Friday, 20th September 2024

ಇರುವ ಮೆಡಿಕಲ್ ಕಾಲೇಜುಗಳಿಗೆ ಮೊದಲು ಸೌಲಭ್ಯ ಒದಗಿಸಲಿ

ಅಭಿಪ್ರಾಯ

ಡಾ. ಡಿ.ಸಿ.ನಂಜುಂಡ, ಸಹಾಯಕ ಪ್ರಾಾಧ್ಯಾಪಕರು, ಮೈಸೂರು 

ಸುಮಾರು ಮೂರು ವರ್ಷಗಳಿಂದ ಇದೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನೂರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಮೆಡಿಕಲ್ ಕಾಲೇಜಿನ ಮಾನ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಿತ್ತು.

ಕೇಂದ್ರ ಸರಕಾರದ (ಎಂಸಿಐ) ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾದ ಅನುಮತಿ ಅವಶ್ಯಕ. ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾದ ಕಠಿಣವಾದ ನಿಯಮಾವಳಿಗಳನ್ನು ಪರಿಪಾಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾವು ತನ್ನ ನಿಯಮಾವಳಿ ಪ್ರಕಾರ ಕಾಲೇಜುಗಳಲ್ಲಿ ಬೇಕಾದ ಮೂಲಭೂತ ಸೌಲಭ್ಯ ವಿಲ್ಲದಿದ್ದರೆ, ಬೋಧನಾ ಸಿಬ್ಬಂದಿ ಇಲ್ಲದಿದ್ದರೆ ನಿರ್ಧಾಕ್ಷಿಣ್ಯವಾಗಿ ಅಂತ ಕಾಲೇಜುಗಳನ್ನು ಮುಚ್ಚಿಿಸುತ್ತದೆ.

ಕೆಲವೊಮ್ಮೆೆ ಸರಕಾರಗಳು ಮಾಡುವ ಕೆಲಸವೇ ಅಂತಹದು. ಯಾವುದಕ್ಕೂ ತಾರ್ಕಿಕತೆ ಇರುವುದಿಲ್ಲ. ಯಾವುದೋ ಪ್ರಭಾವಿ ಸಮುದಾಯಗಳ ಒತ್ತಡಕ್ಕೋೋ, ಪ್ರಭಾವಿ ವ್ಯಕ್ತಿಿಗಳ ಒತ್ತಡಕ್ಕೋೋ, ಮತ ಬ್ಯಾಾಂಕಿನ ಗಳಿಕೆಗೆ ಮನಸ್ಸಿಿಗೆ ತೋಚಿದಂತೆ ನಿರ್ಧಾರಗಳನ್ನು ಕೈಗೊಳ್ಳುತ್ತಿಿವೆ. ಅದರಿಂದ ಆಗುವ ಮುಂದಿನ ಪರಿಣಾಮಗಳ ಬಗ್ಗೆೆ ಅವುಗಳು ಸರಿಯಾಗಿ ಯೋಚಿಸುವುದಿಲ್ಲ, ಕೆಲವೊಮ್ಮೆೆ ಯೋಚಿಸಲು ಸರಕಾರಗಳಿಗೆ ಸಮಯವಾದರೂ ಎಲ್ಲಿರುತ್ತದೆ? ಈ ದೇಶದಲ್ಲಿ ವರ್ಷ ಪೂರ್ತಿ ಒಂದಲ್ಲ ಒಂದು ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಸರಕಾರಗಳು ಚುನಾವಣೆಯನ್ನು ಗೆಲ್ಲಲು ಪ್ರತಿದಿನ ಒಂದಲ್ಲ ಒಂದು ಭರವಸೆಗಳನ್ನು ನೀಡುತ್ತದೆ. ಆ ಭರವಸೆಗಳು ಈಡೇರುತ್ತವೆಯೇ ಇಲ್ಲವೋ ಗೊತ್ತಿಿಲ್ಲ . ಅಷ್ಟರಲ್ಲಿ ಇನ್ನೊೊಂದು ಪ್ರಮುಖ ಚುನಾವಣೆ ಬಂದು ಹಳೆಯ ಸರಕಾರದ ಭರವಸೆಗಳು ಪಕ್ಕಕ್ಕೆೆ ಸರಿದು ಭರಿಸಲಾಗದ ಹೊಸ ಭರವಸೆಗಳು ಉದಯಿಸುತ್ತವೆ.

ಇತ್ತೀಚೆಗೆ ಕರ್ನಾಟಕದಲ್ಲಿ ಹೊಸ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಾಪನೆ ಒಂದು ಬೃಹತ್ ರಾಜಕೀಯ ವಿಷಯ ವಸ್ತುವಾಗಿದೆ. ಇಂದು ಕರ್ನಾಟಕದಲ್ಲಿ ಹೊಸ ಮೆಡಿಕಲ್ ಕಾಲೇಜುಗಳು ಕಡ್ಲೆೆ ಪುರಿಯಂತೆ ನನಗೊಂದು ನಿನಗೊಂದು ಎನ್ನುವಂತಾಗಿದೆ. ಇತ್ತೀಚೆಗೆ ಕೆ.ಆರ್.ಪೇಟೆ ಶಾಸಕರೂ ಸಹ ಅವರ ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಿಗಳಲ್ಲಿ ಬಹಿರಂಗವಾಗಿ ಕೋರಿಕೆ ಸಲ್ಲಿಸಿದ್ದಾಾರೆ. ಅಲ್ಲಿಗೆ ಜಿಲ್ಲೆೆಗೊಂದರಂತೆ ಇದ್ದ ಮೆಡಿಕಲ್ ಕಾಲೇಜು ಈಗ ತಾಲೂಕು ಮಟ್ಟಕ್ಕೆೆ ಬಂದು ಮುಂದೊಂದು ದಿನ ಹೋಬಳಿ ಮಟ್ಟಕ್ಕೆೆ ಅಥವಾ ಗಲ್ಲಿಗೊಂದರಂತೆ ಅಂಗನವಾಡಿಗಳಂತೆ ಆರಂಭವಾದರೂ ಆಶ್ಚರ್ಯವಿಲ್ಲ. ದೇಶದಲ್ಲಿ ನೂರಾರು-ಸಾವಿರಾರು ಮೆಡಿಕಲ್ ಕಾಲೇಜುಗಳು ಆಸ್ಪತ್ರೆೆಗಳಿದ್ದರೂ ಈ ದೇಶದ ಬಡಜನರ ಆರೋಗ್ಯ ಸ್ಥಿಿತಿಗತಿಗಳು ಇನ್ನು ಅದೋಗತಿ ಯಲ್ಲಿದೆ.

ಹೊಸ ವರ್ಷ ಮೆಡಿಕಲ್ ಕಾಲೇಜುಗಳ ಆರಂಭದ ವಿರುದ್ಧವಲ್ಲ. ಹೊಸ ಮೆಡಿಕಲ್ ಕಾಲೇಜುಗಳ ಆರಂಭಕ್ಕೆೆ ಬೇಕಾಗುವ ಹಣಕಾಸಿನ ವ್ಯವಸ್ಥೆೆ ಬೋಧಕ ಸಿಬ್ಬಂದಿ ಅವಶ್ಯಕತೆ ಅದರಲ್ಲೂ ಮುಖ್ಯವಾಗಿ ಹೊಸ ಹೊಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆೆಗಳಿಗೆ ಸಂಬಂಧಿಸಿದಂತೆ ಅವುಗಳ ಮೂಲಭೂತ ಸೌಲಭ್ಯಗಳು, ಅವಶ್ಯಕತೆಯನ್ನು ಪೂರೈಸಲು ಸರಕಾರ ಇರುವ ಆಸಕ್ತಿಿ ಮತ್ತು ಹಣಕಾಸಿನ ವ್ಯವಸ್ಥೆೆ ಇತ್ಯಾಾದಿ ಬಗ್ಗೆೆ. ಇತ್ತೀಚಿನ ಒಂದು ಅಂದಾಜಿನ ಪ್ರಕಾರ ಒಂದು ಹೊಸ ಮೆಡಿಕಲ್ ಕಾಲೇಜು ಆರಂಭಿಸಲು ಏನಿಲ್ಲವೆಂದರೂ ಸುಮಾರು 800 ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮೆಡಿಕಲ್ ಕಾಲೇಜುಗಳಿಗೆ ಭೂಮಿಯನ್ನು ಗುರುತಿಸಬೇಕು, ಅದನ್ನು ವಶಪಡಿಸಿಕೊಳ್ಳಲು ಕೋಟ್ಯಂತರ ಪರಿಹಾರ ನೀಡಬೇಕು. ಎಲ್ಲ ಸೌಲಭ್ಯಗಳಿರುವ ಭವ್ಯವಾದ ಕಟ್ಟಡದ ಅವಶ್ಯಕತೆ ಮತ್ತು ನುರಿತ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗಳ ನೇಮಕಾತಿ ಇತ್ಯಾಾದಿ. ಒಂದು ಮೆಡಿಕಲ್ ಕಾಲೇಜು ಆರಂಭಿಸುವುದು ಎಂದರೆ ಅದೊಂದು ಅಂಗನವಾಡಿ ಕೇಂದ್ರದಂತೆ ಅಲ್ಲ. ಇರುವ ಆಸ್ಪತ್ರೆೆಗಳು ಇಂದು ಅಧೋಗತಿಯಲ್ಲಿವೆ, ಇದರ ಬಗ್ಗೆೆ ಯಾರಿಗೂ ಆಸಕ್ತಿಿ ಇಲ್ಲ. ಆದರೆ, ಈಗ ರಾಜಕಾರಣಿಗಳು ಈಗ ದಿಢೀರ್ ಎಂದು ತಾಲೂಕಿಗೊಂದರಂತೆ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಒತ್ತಾಾಯಿಸುತ್ತಿಿರುವುದು ಏತಕ್ಕೆೆ ಎಂಬುವುದು ಮಾತ್ರ ಸದ್ಯಕ್ಕೆೆ ನಿಗೂಢ.

ಪ್ರತಿ ಮೆಡಿಕಲ್ ಕಾಲೇಜು ಆರಂಭಕ್ಕೆೆ ರಾಜ್ಯ ಸರಕಾರದ ಅನುಮತಿ ಇದ್ದರೆ ಸಾಲದು, ಅದಕ್ಕೆೆ ಮುಖ್ಯವಾಗಿ ಕೇಂದ್ರ ಸರಕಾರದ (ಎಂಸಿಐ) ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾದ ಅನುಮತಿ ಅವಶ್ಯಕ. ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾದ ಕಠಿಣವಾದ ನಿಯಮಾವಳಿಗಳನ್ನು ಪರಿಪಾಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾವು ತನ್ನ ನಿಯಮಾವಳಿ ಪ್ರಕಾರ ಕಾಲೇಜುಗಳಲ್ಲಿ ಬೇಕಾದ ಮೂಲಭೂತ ಸೌಲಭ್ಯವಿಲ್ಲದಿದ್ದರೆ, ಬೋಧನಾ ಸಿಬ್ಬಂದಿ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಅಂತ ಕಾಲೇಜುಗಳನ್ನು ಮುಚ್ಚಿಿಸುತ್ತದೆ. ಮೆಡಿಕಲ್ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸುವ ಅಂತಿಮ ಅಧಿಕಾರವನ್ನು ಅದು ಹೊಂದಿದೆ. ಓದುಗರಿಗೆ ನೆನಪಿರಬಹುದು. ಸುಮಾರು ಮೂರು ವರ್ಷಗಳಿಂದ ಇದೆ ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾ ನೂರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಮೆಡಿಕಲ್ ಕಾಲೇಜಿನ ಮಾನ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಿತ್ತು. ಇದಕ್ಕೆೆ ಕಾರಣ ಅಲ್ಲಿ ಬೋಧಕ ಸಿಬ್ಬಂದಿಯೇ ಸರಿಯಾಗಿ ಇರಲಿಲ್ಲ. ಅದೇ ಕ್ಷಣದಲ್ಲಿ ಇದೇ ಮೈಸೂರು ಮೆಡಿಕಲ್ ಕಾಲೇಜಿನಿಂದ ಪದವಿ ಪಡೆದು ಗಲ್‌ಫ್‌ ದೇಶಗಳಲ್ಲಿ ಕೆಲಸ ಮಾಡುತ್ತಿಿದ್ದ ನೂರಾರು ವೈದ್ಯರು ಕೆಲ ದಿನಗಳ ಮಟ್ಟಿಿಗೆ ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಅದರಲ್ಲಿ ಇತ್ತೀಚೆಗೆ ಕೆಲವು ಖಾಸಗಿ ಮೆಡಿಕಲ್ ಕಾಲೇಜುಗಳು ಸೀಟ್ ಬ್ಲಾಾಕಿಂಗ್ ಎಂಬ ದಂಧೆ ನಡೆಸಿ ಕೋಟ್ಯಂತರ ರುಪಾಯಿಗಳನ್ನು ಅಕ್ರಮವಾಗಿ ಸಂಪಾದಿಸುವ ವಿಚಾರ ಎಲ್ಲರಿಗೂ ತಿಳಿದಿದೆ.

ಸರಕಾರ ಇತ್ತೀಚೆಗೆ ಆರಂಭಿಸಿರುವ ಕೊಪ್ಪಳ, ಚಾಮರಾಜನಗರ, ಕೊಡಗು ಇತ್ಯಾಾದಿ ಜಿಲ್ಲೆೆಗಳಲ್ಲಿ ಆರಂಭವಾಗಿರುವ ಮೆಡಿಕಲ್ ಕಾಲೇಜುಗಳು ದುಸ್ಥಿಿತಿ. ಇಂದಿಗೂ ಈ ಮೆಡಿಕಲ್ ಕಾಲೇಜುಗಳಲ್ಲಿ ಸರಿಯಾದ ಸೌಲಭ್ಯವಿಲ್ಲ. ಮುಖ್ಯವಾಗಿ ಎಲ್ಲಾಾ ವಿಭಾಗಗಳಲ್ಲೂ ಬೇಕಾಗಿರುವ ನುರಿತ ಬೋಧಕ ಸಿಬ್ಬಂದಿಯಂತೂ ಇಲ್ಲವೇ ಇಲ್ಲ. ಹಾಗೆಯೇ ಇಂದು ಎರಡು ಲಕ್ಷ ರುಪಾಯಿ ಸಂಬಳ ನೀಡಿದರೂ ವೈದ್ಯರು ಬಂದು ಮೆಡಿಕಲ್ ಕಾಲೇಜುಗಳಲ್ಲಿ ಪಾಠ ಮಾಡುವುದಿಲ್ಲ. ಕೆಲವು ಕಾಲೇಜುಗಳಲ್ಲಿ ತರಬೇತಿ ನಿರತ ವೈದ್ಯರು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾಾರ್ಥಿಗಳಿಗೆ ಪಾಠ ಮಾಡುವ ಪರಿಸ್ಥಿಿತಿ ಬಂದೊದಗಿದೆ ಎನ್ನಲಾಗಿದೆ. ಎಷ್ಟೋೋ ಹೊಸ ಮೆಡಿಕಲ್ ಕಾಲೇಜುಗಳಲ್ಲಿ ಎಲ್ಲಾಾ ಅಧ್ಯಯನ ವಿಭಾಗಗಳು ಸರಿಯಾಗಿ ಆರಂಭವಾಗಿಲ್ಲ. ಕೆಲವು ಹೊಸ ಮೆಡಿಕಲ್ ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಶಾಲೆ, ವಸತಿ ನಿಲಯ ಇನ್ನಿಿತರ ಯಾವ ಸೌಲಭ್ಯವೂ ಸಹ ಸರಿಯಾಗಿಲ್ಲ. ಆದರೂ ಎದುರಿಗೊಂದು ಬೋರ್ಡ್ ಹಾಕಿಕೊಂಡು ಯಾವುದೋ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿಿವೆ. ಮೆಡಿಕಲ್ ಕಾಲೇಜುಗಳ ಆರಂಭದೊಂದಿಗೆ ಅವುಗಳಿಗೆ ಒಂದು ಪಕ್ಕದ ಹಾಸ್ಪಿಿಟಲ್ ಸಹ ಬೇಕಾಗುತ್ತದೆ. ಕೆಲವೊಂದು ಮೆಡಿಕಲ್ ಕಾಲೇಜುಗಳಿಗೆ ಹೊಂದಿಕೊಂಡಂತೆ ಆಸ್ಪತ್ರೆೆಗಳೇ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹೊಸ ಮೆಡಿಕಲ್ ಕಾಲೇಜಿನ ವಿದ್ಯಾಾರ್ಥಿಗಳು ಪಕ್ಕದ ಇನ್ಯಾಾವುದೂ ಆಸ್ಪತ್ರೆೆಯಲ್ಲಿ ತರಬೇತಿಯನ್ನು ಪಡೆಯಬೇಕಾಗುತ್ತದೆ. ಹೆಚ್ಚಿಿನ ಇಂಥ ಕಾಲೇಜುಗಳು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಎಂಬ ಬೋರ್ಡ್‌ನ್ನು ನೇತಾಕಿ ಕೊಂಡಿರುತ್ತವೆ. ಆದರೆ, ಇಲ್ಲಿ ಯಾವುದೇ ರೀತಿ ಸಂಶೋಧನೆಗಳು ನಡೆಯುವುದೇ ಇಲ್ಲ?

ಇಂದು ಮೆಡಿಕಲ್ ಕಾಲೇಜುಗಳಿಗೆ ‘ಶವದ ಪೂರೈಕೆ ಬಹಳ ದೊಡ್ಡ ಸಮಸ್ಯೆೆ’. ಮೆಡಿಕಲ್ ವಿದ್ಯಾಾರ್ಥಿಗಳು ತಮ್ಮ ಎರಡನೆ ವರ್ಷದಲ್ಲಿ ಶವಗಳ ಕುರಿತು ಅಧ್ಯಯನ ಮಾಡಬೇಕಾಗುತ್ತದೆ. ಅವರು ವೈದ್ಯಕೀಯ ಅಧ್ಯಯನವನ್ನು ಪ್ರಾಾಕ್ಟಿಿಕಲ್ ರೀತಿಯಲ್ಲಿ ಹೆಚ್ಚಾಾಗಿ ಕಲಿಯಬೇಕಾಗುತ್ತದೆ. ಇದಕ್ಕೆೆ ಹೆಚ್ಚಿಿನ ಶವಗಳ ಅವಶ್ಯಕತೆ ಇರುತ್ತದೆ. ಆದರೆ, ಹೆಚ್ಚಿಿನ ಮೆಡಿಕಲ್ ಕಾಲೇಜುಗಳು ಇಂದು ತಮ್ಮ ವಿದ್ಯಾಾರ್ಥಿಗಳಿಗೆ ಶವ ಪೂರೈಸುವುದರಲ್ಲಿ ಬಹಳ ಸಮಸ್ಯೆೆಗಳನ್ನು ಎದುರಿಸುತ್ತಿಿವೆ. ಹೆಚ್ಚಿಿನ ಸಂದರ್ಭಗಳಲ್ಲಿ 30 ರಿಂದ 40 ಜನ ವಿದ್ಯಾಾರ್ಥಿಗಳಿಗೆ ಒಂದು ಶವವನ್ನು ನೀಡಲಾಗುತ್ತದೆ! ಸರಕಾರಿ ಕಾಲೇಜುಗಳಲ್ಲಿ ಈ ಸಮಸ್ಯೆೆ ವಿಪರೀತವಾಗಿದೆ. ಪಶ್ಚಿಿಮದ ದೇಶಗಳಲ್ಲಿ ಪ್ರತಿ ಮೆಡಿಕಲ್ ಕಾಲೇಜಿನಲ್ಲಿ ಐದು ಜನ ವಿದ್ಯಾಾರ್ಥಿಗಳಿಗೆ ಒಂದು ಶವವನ್ನು ಪೂರೈಸಲೇಬೇಕೆಂಬ ನಿಯಮವಿದೆ. ಹೆಚ್ಚಿಿನ ಹೊಸ ಸರಕಾರಿ ಕಾಲೇಜುಗಳಲ್ಲಿನ ಅನಾಟಮಿ, ಪೆಥಾಲಜಿ ಇಂತಹ ಪ್ರಮುಖ ವಿಭಾಗಗಳಲ್ಲಿನ ಮೂಲಭೂತ ಸಮಸ್ಯೆೆಗಳು ಭೂತಾಕಾರವಾಗಿ ಬೆಳೆದು ನಿಂತಿದೆ. ಎಷ್ಟೋೋ ಮೆಡಿಕಲ್ ಕಾಲೇಜುಗಳಲ್ಲಿ ಸರಿಯಾದ ಆಧುನಿಕ ಉಪಕರಣಗಳು ಇಂದು ಲಭ್ಯವಿಲ್ಲ. ಒಂದು ಸೂಕ್ಷ್ಮ ದರ್ಶಕಕ್ಕಾಾಗಿ, ಕೆಲ ವಿದ್ಯಾಾರ್ಥಿಗಳ ಮಧ್ಯೆೆ ಪೈಪೋಟಿಯೇ ನಡೆಯುತ್ತದೆ. ಇನ್ನು ಕೆಲವು ವೈದ್ಯಕೀಯ ವಿದ್ಯಾಾರ್ಥಿಗಳು. ಇಷ್ಟೆೆಲ್ಲಾಾ ಸಮಸ್ಯೆೆಗಳಿದ್ದರೂ ಸರಕಾರಗಳು ದಿನದಿಂದ ದಿನಕ್ಕೆೆ ಹೊಸ ಮೆಡಿಕಲ್ ಕಾಲೇಜುಗಳನ್ನು ಪೈಪೋಟಿಯ ಮೇಲೆ ಆರಂಭಿಸುತ್ತಿಿದೆ.

ಇನ್ನು ಸರಕಾರಿ ಕಾಲೇಜುಗಳ ಪ್ರಮುಖ ಸಮಸ್ಯೆೆಯೆಂದರೆ ಅದು ಸೂಕ್ತ ಬೋಧನ ಸಿಬ್ಬಂದಿಯ ಲಭ್ಯತೆ. ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾದ ಪ್ರಕಾರ ನಿಗದಿತ ಸಂಖ್ಯೆೆಯ ವಿದ್ಯಾಾರ್ಥಿಗಳಿಗೆ ಇಂತಿಷ್ಟು ಪ್ರಮಾಣದ ಬೋಧಕ ಸಿಬ್ಬಂದಿ ಕಡ್ಡಾಾಯ ಇರಬೇಕೆಂಬ ನಿಯಮವಿದೆ. ಆದರೆ, ಇಂದು ಹೆಚ್ಚಿಿನ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಗೈನಿಕ್, ಮೂಳೆ ಕ್ಯಾಾನ್ಸರ್ ಮುಂತಾದ ಅತ್ಯಂತ ಪ್ರಮುಖ ಬೇಡಿಕೆಯುಳ್ಳ ವಿಭಾಗಗಳಲ್ಲಿ ನುರಿತ ಬೋಧಕ ಸಿಬ್ಬಂದಿ ಇಲ್ಲ ಎಂಬ ವರದಿಗಳು ಎಷ್ಟೋೋ ಶೈಕ್ಷಣಿಕ ಪತ್ರಿಿಕೆಗಳಲ್ಲಿ ವರದಿಯಾಗಿದೆ. ರಾಜ್ಯ ಒಂದು ಪ್ರತಿಷ್ಠಿಿತ ಖಾಸಗಿ ಮೆಡಿಕಲ್ ಕಾಲೇಜು ಇತ್ತೀಚೆಗೆ ಒಬ್ಬ ಬೋಧಕ ಸಿಬ್ಬಂದಿ ಹೆಸರನ್ನು ಎರಡು ವಿಭಾಗಗಳಲ್ಲಿ ತೋರಿಸಿ ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾ ತಜ್ಞರು ಆ ಕಾಲೇಜಿಗೆ ತಪಾಸಣೆಗೆ ಬಂದಾಗ ಆಡಳಿತ ಮಂಡಳಿ ಸಿಕ್ಕಿಿಬಿದ್ದ ಉದಾಹರಣೆ ಇದೆ.

