ಪರಿಶ್ರಮ
parishramamd@gmail.com
ಈ ಪ್ರಪಂಚದಲ್ಲಿ ಒಂದು ಕೋಳಿ ಮೊಟ್ಟೆಯನ್ನು ಬೇರ‍್ಯಾರೋ ಆಚೆಯಿಂದ ಹೊಡೆದರೆ ಆಮ್ಲೆಟ್ ಆಗುತ್ತದೆ, ಅದೇ ಮೊಟ್ಟೆ ತನ್ನಷ್ಟಕ್ಕೆ ತಾನೇ ಒಳಗಿಂದ ಒಡೆದರೆ ಮರಿ-ಒಂದು ಹೊಸ ಜೀವ ಈಚೆ ಬರುತ್ತದೆ. ಜೀವನದಲ್ಲಿ ನೀವು ಏನಾದರೂ ಸಾಧಿಸ ಬೇಕಾದರೆ ಆತ್ಮಸ್ಥೈರ್ಯ ಇರಬೇಕು, ನಿಮ್ಮ ಗಟ್ಟಿತನ ತುಂಬಾ ದೃಢವಾಗಿರಬೇಕು. ನಿಮ್ಮ ನಿರ್ಧಾರ ತುಂಬಾ ಬಲಶಾಲಿ ಆಗಿರ ಬೇಕು.
ಜೀವನ ಒಂದು ತರಹ ಕ್ರಿಕೆಟ್ ಇದ್ದ ಹಾಗೆ, ಸುತ್ತಲೂ ನಿಂತವರು ನಮ್ಮವರೇ ಅಂತಲೇ ಎನಿಸುತ್ತಾರೆ. ಒಂದು ಸಲ ನೀವು ಬ್ಯಾಟ್ ಹಿಡಿದರೆ, ಯಾವಾಗ ಔಟ್ ಆಗುತ್ತೀರೋ ಅಂತ ಕಾಯುತ್ತಿರುತ್ತಾರೆ. ಜೀವನ ಒಂದು ತರಹ ಕಬಡ್ಡಿ ಇದ್ದ ಹಾಗೆ, ಕಬಡ್ಡಿ… ಕಬಡ್ಡಿ…… ಎನ್ನುತ್ತಿದ್ದರೆ ಯಾರೂ ಹತ್ತಿರ ಬರೋದಿಲ್ಲ. ಒಂದು ಸಾರಿ ಗೆರೆ ಮುಟ್ಟುವುದಕ್ಕೆ ಹೋದಾರೆ ಎಲ್ಲರೂ ಒಮ್ಮೇಲೇ ಕಾಲೆಳೆಯುವುದಕ್ಕೆ ಬರುತ್ತಾರೆ.
ಯುವ ಪೀಳಿಗೆಗೆ ಬೇಕಾಗಿರುವುದು ಧೈರ್ಯ, ಒಂದು ಭರವಸೆ, ನಾನು ಗೆಲ್ಲುತ್ತೇನೆ ಎಂಬ ನಂಬಿಕೆ. ‘Youth are not useless, but they are used less’. ಇವತ್ತು ಒಬ್ಬ ಯುವಕ, ಯುವತಿ ಮನಸ್ಸು ಮಾಡಿದರೆ ಜೀವನದಲ್ಲಿ ಅಂದುಕೊಂಡಿದ್ದು ಸಾಧಿಸಬಹುದು.
