Monday, 16th September 2024

ಪ್ರತಿ ಘಟನೆಗೂ ಜಾತಿ ಎಂಬ ಸೋಂಕು ಏಕೆ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ನಮ್ಮ ದೇಶದಲ್ಲಿ ಮೊದಲಿಗೆ ಪರಸ್ಪರ ರಾಜರುಗಳ ಮಧ್ಯೆ ರಾಜ್ಯಗಳನ್ನು ಗೆಲ್ಲುವ ಹಪಾಹಪಿಯಿಂದಾಗಿ ಯುದ್ಧಗಳು ನಡೆದವು. ಆ ನಂತರ ಇಡೀ ಹಿಂದೂ ಧರ್ಮವನ್ನು ನಾಶ ಮಾಡಲು ಕಾಲಿಟ್ಟ ಇಸ್ಲಾಂ ಆಕ್ರಮಣಗಳು ನಡೆದವು. ಬರ್ಬರ ಹಿಂಸೆ ರಕ್ತಪಾತ ಗಳಾದವು. ನಾಗರಿಕರಲ್ಲದೆ ಭವ್ಯ ದೇವಾಲಯಗಳು ಮತಾಂತರಕ್ಕೆ ಒಳಗಾದವು.

ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರ ಒಗ್ಗೂಡಿದ ಭಾರತೀಯ ರಾಜರು ಗಳು ಇಸ್ಲಾಂ ಆಕ್ರಮಣಗಳನ್ನು
ಹಿಮ್ಮೆಟ್ಟಿಸಿದರು. ಇದರಿಂದ ಚೇತರಿಸಿಕೊಳ್ಳುತ್ತಿದ್ದಾಗಲೇ ವ್ಯಾಪಾರದ ಸೋಗಿನಲ್ಲಿ ಬಂದ ಆಂಗ್ಲರು ದೇಶಪೂರ್ತಿ ಆಕ್ರಮಿಸಿ ಕೊಂಡು ಗುಲಾಮಗಿರಿಯನ್ನು ಹೇರಿ ಕುಳಿತರು. ಇವರನ್ನು ಹೊರದಬ್ಬಿ ದೇಶವನ್ನು ರಕ್ಷಿಸಿಕೊಳ್ಳಲು ಶತಮಾನಗಳೇ ಕಳೆದು ಹೋದವು.

ತಿಲಕ್ ಅಜಾದ್ ಭಗತ್ ಪಾಂಡೆ ಸುಖದೇವ್ ರಾಜಗುರು ಸಾವರ್ಕರ್‌ರಂಥ ಅನೇಕ ಕಿಡಿಗಳು ಹೊತ್ತಿ ಕೊನೆಗೆ ನೇತಾಜಿಯವರ ಪಾಂಚಜನ್ಯ ಮೊಳಗದೇ ಹೋಗಿದ್ದರೆ ಇನ್ನೂ ಸಹ ಬ್ರಿಟೀಷರೇ ಇಲ್ಲಿನ ಅವಕಾಶವಾದಿಗಳನ್ನು ಚಮಚಾಗಳನ್ನು ಬಳಸಿಕೊಂಡು ತಳ ಊರಿಕೊಂಡಿರುತ್ತಿದ್ದರೇನೋ. 1947ರ ನಂತರ ಸದ್ಯ ಇನ್ನು ಮುಂದೆ ನಾವುಗಳೇ ಪ್ರಜಾಪ್ರಭುಗಳು ಎಂದು ನಿಟ್ಟುಸಿರು
ಬಿಡುತ್ತೇವೆಂದು ಅಂದುಕೊಳ್ಳುತ್ತಲೇ ಏಳು ದಶಕಗಳು ಕಳೆದುಹೋದವು. ಆದರೂ ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ಎಂಬ ದರಿದ್ರ ರಾಜಕಾರಣ. ಅನಿಷ್ಟ ಸಮಯ ಸಾಧಕ ತನದ ರಾಜಕೀಯ, ಭ್ರಷ್ಟಾಚಾರ, ಬಡತನ, ಮತಾಂತರ, ಭಯೋತ್ಪಾದನೆಗಳಂಥ ಕಂಟಕಗಳಿಂದ ಮುಕ್ತರಾಗುವ ಲಕ್ಷಣಗಳೇ ಕಾಣುತ್ತಿಲ್ಲ.

