Terror Bid: ಹೈದರಾಬಾದ್‌ನಲ್ಲಿ ಸ್ಫೋಟಕ್ಕೆ ಸಂಚು: ಇಬ್ಬರ ಬಂಧನ
ಹೈದರಾಬಾದ್ ನಗರದ ಪ್ರಮುಖ ಸ್ಥಳವೊಂದರಲ್ಲಿ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ ಇಬ್ಬರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಸಿರಾಜ್ ಉರ್ ರೆಹಮಾನ್ (29) ಮತ್ತು ಸೈಯದ್ ಸಮೀರ್ (28) ಬಂಧಿತರು. ಸೌದಿ ಅರೇಬಿಯಾದ ಐಎಸ್ಐಎಸ್‌ನೊಂದಿಗೆ ಸಂಪರ್ಕದಲ್ಲಿದ್ದ ಇವರು ಹೈದರಾಬಾದ್ ನ ಪ್ರಮುಖ ಸ್ಥಳವೊಂದರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿತ್ತಿದ್ದರು ಎಂದು ಶಂಕಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಹೈದರಾಬಾದ್: ನಗರದಲ್ಲಿ ಸ್ಫೋಟಕ್ಕೆ ಸಂಚು (Planning to blasts) ರೂಪಿಸುತ್ತಿದ್ದ ಇಬ್ಬರನ್ನು ಹೈದರಾಬಾದ್ (Hyderabad) ಪೊಲೀಸರು ಬಂಧಿಸಿದ್ದಾರೆ. ಸಿರಾಜ್ ಉರ್ ರೆಹಮಾನ್ (29) ಮತ್ತು ಸೈಯದ್ ಸಮೀರ್ (28) ಬಂಧಿತರು. ಸೌದಿ ಅರೇಬಿಯಾದದಲ್ಲಿ (Saudi Arabia) ಐಎಎಸ್‌ಐಎಸ್ (ISIS link) ಯೊಂದಿಗೆ ಸಂಪರ್ಕದಲ್ಲಿದ್ದ ಇವರು ಹೈದರಾಬಾದ್‌ನ ಪ್ರಮುಖ ಸ್ಥಳವೊಂದರಲ್ಲಿ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು ಎಂದು ಶಂಕಿಸಲಾಗಿದೆ. ಆದರೆ ಪೊಲೀಸರು ಇದನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಪ್ತಚರ ಮಾಹಿತಿ ಮೇರೆಗೆ ಭಾನುವಾರ ಸಂಜೆ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗುಪ್ತಚರ ಇಲಾಖೆಯ ತಂಡ ಮತ್ತು ತೆಲಂಗಾಣ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ನಿಖರ ಮಾಹಿತಿಯನ್ನು ಆಧರಿಸಿ ಆಂಧ್ರಪ್ರದೇಶದ ಗುಪ್ತಚರ ಇಲಾಖೆಯ ತಂಡ ಮತ್ತು ತೆಲಂಗಾಣ ಪೊಲೀಸರು ಆಂಧ್ರಪ್ರದೇಶದ ವಿಜಯನಗರಂನಲ್ಲಿ ಸಿರಾಜ್ ಉರ್ ರೆಹಮಾನ್‌ನನ್ನು ಮೊದಲು ಬಂಧಿಸಿದರು. ಬಳಿಕ ರೆಹಮಾನ್ ಪೊಲೀಸರಿಗೆ ನೀಡಿದ ವಿವರಗಳನ್ನು ಆಧರಿಸಿ ಎರಡನೇ ಶಂಕಿತ ಸಮೀರ್‌ನನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಯಿತು.
ಶಂಕಿತರಿಂದ ಸ್ಪೋಟಕಕ್ಕೆ ಬಳಸುವ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ವ್ಯಕ್ತಿಗಳು ಪ್ರಸ್ತುತ ಬಂಧನದಲ್ಲಿದ್ದು, ಶೀಘ್ರದಲ್ಲೇ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ರೀತಿಯ ಅನುಮಾನಾಸ್ಪದ ಘಟನೆಗಳಿದ್ದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಜಾಗರೂಕತೆಯಿಂದ ದೇಶದ ಭದ್ರತೆಗೆ ಸಹಕರಿಸಿ ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ISI Agent: ಪಾಕಿಸ್ತಾನ ಪರ ಬೇಹುಗಾರಿಕೆ ಪ್ರಕರಣ ; ಯೂಟ್ಯೂಬರ್ ಜ್ಯೋತಿ ಬಳಿಕ ಯುಪಿ ಉದ್ಯಮಿ ಬಂಧನ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಉಂಟಾದ ಉದ್ವಿಗ್ನತೆಯಿಂದ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ.