Monday, 16th September 2024

ಯಡಿಯೂರಪ್ಪ ಜನನಾಯಕರೇ ಹೊರತು ಹೀರೋ ಅಲ್ಲ!

ಟಿ. ದೇವಿದಾಸ್

ಕರ್ನಾಟಕದ ರಾಜಕೀಯ ಇತಿಹಾಸಲ್ಲಿ ಅಚ್ಚಳಿಯದ ನಾಯಕನಾಗಿ ಹೊರಹೊಮ್ಮಲು ಈಗ ಒದಗಿ ಬಂದಿರುವ ಅವಕಾಶ ನ ಭೂ ತೋ ನ ಭವಿಷ್ಯತಿ ಎಂಬಂತಿದೆ. ಅವರು ಆ ದಿಸೆಯಲ್ಲಿ ಅಡಿಯಿಟ್ಟರೆ ರಾಜ್ಯ ಎಂದೂ ಮರೆಯದ ಮುಖ್ಯಮಂತ್ರಿಿಯಾಗಿ ಅವರು ಹೊರಹೊಮ್ಮುವ ಎಲ್ಲ ಸಾಧ್ಯತೆಗಳು ಸದ್ಯಕ್ಕಿಿವೆ.

ನಾಯಕನಿಗೂ ಹೀರೋಗೂ ವ್ಯತ್ಯಾಾಸವಿದೆ. ನಾಯಕನಾದವನು ಜನಪ್ರಿಿಯನಾಗಲು ಬಯಸದೆ ಜನಪರ ಧ್ವನಿಯಾಗುತ್ತಾಾನೆ. ತನ್ನ ಕಾರ್ಯಗಳಿಂದ ಜನಪ್ರಿಿಯನಾಗುತ್ತಾಾನೆ. ನಾಯಕನು ಪ್ರತಿಷ್ಠೆೆ ಮತ್ತು ಖ್ಯಾಾತಿಯ ಹಿಂದೆ ಬೀಳುವುದಿಲ್ಲ. ಯಾವುದೇ ಕ್ರಿಿಯೆ, ಪ್ರತಿಕ್ರಿಿಯೆಗೆ ಮುಂದಾಗುವಾಗ ತನ್ನವರೊಂದಿಗೆ ಚರ್ಚಿಸಿ, ಸಾರಾಸಾರ ಚಿಂತಿಸಿ ಕಾರ್ಯಕ್ಕಿಿಳಿಯುತ್ತಾಾನೆ. ಎಲ್ಲರನ್ನೂ ಗೆದ್ದು ಬಿಡುತ್ತೇನೆಂಬ ಹೀರೋನಂತೆ ಒಂದು ಹುಕಿಗೆ ಬೀಳುವುದಿಲ್ಲ. ಆವೇಶವು ಉತ್ತಮ ನಾಯಕನ ಲಕ್ಷಣವಲ್ಲ. ಹಾಗಂತ ಅಗ್ರೆೆಸಿವ್ ಗುಣವಿರಲೇಬೇಕು. ತನ್ನ ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುವವನು ಯಶಸ್ವಿಿ ನಾಯಕನಾಗುತ್ತಾಾನೆ. ಕೀರ್ತಿ, ವರ್ಚಸ್ಸಿಿಗಾಗಿ ಹಂಬಲಿಸುವ ನಾಯಕ ಕಾಲಗತಿಯಲ್ಲಿ ಸಾಮಾನ್ಯ ಹೀರೋ ಆಗುತ್ತಾಾನೆಯೇ ಹೊರತು ತನ್ಮ ಕೆಲಸಗಳಿಂದ ಯಶಸ್ವಿಿಯಾಗಿ ವರ್ಚಸ್ಸು, ಕೀರ್ತಿಗಳನ್ನು ಪಡೆದು ಜನಮಾನಸದಲ್ಲಿ ನೆನಪಾಗಿ ಉಳಿಯುವುದಿಲ್ಲ.

ಒಬ್ಬ ನಿಜ ನಾಯಕನಾದವನಲ್ಲಿ ತಾನು ಸರಿಯೆಂಬ ಮನೋಧರ್ಮ ಇರುವುದಿಲ್ಲ. ಸ್ವಾಾತ್ಮ ವಿಮರ್ಶೆ, ವಿವೇಕ, ವಿವೇಚನೆ, ಬಹುಮುಖಿ ಚಿಂತನೆ ಇರುತ್ತದೆ. ಮತ್ತೊೊಬ್ಬರನ್ನು ವಿಮರ್ಶೆ ಮಾಡುವ ಮೊದಲು ತನ್ನನ್ನು ತಾನು ವಿಮರ್ಶೆಗೆ ಒಳಪಡಿಸಿಕೊಳ್ಳುವ ನಾಯಕ ಮಾತ್ರ ಯಶಸ್ಸಿಿನ ಊರ್ಧ್ವಮುಖಿ ದಾರಿಯಲ್ಲಿ ಸಾಗುತ್ತಾಾನೆ. ಮುಖ್ಯಮಂತ್ರಿಿಯಾದವನು ಸಬಲ, ಸಮರ್ಥ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಜನತೆಗೆ ಹತ್ತಿಿರವಾಗಲು ಸಾಧ್ಯವಿದೆ.

