ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ
ಡಾ.ಸಾಧನಶ್ರೀ
ಆಯುರ್ವೇದದಲ್ಲಿ ಆಹಾರ ಸೇವನೆಯನ್ನು ‘ಯಜ್ಞಕ್ಕೆ’ ಹೋಲಿಸುವ ಮೂಲಕ ಅದರ ಮಹತ್ವವನ್ನು ತಿಳಿಸಿದ್ದಾರೆ. ನಿತ್ಯವೂ ಹಿತ ಆಹಾರ ದಿಂದಲೇ ಅಂತರಗ್ನಿಯನ್ನು ತೃಪ್ತಿಗೊಳಿಸಬೇಕು. ಅನ್ನ ಪಾನಗಳೆಂಬ ಸಮಿತ್ತುಗಳಿಂದ ಅಂತರಗ್ನಿಗೆ ಆಹುತಿ ನೀಡಬೇಕು. ಆಹುತಿ ನೀಡುವಾಗ ಸರಿಯಾದ ಪ್ರಮಾಣ, ಸರಿಯಾದ ಕಾಲ ಮತ್ತು ಸರಿಯಾದ ಕ್ರಮವಿರಬೇಕು.
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಂಭ್ರಮ. ಪ್ರತಿವಾರವೂ ಒಂದಲ್ಲ ಒಂದು ಹಬ್ಬದ ವಾತಾವರಣವು ಮನೆಯನ್ನು ಆವರಿಸಿ ಮನಗಳಿಗೆ ಮುದ ನೀಡುತ್ತದೆ. ಈ ಹಬ್ಬಗಳಿಗೆ ಮತ್ತು ನಮ್ಮ ಸ್ವಾಸ್ಥ್ಯರಕ್ಷಣೆಗೆ ತುಂಬಾ ಹತ್ತಿರವಾದ ಸಂಬಂಧವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಜೀವವಿeನ , ಜೀವನಶಾಸ್ತ್ರ ಮತ್ತು ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿ ಹೇಳಿರುವ ಸ್ವಾಸ್ಥ್ಯರಕ್ಷಣಾ ಕ್ರಮಗಳು ನಮ್ಮ ಪಾರಂಪರಿಕ ಹಬ್ಬಗಳನ್ನು ಆಚರಿಸುವ ವಿಧಿ ವಿಧಾನಗಳಲ್ಲಿ, ಹಬ್ಬಗಳಲ್ಲಿ ಮಾಡುವ ಅಡುಗೆಗಳಲ್ಲಿ, ತೊಡಗಿಕೊಳ್ಳುವ ಚಟುವಟಿಕೆಗಳಲ್ಲಿ ಹಾಸು ಹೊಕ್ಕಾಗಿದೆ.
ಹಾಗೆ ನೋಡಿದರೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಕಾಣುವಂತಹ ಎ ಕ್ರಮಗಳು- ಅಂದರೆ ಹಬ್ಬಗಳ ಆಚರಣೆಯಿರಬಹುದು, ಹಬ್ಬದ ಅಡುಗೆಗಳನ್ನು
ಮಾಡುವ ವಿಽಯಿರಬಹುದು, ಬಡಿಸುವ ಶೈಲಿ ಇರಬಹುದು, ಧರಿಸುವ ಉಡುಗೆಯಿರಬಹುದು, ಸ್ಮರಿಸುವಿಚಾರವಿರಬಹುದು- ಹೀಗೆ ಪ್ರತಿಯೊಂದು ವಿಷಯವನ್ನು ಸಹ ಆಚರಣೆಗೆ ತಂದಿದ್ದು ಆರೋಗ್ಯವನ್ನು ಆಧಾರವಾಗಿಟ್ಟುಕೊಂಡೆ. ಒಂದು ಉದಾಹರಣೆಯನ್ನು ಕೊಡುತ್ತೇನೆ. ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ಕಾಲುಗಳನ್ನು ತೊಳೆದುಕೊಂಡು ಮಲಗಿಕೊಳ್ಳಬೇಕು ಎಂದು ಅಜ್ಜಿ ಸದಾ ಹೇಳುತ್ತಿದ್ದರು.
ಕಾರಣ ಕೇಳಿದಾಗ ಅವರಿಗೆ ತಿಳಿದ ರೀತಿಯಲ್ಲಿ ಮುಗ್ಧವಾಗಿ ಉತ್ತರಿಸುತ್ತಿದ್ದರು. ಆದರೆ, ನಾನು ಆಯುರ್ವೇದದ ಅಧ್ಯಯನವನ್ನು ಪ್ರಾರಂಭ ಮಾಡಿದಾಗ ಇದಕ್ಕೆ ಉತ್ತರ ಸಿಕ್ಕಿತು. ಪಾದಗಳಿಗೂ ಹಾಗೂ ಕಣ್ಣುಗಳಿಗೂ ನೇರವಾದ ಸಂಬಂಧವಿದೆ. ಧಮನಿಗಳ ಮೂಲಕ ಈ ಎರಡು ಅವಯವಗಳ ನಡುವೆ ಮಾತುಕತೆ ನಡೀತಾ ಇರುತ್ತದೆ. ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆದುಕೊಂಡಾಗ ಕಾಲುಗಳು ತಂಪಾಗುತ್ತದೆ. ಈ ತಂಪು ಕಣ್ಣಿನವರೆಗೂ
ಮುಟ್ಟಿ ಕಣ್ಣನ್ನು ತಂಪು ಮಾಡುತ್ತದೆ. ಕಣ್ಣು ತಂಪಾದಾಗ ಸಹಜವಾಗಿ ಸಲೀಸಾಗಿ ನಿದ್ದೆ ಬರುತ್ತದೆ.
ಹಾಗಾಗಿಯೇ ಕಾಲು ತೊಳೆದುಕೊಂಡು ಎರಡೂ ಪಾದಗಳಿಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು ಮಲಗಿಕೊಂಡರೆ ಸಿಹಿ ನಿದ್ದೆ ಖಂಡಿತ. ಹೀಗೆ, ನಮ್ಮ ಸಂಸ್ಕೃತಿಯಲ್ಲಿರುವ ಪ್ರತಿಯೊಂದು ಅಭ್ಯಾಸವನ್ನು ನಾವು ಸ್ವಲ್ಪ ಆಳವಾಗಿ ನೋಡುತ್ತಾ ಹೋದರೆ ಆರೋಗ್ಯ ಪಾಲನೆ, ಸ್ವಾಸ್ಥ ರಕ್ಷಣೆಯೇ ಅದರ ಮೂಲ ಉದ್ದೇಶವೆಂದು ತಿಳಿದು ಬರುತ್ತದೆ. ಹಾಗೆಯೇ ಆ ಆಚರಣೆಯ ಹಿಂದಿರುವ ವಿಜ್ಞಾನವು ನಮಗೆ ಆಯುರ್ವೇದದಲ್ಲಿ ಸಿಗುತ್ತದೆ.
ಸಂಕ್ರಾಂತಿಯಲ್ಲಿ ಎಳ್ಳು ತಿನ್ನುವ ಪದ್ಧತಿ ಇರಬಹುದು, ದೀಪಾವಳಿಯಲ್ಲಿ ಮಾಡುವ ಎಣ್ಣೆ ಸ್ನಾನ, ವಿನಾಯಕ ಚೌತಿಯಲ್ಲಿ ಮಾಡುವ ಸಿಹಿ ತಿನಿಸುಗಳಿರಬಹುದು ಅಥವಾ ನವರಾತ್ರಿಯಲ್ಲಿ ಮಾಡುವ ಪಾಯಸಗಳಿರ ಬಹುದು- ಎಲ್ಲದರ ಹಿಂದೆಯೂ ಅಡಗಿದೆ ನಮ್ಮ ಆರೋಗ್ಯ ರಕ್ಷಣೆ ಹಾಗೂ ವರ್ಧನೆ. ಹಾಗೆಯೇ ನಮ್ಮ ಪೂರ್ವಜರು ಕಂಡುಕೊಂಡ ಮತ್ತೊಂದು ಅತ್ಯಂತ ವೈಜ್ಞಾನಿಕವಾದ ಸ್ವಾಸ್ಥ್ಯ ರಕ್ಷಣಾ ಪದ್ಧತಿ ಎಂದರೆ ಬಾಳೆ ಎಲೆ ಊಟ. ಹಲವಾರು ಹಬ್ಬಗಳನ್ನು ಆಚರಿಸುವ ಈ ಸಮಯದಲ್ಲಿ ಈ ಸ್ವಾರಸ್ಯಕರವಾದ ಬಾಳೆ ಎಲೆ ಊಟದ ಬಗ್ಗೆ ತಿಳಿದುಕೊಳ್ಳಲಿಲ್ಲವೆಂದರೆ ನಮ್ಮ ಹಬ್ಬ ಅಪೂರ್ಣವಾಗಬಹುದು. ಹಾಗಾಗಿ, ಈ ಬಾಳೆ ಎಲೆ ಊಟ ಯಾಕೆ ? ಹೇಗೆ? – ನೋಡೋಣ.
ಆಯುರ್ವೇದದಲ್ಲಿ ಆಹಾರ ಸೇವನೆಯನ್ನು ‘ಯಜ್ಞಕ್ಕೆ’ ಹೋಲಿಸುವ ಮೂಲಕ ಅದರ ಮಹತ್ವವನ್ನು ತಿಳಿಸಿದ್ದಾರೆ. ನಿತ್ಯವೂ ಹಿತ ಆಹಾರದಿಂದಲೇ ಅಂತರಗ್ನಿಯನ್ನು ತೃಪ್ತಿಗೊಳಿಸಬೇಕು. ಅನ್ನ ಪಾನಗಳೆಂಬ ಸಮಿತ್ತುಗಳಿಂದ ಅಂತರಗ್ನಿಗೆ ಆಹುತಿ ನೀಡಬೇಕು. ಆಹುತಿ ನೀಡುವಾಗ ಸರಿಯಾದ ಪ್ರಮಾಣ, ಸರಿಯಾದ ಕಾಲ ಮತ್ತು ಸರಿಯಾದ ಕ್ರಮವಿರಬೇಕು. ಹೀಗೆ ಆಹಾರವನ್ನು ಸೇವಿಸಿದಾಗ ಯಾವ ರೋಗಗಳೂ ಬರುವುದಿಲ್ಲ. ಅಂತರಗ್ನಿಯು ನಮಗೆ ಸರ್ವ ಫಲಗಳನ್ನು ನೀಡಿ ರಕ್ಷಿಸುತ್ತದೆ ಎನ್ನುವುದು ಆಯುರ್ವಾಣಿ. ಸ್ನೇಹಿತರೆ, ಆಹಾರದಷ್ಟೇ ಆಹಾರ ಸೇವನಾ ಕ್ರಮವೂ ಬಹಳ ಮುಖ್ಯ. ನಾವು ಸರಿಯಾಗಿ ಆಹಾರ ಸೇವಿಸಿದರೆ ಎಷ್ಟೋ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
ನಮ್ಮ ದಿನನಿತ್ಯದ ಆಹಾರ ಸೇವನೆಯನ್ನು ಹೇಗೆ ಯಜ್ಞದ ರೀತಿ ಮಾಡಬಹುದು ಅನ್ನುವುದನ್ನು ತೋರಿಸಿಕೊಡುವ ಸಲುವಾಗಿ ಬಾಳೆ ಎಲೆ ಊಟವೆಂಬ
ವೈಜ್ಞಾನಿಕವಾದ ಪದ್ಧತಿಯನ್ನು ಆಚರಣೆಗೆ ತಂದರು. ಹಾಗಾದರೆ, ಈ ಬಾಳೆ ಎಲೆಯನ್ನೇ ಏಕೆ ಉಪಯೋಗಿಸಬೇಕು ಎನ್ನುವುದು ಮೊದಲ ಪ್ರಶ್ನೆಯಾ ಗುತ್ತದೆ. ಆಯುರ್ವೇದದ ಪ್ರಕಾರ ನಾವು ಆಹಾರ ಸೇವಿಸುವುದಕ್ಕೆ ಉಪಯೋಗಿಸುವ ಪಾತ್ರೆಗಳ ಗುಣಗಳು ಆಹಾರದ ಮೇಲೆ ಪ್ರಭಾವ ಬೀರುತ್ತದೆ. ಸಂಶೋಧನೆಗಳ ಪ್ರಕಾರ ಆಹಾರದ ಸೇವನೆಯನ್ನು ಪ್ಲಾಸ್ಟಿಕ್ ತಟ್ಟೆ – ಲೋಟಗಳಲ್ಲಿ ಮಾಡಿದಾಗ ದೇಹದಲ್ಲಿ ಏರುಪೇರಾಗಿ ತೊಂದರೆ ಕಾಣಿಸಿಕೊಳ್ಳು ವುದರಲ್ಲಿ ಸಂಶಯವೇ ಇಲ್ಲ.
ಅದೇ ರೀತಿ ಮಣ್ಣಿನ ಪಾತ್ರೆ ಇರಬಹುದು, ಕಬ್ಬಿಣದ ಪಾತ್ರೆ ಇರಬಹುದು- ಪ್ರತಿಯೊಂದುಕ್ಕೂ ಅದರದ್ದೇ ಗುಣಗಳಿವೆ. ಅದೇ ರೀತಿ ಬಾಳೆಎಲೆಯೂ ಕೂಡ. ಬಾಳೆಎಲೆಯಲ್ಲಿ ಆಹಾರ ಸೇವನೆಯಿಂದ ಆರೋಗ್ಯಕ್ಕೆ ಲಾಭಗಳು ಹಲವು. ಇದರಲ್ಲಿ mಟ್ಝqsmeಛ್ಞಿಟ್ಝo ಎಂಬ ಅಂಶವಿರುತ್ತದೆ. ಈ ಅಂಶವು ಬಿಸಿ
ಆಹಾರ ಎಲೆಯ ಮೇಲೆ ಬಿದ್ದ ತಕ್ಷಣ ಆಹಾರಕ್ಕೆ ಬಿಟ್ಟುಕೊಳ್ಳುತ್ತದೆ. Seಛಿqs Zಛಿ Zಠ್ಠ್ಟಿZ Zಠಿಜಿಟ್ಡಜಿbZಠಿo. ಅಂದರೆ ಇವುಗಳು ನಮ್ಮ ದೇಹದಲ್ಲಿರುವ ದುಷ್ಟ ಅಂಶಗಳನ್ನು/ ಬೇಡದೆ ಇರುವ ಠಿಟ್ಡಜ್ಞಿo, Zಛ್ಟಿ ಛ್ಝ್ಝಿo,ದೇಹದಲ್ಲಿ ಜ್ಞ್ಛ್ಝಿZಞಞZಠಿಜಿಟ್ಞ ಮಾಡುವಂತಹ ಅಂಶಗಳನ್ನು ಅಥವಾ
Zಠಿಟಜಿಞಞ್ಠ್ಞಛಿ bಜಿoಛಿZoಛಿ ಗಳನ್ನು ಹೆಚ್ಚು ಮಾಡುವ ಅಂಶಗಳನ್ನು ಕಡಿಮೆ ಮಾಡಿ ರೋಗವನ್ನು ನಿವಾರಿಸುತ್ತದೆ. ಹಾಗೆಯೆ, ಬಾಳೆ ಎಲೆಯಲ್ಲಿರುವ
ಮತ್ತೊಂದು ಛ್ಞ್ಢಿqsಞಛಿ- mಟ್ಝqsmeಛ್ಞಿಟ್ಝ ಟ್ಡಜಿbZoಛಿ – ಇದು mZhಜ್ಞಿoಟ್ಞರೋಗದಂತಹ ನರಮಂಡಲದ ರೋಗಗಳಲ್ಲಿ ಬಹಳ ಉಪಕಾರಿ.
ಬಾಳೆ ಎಲೆಗೆ ZಠಿಜಿಚಿZಠಿಛ್ಟಿಜಿZ mಟmಛ್ಟಿಠಿqs ಕೂಡ ಇದೆ. ಆಹಾರದಲ್ಲಿ ಇರಬಹುದಾದ ರೋಗಾಣುಗಳನ್ನು ಇದು ನಿವಾರಿಸುತ್ತದೆ. ಹಾಗೆಯೇ ಇದರಲ್ಲಿರುವ ಕೆಲವು ಅಂಶಗಳು ಆಹಾರದ ಪಚನ ಕ್ರಿಯೆಯನ್ನು ಸುಲಭ ಗೊಳಿಸುತ್ತದೆ. ಆಹಾರದ ಸುಗಂಧವನ್ನು ಹೆಚ್ಚಿಸಿ ಭೋಜನ ಮಾಡುವಾಗ ಮನಸ್ಸಿಗೆ ಮುದವನ್ನು ನೀಡುತ್ತದೆ. ಈ ಎಲ್ಲಾ ಕಾರಣಗಳಿಂದ ಬಾಳೆ ಎಲೆಯ ಬಳಕೆ ಭೋಜನಕ್ಕೆ ಬಹಳ ಶ್ರೇಷ್ಠವಾಗುತ್ತದೆ. ಬಾಳೆ ಎಲೆ ಊಟವನ್ನು ಯಾವಾಗಲೂ ನೆಲದ ಮೇಲೆ ಕುಳಿತು ಮಾಡುವ ಕ್ರಮ ಇದೆ. ಯಾಕೆ? ಹೌದು, ನೆಲದ ಮೇಲೆ ಚಾಪೆ ಹಾಸಿ, ಸುಖನದಲ್ಲಿ ಕುಳಿತುಕೊಂಡು ಊಟ ಮಾಡುವ ಪದ್ಧತಿ ಇದೆ. ಕೆಳಗೆ ಸುಖಾಸನದಲ್ಲಿ ಕುಳಿತುಕೊಂಡಾಗ ರಕ್ತ ಸಂಚಾರವು ಉದರದಲ್ಲಿರುವ ಜೀರ್ಣಾಂಗಗಳ ಕಡೆ ಹೆಚ್ಚಾಗುತ್ತದೆ.