ಸಾವಿರಾರು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುತ್ತಾರೆ. ಏನೋ ಸಾಧಿಸಬೇಕು ಎಂದು ಪ್ರಯತ್ನಿಸುತ್ತಾರೆ. ಪರೀಕ್ಷೆಯಲ್ಲಿ ರ‍್ಯಂಕ್ ಬರಬೇಕು, ವ್ಯಾಪರದಲ್ಲಿ ಗೆಲ್ಲಬೇಕು, ಅಂದು ಕೊಂಡಿದ್ದು ಸಾಧಿಸಬೇಕು ಎಂದೆಲ್ಲಾ ಎಣಿಸುತ್ತಾರೆ, ಅದರೆ ಒಂದೇ ಬಾರಿ ಪ್ರಯತ್ನಿಸಿ ಸೋತು ಸುಣ್ಣವಾಗಿ ಹತಾಶರಾಗಿ ಬಿಡುತ್ತಾರೆ. ಕಣ್ಣೀರು ಹಾಕಿ ಆ ಕಷ್ಟವನ್ನು ಅವಮಾನ ಮಾಡಿ ಬಿಡುತ್ತಾರೆ.
ಕಷ್ಟ ಯಾರಿಗಿಲ್ಲ ಹೇಳಿ! ಪ್ರತಿಯೊಬ್ಬರಿಗೂ ಕಷ್ಟ ಇದೆ. ತುಂಬಾ ಚೆನ್ನಾಗಿ ಐಷಾರಾಮಿಯಾಗಿ ಬೆಳೆದ ಹುಡುಗನಿಗೆ ಟಿವಿ ನೋಡು ವಾಗ ಕರೆಂಟು ಹೋದರೇ ಅದೇ ದೊಡ್ಡ ಕಷ್ಟ ರಿಮೋಟ್ ಎತ್ತಿ ಬಿಸಾಡುತ್ತಾನೆ. ತುಂಬಾ ಚೆನ್ನಾಗಿ ಹಾಗು ಸೂಕ್ಷ್ಮವಾಗಿ ಬೆಳೆ ದಂತಹ ಹುಡುಗಿಗೆ ಮುಖದ ಮೇಲೆ ಒಂದೇ ಒಂದು ಮೊಡವೆ ಬಂದರೆ, ಅದೇ ದೊಡ್ಡ ಕಷ್ಟ- ಹೋಗಮ್ಮ ಶಾಲೆಗೆ ಹೋಗುವು ದಿಲ್ಲ ಅಂತಾಳೆ. ಡಿಗ್ರೀಗೆ ಬಂದ ಹುಡುಗಿಗೆ ಸ್ಯಾರಿಗೆ ಬ್ಲೌಸ್ ಮ್ಯಾಚ್ ಆಗ್ಲಿಲ್ಲ, ಆ ಹುಡುಗಿಗೆ ಅದೇ ದೊಡ್ಡ ಕಷ್ಟ- ಕಣ್ಣೀರು ಸುರಿಸಿ ಬಿಡುತ್ತಾಳೆ.
ಓದಿನಲ್ಲಿ ೯೦% ಅಂಕ ಪಡೆಯುತ್ತಿದ್ದ ಮಗ 60% ಪಡೆದರೆ, ಅವರ ಅಪ್ಪನಿಗೆ ಅದೇ ದೊಡ್ಡ ಕಷ್ಟ. ಸರಿಯಾದ ಸಮಯಕ್ಕೆ ಮೆಸ್ಸೇಜ್‌ಗೆ ಬಾಯ್ ಫ್ರೆಂಡ್ ನಿಂದ ರಿಪ್ಲೈ ಬರಲಿಲ್ಲ ಅಂದರೆ, ತುಂಬು ಹರೆಯದ ಹುಡುಗಿಗೆ ಅದೇ ದೊಡ್ಡ ಕಷ್ಟ. ಇಷ್ಟ ಪಟ್ಟ ಹುಡುಗಿ ಇನ್ನೊಬ್ಬರ ಜೊತೆ ಮಾತಾನಾಡುತ್ತಿದ್ದಾರೆ ಎಂದು ತಿಳಿದು ಬಂದರೆ, ಬೆಳೆದು ನಿಂತಿರುವ ಹುಡುಗರಿಗೆ ಅದೇ ದೊಡ್ಡ ಕಷ್ಟ. ಕಷ್ಟ ಎಂದರೆ ಯಾವುದು ಗೊತ್ತಾ? ತುಂಬಾ ಚೆನ್ನಾಗಿ ಬೆಳೆದ ಹುಡುಗ ಒಂದು ಸರಿ ಕರೆಂಟು ಹೋಯಿತೆಂದು ರಿಮೋಟ್ ಎತ್ತಿ ಎಸೆಯುತ್ತಾನಲ್ಲ- ಅವನಿಗೆ ಕರೆಂಟ್ ಕಂಬ ಹತ್ತಿ ಕರೆಂಟ್ ಶಾಕ್ ಹೊಡೆದು ಸತ್ತು ಹೋಗಿರುವ ಲೈನ್ ಮ್ಯಾನ್ ಕಷ್ಟ ತಿಳಿಸಿ, ಅವನದ್ದು ಕಷ್ಟ ನಿನ್ನದಲ್ಲ ಅಂತ.
