Tuesday, 3rd December 2024

ಸೋಲೇ ಹೆದರುವಂತಾಗಬೇಕು

ಪರಿಶ್ರಮ

parishramamd@gmail.com

ಬದುಕು. ಅದರಲ್ಲೇ ಗೆಲುವು, ಸೋಲು, ಒಂಟಿತನ, ಒಂದು ಥರ ಬೇಸರ, ಏನದರೂ ಸಾಧಿಸಬೇಕು ಅನ್ನೋ ಅದಮ್ಯ ಉತ್ಸಹ. ಮಧ್ಯದ ನಿಲ್ಲಿಸಿ ಬಿಡುವಂತಹ ಆತಂಕ. ಇದರ ಮಧ್ಯೆ ನಿರಂತರವಾಗಿ ಸಾಗಬೇಕಿರುವ ಬದುಕು.

ನೂರು ವರ್ಷದ ಲೈಫ್ ಇದು. After all, ಒಂದು ನೂರು ಪೇಜ್ ಬುಕ್ ನಲ್ಲೇ ನೂರು ಮಿಸ್ಟೇಕ್ಸ್ ಇರುತ್ತೆ. ನೂರು ವರ್ಷದ ಲೈಫ್ ಇದು. ಒಂದಷ್ಟು ಮಿಸ್ಟೇಕ್ಸ್ ನಡಿಯುತ್ತೆ, ಎಡವಟ್ಟು ಆಗುತ್ತೆ, ಸಮಸ್ಯೆ ಆಗುತ್ತೆ ಅದನ್ನ ತಿದ್ದಿಕೊಂಡು ಮುಂದೆ ನಡೆಯೋದೆ ಬದುಕು. ನಿಮ್ಮ ಪ್ರಯತ್ನದಲ್ಲಿ ಪ್ರಾಮಾಣಿಕತೆ ಇದ್ದರೆ ಗಮ್ಯ ನಿಮ್ಮ ಪರ ನಿಲ್ಲುತ್ತೆ.

ಒಂದು ಕೋಳಿ ಮೊಟ್ಟೆ ನಾಲ್ಕನೇ ಫ್ಲೋರ್ ಇಂದ ಮೂರನೇ ಫ್ಲೋರ್‌ಗೆ ಬೀಳುತ್ತೆ. ನಾಲ್ಕನೇ ಫ್ಲೋರ್ ಇಂದ ಮೂರನೇ ಫ್ಲೋರ್‌ಗೆ ಬಿದ್ದರೆ ಏನು ಆಗಲ್ಲ, ಯಾಕೆ ಅಂದರೆ ಏನೋ ಸಾಧಿಸುತ್ತೀನಿ ಅನ್ನೋ ನಂಬಿಕೆ. ಅದೇ ಕೋಳಿ ಮೊಟ್ಟೆ ಮೂರನೇ ಫ್ಲೋರ್ ಇಂದ ಎರಡನೇ ಫ್ಲೋರ್‌ಗೆ ಬಿದ್ದರೆ ಹೊಡಿಯೋದೇ ಇಲ್ಲ ಯಾಕೆ ಅಂದರೆ ಧೈರ್ಯ.

ಅದೇ ಮೊಟ್ಟೆ ಎರಡನೇ ಫ್ಲೋರ್ ಇಂದ ಒಂದನೇ ಫ್ಲೋರ್‌ಗೆ ಜೋರಾಗಿ ಬಿದ್ದರೆ ಹೊಡಿಯೋದೇ ಇಲ್ಲ ಯಾಕೆ ಅಂದರೆ ಕಾನಿಡೆ. ಒಂದನೇ ಫ್ಲೋರ್ ಇಂದ ಗ್ರೌಂಡ್ ಫ್ಲೋರ್‌ಗೆ ಉರುಳಿಕೊಂಡು ಹೋದರು ಹೊಡೆದು ಹೋಗುತ್ತೆ ಯಾಕೆ ಅಂದರೆ ಓವರ್ ಕಾನಿಡೆ. ಎಲ್ಲಿಯವರೆಗೂ ಓವರ್ ಕಾನ್ಪಿಡೆನ್ಸ್ ಇರುವುದಿಲ್ಲವೋ ಅಲ್ಲಿವರೆಗೂ ನಿನ್ನನ್ನ ಯಾರು ಸೋಲಿಸೋಕೆ ಆಗಲ್ಲ.

