Thursday, 14th November 2024

ಜಗತ್ತಿನ ಸಕ್ಕರೆ ಕಣಜ ಕ್ಯೂಬಾಕ್ಕೂ ಕಬ್ಬಿನ ಪಾಠ ಹೇಳಿದ್ದರು

ಸುಪ್ತ ಸಾಗರ

rkbhadti@gmail.com

ಅವರ ‘ಕೃಷಿ ಕ್ರಾಂತಿ’ಗೆ ಕಾರಣವಾಗಿದ್ದು ಪಂಚ ತರಂಗಿನಿ ಮಾದರಿ. ಒಂದೇ ಹೊಲದಲ್ಲಿ ವೈವಿಧ್ಯಮಯ ಹಲವಾರು ಬೆಳೆ ಹಾಕಬಹುದು. ೩೬ ಅಡಿಗಳ ಚೌಕದಲ್ಲಿ ನಾಲ್ಕು ತೆಂಗಿನ ಮರ, ಮಧ್ಯೆ ೧೨೦ ಇತರೆ ಗಿಡ ಹಾಕಬೇಕು. ಮೋಸಂಬಿ, ಅಡಿಕೆ, ಗ್ಲೇಸಿಯಾ, ವೆನಿ ಸೇರಿದಂತೆ ಹಲವಾರು ಬೇಳೆ ಕಾಳು, ಹೂವಿನ ಗಿಡ ಹೀಗೆ ಇಲ್ಲಿ ಬೆಳೆಗಳ ‘ಅವಿಭಕ್ತ ಕುಟುಂಬ’ವೆ ಇದೆ. ಮೂರ್ನಾಲ್ಕು ತಿಂಗಳಿಗೆ ಒಂದಾದರೂ ಫಲ ಬರುತ್ತದೆ. ಸುತ್ತಲಿನ ಒಣಗಿದ ಬೆಳೆಗಳ ಮಧ್ಯ ಕೃಷ್ಣಪ್ಪ ಅವರ ತೋಟ ನಿತ್ಯಹರಿದ್ವರ್ಣ ಕಾಡಿನಂತೆ ಕಾಣುತ್ತದೆ.

ಯಾಂತ್ರಿಕ ಬೇಸಾಯ, ಸಾವಯವ ಬೇಸಾಯಕ್ಕಿಂತಲೂ ಪರಿಣಾಮಕಾರಿ ಯಾದ ‘ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ ಎಂಬುದನ್ನು ಸಾಬೀತುಪಡಿಸಿzರೆ ಮೈಸೂರಿನ ಬನ್ನೂರು ಕೃಷ್ಣಪ್ಪ; ಶೂನ್ಯ ಬಂಡವಾಳದಲ್ಲಿ ಸ್ವಾವಲಂಬಿ ಕೃಷಿ ಕೈಗೊಳ್ಳಲು ೧ ಎಕರೆಯ ಮಾದರಿ ಇಲ್ಲಿದೆ.
‘ಒಂದು ಬೀಜಾಮೃತ ಸಾರ್, ಎರಡು ಜೀವಾಮೃತ, ಮೂರು ಹೊದಿಕೆ, ಕಡೇದು ಆರ್ದ್ರತೆ. ಒಂದು ಎಕರೆಗೆ ಒಂದೇ ಹಸಾ, ಇಬ್ಬರೇ ಕೆಲಸ್ದೋರು ಸಾಕು. ತುಂಬಾ ಕಡ್ಮೆ ಶ್ರಮದಲ್ಲಿ, ಕಡ್ಮೆ ಟೈಮಲ್ಲಿ, ಏನೂ ಮೆಂಟೇನೆನ್ಸ್ ಇಲ್ದೇನೆ ಬಂರ್ಪ ಬೆಳೆ ತಕೋಬೋದು ಸಾರ್, ನಾನ್ ಗ್ಯಾರಂಟಿ
ಕೊಡ್ತೀನಿ..’ ಇದು ಮೈಸೂರಿನ ಬನ್ನೂರು ಕೃಷ್ಣಪ್ಪ ಅವರ ಮಾತು.

ಅವರು ಹೀಗೆ ಮಾತನಾಡಿದರೆ ಅದನ್ನು ನಂಬುವುದು ಕಷ್ಟವೇ. ಆದರೆ, ನಂಬಲೇಬೇಕು. ಅವರ ಪ್ರತಿಯೊಂದು ಮಾತಿಗೂ ಸಾಕ್ಷಿ ಕಣ್ಮುಂದೆಯೇ ಇದೆ. ಯಾಂತ್ರಿಕ ಬೇಸಾಯ, ಸಾವಯವ ಬೇಸಾಯಕ್ಕಿಂತಲೂ ಪರಿಣಾಮಕಾರಿಯಾದ ‘ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಹಾರಾಷ್ಟ್ರದ ಕೃಷಿ ತಜ್ಞ ಸುಭಾಷ್ ಪಾಳೇಕಾರ್ ಮಾರ್ಗದರ್ಶನವೇ ಅವರ ಇಂದಿನ ‘ಸ್ವಾಭಿಮಾನ’ದ ಬದುಕಿಗೆ ದಾರಿದೀಪ. ಈವರೆಗೆ ೬ ಲಕ್ಷ ರೈತರು ಅವರ ತೋಟಕ್ಕೆ ಭೇಟಿ ನೀಡಿದ್ದಾರೆ.

ಸಾವಿರಾರು ಜನ ಇದೇ ಮಾದರಿ ಅನುಸರಿಸಿzರೆ. ಹೊರರಾಜ್ಯ ಮಾತ್ರವಲ್ಲದೇ ನೇಪಾಳ, ಥಾಯ್ಲೆಂಡ್, ಶ್ರೀಲಂಕಾ, ಮೆಕ್ಸಿಕೊ ದೇಶದ
ರೈತರೂ ಕೃಷ್ಣಪ್ಪ ಅವರನ್ನು ಬರಮಾಡಿಕೊಂಡು ಪಾಠ ಕಲಿತಿzರೆ. ‘ಜಗತ್ತಿನ ಸಕ್ಕರೆ ಕಣಜ’ ಕ್ಯೂಬಾ ದೇಶಕ್ಕೂ ‘ಕಬ್ಬು ಬೆಳೆ’ಪಾಠ ಮಾಡಲು ಹೊರಟಿzರೆ ಅವರು! ಜೀವಾಮೃತ ಎಂದರೆ ಅತಿ ಸರಳ ದ್ರವರೂಪದ ಗೊಬ್ಬರ. ಒಂದು ನಾಟಿ ಹಸು ಇದ್ದರೆ ಸಾಕು. ಒಂದು ಎಕರೆಗೆ ಆಗುವಷ್ಟು ಜೀವಾಮೃತ ತಯಾರಿಸಬಹುದು.

ಹೊಲದಲ್ಲಿ ಒಂದು ಪುಟ್ಟ ಗುಂಡಿ ಮಾಡಿಕೊಳ್ಳಿ. ಅದರಲ್ಲಿ ೧೦ ಕೆ.ಜಿ ಸಗಣಿ ೧೦ ಲೀರ್ಟ ಗೋಮೂತ್ರ, ದ್ವಿದಳ ಧಾನ್ಯದ ೨ ಕೆ.ಜಿ ಹಿಟ್ಟು, ೨ ಕೆ.ಜಿ ಕಪ್ಪು ಬೆಲ್ಲ, ಒಂದು ಹಿಡಿ ಮಣ್ಣು, ೨೦೦ ಲೀಟರ್ ನೀರನ್ನು ಕಲೆಸಿ. ೪೮ ಗಂಟೆಯೊಳಗೆ ‘ಮಸಾಲೆ ಮಜ್ಜಿಗೆ’ಯಂಥ ಪದಾರ್ಥ ತಯಾರಾಗುತ್ತದೆ. ಇದೇ ಜೀವಾಮೃತ. ಒಂದು ಎಕರೆ ಬೆಳೆಗೆ ಇದನ್ನು ಒಂದು ವಾರ ಬಳಸಬೇಕು. ಒಂದೇ ಬೊಗಸೆ ಜೀವಾಮೃತದಲ್ಲಿ ಕೋಟ್ಯಂತರ ಜೀವ ಪೋಷಕಾಂಶಗಳು ಇರುತ್ತವೆ ಎನ್ನುತ್ತಾರೆ ಕೃಷ್ಣಪ್ಪ.

ಇದು ಬೀಜೋಪಚಾರದ ಮಾದರಿ ಅಷ್ಟೇ. ೫ ಕೆ.ಜಿ ಸೆಗಣಿ, ೫ ಲೀಟರ್ ಗೋಮೂತ್ರ, ೫೦ ಗ್ರಾಂ ಸುಣ್ಣ, ಒಂದು ಹಿಡಿ ಮಣ್ಣು, ೨೦ ರಿಂದ ೫೦ ಲೀಟರ್ ನೀರು ಹಾಕಿ; ಇದರಲ್ಲಿ ಒಂದು ಎಕರೆಗೆ ಬೇಕಾಗುವ ಬೀಜಗಳನ್ನು ಕಲಸಿಡಿ. ೨೪ ಗಂಟೆಯಲ್ಲಿ ಬೀಜಾಮೃತ ತಯಾರಾಗುತ್ತದೆ. ನಾಟಿ ಮಾಡಿ. ಬೆಳೆ ಕೊಯ್ಲು ಮಾಡುವವರೆಗೂ ಯಾವುದೇ ರೋಗಬಾಧೆ, ಕೀಟಬಾಧೆಯ ಚಿಂತೆಯೇ ಬೇಡ. ಈ ಮಾದರಿಯಿಂದ ಬೀಜಗಳಲ್ಲಿ ಅಪರಿಮಿತವಾದ ರೋಗ ನಿರೋಧಕ ಶಕ್ತಿ ಬರುತ್ತದೆ.

ಒಂದರ್ಥದಲ್ಲಿ ೨೪ ಗಂಟೆಯ ವಯಸ್ಸಿನ ಕೂಸಿಗೆ ತಾಯಿಯ ಎದೆಹಾಲು ನೀಡಿದ ಹಾಗೆ. ನಾಟಿ ಮಾಡಿದ ಮೇಲೆ ಬೆಳೆಯ ಸಾಲುಗಳ ಮಧ್ಯೆ ೩
ಮಾದರಿಯ ಹೊದಿಕೆ ಮಾಡಬೇಕು. ಮೊದಲು ಕುಂಟೆ ಹೊಡೆದರೆ ಮಣ್ಣಿನ ಹೊದಿಕೆ ಆಗುತ್ತದೆ. ಆಮೇಲೆ ವ್ಯರ್ಥ ಪದಾರ್ಥಗಳನ್ನು ಸಾಲುಗಳ ಮಧ್ಯೆ ಹಾಕುವುದು ಎರಡನೇ ಹೊದಿಕೆ. ಬೆಳೆಯ ಅಕ್ಕಪಕ್ಕ ತರಕಾರಿಗಳನ್ನು ಹಾಕುವುದು ಜೈವಿಕ ಹೊದಿಕೆ. ಕುಂಟೆ ಹೊಡೆಯುವುದರಿಂದ ಸಸಿಗೆ ಮಣ್ಣಿನ ಬಲ ಹೆಚ್ಚಾಗುತ್ತದೆ.

ವ್ಯರ್ಥ ಪದಾರ್ಥಗಳು ಸಾಲಿನ ಮಧ್ಯೆ ತೇವಾಂಶವನ್ನು ಹಿಡಿದಿಡುತ್ತವೆ. ತರಕಾರಿ ಸಸಿಗಳು ಪೋಷಕಾಂಶದ ಸಮತೋಲನ ಕಾಪಾಡುತ್ತವೆ.
ಹೊದಿಕೆ ಎಂದರೆ ಮತ್ತೇನೂ ಅಲ್ಲ, ‘ಹಸುಗೂಸಿಗೆ ಅಮ್ಮನ ಮಡಿಲು’ ಇದ್ದ ಹಾಗೆ. ಭರ್ಜರಿ ನೀರಾವರಿ ಹೊಂದಿದ ಗದ್ದೆಯಲ್ಲೂ ಇಳುವರಿ ಕಡಿಮೆಯಾಗಲು ಕಾರಣ ಆರ್ದ್ರತೆಯಲ್ಲಿನ ವ್ಯತ್ಯಾಸ. ಅತಿಯಾದ ನೀರು ಬಳಕೆ ಕೂಡ ಬೆಳೆಗೆ ಹಾನಿ ಮಾಡುತ್ತದೆ. ನೈಸರ್ಗಿಕ ಕೃಷಿ ಮಾದರಿ ಕೇವಲ ತೇವಾಂಶವನ್ನು ಮಾತ್ರ ಅವಲಂಬಿಸಿದೆ. ವರ್ಷಕ್ಕೆ ನಾಲ್ಕು ಸಣ್ಣ ಮಳೆಯಾದರೂ ಸಾಕು. ಹೊದಿಕೆಯು ತೇವಾಂಶ ಹಿಡಿದಿಟ್ಟುಕೊಂಡು ವರ್ಷವಿಡೀ ಬೆಳೆಗೆ ನೀಡುತ್ತದೆ. ಮಕ್ಕಳನ್ನು ತಿದ್ದುವ ಮೇಷ್ಟ್ರ ಕೆಲಸ ಇದರದು.

ನೈಸರ್ಗಿಕ ಕೃಷಿ ಮಾದರಿಯಲ್ಲಿ ನಾಟಿ ಮಾಡುವ ಕ್ರಮವೂ ವಿಶಿಷ್ಟ- ಪರಿಣಾಮಕಾರಿ. ಕೃಷ್ಣಪ್ಪ ಅವರು ೩ ಎಕರೆಯಲ್ಲಿ ಕಬ್ಬು, ೫ ಎಕರೆಯಲ್ಲಿ ‘ಪಂಚ
ತರಂಗಿನಿ’ ಮಾದರಿ ನಾಟಿ ಮಾಡಿದ್ದಾರೆ. ‘ಒತ್ತೊತ್ತಾಗಿ ಕಬ್ಬು ನಾಟಿ ಮಾಡುವುದು ಅವೈeನಿಕ ಕ್ರಮ. ಬಸ್ ಭರ್ತಿಯಾದ ಮೇಲೂ ಜನರನ್ನು ತುಂಬಿದರೆ ಉಸಿರುಗಟ್ಟುವ ಹಾಗೆ ಕಬ್ಬಿಗೂ ಉಸಿರುಗಟ್ಟುತ್ತದೆ. ಸಸಿಯಿಂದ ಸಸಿಗೆ ೨ ಅಡಿ ಹಾಗೂ ಸಾಲಿನಿಂದ ಸಾಲಿಗೆ ೮ ಅಡಿ ಅಂತರ ಇರುವ ಹಾಗೆ ನಾಟಿ ಮಾಡಬೇಕು. ಒಂದು ಎಕರೆಗೆ ೨೮೦೦ ತುಂಡು (ಕಣ್ಣು)ಗಳು ಸಾಕು; ಅಂದರೆ ೧೭೨ ಜ. ಈ ರೀತಿ ಅಂತರ ಇರುವುದರಿಂದ ಕಬ್ಬಿಗೆ ಗಾಳಿ, ಬೆಳಕು, ತೇವಾಂಶ, ಬಿಸಿಲು ವರ್ಷವಿಡೀ ಪರಿಪೂರ್ಣವಾಗಿ ಸಿಗುತ್ತದೆ.

ಒಂದೊಂದು ತುಂಡಿಗೂ ೧೨ರಿಂದ ೧೮ ಮರಿಗಳು ಮೊದಲ ಬೆಳೆಯ ಬರುತ್ತವೆ. ೫ ವರ್ಷಗಳಲ್ಲಿ ಈ ಮರಿಗಳ ಪ್ರಮಾಣ ಒಂದೇ ತುಂಡಿಗೆ ೧೦೦ಕ್ಕೂ ಹೆಚ್ಚಾಗಬಹುದು! ಒಂದು ಎಕರೆಗೆ ೧೦೦ರಿಂದ ೨೦೦ ಟನ್ ಕಬ್ಬು ಇಳುವರಿ ಪಡೆಯಬಹುದು. ಮೊದಲ ವರ್ಷದ ನಾನು ೬೦ ಟನ್ ಬೆಳೆದೆ’ ಎನ್ನುತ್ತಾರೆ ಕೃಷ್ಣಪ್ಪ. ಇದಕ್ಕಿಂತ ಮುಖ್ಯವಾಗಿ ಅವರ ‘ಕೃಷಿ ಕ್ರಾಂತಿ’ಗೆ ಕಾರಣವಾಗಿದ್ದು ಪಂಚ ತರಂಗಿನಿ ಮಾದರಿ. ಒಂದೇ ಹೊಲದಲ್ಲಿ ವೈವಿಧ್ಯಮಯ ಹಲವಾರು ಬೆಳೆ ಹಾಕಬಹುದು.

೩೬ ಅಡಿಗಳ ಚೌಕದಲ್ಲಿ ನಾಲ್ಕು ತೆಂಗಿನ ಮರ, ಮಧ್ಯೆ ೧೨೦ ಇತರೆ ಗಿಡ ಹಾಕಬೇಕು. ಮೋಸಂಬಿ, ಅಡಿಕೆ, ಗ್ಲೇಸಿಯಾ, ವೆನಿ ಸೇರಿದಂತೆ ಹಲವಾರು ಬೇಳೆ ಕಾಳು, ಹೂವಿನ ಗಿಡ ಹೀಗೆ ಇಲ್ಲಿ ಬೆಳೆಗಳ ‘ಅವಿಭಕ್ತ ಕುಟುಂಬ’ವೆ ಇದೆ. ಮೂರ್ನಾಲ್ಕು ತಿಂಗಳಿಗೆ ಒಂದಾದರೂ ಫಲ ಬರುತ್ತದೆ. ಸುತ್ತಲಿನ ಒಣಗಿದ ಬೆಳೆಗಳ ಮಧ್ಯ ಕೃಷ್ಣಪ್ಪ ಅವರ ತೋಟ ನಿತ್ಯಹರಿದ್ವರ್ಣ ಕಾಡಿನಂತೆ ಕಾಣುತ್ತದೆ. ಶೂನ್ಯ ಬಂಡವಾಳದಲ್ಲಿ ಲಕ್ಷಾಂತರ ರೂಪಾಯಿ
ಸಂಪಾದನೆ ಮಾಡುತ್ತಿzರೆ ಅವರು. ಪಂಚತರಂಗಿನಿ ಬೆಳೆ ಪದ್ಧತಿಯಿಂದ ಅಕ್ಕಪಕ್ಕದ ಬೆಳೆಗಳು ಒಂದಕ್ಕೊಂದು ಪೂರಕವಾಗಿ, ಸಹಕಾರದಿಂದ ಬೆಳೆಯುತ್ತವೆ. ತೋಟ ಮಾಡಿ ೮ ವರ್ಷದಲ್ಲಿ ಒಂದೇ ಒಂದು ಬಾರಿ ಕೀಟನಾಶಕ ಅಥವಾ ಗೊಬ್ಬರ ಬಳಸಿಲ್ಲ. ಎಲ್ಲ ಬಾಧೆಗಳನ್ನು ಬೆಳೆಗಳು
ತಾವಾಗೇ ನಿವಾರಿಸಿಕೊಳ್ಳುತ್ತವೆ. ಇದುವೇ ಚಮತ್ಕಾರ ಎನ್ನುತ್ತಾರೆ ಅವರು.

‘ಪಾಳೇಕಾರ್ ವಿಧಾನವೇ ಮಳೆಯಾಶ್ರಿತ ರೈತರಿಗೆ ಈಗಲೂ ವರದಾನ’ ಎನ್ನುತ್ತಾರೆ ನೈಸರ್ಗಿಕ ಕೃಷಿ ಸಾಧಕ ಕೃಷ್ಣಪ್ಪ. ಪಾಳೇಕಾರರ ನೈಸರ್ಗಿಕ ಕೃಷಿಯ ನಿರಂತರ ಸಾಧ್ಯತೆ ಕುರಿತು ಮಾತನಾಡುವ ಅವರು. ಈಗಲೂ ಮಿತ ನೀರಿನ ಬಳಕೆ, ಬಹುಬೆಳೆ ಅಳವಡಿಕೆ, ಜೀವಾಮೃತ ನೀಡುವುದು ಸೇರಿದಂತೆ ಮತ್ತಿತರ ಪರಿಸರ ಸ್ನೇಹಿ ಸಂಯೋಜನೆಯ ಪಾಳೇಕಾರ್ ವಿಧಾನವೇ ಮಳೆಯಾಶ್ರಿತ ಒಣಭೂಮಿಯ ರೈತರಿಗೆ ವರದಾನ ಎನ್ನುತ್ತಾರೆ.
ಪಾಳೇಕಾರ್ ವಿಧಾನವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು. ರಾಜ್ಯದ ನಾನಾ ಕಡೆ ಕೆಲ ರೈತರು ತಮಗೆ ಅರ್ಥವಾದ ರೀತಿಯಲ್ಲಿ ಪ್ರಯೋಗಕ್ಕೆ ಮುಂದಾಗಿ ಕೆಲ ತಪ್ಪುಗಳನ್ನು ಮಾಡುತ್ತಿದ್ದಾರೆ.

ಮೈಸೂರಿನಲ್ಲಿ ಬಹಳಷ್ಟು ಜನ ಕೃಷಿಕರು ಈ ಪದ್ದತಿಯಡಿ ಯಶಸ್ವಿಯಾಗಿದ್ದಾರೆ. ನಾವೀಗ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆಯಲ್ಲಿ ಆಗಿರುವ
ಲೋಪಗಳನ್ನು ಗುರುತಿಸಿ, ಹೊಸ ಮಾದರಿ ಪ್ಲಾಟ್ ಒಂದನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ವಿವರಿಸುತ್ತಾರೆ. ಹಿಂದೆಲ್ಲ ಡ್ರಿಪ್, ಸ್ಪಿಂಕ್ಲರ್ ಅಂತ ಬುಡಕ್ಕೆ ನೀರು ಕೊಟ್ಟು ಬೆಳೆ ಹಾಳು ಮಾಡಿದ್ದೇವೆ. ಗಿಡದ ಬೇರಿನ ವಿಸ್ತಾರದ ಪ್ರಮಾಣ ಅರಿತು ನೀರು ಕೊಟ್ಟರೆ ಗಿಡ ಸುಭದ್ರವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಸಿಗಳು ತನ್ನಿಂತಾನೇ ಆಹಾರ ತಯಾರಿಸುವ ಕೆಲಸ ಮಾಡಿಕೊಳ್ಳುತ್ತವೆ. ಒಣ ಭೂಮಿ ಪ್ರದೇಶಗಳಲ್ಲಿ ಬರುವ ಸರಾಸರಿ ಮಳೆಯಿಂದ ಸಿಗುವ ನೀರನ್ನೂ ವ್ಯಯ ಮಾಡುತ್ತಿದ್ದೇವೆ. ಎಲ್ಲೋ ಬಂದು, ಎಲ್ಲೋ ಹೋಗುತ್ತದೆ. ಈ ಪದ್ದತಿಯಲ್ಲಿ ಅಷ್ಟೂ ನೀರನ್ನು ಕೊಯ್ಲು ಮಾಡುತ್ತೇವೆ. ಈ ಥರಾ ಟ್ರಂಚಿನ ಮುಖಾಂತರ. ಟ್ರೆಂಚ್ ಹೊಡೆಯುವುದರಿಂದ ಜಮೀನು ವೇಸ್ಟ್ ಆಗಲ್ಲ. ಅಲ್ಲಿ ನೀರು ಹಿಡಿದಿಡುವುದರ ಜತೆಗೆ ಸಂಗ್ರಹಿಸುವ ಕೃಷಿ ತ್ಯಾಜ್ಯದಿಂದ ಹ್ಯೂಮಸ್(ಸ್ಪಂಜಿನ ಮಾದರಿ ಮೆಲ್ಪದರ) ರೂಪುಗೊಳ್ಳುತ್ತದೆ. ಬೆಳೆ ಬಂದಾಗ ಟ್ರೆಂಚ್ ವ್ಯವಸ್ಥೆ ಬೇಕಿತ್ತು ಅಂತ ರೈತರಿಗೇ ಮನವರಿಕೆಯಾಗುತ್ತದೆ.

ಯಾವುದೇ ಗಿಡಮರ ನೀರನ್ನು ಎಲ್ಲಿ ತೆಗೆದುಕೊಳ್ಳುತ್ತದೆ. ಹ್ಯೂಮಸ್ನಿಂದಲೂ ಹೇಗೆ ಆಹಾರ ಪಡೆಯುತ್ತದೆ ಎನ್ನುವುದರ ಅರಿವು ಇರಬೇಕು. ಯಾವುದೇ ಗಿಡಮರದಲ್ಲಿ ಮೂರು ಥರಾ ಬೇರು ಇರುತ್ತದೆ. ತಾಯಿ ಬೇರು, ಅಡ್ಡಬೇರು, ಇನ್ನೊಂದು ಸತ್ವ, ನೀರು ತೆಗೆದುಕೊಳ್ಳುವ ಸೂಕ್ಷ್ಮ ಬೇರು. ಇದು ನಮ್ಮ ಕೂದಲಿಗಿಂತ ಸೂಕ್ಷ್ಮವಾದುದು. ಈ ಸೂಕ್ಷ್ಮ ಬೇರು ಯಾವುದೇ ಮರದ ಎಲೆಯ ತುದಿಯ ಭಾಗದಲ್ಲಿ ಇರುತ್ತದೆ. ಅಲ್ಲಿಗೆ ನೀರು ಆಹಾರ ಕೊಡಬೇಕು. ಒಂದು ಕೆಜಿ ಹ್ಯೂಮಸ್ ತಯಾರು ಮಾಡಿದರೆ ಅದು ಒಂದು ದಿನಕ್ಕೆ ಆರು ಲೀಟರ್ ನೀರನ್ನು ವಾತಾವರಣದಿಂದಲೇ ಸಂಗ್ರಹಿಸುತ್ತದೆ. ಕಾಡಿನಲ್ಲಿ ಹ್ಯೂಮಸ್ ಬೆಳವಣಿಗೆ ಆಗಿರುವುದರಿಂದಲೇ ವರ್ಷಾನುಗಟ್ಟಲೇ ಮಳೆ ಬಾರದಿದ್ದರೂ ಗಿಡ, ಮರ ಬದುಕುಳಿಯುತ್ತವೆ. ಈ ನೈಸರ್ಗಿಕ ವಿಧಾನ ಬಹಳಷ್ಟು ದಿನಗಳ ಕಾಲ ಗಿಡಗಳ ಆರೋಗ್ಯ ಸುಸ್ಥಿರವಾಗಿಡಲು ಸಹಾಯ ಮಾಡುತ್ತದೆ.

ಒಂದು ತೋಟ ನೈಸರ್ಗಿಕವಾಗಿ ಬೆಳೆಯಲು ಪಂಚ ತರಂಗಿನಿ ವ್ಯವಸ್ಥೆ ಬೇಕು. ಕಾಡಿನಲ್ಲಿ ದೊಡ್ಡಮರ, ಮಧ್ಯಮ ಗ್ರಾತ್ರದ ಮರ, ಪೊದೆ,
ಸಣ್ಣಪುಟ್ಟ ಗಿಡಬಳ್ಳಿ ಸೇರಿ ಈ ವ್ಯವಸ್ಥೆ ಆಗಿರುತ್ತದೆ. ಅವೆಲ್ಲ ಸಹಬಾಳ್ವೆಯಿಂದ ಬೆಳೆಯುತ್ತಿರುತ್ತವೆ. ಯಾವುದೇ ರೋಗ ಬರಲ್ಲ. ಬಂದರೂ ನಿಸರ್ಗವೇ
ನಿಯಂತ್ರಿಸುತ್ತದೆ. ಕಾಡಲ್ಲಿ ಯಾವ್ಯಾವುದೋ ಮರ ಇರುತ್ತದೆ. ಒಟ್ಟಿಗೆ ಬೆಳೆಯುವುದಿಲ್ಲವೇ? ಇಲ್ಲಿ ನಾವು ಆಹಾರಕ್ಕಾಗಿ ಮಾಡುತ್ತೇವೆ.
ಆಹಾರದ ಬೆಳೆಗಳಲ್ಲಿ ಮಾವು, ಸಪೊಟ ಬರುತ್ತೆ. ತೆಂಗು, ಹುಣಸೆ, ನೇರಳೆ ದೊಡ್ಡ ಮರಗಳು. ಮಧ್ಯಮ ಗಾತ್ರದ ಮರ ಅಂದರೆ, ಬೆಟ್ಟದ ನೆಲ್ಲಿ,
ಸೀಬೆ, ಕಿತ್ತಳೆ, ಮೋಸಂಬಿ ಬರುತ್ತದೆ. ಮೂರನೇ ಹಂತವಾಗಿ ನುಗ್ಗೆ, ಬಾಳೆ ಬರುತ್ತದೆ. ನಾಲ್ಕನೇ ಹಂತವಾಗಿ ದಾಳಿಂಬೆ ಸೀತಾಫಲ ಬರುತ್ತೆ. ಐದನೇ ಹಂತವಾಗಿ ಶುಂಠಿ, ಅರಿಶಿಣ ಬರುತ್ತದೆ. ಇವೆಲ್ಲವೂ ಸಹಬಾಳ್ವೆಯಿಂದಲೇ ಬೆಳೆಯುತ್ತವೆ.

ಜೂನ್, ಜುಲೈನಲ್ಲಿ ಬೀಸುವ ಗಾಳಿ ಮಹಾನ್ ಕೆಟ್ಟದ್ದು. ರೋಗ ಹರಡುವುದರ ಜತೆಗೆ ಇಳುವರಿ ಕೂಡ ಕುಂಠಿತವಾಗುತ್ತದೆ. ಅದನ್ನು ತಡೆಯಲು
ತೋಟದ ಸುತ್ತಲೂ ಜೀವಂತ ಬೇಲಿ ನಿರ್ಮಿಸಿಕೊಳ್ಳಬೇಕು. ವನ ಗೋಡೆ ನಿರ್ಮಿಸಲು ಟೀಕ್, ಸಿಲ್ವರ್, ದಾಳಿಂಬೆ, ಸೀತಾಫಲ, ನುಗ್ಗೆ, ಅಗಸೆ, ಗ್ಲಿರಿಸೀಡಿಯಾ ನೆಡಬೇಕು. ಇದರಿಂದ ಶತ್ರು ಕೀಟಗಳು ಪ್ರವೇಶಿಸುವುದಿಲ್ಲ. ಮಿತ್ರ ಕೀಟ ಮಾತ್ರ ಉಳಿಯುತ್ತವೆ. ಎಂಟು ಅಡಿಗೊಂದರಂತೆ ತಡೆಗೋಡೆಗೆ ಗಿಡ ನೆಡುತ್ತೇವೆ. ಈ ವ್ಯವಸ್ಥೆ ಸೂಕ್ತವಾಗಿದ್ದರೆ ಒಳಗಿನ ಸಸಿಗಳ ಬೆಳವಣಿಗೆ ಸಮರ್ಪಕವಾಗಿರುತ್ತದೆ.

ಯಾವುದೇ ಗಿಡ ಮರ ಬದುಕುಳಿಯಲು ೨೫ ರಿಂದ ೪೫ ಡಿಗ್ರಿ ಉಷ್ಣಾಂಶ, ೪೫ ರಿಂದ ೭೫ ಡಿಗ್ರಿ ತೇವಾಂಶಬೇಕು. ಇದನ್ನು ಸೂಕ್ಷ್ಮ ಪರ್ಯಾವರಣ ಎಂದು ಹೇಳುತ್ತೇವೆ. ಪಂಚ ತರಂಗಿಣಿ ಮತ್ತು ವನಗೋಡೆ ಇವೆರಡನ್ನೂ ಸಹಜವಾಗಿ ಅಭಿವೃದ್ಧಿ ಪಡಿಸುತ್ತವೆ. ಪಾಳೇಕಾರ್ ವಿಧಾನ ಈಗಲೂ
ಒಟ್ಟಾರೆ, ಕಡಿಮೆ ಖರ್ಚಿನ, ಆಳುಕಾಳಿನ ಹೊರೆಯಿಲ್ಲದ ಸುಸ್ಥಿರ ಕೃಷಿಯ ನೈಜ ಮಾದರಿಯಾಗಿದೆ.