ಊಟ ಮಾಡುವಾಗ ಕಾಲುಗಳಿಗೆ ಹೆಚ್ಚಿನ ರಕ್ತ ಸಂಚಾರದ ಅಗತ್ಯವಿಲ್ಲವಿರುವುದರಿಂದ ಕಾಲಿನ ರಕ್ತ ಸಂಚಾರವನ್ನೂ ಸಹ ಹೊಟ್ಟೆಯ ಕಡೆಗೆ ಹೋಗುವ
ಹಾಗೆ ಮಾಡುವುದರ ಮೂಲಕ ನಾವು ತೆಗೆದುಕೊಂಡ ಆಹಾರವು ಸರಿಯಾಗಿ ಪಚನವಾಗಲು ಸಹಾಯವಾಗುತ್ತದೆ. ಹಾಗೆಯೇ, ಕೆಳಗೆ ಕುಳಿತುಕೊಂಡು ಬಾಳೆ ಎಲೆಯನ್ನು ನೆಲದ ಮೇಲಿಟ್ಟುಕೊಂಡು ಆಹಾರ ತೆಗೆದುಕೊಳ್ಳುವಾಗ ಸ್ವಲ್ಪ ಬಗ್ಗುವುದು ಮತ್ತೆ ಆಹಾರವನ್ನು ಜಗಿಯಬೇಕಾದರೆ ಸ್ವಲ್ಪ ಹಿಂದೆ ಬಗ್ಗುವುದು- ಈ ಕ್ರಿಯೆಯಿಂದ ಉದರದ ಮಾಂಸ ಪೇಷಿಗಳು ಚುರುಕುಗೊಂಡು ಪಚನಕ್ಕೆ ಬೇಕಾದ ದ್ರವಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಜಠರದಲ್ಲಿರುವ ಅಗ್ನಿ ಸ್ಥಾನಕ್ಕೆ, ನಾವು ಕೆಳಗೆ ಕುಳಿತುಕೊಂಡಾಗ, ಅಗಲವಾದ ಭದ್ರ ಬುನಾದಿ ಸಿಗುತ್ತದೆ. ಇದರಿಂದ ಅದು ಚೆನ್ನಾಗಿ ಉರಿದು ಆಹಾರದ ಪಾಕವನ್ನು ಮಾಡುತ್ತದೆ.
ಇನ್ನು, ಬಾಳೆ ಎಲೆ ಊಟವನ್ನು ಕೈಯ ಮಾಡಬೇಕು ಅನ್ನುವ ಕ್ರಮ. ಊಟವನ್ನು ಗಮನವಿಟ್ಟು ನೋಡಿ, ಅದರ ಸುಗಂಧವನ್ನು ಅನುಭವಿಸಿ, ಅದನ್ನು
ನಮ್ಮ ಕೈಯಲ್ಲಿ ಹಿಡಿದುಕೊಂಡು ಕಲಸಿ- ಛಿಛ್ಝಿ ಮಾಡಿದಾಗ ನಮ್ಮ ಇಂದ್ರಿಯಗಳು- ಕಣ್ಣು, ಮೂಗು, ಚರ್ಮಗಳು ನಮ್ಮ ಮೆದುಳಿಗೆ ಸರಿಯಾದ ಸಿಗ್ನಲ್ ಅನ್ನು ಕೊಡುತ್ತದೆ- ಮೆದುಳು ಜೀರ್ಣಾಂಗಗಳನ್ನು ಚುರುಕುಗೊಳಿಸಿ ಒಳಗೆ ಬರುವ ಆಹಾರವನ್ನು ಪಾಕ ಮಾಡಲು ಜೀರ್ಣವ್ಯೂಹವನ್ನು ಸಜ್ಜುಗೊಳಿಸುತ್ತದೆ. ಆಹಾರದ ಪಚನ ಸುಲಭವಾಗಿ ಆಗುತ್ತದೆ ಹಾಗೆಯೇ ಊಟವನ್ನು ಕೈಯಲ್ಲಿ ಚೆನ್ನಾಗಿ ಸ್ಪರ್ಶಿಸಿ ಸೇವಿಸಿದಾಗ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಊಟವನ್ನು ಮಾಡಿದ ಭಾವ ಸಂಪೂರ್ಣವಾಗುತ್ತದೆ.ಹಾಗಾಗಿ ಸ್ನೇಹಿತರೆ -ರ್ಕ್ – ಸ್ಪೂನ್‌ಗಳನ್ನು ತ್ಯಜಿಸಿ ಕೈಯಲ್ಲಿ ತಿನ್ನುವ ನಮ್ಮ
ಭಾರತೀಯ ಪದ್ಧತಿಯು ಅತ್ಯಂತ ವೈಜ್ಞಾನಿಕವಾದ ಪದ್ಧತಿ ಎಂದರೆ ಅತಿಶಯೋಕ್ತಿಯಲ್ಲ.
ಇನ್ನು ಬಾಳೆ ಎಲೆಯಲ್ಲಿ ಬಡಿಸಿದ ಖಾದ್ಯಗಳನ್ನು ತಿನ್ನುವ ಕ್ರಮದ ಬಗ್ಗೆ ಸ್ವಲ್ಪ ನೋಡೋಣ. ಆಯುರ್ವೇದವು ಷಡ್ರಸೋಪೇತ- ಅಂದರೆ- ಆರು ರಸಗಳಿಂದ ಕೂಡಿದ ಆಹಾರವನ್ನು ಸಂಪೂರ್ಣ ಆಹಾರ ಎಂದು ಪರಿಗಣಿಸುತ್ತದೆ. ಹಾಗಾಗಿ, ನಮ್ಮ ಬಾಳೆ ಎಲೆ ಊಟದಲ್ಲಿ ಬಡಿಸುವ ಆಹಾರಗಳು, ಷಡ್ರಸಗಳಿಂದ ಕೂಡಿದ್ದು – ಇದರ ಸಂಪೂರ್ಣ ಲಾಭಗಳು ನಮಗೆ ಸಿಗಬೇಕೆಂದರೆ ಇದನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ. ಇಲ್ಲವಾದರೆ ಬಾಳೆ ಎಲೆ ಊಟವಾದ ನಂತರ ಹುಷಾರು ತಪ್ಪುವುದು ತಪ್ಪಿದ್ದಲ್ಲ. ಮೊದಲಿಗೆ, ಮಧುರ ರಸ ಅಂದರೆ ಸಿಹಿಯಿಂದ ಪ್ರಾರಂಭ ಮಾಡಬೇಕು- ಪಾಯಸದಿಂದ ಶುರು ಮಾಡಬೇಕು. ಪಾಯಸವೆಂದರೆ ಹಾಲು ಮತ್ತು ತುಪ್ಪದಿಂದ ಮಾಡಿದ ಪದಾರ್ಥ. ಇದು ಜೀರ್ಣಕ್ಕೆ ಜಡವಾಗಿರುವುದರಿಂದ
ಹಸಿವು ಹೆಚ್ಚಿದ್ದಾಗ ಇದನ್ನು ಸೇವಿಸಬೇಕು.
ಹಾಲು ಮತ್ತು ತುಪ್ಪಗಳು ಜೀರ್ಣಾಂಗದ ಒಳ ಪದರಗಳನ್ನು ಜಿಡ್ಡುಗೊಳಿಸಿ ನಂತರ ಬರುವ ಉಷ್ಣ ಪದಾರ್ಥಗಳಿಂದ ರಕ್ಷಿಸುತ್ತದೆ. ಹಸಿವು ಹೆಚ್ಚಾಗಿ
ಕೋಷ್ಠದಲ್ಲಿ ಹೆಚ್ಚಿರುವ ಪಿತ್ತ-ವಾತಗಳನ್ನು ಶಮನಗೊಳಿಸುತ್ತದೆ. ಸ್ವಾಭಾವಿಕವಾಗಿ ಅಧೋವಾತವನ್ನು ಹೊರ ಹಾಕಿ ಹೊಟ್ಟೆಯುಬ್ಬರ- ನೋವು-ಬಿಗಿತಗಳನ್ನು ಶಮನಮಾಡುತ್ತದೆ. ಈ ಪಾಯಸವು ತೆಗೆದುಕೊಂಡ ಆಹಾರವನ್ನು ಸರಿಯಾಗಿ ಚಲಿಸುವಂತೆ ಮಾಡಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಇದರಲ್ಲಿ ತುಪ್ಪವೂ ಸಹ ಇರುವುದರಿಂದ ಅಗ್ನಿಗೆ ಇಂಧನವಾಗಿ ಚೆನ್ನಾಗಿ ಉರಿಯಲು ಸಹಕರಿಸುತ್ತದೆ. ಮೊದಲು ಮಧುರ ರಸವನ್ನು ಸ್ವೀಕರಿಸಿದ ನಂತರ ಆಮ್ಲ ಅಂದರೆ ಹುಳಿ ಮತ್ತು ಲವಣ ಅಂದರೆ ಉಪ್ಪು ಪ್ರಧಾನವಾದ ಆಹಾರಗಳನ್ನು ಸೇವಿಸಬೇಕು.
ಪಾಯಸದ ನಂತರ ಕೋಸಂಬರಿಗಳನ್ನು ತಿನ್ನುವುದು ಒಳ್ಳೆಯದು. ಇದರಲ್ಲಿ ಸಾಮಾನ್ಯವಾಗಿ ಬೇಳೆ, ಉಪ್ಪು ನಿಂಬೆರಸಗಳನ್ನು ಹೆಚ್ಚಾಗಿ ಕಾಣಬಹುದು.
ಆಮ್ಲ ಮತ್ತು ಲವಣರಸಗಳು ಅಗ್ನಿವರ್ಧಕಗಳು. ಹಸಿ ಬೇಳೆಗಳಿಂದ ಮಾಡಿರುವ ಕೋಸಂಬರಿಗಳು ಜೀರ್ಣಕ್ಕೆ ಸ್ವಲ್ಪ ಜಡ. ಹಾಗಾಗಿ ಮೊದಲೇ ಜಾಠರಾಗ್ನಿ ಹೆಚ್ಚಿದ್ದಾಗಲೇ ತಿನ್ನುವುದರಿಂದ ಹೊಟ್ಟೆ ಉಬ್ಬರದಂತಹ ಸಮಸ್ಯೆಯಾಗುವುದಿಲ್ಲ. ಇದಾದ ನಂತರ ಹುಳಿ ಪ್ರಧಾನವಾದ ಖಾದ್ಯಗಳನ್ನು ನಾವು ತಿನ್ನಬಹುದು.