ಮುಖದ ಮೇಲೆ ಮೊಡವೆ ಬಂತು ಅಂತ ಬೇಜಾರು ಬೀಳುವ ಹುಡುಗಿಗೆ ಆಸಿಡ್ ಹಾಕಿಸಿಕೊಂಡು ನಾಲ್ಕು ಗೋಡೆಗಳ ಮಧ್ಯೆ ನರಳುತ್ತಿರುವ ನತದೃಷ್ಟಳ ಬದುಕು ತೋರಿಸಿ, ಅವಳದಮ್ಮ ಕಷ್ಟ ನಿನ್ನದಲ್ಲ ಅಂತ. ಸ್ಯಾರಿಗೆ ಬ್ಲೌಸ್ ಮ್ಯಾಚ್ ಆಗ್ಲಿಲ್ಲ ಅಂತ ಬೇಜಾರು ಬೀಳುವ ಹುಡುಗಿಗೆ, ಹಳ್ಳಿಗಳ ಕಡೆ ಹೆರಿಗೆ ಟೈಮ್‌ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿರುವ ಜನರಲ್ ವಾರ್ಡ್‌ನಲ್ಲಿ ಬಡ
ಕುಟುಂಬದ ಹೆಣ್ಣು ಮಗಳು ಅನುಭವಿಸುವ ಹೆರಿಗೆ ನೋವನ್ನು ತೋರಿಸಿ ಹೇಳಿ, ಅವಳದಮ್ಮ ಕಷ್ಟ ನಿನ್ನದಲ್ಲ ಅಂತ.
೯೦% ಅಂಕ ಪಡೆಯುವ ಮಗ ೬೦% ಬಂದ ಅಂದರೆ ಬೇಜಾರು ಬೀಳುವ ಅಪ್ಪನಿಗೆ ಮಾನಸಿಕ ಅಸ್ವಸ್ಥ ಹುಡುಗನ ತಂದೆಯ ಸಹನೆ ತೋರಿಸಿ ತಿಳಿ ಹೇಳಿ ಅವನದಪ್ಪ ಕಷ್ಟ ನಿನ್ನದಲ್ಲ ಎಂದು. ಸರಿಯಾದಗೆ ಬಾಯ್ ಫ್ರೆಂಡ್‌ನ ಮೆಸ್ಸೇಜ್ ಬರಲಿಲ್ಲ ಅಂತ ಬೇಜಾರು ಬೀಳುವಂತಹ ಹುಡುಗಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡು ತಂಗಳನ್ನ ತಿಂದು ಹಳೇಯ ಪುಸ್ತಕ ಓದಿ ರ‍್ಯಾಂಕ್ ಬಂದಂತಹ ಹುಡುಗಿಯ ಕಥೆಯನ್ನು, ವ್ಯಥೆಯನ್ನು ತೋರಿಸಿ.
