ಸೋಷಿಯಲ್ ಮೀಡಿಯಾ ಟ್ರೆಂಡ್ ಮಾಡು ಬಾ ಗುರು
ಪದ್ಮಮುನಿರಾಜು, ಬೆಂಗಳೂರು
ಕ್ರಿಯೇಟಿವ್ ಐಡಿಯಾಗಳಿಗೆ ಹೆಸರುವಾಸಿಯಾದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ. ಇದರ ಭಾಗವಾಗಿ ಶುರುವಾಗಿದೆ ಬಾ ಗುರು……..
‘ಬಾ ಗುರು ಟೀ ಕುಡಿಯೋಣ’ ಈ ವಾಕ್ಯದಲ್ಲೇ ಏನೋ ಒಂದು ತರ ಆಕರ್ಷಣೆ ಕಾಣುತ್ತಿದೆ. ಮೈಸೂರಿನ ಹೋಟೆಲ್ವೊಂದರಲ್ಲಿ ಬಾ ಗುರು ಕಾಫಿ ಕುಡಿ ಎಂದು ಶುರುವಾದ ಈ ಟ್ರೆಂಡ್, ಸಾಮಾಜಿಕ ತಾಣದಲ್ಲಿ ಭಾರಿ ಸದ್ದು ಮಾಡಿತು. ಈ ಫೋಟೊ ಇಟ್ಟು ಕೊಂಡು ಜಾಲತಾಣದಲ್ಲಿ ಟ್ರೋಲ್ಗಳು ಶುರುವಾದವು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೂತೂಹಲ ಕೆರಳಿಸುತ್ತಿವೆ. ಈ ಬಗ್ಗೆ ಹೆಚ್ಚು ಹೆಚ್ಚು ಟ್ರೋಲ್ಗಳು ಸಹ ಆಗುತ್ತಿವೆ. ನಮ್ಮ ಈ ತಾಂತ್ರಿಕ ಜಗತ್ತಿನಲ್ಲಿ ಎಲ್ಲವೂ ಕಾಂಪಿಟೇಶನ್. ಅದಕ್ಕೆ ಭಿನ್ನ ವಿಭಿನ್ನವಾಗಿ ಜನರನ್ನು ಆಕರ್ಷಿಸುವ ಈ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಜನರ ಭಾವನೆ ಸೆಳೆಯುವ ಪ್ರಯತ್ನ ಆಗಿದೆ. ‘ಬಾ ಗುರು ಬಟ್ಟೆ
ತಗೋ, ಬಾ ಗುರು ಟೀ ಕುಡಿ, ಬಾ ಗುರು ಊಟ ಮಾಡು, ಏನ್ ಗುರು ಕಾಫಿ ಆಯ್ತಾ, ಬಾ ಗುರು ಬಿರಿಯಾನಿ ತಿನ್ನು, ಬಾ ಗುರು ಎಣ್ಣೆ ಹೊಡಿ. ಈ ಸಾಲುಗಳು ಇಷ್ಟಕ್ಕೇ ನಿಂತಿಲ್ಲ ಪೊಲೀಸ್ ಠಾಣೆಗೆ ‘ಬಾ ಗುರು ಕಂಪ್ಲೇಂಟ್ ಕೊಡು’ ಎಂಬಂತಹ ಸಾಲುಗಳನ್ನು
ಹೊಂದಿಸಿರುವ ಫಲಕಗಳು ಕಂಡುಬರುತ್ತಿವೆ.
ಈ ಪೋಸ್ಟ್ಗಳನ್ನು ವಿವಿಧ ರೀತಿಯಲ್ಲಿ ಬದಲಾಯಿಸಿ ಫೇಸ್ಬುಕ್, ವಾಟ್ಸಾಪ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಹೊಸ ಟ್ರೆಂಡ್ ಆರಂಭವಾಗಿದೆ. ಈ ರೀತಿಯ ಫಲಕಗಳು ಅಂಗಡಿಗಳ ಮುಂದೆ ಹಾಕಲು ಕಾರಣ ಗ್ರಾಹಕರಲ್ಲಿ ಕುತೂಹಲ ಕೆರಳಿಸಿ, ಗ್ರಾಹಕರನ್ನು ಸೆಳೆಯುವ ಜತೆಗೆ, ಗ್ರಾಹಕರಿಂದ ಮೆಚ್ಚುಗೆ ಗಳಿಸಲಿಕ್ಕಾಗಿ ಈ ಫಲಕಗಳನ್ನು ಹಾಕಲಾಗುತ್ತಿದೆ ಎನ್ನುತ್ತಾರೆ ಮಾಲೀಕರು. ಇದರಿಂದ ಅಂಗಡಿಯವರಿಗೆ ಅಧಿಕ ಟಿಪ್ಸ್ ಕೂಡ ಸಿಗಲಿದೆ ಎನ್ನುತ್ತಾರೆ.