ಉದಾಹರಣೆಗೆ- ನಿಂಬೆಕಾಯಿ ಚಿತ್ರಾನ್ನ, ಪುಳಿಯೋಗರೆ, ಮಾವಿನ ಕಾಯಿ ಅನ್ನ, ಗೊಜ್ಜವಲಕ್ಕಿ, ಪೈನಾಪಲ್ ಗೊಜ್ಜಿನಿಂದ ಕಲಸಿದ ಅನ್ನ ಇತ್ಯಾದಿ. ಹುಳಿ ರುಚಿಯು ವಿಶೇಷವಾಗಿ ಕೋಷ್ಠದಲ್ಲಿರುವ ವಾತವನ್ನು ಕೆಳಗೆ ಸಲೀಸಾಗಿ ಕಳಿಸುವಂತಹ ಸ್ವಭಾವವುಳ್ಳದ್ದು. ಇದಾದ ನಂತರ ಕಟು ರಸ ಅಂದರೆ ಖಾರ ರುಚಿ ಪ್ರಧಾನವಿರುವ ಪದಾರ್ಥಗಳನ್ನು ತಿನ್ನಬಹುದು. ಉದಾಹರಣೆಗೆ- ಹುಳಿ, ಸಾಂಬಾರು, ತೊವ್ವೆ, ಪಲ್ಯ ಸಾರು ಇತ್ಯಾದಿ. ಇದರಲ್ಲಿ ಬೇಳೆ ಮತ್ತು
ತರಕಾರಿಗಳಿರುವುದರಿಂದ ಇದು ಜೀರ್ಣಕ್ಕೆ ಸ್ವಲ್ಪ ಜಡ. ಹಾಗಾಗಿಯೇ ಅದನ್ನು ಕಟುರಸಪ್ರಧಾನವಾದ ದ್ರವ್ಯಗಳಿಂದ ತಯಾರಿಸಿದಾಗ ಅದು ಸುಲಭವಾಗಿ ಜೀರ್ಣಗೊಳ್ಳುತ್ತದೆ ಮತ್ತು ಶರೀರವನ್ನು ಪೋಷಿಸುತ್ತದೆ.
ಸಾರು ಮತ್ತು ಹುಳಿಗಳಾದ ನಂತರ ಸಾಮಾನ್ಯವಾಗಿ ಸಿಹಿಯನ್ನು ಬಡಿಸುವ ಪದ್ಧತಿ ಇದೆ. ಕಟುರಸದಿಂದ ಹೆಚ್ಚಾದ ಪಿತ್ತವನ್ನು ಮತ್ತು ಉಷ್ಣತೆಯನ್ನು ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ. ಆದರೆ ನಿಮ್ಮ ಹಸಿವೆಯನ್ನು ಗಮನಿಸಿ ಈ ಮಧುರವಾದ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ, ಸಿಹಿ ಜೀರ್ಣಕ್ಕೆ ಜಡ. ಹೊಟ್ಟೆ ತುಂಬಿದ ನಂತರ ಮತ್ತೆ ಸಿಹಿಯ ಸೇವನೆಯು ಅಜೀರ್ಣವಾಗಬಹುದು ಮತ್ತು ಕಫವನ್ನು ಹೆಚ್ಚಿಸಬಹುದು. ಒಂದು ಪಕ್ಷ ತಿಂದರೂ ಸಹ ಇದನ್ನು ಜೀರ್ಣ ಮಾಡಿಕೊಳ್ಳಲಿಕ್ಕೆ ಮಜ್ಜಿಗೆ ಅನ್ನದ ಸೇವನೆ ಹಿತಕರ. ಆಯುರ್ವೇದವು ಕೊನೆಯಲ್ಲಿ ಕಷಾಯ ಅಂದರೆ ಒಗರು ಪ್ರಧಾನವಾದ ಆಹಾರವನ್ನು ಸೇವಿಸಲು ನಿರ್ದೇಶಿಸುತ್ತದೆ.
