Friday, 20th September 2024

ಸಾವಯವದಲ್ಲಿ ಸತ್ತು ಹೋಯಿತೆ ಲಂಕಾದ ಕೃಷಿ ?!

ಸುಪ್ತ ಸಾಗರ

rkbhadti@gmail.com

ದೇಶೀ ಸಾವಯವ ಕೃಷಿ ಪದ್ಧತಿ, ಸ್ವಾವಲಂಬಿ ಆಹಾರ ಕ್ರಮಗಳು, ಆತ್ಮನಿರ್ಭರದ ಹಾದಿಯಲ್ಲಿರುವ ಭಾರತ ಕೂಡ ಮುಂದುಂದು ದಿನ ಶ್ರೀಲಂಕಾದಂತೆಯೇ ದಿವಾಳಿಗೆ ತಲುಪಲಿದೆ ಎಂಬ ಪುಕಾರನ್ನು ಎಬ್ಬಿಸಲಾಗಿದೆ. ನಿಜಕ್ಕೂ ಶ್ರೀಲಂಕಾದಲ್ಲಿ ಆಗಿದ್ದೇನು ?

ಶ್ರೀಲಂಕಾದಲ್ಲಿ ಏನೇನೆಲ್ಲವೂ ಆಗಿ ಹೋಯಿತು; ಆಗುತ್ತಲೇ ಇದೆ. ಕೋವಿಡ್ ನಂತರ ವಂತೂ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಯನ್ನು ನಿಭಾಯಿಸಲು ಹೆಣಗಾಡುತ್ತಿದೆ. ಅದರ ನಡುವೆಯೇ ಗಂಭೀರ ಆಹಾರದ ಕೊರತೆಯ ಸಮಸ್ಯೆಯನ್ನೂ ದ್ವೀಪ ರಾಷ್ಟ್ರ ಎದುರಿಸುತ್ತಿದೆ. ಇಳಿಮುಖವಾಗುತ್ತಿರುವ ವಿದೇಶಿ ವಿನಿಮಯ ನಿಕ್ಷೇಪಗಳು, ನಷ್ಟ ವಾಗುತ್ತಿರುವ ಕರೆನ್ಸಿ ಹಾಗೂ ಗಗನಕ್ಕೇರಿರುವ ಆಹಾರ ಹಣದುಬ್ಬರ ಎಲ್ಲವೂ ಒಟ್ಟೊಟ್ಟಿಗೆ ಮುಕ್ಕುರಿಕೊಂಡು ಕಂಗೆಡಿಸಿವೆ.

ಹಾಗೆಂದು ಇದು ಏಕಾಏಕಿ ಬಂದೆರಗಿದ ಬರಸಿಡಲಲ್ಲ. ದಶಕಗಳಿಂದಲೂ ನಡೆಯುತ್ತಿದ್ದ ಅಂತರ್ಯುದ್ಧದ ಜತೆಜತೆಗೇ ದೇಶದ ಹತ್ತು ಹಲವು ಕ್ಷೇತ್ರಗಳು ಕುಸಿಯುತ್ತ ಬಂದಿದ್ದವು. ಯಾವಾಗ ಆಹಾರ ಬೆಲೆಗಳೂ ಗಗನಕ್ಕೇರಿ ಅಗತ್ಯ ಆಹಾರ ಪದಾರ್ಥಗಳ ಸಂಗ್ರಹದ ಕೊರತೆ ಕರಗುತ್ತ ಬಂದಂತೆ ಮಡುಗಟ್ಟಿದ್ದ ಆಕ್ರೋಶ ಸ್ಫೋಟಿಸಿದೆ.

ಇಷ್ಟಕ್ಕೂ ದಿಕ್ಕಿಲ್ಲದ ಸ್ಥಿತಿಗೆ ಶ್ರೀಲಂಕಾ ಬಂದದ್ದಾದರೂ ಏಕೆ? ಏಕಾಏಕಿ ಇಡೀ ದೇಶದ ಕೃಷಿ ವ್ಯವಸ್ಥೆಯನ್ನು ಸಾವಯವ ಮಾದರಿಗೆ ಪರಿವರ್ತಿಸಿದ್ದೇ ದೇಶದ ಹಸಿವಿಗೆ ಕಾರಣ ವಾಯಿತೇ? ಹಾಗೊಂದು ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗುತ್ತಿರುವುದು ಮಾತ್ರವಲ್ಲ, ದೇಶೀ ಸಾವಯವ ಕೃಷಿ ಪದ್ಧತಿ, ಸ್ವಾವಲಂಬಿ ಆಹಾರ ಕ್ರಮಗಳು, ಆತ್ಮನಿರ್ಭರದ ಹಾದಿಯಲ್ಲಿರುವ ಭಾರತ ಕೂಡ ಮುಂದುಂದೊ ದಿನ ಶ್ರೀಲಂಕಾದಂತೆಯೇ ದಿವಾಳಿಗೆ ತಲುಪಲಿದೆ ಎಂಬ ಪುಕಾರನ್ನೂ ಎಬ್ಬಿಸಲಾಗಿದೆ. ನಿಜಕ್ಕೂ ಶ್ರೀಲಂಕಾದ ಇಂದಿನ ಸ್ಥಿತಿಗೆ ಅಲ್ಲಿನ ಸರಕಾರ ಸಾವಯವ ಕೃಷಿಯ ಬೆನ್ನುಬಿದ್ದಿದ್ದೇ ಕಾರಣವೇ? ವಿಚಾರ ಮಾಡಲೇಬೇಕಾದ ಸಂಗತಿ.

ಗೊಬ್ಬರಗಳನ್ನು ಬಳಸಿಯೇ ಕೃಷಿ ನಿರ್ವಹಿಸುವ ಸ್ಥಿತಿ ತಲುಪಬೇಕು ಎನ್ನುವ ಲಂಕಾ ಸರಕಾರದ ಆಲೋಚನೆ ಹಾಗೆ ನೋಡಿದರೆ, ಒಂದು ಆದರ್ಶವಾಗಿ ನಿಜಕ್ಕೂ ಅದ್ಭುತವಾದದ್ದು. ಮಾತ್ರವಲ್ಲ, ಪ್ರಸ್ತುತ ಪಾರಿಸಾರಿಕ ಸನ್ನಿವೇಶ, ಮಣ್ಣಿನ ಆರೋಗ್ಯ, ಮಾಲಿನ್ಯದ ನಿಯಂತ್ರಣ ಸಾಮಾಜಿಕ ಆರೋಗ್ಯ… ಈ ಎಲ್ಲ ದೃಷ್ಟಿಯಿಂದಲೂ ಸಾವಯವ ಕೃಷಿ ಪದ್ಧತಿ ಅನುಸರಣೀಯವೇ. ಆದರೆ ವಾಸ್ತವದಲ್ಲಿ ಸರಕಾರದ ಆತುರದ ನಿರ್ಧಾರ, ಎಲ್ಲವೂ ನಾಳೆ ಬೆಳಿಗ್ಗೆಯಿಂದಲೇ ಏಕಾಏಕಿ ಜಾರಿಗೊಂಡುಬಿಡಬೇಕು
ಎನ್ನುವ ಧೋರಣೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ.

ಸರಕಾರ ಇದ್ದಕ್ಕಿದ್ದಂತೆ ಜಾರಿಗೊಳಿಸಿದ ಈ ಕ್ರಮಕ್ಕೆ ರೈತರು ಮತ್ತು ಕೃಷಿ ವಲಯದ ಇತರ ಸಹಭಾಗಿಗಳು ಸಿದ್ಧವಾಗಿರಲಿಲ್ಲ. ಹಾಗಂತ ಈ ಬಗ್ಗೆ ಸರಕಾರಕ್ಕೆ ಯಾರೂ ಹೇಳಿಲ್ಲವೆಂದಲ್ಲ. ಕೃಷಿ ಕ್ಷೇತ್ರವನ್ನು ಹತ್ತಿರದಿಂದ ಗಮನಿಸುತ್ತಿದ್ದವರು ಸರಕಾರದ ಈ ತೀರ್ಮಾನದಿಂದ ಉಂಟಾಗ ಬಹುದಾದ ಸಂಭಾವ್ಯ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ಹೇಳುತ್ತಲೇ ಬರುತ್ತಿದ್ದರು.

ಆದರೆ ಅದನ್ನು ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ‘ಕುರುಡು ಆದರ್ಶ’ದ ಬೆನ್ನು ಹತ್ತಿದ್ದ ನಾಯಕರು ಸಿದ್ಧರಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯುತ್ತಮ ಆದರ್ಶವೊಂದನ್ನು ಸಾಧಿಸಲು ‘ಯೋಜಿತ ಕಾರ್ಯಪದ್ಧತಿ’ಯನ್ನು ಅನುಸರಿಸಲೇ ಇಲ್ಲ. ಅಸಲಿ ಕಥೆ ಏನಾಯಿತೆಂದರೆ, ತಪ್ಪು ಸಾವಯವ ಕೃಷಿ ಪದ್ಧತಿಯದ್ದಲ್ಲ. ಅಂಥದ್ದೊಂದು ಮಾರ್ಗವನ್ನು ಇಡೀ ದೇಶದಲ್ಲಿ ಏಕಾಏಕಿ ಅನುಷ್ಠಾನಗೊಳಿಸಲು ಆಗುವುದಿಲ್ಲ. ಇಷ್ಟು ಕಾಲ ರಾಸಾಯನಿಕ ಬಿದ್ದಿರುವ ಮಣ್ಣಿನ ಪುನರುಜ್ಜೀವನದ ಕೆಲಸ ಮೊದಲು ಆಗಬೇಕು. ಸಾವಯವ ಕೃಷಿಯ ಮೂಲ ಅಂಶಗಳನ್ನು ರೈತರಿಗೆ ಮನಗಾಣಿಸಬೇಕು.

ಕೃಷಿ ಪದ್ಧತಿಯಲ್ಲಿ ಆಗಬೇಕಿರುವ ಬದಲಾವಣೆಗಳು ಮತ್ತು ನಾನಾ ಹಂತಗಳನ್ನು ಗುರುತಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದನ್ನು ನಾವು ಸಾವಯವ ಎನ್ನುತ್ತೇವೆ ಎಂಬ ಬಗ್ಗೆ ಮಾನದಂಡಗಳು ರೂಪುಗೊಳ್ಳಬೇಕು. ಅದ್ಯಾವುದೂ ಇಲ್ಲದೇ ಗೋಡೆಗೆ ಹಳೆಯ ಬಣ್ಣ ತೆಗೆದು ಹೊಸದನ್ನು ಬಳಿಯುವಂತೆ ರಾಸಾಯನಿಕ ಕೃಷಿ ಪದ್ಧತಿಯಿಂದ ಬೆಳಗಾಗುವುದರೊಳಗೆ ಸಾವಯವಕ್ಕೆ ಎಲ್ಲರೂ ಬದಲಾಗಿಬಿಡಬೇಕೆಂಬ ಸನ್ನಿವೇಶ ಸೃಷ್ಟಿಸಿಬಿಡಲಾಯಿತು.

ಈಗ ಏನು ಚರ್ಚೆ ನಡೆಯುತ್ತಿದೆಯೋ ಅವೆಲ್ಲ ಹಲವು ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಈ ದೃಷ್ಟಿಯಿಂದ ನೋಡಿದಾಗ ಶ್ರೀಲಂಕಾ ಇಂದು ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಆರ್ಥಿಕ ನೀತಿಯ ಜತೆಗೆ ಇದ್ದಕ್ಕಿದ್ದಂತೆ ಸಾವಯವಕ್ಕೆ ಹೊರಳಿ ಕೊಳ್ಳುವ ಅಲ್ಲಿನ ಸರಕಾರದ ಆತುರದ ತೀರ್ಮಾನವೂ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಟ್ಟುಕೊಂಡ ‘ಆದರ್ಶ’ದ ಅನುಷ್ಠಾನಕ್ಕೆ ಅಗತ್ಯ ನೀತಿ ನಿರೂಪಣೆಯ ವಿಚಾರದಲ್ಲಿನ ನಿಖರತೆ ಇರಲಿಲ್ಲ. ಇವೆಲ್ಲದರ ಜತೆಗೆ
‘ಜಗತ್ತಿನ ಮೊದಲ, ಸಂಪೂರ್ಣ ಸಾವಯವ ರಾಷ್ಟ್ರ’ ಎಂಬ ಬ್ರಾಂಡಿಂಗ್‌ನ ಬೆನ್ನು ಹತ್ತಿ ರಾಷ್ಟ್ರೀಯತೆಯೊಂದಿಗೆ ಇದನ್ನು ಬೆಸೆದುಬಿಡಲಾಯಿತು. ಹೀಗಾಗಿ ರೈತರಲ್ಲಿ ಗೊಂದಲ ಇನ್ನಷ್ಟು ಹೆಚ್ಚಾಯಿತೆನ್ನಬಹುದು.

ಸಾಲದ್ದಕ್ಕೆ ಪ್ರವಾಸೋದ್ಯಮವನ್ನೇ ಪ್ರಧಾನ ಆದಾಯ ಮೂಲವಾಗಿ ಹೊಂದಿದ್ದ ದೇಶಕ್ಕೆ ಕರೋನಾ ಸಹಿಸಲೇ ಆಗದಷ್ಟು ಹೊಡೆತವನ್ನು ನೀಡಿತ್ತು. ಈ ಬಿಕ್ಕಟ್ಟಿನಿಂದ ಪಾರಾಗಲು ಅನುಸರಿಸಿದ ಮಾರ್ಗಗಳೆಲ್ಲವೂ ತಲೆಕೆಳಗಾಯಿತು. ಇಂಥ ಸನ್ನಿವೇಶ ದಲ್ಲಿದ್ದಾಗಲೇ ಮುಂಗಾರು ಬಿತ್ತನೆಗೆ ಕಾಲವೂ ಬಂದಿತ್ತು. ರಸಗೊಬ್ಬರ ಆಮದು ಮಾಡಿಕೊಳ್ಳಲು ಬೇಕಿದ್ದ ೪೦ ಕೋಟಿ ಅಮೆರಿಕನ್ ಡಾಲರ್ ಹಣವನ್ನು ಉಳಿಸುವ ಉದ್ದೇಶದಿಂದ ಅಲ್ಲಿನ ಸರಕಾರ ರಸಗೊಬ್ಬರ ಆಮದಿನ ಮೇಲೆ ನಿರ್ಬಂಧ ವಿಧಿಸಿತು.

ಇದಕ್ಕೆ ರೈತರು ಸಹಕರಿಸದಿದ್ದಾಗ, ಸಾಮಾಜಿಕ ಆರೋಗ್ಯದ, ರಾಷ್ಟ್ರೀಯತೆಯ ಬಣ್ಣ ಬಳಿಯಲಾಯಿತು. ದೇಶದ ಜನರ
ಸರಾಸರಿ ಆಯಸ್ಸು (೧೪೦ ವರ್ಷ) ಕಡಿಮೆಯಾಗಲು ಮತ್ತು ದೇಶದಲ್ಲಿ ಹಲವು ಕಾಯಿಲೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳಲು ಕೃಷಿಯಲ್ಲಿ ಬಳಸುವ ರಾಸಾಯನಿಕಗಳೇ ಕಾರಣ’ ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಸ್ಥೆಯಿಂದ ಹೇಳಿಸಲಾಯಿತು. ಇದೆಲ್ಲದ ಪರಿಣಾಮ ಕೊನೆಗೆ ‘ಸಾವಯವ ಕೃಷಿ ನೀತಿ’ಯನ್ನು ಘೋಷಿಸಿಬಿಟ್ಟಿತು.

ಮೊದಲಿಂದಲೂ ಪರಾಮರ್ಶೆಯ ಸಂಪ್ರದಾಯವೇ ಅಲ್ಲಿನ ಅಧಿಕಾರಸ್ಥರಲ್ಲಿ ಇಲ್ಲ. ನಾಯಕರೆನಿಸಿಕೊಂಡವರು ತೆಗೆದು ಕೊಳ್ಳುವ ರಾಜಕೀಯ ನಿರ್ಧಾರಗಳಿಗೆ ಅಲ್ಲಿನ ಜನರು ಬೆಲೆ ತೆರಲೇಬೇಕು. ಪ್ರಣಾಳಿಕೆಯನ್ನೇ ಅಧಿಕಾರಾರೂಢರು ಜನಾದೇಶ ಎಂದುಕೊಂಡು ಬಿಡುತ್ತಾರೆ. ಅವನ್ನೇ ಕೊನೆಗೆ ಘೋಷಣೆಗಳಾಗಿಸಿ ಬಿಡುತ್ತಾರೆ. ಸಾವಯವದ ವಿಚಾರದಲ್ಲಿ ಆದದ್ದೂ ಅದೇ.

ಶ್ರೀಲಂಕಾದಲ್ಲಿ ಆದದ್ದು ಹೊಸತೇನಲ್ಲ. ಇಂಥದ್ದೇ ಬೆಳವಣಿಗೆ ಭೂತಾನ್‌ನಲ್ಲಿಯೂ ಆಗಿತ್ತು. ಆದರೆ ಭೂತಾನ್ ಬಚಾವಾಗಲು ಪ್ರಮುಖ ಕಾರಣ ಅಲ್ಲಿನ ಸರಕಾರದ ಯೋಜಿತ ಸಿದ್ಧತೆ. ಜತೆಗೆ ಮೂಲಭೂತವಾಗಿ ಅಲ್ಲಿನ ನಿವಾಸಿಗಳ ಮನೋಭಾವ ಪರಿಸರಕ್ಕೆ ಪೂರವಾಗಿಯೇ ಇತ್ತು ಹಾಗೂ ಇಲ್ಲಿನಷ್ಟು ಮಾಲಿನ್ಯ ಅಲ್ಲಿ ಯಾವ ರಂಗಗಳಲ್ಲೂ ಇಲ್ಲ. ಹೀಗಾಗಿ ಆಹಾರ ಧಾನ್ಯಗಳ ಬೆಲೆ
ಶ್ರೀಲಂಕಾದಷ್ಟು ಏರಿಕೆಯಾಗಿರಲಿಲ್ಲ. ಆರ್ಥಿಕವಾಗಿ ಸಾಕಷ್ಟು ಬಲಾಢ್ಯ ದೇಶ ಸ್ವಿಟ್ಜರ್‌ಲೆಂಡ್ ಸಹ ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ನಿರ್ಬಂಧಿಸಿತಾದರೂ ಸಂಭಾವ್ಯ ಪರಿಣಾಮಗಳನ್ನು ಮನಗಂಡು ಕೊನೆಗಳಿಗೆಯಲ್ಲಿ ತನ್ನ ನಿರ್ಧಾರ ಹಿಂದೆ ಪಡೆಯಿತು.

ಇದ್ಯಾವುದನ್ನೂ ಶ್ರೀಲಂಕಾ ಗಮನಿಸಿಕೊಳ್ಳಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಾವಯವ ಎಂಬುದು ಮನೋಭಾವವೇ ಆಗದ ಹೊರತು ಅದರ ಉತ್ಪನ್ನಗಳು ಜನರ ಕೈಗೆಟುಕುವ ದರದಲ್ಲಿ ಲಭ್ಯವಾಗುವುದಿಲ್ಲ. ಸಾವಯವ ಎಂಬುದು ದಂಧೆಯಾಗಿ
ಪರಿಣಮಿಸಿ, ಸಾಮಾನ್ಯ ಉತ್ಪನ್ನಗಳಿಗಿಂತ ತುಟ್ಟಿಯಾಗುತ್ತವೆ. ಶ್ರೀಲಂಕಾದಲ್ಲಿ ಆದದ್ದೂ ಅದೇ. ಭಾರತದಲ್ಲಿ ಆಗುತ್ತಿರುವುದೂ ಅದೇ.

ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಆಂದೋಲನವಾಗಲಿ ಅದರ ಹಿಂದೆ ಘನ ಉದ್ದೇಶ ಇರಬೇಕಾದ ಅಗತ್ಯ ಎಷ್ಟಿದೆಯೋ, ಅದರ ಮುಂದೆ ನಿಲ್ಲುವ ನಾಯಕನಿಗೆ ಸಂಭಾವ್ಯ ಘಟನೆಗಳ ಸಂಪೂರ್ಣ ಅರಿವೂ ಇರಬೇಕು. ಇದನ್ನೇ ಹೆಸರಾಂತ ಚಿಂತಕ, ಕವಿ, ನಿಸರ್ಗ ತಜ್ಞ ವೆಂಡೆಲ್ ಬೆರ್ರಿ, ಸಾಕಷ್ಟು ಬಾರಿ ಪ್ರತಿಪಾದಿಸಿದ್ದಾರೆ. ಅವರ ’ಐ bಜಿoಠ್ಟ್ಠಿoಠಿ ಟ್ಛ ಞಟqಛಿಞಛ್ಞಿಠಿo’ ಎನ್ನುವ ಪ್ರಬಂಧ ಕೋಟ್ಯಂತರ ಓದುಗ ಮನಸುಗಳಲ್ಲಿ ಚಿಂತನೆಯ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ್ದ ಪರಿ ಅಚ್ಚರಿ ಹುಟ್ಟಿಸುತ್ತದೆ.

