Monday, 16th September 2024

ಡಯಾಬಿಟಿಸ್ ಮತ್ತು ಕುಟುಂಬ

ತನ್ನಿಮಿತ್ತ 

ಗಣಪತಿ ವಿ. ಅವಧಾನಿ, 

ಪ್ರತಿ ವರ್ಷ ನವಂಬರ್ 14ನ್ನು ‘ವಿಶ್ವ ಸಕ್ಕರೆ ಕಾಯಿಲೆ ದಿನ’ ಎಂದು ಆಚರಿಸುತ್ತಾಾರೆ. ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇದೀಗ ಜಗತ್ತಿಿನ ಪ್ರಮುಖ ಕಾಯಿಲೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ವಿಶ್ವ ಅರೋಗ್ಯ ಸಂಸ್ಥೆೆ *(ಏ) ಸಕ್ಕರೆ ಕಾಯಿಲೆಯನ್ನು ಸಾಂಕ್ರಾಾಮಿಕ ರೋಗಗಳ ಪಟ್ಟಿಿಯಲ್ಲಿ ಸೇರಿಸಿದೆ. ಭಾರತದಲ್ಲಿ ಈ ಕಾಯಿಲೆ ಪೀಡಿತರ ಸಂಖ್ಯೆೆಯು 1980 ರ ನಂತರ ಅತಿ ವೇಗವಾಗಿ ಹೆಚ್ಚಾಾಗುತ್ತಿಿರುವುದು ಕಂಡುಬಂದಿದೆ.

ವೇಗವಾಗಿ ಆಗುತ್ತಿಿರುವ ಕೈಗಾರಿಕಾ ಬೆಳವಣಿಗೆಯಿಂದ ದಿನದಿಂದ ದಿನಕ್ಕೆೆ ಜನರು ದೈಹಿಕ ಚಟುವಟಿಕೆಗಳಲ್ಲಿ ಕಳೆಯುವ ಸಮಯ ಮತ್ತು ಪ್ರಮಾಣ ಕಡಿಮೆ ಆಗುತ್ತಿಿದೆ. ಸೇವಿಸುತ್ತಿಿರುವ ಆಹಾರದಲ್ಲಿ ಬದಲಾವಣೆ ಆಗುತ್ತಿಿದೆ. ಆಹಾರದಲ್ಲಿ ಸಕ್ಕರೆ ಮತ್ತು ಕೊಬ್ಬಿಿನ ಅಂಶ ಹೆಚ್ಚಾಾಗುತ್ತಿಿದೆ. ಇದು ಮಾರಕ ಕಾಯಿಲೆಗಳಾದ ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮುಂತಾದ ರೋಗಗಳ ಹೆಚ್ಚಳಕ್ಕೆೆ ಕಾರಣವಾಗಿದೆ. ಈ ಗುಂಪಿನಲ್ಲಿ ಸಕ್ಕರೆ ಕಾಯಿಲೆಗೆ ಅಗ್ರಸ್ಥಾಾನ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಸರಿ ಸುಮಾರು ಆರು ಕೋಟಿ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿಿದ್ದಾರೆ. ನಗರಗಳಲ್ಲಿ ವಾಸಿಸುತ್ತಿಿರುವ 55 ವರ್ಷಕ್ಕಿಿಂತ ಮೇಲ್ಪಟ್ಟವರಲ್ಲಿ ಶೇ.20 ರಷ್ಟು ಜನರಿಗೆ ಸಕ್ಕರೆ ಕಾಯಿಲೆ ಕಂಡುಬಂದಿದೆ.

ನವಂಬರ್ 14ನ್ನು ವಿಶ್ವ ಸಕ್ಕರೆ ಕಾಯಿಲೆ ದಿನ ಎಂದು ಆಯ್ದುಕೊಳ್ಳಲು ಕಾರಣ, ಈ ದಿನ ಇನ್ಸುಲಿನ್ ಕಂಡುಹಿಡಿದ ‘ಫ್ರೆೆಡೆರಿಕ್ ಬ್ಯಾಾಂಟಿಂಗ್’ನ ಜನ್ಮ ದಿನ. ಪ್ರತಿ ವರ್ಷ ಈ ದಿನವನ್ನು ಒಂದು ವಿಶೇಷ ವಿಷಯದೊಂದಿಗೆ ಆಚರಿಸುತ್ತಾಾರೆ. ಈ ವರ್ಷದ ವಿಷಯ ಕುಟುಂಬ ಮತ್ತು ಸಕ್ಕರೆ ಕಾಯಿಲೆ. ಇದರ ಉದ್ದೇಶ ಸಕ್ಕರೆ ಕಾಯಿಲೆ ಹೊಂದಿರುವ ವ್ಯಕ್ತಿಿಗೆ ಕುಟುಂಬದಿಂದ ಬೇಕಾದ ಸಹಕಾರದ ಬಗ್ಗೆೆ ಜನರಲ್ಲಿ ಅರಿವು ಮಾಡಿಸುವುದು.