ಮುಖ್ಯವಾಗಿ ಮುಖ್ಯಮಂತ್ರಿಿಯಾದವ ‘ತಾನು’ ಎಂಬುದರ ಬದಲಾಗಿ ‘ತಾವು’ ಎಂಬ ಪದಪ್ರಯೋಗವನ್ನು ಮಾಡಬೇಕು. ತನ್ನ ಅಧಿಕಾರದ ವ್ಯಾಾಪ್ತಿಿ, ಸಾಮರ್ಥ್ಯ, ಪ್ರಭಾವದ ಬಗ್ಗೆೆಯೇ ಸದಾ ಯೋಚಿಸುತ್ತಾಾ ಆ ದಿಸೆಯಲ್ಲೇ ಕೆಲಸ ಮಾಡುವ ಮುಖ್ಯಮಂತ್ರಿಿಗೆ ಅಹಂ, ದರ್ಪ, ದವಲತ್ತುಗಳು ಅಡರಿಕೊಳ್ಳುತ್ತಾಾ ಹೋಗುತ್ತವೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿಿಗಳನ್ನು ಒಮ್ಮೆೆ ಅವಲೋಕಿಸಿ. ಇಂದಿನ ಮುಖ್ಯಮಂತ್ರಿಿಯನ್ನೂ ಒಮ್ಮೆೆ ನೋಡಿ. ಕೇವಲ ಮುಖ್ಯಮಂತ್ರಿಿ ಎಂಬ ಲಕ್ಷ್ಯವನ್ನಿಿರಿಸಿ ನಾನು ಈ ಮಾತುಗಳನ್ನು ಹೇಳುತ್ತಿಿಲ್ಲ.

ಸರ್ವೇ ಸಾಮಾನ್ಯವಾಗಿ ಎಲ್ಲ ಮುಖ್ಯಮಂತ್ರಿಿಗಳೂ ಗೊತ್ತಿಿದ್ದೋ ಗೊತ್ತಿಿಲ್ಲದೆಯೋ ಹೀರೋ ಆಗಲು ಬಯಸುತ್ತಾಾರೆ. ಇಲ್ಲ ಅಧಿಕಾರ ಸಿಕ್ಕ ಕ್ಷಣದಿಂದ ತಾನು ಹೀರೋ ಅಂತೆಲೇ ಭಾವಿಸಿ ಬಿಡುತ್ತಾಾರೆ. ಒಬ್ಬ ಯಃಕಶ್ಚಿಿತ್ ಗ್ರಾಾಮ ಪಂಚಾಯತ್ ಸದಸ್ಯನಾದವನೇ ಇಡೀ ಊರಿಗೆ ತಾನೇ ಹೀರೋ ಎಂಬಂತೆ ಪೊಗರು, ದೌಲತ್ತು ಮೆರೆಯುವಾಗ ಇನ್ನು ಮುಖ್ಯಮಂತ್ರಿಯಾದವನು ಹಾಗೆ ವರ್ತಿಸುವುದರಲ್ಲಿ ಯಾವ ತಪ್ಪೂೂ ಇಲ್ಲ ಅಂತಲೇ ಅನಿಸುವುದು ಸಹಜ. ಆದರೆ, ಹೀರೋಯಿಸಂ ನಾಯಕತ್ವವನ್ನು ಬೆಳೆಸುವುದಿಲ್ಲ. ಅದು ಬಾಸಿಸಂ ಗುಣವನ್ನು ಶೋಷಣೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಆಡಳಿತದ ಪ್ರತಿಯೊಂದು ಹಂತದಲ್ಲೂ ಮುಖ್ಯಮಂತ್ರಿಿಗಳು ಪ್ರವೇಶ ಮಾಡುವುದು ಅಥವಾ ಮೂಗು ತೂರಿಸುವುದು ಸೂಕ್ತ ತಂತ್ರಗಾರಿಕೆಯಲ್ಲ.

ಆಡಳಿತ ಪಕ್ಷದಲ್ಲಿ ಇರುವವರನ್ನು ವಿಮರ್ಶೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸಹಜವಾದ ಕ್ರಿಿಯೆ. ಪ್ರತಿಯೊಂದು ವಿಮರ್ಶೆಗೆ ಮುಖ್ಯಮಂತ್ರಿ ಪ್ರತಿಕ್ರಿಿಯಿಸದೇ ತನ್ನ ಮಂತ್ರಿಗಳಿಗೆ, ಪಕ್ಷದ ವಕ್ತಾಾರರಿಗೆ ಬಿಡಬೇಕಾಗುತ್ತದೆ. ಯಾವುದೂ ಇತ್ಯರ್ಥವಾಗದೇ ಹೋದ ಸಂದರ್ಭ ಬಂದಾಗ ಕೊನೆಯ ಹಂತದಲ್ಲಿ ಫೀಲ್ಡಿಗಿಳಿದರೆ ಮಾತ್ರ ಮುಖ್ಯಮಂತ್ರಿ ವರ್ಚಸ್ಸಿಿಗೊಂದು ಮೌಲ್ಯ ಬರುವುದು. ಅಲ್ಲಿಯವರೆಗೆ ಮುಖ್ಯಮಂತ್ರಿ ತಮ್ಮ ಪಾಡಿಗೆ ತಾನು ಅಭಿವೃದ್ಧಿಿ ಕಾರ್ಯದಲ್ಲಿ ತಲ್ಲೀನರಾಗಿ ಮುನ್ನುಗ್ಗಬೇಕು. ಹೀರೋ ಆದವನು ತೆರೆಯ ಮೇಲೆ ಸಂಪೂರ್ಣವಾಗಿ ತಾನೇ ವಿರಾಜಿಸುತ್ತಿರಬೇಕು ಎಂಬ ಮನೋವಾಂಛೆಯಲ್ಲಿ ಇರುತ್ತಾಾನೆ. ಆದರೆ, ನಾಯಕ ಈ ವಾಂಛೆಯಿಂದ ಮುಕ್ತನಾಗಿರುತ್ತಾಾನೆ. ಈ ಬಗೆಯ ಮನೋವಾಂಛೆಯೆಂಬುದು ಮುಖ್ಯಮಂತ್ರಿಿಯ ಬಗ್ಗೆೆ ಜನರು ಇಟ್ಟಿರಬಹುದಾದ ಭರವಸೆಯನ್ನು ಗಟ್ಟಿಗೊಳಿಸುತ್ತದೆ.