ಇಷ್ಟಪಟ್ಟ ಹುಡುಗಿ ಮತ್ತೊಬ್ಬನ ಜೊತೆ ಸಲಿಗೆಯಿಂದ ಮಾತಾನಾಡಿದಳು ಅಂತ ಬೇಜಾರು ಬೀಳುವ ಹುಡುಗನಿಗೆ- ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಸಾಮ್ರಾಜ್ಯಗಳನ್ನು ಕಟ್ಟುತ್ತಿರುವಂತಹ ಬಹಳಷ್ಟು ಯುವ ಸಮುದಾಯದ ಸಾಧಕರನ್ನು ತೋರಿಸಿ ಕೇಳಿ ಅವರ ಕಷ್ಟಕ್ಕೆ ಹೋಲಿಸಿದರೆ ನಿಮ್ಮದು ಒಂದು ಕಷ್ಟವೇ? ಅಂತ. ಕಷ್ಟ ಇರುವುದೇ ಬರೋದಕ್ಕೆ, ಕಷ್ಟದಲ್ಲಿ ಕಣ್ಣೀರು ಹಾಕಿ ಕಷ್ಟಕ್ಕೆ ಏಕೆ ಅವಮಾನ ಮಾಡುತ್ತೀರಾ? ಜೀವನದಲ್ಲಿ ದೃಢ ಸಂಕಲ್ಪ ಇರಬೇಕು, ಸಂಕಲ್ಪ ಮಾಡಬೇಕು.
ಈ ಪ್ರಪಂಚದಲ್ಲಿ ಸರಿಯಾದ ನಿರ್ಧಾರ, ಕೆಟ್ಟ ನಿರ್ಧಾರ ಎಂದು ಅಸಲಿನಲ್ಲಿ ಎಲ್ಲೂ ಇಲ್ಲ. Take a decision and make it right ಒಂದು ತೀರ್ಮಾನ ಒಬ್ಬರಿಗೆ ಸರಿ ಎನಿಸಬಹುದು, ಮತ್ತೊಬ್ಬರಿಗೆ ತಪ್ಪೆನಿಸಬಹುದು. ಬಹಳಷ್ಟು ಜನ ಸರ್, ಒಂದೊಂದು ಟೈಮ್ ನಲ್ಲಿ ಏನು ಮಾಡಬೇಕು ಎಂದೇ ತೋಚುವುದಿಲ್ಲ ಎಂದು ಕೇಳುತ್ತಾರೆ. ಅವರಿಗೆ ನನ್ನ ಉತ್ತರ ‘ಸರ್, not taking a decision is also a decision-ತೀರ್ಮಾನ ತೆಗೆದುಕೊಂಡು ನೋಡಿ ಅದೇ ಒಂದು ತೀರ್ಮಾನ’.
ವಿದ್ಯಾರ್ಥಿ ವೃಂದದಲ್ಲಿ ಬಹಳಷ್ಟು ಜನ ಪರೀಕ್ಷೆಗೆ ತಯಾರಿ ಆಗುತ್ತಿರೋದೇ ಒಂದು ದೊಡ್ಡ ಸಮಸ್ಯೆಯೆಂದು ತಿಳಿದಿರುತ್ತಾರೆ. ವರ್ಷವಿಡೀ ಓದಿರುತ್ತಾರೆ. ಇಷ್ಟೆಲ್ಲಾ ಆದರೂ ಪರೀಕ್ಷೆಯಲ್ಲಿ ಓದಿರುವುದೆಲ್ಲ ಮರೆತು ಹೋಗುತ್ತಾರೆ. ಸರಿಯಾಗಿ ಓದಿದ್ದರೆ ಏಕೆ ಮತ್ತು ಹೇಗೆ ಮರೆತು ಹೋಗುತ್ತೇವೆ? ಒಂದು ಸಿನಿಮಾ ಮರೆಯುತ್ತೇವಾ? ಒಂದು ಹಾಡು ಮರೆಯುತ್ತೇವಾ? ಇಲ್ಲ- ಯಾಕೆಂದರೆ ಅಲ್ಲೊಂದು ಶ್ರದ್ಧೆ ಇರುತ್ತೆ, ಏಕಾಗ್ರತೆ ಇರುತ್ತೆ, ನಾವು ನಮ್ಮನ್ನು ಸಂಪೂರ್ಣವಾಗಿ ತನ್ಮಯ ಮಾಡಿಕೊಂಡು ಬಿಟ್ಟಿರುತ್ತೇವೆ.
