Friday, 20th September 2024

ಅಕ್ಷರ ಲೋಕಕ್ಕೆ ಪಂಥಗಳು ಅನಿವಾರ್ಯವೇ?

ವಿಪರ್ಯಾಸ

ಆನಂದ ಪಾಟೀಲ, ಬೆಳಗಾವಿ 

ಭಾರತೀಯ ಸಾಹಿತ್ಯ ಲೋಕ ಇಂದು ಅತ್ಯಂತ ಸಂದಿಗ್ಧ ಸ್ಥಿಿತಿಗೆ ಬಂದು ನಿಂತಿದೆ. ಏಕೆ ಈ ಮಾತು ಹೇಳುತ್ತಿಿದ್ದೇನೆ ಎಂದರೆ, ಮಾನವನ ಹೃದಯವನ್ನು ತನ್ನ ಕಾವ್ಯಾಾತ್ಮಕ ಶಕ್ತಿಿಯಿಂದಲೆ ಆರ್ಥಗೊಳಿಸಬೇಕಾದ ಸಾಹಿತ್ಯವು ಇಂದು ರಾಜಕೀಯ, ಜಾತಿ, ಧರ್ಮದ ಲೇಪನಕ್ಕೊೊಳಗಾಗಿ ಸಾಮಾನ್ಯ ಸಹೃದಯರನ್ನು ದಿಕ್ಕು ತಪ್ಪಿಿಸುತ್ತಿಿದೆ. ನಿರುಪಯುಕ್ತವಾದ ಹಾಗೂ ದಾರಿ ತಪ್ಪಿಿದ ಎರಡು ಪಂಥಗಳ ಮಧ್ಯ ಸಿಲುಕಿ ಸಾಹಿತ್ಯವು ನಲುಗುತ್ತಿಿದೆ. ಒಂದು ಎಡ-ಬಲ, ಇವೆರಡೂ ಧರ್ಮಗಳ, ರಾಜಕೀಯ ಪಕ್ಷಗಳ ನೆರಳಿನಲ್ಲಿ ಸಾಹಿತ್ಯವನ್ನು ಸೃಜಿಸಿ ಸಾಮಾನ್ಯ ಸಹೃದಯನ ಯೋಚನಾ ಲಹರಿಯನ್ನೇ ಬದಲಿಸುತ್ತಿಿವೆ. ಸಾಹಿತಿಯು ತಾನು ಅಸ್ತಿಿತ್ವದಲ್ಲಿ ಉಳಿಯಲು ಈ ಎರಡು ಪಂಥಗಳಲ್ಲಿ ಯಾವುದಾದರೂ ಒಂದು ಪಂಥಕ್ಕೆೆ ವಾಲಬೇಕಾದ ಅನಿವಾರ್ಯತೆ ಉಂಟಾಗಿದೆ. ಹಾಗೆಯೇ, ಓದುಗನಲ್ಲಿಯೂ ಅದರ ಪ್ರಭಾವಗಳನ್ನು ಬೀರಿ ಇವು ಮುಂದೆ ಸಾಗುತ್ತಿಿವೆ. ಆದರೆ, ಸಾಹಿತ್ಯ ಕ್ಷೇತ್ರಕ್ಕೆೆ ಪಂಥಗಳು ಏಕೆ ಬೇಕು? ಎನ್ನುವುದೆ ಮೂಲಭೂತ ಪ್ರಶ್ನೆೆ?

ಒಂದು ರಾಜಕೀಯದ ಪಕ್ಷ ಅಧಿಕಾರಕ್ಕೆೆ ಬಂದಾಗ ಅದರ ನೆರಳಿನಲ್ಲಿ ಬೆಳೆಯುವ ಆ ಪಂಥದ ಸಾಹಿತಿಗಳು ಅತ್ಯಂತ ಪ್ರವರ್ಧಮಾನ ಸ್ಥಿಿತಿಗೆ ಬರುವುದು ಮತ್ತು ಅವರಿಗೆ ಮಾತ್ರ ಮಾನ-ಸನ್ಮಾಾನಗಳು ದೊರೆಯುವುದು ಮತ್ತೊೊಂದು ಪಂಥದ ಸಾಹಿತಿಗಳು ನಿರ್ಲಕ್ಷ್ಯಕ್ಕೊೊಳಗಾಗುವುದು ಅವ್ಯಾಾಹತವಾಗಿ ನಡೆಯುತ್ತಿಿದೆ. ಅದರಂತೆಯೇ ಇನ್ನೊೊಂದು ರಾಜಕೀಯ ಪಕ್ಷ ಅಧಿಕಾರಕ್ಕೆೆ ಬಂದಾಗ ಈ ಪಂಥದ ಸಾಹಿತಿಗಳಿಗೆ ಹಾರ, ತುರಾಯಿ, ಮಾನ-ಸನ್ಮಾಾನಗಳು ನಡೆದರೆ ಆ ಪಂಥದ ಸಾಹಿತಿಗಳು ನಿರ್ಲಕ್ಷ್ಯಕ್ಕೊೊಳಗಾಗುತ್ತಾಾರೆ. ಒಂದು ಪಂಥದ ಒಬ್ಬ ಸಾಹಿತಿ ತಮಗೆ ತೋಚಿದ ವಿವಾದಾತ್ಮಕ ಹೇಳಿಕೆಗಳನ್ನು ಹೇಳಿ ಬಿಡುತ್ತಾಾರೆ. ಬರಹಗಳನ್ನು ಸೃಜಿಸುತ್ತಾಾರೆ. ಆದರೆ, ಅದು ಒಂದು ವರ್ಗದ ಜನರಿಗೆ ತುಂಬಾ ಖುಷಿ ಕೊಡುತ್ತದೆ. ಅದೇ ಸಮಯಕ್ಕೆೆ ಆ ಮಾತು ಬರಹಗಳು ಇನ್ನೊೊಂದು ವರ್ಗದ ಜನರ ಮನದಲ್ಲಿ ವಿರೋಧಾಭಾಸಗಳನ್ನು ಸೃಷ್ಠಿಿಸಿ ಸಂಘರ್ಷದ ವಾತಾವರಣ ಹುಟ್ಟು ಹಾಕುತ್ತದೆ. ಆ ಹೇಳಿಕೆಗಳೇ ಸಾಹಿತಿಗಳಿಗೆ ಮರಣ ಶಾಸನಗಳಾದ ಪ್ರಸಂಗಗಳೂ ಎದುರಾಗಿವೆ. ಒಮ್ಮೆೆ ಒಂದು ಪಂಥದ ಸಾಹಿತಿಗೆ ರಾಜ್ಯೋೋತ್ಸವ ಪ್ರಶಸ್ತಿಿ ಬಂದಾಗ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಬಂತು. ಆ ಸಂದರ್ಭದಲ್ಲಿ ಇದೇ ಪ್ರಶ್ನೆೆಯನ್ನು ಎತ್ತಿಿದ್ದೆೆ. ಸಾಹಿತ್ಯವು ಸಹೃದಯನ ಮನಸ್ಸನ್ನು ಅರಳಿಸಬೇಕೇ ಹೊರತು ಕೆರಳಿಸಬಾರದು. ಇಂದು ಈ ಎಡ-ಬಲಪಂಥಗಳೆರಡೂ ಕೆರಳಿಸುವ ಕಾರ್ಯ ಮಾಡುತ್ತಿಿವೆಯಲ್ಲ. ಎಂದು ಕೇಳಿದರೆ ಅವರಿಂದ ಬಂದ ಉತ್ತರ ಓದುಗನೇಕೆ ಕೆರಳಬೇಕು? ಬರೆಯುವುದು ನನ್ನ ಹಕ್ಕು ಇಷ್ಟವಾದವರು ಓದುತ್ತಾಾರೆ. ನಾನು ಈ ಪಂಥಕ್ಕೆೆ ಸೇರಿದವನೆಂದು ಹೆಮ್ಮೆೆಯಿಂದ ಹೇಳುತ್ತೇನೆ ಎಂಬ ಮಾತುಗಳು ಅವರಿಂದ ಬಂತು. ಸಾಹಿತಿಯು ಬರೆಯುವುದು ಏತಕ್ಕಾಾಗಿ? ಜನರು ಓದಲಿ ಎಂಬ ಮನೋಭಾವದಿಂದಲೇ ಅಲ್ಲವೇ! ಜನರು ಆ ಸಾಹಿತಿಯ ಬರಹಗಳನ್ನು ಓದುವುದನ್ನು ನಿಲ್ಲಿಸಿದರೆ ಏನು ಸಾರ್ಥಕತೆ ಉಂಟಾಗುತ್ತದೆ. ನನಗೆ ಆ ಕ್ಷಣಕ್ಕೆೆ ಜನ್ನನ ಕಾವ್ಯದ ಒಂದು ವಾಕ್ಯ ನೆನಪಾಯಿತು ‘ಕಟ್ಟಿಿಯೋ ಮೇಣ್ ಮಾಲೆಗಾರನ ಪೋಸ ಬಾಸಿಗಂ ಮುಡಿವ ಬೋಗಿಗಳಿಲ್ಲದೆ ಬಾಡಿ ಪೋಗದೆ?’