ಕುಟುಂಬದಲ್ಲಿ ವ್ಯಕ್ತಿಿಯೊಬ್ಬರಿಗೆ ಸಕ್ಕರೆ ಕಾಯಿಲೆ ಇದ್ದಾಗ, ಸಹಜವಾಗಿ ಇತರ ಸದಸ್ಯರಿಗೆ ಅದರಿಂದ ಪರಿಣಾಮಗಳಾಗುತ್ತವೆ. ಇದಕ್ಕೆೆ ಮುಖ್ಯ ಕಾರಣ ಸಕ್ಕರೆ ಕಾಯಿಲೆಗೆ ವ್ಯಕ್ತಿಿಗೆ ಅಗತ್ಯವಾದ ಆಹಾರ ಪದ್ಧತಿ. ಈ ಆಹಾರ ಪದ್ಧತಿಗೆ ಕುಟುಂಬದ ಇತರ ಸದಸ್ಯರು ಹೊಂದಿಕೊಳ್ಳಬೇಕಾಗುತ್ತದೆ. ಸಕ್ಕರೆ ಕಾಯಿಲೆ ಇರುವವರು ನಿಗದಿತ ಸಮಯದಲ್ಲಿ ಹಾಗೂ ನಿಯಮಿತ ಪ್ರಮಾಣದಲ್ಲಿ ಆಹಾರ ಸೇವಿಸುವುದು ಅತೀ ಅಗತ್ಯ. ತರಕಾರಿಗಳು, ಪ್ರೋೋಟೀನ್, ಕಡಿಮೆ ಕೊಬ್ಬು ಇರುವ ಆಹಾರ ಪದಾರ್ಥಗಳು, ನಾರಿನ ಅಂಶ ಇರುವ ಪದಾರ್ಥಗಳು ಈ ಕಾಯಿಲೆ ಇರುವವರಿಗೆ ಅಗತ್ಯ. ಸಕ್ಕರೆ ಮತ್ತು ಉಪ್ಪುು ಹೆಚ್ಚು ಇರುವ ಸಂಸ್ಕರಿಸಿದ ಆಹಾರ ಪದಾರ್ಥಗಳು ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆೆಯದಲ್ಲ. ಕುಟುಂಬ ಸದಸ್ಯರು ನಿಯಮಿತ ವ್ಯಾಾಯಾಮ ಮತ್ತು ನಡಿಗೆಗೆ ಸಕ್ಕರೆ ಕಾಯಿಲೆ ಇರುವ ವ್ಯಕ್ತಿಿಗೆ ಪ್ರೋೋತ್ಸಾಾಹ ಕೊಡಬೇಕು. ಇದು ಸಕ್ಕರೆ ಕಾಯಿಲೆ ಇರುವವರಿಗೆ ಅಗತ್ಯ. ವಾರಕ್ಕೆೆ ಒಂದೆರಡು ದಿನವಾದರೂ ಇಡೀ ಕುಟುಂಬದ ಸದಸ್ಯರು ಸಾಮೂಹಿಕವಾಗಿ ನಡಿಗೆ ಮಾಡಬಹುದು. ಇದರ ಜತೆಗೆ ಯೋಗಾಭ್ಯಾಾಸ, ಮೆಡಿಟೇಶನ್ ಇವೆಲ್ಲಾ ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆೆ ಸಹಕಾರಿಯಾಗುತ್ತವೆ.

ಇನ್ನು ತುಂಬಾ ವಯಸ್ಸಾಾದ ಸಕ್ಕರೆ ಕಾಯಿಲೆ ವ್ಯಕ್ತಿಿಯು ನಿಯಮಿತವಾಗಿ ಔಷಧ ತೆಗೆದುಕೊಳ್ಳಲು ಮರೆಯಬಹುದು. ಇದರ ಜತೆಗೆ ಕಾಯಿಲೆ ಪೀಡಿತ ವ್ಯಕ್ತಿಿ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷೆಗೆ ಒಳಪಡುವಂತೆ ಮತ್ತು ವೈದ್ಯರನ್ನು ಭೇಟಿ ಮಾಡುವಂತೆ ಕುಟುಂಬದವರು ನೋಡಿಕೊಳ್ಳುವುದು ಅಗತ್ಯ.

ನಿಯಂತ್ರಣದಲ್ಲಿ ಇಲ್ಲದಿದ್ದರೆ ಸಕ್ಕರೆ ಕಾಯಿಲೆ ಮಾರಣಾಂತಿಕ. ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರಾದರೆ ಇದು ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮ ಬೀರಿ ಕಣ್ಣು, ಕಿಡ್ನಿಿ, ಹೃದಯ ಮುಂತಾದ ಅವಯವಗಳಿಗೆ ಹಾನಿ ಉಂಟು ಮಾಡುತ್ತದೆ. ಸಕ್ಕರೆ ಕಾಯಿಲೆ ಇದೆಯೆಂದು ಗೊತ್ತಾಾದಾಗ ಯಾವುದೇ ಕಾರಣಕ್ಕೂ ದೃತಿಗೆಡಬಾರದು. ಇದಕ್ಕೆೆ ತಕ್ಕಂತೆ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು, ಅಷ್ಟೆೆ. ಅವರವರ ಆರೋಗ್ಯವನ್ನು ಅವರವರೇ ನೋಡಿಕೊಳ್ಳಬೇಕು. ಆದರೆ ಡಯಾಬಿಟಿಸ್ ನಂತಹ ಕಾಯಿಲೆ ಇರುವ ವ್ಯಕ್ತಿಿಯ ಆರೋಗ್ಯದ ವಿಷಯದಲ್ಲಿ ಕುಟುಂಬದ ಇತರ ಸದಸ್ಯರ ಪಾತ್ರ ಬಹು ದೊಡ್ಡದು. ಕುಟುಂಬದ ಸದಸ್ಯರ ಸಹಕಾರದಿಂದಷ್ಟೇ ಈ ಕಾಯಿಲೆ ಇರುವ ವ್ಯಕ್ತಿಿ ಬಹುದಿನಗಳ ಕಾಲ ಸಮಸ್ಯೆೆಯಿಲ್ಲದೇ ಬಾಳುವೆ ಮಾಡಲು ಸಾಧ್ಯ.

Leave a Reply

Your email address will not be published. Required fields are marked *