ಆದರೆ ನಮ್ಮ ಮುಂದೆ ಒಂದು ಪುಸ್ತಕ ಬಂದಾಗ, ಅಲ್ಪ-ಸ್ವಲ್ಪ ಏಕಗ್ರತೆ ಮಾತ್ರ ಸೀಮಿತವಾಗಿರುತ್ತದೆ. ಏಕಾಗ್ರತೆಯೆಂದರೆ ಏನೂ ಅಲ್ಲ- ಏನು ಕೆಲಸ ಮಾಡುತ್ತಿರುತ್ತೇವೋ, ಅದೇ ಕೆಲಸವನೂ ಮಾತ್ರ ಮಾಡುವುದು ಹಾಗೂ ಆ ಕೆಲಸದ ಬಗ್ಗೆ ಮಾತ್ರ ಆಲೋ ಚಿಸುವುದು. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೂ ಜೀವನದಲ್ಲಿ ನಮ್ಮ ಮೇಲೆ ನಮಗೆ ಒಂದು-ಭರವಸೆ ಇರಬೇಕು, ಇನ್ನೊಂದು- ಹೋಲಿಕೆ ಮಾಡಿಕೊಳ್ಳೋಕ್ಕೆ ಹೋಗಬರದು.
ಅವರಿವರೊಟ್ಟಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಲೇಬೇಡಿ You’re the most unique creature on this Earth. ಗರ್ಭಧಾ ರಣಾ ಸಮಯದಲ್ಲಿ, ತಾಯಿಯ ಗರ್ಭದಲ್ಲಿ egg fertilize ಆಗುವಾಗ 35 ರಿಂದ 40 ಲಕ್ಷ ಜನ (ವೀರ್ಯಾಣು) ಸ್ವಂತ ಅಣ್ಣ-ತಮ್ಮಂದಿರನ್ನು, ಅಕ್ಕ-ತಂಗಿಯರನ್ನು ಯಾವುದೇ ತರಹದ ಭಾವನೆಗಳಿಲ್ಲದೆ ಸೋಲಿಸಿ ಪ್ರಪಂಚಕ್ಕೆ ಯಶಸ್ವಿಯಾಗಿ ಕಾಲಿಟ್ಟವರು ನಾವು, ಹುಟ್ಟಿನಿಂದಲೇ ಗೆದ್ದವರು.
ಬೆಳೆದ ಮೇಲೆ 2 ರಿಂದ 3 ಲಕ್ಷ ಜನರ ಮಧ್ಯ ಪರೀಕ್ಷೆ ಬರೆದರೆ, ಅದರಲ್ಲಿ ಹೆದರುವ ಅವಶ್ಯಕತೆ ಏನಿದೆ? ನಿಮ್ಮನ್ನು ನೀವು ನಂಬಿ. ಆಮೇಲೆ ಏನು ಬೇಕಾದರೂ ಸಾಧಿಸಬಹುದು. ನೀವು ನಂಬಬೇಕಷ್ಟೇ. ಆ ನಂಬಿಕೆ ಇದ್ದರೇನೇ ಜೀವನದಲ್ಲಿ ಏನನ್ನಾದರೂ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬಹುದು. ಇನ್ನೂಂದಷ್ಟು ಜನ ಕೇಳುತ್ತಾರೆ ಸರ್, ನನ್ನ ಕೈಯಲ್ಲಿ ಏಕಾಗೃತೆ ಮಾಡೋದಕ್ಕೆ
ಆಗೋದಿಲ್ಲ. ಯಾಕೆ ಮಾಡೋಕಾಗುವುದಿಲ್ಲ ಎನ್ನುವುದಕ್ಕೆ ಉತ್ತರಿಸುವುದಕ್ಕೆ ಮುಂಚೆ ನಾನು ಅವರನ್ನು ಕೇಳುವ ಮರುಪ್ರಶ್ನೆ- ‘ಈ ಪ್ರಪಂಚದ ಜನರನ್ನು ಕಾಡುತ್ತಿರುವ ದೊಡ್ಡ ರೋಗ ಯಾವುದು ಗೊತ್ತಾ?’ ಬಹಳಷ್ಟು ಜನ ಕ್ಯಾನ್ಸರ್ ಅಂತಾರೆ, ಕೋವಿಡ್-19 ಎಂದು ಹೆಸರಿಸುತ್ತಾರೆ.
ಅಲ್ಲ! ಪ್ರಪಂಚದಲ್ಲಿ ಇವತ್ತಿಗೂ ಮದ್ದು ಕಂಡುಹಿಡಿಯುವುದಕ್ಕೆ ಆಗದಂತಹ ಅತಿ ದೊಡ್ಡ ರೋಗ- ‘ಯಾರೇನೆಂದು ಕೊಳ್ಳುತ್ತಾರೋ’ ಎಂದು ಭಾವಿಸಿಕೊಳ್ಳುತ್ತಾ ಕೊರಗುವುದು. ಇದು ವಾಸಿಯಾಗಬೇಕು. ನಮ್ಮ ತಂದೆ ನಮಗೆ ಜನ್ಮ ಕೊಡುವಾಗ, ಅವರಿವರನ್ನು ಹೇಳಿ-ಕೇಳಿ ಜನ್ಮ ಕೊಟ್ಟಿರುವುದಿಲ್ಲ ಅಲ್ವ! ಯಾರೇ ಏನೇ ಕೆಲಸ ಪ್ರಾರಂಭಿಸಲು ಹೊರಟರೂ ಅವರಿಗೆ ಮೊಟ್ಟ
ಮೊದಲು ಅವರ ಕಿವಿಗಪ್ಪಳಿಸುವ ಮಾತು/ವಿಷಯ- ಅಭಿಪ್ರಾಯ. ದಯವಿಟ್ಟು ಗಮನಿಸಿ, ಸಾಧನೆಗೆ ಮೊದಲ ಹೆಜ್ಜೆ-ಯಾರು ಏನೆಂದುಕೊಳ್ಳುತ್ತಾರೋ ಅನ್ನೋ ರೋಗವನ್ನು ವಾಸಿಮಾಡಿಕೊಂಡು ನೋಡಿ, ಅದೇ ದಿನದಿಂದ ನಿಮ್ಮ ಗೆಲುವಿನ ಪ್ರಯಾಣ ಸುಲಭವಾಗಿ ಸಾಗುತ್ತದೆ.
