ಪ್ರಚಲಿತ
ಡಾ.ಜಗದೀಶ್ ಮಾನೆ
ಕೆಲ ದಿನಗಳ ಹಿಂದೆ ಸಂಸತ್ತಿನಲ್ಲಿ ಅಮಿತ್ ಶಾ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರಿಗೆ ಅವಮಾನ
ಮಾಡಿzರೆ. ಹಾಗಾಗಿ ಶಾ ರಾಜೀನಾಮೆ ಕೊಟ್ಟು ಕ್ಷಮೆ ಕೇಳಬೇಕು ಅಂತ ವಿಪಕ್ಷಗಳು ಹೋರಾಟದ ನೆಪದಲ್ಲಿ ದೊಡ್ಡ
ರಾಜಕೀಯ ಮಾಡುತ್ತಿವೆ. ಚಳಿಗಾಲದ ಅಽವೇಶನದ ಆರಂಭದಲ್ಲಿ ರಾಹುಲ್ ಗಾಂಧಿ, ಅದಾನಿ ಹೆಸರ ರಾಜಕಾರಣ
ಶುರುಮಾಡಿದ್ದರು. ಆದರೆ, ಆ ವಿಚಾರಕ್ಕೇನೂ ಹೆಚ್ಚಿನ ಪ್ರಾಶಸ್ತ್ಯ ಸಿಗಲಿಲ್ಲ.
ಹಾಗಾಗಿ ಚರ್ಚೆಯ ವಿಷಯ ಬದಲಿಸಿ, ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ತುಂಬಿವೆ. ಆದ್ದರಿಂದ ಸಂವಿಧಾನದ ಕುರಿತಂತೇ ಚರ್ಚೆಗಳಾಗಬೇಕೆಂಬ ವಿಚಾರವನ್ನು ಮುಂದಿಡುತ್ತಾರೆ. ಸರಕಾರ ಇದಕ್ಕೆ ಒಪ್ಪಿ, ರಾಜ್ಯ ಹಾಗೂ ಲೋಕಸಭೆ ಈ ಎರಡೂ ಸದನಗಳಲ್ಲಿ ಚರ್ಚೆಗಳಾದವು. ಆ ಚರ್ಚೆ ಬಹಳ ರೋಚಕವಾಗಿತ್ತು. ಪ್ರಧಾನಿ ಮೋದಿ ಸಾಕಷ್ಟು ದಾಖಲೆಗಳನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಎಸಗಿದ ಅಪಚಾರದ ಇಂಚಿಂಚು ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಬಳಿಕ ನಿರ್ಮಲಾ ಸೀತಾರಾಮನ್ ಹಾಗೂ ನಡ್ಡಾ ರವರು ಆಡಿದ ಮಾತುಗಳನ್ನ ವಿಪಕ್ಷಗಳಿಗಂತೂ ಆರಗಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ.
ಕೊನೆಗೆ ಅಮಿತ್ ಶಾ ಮಾತನಾಡುತ್ತಾ ವಿಪಕ್ಷಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು. ‘ಇಂದು ಅನೇಕರಿಗೆ ಅಂಬೇಡ್ಕರ್
ಹೆಸರು ಹೇಳೋದೇ ಒಂದು ದೊಡ್ಡ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು ಹೇಳಿದಷ್ಟು ದೇವರ ಹೆಸರನ್ನು ಹೇಳಿದ್ದರೆ ಸ್ವರ್ಗವಾದರೂ ಪ್ರಾಪ್ತಿಯಾಗುತ್ತಿತ್ತು.
ಇಂದು ಕಾಂಗ್ರೆಸ್ ಅಂಬೇಡ್ಕರ್ ಹೆಸರನ್ನು ಎಷ್ಟೆಷ್ಟು ಹೆಚ್ಚಿಗೆ ಹೇಳಿದಷ್ಟು ನಮಗೆಲ್ಲ ಸಂತೋಷವಾಗುತ್ತದೆ. ಯಾಕಂದ್ರೆ, ಇಂದು ವಿಪಕ್ಷಗಳೆಲ್ಲ ಅಂಬೇಡ್ಕರ್ ಹೆಸರನ್ನು ಹೇಳುತ್ತಿರುವುದೇ ನಮ್ಮ ಕಾರಣದಿಂದಾಗಿ. ಕಾರಣ, ಇವರಿಗೆಲ್ಲ ಅಂಬೇಡ್ಕರ್ ಹೆಸರನ್ನು ಹೇಳದೇ ರಾಜಕಾರಣ ಮಾಡಿದರೆ ಹೊಟ್ಟೆ ತುಂಬುವುದಿಲ್ಲ. ನೈಜವಾಗಿ
ಇವರೆ ಅಂಬೇಡ್ಕರ್ ವಿಚಾರವನ್ನು ಎಷ್ಟರಮಟ್ಟಿಗೆ ಮೈಗೂಡಿಸಿಕೊಂಡಿದ್ದಾರೆ?’ ಎಂದು ನೆಹರು ಕಾಲದಲ್ಲಿ ಅಂಬೇಡ್ಕರರಿಗಾದಂತಹ ಅಪಮಾನದ ಅಂಶಗಳನ್ನೆಲ್ಲವನ್ನ ಎಳೆಯಾಗಿ ಬಿಚ್ಚಿಟ್ಟಿದ್ದರು.