ಇಂಥ ಭರವಸೆಗಳೇ ಜನರಲ್ಲಿ ಮನಃಪೂರ್ವಕವಾಗಿ ಮುಖ್ಯಮಂತ್ರಿಯನ್ನು ಸ್ವೀಕರಿಸುವಂತೆ ಮಾಡುತ್ತದೆ. ಅದು ಕಷ್ಟಕಾಲದಲ್ಲಿ ಮುಖ್ಯಮಂತ್ರಿಗಳ ಬೆಂಬಲಕ್ಕೆೆ ನಿಲ್ಲುತ್ತದೆ. ಉದಾಃ ಕಾವೇರಿ, ಮಹದಾಯಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿಿ ಜನನಾಯಕನಾಗಿ ಹೇಳಿಕೆಯನ್ನು ಕೊಡಬೇಕು. ಜನರ ಭಾವನೆಗಳಿಗೆ ಬದ್ಧನಾಗಿ ನಿಲ್ಲಬೇಕು. ತನ್ನ ಸಂಪುಟದವರನ್ನು ಜನಧ್ವನಿಯಾಗಿ ನಿಲ್ಲಲು ಪ್ರೇರಣೆಯನ್ನು ನೀಡಬೇಕು. ಹಾಗಂತ ಕೇವಲ ಹೇಳಿಕೆಯನ್ನು ನೀಡುವುದಕ್ಕೆೆ ಮಾತ್ರ ಕಮಿಟೆಡ್ ಆಗದೇ ತನ್ನ ನಡೆಯಲ್ಲಿ ಅದನ್ನು ಅಭಿವ್ಯಕ್ತಿಿಸಬೇಕು. ಕಾರ್ಯಶೀಲನಾಗಬೇಕು.

ಇನ್ನೊೊಂದು, ನೆರೆ ಸಂತ್ರಸ್ತರ ಪರ ಒಲವನ್ನು ಕೇವಲ ಮಾತಿನಲ್ಲಿ ಅಭಿವ್ಯಕ್ತಿಸದೆ ಅವರನ್ನು ಕಷ್ಟದಿಂದ ಪಾರು ಮಾಡುವ ಪ್ರಯತ್ನದಲ್ಲಿ ನಿಜವಾಗಿ ಮುಟ್ಟಬೇಕು. ಅಂಕಿ ಅಂಶಗಳ ಸಹಿತ ವಿಪಕ್ಷಗಳಿಗೆ ಉತ್ತರಿಸಬೇಕು. ಇಲ್ಲೂ ಕೂಡ ವಿಪಕ್ಷಗಳ ಎಲ್ಲ ಟೀಕೆಗಳಿಗೂ ಮುಖ್ಯಮಂತ್ರಿ ಉತ್ತರಿಸಲು ಮುಂದಾಗಬಾರದು. ಉದಾ: ನೆರೆ ಸಂತ್ರಸ್ತರ ವಿಚಾರದಲ್ಲಿ ವಾಸ್ತವ ಬೇರೆಯೇ ಇದೆಯೆಂದು ವಿಪಕ್ಷ ನಾಯಕರು ಆಕ್ಷೇಪಿಸುವುದಕ್ಕೆೆ ಪ್ರತಿಯಾಗಿ ಅಂಕಿ ಅಂಶಗಳ ಸಹಿತ ಮುಖ್ಯಮಂತ್ರಿಗಳು ಉತ್ತರಿಸುವಾಗ ಮಾನಸಿಕ ಸ್ಥಿಿಮಿತವನ್ನು ಕಳೆದುಕೊಳ್ಳಬಾರದು. ಒಂದು ವೇಳೆ, ಅವರ ಆಕ್ಷೇಪದಲ್ಲಿ ಮಿಥ್ಯಾಾಂಶ ಇದೆಯೆಂಬುದು ತನಗೆ ಗೊತ್ತಾಾದ ತಕ್ಷಣ ಅದರ ಬಗ್ಗೆೆ ತಲೆಬಿಸಿ ಮಾಡಿಕೊಳ್ಳದೆ ಮುಖ್ಯಮಂತ್ರಿ ತನ್ನ ಕಾರ್ಯದಲ್ಲಿ ಮಗ್ನರಾಗಬೇಕು. ಆ ಮೂಲಕ ತನ್ನ ಮೇಲಿನ ಆಕ್ಷೇಪಗಳನ್ನು ನಿರರ್ಥಗೊಳಿಸಬೇಕು. ಅದನ್ನು ಬಿಟ್ಟು ಸಾರ್ವಜನಿಕ ವೇದಿಕೆಗಳಲ್ಲಿ ಅಂಥ ಆಕ್ಷೇಪಗಳಿಗೆ ಉತ್ತರವನ್ನು ನೀಡುವುದು ಸೂಕ್ತವೂ ಅಲ್ಲ, ಸಮರ್ಪಕವೂ ಅಲ್ಲ.