ಇದಕ್ಕೆಲ್ಲ ‘ಮೂಲವ್ಯಾದಿಯೇ’ ಜಾತಿ ಎಂಬ ರಾಜಕೀಯ ಪೂರಕ ಪ್ರೇರಕ ವ್ಯವಸ್ಥೆಗಳು. ಈಗಿನ ಅದರ ರೂಪ ಹೇಗಿದೆ ಎಂದು ಇತ್ತೀಚಿನ ಬೆಳವಣಿಗೆ ಯೊಂದರ ದೃಷ್ಟಾಂತವನ್ನು ನೋಡಿ. ನೋಡೀ, ಈಗ ಒಬ್ಬ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗಿ ಹೋಗಿದೆ (ಕಾಮ ಪೈಶಾಚಿಗಳಿಗೆ ಆ ಕ್ಷಣದಲ್ಲಿ ಜಾತಿ ಧರ್ಮ ಅವಶ್ಯಕತೆ ಇರುವುದಿಲ್ಲ) ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಧರ್ಮ ಯಾವುದು? ಓ ಆಕೆ ಹಿಂದೂ?, ಸರಿ ಆಕೆಯ ಜಾತಿ ಯಾವುದು?, ಓ ಹೋ ಆಕೆ ದಲಿತಳಾಗಿದ್ದಾಳಾ? ಸರಿ ಹಾಗಾದರೆ, ಈಗ
ಮೊದಲು ಬ್ರಾಹ್ಮಣತ್ವವನ್ನು ಜರಿಯಿರಿ, ದಬ್ಬಾಳಿಕೆಯನ್ನು ಅಗತ್ಯಕ್ಕಿಂತಲೂ ದೊಡ್ಡ ದನಿಯಲಿ ಖಂಡಿಸಿ.

ಮನುವಾದಿ, ಕೋಮುವಾದಿ, ಹಿಂದುತ್ವ ಎಂದು ವಿನಾಕಾರಣ ದೂಷಿಸಿರಿ. ಅನಗತ್ಯವಾಗಿ ಸಂವಿಧಾನ ಶಿಲ್ಪಿಗಳನ್ನು ಮಧ್ಯದಲ್ಲಿ ತಂದು ಅವರ ಅಃತಕರಣವನ್ನು ಅರಿಯದೆ ಅವರ ಮೇಲಿನ ಅಭಿಪ್ರಾಯವನ್ನು ಭೇದಗೊಳಿಸಿ, ಮೋದಿಯವರನ್ನು ಹೊಣೆಯಾ ಗಿಸಿ, ಸಂಘಪರಿವಾರ ಬಿಜೆಪಿಯ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ. ಮತ್ತು ಇದನ್ನು ಪುನರಾವರ್ತಿಸಿ.

ಓ.. ಅತ್ಯಾಚಾರ ಸಂತ್ರಸ್ತೆ ದಲಿತ ಜಾತಿಯಾಗದೆ ಬೇರೆ ಜಾತಿಯಾಗಿದ್ದಾಳೆಯೇ? ಈಗ ಅತ್ಯಾಚಾರ ವಾದ ರಾಜ್ಯದ ಆಡಳಿತ ಪಕ್ಷ ಯಾವುದು ನೋಡಿ! ಓ..ಹೋ ಬಿಜೆಪಿ ಪಕ್ಷವೇ? ಸರಿ, ಆಡಳಿತವನ್ನು ಅಲ್ಲಗಳೆಯಿರಿ, ಕಾನೂನು ಸುವ್ಯವಸ್ಥೆಯನ್ನು ಖಂಡಿಸಿ, ಮುಖ್ಯಮಂತ್ರಿಯ ರಾಜೀನಾಮೆ ಕೇಳಿ, ಮತ್ತೇ ಮೋದಿ, ಅಮಿತ್ ಶಾ, ಬಿಜೆಪಿ, ಸಂಘ ಪರಿವಾರದವರ ವಿರುದ್ಧ ಕೂಗಾಡಿ
ಮರ್ಯಾದೆ ಕಳೆಯಿರಿ. ಓ ಅತ್ಯಾಚಾರ ಸಂತ್ರಸ್ತೆಯ ರಾಜ್ಯದ ಆಡಳಿತ ಬಿಜೆಪಿ ಅಲ್ಲ ತಾನೇ? ಬಿಡಿ ಬಿಡಿ ಸುಮ್ಮನಿರಿ.

ಓ..ಅತ್ಯಾಚಾರಕ್ಕೊಳಗಾದ ಹೆಣ್ಣು ಮಗಳ ಧರ್ಮ ಮುಸ್ಲಿಂ ಆಗಿದೆಯೇ? ಸ್ವಲ್ಪ ಇರಿ, ಅದಕ್ಕೆಂದೇ ಹಸಿದ ಶುಭನಕಗಳಂತೆ ಕಾಯುತ್ತಿವೆ. ಹಿಂದೂಗಳಲ್ಲೇ ಕೆಲ ವ್ಯಾದಿಗಳು. ಮಸಲ್ಮಾನರಿಗಿಂತ ಮೊದಲು ಅವರೇ ಬೀದಿಗೆ ಬರುತ್ತಾರೆ. ಕೈ ಫಲಕಗಳನ್ನು ಹಿಡಿದು ರಸ್ತೆಗಿಳಿದು ವಿರೋಧಿಸುತ್ತಾರೆ, ಅಪಾರ್ಥ ಸೃಷ್ಟಿಸಿ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಉಳಿಗಾಲವಿಲ್ಲವೆಂದು ಕೆಲ ಮಾಧ್ಯಮಗಳು, ಬುದ್ಧಿಜೀವಿಗಳು, ಪ್ರಗತಿಪರರು, ವಿಚಾರವಾದಿಗಳೆಂಬ ಸಮಯ ಸಾಧಕರು ಎದೆಬಡಿದುಕೊಂಡು ಮೋದಿ
ಭಾರತಕ್ಕೆ ಪಾಪ ಸುತ್ತುವ ಕೆಲಸಕ್ಕಿಳಿಯುತ್ತಾರೆ. ಅಸಹಿಷ್ಣುತೆಯೆಂಬ ಪಿಳ್ಳೆನೆಪ ಮಾಡಿಕೊಂಡು ಕೆಲಸಕ್ಕೆ ಬಾರದ್ದನ್ನು ಹಿಂತಿರು ಗಿಸುವ ನಾಟಕಗಳಾಡುತ್ತಾರೆ.

ಅಲ್ಪಸಂಖ್ಯಾತರನ್ನು ಹಿಂದುತ್ವದ ವಿರುದ್ಧ ಎತ್ತಿಕಟ್ಟಿ ಮನೆಗೆ ಬೆಂಕಿ ಇಡುವಂತೆ ಪ್ರಚೋದಿಸುತ್ತಾರೆ. ಇದಕ್ಕೆ ಪಕ್ಕವಾದ್ಯವಾಗಿ ಮೋದಿ, ಅಮಿತ್ ಶಾ, ಸಂಘ ಪರಿವಾರದ ವಿರುದ್ಧ ದಂಗೆ ಏಳುವಂತೆ ಮಾಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಅತ್ಯಾಚಾರ, ಶೋಷಣೆ, ದಬ್ಬಾಳಿಕೆಗೆ ಒಳಗಾದವರು ದಲಿತ ಅಥವಾ ಅಲ್ಪಸಂಖ್ಯಾತರಾಗಿದ್ದರೆ ಅಥವಾ ಆಳುವ ಸರಕಾರ ಬಿಜೆಪಿ ಇದ್ದರೆ ಅಲ್ಲಿ ಈರುಳ್ಳಿ ಪಟಾಕಿ ಹೊಡೆಯಿರಿ. ಒಂದೊಮ್ಮೆ ಬೇರೆ ಜಾತಿಯಾಗಿದ್ದರೆ ಬಿಜೆಪಿಯೇತರ ಸರಕಾರವಿದ್ದರೆ ಟುಸ್‌ಪಟಾಕಿ ಹೊಡೆದು ಸುಮ್ಮನಿರಿ.

ಇದೇ ಸರಳ ಸೂತ್ರ ಈಗಿನ ವಾಸ್ತವದ ಚಿತ್ರಣ. ಕಾರಣ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಎಪ್ಪತ್ತು ವರ್ಷಗಳಿಂದ ಇದ್ದ ದರಿದ್ರ ಗಳನ್ನೆಲ್ಲಾ ಗೂಡಿಸಿ ಸ್ವಚ್ಛ ಭಾರತದತ್ತ ಸಾಗುತ್ತಿದೆ. ಹೀಗಾಗಿ ಅನೇಕ ರಾಜಕೀಯ ಪಕ್ಷಗಳಿಗೆ ಗುಲಾಮಗಿರಿಯ ವೋಟ್ ‌ಬ್ಯಾಂಕ್ ನಶಿಸಿಹೋಗಿ ಕುಟುಂಬ ರಾಜಕಾರಣಗಳಿಗೆ ಉಳಿಗಾಲ ವಿಲ್ಲವೆಂಬ ಆತಂಕ ಸೃಷ್ಟಿಯಾಗಿದೆ. ಮೋದಿಯವರ ನಂತರದ ಸಾಲಿನಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥರಂಥ -ರ್‌ಬ್ರಾಂಡ್‌ಗಳು ಸಿಂಹಸ್ವಪ್ನದಂತೆ ದುಸ್ವಪ್ನವಾಗಿ ಗುಲಾಮರ ನಿದ್ದೆಗೆಡಿಸುತ್ತಿದೆ. ಹೀಗಾಗಿ ಮಾನವ ವಿರೋಧಿ ಕೃತ್ಯವಾದ ಅತ್ಯಾಚಾರದಲ್ಲೂ ಕುಲಗೆಟ್ಟವರು ಸಂತ್ರಸ್ತೆ ಗಿಂತಲೂ ಆಕೆಯ ಜಾತಿಯನ್ನೇ ಬಳಸಿ ಕೊಂಡು ದೇಶದ ಏಕತೆಗೆ ಸಹಬಾಳ್ವೆಗೆ ಸೋದರತ್ವಕ್ಕೆ ಬೆಂಕಿ ಇಡುತ್ತಿದ್ದಾರೆ.

ಇಷ್ಟಕ್ಕೂ ನಮ್ಮ ಪರಂಪರೆಯಲ್ಲಿದ್ದ ಜಾತಿಗಳ ನೈಜ ಪರಿಕಲ್ಪನೆಗಳು ಹೇಗೆ ಮಹತ್ವ ಪಡೆದಿತ್ತೆಂಬುದನ್ನು ಒಂದು ಸಲ ಅವಲೋಕಿಸೋಣ. ಉದಾಹರಣೆಗೆ ಜೀವನದಲ್ಲಿ ಒಂದು ಗಂಡು ಹೆಣ್ಣಿಗೆ ಅತಿ ಮಹತ್ವದ ಗಳಿಗೆ ವಿವಾಹ ಸಮಾರಂಭ. ಇದಕ್ಕೆ ಮುಹೂರ್ತವಿಟ್ಟು ಲಗ್ನ ಕಟ್ಟಿ ಮಂತ್ರಾಕ್ಷತೆ ನೀಡಿ ಮಂಗಳ ಸೂತ್ರ ಕಟ್ಟಿಸಿ ಜನ್ಮಜನ್ಮದ ಅನುಬಂಧವನ್ನು ಬೆಸೆದು ದೈವೀಬಲ ನೀಡುವುದು ಬ್ರಾಹ್ಮಣ ಪುರೋಹಿತರು. ಈ ಶುಭ ಸಮಾರಂಭಕ್ಕೆ ವಧುವರರಿಗೆ ಮಡಿ ಹಾಸುವವರು ಮಡಿವಾಳರು, ಮುತ್ತೈದೆ ಯರಿಗೆ ಬಳೆತೊಡಿಸುವ ಬಳೆಗಾರ, ವಿಳೆದೆಲೆ ಅಡಿಕೆ, ಬಲಜಿಗರು, ಮಂಗಳವಾದ್ಯ ನಾದಸ್ವರ ನುಡಿಸಿ ನಿರ್ಣಾಯಕ ಮಂಗಳ ಸೂತ್ರಕ್ಕೆ ಗಟ್ಟಿಮೇಳ ನೀಡುವವರು ಓಲಗದವರು, ಕೇಶಾಲಂಕರಿಸುವ ಕ್ಷೌರಿಕರು, ವಧು- ವರರಿಗೆ ಆಭರಣ ತಯಾರಿಸು ವವರು ಅಕ್ಕಸಾಲಿಗರು, ಪಾದರಕ್ಷೆ ತಯಾರಿಸುವವರು ಚಮ್ಮಾರರು, ಬಣ್ಣ ಬಣ್ಣದ ದಿವಸ ನೀಡುವ ದೇವಾಂಗ ನೇಯ್ಗೆಯವರು, ಅದನ್ನು ಸುಂದರವಾಗಿ ಒಲೆದು ಕೊಡುವ ದರ್ಜಿಗಳು, ಪವಿತ್ರ ಗೋವಾಂಶ ಹರಿಸುವ ಗೊಲ್ಲರು, ಆಹಾರ ಸಾಮಗ್ರಿ ಒದಗಿಸುವ ಮಣ್ಣಿನ ಒಕ್ಕಲಿಗರು, ಗಾಣಿಗರು, ಮಡಕೆಕುಡಿಕೆ ನೀಡುವ ಕುಂಬಾರರು, ನೆರೆವ ಸಾವಿರಾರು ಮಂದಿಮಾಧವರಿಗೆ ಭೋಜನ ಸಿದ್ಧಪಡಿಸಿ ಬಡಿಸುವ ಬಾಣಸಿಗರು, ಕಾಯತ್ತಾ ನಿಲ್ಲುವ ಮತ್ತೊಂದು ಪಂಕ್ತಿಯ ಭೋಜನಕ್ಕೆ ಅವಕಾಶ ಕಲ್ಪಿಸುವ ಉಂಡೆಲೆ ಎತ್ತುವವರು ಹೀಗೆ ಒಂದು ಶುಭಕಾರ್ಯ ಯಶಸ್ವಿಯಾಗಿ ಜರುಗಬೇಕಾದರೆ ಸಕಲ ಜಾತಿಯ ಮಹಾನುಭಾವರ ಶ್ರಮ ಹಾಗೂ ಪಾತ್ರ ಅತ್ಯವಶ್ಯಕ ವಾಗಿ ಬೇಕು.