ಅಮಿತ್ ಶಾ ಮಾತನಾಡುವ ಆ ಸಂದರ್ಭದಲ್ಲಿ ಖರ್ಗೆ ಸೇರಿದಂತೆ ಕಾಂಗ್ರೆಸ್ಸಿನ ಅನೇಕ ದೊಡ್ಡ ದೊಡ್ಡ ನಾಯಕ ಮುಖಂಡರೆಲ್ಲರೂ ಉಪಸ್ಥಿತರಿದ್ದರು. ಆಗ ವಿರೋಧಿಸಿ ಶಾರನ್ನು ತಡೆಯುವ ಪ್ರಯತ್ನವನ್ನು ಯಾರೊಬ್ಬರೂ ಮಾಡಲಿಲ್ಲ. ಕಾರಣ ಅದರಲ್ಲಿ ಸತ್ಯದ ಅಂಶಗಳಿದ್ದವು. ಆದರೆ ಮರನೇದಿನ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣವು ಶಾ ಮಾತುಗಳನ್ನು ತಮಗೆ ಬೇಕಾದಷ್ಟು ಕಟ್ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಹರಿದಾಡುತ್ತಿದ್ದಂತೆ ಆಗ ಎಚ್ಚೆತ್ತುಕೊಂಡ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳೆಲ್ಲವು ಆಕ್ಟಿವ್ ಆಗಿ ಹೋರಾಟದ ಸಿದ್ಧತೆ ಮಾಡಿಕೊಂಡರು.
ಲೋಕಸಭಾ ಚುನಾವಣೆಯಲ್ಲಿ ಬಿತ್ತರಿಸಿದ ರೀತಿಯಲ್ಲಿಯೇ ಸುಳ್ಳು ನರೇಟಿವನ್ನ ಈಗಲೂ ಹರಡುತ್ತಿದ್ದಾರೆ. ನಾವು ಮಾತ್ರ ಅಂಬೇಡ್ಕರ್ ವಿಚಾರಗಳ ರಕ್ಷಕರು, ಅಂಬೇಡ್ಕರ್ ಹಾಕಿ ಕೊಟ್ಟ ದಾರಿಯಲ್ಲಿ ನಾವಷ್ಟೇ ನಡೆಯು ತ್ತಿದ್ದೇವೆ, ಹೀಗಂತ ಕಾಂಗ್ರೆಸ್ ಹಾಗೂ ವಿಪಕ್ಷಗಳು ಎಂದಿನಂತೆ ತಮ್ಮ ನಾಟಕವನ್ನು ಶುರುಮಾಡಿವೆ. ವಾಸ್ತವದಲ್ಲಿ ಈ ಕಾಂಗ್ರೆಸ್ಸಿನ ಅಸಲಿ ಮುಖ ಬೇರೆ ಇದೆ.
1947 ರಲ್ಲಿ ಭಾರತಕ್ಕೆ ಸ್ವತಂತ್ರ ಬಂದಾಗ ಆಗ ಮಧ್ಯಂತರ ಸರಕಾರ ರಚಿಸಬೇಕಿತ್ತು, ಕಾರಣ ಆಗ ಚುನಾವಣೆ ಗಳಿನ್ನೂ ನಡೆದಿರಲಿಲ್ಲ. ಹಾಗಾಗಿ ಈ ದೇಶದ ಭವಿಷ್ಯ ರೂಪಿಸುವ ಉದ್ದೇಶದಿಂದ ಒಂದು ಜವಾಬ್ದಾರಿಯುತ ಸರಕಾರ ರಚನೆಯಾಗಬೇಕಿತ್ತು. ಅದು ಸರ್ದಾರ್ ವಲ್ಲಭಾಯಿ ಪಟೇಲರ ನೇತೃತ್ವದಲ್ಲಿ. ಆಗ ಪಟೇಲರಿಗೆ ಹೆಚ್ಚಿನ ಜನಬೆಂಬಲವಿದ್ದಾಗೂ ಗಾಂಧಿಯ ಕಾರಣದಿಂದ ನೆಹರು ಒವರ್ ಅಟ್ಯಾಕ್ ಮಾಡಿ ಪ್ರಧಾನಿಯಾಗಿದ್ದರು. ನಂತರ ಗಾಂಧಿಯ ಸಲಹೆಯಂತೆ ನೆಹರು ಸರ್ವ ಪಕ್ಷಗಳನ್ನೊಳಗೊಂಡ ಸರಕಾರ ರಚಿಸುತ್ತಾರೆ.
ಕರಡು ಸಮಿತಿಯ ಅಧ್ಯಕ್ಷ ಹಾಗೂ ಕಾನೂನು ಮಂತ್ರಿಗಳಾಗಿದ್ದ ಅಂಬೇಡ್ಕರ್ ಹಾಗೂ ನೆಹರೂರ ನಡುವೆ ಅನೇಕ ವಿಚಾರಗಳ ಬಗ್ಗೆ ವೈಮನಸ್ಸು ಮೂಡಿದ್ದರಿಂದ ಅಂತಿಮವಾಗಿ 1951 ರಲ್ಲಿ ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರಕಾರದಿಂದ ಹೊರ ಬರುತ್ತಾರೆ. ನಂತರ ಸಾರ್ವತ್ರಿಕ ಚುನಾವಣೆಗಳು ಘೋಷಣೆ ಯಾಗುತ್ತವೆ. ಆಗ ನೆಹರು ಮೌಂಟ್ ಬ್ಯಾಟನ್ ಹೆಂಡತಿ ‘ಎಡ್ವಿನಾ’ಳಿಗೆ ಪತ್ರ ಬರೆದು ‘ಇಂದು ಚುನಾವಣೆಗಳು ಘೋಷಣೆಯಾಗಿವೆ. ಮುಂಬೈ ಪ್ರಾಂತ್ಯದಲ್ಲಿ ನಮಗೆ ಉತ್ತಮ ವಾತಾವರಣವಿರುವುದರಿಂದ ಅಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮತ್ತು ಅಂಬೇಡ್ಕರನ್ನು ಕಾಂಗ್ರೆಸ್‌ನಿಂದ ನಾವೇ ಕಿತ್ತೇಸೆದಿದ್ದೇವೆ.
ಕಾರಣ, ಅವರು ಹೆಚ್ಚಾಗಿ ಹಿಂದೂ ಸಾಂಪ್ರದಾಯಿಕ ವಾದವನ್ನೇ ಮಂಡಿಸುತ್ತಾರೆ. ಅದು ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ ಸರಿಹೊಂದುವುದಿಲ್ಲ’ ಎಂಬ ವಿಚಾರವನ್ನು ನೆಹರು ಆ ಪತ್ರದಲ್ಲಿ ಉಲ್ಲೇಖಿಸಿದ್ದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆಹರು ಕುತಂತ್ರದಿಂದ ಅಂಬೇಡ್ಕರ್ ವಿರುದ್ಧ ಅವರ ಮಾಜಿ ಪಿ.ಎ ಆಗಿದ್ದ ಎನ್.ಎಸ್. ಕಾಜೋಲ್ಕರರನ್ನು ನಿಲ್ಲಿಸಿ ಹದಿನೈದು ಸಾವಿರ ಮತಗಳ ಅಂತರದಿಂದ ಅಂಬೇಡ್ಕರರನ್ನು ಸೋಲಿಸು ತ್ತಾರೆ. ನಂತರ ನಡೆದ ‘ಬಂಡಾರ’ ಕ್ಷೇತ್ರದ ಉಪಚುನಾವಣೆಯಲ್ಲೂ ಅಂಬೇಡ್ಕರನ್ನು ಹೀನಾಯವಾಗಿ ಸೋಲಿಸ ಲಾಗುತ್ತದೆ. ಈ ದೇಶದ ಸಂವಿಧಾನ ರಚನಾಕಾರ ಒಬ್ಬ ಬುದ್ಧಿವಂತ ಮನುಷ್ಯ ಯಾವುದೇ ಕಾರಣಕ್ಕೂ
ಸಂಸತ್ತನ್ನು ಪ್ರವೇಶಿಸಬಾರದೆಂಬ ಕಾರಣಕ್ಕೆ ಸ್ವತಃ ನೆಹರು ಅವರೇ ಮುಂದೆ ಅಂಬೇಡ್ಕರನ್ನು ಸೋಲಿಸಿದ್ದರು.
ಅಂದು ನೆಹರು ಪ್ರತಿಪಾದಿಸಿದ್ದ ಎಡಬಿಡಂಗಿ ಸಿದ್ಧಾಂತವನ್ನೇ ಇಂದು ರಾಹುಲ್ ಪ್ರತಿಪಾದಿಸುತ್ತಿದ್ದಾರೆ. ಒಂದು ವೇಳೆ ಅಂದು ಅಂಬೇಡ್ಕರ್ ಸಂಸತ್ತನ್ನೇನಾದರೂ ಪ್ರವೇಶಿಸಿದ್ದರೆ ನೆಹರು ಆಟವೇ ನಡೆಯುತ್ತಿರಲಿಲ್ಲ. ನೆಹರು ಆಟಾಟೂಪಕ್ಕೆ ಸಂಪೂರ್ಣ ಬ್ರೇಕ್ ಬೀಳುತ್ತಿತ್ತು. ಅನೇಕ ಬಾರಿ ಸಂಸತ್ತಿನಲ್ಲಿ ಸತ್ಯ ಹೇಳುತ್ತಿದ್ದ ಅಂಬೇಡ್ಕರರು ಕಾಂಗ್ರೆಸ್ಸಿಗೆ ಇಷ್ಟವೇ ಆಗುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಅಂಬೇಡ್ಕರರನ್ನು ಸೈಡ್ ಲೈನ್ ಮಾಡಿತ್ತು. 1950ರ ದಶಕದಲ್ಲಿ ಕಾಂಗ್ರೆಸ್ ಹೊರತಾಗಿ ಭಾರತದಲ್ಲಿ ಬೇರಾರೂ ಗೆಲ್ಲುವುದು ಕಷ್ಟವಿತ್ತು. ಜನ ಆಗಿನ್ನೂ ಜಾಗೃತ ರಾಗಿರಲಿಲ್ಲ. ದೇಶಕ್ಕೆ ಒಳ್ಳೆಯದ್ಯಾವುದು, ಕೆಟ್ಟದ್ಯಾವುದು ಎಂಬುದರ ಬಗ್ಗೆ ಸರಿಯಾದ ಅರಿವು ಜನರಿಗಿರಲಿಲ್ಲ. ಕೇವಲ ಕಾಂಗ್ರೆಸ್ ಪಕ್ಷದಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬ ಭ್ರಮೆಯಲ್ಲಿದ್ದರು. ಹಾಗಾಗಿ
ಅಂಬೇಡ್ಕರ್ ಅಂದು ಜನರಿಗೆ ಅರ್ಥವಾಗದೇ ಉಳಿದುಬಿಟ್ಟರು.
ಇನ್ನೂ ದುರ್ದೈವದ ಸಂಗತಿ ಅಂದ್ರೆ, ನೆಹರು ಇಂದಿರಾಗಾಂಧಿಯಂತೂ ತಾವು ಅಧಿಕಾರದಲ್ಲಿರುವಾಗ ತಮಗೆ
ತಾವೇ ಭಾರತ ರತ್ನವನ್ನು ಘೋಷಿಸಿಕೊಂಡಿದ್ದರು. ರಾಜೀವ್ ಗಾಂಧಿ ತೀರಿಹೋದ ಕೇವಲ ಎರಡೇ ತಿಂಗಳಲ್ಲಿ ಅವರದ್ದೇ ಸರಕಾರ ಭಾರತ ರತ್ನ ನೀಡುತ್ತದೆ. ಆದರೆ 1956 ರಲ್ಲಿ ಇಹಲೋಕ ತ್ಯಜಿಸಿ 34 ವರ್ಷ ಕಳೆಯುವವರೆಗೂ ಅಂಬೇಡ್ಕರ್ ಅವರಿಗೆ ಯಾವುದೇ ಸರಕಾರಗಳು ಭಾರತ ರತ್ನ ನೀಡಿರಲಿಲ್ಲ. 1990ರಲ್ಲಿ ಕಾಂಗ್ರೆಸ್ಸೇತರ ಸರಕಾರ ರಚನೆ ಮಾಡಿದ ವಿ.ಪಿ ಸಿಂಗ್ ಅಂಬೇಡ್ಕರರಿಗೆ ಭಾರತರತ್ನ ನೀಡಿದ್ದರು.
ಅಷ್ಟಕ್ಕೂ ಈಗ ಅಂಬೇಡ್ಕರ್ ಅವರಿಗೆ ಅನ್ಯಾಯವಾಗುತ್ತಿದೆ ಅಂತ ನಾಟಕ ಮಾಡುತ್ತಿರುವ ಇವರೆಲ್ಲ ತಾಕತ್ತಿದ್ದರೆ, ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತದ ಅವಽಯಲ್ಲಿ ಅಂಬೇಡ್ಕರರಿಗೋಸ್ಕರ ಏನನ್ನು ಕೊಟ್ಟಿದ್ದಾರೆ
ಎಂಬ ಒಂದೇ ಒಂದು ಅಂಶವನ್ನು ತಿಳಿಸಲಿ! ಅಂಬೇಡ್ಕರ್ ತೀರಿದ ನಂತರವಂತೂ ಅಂಬೇಡ್ಕರ ಕುಟುಂಬಕ್ಕೆ ಕಾಂಗ್ರೆಸ್ ಮಾಡಿದ ಮೋಸ ಅವಮಾನ ಅಷ್ಟಿಷ್ಟಲ್ಲ. ಆ ಅವಮಾನ ಮೋಸದ ಬಗ್ಗೆ ಸ್ವತಃ ಕಾಂಗ್ರೆಸ್ ಹಿರಿಯ ಮುಖಂಡ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಮುಕ್ತ ಕಂಟದಿಂದ ಮಾತನಾಡಿದ್ದರು.
1951 ರಲ್ಲಿ ಅಂಬೇಡ್ಕರ್ ರಾಜೀನಾಮೆಯ ನಂತರ ಅವರು ಸರಕಾರಿ ನಿವಾಸವನ್ನು ತೊರೆದು, ಅಲೀಪುರ ರಸ್ತೆಯ ಬಂಗಲೆಯೊಂದರಲ್ಲಿ ವಾಸವಿದ್ದರು. ನಂತರ ಆ ಮನೆಯನ್ನು ಖರೀದಿಸಿದ ಶ್ರೀಮಂತ ಉದ್ಯಮಿಯೊಬ್ಬರು ಆ ಮನೆ ಖಾಲಿ ಮಾಡುವಂತೆ ನೋಟಿಸ್ ಕಳಿಸುತ್ತಾರೆ. ಆಗ ಸವಿತಾ ಅಂಬೇಡ್ಕರ್ ಬಳಿ, ಬೇರೆ ಮನೆ ಹಿಡಿದು ಅದಕ್ಕೆ ಬಾಡಿಗೆ ಕಟ್ಟುವಷ್ಟು ಹಣವಿರಲಿಲ್ಲ. ನಂತರ ಆ ಮನೆಯ ಓನರ್ ಮನೆಯ ಎಲ್ಲ ವಸ್ತು ಹಾಗೂ ಅಂಬೇಡ್ಕರ ಪುಸ್ತಕಗಳು, ಮಹತ್ವದ ಲೆಟರ್ ಗಳೆಲ್ಲವನ್ನೂ ಮುಲಾಜಿಲ್ಲದೆ ಬೀದಿಗೆ ಎಸೆದು ಹೊರ ಹಾಕುತ್ತಾನೆ.
ನಂತರ ಸವಿತಾ ಅಂಬೇಡ್ಕರ್ ಅಂದಿನ ಗ್ರಹಮಂತ್ರಿಯಾಗಿದ್ದ ಚೌಹಾಣ್‌ರನ್ನು ಭೇಟಿ ಮಾಡಿ ಮನೆಗಾಗಿ ಬೇಡಿಕೆ ಇಡುತ್ತಾರೆ. ಆದರೆ ಯಾವುದೇ ಸಹಾಯ ಸಿಗುವುದಿಲ್ಲ. ಹೀಗೆ ಅಂಬೇಡ್ಕರ್ ಕುಟುಂಬವನ್ನು ಬದುಕಿರುವಾ ಅಷ್ಟೊಂದು ತುಚ್ಛವಾಗಿ ನಡೆಸಿಕೊಂಡಿತ್ತು ಕಾಂಗ್ರೆಸ್. ಆದರೆ ಈಗ ಇವರಿಗೆಲ್ಲ ರಾಜಕೀಯ ಮಾಡೋದಕ್ಕೆ ಮಾತ್ರ ಅಂಬೇಡ್ಕರ್ ಹೆಸರು ಫೋಟೋ ಬೇಕಿದೆ.
ಇತ್ತೀಚಿಗೆ ನಡೆದ ಘಟನೆಯೊಂದು ಹಾಗೇ ಕಣ್ಮುಂದಿದೆ. ರಾಹುಲ್ ಗಾಂಧಿಯ ಅತ್ಯಾಪ್ತ ಹಾಗೂ ಕಾಂಗ್ರೆಸ್ ಪಕ್ಷದ
ಪ್ರಮುಖ ಹುzಯಲ್ಲಿದ್ದ ‘ಸ್ಯಾಮ್ ಪಿತ್ರೋಡಾ’ ಕೆಲವೇ ತಿಂಗಳ ಹಿಂದೆ ಟ್ವೀಟ್ ಒಂದರಲ್ಲಿ ‘ಸಂವಿಧಾನ ಮತ್ತು ಅದರ ಪೀಠಿಕೆಗೆ ನೆಹರು ಅವರ ಕೊಡುಗೆಯೇ ಹೆಚ್ಚಿದೆ ಹೊರತು ಅಂಬೇಡ್ಕರದಲ್ಲ, ಮತ್ತು ಅಂಬೇಡ್ಕರ್ ಸಂವಿ ಧಾನದ ರಚನಾಕಾರ ಎನ್ನುವುದು ಈ ದೇಶದ ಆಧುನಿಕ ಇತಿಹಾಸದ ಅತ್ಯಂತ ದೊಡ್ಡ ಸುಳ್ಳೆಂದು’ ಟ್ವೀಟ್ ಮಾಡಿ ದ್ದರು. ಈ ದೇಶಕ್ಕೆ ಸಂವಿಧಾನ ಕೊಟ್ಟಿದ್ದು ಅಂಬೇಡ್ಕರ್ ಅಲ್ಲ, ನೆಹರು ಅಂತ ಬಿಂಬಿಸುವ ಸಾಕಷ್ಟು ಪ್ರಯತ್ನಗಳು ದಶ ದಶಕಗಳಿಂದ ನಡೆಯುತ್ತಲೇ ಇವೆ. ಆದರೆ ಜನ ಜಾಗೃತರಾಗಿ ದ್ದರಿಂದ ಹೈಜಾಕ್ ಮಾಡುವುದಕ್ಕೆ ಸಾಧ್ಯ ವಾಗಲಿಲ್ಲ.
2006 ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎನ್ ಸಿಆರ್‌ಟಿ ಪಠ್ಯಪುಸ್ತಕದಂದು ಕಾರ್ಟೂನಿನ ಚಿತ್ರ ಸೇರಿಸಿ
ದ್ದರು. ಆ ಚಿತ್ರವನ್ನು ನೋಡಿದರೆ ಹೆಂತವರಲ್ಲೂ ರೋಷ ಕುದಿಯುತ್ತದೆ. ಅದು, ‘ಒಂದು ಬಸವನ ಹುಳುವಿನ ಮೇಲೆ ಅಂಬೇಡ್ಕರನ್ನು ಕೂಡಿಸಿ ಅವರ ಹಿಂದೆ ಚಾಟಿ ಹಿಡಿದುಕೊಂಡು ನಿಂತ ನೆಹರು ಚಾಟಿಯಿಂದ ಅಂಬೇಡ್ಕರ ರಿಗೆ ಬಾರಿಸುತ್ತಿರುವ ಚಿತ್ರ’. ಇದರ ಅರ್ಥ, ಸಂವಿಧಾನ ರಚನೆ ತುಂಬಾ ವಿಳಂಬವಾಗುತ್ತಿದೆ, ಹಾಗಾಗಿ ನೆಹರು ಚಾಟಿ ಹಿಡಿದುಕೊಂಡು ಅಂಬೇಡ್ಕರನ್ನು ಮುಂದೆ ನಡೆಸುತ್ತಿದ್ದಾರೆನ್ನುವ ಅರ್ಥವದು.
ಈ ಕಾರ್ಟೂನನ್ನು ಮಕ್ಕಳ ಪಠ್ಯದಲ್ಲಿ ಬೋಧಿಸಲಾಗುತ್ತಿತ್ತು. 2006 ರಿಂದ 2012ರ ವರೆಗೂ ಈ ಅಂಶಗಳನ್ನು ಬೋಧಿಸಲಾಗಿತ್ತು. ನಂತರ ದೊಡ್ಡ ಮಟ್ಟದ ಗಲಾಟೆ ಚರ್ಚೆಗಳಾದಾಗ ಆಗಿನ ಎಚ್ ಆರ್‌ಡಿ ಮಂತ್ರಿ ಕಪಿಲ್ ಸಿಬಲ್ ಸಂಸತ್ತಿನಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಅಂಬೇಡ್ಕರ್ ಅವರಿಗೆ ಮಾಡಿದ ಇದಕ್ಕಿಂತ ದೊಡ್ಡ ಅವಮಾನ ಇನ್ಯಾವುದಿದೆ ನೀವೇ ಹೇಳಿ. 1991ರಲ್ಲಿ ಅಂಬೇಡ್ಕರ್ ಜನ್ಮ ಶತಮಾನೋತ್ಸವ ನಡೆದಿತ್ತು. ಆ ಸಂದರ್ಭದಲ್ಲಿ ಅಂಬೇಡ್ಕರ್ ಮೆಮೊರಿಯಲ್ ಗೋಸ್ಕರ ಒಂದು ಸ್ಮಾರಕ ರಚಿಸುವಂತೆ ಅವರ ಅನುಯಾಯಿಗಳು ಸರಕಾರಕ್ಕೆ ಡಿಮ್ಯಾಂಡ್ ಮಾಡಿದ್ದರು. ಆ ಕೂಗಿಗೆ ಅಂದಿನ ಯಾವುದೇ ಸರಕಾರಗಳು ಸ್ಪಂದಿಸಲಿಲ್ಲ.
ಅಂತಿಮವಾಗಿ ೨೦೦೩ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಹಿಂದೆ ಅಲಿಪುರದಲ್ಲಿ ಅಂಬೇಡ್ಕರ್ ವಾಸ ಮಾಡುತ್ತಿದ್ದ ಆ ಮನೆಯನ್ನೇ ಖರೀದಿಸಿ, ಅಲ್ಲಿ ಅಂಬೇಡ್ಕರ ಸ್ಮಾರಕದ ಫೌಂಡೇಶನ್‌ಗೆ ವಾಜಪೇಯಿ ಅಡಿಗಲ್ಲು ಹಾಕಿದ್ದರು. ೨೦೦೪ರಲ್ಲಿ ವಾಜಪೇಯಿ ಸರಕಾರ ಪತನವಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ.
ಕಾಂಗ್ರೆಸ್ಸಿನ ಹತ್ತೂ ವರ್ಷಗಳ ಆ ಅವಧಿಯಲ್ಲಿ ಆ ಕಟ್ಟಡ ಕಾಮಗಾರಿ ಮುಂದುವರೆಯದೇ ಹಾಗೆ ಉಳಿದು ಬಿಡುತ್ತದೆ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಆ ಸ್ಮಾರಕದ ಕೆಲಸವನ್ನು ಪುನಃ ಆರಂಭಿಸಿ ಅದನ್ನು 2018 ರಲ್ಲಿ ನರೇಂದ್ರ ಮೋದಿ ಉದ್ಘಾಟಿಸುತ್ತಾರೆ.
ಈ ಕಾಂಗ್ರೆಸ್ಸಿಗೆ ಅಂಬೇಡ್ಕರರ ಒಂದೇ ಒಂದು ಸ್ಮಾರಕ ಕಟ್ಟುವ ಯೋಗ್ಯತೆ ಇರಲಿಲ್ಲ. ಅದೇ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯ ದೊಡ್ಡ ದೊಡ್ಡ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ನಮ್ಮ ಸಂಸತ್ ಭವನದ ಸೆಂಟ್ರಲ್ ಹಾಲಿನಲ್ಲಿ ೧೯೯೦ರ ವರೆಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಜಾಗವಿರಲಿಲ್ಲ. ವಿ.ಪಿ ಸಿಂಗ್ ಪ್ರಧಾನಿಯಾದ ನಂತರವೇ ಅಂಬೇಡ್ಕರ್ ಭಾವಚಿತ್ರವನ್ನು ಸಂಸದ್ ಭವನದಲ್ಲಿ ಹಾಕಲಾಗುತ್ತದೆ.
1955 ರಲ್ಲಿ ಅಂಬೇಡ್ಕರ್ ಬಿಬಿಸಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಅನೇಕ ಅಂಶಗಳು ಬಹಿರಂಗಗೊಂಡಿದ್ದವು. ‘ಗಾಂಧೀಜಿ ದಲಿತರಿಗೋಸ್ಕರ ಏನನ್ನು ಮಾಡಿಲ್ಲ. ಸ್ವರಾಜ್ ಅಭಿಯಾನಕ್ಕೆ ದಲಿತರ ಸಹಕಾರ ನೀಡುವ ಒಂದೇ ಕಾರಣಕ್ಕೆ ಅವರು ಕಾಂಗ್ರೆಸ್ ನೊಂದಿಗೆ ಇರಲಿ ಎಂಬುದಕ್ಕಾಗಿ ಗಾಂಧೀಜಿ ದಲಿತರ ಬಗ್ಗೆ ಮಾತನಾಡುತ್ತಾರೆ ಹೊರತು ಗಾಂಧೀಜಿಗೆ ದಲಿತರ ಬಗ್ಗೆ ಹೆಚ್ಚಿಗೇನೂ ಆಸಕ್ತಿ ಇರಲಿಲ್ಲ ಎಂಬುದನ್ನು ಅಂಬೇಡ್ಕರ್ ನೇರವಾಗಿ ಹೇಳಿ
ದ್ದರು.