ವಿಮರ್ಶಕರನ್ನು ಜೋಪಾನವಾಗಿ ಕಾಪಾಡಿಕೊಳ್ಳಿ ಅವರೇ ನಿನ್ನ ನಿಜವಾದ ದಾರಿದೀಪ. ಅವರಿಂದಾನೆ ನೀನು ಫೈಟ್ ಮಾಡೋಕೆ ಇಳೀತೀಯ. ಹೋಗುಳುದವರದ್ದು ಏನಿದೆ ಬಿಡಿ. ಪಾಪದ ಪಾಸಿಂಗ್ ಕ್ಲೌಡ್ ತರ. ವಿಮರ್ಶಕರು ಇರಬೇಕು. ನಿನ್ನ ಶತೃಗಳನ್ನ ದಯವಿಟ್ಟು ಜೋಪಾನವಾಗಿ ಕಾಪಾಡಿಕೊಳ್ಳಿ, ಅವರನ್ನ ರೆಸ್ಪೆಕ್ಟ್ ಮಾಡಿ, ಅವರಿಂದ ಕಲಿಯಿರಿ, ಅವರು ಇದಾರೆ ಅನ್ನೋ ಎಚ್ಚರಿಕೆಯಲ್ಲಿ ಇರಿ.

ರೆಸ್ಪೆಕ್ಟ್ ಯುವರ್ ಎನಿಮೀಸ್. ನಿನ್ನ ಯಾರೋ ಬೈದರು ಅಂದರೆ ಅವರನ್ನ ವಿಲನ್ ಅನ್ನೋ ರೀತಿ ನೋಡಬೇಡಿ. ತಪ್ಪು ಮಾಡುವವರೆಲ್ಲ ಹೀರೋ ತರಹ ಫೀಲ್ ಆಗುತ್ತಿರುವಾಗ ನೀವೇಕೆ ಭಯ ಪಡುತ್ತೀರಾ. ಧೈರ್ಯವಾಗಿರಿ. ನಮ್ಮ ಎಲ್ಲ ಕರ್ನಾಟಕ ರೈತರಿಗೆ ನಿಮ್ಮ ಒಂದು ಮನವಿ ಮಾಡುತ್ತೀನಿ. ಇವತ್ತು ಈ ಮಳೆ ಇಂದ ತುಂಬ ಬೆಳೆಷ್ಟವಾಗಿದೆ. ತುಂಬ ರೈತರು ಅಳುತ್ತಿರುವುದು ನೋಡಿದ್ರೆ ಬಹಳ ಬೇಜಾರಾಗುತ್ತೆ. ನಮ್ಮ ಕೈಯಲ್ಲಿ ಏನು ಮಾಡುವುದಕ್ಕೆ ಆಗುತ್ತೆ ಪ್ರಕೃತಿ ಒಂದು ಅನಾಹು ತವನ್ನ ಕ್ರಿಯೇಟ್ ಮಾಡಿಬಿಟ್ಟಿದ್ದೆ.

ಬೆಳೆ ಹಾಳಾಗಿಬಿಟ್ಟಿದ್ದೆ. ಆ ಬೆಳೆಗೆ ಸಾಲ ಮಾಡಿಕೊಂಡಿರುತ್ತೀರಾ ಆದರೆ ದಯವಿಟ್ಟು ಧೈರ್ಯವಾಗಿರಿ ಯಾರು ಆತ್ಮಹತ್ಯೆ ಅನ್ನೋ ತೀರ್ಮಾನಕ್ಕೆ ಕೈ ಹಾಕಬೇಡಿ. ಸರಕಾರ ನಿಮ್ಮ ಜತೆ ಇದೆ. ದಯವಿಟ್ಟು ಧೈರ್ಯವನ್ನ ಬೆಳಿಸಿಕೊಳ್ಳಿ ಯಾಕೆಂದರೆ ನಿಮ್ಮನ್ನು ನಂಬಿ ನಿಮ್ಮ ಫ್ಯಾಮಿಲಿಗಳು ಬದುಕಿರುತ್ತಾರೆ. ನೀವು ತುಂಬ ಮುಖ್ಯ. ದುಡಕಬೇಡಿ ಒಂದು ಬೆಳೆ ಲಾಸ್ ಆಯಿತು.
ಕೂಲ್ ಆಗಿ ಯೋಚಿಸಿ. ನಿಮ್ಮ ಫ್ಯಾಮಿಲಿ ಜತೆಗೆ ಇದ್ದರೆ ನೀವು ಏನನ್ನು ಬೇಕಾದರೂ ಸಾಧಿಸಬಹುದು.