ಅವರನ್ನು ಅರಿಯದವರು ಅವರನ್ನು ಬದಲಾವಣೆಯ, ಆಂದೋಲನದ ವಿರೋಧಿಯೆಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಅವರ ಅಭಿಮತದ ಒಳಾರ್ಥವನ್ನು ಬಹುತೇಕರು ಗ್ರಹಿಸಿಯೇ ಇಲ್ಲ. ಇಂದು ಫ್ಯಾಷನ್ ಎಂಬಂತಾಗಿಬಿಟ್ಟಿರುವ, ಅಸಲಿತನವನ್ನು ಕಳೆದುಕೊಂಡು ಮಾರುಕಟ್ಟೆ ತಂತ್ರವಾಗಿಬಿಟ್ಟಿರುವ ಸಾವಯವ’ ಎಂಬ ಹುಸಿ ಆಂದೋಲನದ ಅಪಾಯದ ಬಗೆಗೆ, ಅದನ್ನು
ವಿರೋಽಸುವ ತಮ್ಮ ನಿಲುವನ್ನು ತಮ್ಮ ಪ್ರಬಂಧದಲ್ಲಿ ಅವರು ಸ್ಪಷ್ಟಪಡಿಸುತ್ತಾರೆ. ಶ್ರೀಲಂಕಾದ ಇಂದಿನ ಸನ್ನಿವೇಶದಲ್ಲಂತೂ ಅವರ ಒಂದೊಂದೂ ಮಾತೂ ತೀರಾ ಅನ್ವಯವೆನಿಸುತ್ತದೆ.

ಮಣ್ಣಿನ ರಕ್ಷಣೆ, ಆರೋಗ್ಯದ ಬಗೆಗೆ, ಪರಿಸರದ ಹಿತ ಕಾಯುವ ಕುರಿತು ಎಲ್ಲರೂ ಮಾತಾಡುತ್ತಿದ್ದಾರೆ. ಪರಿಸರ ಆಂದೋಲನಗಳು ಎಂದರಲ್ಲಿ ಹುಟ್ಟಿಕೊಳ್ಳುತ್ತಿವೆ. ಬಹಳಷ್ಟು ಬಾರಿ ಇದರಿಂದ ಬೇಸತ್ತುಬಿಟ್ಟಿದ್ದೇನೆ. ವೆಸ್ ಜಾಕ್ಸನ್ (ಬೆರ್ರ‍ಿಯವರ ಆತ್ಮೀಯ) ಜತೆಗೆ ಈ ಬಗ್ಗೆ ನನ್ನ ಅಸಮಾಧಾನವನ್ನೂ ಹೊರಹಾಕಿದ್ದೇನೆ. ಅದೆಷ್ಟು ಸಲ ಈ ಆಂದೋಲನ’ಗಳನ್ನೇ ನಿಲ್ಲಿಸಿಬಿಡಬೇಕು ಎಂದೂ
ಅಸಹನೆಯಿಂದ ಹೇಳಿದ್ದೇನೆ. ತಾವು ಮಾಡುತ್ತಿರುವುದೇ ಸರಿ ಎಂದು ತಂತಮ್ಮ ಮೂಗಿನ ನೇರಕ್ಕೆ ಕೊಂಡೊಯ್ಯುತ್ತಿರುವ ವೈಯಕ್ತಿಕ ಹಿತಾಸಕ್ತಿಯ, ಯಾರz ಅಗತ್ಯಕ್ಕೆ ನಿಲ್ಲುತ್ತಿರುವ ಈ ಆಂದೋಲನಗಳಲ್ಲಿ ಏನೇನೂ ಅರ್ಥ ಕಾಣಿಸುತ್ತಲೇ ಇಲ್ಲ.

ಇಂಥ ಆಂದೋಲನಗಳ ಮೂಲಕ, ಅದರಲ್ಲಿರುವವರಲ್ಲಿ ಬಹುತೇಕರು ತಮ್ಮ ಪ್ರತಿಪಾದ ನೆಯೇ ಸರಿಯಾದುದು ಎಂದುಕೊಂಡು ತಮಗೇ ಮೋಸ ಮಾಡಿಕೊಳ್ಳುತ್ತಿದ್ದರೆ ಎನಿಸುತ್ತದೆ. ಯಾವುದೇ ಆಂದೋಲನದ ನಾಯಕ, ಅದರಲ್ಲಿ
ಭಾಗಿ ಯಾದವರಿಗೆ ಒಂದಷ್ಟು ಸ್ವಾತಂತ್ರ್ಯವನ್ನು ನೀಡುವುದು ಅತ್ಯಂತ ಜರೂರು. ಆದರೆ, ಇಂದಿನ ಆಂದೋಲನ ಗಳಲ್ಲಿ ಏನಾಗುತ್ತಿದೆ ನೋಡಿ, ಬಹುತೇಕರು ತಮಗಿರುವ ಮುಕ್ತತೆಯನ್ನು ತಮ್ಮೊಂದಿಗೆ ಸಾಗಿ ಬರುತ್ತಿರುವ ಇತರರಿಗೆ ಕೊಡಲು ಮನಸ್ಸು ಮಾಡುವುದೇ ಇಲ್ಲ. ಅವರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಾರೆ.

ತಮ್ಮ ಅಭಿಪ್ರಯಾವನ್ನಷ್ಟೇ ಹೇರಿಕೆ ಮಾಡುತ್ತಾರೆ. ಹೀಗಾದಾಗ ಆಂದೋನಗಳು ತಮ್ಮ ಮೂಲ ಉದ್ದೇಶದಿಂದ ಹೊರತಾಗಿ ದಿಕ್ಕು ತಪ್ಪುತ್ತದೆ. ಹೀಗೆಯೇ ಅದು ಮೂಲ ಮಾರ್ಗಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಅವರ ಗಮನಕ್ಕೇ ಬಂದಿರುವುದಿಲ್ಲ.
ಶಾಂತಯುತ ಬದುಕನ್ನು ಬಯಸಿ ಆಂದೋಲನಕ್ಕೆ ಇಳಿದವರು ತಮ್ಮ ಶರಂಪರ ಕಿತ್ತಾಟಕ್ಕಿಳಿದರೆ ಹೇಗಿರುತ್ತದೆ ಹೇಳಿ? ಸಾಂಸ್ಥಿಕ ತಥಾಕಥಿತ ತಜ್ಞರ ಸೀಮಿತ ಅರಿವಿನಿಂದ ಹೀಗಾಗುತ್ತಿದೆ. ಸಮಸ್ಯೆಯ ಸಮಗ್ರತೆ ಅವರಿಗೆ ಗೋಚರಿಸುತ್ತಲೇ ಇಲ್ಲ.

ಅದರ ಒಂದು ತುದಿಯನ್ನಷ್ಟೇ ಹಿಡಿದು ಜಗ್ಗಾಡುತ್ತಿದ್ದಾರೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅಂಥವರು ಮಾಡುತ್ತಿರುವುದು ಏನು ಗೊತ್ತಾ; ಕೇವಲ ವಿಷಯದ ಬಾಧಕಗಳನ್ನಷ್ಟೇ ಪ್ರತಿಪಾದಿಸುತ್ತಿದ್ದಾರೆ. ಎಲ್ಲದಕ್ಕೂ ಸಾಧಕ-ಬಾಧಕಗಳೆಂಬ ಎರಡೂ ಮುಖಗಳಿರುತ್ತವೆ. ಇಂಥವರೇ ತಮ್ಮ ಆಂದೋಲನದ ದಿಕ್ಕು ತಪ್ಪಿಸುತ್ತಿರುವವರು. ಇಂಥ ಚಳವಳಿಗಳ ಕೊನೆ ಸಮಸ್ಯೆಯನ್ನು,
ಬಾಧಕಗಳನ್ನು ಪ್ರಚುರಪಡಿಸುವದಷ್ಟೇ ಆಗಿ ನಿಲ್ಲುತ್ತದೆ. ಏಕೆಂದರೆ ಅವರನ್ನು ನಕಾರಾತ್ಮ ಸಂಗತಿಗಳೇ ಆವರಿಸಿ ಕೊಂಡುಬಿಟ್ಟಿರುತ್ತವೆ.

ಈ ನೀರು, ಮಣ್ಣು, ಕಾಡು, ಕೃಷಿ ಇಂಥವೆಲ್ಲದರ ರಕ್ಷಣೆಯ ವಿಷಯದಲ್ಲೂ ಆಗುತ್ತಿರುವುದು ಇದೇ. ಈ ಕಾರಣಕ್ಕೇ ಅದರ ಬಗೆಗೆ ನನಗೆ ಅಸಹನೆ. ಇವತ್ತಿನ ದಿನಗಳಲ್ಲಿ ಇವೆಲ್ಲದರ ರಕ್ಷಣೆಗೆ ಎಲ್ಲರೂ ಇಳಿಯಲೇಬೇಕು. ಪ್ರತಿಯೊಬ್ಬರೂ ವ್ಯಕ್ತಿಗತ ನೆಲೆಯಲ್ಲಿ, ವೈಯಕ್ತಿಕವಾಗಿಯೂ ಇದನ್ನು ಅಳವಡಿಕೊಳ್ಳಬೇಕೆಂಬುದು ನಿಜವಾದರೂ ಬದಲಾವಣೆ ಎಂಬುದು ಒಬ್ಬರಿಂದ ಸಾಧ್ಯವಾ
ಗುವಂಥದ್ದಲ್ಲ. ಅದಕ್ಕೊಂದು ವಿಶಾಲ ವ್ಯಾಪ್ತಿಯಿದೆ.

ಸಮಗ್ರವಾಗಿ ಅದನ್ನು ನೋಡಬೇಕು. ನಿಸರ್ಗದ ರಕ್ಷಣೆಯೆಂದರೆ ಅದು ಕೇವಲ ಮರಗಳ ಉಳಿವಲ್ಲ. ಗಾಳಿ, ನೀರು, ಜೀವಿಗಳು ಎಲ್ಲವೂ ಅಲ್ಲಿ ಮುಖ್ಯ. ಕೃಷಿಯ ಉಳಿವಿನಲ್ಲಿ ಮಣ್ಣು-ನೀರಿನ ಆರೋಗ್ಯವೂ ಮಹತ್ದ ಪಾತ್ರವಹಿಸುತ್ತದೆ. ಸಮುದಾಯದ ರಕ್ಷಣೆಯೆಂದರೆ ಕೇವಲ ಸೀಮಿತ ವ್ಯಕ್ತಿಗಳ ಒಳಿತಲ್ಲ. ಮಕ್ಕಳು, ಮಹಿಳೆಯರ ಕಲ್ಯಾಣಕ್ಕೂ ಶ್ರಮಿಸಬೇಕು. ನಮ್ಮ ಆಂದೋಲನ ಗಳು ಹೀಗೆ ಸಮಗ್ರವಾಗಿ ಸಮಸ್ಯೆಯನ್ನು ನೋಡುತ್ತಿಲ್ಲ. ಹಾಗೆ ನೋಡಿದ್ದರೆ ಅದರ ಮೂಲ ಕಾಣಿಸುತ್ತಿತ್ತು.

