Monday, 16th September 2024

ಬಿಜೆಪಿ-ಶಿವಸೇನೆ ಜಗಳದಿಂದ ಎನ್‌ಡಿಎ ಮಿತ್ರ ಪಕ್ಷಗಳು ಕಲಿಯಬೇಕಾದ್ದೇನು?

ಚರ್ಚೆ

ರಾಜದೀಪ್ ಸರ್ದೇಸಾಯಿ, ಪತ್ರಕರ್ತರು 

ಮಹಾರಾಷ್ಟ್ರದ ಈ ಮಹಾಭಾರತ ಎನ್‌ಡಿಎ ಮೈತ್ರಿಕೂಟವೆಂಬ ಪ್ರಯೋಗದ ಅಂತ್ಯಕ್ಕೆ ನಾಂದಿಯಾಗಲಿದೆಯೇ? ಇಂದು ಶಿವಸೇನೆಗೆ ಆದ ಗತಿಯೇ ನಾಳೆ ಬಿಹಾರದಲ್ಲಿ ಜೆಡಿಯುನ ನಿತೀಶ್ ಕುಮಾರ್‌ಗೆ ಎದುರಾದರೆ?

ಬಿಜೆಪಿಯ ದಿವಂಗತ ನಾಯಕ ಪ್ರಮೋದ್ ಮಹಾಜನ್ ಈಗ ಇದ್ದಿದ್ದರೆ ಬಹುಶಃ ಒಂದು ಘಟನೆ ನೆನಪಿಸಿಕೊಳ್ಳುತ್ತಿಿದ್ದರು. 1990ರ ದಶಕದಲ್ಲಿ ಮೊದಲ ಬಾರಿ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ಮೈತ್ರಿಿಯ ಬಂಧ ಬೆಸೆದವರೇ ಮಹಾಜನ್. ಆಗಿನ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಮೈತ್ರಿಿಯ ಮಾತುಕತೆಗೆಂದು ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆೆ ಬಳಿಗೆ ಹೋಗಿದ್ದರು. ಠಾಕ್ರೆೆ ಒಂದು ಸಣ್ಣ ಚೀಟಿಯಲ್ಲಿ ಏನೋ ಗೀಚಿ ಕೊಟ್ಟಿಿದ್ದರು. ಬಿಡಿಸಿ ನೋಡಿದರೆ, ‘ನಾವು 200 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ, ಇನ್ನುಳಿದ ಕಡೆ ನೀವು ಸ್ಪರ್ಧಿಸಿಕೊಳ್ಳಿಿ’ ಎಂದು ಬರೆದಿತ್ತು. ಇದನ್ನೇ ಬಿಜೆಪಿಯವರ ಮುಖದ ಮೇಲೆ ಹೊಡೆದಂತೆ ಠಾಕ್ರೆೆ ಹೇಳುತ್ತಿಿದ್ದರು ಕೂಡ. ಕೊನೆಗೆ ಅಷ್ಟೋೋ ಇಷ್ಟೋೋ ಚೌಕಾಸಿ ನಡೆದು, 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ಶಿವಸೇನೆ 183 ಕ್ಷೇತ್ರಗಳಲ್ಲೂ, ಬಿಜೆಪಿ 105 ಕ್ಷೇತ್ರಗಳಲ್ಲೂ ಸ್ಪರ್ಧಿಸಿತ್ತು.