ಈ ಸಮಾಜವನ್ನು ಕಟ್ಟುವ ಜವಾಬ್ದಾಾರಿ ಮಾತ್ರ ನಮ್ಮದು. ಸಮಾಜದಲ್ಲಿ ಸಂಘರ್ಷ ಹುಟ್ಟುಹಾಕಿ ನೆಮ್ಮದಿ ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಸಾಹಿತಿ ತನ್ನ ಪಂಥದ ಅಡಿಯಲ್ಲಿ ತನ್ನ ಪ್ರಚಾರ ಪ್ರಿಿಯತೆಯ ಭರದಲ್ಲಿ ಸಮಜದ ಸೌಹಾರ್ದತೆಗೆ ಹಚ್ಚಿಿದ ಬೆಂಕಿ ಎಷ್ಟು ತಲೆಮಾರುಗಳವರೆಗೆ ತನ್ನ ಕೆನ್ನಾಾಲಿಗೆಯನ್ನು ಚಾಚುವುದೋ ಯಾರು ಬಲ್ಲರು! ನಮಗಾರಿಗೂ ಇಂಥಹ ಹಕ್ಕನ್ನು ಯಾರೂ ಕೊಟ್ಟಿಿಲ್ಲ. ಅದಕ್ಕಾಾಗಿ ಇಂಥಹ ವಿವಾದಾತ್ಮಕ ಹೇಳಿಕೆ ಹಾಗೂ ಬರಹಗಳನ್ನು ಹೊರಹಾಕುವಾಗ ಸ್ವಲ್ಪ ಮುತುವರ್ಜಿ ವಹಿಸಿದರೆ ಸಮಾಜಕ್ಕೆೆ ನಾವು ದೊಡ್ಡ ಕೊಡುಗೆಯನ್ನು ಕೊಟ್ಟಂತಾಗುತ್ತದೆ.

ಸಾಹಿತ್ಯವು ಸಹೃದಯನ ಹೃದಯಕ್ಕೆೆ ಹತ್ತಿಿರವಾಗಬೇಕು ಅವನ ಮನಸ್ಸನ್ನು ಆಹ್ಲಾಾದಕರಗೊಳಿಸಬೇಕು. ಓದುತ್ತಾಾ ಓದುತ್ತಾಾ ಸುಪ್ರಸನ್ನ ಚಿತ್ತರಾಗಬೇಕು. ಅದುವೇ ಸಾಹಿತ್ಯದ ಮೂಲ ಉದ್ದೇಶ. ಈ ಉದ್ದೇಶವನ್ನೇ ಮರೆತು ರಾಜಕೀಯ, ಜಾತಿ, ಧರ್ಮದ ಹಿಂದೆ ಬಿದ್ದಿರುವ ಈ ಎಡಪಂಥ ಹಾಗೂ ಬಲಪಂಥಗಳು ಹಿಂದೆ ಸರಿದು ಸಹೃದಯನ ಹೃದಯವು ಮಿಡಿಯುವ ಅಂತಃಕರಣ ಸಾಹಿತ್ಯವು ಮುನ್ನೆೆಲೆಗೆ ಬರಬೇಕು ಎನ್ನುವುದು ಹಾಗೂ ಸಾಹಿತಿಗಳು ರಾಜಕೀಯದ ಕರಿನೆರಳಿನಿಂದ ಹೊರಬರಲಿ.