ಸಮಸ್ಯೆಗೆ ಕಾರಣ ಹುಡುಕಿದರೆ, ಅದನ್ನು ಪರಿಹರಿಸುವುದು ಸುಲಭ. ನಾವು ಸಮಸ್ಯೆಗಳನ್ನು ಪರಿಹರಿಸದೇ ಕೇವಲ ಅದರ
ಪರಿಣಾಮವನ್ನು ತಡೆಯಲಷ್ಟೇ ಹರಸಾಹಸ ಪಡುತ್ತಿದ್ದೇವೆ. ಅಲ್ಲಿಗೆ ಚಳವಳಿ ನಮ್ಮ ಕೈಯ್ಯಾರೆ ಸೋಲುತ್ತದೆ. ಈಗೆ ಹೇಳಿ ಇಂಥ ಆಂದೋಲನ ಅಸಲಿಯತ್ತಿನಲ್ಲೊಂದು ಅನಿಸುತ್ತಿದೆಯೇ? ನಮ್ಮೊಳಗೆ(ಪ್ರತಿಯೊಬ್ಬರೊಳಗೆ) ಬದಲಾವಣೆ ಇಣುಕಿದಾಗ ಮಾತ್ರವೇ ಪರಿವರ್ತನೆ ಸಾಧ್ಯ. ಹೊರತಾಗಿ ಇದನ್ನು ಕಾನೂನಿನಿಂದ ಸಾಧಸಿಲಾಗದು.

ಇಂದಿನ ಸಾವಯವ ಕೃಷಿ ಆಂದೋಲನ’ವೂ ಇಂಥದ್ದೇ ಉದ್ದೇಶ ಮರೆತ ರೀತಿಯದ್ದು. ನಿಜವಾಗಿ ಸಾವಯವ ಎನ್ನುವುದೊಂದು
ಪರಿಕಲ್ಪನೆಯಲ್ಲ. ಅದೊಂದು ಬೇಸಾಯ ಕ್ರಮ, ಕೃಷಿ ಪದ್ಧತಿ ಅಲ್ಲವೇ ಅಲ್ಲ. ಬಹುತೇಕ ಜನಕ್ಕೆ ಹಾಗೆಂದೇ ಬಿಂಬಿಸಲಾಗುತ್ತಿದೆ. ಇದು ಗೊತ್ತಾದಾಗ ನನಗೆ ತಲೆಸುತ್ತು ಬಂತು. ಇದರಿಂದಲೇ ಜಗತ್ತಿಗೇ ಅನ್ನ ಬೆಳೆದು ಕೊಡುತ್ತಿರುವ ರೈತ ರಾತ್ರಿ ತಾನೇ ಸ್ವತಃ ಉಪವಾಸ ಮಲಗುವಂತಾಗಿದೆ. ಯಾವುದೇ ಒಂದು ಬೀಜವನ್ನು ಬಿತ್ತಿ ಸಾವಯವ ಬೆಳೆ ತೆಗೆದುಬಿಡಬಹುದು ಎಂಬ ಭ್ರಮೆಯನ್ನು ಕಟ್ಟಿಕೊಡಲಾಗುತ್ತಿದೆ.

ಇದರಿಂದಾಗಿಯೇ ಅದು ತನ್ನ ವೈಶಾಲ್ಯವನ್ನು ಕಳೆದುಕೊಳ್ಳುತ್ತಿದೆ. ಇಂಥ ತಪ್ಪು ಕಲ್ಪನೆಯಿಂದಲೇ ಸರಕಾರಗಳು ಸಹ ಜೈವಿಕ ತಂತ್ರಜ್ಞಾನ ವನ್ನೇ, ಆಹಾರ ಕ್ರಾಂತಿಯನ್ನೇ ಸಾವಯವ ಎಂದು ಅಧಿಕೃತವಾಗಿ ಘೋಷಿಸಲು ಹೊರಟಿರುವುದು. ರೇಡಿಯೇಷನ್ ನಂಥ ತಂತ್ರeನದ ಮೂಲಕ ಸಂರಕ್ಷಿಸುವ ಆಹಾರಗಳನ್ನು, ಕಾರ್ಪೋರೇಟ್ ಸಂಸ್ಥೆಗಳು ಎಬ್ಬಿಸಿರುವ ಸೋ ಕಾಲ್ಡ್ ಆಹಾರ ಕ್ರಾಂತಿಯನ್ನು ಸಹ ಸಾವಯವದ ಹೆಸರಿನ ಬಿಂಬಿಸಲಾಗುತ್ತಿದೆ. ಇದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ಮೋಸವಲ್ಲವೇ?
ಒಮ್ಮೆ ಹೀಗೆ ಘೋಷಿಸಿಬಿಟ್ಟರೆ ಕೊನೆಗೆ ಅವೆಲ್ಲವೂ ಸಾವಯವವೆಂದೇ ಆಗಿಬಿಡುತ್ತದೆ.