ಯಡಿಯೂರಪ್ಪನವರು ಮಾತನಾಡಿದ್ದಾರೆಂಬ ಆಡಿಯೋವೊಂದನ್ನು (ಈ ಹಿಂದೆಯೂ ಅವರ ಮೇಲೆ ಇಂಥ ಆರೋಪ ಬಂದಿತ್ತು.) ಯಾವ ರಾಜಕಾರಣಿ ಸುಳ್ಳನ್ನು ಹೇಳುವುದಿಲ್ಲ ಹೇಳಿ. ಹಾಗೇ ಯಡಿಯೂರಪ್ಪ ಕೂಡ. ಮನುಷ್ಯ ಬದುಕಿನ ಎಲ್ಲಾ ನೈತಿಕತೆಯನ್ನು ಬಟ್ಟಬಯಲಲ್ಲೇ ಬೆತ್ತಲಾಗಿಸಿಕೊಂಡ ರಾಜಕಾರಣಿಯನ್ನೂ, ತನ್ನ ಅಸ್ತಿಿತ್ವಕ್ಕಾಾಗಿ ದೇಶವನ್ನೇ ಕರಾಳಕೂಪಕ್ಕೆೆ ತಳ್ಳಿಿದ ರಾಜಕಾರಣಿಯನ್ನೂ, ತನಗೇ ಲೆಕ್ಕಕ್ಕೆೆ ಸಿಗದಷ್ಟು ಹಗರಣಗಳನ್ನು ನ್ಯಾಾಯಾಲಯದಲ್ಲಿ ಹೊಂದಿರುವ ರಾಜಕಾರಣಿಯನ್ನೂ, ತನ್ನ ಉಳಿವಿಗಾಗಿ ತನ್ನವರನ್ನೇ ಬಲಿಕೊಟ್ಟ ರಾಜಕಾರಣಿಯನ್ನೂ ಈ ದೇಶ ನೋಡಿದೆ. ರಾಜಕಾರಣದಲ್ಲಿ ಇಂಥದ್ದು ಇನ್ನೂ ಸಂಭವಿಸಲಿಲ್ಲವೆಂದು ಹೇಳುವುದಕ್ಕೆೆ ಯಾವುದೂ ಇಲ್ಲ.

ಎಲ್ಲವನ್ನೂ ಮಾಡಿಮುಗಿಸಿದ ಕೀರ್ತಿ ರಾಜಕಾರಣಿಗಳದ್ದು. ವಿಧಾನ ಸೌಧ ಮತ್ತು ಸಂಸತ್ತು ಭವನದ ಘನತೆ, ಗೌರವವನ್ನರಿಯದೆ ಅಲ್ಲಿ ಗೂಂಡಾಗಳು, ಲೂಟಿಕೋರರು ಹೋಗಿ ಕುಳಿತುಕೊಂಡಿದ್ದನ್ನು ನೋಡುತ್ತಿಿರುವ ಕಾಲದಲ್ಲಿ ನಾವಿದ್ದೇವೆಂದು ರಾಮ್ ಜೇಠ್ಮಲಾನಿ ಹೇಳಿದ್ದರು. ರೇಪ್, ಕೊಲೆ, ಲೂಟಿಯಂಥ ದೊಡ್ಡದೊಡ್ಡ ಭ್ರಷ್ಟಾಾಚಾರಗಳನ್ನೇ ದಪ್ಪಗೆ ಹಾಸಿ ಮೈತುಂಬಾ ಹೊದ್ದುಕೊಂಡು ಮಲಗಿರುವ ರಾಜಕಾರಣಿಗಳ ಮುಂದೆ ಯಡಿಯೂರಪ್ಪನವರ ಈ ಸಣ್ಣ ತಪ್ಪುು ಏನೂ ಅಲ್ಲ, ಯಾವುದಕ್ಕೂ ಸಲ್ಲ. ಮೇಲಾಗಿ ಅವರ ಈ ತಪ್ಪುು ಅವರದ್ದಂತೂ ಅಲ್ಲವೇ ಅಲ್ಲ. ಅವರದ್ದು ಮಾತ್ರವೆಂಬಂತೆ ಕಾಣಲಾಗದು, ಕಾಣಕೂಡದು. ಅಷ್ಟಕ್ಕೂ ತಾನೇ ಮಾತಾಡಿದ್ದು ಅಂತ ಅವರದನ್ನು ಒಪ್ಪಿಿಕೊಂಡ ಮೇಲೆ ಮುಗಿಯಿತಲ್ಲ) ಬಹಿರಂಗ ಮಾಡಿದ ಕಾಂಗ್ರೆೆಸ್ ಅದನ್ನೇ ಉಪಚುನಾವಣೆಯಲ್ಲಿ ಅಸ್ತ್ರವನ್ನಾಾಗಿ ಬಳಸಲು, ಸರ್ವೋಚ್ಚ ನ್ಯಾಾಯಾಲಯದ ಮೆಟ್ಟಿಲೇರಲು, ರಾಷ್ಟ್ರಪತಿಗೆ ದೂರು ನೀಡಲು ಮುಂದಾಗಿದೆ.

ಯಡಿಯೂರಪ್ಪನವರು ಈ ವಿಚಾರವಾಗಿ ಮೌನವಾಗಿ ಇದ್ದುಕೊಂಡೇ ಸಂತ್ರಸ್ತರಿಗೆ ನೆಲೆಯನ್ನು ಒದಗಿಸುವಲ್ಲೇ , ಅಭಿವೃದ್ಧಿಿಪರ ಚಿಂತನೆಯಲ್ಲೇ ಮಗ್ನರಾದರೆ, ಇಂಥ ಯಾವ ಅಸ್ತ್ರವೂ ಯಾವ ರೀತಿಯಲ್ಲೂ ಬಾಧಿಸಲಾರದು. ಒಂದು ಸುಳ್ಳನ್ನು ನೂರಾರು ಬಾರಿ ಹೇಳುತ್ತಾಾ ಅದನ್ನೇ ಸತ್ಯ ಮಾಡಬಹುದು, ಸಮರ್ಥಿಸಲೂ ಬಹುದು. ಆದರೆ, ಮುಖ್ಯಮಂತ್ರಿಯಾದವ ಅಂಥ ಸತ್ಯದ ಮುಖದ ಸುಳ್ಳನ್ನು ಸಾರ್ವಜನಿಕವಾಗಿ ಅಲ್ಲಗಳೆಯಲು ಸರಿಯಾದ ಮಾರ್ಗವನ್ನೇ ಕ್ರಮಿಸಬೇಕಾಗುತ್ತದೆ. ಕಾಲಕ್ಕೆೆ ಕಾಯಬೇಕಾಗುತ್ತದೆ. ಅದಕ್ಕೆೆ ಮುಖ್ಯವಾಗಿ ತಾಳ್ಮೆೆ, ವಿವೇಕ, ವಿವೇಚನೆ ಮುಖ್ಯವಾಗಿ ಬೇಕಾಗುತ್ತದೆ. ಒಮ್ಮೆೆಲೇ ಆವೇಶಭರಿತವಾಗಿ ಆಕ್ರೋೋಶವನ್ನು ಹೊರಹಾಕುವುದು ಸಮರ್ಪಕವೂ ಅಲ್ಲ, ಸೂಕ್ತವೂ ಅಲ್ಲ, ಸರಿಯೂ ಅಲ್ಲ.

