚಾಮರಾಜನಗರ, ಎಸ್.ಎಲ್. ಭೈರಪ್ಪನವರ ಹಾಸನ, ತುಮಕೂರಿನ ಭಾಗಗಳು, ತೇಜಸ್ವಿಿಯವರ ಮೂಡಿಗೆರೆ… ಹೀಗೆ ಆಯಾ ಲೇಖಕರು ತಮ್ಮ ಪರಿಸರದ, ಅಲ್ಲಿನ ಸಂಸ್ಕೃತಿಯನ್ನು ಪರಿಚಯಿಸುತ್ತಾಾ, ನಮಗರಿವಿಲ್ಲದಂತೆ ಅಭಿಮಾನ ಮೂಡಿಸುತ್ತಾಾ ಸಾಗುತ್ತಾಾರೆ.
ಹಂಸಲೇಖರು ಬರೆದು ರಾಗ ಸಂಯೋಜಿಸಿದ ‘ಸಾಮ್ರಾಾಟ್’ ಚಿತ್ರದ ಗೀತೆಯೊಂದು ಇಂತಿದೆ. ‘ಸಾವಿರ ಜೇನ ಎದೆ ಹನಿ ಬೇಕು ಜೇನಿನ ಗೂಡಾಗಲು… ಸಾವಿರ ಭಾವ ಸ್ಪಂದಿಸಬೇಕು ಕನ್ನಡ ಹಾಡಾಗಲು’…
ನಮ್ಮೆೆಲ್ಲರ ಅಭಿಮಾನದ ಒಂದೊಂದೇ ಭಾವಹನಿ ಸೇರಿದರೆ ಅದು ಕನ್ನಡದ ಹೊಳೆಯಾಗಿ ಹರಿಯುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *