Monday, 16th September 2024

’ಡೆತ್’ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡೋನು – ’ಫಿನಿಶರ್‌’

ತುಂಟರಗಾಳಿ

ಸಿನಿಗನ್ನಡ

ಹೊಂಬಾಳೆ ಫಿಲ್ಮ್ಸ್ಈಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಹೌದು, ಹೊಂಬಾಳೆ ಫಿಲ್ಮ್ಸ್ ಈಗ ಬಾಳೆ ಬಂಗಾರ ಎಂದು ಹಾಡುವಂಥ ಕಾಲ. ಯಾಕಂದ್ರೆ, ಸ್ಯಾಂಡಲ್‌ವುಡ್‌ನ ಇದ್ದು ಬಾವಿ ಕಪ್ಪೆ ಥರ ಆಗೋದು ಬೇಡ ಅಂಥ ಬಾಲಿವುಡ್ ಗೂ ಕಾಲಿಡುತ್ತಿದೆ ಈ ಬ್ಯಾನರ್. ಅಲ್ಲೂ ಒಳ್ಳೆಯ ಬೆಳೆ ತೆಗೆಯುವ ಆಶಯ ಹೊಂಬಾಳೆಯದ್ದು.

ವಿಜಯ್ ಕಿರಂಗಂದೂರು ಅವರು ಈ ಬ್ಯಾನರ್‌ನ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಸಿನಿಮಾ ಮಾಡಿ ಸೋತಾಗ, ನಿನ್ನಿಂದಲೇ ಸೋತೆ ಒಪ್ಪಿಕೋ ಎಂದು ಆಡಿಕೊಂಡವರು ಈ ಹೊಂಬಾಳೆ ಇಷ್ಟರ ಮಟ್ಟಕ್ಕೆ ಬೆಳೆಯುತ್ತೆ ಅಂತ ಅಂದು ಕೊಂಡಿರಲಿಲ್ಲ. ಈಗ ಈ ಹೊಂಬಾಳೆಯ ಗೊನೆ, ಕೊನೆ ಇಲ್ಲ ಎಂಬಂತೆ ಬೆಳೆಯುತ್ತಿದೆ. ಅದಕ್ಕೆ ಕಾರಣ ಕೆಜಿಎಫ್ ಎಂದರೆ ತಪ್ಪಿಲ್ಲ. ಇದರ ನಂತರ ಕೆಜಿಎಫ್ ೨ ಮತ್ತು ಸಲಾರ್ ಅನ್ನೋ ತೆಲುಗು ಸಿನಿಮಾ ಮೂಲಕ ಸದ್ದು ಮಾಡಿತ್ತು ಈ ಬ್ಯಾನರ್.

ಇದರ ಜತೆಗೆ ಪುನೀತ್ ಅವರ ಜತೆಗೆ ರಾಜಕುಮಾರ ಸಿನಿಮಾ ಮಾಡಿ ಗೆದ್ದಿತ್ತು. ಮತ್ತೆ ಪುನೀತ್ ಜತೆ ದ್ವಿತ್ವ ಸಿನಿಮಾ ಕೂಡ ಅನೌ ಮಾಡಿತ್ತು. ಆದರೆ ಅದಾದ ನಂತರ ತಾನು ಕೇವಲ ಯಶ್, ಪುನೀತ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಮಾತ್ರ ಸೀಮಿತ ಅಲ್ಲ ಎನ್ನುವಂತೆ ಈಗೀಗ ಕನ್ನಡದ ಎಲ್ಲ ನಟರನ್ನೂ ಟಚ್ ಮಾಡಲು ಶುರು ಮಾಡಿದೆ ಹೊಂಬಾಳೆ. ಈ ಮೊದಲು ಶ್ರೀಮುರಳಿ ಅವರ ಜತೆ ಭಗೀರಾ ಚಿತ್ರ ಘೋಷಣೆ ಆಗಿತ್ತು. ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟನಿ ಚಿತ್ರ ಅನೌ ಆಗಿದ್ದು ಇದೇ ಹೊಂಬಾಳೆ ಬ್ಯಾನರ್‌ನಿಂದ. ನಂತರ ರಿಷಬ್ ಶೆಟ್ಟಿ ಅವರ ಜತೆಗೂ ಕಾಂತಾರ ಅನ್ನೋ ಚಿತ್ರ ಅನೌ ಮಾಡಿದೆ ಹೊಂಬಾಳೆ.

ಇದನ್ನೆ ನೋಡಿ, ಹಿಂದೊಮ್ಮೆ, ಹೊಂಬಾಳೆ, ಹೊಂಬಾಳೆ ಅಂತ ತಮ್ಮ ಸಿನಿಮಾದಲ್ಲಿ ಹಾಡಿದ್ದ ನಮ್ಮ ನವರಸ ನಾಯಕ ಜಗ್ಗೇಶ್, ನಿಮ್ ಬ್ಯಾನರ್‌ನಲ್ಲಿ ನನ್ನಾಸೆಯ ಹೂವೇ ಪಾರ್ಟ್ ೨ ಮಾಡೋಣ್ವೇ ಅಂತ ಕೇಳಿದ್ರು ಅನ್ನೋದು ಮಾತ್ರ ಶುದ್ಧ ಸುಳ್ಳು.

ಲೂಸ್ ಟಾಕ್
ದಿನೇಶ್ ಕಾರ್ತಿಕ್ (ಕಾಲ್ಪನಿಕ ಸಂದರ್ಶನ) 
? ಎಕ್ಸ್ಟ್ರಾ ಪ್ಲೇಯರ್ ಆಗಿ ನಿಮ್ಮ ತಂಡದ ಪ್ಲೇಯರ್ಸ್‌ಗೆ ನೀರು ಕೊಡ್ತಾ ಇದ್ರಿ, ಈಗ ಎದುರಾಳಿ ಬೋಲರ್ಸ್‌ಗೆ ನೀರು ಕುಡಿಸ್ತಾ ಇದ್ದೀರಲ್ಲ?
-ಮತ್ತೆ, ತಮಿಳುನಾಡ್‌ದವ್ರು ಅಂದ್ರೆ ಬರೀ ನೀರು ಕೇಳೋವ್ರು ಅಂದ್ಕೊಂಡಿದ್ದೀರಾ, ನಮಗೆ ನೀರು ಕುಡಿಸೋಕೂ ಬರುತ್ತೆ.

? ಕೀಪರ್ ಆಗಿ ಅಲ್ಲದಿದ್ರೂ ಬರೀ ಬ್ಯಾಟ್ಸ ಮನ್ ಆಗಿ ಟೀಮಲ್ಲಿ ಸೆಲೆಕ್ಟ್ ಆಗೋ ಲೆವೆಲ್ಲಿಗೆ ಬಂದಿದ್ದು ಹೇಗೆ?
-ಕೀಪರ್ ಆಗಿ ಟೀಮಲ್ಲಿ ಇರೋದ್ ಕಷ್ಟ ಅಂತ ಗೊತ್ತಾದಾಗ ಬೇರೆ ‘ಗುರಿ ಇಟ್ಕೊಂಡು’ ‘ಗೋಲ್ ಕೀಪರ್’ ಆದೆ. ಅದೇ ನನ್ನ ಯಶಸ್ಸಿನ ಗುಟ್ಟು.

? ನಮ್ಮ ಟೀಮಲ್ಲಿ ನೀವು, ರಿಶಬ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಹಿಂಗೆ ಅವಕಾಶಕ್ಕೋಸ್ಕರ ಕಾಯ್ತಾ ಇರೋ ಕೀಪರ್‌ಗಳ ಸಂಖ್ಯೆ ಜಾಸ್ತಿ ಅಲ್ವಾ?
-ಏನ್ ಮಾಡೋಕಾಗಲ್ಲ, ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಹಂಗಾಗಿ ನಮ್ಮ ಸರದಿ ಬರೋವರೆಗೂ ಗೇಟ್ ಕೀಪರ್‌ಗಳ ಥರ ಕಾಯ್ತಾ ಇರ್ಬೇಕು.

? ಸರಿ, ನಿಮ್ಮನ್ನ ‘ಗ್ರೇಟ್ ಫಿನಿಶರ್’ ಅಂತ ಕರೀತಾರಲ್ಲ, ಯಾಕೆ?
-‘ಡೆತ್’ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡ್ತೀನಲ್ಲ ಅದಕ್ಕೆ

? ಅದು ನಿಜ ಬಿಡಿ, ಕೊನೇ ಓವರ್‌ಗಳಲ್ಲಿ ಒಳ್ಳೆ ಬಂಡೆ ಥರ ನಿಂತ್ಕೊಂಡು ಬಾರಿಸ್ತೀರ..
-ರೀ, ಬಂಡೆ ಅಂತೆ ಅನ್ಬೇಡ್ರೀ, ನಾನು ಬರೀ ಡಿಕೆ, ಡಿಕೆಶಿ ಅಲ್ಲ.

ನೆಟ್ ಪಿಕ್ಸ್
ಖೇಮು ಒಂದ್ ಸಲ ಕೆಲಸದ ನಿಮಿತ್ತ ಸ್ಪೇನ್‌ಗೆ ಹೋಗಿದ್ದ. ಅವನು ಅಲ್ಲಿ ತಿಂಗಳುಗಟ್ಟಲೇ ಇರಬೇಕಿತ್ತು. ಆದರೆ, ಇಂಡಿಯಾದ ಊಟಕ್ಕೆ ಅಡಿಕ್ಟ್ ಆಗಿದ್ದ ಖೇಮುಗೆ ಅಲ್ಲಿನ ಊಟ ಅಷ್ಟಾಗಿ ರುಚಿಸಿರಲಿಲ್ಲ. ಹಂಗಾಗಿ ವೀಕೆಂಡ್‌ಗಳಲ್ಲಿ ಅಲ್ಲಿರೋ ಎಲ್ಲಾ ರೆಸ್ಟೋರೆಂಟ್‌ಗಳನ್ನೂ ಹುಡುಕಿಕೊಂಡು ಹೋಗಿ ಅಲ್ಲಿ ಟೇ ಹೇಗಿದೆ ಅಂತ ನೋಡ್ತಿದ್ದ. ಹಿಂಗೇ ಒಂದು ದಿನ ಅಲ್ಲಿ ಫೈಟಿಂಗ್ ಬುಲ್ ಅನ್ನೋ ರೆಸ್ಟೋರೆಂಟ್ ಕಣ್ಣಿಗೆ ಬಿತ್ತು. ಇವತ್ತು ಈ ಹೊಟೇಲ್‌ನ ಟೇ ಟೆ ಮಾಡೋಣ ಅಂದುಕೊಂಡು ಒಳಗೆ ಹೋಗಿ ಕೂತ.

ವೇಟರ್ ಬಂದು ಏನು ಕೊಡ್ಲಿ ಅಂದ. ಅದಕ್ಕೆ ಖೇಮು, ಇವತ್ತಿನ ಸ್ಪೆಷಲ್ ಏನಿದೆ ತಗೊಂಡ್ ಬಾ ಅಂದ. ಸರಿ ಅಂತ ಹೋದ ವೇಟರ್, ಒಂದು ಪ್ಲೇಟ್‌ನಲ್ಲಿ ಮೀಟ್ ತಂದಿಟ್ಟ. ಖೇಮು ಅದನ್ನು ತಿನ್ನೋಕೆ ಶುರು ಮಾಡಿದ. ಮೊದಲ ಬಾರಿಗೆ ಖೇಮುಗೆ ಸ್ಪೇನ್ ಹೊಟೇಲ್‌ನ
ಒಂದು ಡಿಷ್ ತುಂಬಾ ಇಷ್ಟ ಆಗಿಬಿಡ್ತು. ವೇಟರ್‌ನ ಕರೆದು ಇದು ಯಾವ ಡಿಷ್ ಅಂತ ಕೇಳಿದ. ಅದಕ್ಕೆ ವೇಟರ್ ಹೇಳಿದ. ಸರ್ ನಿಮಗೆ ಗೊತ್ತು, ಸ್ಪೇನ್‌ನಲ್ಲಿ ಬುಲ್ ಫೈಟಿಂಗ್ ಫೇಮಸ್ ಆಟ. ಇಲ್ಲಿ ಪ್ರತಿದಿನ ನಡೆಯುತ್ತೆ. ಇವತ್ತಿನ ಫೈಟರ್ ಸೋಲಿಸಿದ ಬುಲ್‌ನ
ಟೆಸ್ಟಿಕಲ್ಸ ಇದು. ಟೆಸ್ಟಿಕಲ್ಸ – ಅಂದ. ಅದಕ್ಕೆ ಖೇಮು, ಟೇ ತುಂಬಾ ಚೆನ್ನಾಗಿದೆ.

ಇನ್ನೊಂದು ಪ್ಲೇಟ್ ಕೊಡು ಅಂದ. ಅದಕ್ಕೆ ವೇಟರ್, ಇಲ್ಲ ಸಾರ್, ಪ್ರತಿದಿನ ಒಂದ್ ಫೈಟ್ ನಡೆಯೋದು, ಒಂದೇ ಬುಲ್ ಸಿಗೋದು, ಮತ್ತೆ ನಾಳೆನೇ ಈ ಡಿಷ್ ಸಿಗೋದು, ಇದೇ ಟೈಮಿಗೆ ಬಂದು ವೆಯ್ಟ ಮಾಡಿದ್ರೆ ಸಿಗುತ್ತೆ ಅಂದ. ಸರಿ, ಖೇಮು ಮರುದಿನ ಅದೇ
ಸಮಯಕ್ಕೆ ಹೋಗಿ ಅದನ್ನೇ ಆಡರ್ರ‍ ಮಾಡಿದ. ವೇಟರ್ ಪ್ಲೇಟ್ ತಂದಿಟ್ಟ. ಎಲ್ಲಾ ತಿಂದ ಮೇಲೆ ವೇಟರ್‌ನ ಕರೆದು. ಟೇಸ್ಟೇನೋ ಚೆನ್ನಾಗಿತ್ತು. ಆದರೆ ನಿನ್ನೆ ನೀನು ಕೊಟ್ಟ ಪೀಸ್‌ಗಳ ಸೈಜ್ ತುಂಬಾ ದೊಡ್ಡದಿತ್ತು. ಇವತ್ತು ತುಂಬಾ ಸಣ್ಣವಿದ್ದವು, ಯಾಕೆ ಅಂತ ಕೇಳಿದ. ಅದಕ್ಕೆ ವೇಟ ಹೇಳಿದ ಏನ್ ಮಾಡೋದು ಸಾರ್, ಒಂದೊಂದ್ ಸಲ ಫೈಟ್‌ನಲ್ಲಿ ಬುಲ್ ಕೂಡಾ ಗೆಲ್ಲುತ್ತೆ!

ಲೈನ್ ಮ್ಯಾನ್
? ಕತ್ತಲಲ್ಲಿ ಮಾಡೋ ಮೋಸ
-ಇರುಳು ಮರುಳು
? ಕಾಂಗ್ರೆಸ್ ಮುಕ್ತ ಭಾರತ ಮಾಡೋ ಬಿಜೆಪಿ ನಾಯಕನ ಬಗ್ಗೆ ಆಡೋ ಮಾತು
-ಬೆರಳು ತೋರಿಸಿದ್ರೆ ಹಸ್ತನೇ ನುಂಗ್ತಾನೆ
?‘ಕಾಂಗ್ರೆಸ್’ ಮುಕ್ತ ಭಾರತ ಆದ್ರೆ ಕಷ್ಟ ಆಗೋದ್ ಯಾರಿಗೆ?
-ಕುಡುಕರಿಗೆ
? ಆಶ್ಚರ್ಯ ಮತ್ತು ಅಸಹ್ಯಗಳ ನಡುವಿನ ವ್ಯತ್ಯಾಸ
– ಮೂಗಿನ ಮೇಲೆ ಬೆರಳಿಟ್ಟುಕೊಂಡರೆ ಆಶ್ಚರ್ಯ, ಮೂಗಿನ ಒಳಗೆ ಬೆರಳಿಟ್ಟುಕೊಂಡ್ರೆ ಅಸಹ್ಯ.
? ನಮ್ಮವರಿಗೆ ಸಚಿವ ಸ್ಥಾನ ಕೊಡದಿದ್ರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕ್ತೀವಿ ಅನ್ನೋ ಸ್ವಾಮೀಜಿಯ ಮಠ
-ಮುತ್ತಿಗೆ ಮಠ
? ಎಲ್ಲ ಕೆಲಸಗಳನ್ನೂ ನಾಳೆಗೆ ಮುಂದೂಡುವ ಸೋಮಾರಿ ತೆಲುಗುವಾಡು
-‘ರೇಪಿ’
? ಕಷ್ಟ ಬಂದಾಗ ಎರಡು ದಾರಿ ಇರ್ತವೆ
೧. ದೇವರನ್ನ ಬೇಡ್ಕೊಂಡು, ಪಲ್ಲಕ್ಕಿ ಮೇಲಿರೋ ದೇವರ ಭಾರ ನಾವು ಹೊರೋದು.
೨. ನಾವೇ ದೇವರ ಮೇಲೆ ಭಾರ ಹಾಕಿ ಸುಮ್ಮನಾಗೋದು
? ಈ ಸ್ಕೂಲ್ ನೋರು ಮಕ್ಕಳಿಗೆ ಶಾರ್ಟ್ ಆಗಿ ಕಟಿಂಗ್ ಮಾಡ್ಸಿ, ಅಂತ ಯಾಕೆ ಪೋಷಕರ ತಲೆ ತಿಂತಾರೆ?
-ಉದ್ದ ಕೂದ್ಲು ಇದ್ರೆ, ಅವ್ರ್ ಹೇಳಿಕೊಡೋ ಪಾಠ ತಲೆಗೆ ಹತ್ತೋಕೆ ಕೂದ್ಲು ಅಡ್ಡ ಬರುತ್ತೆ ಅಂತ.
? ನಿಮ್ಮತ್ರ ಇರೋ ಕಾಸ್ಟ್ಲಿ ಕ್ಯಾಮೆರಾ ನೋಡಿ ನಿಮ್ಮ ಸ್ನೇಹಿತರಾಗುವವರು

-ಕ್ಯಾಮೆರಾ ಫ್ರೆಂಡ್ಲಿ ಜನ
? ಮೋದಿ ಬೆಂಗಳೂರಿಗೆ ಬಂದಾಗ ಇಲ್ಲಿನ ಕಮಿಷನ್ ಸರಕಾರದ ಬಗ್ಗೆ ಕೇಳಿದಾಗ ಬೊಮ್ಮಾಯಿ ಅವರು ಕೆಜಿಎಫ್ ಪ್ರಕಾಶ್ ರೈ ಸ್ಟೈಲಲ್ಲಿ ಕೊಟ್ಟ ಉತ್ತರ 
-ಕಮಿಷನ್ ಕೊಟ್ಟು, ಆಪರೇಷನ್ ಕಮಲ ಮಾಡ್ಸಿ ನಡೆಸ್ತಾ ಇರೋ ಸರಕಾರ ಇದು, ಪ್ರಾಮಾಣಿಕತೆಯಿಂದ ನಡೆಸೋಕಾಗಲ್ಲ.
ನಡೆಸಬೇಕು ಅಂದ್ರೆ ಮತ್ತೆ ಕಮಿಷನ್ನೇ ಕೇಳುತ್ತೆ