ಬಹುಸಮಯದ ಅನಂತರ ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರು ಟಿವಿ ಚಾನೆಲ್‌ಗಳಿಗೆ ನೀಡಿದ ಸಂದರ್ಶನಗಳಲ್ಲಿ ಈ ಬಗೆಯ ತಾಳ್ಮೆೆ, ವಿವೇಕ, ವಿವೇಚನೆಯಿಂದ ಮಾತಾಡಿದ್ದನ್ನು ಜನತೆ ನೋಡಿತು. ರಾಷ್ಟ್ರ ರಾಜಕಾರಣ, ನೂರು ದಿನಗಳ ಆಡಳಿತ ಬಗ್ಗೆೆ, ನೆರೆ ಪರಿಹಾರ, ಟಿಪ್ಪುು ಜಯಂತಿ, ಪಠ್ಯದಿಂದ ಟಿಪ್ಪುು ಬೇರ್ಪಡಿಸುವುದು.
ಇಂಥ ಹಲವು ಪ್ರಮುಖ ಮಹತ್ತ್ವದ ವಿಚಾರಗಳ ಬಗ್ಗೆೆ ಅವರನ್ನು ಆ ಸಂದರ್ಶನದಲ್ಲಿ ಕೇಳಲಾಗಿತ್ತು ಟಿಪ್ಪುು ವಿಚಾರವನ್ನು ಪಠ್ಯದಿಂದ ತೆಗೆಯುವ ಬಗ್ಗೆೆ ಶಿಕ್ಷಣ ಸಚಿವರು ಚರ್ಚೆ ಮಾಡಿ ತಗೊಳ್ಳುತ್ತಾರೆಂದು ನೇರವಾಗಿ ಉತ್ತರವನ್ನು ನೀಡಿದ್ದು ಸ್ಥಾಾನೋಚಿತವಾಗಿಯೂ, ಸಮಯೋಚಿತವಾಗಿಯೂ ಕಂಡಿತು.

ಬಿಜೆಪಿಯ ಸೈದ್ಧಾಾಂತಿಕತೆಯ ಹಿನ್ನೆೆಲೆಯಲ್ಲಿ ತನ್ನ ವೈಚಾರಿಕತೆಯ ವ್ಯಾಪ್ತಿಯಲ್ಲಿ ಯಡಿಯೂರಪ್ಪನವರು ಉತ್ತರಿಸಲು ಮುಂದಾಗಲಿಲ್ಲ ಎಂಬ ಸೂಕ್ಷ್ಮತೆ ಉತ್ತಮ ನಾಯಕತ್ವದ ಲಕ್ಷಣ. ಇದು ಅನುಕರಣೀಯ, ಅನುಸರಣೀಯ. ಇದೇ ಕ್ರಮದಲ್ಲಿ ಯಡಿಯೂರಪ್ಪನವರು ಮುಂದಾದರೆ ಅಂದುಕೊಂಡದ್ದನ್ನು ಸಾಧಿಸಬಹುದು. ಹೇಗಿದ್ದರೂ ಕೇಂದ್ರದಲ್ಲಿ ಇವರದೇ ಪಕ್ಷದ ಸರಕಾರ ಇದ್ದಿರುವುದರಿಂದ ಹಣಕಾಸಿಗೆ ಸಂಬಂಧಿಸಿ ಅಂಥಾ ಅಡ್ಡಿ ಆತಂಕಗಳೇನೂ ಕಾಡಲಾರದು. ಎಲ್ಲರ ವಿಶ್ವಾಾಸದೊಂದಿಗೆ ಯಡಿಯೂರಪ್ಪನವರು ನಾಯಕನಾಗಿ ಪ್ರವೃತ್ತರಾಗಬೇಕು.