ಒಂದು ಸಲ ಸೋತೆ ಎಂದ ತಕ್ಷಣ ನಾನು ಸೋತು ಬಿಟ್ಟೆ ಅನ್ನೋದು ಸೋತಿದ್ದು ನೀನಲ್ಲ ನಿನ್ನ ಪ್ರಯತ್ನ ಅಷ್ಟೇ. ಗೆದ್ದಿದ್ದು ನೀನಲ್ಲ ನಿನ್ನ ಪ್ರಯತ್ನ. ಕರ್ಮ ಕಿಯಾ ಜಾವೋ ಪಲುಕಿಚ್ಚಾ ಮತ್ ಕರೋ ಮಾಡು ಪ್ರಾಮಾಣಿಕವಾಗಿ ಮಾಡು. ಬೀಲಿವ್ ಯುವರ್ ಸೆಲ. ನಿನ್ನನ್ನ ನಿನ್ನ ಕೈಯಲ್ಲಿ ನಂಬೋಕೆ ಆಗಲಿಲ್ಲ ಅಂದರೆ ಪಕ್ಕದವನಿಗೆ ಏನು ಕೆಲಸ. ತುಂಬ ತನ್ನ ಕೆಲಸವನ್ನ ತೋರಿಸಿಕೊಳ್ಳುವುದಿಲ್ಲ. ನನ್ನ ಅಚೀವ್‌ಮೆಂಟ್‌ನ ನಿಮ್ಮ ಬಗ್ಗೆ ನೀವೇ ಹೇಳಿಕೊಳಲ್ಲ ಅಂದರೆ ಹೇಗೆ ಎಲೆಮರಿಕಾಯಿ ಅನ್ನೋ ರೀತಿ ಇರಬೇಕು ಅಂದರೆ ಹೇಗೆ ಮತ್ತೆಕ್ಕೆ ಕಷ್ಟ ಪಟ್ಟೆ.

ತುಂಬ ಸಾಧಿಸಿಬಿಟ್ಟು ಸ್ಕ್ರೀನ್ ಹಿಂದೆ ಇರುತ್ತೀರಾ. ನೀವು ಸಾಧಿಸಿದಿರಾ ಈ ಪ್ರಪಂಚಕ್ಕೆ ಹೇಳಿ. ನೀವು ಸೋತರೆ accept ಮಾಡಿ. ನನ್ನ ತಪ್ಪಿನಿಂದ ನಾನು ಸೋತೆ ಎಂದು ಒಪ್ಪಿಕೊಳ್ಳಿ. ಗೆದ್ದಾಗ ಮಾತ್ರ ಸಪೋರ್ಟ್, ಗಾಡ್ ಬ್ಲೆಸ್, ಎಫರ್ಟ್ ಇಷ್ಟೆ ಅಲ್ವ? ಸೋತಾಗ ಮಾತ್ರ ದುರದುಷ್ಟ ಅಲ್ವ, ಅದೃಷ್ಟ, ದುರದುಷ್ಟ ಅನ್ನೋ ಆಟಗಳ ಮದ್ಯೆ ಕಳೆದುಹೋಗುವುದು
ಬೇಡ.