ಹೇಗೆಂದರೆ- ಚಿಕ್ಕ-ಪುಟ್ಟ ವಿಚಾರಕ್ಕೂ ಯಾರನ್ನೂ ಇಂಪ್ರೆಸ್ ಮಾಡುವುದಕ್ಕೆ ಹೋಗಬೇಡಿ. ನಮ್ಮ ಬೀದಿಯಲ್ಲಿ ಓದುತ್ತಿರುವ ಹುಡುಗ ನಿನ್ನೆ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ನಮ್ಮ ಊರಿನ ಹುಡುಗ ಮೊನ್ನೆ ರ‍್ಯಾಂಕ್ ಬಂದಿದ್ದಾನೆ. ಯಾರ‍್ಯಾರೋ ಸಾಧಿಸು ತ್ತಿದ್ದಾರೆ, ಆದರೆ ನಾವು ಮಾತ್ರ ಸಿಕ್ಕಿಕೊಂಡು ಬೇರೆಯವರ ಮಾತಿಗೆ ಕಿವಿಗೊಟ್ಟು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ
ಎಂದು ಮರುಗುವುದನ್ನು ಬಿಡಬೇಕು ಇನ್ನೂ ಕೆಲವಷ್ಟು ಜನ ಸರ್, ಏನೇ ಕೆಲಸ ಮಾಡಿದರೂ Ottsw|ಮಾಡೋರಿಲ್ಲ ಸರ್, ಯಾವುದಕ್ಕೂ ಸಹಾಯ ಮಾಡೋದಿಲ್ಲ.
ಅರೆರೇ… ನಿನ್ನ ಮೇಲೆ ನಿನಗೇ ನಂಬಿಕೆ ಇಲ್ಲ, ಊರಿನವರೆಲ್ಲಾ ಹೇಗೆ ನಂಬುತ್ತಾರೆ? ಒಂದು ಕೆಲಸ ಮಾಡುವುದಕ್ಕೆ ಹೋದರೆ ನಿನ್ನ ಮೇಲೇ ನಿನಗೆ ನಂಬಿಕೆ ಇಲ್ಲ, ಆ ನಂಬಿಕೆಯನ್ನು ಹುಡುಕಿಕೊಂಡು ಊರೆಲ್ಲಾ ಹೋಗುತ್ತೀಯಾ? ನನ್ನನ್ನು ಅವರು ನಂಬಲಿ, ಇವರು ನಂಬಿಲಿ ಅಂತೆನುತ್ತಾ ಸುತ್ತುತ್ತೀಯ! ಬೇಡ- ಒಂದು ಕೆಲಸ ಮಾಡಬೇಕು ಎಂಬ ನಂಬಿಕೆ ಇದೆಯಾ? ಆ ಕೆಲಸದ
ಒಂದೇ ಆಲೋಚನೆಯಲ್ಲಿ, ಹಾಗೆ ಸುಮ್ಮನೆ ಮಾಡಲು ಕೂರಬೇಕಷ್ಟೇ.
ಪರೀಕ್ಷೆಯಲ್ಲಿ ಪಾಸ್ ಮಾಡಬೇಕು ಎಂದುಕೊಂಡಿದ್ದೀಯಾ? ಏಕಾಗ್ರಚಿತ್ತದಿಂದ ಒಂದೇ ಕಡೆ 4 ರಿಂದ 5 ತಾಸು ಕೂತು ಓದ ಬೇಕಷ್ಟೇ. ಅದನ್ನು ಬಿಟ್ಟು ಅರ್ಧ ಘಂಟೆ ಕೂರೋಕಾಗುವುದಿಲ್ಲ… ಅದರ ಮಧ್ಯೆ ಒಂದು ಬ್ರೇಕ್… ಒಂದೇ ಒಂದು ಕಾಫೀ… ಮತ್ತೊಂದು ಹಾಡನ್ನು ಕೇಳಿಕೊಂಡು ನಾನೇನೋ ಸಾಽಸಿಬಿಡುತ್ತೇನೆಂದರೆ ಅದ್ಹೇಗೆ ಸಾಧ್ಯ? ಏನು ಬೇಕಾದರೂ ಸಾಧಿಸ ಬಹುದು, ಮೊದಲು ನಂಬಿಕೆಯಿರಬೇಕು, ಹಠ-ಛಲ ಬೇಕೇಬೇಕು. ಎಲ್ಲಾ ಗುರಿಯೂ ಸುಲಭವೇ ಯಾವುದು ಕಷ್ಟವಲ್ಲ, ಮನಸ್ಸಿದ್ದರೆ ಮಾರ್ಗ.