ಈ ಸರಕಾರ ಅಸ್ತಿಿತ್ವಕ್ಕೆೆ ಬಂದು ನೂರು ದಿನಗಳಾಯಿತು. ನೂರು ದಿನಗಳ ತಮ್ಮ ಸಾಧನೆಯನ್ನು ಸರಕಾರವೊಂದು ಹೇಳಿಕೊಳ್ಳುವುದು ಸಹಜವಾಗಿ ಇದ್ದೇ ಇರುತ್ತದೆ. ಆದರೆ, ಅಷ್ಟಕ್ಕೇ ಎಲ್ಲವೂ ಮುಗಿಯುವುದಿಲ್ಲ. ಪ್ರತಿ ಚುನಾವಣೆಯಲ್ಲೂ ಪ್ರತಿ ಪಕ್ಷಗಳೂ ಕೂಡ ಅಭಿವೃದ್ಧಿಿಯ ಮಾತನ್ನೇ ಆಡುತ್ತವೆ ಎಂಬುದರ ಅರ್ಥವಾದರೂ ಏನು? ಸಮ್ಮಿಿಶ್ರ ಸರಕಾರವನ್ನು ಉರುಳಿಸಿದ ಆರೋಪವನ್ನು ಹೊತ್ತ ಯಡಿಯೂರಪ್ಪನವರನ್ನು ಕಾಂಗ್ರೆೆಸ್ ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಈ ಸರಕಾರದ ಬಗ್ಗೆೆ ಮಾಡಿದ ಟೀಕೆಗಳಿಗೇನೂ ಕಡಿಮೆಯಿಲ್ಲ. ಅಧಿಕಾರ ಹಿಡಿದ ಆರಂಭದಲ್ಲಿ ತನ್ನದು ತಂತಿಯ ಮೇಲಿನ ನಡಿಗೆಯೆಂದು ಯಡಿಯೂರಪ್ಪ ಹೇಳಿದ್ದರು. ಪಕ್ಷದೊಳಗಿನ ವಿಚಾರಗಳನ್ನು ಆ ಪಕ್ಷವೇ ಸರಿದೂಗಿಸಿಕೊಳ್ಳಬೇಕು. ಬಿಜೆಪಿ ಬಿಜೆಪಿ ಮಾಡಿತು. ಆದರೆ, ಆ ಸಂದರ್ಭ ಮತ್ತು ಸನ್ನಿವೇಶ ಕಾಂಗ್ರೆೆಸ್ಸಿಗೆ ರಾಜಕೀಯ ದಾಳವಾಗಿ ಪ್ರತೀಕಾರವನ್ನು ತೀರಿಸಲು ಮುಯ್ಯಿಿಗೆ ಮುಯ್ಯಿಿ ಎಂಬ ತೆರದಲ್ಲಿ ಆಯುಧವಾಯಿತು.

ನೆರೆ ಸಂತ್ರಸ್ತರ ಪರ ದನಿಯೆತ್ತಲು ಸುಸಂದರ್ಭವನ್ನು ಒದಗಿಸಿತು. ಎಲ್ಲರೂ ಬಾಯಿಗೆ ಬಂದಂತೆ ಮಾತಾಡಿಕೊಳ್ಳುವ ಹೊತ್ತಲ್ಲಿ ಸ್ವಲ್ಪ ಧೃತಿಗೆಟ್ಟಂತೆ ಕಂಡರೂ, ಕೇಂದ್ರದಿಂದ ತುರ್ತು ಪರಿಹಾರ ಇನ್ನೂ ಘೋಷಣೆಯಾಗದ, ಜಿಲ್ಲೆಗಳಿಗೆ ಉಸ್ತುವಾರಿ ನೇಮಕವಾಗಿರದ ಸಂದರ್ಭದಲ್ಲಿ ಯಡಿಯೂರಪ್ಪ ನಾಯಕನಾಗಿ ನಿಂತು ವ್ಯವಹರಿಸಿದ ರೀತಿ ಇದೆಯಲ್ಲ ಅದು ಅವರೊಳಗಿನ ನಿಜ ನಾಯಕತ್ವದ ಗುಣ ಮತ್ತು ಸ್ವಭಾವವನ್ನು ಪ್ರಚುರಪಡಿಸಿತ್ತು.

ಹೌದು ಯಡಿಯೂರಪ್ಪ ಮೊದಲಿನಂತಿಲ್ಲ. ಅವರಿಗೆ ಗೊತ್ತು:
ಈಗ ತಾನು ಮೊದಲಿನಂತೆಯೂ ಇಲ್ಲ. ಮೊದಲಿನ ಹಾಗೂ ಇಲ್ಲ. ಕಾಲವೂ ಬದಲಾಗಿದೆ. ಜನ ಚಿಂತನೆಯ ರೀತಿಯೂ ಬದಲಾಗಿದೆ. ಆದರೂ ಅವರನ್ನು ಬಿಡದ ಹೀರೋ ವರ್ಷಿಪ್ ಅವರನ್ನು ಇಲ್ಲದ ತೀರಕ್ಕೆೆ ಕೊಂಡೊಯ್ದು ಬಿಡುತ್ತದೆ ಎಂಬ ಭಯ ನನ್ನಂಥವರಿಗೆ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಅವರೇ ಅಚ್ಚರಿ ಪಡುವಂಥ ಬದಲಾವಣೆಗಳು ಅವರಿಗೆ ಕಾಣುತ್ತಿರಬಹುದು ಎಂದು ನನಗನಿಸಲು ಕಾರಣವೇನೆಂದರೆ, ಹಿಂದೆ ಜೆಡಿಎಸ್‌ನೊಂದಿಗೆ ಮೈತ್ರಿಯಾಗಿ ಸರಕಾರ ರಚಿಸಿ ಆಮೇಲೆ ಮೋಸ ಹೋದದ್ದನ್ನು ಜೀವನದುದ್ದಕ್ಕೂ ಅವರು ಮರೆಯಲಿಕ್ಕಿಿಲ್ಲ. ರಾಜ್ಯದ ಜನತೆಗಂತೂ ಮರೆಯುವುದೇ ಇಲ್ಲ. ಅಂದಿನಿಂದ ವಚನ ಭ್ರಷ್ಟ ಆರೋಪದಿಂದ ಅಪ್ಪ ಮಕ್ಕಳ ಪಕ್ಷಕ್ಕೆೆ ಇನ್ನೂ ಮುಕ್ತಿ ಸಿಗಲಿಲ್ಲ.

