Ben Stokes: ಭಾರತ ಟೆಸ್ಟ್ ಸರಣಿಗೆ ಫಿಟ್ ಆಗಿರಲು ಮದ್ಯಪಾನ ತ್ಯಜಿಸಿದ ಇಂಗ್ಲೆಂಡ್ ನಾಯಕ
ಕೆಲ ವರ್ಷಗಳಿಂದ ಎಡಪಾರ್ಶ್ವದ ಸ್ನಾಯು ಸೆಳೆತದಿಂದ ಬಳಲುತ್ತಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್, ಈ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣುವ ಸಲುವಾಗಿ ಮದ್ಯಪಾನ ಮಾಡದಿರಲು ದೃಢ ನಿರ್ಧಾರ ಮಾಡಿರುವುದಾಗಿ ಅನ್‌ಟ್ಯಾಪ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ತಿಳಿಸಿದ್ದಾರೆ.


ಲಂಡನ್: ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ಅವರು ಬಿಡುವಿಲ್ಲದ ಕ್ರಿಕೆಟ್ ಮತ್ತು ಪ್ರವಾಸಿ ಭಾರತ(India series) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಂಪೂರ್ಣವಾಗಿ ಫಿಟ್‌ನೆಸ್‌ನೊಂದಿಗೆ ಆಡುವ ಸಲುವಾಗಿ ಮದ್ಯಪಾನ ತ್ಯಜಿಸಿರುವುದಾಗಿ(Stokes quits alcohol) ತಿಳಿಸಿದ್ದಾರೆ. ಸ್ಟೋಕ್ಸ್ ಕೆಲ ವರ್ಷಗಳಿಂದ ಎಡಪಾರ್ಶ್ವದ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಈ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣುವ ಸಲುವಾಗಿ ಮದ್ಯಪಾನ ಮಾಡದಿರಲು ದೃಢ ನಿರ್ಧಾರ ಮಾಡಿರುವುದಾಗಿ ಅನ್‌ಟ್ಯಾಪ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ 'ದಿ ಹಂಡ್ರೆಡ್' ಪಂದ್ಯದ ವೇಳೆ ಎಡಪಾರ್ಶ್ವದ ಸ್ನಾಯು ಗಾಯಕ್ಕೆ ತುತ್ತಾದ ಸ್ಟೋಕ್ಸ್ ಕೆಲವು ದಿನಗಳ ವಿಶ್ರಾಂತಿ ಬಳಿಕ ಹ್ಯಾಮಿಲ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಆಡಲಿಳಿದ್ದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾದರು. ಹೀಗಾಗಿ ಅಂತಿಮವಾಗಿ ಡಿಸೆಂಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಚೇತರಿಕೆಯ ಬಳಿಕ ಇದೀಗ ಭಾರತ ವಿರುದ್ಧ ಮೊದಲ ಟೆಸ್ಟ್ ಸರಣಿ ಆಡಲು ಸಜ್ಜಾಗಿದ್ದಾರೆ.
Ben Stokes decides to quit Alcohol to stay fit for India Test series and the Ashes. Drinking might've contributed to his recurring hamstring injury. (Telegraph). pic.twitter.com/6PClWNvGVO
— Cricket With Manmohan (@GarhManmohan) May 19, 2025
ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ
ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಸ್ಟೋಕ್ಸ್ "ನಾನು ಎಂದಿಗೂ ಸಂಪೂರ್ಣವಾಗಿ ಕುಡಿತ ಬಿಡುತ್ತೇನೆ ಎಂದು ಭಾವಿಸುದಿಲ್ಲ. ಆದರೆ ಈ ವರ್ಷದ ಆರಂಭದಿಂದ ನಾನು ಸಂಪೂರ್ಣ ಚೇತರಿಕೆ ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಇದುವರೆಗೂ ಕುಡಿದಿಲ್ಲ. ಗಾಯದ ನಂತರ, ಕುಡಿತದ ಆಘಾತ ನನಗೆ ಅರಿವಾಗಿದೆ. ಕುಡಿತ ನನ್ನ ಚೇತರಿಕೆಗೆ ಸಹಾಯ ಮಾಡುತ್ತಿಲ್ಲ ಎಂದು ತಿಳಿದ ತಕ್ಷಣ ನಾನು ಮದ್ಯಪಾನ ತ್ಯಜಿಸಿದೆ" ಎಂದರು.
2018ರಲ್ಲಿ ಭಾರತ ವಿರುದ್ಧದ ಸರಣಿ ವೇಳೆ ಲಂಡನ್‌ನಲ್ಲಿ ಮಧ್ಯರಾತ್ರಿಯಲ್ಲಿ ಕುಡಿದು ಬಾರ್ ಹೊರಗೆ ಗಲಾಟೆ ಮಾಡಿ ಶಿಕ್ಷೆಗೆ ಗುರಿಯಾಗಿದ್ದರು.