ಈಗ 2019ರಲ್ಲಿ ಪರಿಸ್ಥಿಿತಿ ಉಲ್ಟಾಾ ಆಗಿದೆ. ಹಿಂದೆ ಹೇಗೆ ಬಿಜೆಪಿಗೆ ಶಿವಸೇನೆ ಆದೇಶ ಕೊಡುತ್ತಿಿತ್ತೋೋ ಹಾಗೆ ಈಗ ಬಿಜೆಪಿಯೇ ಶಿವಸೇನೆಗೆ ಆದೇಶ ಕೊಡುತ್ತಿಿದೆ. ಬಿಜೆಪಿ ಬಿಟ್ಟುಕೊಡುವ ಸಣ್ಣ ಪಾಲನ್ನು ಪಡೆದು ಶಿವಸೇನೆ ತೃಪ್ತಿಿಪಡಬೇಕು. ಕೇಸರಿ ಮೈತ್ರಿಿಕೂಟವೆಂಬ ಸಮುದ್ರದಲ್ಲಿ ಶಿವಸೇನೆ ಒಂದು ಸಣ್ಣ ಪಾತ್ರವನ್ನಷ್ಟೇ ನಿಭಾಯಿಸಬೇಕು. ಮಹಾರಾಷ್ಟ್ರದಲ್ಲಿ ಇಂತಹದ್ದೊೊಂದು ದೊಡ್ಡ ರೂಪಾಂತರ ನಾಟಕೀಯವಾಗಿ ನಡೆದುಹೋಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮತ್ತು ಮಹಾರಾಷ್ಟ್ರದಲ್ಲಿ ದೇವೇಂಧ್ರ ಫಡ್ನವೀಸ್ ಅವರ ನಾಯಕತ್ವ ಹೇಗೆ ಈ ರಾಜ್ಯದ ಸಂಪೂರ್ಣ ರಾಜಕೀಯ ಸಮೀಕರಣವನ್ನೇ ಬದಲಾಯಿಸಿಬಿಟ್ಟಿಿದೆ ಎಂಬುದನ್ನು ಇದು ತೋರಿಸುತ್ತದೆ.

ಅಧಿಕಾರ ರಾಜಕಾರಣದಲ್ಲಾಾದ ಈ ಬದಲಾವಣೆ ಶಿವಸೇನೆಗೆ ದೊಡ್ಡ ತಲೆನೋವು ತಂದಿಟ್ಟಿಿದೆ. ಮಹಾರಾಷ್ಟ್ರೀಯ ಸ್ಥಳೀಯವಾದದ ಗರ್ಭದಿಂದ ಹೊರಬಂದ ಪ್ರಾಾದೇಶಿಕ ಪಕ್ಷಕ್ಕೆೆ ರಾಷ್ಟ್ರಮಟ್ಟದಲ್ಲಿ ಎಲ್ಲವನ್ನೂ ನಿಯಂತ್ರಿಿಸುವ ಇಬ್ಬರು ಗುಜರಾತಿಗಳಿಂದ ಸವಾರಿ ಮಾಡಿಸಿಕೊಳ್ಳುವುದು ನುಂಗಲಾಗದ ಗುಳಿಗೆಯಿದ್ದಂತೆ. ಅದರಲ್ಲೂ ಹಿಂದೆ ಸಂಯುಕ್ತ ಮಹಾರಾಷ್ಟ್ರ ರಾಜ್ಯ ನಿರ್ಮಾಣ ಚಳವಳಿಯ ಕಾಲದಿಂದ ಹೋರಾಡಿಕೊಂಡು ಬಂದ ಪಕ್ಷಕ್ಕೆೆ ಇದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಆದರೆ ವಾಸ್ತವದಲ್ಲಿ ‘ಮರಾಠಿ ಮಾನೂಸ್’ಗೆ ಅದರ ತಾಯ್ನೆೆಲದಲ್ಲೇ ಎರಡನೇ ದರ್ಜೆಯ ಸ್ಥಾಾನಮಾನ ಸಿಗುತ್ತಿಿದೆ.

ಬಿಜೆಪಿಗೆ ಬೆಂಬಲ ನೀಡಬೇಕು ಅಂದರೆ ಮುಖ್ಯಮಂತ್ರಿಿ ಹುದ್ದೆೆಯನ್ನು ಹಂಚಿಕೊಳ್ಳಬೇಕೆಂದು ಶಿವಸೇನೆ ಏಕೆ ಷರತ್ತು ವಿಧಿಸುತ್ತಿಿದೆ ಎಂಬುದಕ್ಕೆೆ ಇದರಲ್ಲೇ ಅರ್ಧ ಉತ್ತರವಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಹಾಗಾಗಿ ಫಲಿತಾಂಶ ಬಂದಮೇಲೆ ಬಿಜೆಪಿ ಏನು ಷರತ್ತು ವಿಧಿಸುತ್ತದೆಯೋ ಅದಕ್ಕೆೆ ಒಪ್ಪಿಿಕೊಳ್ಳದೆ ಬೇರೆ ದಾರಿ ಶಿವಸೇನೆಗೆ ಇರಲಿಲ್ಲ.

ಹೀಗಾಗಿ ಶಿವಸೇನೆಗೆ ಕಳೆದ ಸರಕಾರದಲ್ಲಿ ಮಹಾರಾಷ್ಟ್ರದಲ್ಲಿ ಒಂದೇ ಒಂದು ಉತ್ತಮ ಖಾತೆ ಸಿಗಲಿಲ್ಲ. ಅತ್ತ ಕೇಂದ್ರದಲ್ಲಿ ಸಿಕ್ಕಿಿದ್ದು ಒಂದೇ ಒಂದು ಖಾತೆ. ಆರೋಗ್ಯ ಸರಿಯಿಲ್ಲದ ಉದ್ಧವ್ ಠಾಕ್ರೆೆಯನ್ನು ಮೃದು ನಾಯಕನೆಂದು ಬದಿಗೆ ಸರಿಸಿ ಫಡ್ನವೀಸ್‌ರನ್ನು ಮಹಾರಾಷ್ಟ್ರದ ನಂ.1 ನಾಯಕನಾಗಿ ಮಾಡಲಾಯಿತು. ಇದಕ್ಕೆೆ ಪ್ರಮುಖ ತಿರುವು ಸಿಕ್ಕಿಿದ್ದು 2017ರ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ. ಆಗ ಬಿಜೆಪಿಯು ಶಿವಸೇನೆಯ ಭದ್ರಕೋಟೆಯನ್ನೇ ಒಡೆದು ಒಳಗೆ ನುಗ್ಗಿಿತ್ತು. ಶಿವಸೇನೆ 84 ಸ್ಥಾಾನ ಗೆದ್ದಿದ್ದರೆ, ಬಿಜೆಪಿ 31 ಸ್ಥಾಾನದಿಂದ ಜಿಗಿದು ಮೇಲೆದ್ದು 82 ಸ್ಥಾಾನ ಗಳಿಸಿತ್ತು.

ಒಂದೆಡೆ, ಪ್ರಾಾದೇಶಿಕ ಪಕ್ಷವಾದ ಶಿವಸೇನೆಗೆ ಮುಂಬೈನಲ್ಲಿರುವ ದೊಡ್ಡ ಸಂಖ್ಯೆೆಯ ಉತ್ತರ ಭಾರತೀಯ ವಲಸಿಗರನ್ನು ಸೆಳೆಯುವುದು ಕಷ್ಟವಾಗಿತ್ತು. ಇನ್ನೊೊಂದೆಡೆ, ಹಿಂದು ರಾಷ್ಟ್ರೀಯವಾದವನ್ನೇ ಹೆಗ್ಗುರುತು ಮಾಡಿಕೊಂಡು ಜನರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಿಯಾಗಿತ್ತು. ಅದರ ಪರಿಣಾಮವಾಗಿ, ಹಿಂದೆ ಬಾಳಾಠಾಕ್ರೆೆಯ ಕಾಲದಲ್ಲಿ ಶಿವಸೇನೆ ನಾಯಕನ ಒಂದು ಗರ್ಜನೆಗೆ ಇಡೀ ಮುಂಬೈ ಸ್ತಬ್ಧವಾಗುತ್ತದೆ ಎಂದು ಹೆಮ್ಮೆೆಪಡುತ್ತಿಿದ್ದ ಪಕ್ಷವೀಗ ಕೇವಲ ಕಾಗದದ ಹುಲಿಯಾಗುವ ಪರಿಸ್ಥಿಿತಿಗೆ ಬಂದಿತು. ಇವೆಲ್ಲದರ ಫಲವೇ ಈಗ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಶಿವಸೇನೆ ತೀಕ್ಷ್ಣವಾಗಿ ನಡೆಸುತ್ತಿಿರುವ ದಾಳಿ.

2019ರ ಈ ಚುನಾವಣೆ ಶಿವಸೇನೆಗೆ ಮಾಡು ಇಲ್ಲವೇ ಮಡಿ ಚುನಾವಣೆ ಎಂಬುದು ಕೂಡ ಇದೇ ಕಾರಣಕ್ಕೆೆ. ಆದ್ದರಿಂದಲೇ ಠಾಕ್ರೆೆ ಕುಟುಂಬದವರು ಯಾವತ್ತೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ರಿಮೋಟ್ ಕಂಟ್ರೋೋಲ್‌ನಂತೆ ಕೆಲಸ ಮಾಡುತ್ತಾಾರೆ ಎಂಬ ಸಂಪ್ರದಾಯವನ್ನು ಮುರಿದು 29 ವರ್ಷದ ಆದಿತ್ಯ ಠಾಕ್ರೆೆಯನ್ನು ಚುನಾವಣಾ ಕಣಕ್ಕಿಿಳಿಸಲಾಯಿತು. ಅಷ್ಟಾಾದರೂ ಫಲಿತಾಂಶ ಬಂದಾಗ ಶಿವಸೇನೆ ಹಾಗೂ ಬಿಜೆಪಿಯ ನಡುವಿನ ಅಂತರ ಹೆಚ್ಚಾಾಗುತ್ತಿಿರುವುದು ಇನ್ನಷ್ಟು ಖಾತ್ರಿಿಯಾಯಿತು. ಬಿಜೆಪಿ ತಾನು ಸ್ಪರ್ಧಿಸಿದ್ದ 164 ಸ್ಥಾಾನಗಳ ಪೈಕಿ 105ನ್ನು ಗೆದ್ದಿತ್ತು. ಅಂದರೆ ಸ್ಟ್ರೆೆ ಕ್ ರೇಟ್ ಶೇ.70. ಶಿವಸೇನೆ ತಾನು ಸ್ಪರ್ಧಿಸಿದ್ದ 124 ಸೀಟುಗಳ ಪೈಕಿ 56ನ್ನು ಗೆದ್ದಿತ್ತು. ಅಂದರೆ, ಸ್ಟ್ರೆೆ ಕ್ ರೇಟ್ ಶೇ.50ಕ್ಕಿಿಂತ ಕಡಿಮೆ. ಆದರೆ, ಚುನಾವಣಾ ರಾಜಕೀಯದಲ್ಲಿ ಟಿ-20 ಮ್ಯಾಾಚ್‌ನಂತೆ ಈ ಸ್ಟ್ರೆೆ ಕ್ ರೇಟ್ ಲೆಕ್ಕಕ್ಕೆೆ ಬರುವುದಿಲ್ಲ. ವಾಸ್ತವ ಏನೆಂದರೆ ಬಿಜೆಪಿಗೆ ಸರಕಾರ ರಚಿಸುವುದಕ್ಕೆೆ 39 ಸೀಟು ಕಡಿಮೆಯಿದೆ ಮತ್ತು ಅದರಿಂದಾಗಿ ಶಿವಸೇನೆಗೆ ಸರಕಾರ ರಚನೆಯಲ್ಲಿ ಸಾಕಷ್ಟು ಆಟವಾಡಲು ಅವಕಾಶ ಸೃಷ್ಟಿಿಯಾಗಿದೆ. 2014ರಲ್ಲಿ ತಾನು ಮೂಲೆಗುಂಪಾಗುವ ಭಯದಿಂದಾಗಿ ಬಿಜೆಪಿಯ ಷರತ್ತುಗಳನ್ನೆೆಲ್ಲ ಶಿವಸೇನೆ ಒಪ್ಪಿಿಕೊಳ್ಳಬೇಕಾಗಿ ಬಂದಿತ್ತು. ಆದರೆ 2019ರಲ್ಲಿ ಶಿವಸೇನೆಯನ್ನು ಅವಲಂಬಿಸುವುದು ಬಿಜೆಪಿಗೆ ಅನಿವಾರ್ಯವಾದ್ದರಿಂದ ಶಿವಸೇನೆಗೆ ಚೌಕಾಸಿ ಮಾಡುವುದಕ್ಕೆೆ ಸಾಕಷ್ಟು ಅವಕಾಶ ಸಿಕ್ಕಂತಾಗಿದೆ.