ಮುಂದುವರೆದ ಆಂಕರ್ ಮತ್ತೊಂದು ಪ್ರಶ್ನೆ ಕೇಳುತ್ತಾರೆ, ಗಾಂಧಿ-ನೆಹರು ಹೊರತಾಗಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತಾ? ಅದಕ್ಕೆ ಅಂಬೇಡ್ಕರ್ ’ಖಂಡಿತವಾಗಿ ಇದಕ್ಕಿಂತಲೂ ಉತ್ತಮವಾದ ಸ್ವಾತಂತ್ರ್ಯವೇ ಸಿಗುತ್ತಿತ್ತು. ಬ್ರಿಟಿಷ ರೇನು ಗಾಂಧಿಗೆ ಹೆದರಿ ಸ್ವಾತಂತ್ರ ಕೊಡಲಿಲ್ಲ. ಬದಲಿಗೆ ಸುಭಾಷ್ ಚಂದ್ರ ಬೋಸರು ವಿದೇಶಿ ನೆಲದಲ್ಲಿ ಸೇನೆ ಕಟ್ಟಿದ್ದರು. ಆ ಮೂಲಕ ಬ್ರಿಟಿಷರಿಗೆ ನಮ್ಮ ವಿರುದ್ಧ ಸುಭಾಷರಿಗೆ ಸೇನೆ ಕಟ್ಟುವ ಧೈರ್ಯ ಶಕ್ತಿ ಇದೆ ಎಂಬುದು ಗೊತ್ತಾದಾಗ ಅದರಿಂದ ವಿಚಲಿತರಾದ ಬ್ರಿಟಿಷರು ಆಗಲೇ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದು ನಿರ್ಧರಿಸುತ್ತಾರೆ.
ಸುಭಾಷರ ಆ ಕಾರಣದಿಂದಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ’ ಎಂದು ಅಂಬೇಡ್ಕರ್ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸುತ್ತಾರೆ. ಈ ಎಲ್ಲ ಅಂಶಗಳನ್ನು ಒಪ್ಪಿಕೊಳ್ಳುವ ತಾಕತ್ತು ಇಂದಿನ ಕಾಂಗ್ರೆಸ್ಸಿಗಿದೆಯೇ? ಇಲ್ಲ! ಕೇವಲ ಅಂಬೇಡ್ಕರರಿಗೆ ಹಾಗೆ ಅವಮಾನವಾಯ್ತು, ಹೀಗೆ ಅವಮಾನ ಆಯಿತು ಅಂತಲ್ಲ ಬರಿ ಡೋಂಗಿ ನಾಟಕವನ್ನ ಮಾಡುತ್ತಿದ್ದಾರಷ್ಟೇ. ಹೇಗೆಲ್ಲ ಚುನಾವಣೆಗಳು ಮುಗಿದು ಫಲಿತಾಂಶಗಳು ಬಂದಾಗಲೆಲ್ಲ ಇವಿಎಂಗಳು ತಮ್ಮ ಮೇಲೆ ದೋಷವನ್ನು ಹೊತ್ತುಕೊಂಡಿರುತ್ತವೆಯೋ ಹಾಗೆ ಸತ್ಯ ತಿಳಿಸುವ ಪ್ರಯತ್ನಗಳಾದಾಗ ಅಂದ ಭಕ್ತ, ಮನುವಾದಿ, ಬಿಜೆಪಿ- ಮೋದಿ ಭಕ್ತ ಅಂತಲ್ಲ ಹೇಳುವುದೊಂದು ರೂಢಿ ಆಗಿಬಿಟ್ಟಿದೆ. ಯಾರು ಏನೇ ಬೊಬ್ಬೆ ಹೊಡೆಯಲಿ ಸತ್ಯ ಸತ್ಯವೇ, ಅದು ಎಂದೂ ಸುಳ್ಳಾಗುವುದಿಲ್ಲ.
(ಲೇಖಕರು: ರಾಜ್ಯಶಾಸ ಅಧ್ಯಾಪಕರು ಹಾಗೂ ವಿಶ್ಲೇಷಕರು)
ಇದನ್ನೂ ಓದಿ: Bigg Boss Jagadeesh : ಮಧ್ಯರಾತ್ರಿಲಿ, ಹೈವೇ ರಸ್ತೇಲಿ ಲಾಯರ್ ಜಗದೀಶ್ ಮಾತು ಕೇಳಿ! ವಿಡಿಯೊ ಇದೆ