Nawazuddin Siddiqui: ಒಂದು ಕಾಲದಲ್ಲಿ ವಾಚ್ ಮ್ಯಾನ್ ಆಗಿದ್ದ ನವಾಜುದ್ದೀನ್ ಸಿದ್ದಿಕಿ ಸ್ಟಾರ್ ನಟನಾಗಿದ್ದು ಹೇಗೆ?
ಆಮೀರ್ ಖಾನ್ ನಟಿಸಿದ್ದ ʼಸರ್ಫರೋಶ್ʼ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದ ನವಾಜುದ್ದೀನ್ ಸಿದ್ದಿಕಿ ಪ್ರಸ್ತುತ ಸ್ತಾರ್ ನಟರಾಗಿ ಬದಲಾಗಿದ್ದಾರೆ. ಆದರೆ ಚಲನಚಿತ್ರೋದ್ಯಮಕ್ಕೆ ಎಂಟ್ರಿ ಕೊಡುವ ಮೊದಲು ಅವರು ವಾಚ್ ಮ್ಯಾನ್ ಆಗಿಯು ಕೆಲಸ ನಿರ್ವಹಿಸಿದ್ದಾರೆ ಎಂದರೆ ನೀವು ನಂಬುತ್ತೀರಾ?

Nawazuddin Siddiqui


ನವಾಜುದ್ದೀನ್ ಸಿದ್ದಿಕಿ ಮೇ 19ರಂದು ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಯಾವ ಪಾತ್ರಕ್ಕೂ ಸೈ ಎನ್ನುವ ಇವರ ಅಭಿನಯಕ್ಕೆ ಈಗಾಗಲೇ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇವರು ತಮ್ಮ ಅಭಿನಯದಿಂದ ಹಾಲಿವುಡ್ನಲ್ಲೂ ಛಾಪು ಮೂಡಿಸಿ ಆ್ಯಕ್ಷನ್ ಚಿತ್ರಗಳಲ್ಲಿಯು ಗಮನ ಸೆಳೆದಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಇಂದು ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ಅಭಿನಯಕ್ಕಾಗಿ ಗುರುತಿಸಲ್ಪಟ್ಟಿರುವ ನಟ. ಆದರೆ ಬಹುತೆಕ ಜನರಿಗೆ ತಿಳಿದಿರದ ಸಂಗತಿ ಎಂದರೆ ಅವರು ಚಿತ್ರರಂಗಕ್ಕೆ ಬರುವ ಮೊದಲು ಕಚೇರಿಯೊಂದರಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದ್ದರು ಎನ್ನುವುದು.

ನವಾಜುದ್ದೀನ್ ಸಿದ್ದಿಕಿ ಮೇ 19ರಂದು 51ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇತ್ತೀಚೆಗೆ ಅವರು ZEE5ನ 'Costao' ಸಿನಿಮಾದಲ್ಲಿ ಪ್ರಿಯಾ ಬಾಪಟ್, ಮಹಿಕಾ ಶರ್ಮಾ ಮತ್ತು ತುಷಾರ್ ಫಲ್ಕೆ ಜತೆ ನಟಿಸಿದ್ದರು. ಬಿಹಾರದ ಕುಗ್ರಾಮವೊಂದರಲ್ಲಿ ಜನಿಸಿದ ಈ ನಟ, ತಮ್ಮ ಅಭಿನಯ ಕೌಶಲದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ವಿಜ್ಞಾನದಲ್ಲಿ ಪದವಿ ಪಡೆದ ನಂತರ, ನವಾಜುದ್ದೀನ್ ದೆಹಲಿಗೆ ತೆರಳಿ ಮೊದಲು ರಸಾಯನಶಾಸ್ತ್ರಜ್ಞರಾಗಿ ಕೆಲಸ ಮಾಡಿದರು. ಆ ಬಳಿಕ ಅವರು ಕಚೇರಿಯೊಂದರಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ನಿರ್ವಹಿಸಿದರು. ಆ ಬಳಿಕ ನಾಟಕಗಳನ್ನು ವೀಕ್ಷಿಸಲು ಆರಂಭಿಸಿದರು. ಇದರಿಂದಲೇ ಅವರಿಗೆ ನಾಟಕಗಳತ್ತ ಆಸಕ್ತಿ ಬೆಳೆಯಿತು. ನಂತರ ಅವರು ಸಾಕ್ಷಿ ಥಿಯೇಟರ್ ಗ್ರೂಪ್ಗೆ ಸೇರಿ ಮನೋಜ್ ಬಾಜಪಾಯಿ ಮತ್ತು ಸೌರಭ್ ಶುಕ್ಲಾ ಮುಂತಾದ ಖ್ಯಾತ ನಾಟಕಕಾರರೊಂದಿಗೆ ಕೆಲಸ ಮಾಡಿದರು.

1996ರಲ್ಲಿ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಸಂಸ್ಥೆಯಿಂದ ಪದವಿ ಪಡೆದರು. 1999ರ 'ಸರ್ಪರೋಶ್ʼ ಚಿತ್ರ ಸಣ್ಣ ಪಾತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು. ಈ ಚಿತ್ರವನ್ನು ಜಾನ್ ಮ್ಯಾಥ್ಯೂ ಮಠನ್ ನಿರ್ದೇಶಿಸಿದ್ದು, ಆಮೀರ್ ಖಾನ್, ನಸೀರುದ್ದೀನ್ ಶಾ ಮತ್ತು ಸೋನಾಲಿ ಬೇಂದ್ರೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ʼಬದ್ಲಾಪುರ್ʼ, ʼಗ್ಯಾಂಗ್ಸ್ ಆಫ್ ವಾಸೇಪುರ್ʼ, ʼದಿ ಲಂಚ್ ಬಾಕ್ಸ್ʼ, ʼಬಜರಂಗಿ ಭಾಯಿಜಾನ್ʼ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನವಾಜುದ್ದೀನ್ ನಟಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಅವರ ಮುಂದಿನ ಸಿನಿಮಾ 'ಥಾಮಾʼ. ಇದರಲ್ಲಿ ಆಯುಷ್ಮಾನ್ ಖುರಾನಾ ರಶ್ಮಿಕಾ ಮಂದಣ್ಣ, ಸಂಜಯ್ ದತ್, ವಿನಯ್ ಪಠಾಕ್, ಮತ್ತು ಆಸಿಫ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಆದಿತ್ಯ ಸರ್ಪೋತ್ದಾರ್ ನಿರ್ದೇಶಿಸುತ್ತಿದ್ದಾರೆ.