ವಿವಾಹ ಬಂಧನವು ಸ್ವರ್ಗದಲ್ಲಿ ನಿರ್ಣಯವಾಗಿದ್ದರೂ ಅದೇ ದೇವರನ್ನು ಪೂಜಿಸುವ ಅನೇಕ ಜಾತಿಯವರ ಕಾರ್ಯಶ್ರಮದ ಸಮಾಗಮದಲ್ಲೇ ನಡೆಯುವ ಕಟ್ಟುಪಾಡಿನ ವ್ಯವಸ್ಥೆ ಅನೇಕತೆ ಯಲಿ ಏಕತೆ ಎಂಬುವುದನ್ನು ಸಂಕೇತಿಸುತ್ತದೆ. ಇಂತಹ ಸಾಂಸ್ಕೃತಿಕ ಮೇಳ ಕೇವಲ ಶುಭಕಾರ್ಯ ವಲ್ಲದೆ ಹುಟ್ಟಿನ ಕ್ಷಣದಿಂದ ಸ್ಮಶಾನದ ಗುಂಡಿ ಸೇರುವವರೆಗೂ ಎಲ್ಲಾ ಜಾತಿಯವರ
ಕೊಡುಗೆಯು ಪ್ರಕೃತಿಯಷ್ಟೇ ಅನಿವಾರ‍್ಯ. ಅಷ್ಟೇ ಅಲ್ಲದೆ ಒಂದು ಊರು ಉದ್ಧಾರ ಬೆಳವಣಿಗೆ ಹೊಂದಬೇಕಾದರೆ ಎಲ್ಲಾ ಜಾತಿ ಯವರ ನೈತಿಕ ಹಾಗೂ ಭೌತಿಕವಾಗಿ ಪರಸ್ಪರ ನಿಯೋಗ ಗೊಂಡರೆ ಮಾತ್ರ ಸಾಧ್ಯ.

ಇದು ಹಿಂದೂ ಧರ್ಮದಲ್ಲಿರುವ ವೈಶಿಷ್ಟ್ಯ. ಇಂತಹ ಸಂಸ್ಕೃತಿ, ಸಾಮಾಜಿಕ ವ್ಯೆವಿಧ್ಯತೆ ಜಗತ್ತಿನ ಯಾವುದೇ ಮೂಲೆಯಲ್ಲೂ ಕಾಣಲು ಸಾದ್ಯವಿಲ್ಲ. ಅದು ಈ ಭಾರತದ ನೆಲದಲ್ಲಿ ಮಾತ್ರ. ಹಿಂದೂ ಧರ್ಮದಲ್ಲಿ ಕುಲಕಸುಬು ಆಧಾರಿತ ಜಾತಿ ಪದ್ಧತಿ ಪ್ರಾಮುಖ್ಯತೆ ಪಡೆದು ವ್ಯಕ್ತಿಯು ಗೌರಸಲ್ಪಡುತ್ತಾನೆ ಹೊರತು ಕೇವಲ ಜಾತಿಯಿಂದಲ್ಲ. ಆದರೆ ಇಂದು ಜಾತಿ ಆಧರಿಸಿ
ಆರಾಧಿಸುವ ಕೆಲವರಿಂದ ಧರ್ಮವೇ ದಾರಿತಪ್ಪುತ್ತಿರುವುದು ದೌರ್ಭಾಗ್ಯವೇ ಸರಿ. ನಮ್ಮ ಪಾದ ಪರರಿಗೆ ತಾಕಿದರೆ ಮುಟ್ಟಿ ನಮಸ್ಕರಿಸುವ ನಾವು ಚಮ್ಮಾರ ನಮ್ಮ ಪಾದರಕ್ಷೆಯನ್ನು ಹೊಲೆದು ಕೊಟ್ಟನಂತರ ಆತನ ತಲೆ ಮುಟ್ಟಿ ನಮಸ್ಕರಿಸಿ ಹಣನೀಡಿ ಹೊರಡುವುದು ನಿಜವಾದ ಹಿಂದೂ ಧರ್ಮ. ನಮ್ಮನ್ನು ಭುವಿಗೆ ತರುವ ಸೂಲಗಿತ್ತಿಯಿಂದ ಆರಂಭಿಸಿ ಕೊನೆಯಲ್ಲಿ ಮಣ್ಣು ಸೇರಿದ ನಂತರವೂ ನಮ್ಮನ್ನು ಕಾಯುವ ವೀರಬಾಹುವೂ ಪ್ರಾಮುಖ್ಯತೆ ಪಡೆಯುತ್ತಾನೆ.

ಇಂತಹ ವೈಚಾರಿಕತೆಯೇ ಹಿಂದೂ ಧರ್ಮದ ಮೂಲತತ್ವ. ಇದಕ್ಕೆ ಪುರಾವೆ ಎಂದರೆ ನಮ್ಮ ಇತಿಹಾಸದ ಶಾಸನಗಳು. ಅಂದು ಒಂದು ಶುಭಕಾರ್ಯ ನಡೆಸಿದರೆ ಅದಕ್ಕೆ ಶ್ರಮವಹಿಸಿದ ವರ್ಗಗಳಿಗೆ ಭೂದಾನ, ಗೋದಾನ ಇನ್ನಿತ್ತರೆ ದಾನಗಳನ್ನು ನೀಡುವುದ ರೊಂದಿಗೆ ಊರು ಕೇರಿ ಕೆರೆ ಗುಡಿಗೋಪುರಗಳನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿರುವುದು ಕಂಡುಬರುತ್ತದೆ. ಇದು ಹೆಚ್ಚಾಗಿ
ವಿಜಯನಗರ ಕಾಲದಲ್ಲಿನ ಶಾಸನ ಗಳನ್ನು ಗಮನಿಸಿದರೆ ವೇದ್ಯವಾಗುತ್ತದೆ. ಅದಕ್ಕಾಗಿಯೇ ಅಂದು ನಾಗರೀಕರು ಜಾತಿಗಿಂತ ಧರ್ಮವೇ ಮಿಗಿಲೆಂದು ತಮ್ಮನ್ನಾಳುವ ಅರಸರನ್ನು ಸಾಕ್ಷಾತ್ ದೇವರಂತೆ ಕಂಡು ಪೂಜಿಸಿ ತನ್ನ ಅರಸು ವೈರಿಗಳನ್ನು ಗೆದ್ದು ಬರುವಂತೆ ಪ್ರೇರೇಪಿಸಿ ಜಾತಿಭೇದ ಗಳಿಲ್ಲದೆ ಮೆರೆಯುತ್ತಿದ್ದರು.

ಇಲ್ಲದಿದ್ದರೆ ಸ್ಮಾರ್ಥ ವಿದ್ಯಾರಣ್ಯರಿಗೆ ಹರಿಹರಬುಕ್ಕರರು, ಮಧ್ವ ವ್ಯಾಸರಾಯರಿಗೆ ಹಿಂದುಳಿದ ಜಾತಿಯ ಶ್ರೀಕೃಷ್ಣ ದೇವರಾಯ, ಶ್ರೀಕೃಷ್ಣದೇವರಾಯನಿಗೆ ವೀರಶೈವರು, ಜೈನರು, ವಾಲ್ಮೀಕಿ ಬೇಡರು, ವಿಶ್ವಕರ್ಮರು, ಕುಂಬಾರರು ಹೀಗೆ ಒಂದು ಧರ್ಮದ ಎಲ್ಲಾ ಜಾತಿಯವರೂ ಒಗ್ಗೂಡಿದ್ದರಿಂದಲೇ ಅಂದು ರಾಯನು ಹಿಂದೂರಾಯಸುರತ್ರಾಣ’ ಎಂಬ ಬಿರುದು ಪಡೆದು ಆತನ ಆಡಳಿತ ‘ಸುವರ್ಣಯುಗ’ ಎಂದು ವಿಶ್ವ ವಿಖ್ಯಾತಿ ಪಡೆದಿತ್ತು. ಇತಿಹಾಸದಿಂದ ಇದಕ್ಕಿಂತ ಪಾಠ ಬೇಕೇ?.