ಆದರೆ ಕತೆಯಲ್ಲಿ ಬಂದ ತಿರುವು ಇದೊಂದೇ ಅಲ್ಲ. 2014ರ ಚುನಾವಣೆಯಲ್ಲಿ ಶರದ್ ಪವಾರ್ ಅವರ ಎನ್‌ಸಿಪಿ ಬಿಜೆಪಿ ಜತೆ ಕೈಜೋಡಿಸಲು ಚಿಂತನೆ ನಡೆಸುತ್ತಿಿತ್ತು. ಆದರೆ 2019ರಲ್ಲಿ ಜಾರಿ ನಿರ್ದೇಶನಾಲಯದ ನೋಟಿಸ್ ಬಂದಿದ್ದು ಹಾಗೂ ತಮ್ಮ ಪಕ್ಷದ ನಾಯಕರನ್ನೇ ಸೆಳೆದು ಪಕ್ಷ ಒಡೆಯಲು ಬಿಜೆಪಿ ಯತ್ನಿಿಸಿದ್ದು ಶರದ್ ಪವಾರ್‌ಗೆ ಗೊತ್ತಾಾದ ಮೇಲೆ ಅವರೂ ಒಂದು ಕೈ ನೋಡಿಯೇ ಬಿಡೋಣ ಎಂದು ಕದಡಿದ ನೀರಿನಲ್ಲಿ ಮೀನು ಹಿಡಿಯುತ್ತಾಾ ಬಿಜೆಪಿಗೆ ದುಸ್ವಪ್ನವಾಗಿ ನಿಂತಿದ್ದಾಾರೆ. ಇನ್ನು ಕಾಂಗ್ರೆೆಸ್‌ನ ಮುಂದೆ ಹೆಚ್ಚು ಅವಕಾಶಗಳೇನೂ ಇಲ್ಲ. ಮಹಾರಾಷ್ಟ್ರದಂತಹ ಸಂಪದ್ಭರಿತ ರಾಜ್ಯದಲ್ಲಿ ಮತ್ತೊೊಂದು ಬಿಜೆಪಿ ನೇತೃತ್ವದ ಸರಕಾರ ಬರದಂತೆ ಯತ್ನಿಿಸುವುದಷ್ಟೇ ಅದರ ಗುರಿ. ಆದರೆ, ಅದಕ್ಕಾಾಗಿ ‘ಕೋಮುವಾದಿ’ ಶಿವಸೇನೆಯ ಜತೆ ಬಹಿರಂಗವಾಗಿ ಮೈತ್ರಿಿ ಮಾಡಿಕೊಳ್ಳಲೂ ಅದು ಸಿದ್ಧವಿಲ್ಲ. (ಕುತೂಹಲಕಾರಿ ಸಂಗತಿಯೆಂದರೆ 1975ರಲ್ಲಿ ಬಾಳಾಠಾಕ್ರೆೆ ತುರ್ತು ಪರಿಸ್ಥಿಿತಿಯನ್ನು ಬೆಂಬಲಿಸಿ, ನಂತರ 1977 ಮತ್ತು 1980ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆೆಸ್ ವಿರುದ್ಧ ಅಭ್ಯರ್ಥಿಗಳನ್ನೇ ಕಣಕ್ಕಿಿಳಿಸಿರಲಿಲ್ಲ.)