ಎಫರ್ಟ್ ಹಾಕಿ, ದೈರ್ಯವಾಗಿರಿ. ನೀವು ಅಂದುಕೊಂಡಿದ್ದು ಆಗುತ್ತೆ. ಸೋಲು ಅಂದರೆ ಸೋಲಲ್ಲ ಮುಂದೆ ಹೋದ ಗೆಲುವು. ಸೋತರು ನಿಂದೆ ಗೆದ್ದರು ನಿಂದೆ. ಸ್ವಾರ್ಥ ಪ್ರಪಂಚ ಸ್ವಾರ್ಥಕ್ಕೆ ಸ್ವಾಭಿಮಾನನು ಸೇಲ್ ಆಗಿ ಬಿಡುತ್ತೆ. ಸ್ವಾರ್ಥಿಗಳ ಪ್ರಪಂಚ ದಲ್ಲಿ ಹೆದರಿಕೊಂಡ್ರೆ ಹೇಗೆ ದೈರ್ಯವಾಗಿ dears ಜೀವನ ತುಂಬ ದೊಡ್ಡದ್ದು. ನಿಮ್ಮ ತಂದೆ ತಾಯಿಯ ಕನಸು ದೊಡ್ಡದ್ದು. ಅವರು ಕಂಡಿರೋ ಕನಸು ದೊಡ್ಡದ್ದು ನಿಮ್ಮ ೨೦, ೨೫ ವರ್ಷಗಳವರೆಗೂ ಸಾಕಿ ಸಲುಹಿರುತ್ತಾರೆ. ಒಂದು ಚಿಕ್ಕ ಸೋಲಿಗೆ ಹೆದರಿ ಸತ್ತು ಹೋಗುವಷ್ಟು ವೀಕ್ ಮೈಂಡಾ ನೀನು ಗೆದ್ದಾಗ ನೀನು ಎಷ್ಟು ಜನಕ್ಕೆ explanation ಕೊಡಬೇಕೋ ಸೋತಾಗಲು ಅಷ್ಟೇ explanation ಕೊಡಬೇಕು.

ಯುದ್ಧ ಮತ್ತು ಪ್ರೀತಿಯಲ್ಲಿ ಏನು ಬೇಕಾದರೂ ನಡೆಯಬಹುದು. ಫೈಟ್ ಮಾಡಿ ಕೂತು ಕಷ್ಟ ಪಟ್ಟು ಬರಿದ್ರೆ ರೈಟರ್ ಆಗು
ತ್ತೀಯ. ಬದುಕಬೇಕು ಅಂದರೆ ಫೈಟರ್ ಆಗಬೇಕು. ಫೈಟರ್ ಅಂದರೆ ಜನಗಳ ಹತ್ತಿರ ಗಲಾಟೆ ಹೋಗುವುದಲ್ಲ. ಏಕಾಗ್ರತೆ ಕಳೆದುಕೊಳ್ಳದೆ ಇರುವುದು. ನಿಮ್ಮನ್ನ ಕಂಡರೆ ಇರುವವರು ನಿಮ್ಮನ ನೋಡಿದ ತಕ್ಷಣ ಸ್ಮೈಲ್ ಕೊಡ ಬೇಕು. ಮುಖವನ್ನು ಸಪ್ಪೆ ಮಾಡಿಕೊಳ್ಳುವುದು ಅಲ್ಲ. ಕಿಲ್ ವಿಥ್ ಯುವರ್ ಸ್ಮೈಲ್.

ಇನ್ನು ಕೆಲವರು ಏನು ಸಾದಿಸಬೇಕಾದರು ಭಯ ಹೆಚ್ಚೇ! ಇಡಲು ಭಯ. ಭಯ ಅನ್ನೋದು ಅಲ್ಸರ್ ಇರುವವರನ್ನ ಸಾಯಿಸಿ ಬಿಡುತ್ತದೆ. ಧೈರ್ಯ ಅನ್ನೋದು ಕ್ಯಾನ್ಸರ್ ಇರುವವರನ್ನು ಬದುಕಿಸಿಬಿಡುತ್ತೆ. ದೈರ್ಯವಾಗಿರಿ. ವಿಮರ್ಶೆಯನ್ನ ಫೇಸ್ ಮಾಡಿ. ನೀವು ಅಂದುಕೊಂಡಿದ್ದನ್ನ ಸಾಧಿಸುತ್ತೀರಾ, ನೀವು ಅಂದುಕೊಂಡಿದ್ದ ಆಗುತ್ತೆ. ನಮ್ಮನ್ನ ವಿಮರ್ಶೆ ಮಾಡುವವವರು ಇರಬೇಕು. ಅವರು ಎಲ್ಲಿ ನಮ್ಮನ್ನ ಅವಮಾನ ಮಾಡುತ್ತಾರೋ ಅನ್ನೋ ಭಯ ಇಂದ ಎಚ್ಚರಿಕೆವಾಗಿ ಇರುತ್ತೀವಿ. ಅವರು ಎಲ್ಲಿ ನಮ್ಮನ ಸೋಲಿಸಿಬಿಡುತ್ತಾರೋ ಅನ್ನೋ ಭಯ ಇಂದ ಇರುತೀವಿ.

ಸಾವನ್ನು ಪಡೆಯಲು ಸಾವಿರ ದಾರಿಗಳಿವೆ. ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ಆತ್ಮವಿಶ್ವಾಸ.