ವಿಶೇಷವಾಗಿ ತಂಬುಳಿ ಮತ್ತು ಮಜ್ಜಿಗೆಗೆ ಆದ್ಯತೆ ನೀಡಿದೆ. ನೆನಪಿರಲಿ, ಮೊಸರು ನಿಷಿದ್ಧ ಏಕೆಂದರೆ ಇದು ಜೀರ್ಣಕ್ಕೆ ಜಡ ಹಾಗೂ ಕಫವನ್ನು ಹೆಚ್ಚಿಸುತ್ತದೆ. ಆದರೆ ಚೆನ್ನಾಗಿ ಕಡಿದು ಮಾಡಿದ ಮಜ್ಜಿಗೆಯು ಜೀರ್ಣಕ್ಕೆ ಲಘು ಹಾಗೂ ಜಾಠರಾಗ್ನಿಯನ್ನು ಹೆಚ್ಚಿಸಿ ನಾವು ತೆಗೆದುಕೊಂಡ
ಆಹಾರವನ್ನು ಪಚನ ಮಾಡುತ್ತದೆ. ಅದರಲ್ಲೂ, ಒಗ್ಗರಣೆ ನೀಡಿ ಮಾಡಿದ ತಂಬುಳಿಗಳು ಬಹಳ ಹಿತ. ಕಷಾಯ ರಸವು ನಮ್ಮ ಪಚನಾಂಗಗಳನ್ನು ತೊಳೆದು ಸ್ವಚ್ಛಗೊಳಿಸುತ್ತದೆ. ಇನ್ನು ಊಟದ ಜೊತೆ ಬಳಸುವ ಉಪ್ಪಿನಕಾಯಿ ಅಗ್ನಿವರ್ಧಕ ಹಾಗೂ ರುಚಿವರ್ಧಕ. ಇದು ನಮ್ಮ ಪಚನ ಕ್ರಿಯೆಯನ್ನು ಚುರುಕುಗೊಳಿಸಿ ರುಚಿಯನ್ನು ಹೆಚ್ಚಿಸುತ್ತದೆ.
ಇದನ್ನು ಊಟದ ಜೊತೆ ಮಧ್ಯ ಮಧ್ಯ ಸ್ವಲ್ಪ ಸೇವಿಸಿದರೆ ತೊಂದರೆ ಇಲ್ಲ. ಇನ್ನು ಕೊನೆಯ ಭಾಗವಾಗಿ ತಾಂಬೂಲ ಸೇವನೆ- ಅಂದರೆ ವೀಳ್ಯದೆಲೆ, ಅಡಿಕೆ ಮತ್ತು ಸುಣ್ಣ- ಅದರ ಜೊತೆಗೆ ಸ್ವಲ್ಪ ಪಚ್ಚಕರ್ಪೂರ, ಏಲಕ್ಕಿ, ಸೋಂಪು, ಲವಂಗ. ಈ ಮಿಶ್ರ ಣವು ಭೂರಿ ಭೋಜನದ ನಂತರ ಜೀರ್ಣಕಾರಿ. ಆಹಾರದಲ್ಲಿರುವ ಸತ್ವವನ್ನು ದೇಹಕ್ಕೆ ಪೂರೈಕೆ ಆಗುವಂತೆ ಜೀರ್ಣ ಶಕ್ತಿಯನ್ನು ವೃದ್ಧಿ ಮಾಡುತ್ತದೆ. ಜೀರ್ಣಾಂಗದ ಕಾರ್ಯೋತ್ತೇಜಕ. ಬಾಯಿ, ಮೂಗು, ಗಂಟಲು ಮತ್ತು ತಲೆಯಲ್ಲಿ ಕಟ್ಟಿಕೊಂಡ ಕಫವನ್ನು ತೆಗೆದು ಬಾಯನ್ನು ಸ್ವಚ್ಛಗೊಳಿಸಿ ಸುವಾಸಿತಗೊಳಿಸುತ್ತದೆ.
ಸ್ನೇಹಿತರೆ, ಹೀಗೆ ಪಾಯಸದಿಂದ ಶುರುವಾಗಿ ಬಾಳೆ ಎಲೆ ಊಟ ತಾಂಬೂಲ ಸೇವನೆಯಲ್ಲಿ ಕೊನೆಗೊಂಡಾಗ ಅದು ಸಂಪೂರ್ಣ. ಬಾಳೆ ಎಲೆ ಊಟದ ಈ ಒಂದು ಸಂಯೋಜನೆಯ ಚಾತುರ್ಯವೇನೆಂದರೆ ದೇಹಕ್ಕೆ, ಜೀರ್ಣಕ್ಕೆ ತೊಂದರೆ ಆಗದ ಹಲವಾರು ಖಾದ್ಯಗಳನ್ನು ಆಸ್ವಾದಿಸಿ, ಅದನ್ನು ಪಚನ ಮಾಡಿಕೊಳ್ಳುವ ಸಾಮರ್ಥ್ಯವನ್ನು ಜಾಠರಾಗ್ನಿಗೆ ತುಂಬಿ ಅದರಿಂದ ದೇಹ-ಇಂದ್ರಿಯ-ಮನಸ್ಸುಗಳ ಸಮಗ್ರ ಲಾಲನೆ ಪೋಷಣೆ. ಶ್ರಾವಣಮಾಸದ ಮುಂದಿನ ಹಬ್ಬದಲ್ಲಿ ಮನಃ ಪೂರ್ತಿಯಾಗುವಂತೆ ಬಾಳೆ ಎಲೆ ಊಟ ಸವಿಯಲು ಇದಕ್ಕಿಂತ ಒಳ್ಳೆಯ ಸುದ್ದಿ ಇನ್ನೆಲ್ಲಿ ? ಅಲ್ವಾ?