ಅದಕ್ಕೇ ನಾನು ಹೇಳಿದ್ದು, ಸಾವಯವ ಎಂಬುದು ಕೃಷಿ ಕ್ರಮವಲ್ಲ. ಇವತ್ತು ಯಾರು ಬೇಕಾದರೂ, ಯಾವುದಕ್ಕೆ ಬೇಕಾದರೂ
ಸಾವಯವ’ ಎಂಬ ಪದವನ್ನು ಬಳಸಬಹುದು. ಹೀಗೆ ಬೇಕಾಬಿಟ್ಟಿ ಅದು ಬಳಕೆಯಾದಾಗಲೇ ಅದರ ಮೌಲ್ಯ ಕುಸಿಯುವುದು. ಇಂಥವುಗಳ ಅಬ್ಬರದಲ್ಲಿ ನಿಜವಾದ ‘ಸಾವಯವ’ವನ್ನು ಗುರುತಿಸಲೇ ಸಾಧ್ಯವಾಗುತ್ತಿಲ್ಲ. ಶ್ರೀಲಂಕಾದಲ್ಲಿ ಆದದ್ದೂ ಅದೇ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವ ಆಹಾರ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ ಎಂದು
ಶ್ರೀಲಂಕಾದ ಸರಕಾರದ ವಕ್ತಾರರು ಹೇಳಿದ್ದೇನೋ ನಿಜ.

ಬಡತನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶಕ್ಕೆ ಇದು ಆಶಾದಾಯಕ ಬೆಳವಣಿಗೆ ಎಂದು ಪ್ರತಿಪಾದಿಸಿದ್ದರು. ಇದು ನಿಜವೇ ಆಗಿದ್ದರೂ, ಹೆಚ್ಚಿನ ದರದಲ್ಲಿ ಉತ್ಪನ್ನಗಳನ್ನು ಖರೀದಿಸಲು ಮುಂದಾಗಬೇಕು. ಅಲ್ಲದೇ ಸಾವಯವ ಪದ್ಧತಿ ಅಳವಡಿಸಿ ಕೊಳ್ಳಲು ರೈತರು ಮಾನಸಿಕ ವಾಗಿ ಸಿದ್ಧರಾಗಿರಬೇಕಲ್ಲವೇ? ಅಂಥ ಸಿದ್ಧತೆಯನ್ನು ಕೈಗೊಳ್ಳಲೇ ಇಲ್ಲ. ಒಂದೀಡೀ ದೇಶದ ಕೃಷಿ
ಕ್ಷೇತ್ರವನ್ನು ಸಂಪೂರ್ಣವಾಗಿ ಸಾವಯವಕ್ಕೆ ಬದಲಿಸಲು ಪ್ರಾಯೋಗಿಕ ಕಾರ್ಯತಂತ್ರ ಆಗಲೇ ಇಲ್ಲ.

ದೀರ್ಘಾವಧಿಗೆ ಯೋಜನೆ ರೂಪಿಸಲೇ ಇಲ್ಲ. ಅಂಥದ್ದೊಂದು ಮಹತ್ವಾಕಾಂಕ್ಷಿಯ ಯೋಜನೆಯ ಅನುಷ್ಠಾನಕ್ಕೆ ಸೂಕ್ತ ತಂತ್ರಗಳನ್ನು ಹೆಣೆಯಲಿಲ್ಲ. ಜನರಿಗೆ ಅದರ ಮೌಲ್ಯ ಹಾಗೂ ಅನಿವಾರ್ಯವನ್ನು ಮನಗಾಣಿಸಲಿಲ್ಲ. ಎಲ್ಲವನ್ನೂ ಬದಿಗೊತ್ತಿ, ಶ್ರೀಲಂಕಾ ಸರಕಾರ ರಾತ್ರೋರಾತ್ರಿ ನಿರ್ಧಾರ ಪ್ರಕಟಿಸಿ, ತರಾತುರಿಯಲ್ಲಿ ಯೋಜನೆ ಜಾರಿಗೊಳಿಸಲು ಮುಂದಾಯಿತು.

ಇದೊಂದು ರೀತಿಯಲ್ಲಿ ಮದ್ಯಪಾನದಂಥ ವ್ಯಸನ ಬಿಡಿಸಿದಂತೆಯೇ ಸರಿ. ತೀರಾ ವ್ಯಸನಕ್ಕೆ ಅಡಿಕ್ಟ್ ಆದವರನ್ನು ನಾಳೆಯಿಂದ ಮುಟ್ಟಕೂಡದು ಎಂಬ ಕಟ್ಟಾಜ್ಞೆಗೆ ಒಳಪಡಿಸಿದರೆ, ವ್ಯಕ್ತಿಯ ಪ್ರಾನ ಹೋಗುವ ಅಪಾಯವೂ ಇಲ್ಲದಿಲ್ಲ. ಹಂತಹಂತವಾಗಿ ಅದನ್ನು ದೂರಮಾಡಬೇಕು. ಹಾಗೆಯೇ ತೋಟಕ್ಕೆ ಕೊಡುತ್ತಿರುವ ಕೃತಕ ಪೋಷಕಾಂಶಗಳನ್ನು ಕಡಿಮೆ ಮಾಡುತ್ತ ಹೋಗಬೇಕು. ಹಂತಹಂತವಾಗಿ ಸಾವಯವಕ್ಕೆ ಹೊರಳಿಸಬೇಕು.

ಅದಕ್ಕೆ ಅವಕಾಶವನ್ನೇ ಕೊಡದ ಸರಕಾರದ ಕ್ರಮಕ್ಕೆ ರೈತರ ಸಹಜ ಪ್ರತಿರೋಧ ತೋರಿದರು. ಸರಕಾರದ ನಿರ್ಧಾರ ಖಂಡಿಸಿ ಬೀದಿಗಳಿದರು. ಕೊನೆಗೆ ಅದೇ ಆಕ್ರೋಶ ಮಡುಗಟ್ಟುತ್ತಾ ಸಾಗಿ, ಇಂದಿನ ಜನಾತಾದಂಗೆಯ ಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿಯು ವಂತಾಗಿದ್ದು ದುರಂತ.