ವ್ಯಾಪಾರದ ಗಿಮಿಕ್: ಇಂತಹ ಸಾಲುಗಳನ್ನು ಅಂಗಡಿಗಳ ಫಲಕಗಳಲ್ಲಿ ನೋಡಿದಾಗ ನಗು ಬರುತ್ತಿತ್ತು. ವಿಚಿತ್ರ ಕೂಡ ಅನಿ ಸಿತ್ತು. ಆದರೆ ಇದರಲ್ಲಿ ವಿಶೇಷ ಏನು ಎಂಬ ಕುತೂಹಲ ಮೂಡಿತ್ತು. ಅದೇ ಕುತೂಹಲದಿಂದ ಅಂಗಡಿ ಒಳಗೆ ಒಂದು ಕಾಫಿ ತೆಗೆದುಕೊಂಡು ಕುಡಿಯುತ್ತ ಅಂಗಡಿ ಮಾಲೀಕರನ್ನು ಕೇಳಿದೆ, ಏಕೆ ಈ ರೀತಿ ಫಲಕ ಹಾಕಿದ್ದೀರಾ ಎಂದು, ಅದಕ್ಕೆ ಅವರು ಹೇಳಿದ ಉತ್ತರ ಕೇಳಿದರೆ ನಿಜಕ್ಕೂ ನಗು ಬಂತು, ಆ ಉತ್ತರವೆನೆಂದರೆ, ವ್ಯಾಪಾರವಿಲ್ಲದೆ ಸುಮ್ಮನೆ ಕುಳಿತಿದ್ದ ಸಮಯದಲ್ಲಿ ಈ ರೀತಿ ವಿಶೇಷವಾಗಿ ಏನಾದರೂ ಮಾಡಬೇಕೆಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಈ ಉಪಾಯ ಹೊಳೆಯಿತು. ಈ ರೀತಿ ಫಲಕ ಹಾಕಿದಾಗಿನಿಂದ ಗ್ರಾಹಕರು ಕುತೂಹಲ ದಿಂದಾದರೂ ಅಂಗಡಿಗೆ ಬರುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕ ಮಲ್ಲಿಕಾರ್ಜುನ್.
ಏನ್ ಗುರು ಕಾಫಿ ಆಯ್ತಾ?
‘ಏನ್ ಗುರು ಕಾಫಿ ಆಯ್ತಾ’ ಎನ್ನುವ ಹೆಸರಿನಲ್ಲಿ ಪುಸ್ತಕ ಸಹ ಇದೆ. ಇದು ಕನ್ನಡ ಪರ ಪುಸ್ತಕವಾಗಿದೆ. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದು ಈ ಪುಸ್ತಕದ ಉದ್ದೇಶವಾಗಿದೆ. ಈ ಪುಸ್ತಕ ಬ್ಲಾಗ್ಗಳಲ್ಲಿ ಲಭ್ಯವಿದೆ. ನನ್ನ ಜನ, ನನ್ನತನ ಹಾಗೂ ಕನ್ನಡದ ಇತಿಹಾಸದ ಬಗ್ಗೆ ತಿಳಿಸುತ್ತದೆ. ಅರಿವೇ ಗುರು ನುಡಿ ಜ್ಯೋತಿರ್ಲಿಂಗ, ಕಾಯಕವೇ ಕೈಲಾಸ ಎಂಬುದರ ಮಹತ್ವ ತಿಳಿಸುತ್ತದೆ. ಸಾಧನೆ ಶಿಖರ ಏರಬೇಕಾದರೆ ಯಾವ ಮಾರ್ಗ ಅನುಸರಿಸಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತದೆ.
ಇದರ ಜತೆ ಗ್ರಾಹಕರ ಹಕ್ಕುಗಳು ಮತ್ತು ಗ್ರಾಹಕರ ಮನರಂಜನೆ ಬಗ್ಗೆ ತಿಳಿಸಿಕೊಡುತ್ತದೆ. ರಾಜ್ಯದ ರಾಜಕೀಯ ವ್ಯವಸ್ಥೆ ಹಾಗೂ ಕೇಂದ್ರ ಸರಕಾರ ಕನ್ನಡಿಗರ ಬದುಕನ್ನು ಹೇಗೆ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಸರಿ ಎಷ್ಟು, ಯಾವ ಅಂಶ ಬದಲಾಗಬೇಕು ಎಂಬ ಕುರಿತು ಬರಹಗಾರ ಜಿ.ಆನಂದ್ ಉಲ್ಲೇಖಿಸಿದ್ದಾರೆ.