ಆಮೇಲೆ ಸ್ವಂತ ಬಲದಿಂದ ಅಧಿಕಾರಕ್ಕೆೆ ಬಂದು ಸಿಎಂ ಆಗಿ ಮೂರೂವರೆ ವರ್ಷಕ್ಕೇ ಜೈಲಿಗೆ ಹೋಗಿ ಬಂದದ್ದನ್ನು ಜೀವಮಾನ ಪರ್ಯಂತ ಯಡಿಯೂರಪ್ಪನವರಿಗೆ ಮರೆಯಲಾರರು! ಆ ಮೂರೂವರೆ ವರ್ಷದ ಅನುಭವ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳು, ವರ್ತಮಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ತನ್ನ ಬಾಹುಗಳನ್ನು ವಿಸ್ತರಿಸಿಕೊಂಡ ಪರಿ, ಮೊದಲಿನವರು ಯಾರೂ ಇಲ್ಲದ ಹೈಕಮಾಂಡ್, ರಾಜ್ಯ ಕಾಂಗ್ರೆೆಸ್‌ನಲ್ಲಿ ಭರ್ತಿ ಐದು ವರ್ಷ ಮುಖ್ಯಮಂತ್ರಿಿಯಾಗಿ ಅಧಿಕಾರ ಮುಗಿಸಿದ ಸಿದ್ದರಾಮಯ್ಯ ಪ್ರವರ್ಧಮಾನಕ್ಕೆೆ ಬಂದ ರೀತಿ, ಕಾಂಗ್ರೆೆಸ್ ಜೆಡಿಎಸ್‌ನೊಂದಿಗೆ ಸೇರಿ ಒಂದೂವರೆ ವರ್ಷ ಆಡಳಿತ ಮಾಡಿದ್ದು, ಆ ಸರಕಾರವನ್ನು ಬೀಳಿಸಿದ ಆರೋಪವನ್ನು ಹೆಗಲಿಗೇರಿಸಿಕೊಂಡು ಈಗ ಬೀಳುತ್ತೋೋ ಇನ್ನೊೊಂದು ಗಳಿಗೆಯಲ್ಲಿ ಬೀಳುತ್ತೋೋ ಎಂಬ ಡೋಲಾಯಮಾನ ಸ್ಥಿತಿಯಲ್ಲೂ ಮುಖ್ಯಮಂತ್ರಿಯಾಗಿ ದಕ್ಷತೆಯನ್ನು ಮೆರೆದ ಯಡಿಯೂರಪ್ಪರನ್ನು ಹತ್ತು ಸಿದ್ದರಾಮಯ್ಯರು ಬಂದರೂ ಏನೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬುದು!

ಈಗ ಯಡಿಯೂರಪ್ಪರ ಸಂಪುಟದ ಸಚಿವರು ಸಿಕ್ಕ ಅವಧಿಯಲ್ಲೇ ಮೈಮುರಿದು ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಉಪಚುನಾವಣೆಯ ಬಿಸಿಯೂ ಯಡಿಯೂರಪ್ಪರನ್ನು ಬಿಡದೆ ಕಾಡುತ್ತಿಿದೆ! ಹೋದ ಹೋದ ಕಡೆಯೆಲ್ಲೆಲ್ಲಾ ಸರಕಾರದ ಬಗ್ಗೆೆ ಬಾಯಿಗೆ ಬಂದಂತೆ ಆಡಿಕೊಳ್ಳುವ ವಿಪಕ್ಷದವರ ಎದುರು ಯಡಿಯೂರಪ್ಪರಿಗೆ ಅವರ ರಾಜಕೀಯ ಜೀವನ ಸಂಧ್ಯೆೆಯಲ್ಲಿ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದು ಸುಳ್ಳಲ್ಲ.

ಮೊದಲಿನಂಥ ಆವೇಶ ಆಕ್ರೋೋಶಗಳಿಲ್ಲದೆ ವಿವೇಕಚಿತ್ತರಾಗಿ ಯಡಿಯೂರಪ್ಪ ಮುಂದುವರೆದಿದ್ದೇ ಆದರೆ, ಈ ಅವಧಿಯನ್ನು ಪೂರ್ಣಗೊಳಿಸುವುದು ಶತಸಿದ್ಧ. ನಾಯಕನಾದವನು ತನ್ನ ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾಾನೆ. ಯಡಿಯೂರಪ್ಪನವರು ಮನುಷ್ಯರೇ! ಅವರಲ್ಲೂ ವಯೋಸಹಜ ದೌರ್ಬಲ್ಯಗಳಿಲ್ಲದೆ ಇಲ್ಲ. ಮನುಷ್ಯ ಸಹಜವಾದ ದೌರ್ಬಲ್ಯವನ್ನು ಮೆಟ್ಟಿನಿಂತು ಈ ಅವಧಿಯಲ್ಲಿ ರಾಜ್ಯ ಜನತೆಯ ನೆನಪು ಎಂದೂ ಮಾಸದಂಥ ಆಡಳಿತವನ್ನು ನೀಡಲು ಕಾಯಾ ವಾಚಾ ಮನಸಾ ಅವರು ಪ್ರಯತ್ನಿಸಿದ್ದೇ ಆದರೆ, ರಾಜ್ಯದಲ್ಲಿ ಬಿಜೆಪಿಯನ್ನು ಎದುರಿಸಿ ಯಾವ ಪಕ್ಷವೂ ಅಧಿಕಾರಕ್ಕೆೆ ಬರುವುದು ಕನಸಾದೀತು! ಮುಖ್ಯವಾಗಿ ಜಾತಿ-ಮತ-ಧರ್ಮಾತೀತವಾಗಿ ಯೋಚಿಸುವುದಕ್ಕೆೆ ಅವರು ಮುಂದಾಗಬೇಕು. ಭ್ರಷ್ಟಾಾಚಾರಕ್ಕೆೆ ಅವಕಾಶಕ್ಕೀಯದೆ ಪ್ರಾಾಮಾಣಿಕವಾಗಿ ತಾವೇ ಅಧಿಕಾರ ನಡೆಸಬೇಕು.