ಈ ಅಪಾಯಕಾರಿ ರಾಜಕೀಯದಾಟದಲ್ಲಿ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿ ಇಂದಲ್ಲಾಾ ನಾಳೆ ಒಂದು ಪ್ರಶ್ನೆೆಯನ್ನಂತೂ ಎದುರಿಸಲೇಬೇಕಾಗುತ್ತದೆ: ಎಲ್ಲಿಯವರೆಗೆ ಮೈತ್ರಿಿ ಪಕ್ಷಗಳನ್ನು ಬಿಜೆಪಿಯ ಯಜಮಾನಿಕೆ ಒಪ್ಪಿಿಕೊಳ್ಳುವಂತೆ ಮೂಲೆಗೆ ತಳ್ಳಲು ಸಾಧ್ಯ? ಶಿವಸೇನೆಯವರೇನೋ ಈ ಬಾರಿ ಒಳ್ಳೊೊಳ್ಳೆೆಯ ಖಾತೆ ಪಡೆದು ಮತ್ತೆೆ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಕ್ರಮೇಣ ಸರಕಾರ ರಚಿಸಲು ಕೈಜೋಡಿಸಬಹುದು. ಆದರೆ, ಮಹಾರಾಷ್ಟ್ರದ ಈ ಮಹಾಭಾರತ ಎನ್‌ಡಿಎ ಮೈತ್ರಿಿಕೂಟವೆಂಬ ಪ್ರಯೋಗದ ಅಂತ್ಯಕ್ಕೆೆ ನಾಂದಿಯಾಗಲಿದೆಯೇ? ಇಂದು ಶಿವಸೇನೆಗೆ ಆದ ಗತಿಯೇ ನಾಳೆ ಬಿಹಾರದಲ್ಲಿ ಜೆಡಿಯುನ ನಿತೀಶ್ ಕುಮಾರ್‌ಗೆ ಎದುರಾದರೆ?

ಕೊನೆಯ ಮಾತು
ಪ್ರತಿ ಚುನಾವಣೆಯೂ ಕಿಂಗ್ ಮತ್ತು ಕಿಂಗ್ ಮೇಕರ್‌ಗಳನ್ನು ಹೊರಕಕ್ಕುತ್ತದೆ. ಈ ವಿಷಯದಲ್ಲಿ 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಹಳ ವಿಶಿಷ್ಟವಾಗಿ ಕಾಣಿಸುತ್ತದೆ. ಇಲ್ಲಿ ಮುಂಚೆ ಊಹಿಸಿದ ಯಾರೂ ಈಗ ಸ್ಟಾಾರ್‌ಗಳಲ್ಲ. ಒಮ್ಮೊೊಮ್ಮೆೆ ಪತ್ರಕರ್ತರೂ ಯಶಸ್ವಿಿ ರಾಜಕಾರಣಿಯಾಗುತ್ತಾಾರೆ ಎಂಬುದಕ್ಕೆೆ ನಿಮಗೇನಾದರೂ ಸಾಕ್ಷ್ಯ ಬೇಕೆಂದರೆ ಸಾಮ್ನಾಾದ ಸಂಪಾದಕ ಸಂಜಯ್ ರಾವತ್‌ರನ್ನು ನೋಡಿ. ಬಾಳಾಠಾಕ್ರೆೆಯ ಸುದೀರ್ಘ ಸಂದರ್ಶನ ಮಾಡಿ ರಾಜಕೀಯ ಪ್ರವೇಶಿಸಿದ ಈ ವ್ಯಕ್ತಿಿಯೇ ಇಂದು ಮಹಾರಾಷ್ಟ್ರದಲ್ಲಿ ಶಿವಸೇನೆಯ ಅತಿದೊಡ್ಡ ಧ್ವನಿಯಾಗಿದ್ದಾಾರೆ!

Leave a Reply

Your email address will not be published. Required fields are marked *