ಈಗಲೂ ಅಷ್ಟೇ ಬೇಡರಾದ ವಾಲ್ಮೀಕಿಯವರು ರಾಮಾಯಣ ಬರೆದಂತೆ ದಲಿತರಾದ ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರು ಸಂವಿಧಾನ ಬರೆದು ಪ್ರಜಾಪ್ರಭುತ್ವದ ಶಿಲ್ಪಿಯಾಗಿ ದ್ದಾರೆ. ಆದರೆ ಕೆಲ ವ್ಯಕ್ತಿಗಳ ಸ್ವಾರ್ಥಗಳಿಂದಾಗಿ ದುಷ್ಟ ರಾಜಕೀಯದ
ಅಡ್ಡಪರಿಣಾಮಗಳಿಂದಾಗಿ ಇಡೀ ದೇಶವನ್ನು ದಾರಿತಪ್ಪಿಸುವ ಅಪಾಯ ತಲೆದೋರಿದೆ. ಒಂದಿಬ್ಬರ ಅನಾಗರಿಕರ ಪೈಶಾಚಿಕ ಕೃತ್ಯಕ್ಕೆ ಒಂದು ಹೆಣ್ಣು ಮಗಳು ಬಲಿಯಾದರೆ ಆಕೆಯ ಜಾತಿಯನ್ನೇ ಇಟ್ಟುಕೊಂಡು ಅವೈಜ್ಞಾನಿಕ ಅಸಂಬಂಧ ವಾದಗಳನ್ನು ಮಾಡುವುದು, ಅನೈತಿಕವಾಗಿ ಹಣಗಳಿಸಿ ಜೈಲಿಗೆ ಹೋಗಿ ಬಂದವರ ಮನೆಗಳಿಗೆ ಹೋಗಿ ಧರ್ಮಪಾಲಕ ರೇ ಶಾಲು ಹೊದಿಸಿ
ಸನ್ಮಾನಿಸುವುದು, ಅಥವಾ ಜೈಲಿಗೆ ಹೋಗಿ ಸಾಂತ್ವಾನ ಹೇಳುವುದು, ಮಾಡಬಾರದ ಪಾಪಗಳನ್ನೆಲ್ಲಾ ಮಾಡಿ ಹಿಂದೂ ಧರ್ಮವನ್ನು ಹಾಳು ಮಾಡುತ್ತಿದ್ದರೂ ಧರ್ಮವನ್ನು ಕಡೆಗಣಿಸಿ ಕೇವಲ ನಮ್ಮ ಜಾತಿಯ ನಾಯಕ ಎಂಬ ಒಂದೇ ಕಾರಣಕ್ಕೆ ಆತನ ಅಡ್ಡಪಲ್ಲಕ್ಕಿ ಹೊರುವುದು, ಪುರಾಣದ ಮಹಿಷಾಸುರನಿಂದ ಹಿಡಿದು ಇತ್ತೀಚಿನ ಬಾಹುಬಲಿ ಚಲನಚಿತ್ರದಲ್ಲಿನ ಕಾಲ್ಪನಿಕ ಕಾಲಕೇಯ ಪಾತ್ರದವರೆಗೂ, ಭಯೋತ್ಪಾದಕರಿಂದ ಬಹುಕೋಟಿ ರಾಜಕಾರಣಿಗಳವರೆಗೂ, ನ್ಯಾಯಾಧೀಶರಿಂದ ಹಿಡಿದು
ಕೃತಿಗಳವರೆಗೂ ಕೇವಲ ಜಾತಿಯನ್ನು ಶೋಧಿಸಿ ಅವರ ಪರ ವಿರೋಧ ನಿಲ್ಲುವ ಸಮಾಜ ಗೇಡಿಗಳು ಹೆಚ್ಚು ಸೃಷ್ಟಿಯಾಗು ತ್ತಿರುವುದು ದೇಶದ ಸಂವಿಧಾನಕ್ಕೆ, ಬೆಳವಣಿಗೆಗೆ ಮಾರಕವಾಗುತ್ತಿದೆ.

ಇದರಿಂದಾಗಿ, ಒಂದು ವಿಷಯದಲ್ಲಿನ ನೈಜನೋಟ, ನ್ಯಾಯಪರತೆ, ಭೌದ್ಧಿಕತೆ, ಸತ್ಯತೆ ಸಹಜ ಸಿದ್ಧಾಂತಗಳೆಲ್ಲವೂ ಮಣ್ಣು ಪಾಲಾಗುತ್ತಿದೆ. ಹೀಗೆ ದೇಶದಲ್ಲಿ ನ್ಯಾಯ- ಸಂವಿಧಾನ- ಕಾನೂನುಗಳಿಗಿಂತಲೂ ಈ ಜಾತಿ ಎಂಬ ಸೋಂಕು ಹೆಚ್ಚು ಪರಿಣಾಮ ಕಾರಿಯಾಗಿ ಅಲಿಖಿತ ಕಾನೂನುಗಳು ಜಾರಿಗೊಳ್ಳುತ್ತಿದೆ. ಈಗಾಗಲೇ ಜಾತ್ಯಾತೀತವೆಂಬ ಪದ ಅನರ್ಥಗೊಂಡು ‘ಜಾತಿಅತಿಥ್ಯ’ ವಾಗಿದೆ. ಈಗ ನೋಡಿ, ಸಮಾಜದಲ್ಲಿ ಸದಾ ‘ತಪೋಭಂಗಿಯಲ್ಲೇ’ ಇರುವ ಬ್ರಾಹ್ಮಣರೂ ಇಂಥ ಬೆಳವಣಿಗೆ ಗಳನ್ನು ಮನಗಂಡು ತಮ್ಮ ಜಾತಿಯಲ್ಲಿನ ಲೋಪ ಗಳನ್ನು ಪರಾಮರ್ಶಿಸಿ ಕೊಳ್ಳುವಷ್ಟು ಪ್ರಚೋದನೆ ಪಡೆದಿದ್ದಾರೆ.