ತನ್ನ ಸುತ್ತಲೂ ಬಂಧು ಬಾಂಧವರನ್ನು ಸುಳಿಯಲು ಬಿಡಬಾರದು. ಜಾತೀಯತೆ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಸ್ವಪ್ರತಿಷ್ಠೆೆ ಇವೆಲ್ಲ ರಾಜಕೀಯದಲ್ಲಿ ಸಹಜವೇ. ಅದನ್ನೆೆಲ್ಲಾ ಹ್ಯಾಾಂಡಲ್ ಮಾಡುವುದನ್ನು ಯಡಿಯೂರಪ್ಪನವರಿಗೆ ಈ ಅವಧಿ ತೆರೆದುಕೊಟ್ಟ ಅವಕಾಶದಂತೆ ಒಲಿದಿದೆ. ಕರ್ನಾಟಕದ ರಾಜಕೀಯ ಇತಿಹಾಸಲ್ಲಿ ಅಚ್ಚಳಿಯದ ನಾಯಕನಾಗಿ ಹೊರಹೊಮ್ಮಲು ಈಗ ಒದಗಿ ಬಂದಿರುವ ಅವಕಾಶ ನ ಭೂತೋ ನ ಭವಿಷ್ಯತಿ ಎಂಬಂತಿದೆ. ಅವರು ಆ ದಿಸೆಯಲ್ಲಿ ಅಡಿಯಿಟ್ಟರೆ ರಾಜ್ಯ ಎಂದೂ ಮರೆಯದ ಮುಖ್ಯಮಂತ್ರಿಿಯಾಗಿ ಅವರು ಹೊರಹೊಮ್ಮುವ ಎಲ್ಲ ಸಾಧ್ಯತೆಗಳು ಸದ್ಯಕ್ಕಿಿವೆ.

ಕೊನೆಯ ಮಾತು: ಒಬ್ಬ ದಕ್ಷ ನಾಯಕನಿಗಾಗಿ ರಾಜ್ಯ ಬಹು ವರ್ಷಗಳಿಂದ ಕಾಯುತ್ತಲೇ ಇದೆ. ಅಂಥ ನಾಯಕನು ಜನ ನಾಯಕನಾಗಬೇಕೇ ಹೊರತು ಹೀರೋ ಅಲ್ಲ. ಯಾಕೆಂದರೆ ಎಲ್ಲ ಪಕ್ಷದಲ್ಲೂ ಹೀರೋಗಳಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ಹೀರೋ ಆಗಿ ಮೆರೆಸುವ ಕಾಲದಲ್ಲಿ ನಾವಿದ್ದೇವಲ್ಲ, ಇದು ದೊಡ್ಡ ದುರಂತ ಎಂದಿದ್ದರು ಸಂತೋಷ ಹೆಗ್ಡೆೆಯವರು ಮೊನ್ನೆೆ ಮೊನ್ನೆೆ! ಯಡಿಯೂರಪ್ಪರನ್ನು ರಾಜಾ ಹುಲಿ ಎಂದೂ, ಸಿದ್ದರಾಮಯ್ಯರನ್ನು ಟಗರು ಎಂದೂ, ಡಿಕೆಶಿಯನ್ನು ಬಂಡೆಯೆಂದೂ ಕರೆಯಲಾಗುತ್ತದೆ.

ಅಂದರೆ ಇವರ್ಯಾರೂ ಮನುಷ್ಯರಲ್ಲವೆ? ಪ್ರಾಾಣಿಗಳಿಗೆ ಹೋಲಿಸಿ ಇವುರುಗಳ ಸ್ವಭಾವವೂ ಅವುಗಳಂತೇ ಆಗಿಬಿಟ್ಟಿಿದೆಯೆಂದೋ ಅಥವಾ ಆ ಪ್ರಾಣಿಯ ಸ್ವಭಾವವನ್ನು ಉಳ್ಳವರೆಂದೋ ಹಾಗೆ ಕಾಣುವುದೇ ದೊಡ್ಡ ತಪ್ಪುು. ಕೊನೆಯ ಪಕ್ಷ ವ್ಯಕ್ತಿಿ ಘನತೆಯ ಪ್ರಜ್ಞೆಯಾದರೂ ಬೇಡವೆ? ಜನನಾಯಕನಾಗಬೇಕಾದ ಜನಪ್ರತಿನಿಧಿಯೊಬ್ಬ ಹೀಗೆ ಪ್ರಾಾಣಿ, ಮರ, ಕಲ್ಲು, ಗಿಡಗಳಿಗೆ ಹೋಲಿಕೆಯಾಗಿ ಹೀರೋ ಆದರೆ, ಅವರಿಂದ ನಾವು ಬಯಸುವುದಾದರೂ ಏನನ್ನು? ನಮ್ಮಿಿಂದ ಆರಿಸಿಹೋದ ಜನಪ್ರತಿನಿಧಿಯನ್ನು ಹೊಗಳುವುದಕ್ಕಾಾಗಲೀ, ತೆಗಳುವುದಕ್ಕಾಾಗಲೀ ಮನುಷ್ಯ ಸಹಜ ಪದಗಳನ್ನೇ ಬಳಸಬೇಕು. ಅಷ್ಟಕ್ಕೂ ಮುಖ್ಯಮಂತ್ರಿಿ ಯಡಿಯೂರಪ್ಪ ರಾಜ್ಯದ ಜನನಾಯಕರೇ ಹೊರತು ಹೀರೋ ಅಲ್ಲ!

Leave a Reply

Your email address will not be published. Required fields are marked *