ಮೊನ್ನೆ ಮಂತ್ರಾಲಯದ ಸ್ವಾಮೀಜಿಗಳು ನಿರಭಿಮಾನಿ ಬ್ರಾಹ್ಮಣರನ್ನು ಬಲ್ಬು – ಕರೆಂಟು – ವೋಲ್ಟೇಜು – ವ್ಯಾಟೇಜು ಎಂದೆಲ್ಲಾ ಸರಳ ಉದಾಹರಣೆ ನೀಡಿ ಬ್ರಾಹ್ಮಣ ಸಮಾಜವನ್ನು ಬಡಿದೆಬ್ಬಿಸುವ ಮಾತುಗಳನ್ನಾಡಿದ್ದಾರೆ. ನಾಳೆ ಅವರಲ್ಲಿರುವ ಸ್ಮಾರ್ಥ
ವೈಷ್ಣವ ಮಾಧ್ವ ಪಂಗಡದವ ರೆಲ್ಲರೂ ತಮ್ಮಲ್ಲಿನ ಭೇದಗಳನ್ನು ಬಿಟ್ಟು ಒಗ್ಗೂಡಿ ಒಳಿತಿಗಾಗಿ ರಣರುದ್ರ ಮಹಾಚಂಡಿ ಹೋಮಕ್ಕೆ ಕುಳಿತರೆ ಆಶ್ಚರ್ಯವಿಲ್ಲ. ಜಾತಿ ಆಧಾರಿತ ದೌರ್ಭಾಗ್ಯ ಗಳನ್ನು ಮನಗಂಡಿರುವ ಸರ್ವೋಚ್ಚ ನ್ಯಾಯಾಲಯ, ಕೇಂದ್ರ ಸರಕಾರಗಳಿಗೆ ದೇಶದಲ್ಲಿ ‘ಸಮಾನ ಅಥವಾ ಏಕರೂಪ ನಾಗರಿಕ ನೀತಿ ಸಂಹಿತೆ’ ಜಾರಿಗೊಳಿಸಲು ಸೂಚಿಸುತ್ತಲೇ ಇದೆ. ಆದರೆ ಈ
ಜಾತಿ ಅವಲಂಭಿತ ರಾಜಕಾರಣಿಗಳಿಂದ ಅಸಾಧ್ಯ.

ಅನ್ಯಜಾತಿಗಳೇ ಹೆಚ್ಚಿರುವ ಮತಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಯೋಗ್ಯತೆ ಇಲ್ಲದೆ ತನ್ನ ಜಾತಿಜನಗಳೇ ಹೆಚ್ಚಿರುವ ಕ್ಷೇತ್ರದ ಚುನಾವಣಾ ಟಿಕೆಟ್‌ಗೆ ಹಾತೊರೆಯುವ ಅಯೋಗ್ಯ ರಾಜಕಾರಣಿಗಳು ಇರುವವರೆಗೂ ದೇಶ ಉದ್ಧಾರವಾಗದು. ಒಬ್ಬ ರಾಜಕಾರಣಿ ಯಾವ ಜಾತಿಗಳ ಕ್ಷೇತ್ರದಲ್ಲಾದರೂ ನಿಂತು ಗೆಲ್ಲಬಹುದಾದ ಅಥವಾ ಆತನ ಜಾತಿಯನ್ನು ನೋಡದೇ ಆತನನ್ನು ಚುನಾಯಿಸುವ ಯೋಗ್ಯ ಮತದಾರರ ಕಾಲ ಬರುವವರೆಗೂ ಈ ದೇಶ ಬದಲಾಗದು. ಹೆಣ್ಣನ್ನು ಕೇವಲ ಮುಟ್ಟಿದ್ದಕ್ಕಾಗಿಯೇ
ಇಡೀ ಲಂಕೆಗೆ ಬೆಂಕಿಯಿಟ್ಟು ಯುದ್ಧಮಾಡಿ ಗೆದ್ದ ಮಣ್ಣು ನಮ್ಮದು. ಹೆಣ್ಣಿನ ಮೂಲವನ್ನು ಹುಡುಕಬಾರದು ಎನ್ನುತ್ತಾರೆ.

ಆದರೆ ವಿಶ್ವದಲ್ಲಿ ಹೆಣ್ಣಿನ ಮೂಲವಿರುವುದೇ ನಮ್ಮ ದೇಶದಲ್ಲಿ. ಪ್ರತಿಯೊಂದನ್ನು ಹೆಣ್ಣಿಗೆ ತಾಯಿಗೆ ಹೋಲಿಸಿ ಪೂಜಿಸುವ ದೇಶದಲ್ಲಿ ಹೆಣ್ಣಿಗೆ ಅಪಚಾರವಾದರೆ ಜಾತಿಗಳನ್ನು ಬಿಟ್ಟು ಮಾನವೀಯತೆ ತೋರಿ. ಇಲ್ಲಾ, ಜಾತಿ ಧರ್ಮ ಕೆದಕುವ ಮೊದಲೇ ವಿಶ್ವನಾಥ ಸಜ್ಜನರಂಥ ಎನ್‌ಕೌಂಟರ್ ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿ. ಜನ ಜಾತಿಭೇದವಿಲ್ಲದೆ ಚಪ್ಪಾಳೆ ತಟ್ಟುವುದನ್ನು ನೋಡಿ!

Leave a Reply

Your email address will not be published. Required fields are marked *