ಇನ್ನೊೊಂದು ಪ್ರಮುಖ ವಿಷಯವೆಂದರೆ ಸರಕಾರಿ ಕಾಲೇಜುಗಳಲ್ಲಿ ಜನರ ತೆರಿಗೆ ಹಣದಲ್ಲಿ ವೈದ್ಯಕೀಯ ಪದವಿ ಪಡೆವ ವಿದ್ಯಾಾರ್ಥಿಗಳು ಕೊನೆಗೆ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪಾಠ ಮಾಡಲು ಬರುವುದಿಲ್ಲ. ಒಂದಲ್ಲ ಎರಡು ಲಕ್ಷ ರುಪಾಯಿ ನೀಡಿದರು. ಸಹ ಸೂಕ್ತ ವಿದ್ಯಾಾರ್ಹತೆ ಹೊಂದಿರುವ ಅನುಭವ ಹೊಂದಿರುವ ಪ್ರಾಾಧ್ಯಾಾಪಕರು ಸರಕಾರಿ ಕಾಲೇಜುಗಳಲ್ಲಿ ಇಂದು ಬೋಧನೆ ಮಾಡಲು ಸಿಗುವುದಿಲ್ಲ. ಹೆಚ್ಚಿಿನ ಪರಿಣತಿ ಹೊಂದಿರುವ ವೈದ್ಯರು 5 ಲಕ್ಷ ರುಪಾಯಿಗಳನ್ನು ಒಂದೇ ವಾರದಲ್ಲಿ ಖಾಸಗಿ ಆಸ್ಪತ್ರೆೆ ಸಂಪಾದಿಸುವ ಸಾಮರ್ಥ್ಯ ಹೊಂದಿರುತ್ತಾಾರೆ. ಇಂಥವರು ಸರಕಾರಿ ಕಾಲೇಜುಗಳಲ್ಲಿ ಪಾಠ ಮಾಡಲು ಬರುತ್ತಾಾರೆಯೇ? ಸೂಕ್ತ ಸೌಲಭ್ಯ ಮತ್ತು ಬೋಧಕರು ಇಲ್ಲದಿದ್ದ ಮೇಲೆ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಘನ ಉದ್ದೇಶವಾದರೂ ಏನು? ಓರ್ವ ಪ್ರಾಾಥಮಿಕ ಶಾಲೆ ಅಥವಾ ಪ್ರೌೌಢಶಾಲಾ ಶಿಕ್ಷಕರು ವಾರಕ್ಕೆೆ ಸುಮಾರು 32 ಗಂಟೆ ಪಾಠ ಮಾಡಬೇಕಾಗುತ್ತದೆ. ಆದರೆ, ಒಂದು ಮೆಡಿಕಲ್ ಕಾಲೇಜಿನಲ್ಲಿ ಪ್ರಾಾಧ್ಯಾಾಪಕರು ವಾರಕ್ಕೆೆ ಕೇವಲ ಮೂರರಿಂದ ನಾಲ್ಕು ಗಂಟೆಗಳು ಮಾತ್ರ ಪಾಠ ಮಾಡುತ್ತಾಾರೆ. ವಾರಕ್ಕೆೆ ನಾಲ್ಕು ಗಂಟೆ ಪಾಠ ಮಾಡಲು ಅವರಿಗೆ ಎರಡು ಲಕ್ಷ ರುಪಾಯಿಗಳನ್ನು ವೇತನವಾಗಿ ನೀಡಲಾಗುತ್ತದೆ. ಸರಕಾರಿ ಕಾಲೇಜಿನ ಬೋಧಕರು ಬೇರೆಡೆ ಕೆಲಸ ಮಾಡುವುದನ್ನು ಮತ್ತು ತಮ್ಮದೇ ಆದ ಕ್ಲಿಿನಿಕ್ ಅನ್ನು ನಡೆಸುವುದನ್ನು ತಪ್ಪಿಿಸಲು ಅವರಿಗೆ ನಾನು ಪ್ರಾಾಕ್ಟೀಸ್ ಅಲೋಯೆನ್‌ಸ್‌ ಎನ್ನುವ ಹೆಚ್ಚುವರಿ ಹಣವನ್ನು ಸಹ ನೀಡಲಾಗುತ್ತದೆ. ಆದರೂ ಹೆಚ್ಚಿಿನ ಸರಕಾರಿ ವೈದ್ಯರು ಕದ್ದುಮುಚ್ಚಿಿ ಖಾಸಗಿ ಆಸ್ಪತ್ರೆೆಗಳಲ್ಲಿ ಮತ್ತು ತಮ್ಮದೇ ಆದ ಕ್ಲಿಿನಿಕ್‌ನಿಂದ ಹಣ ಸಂಪಾದಿಸುತ್ತಾಾರೆ. ಇವರು ಕಾಲೇಜುಗಳಿಗಿಂತ ಹೆಚ್ಚಾಾಗಿ ತಮ್ಮ ಖಾಸಗಿ ಆಸ್ಪತ್ರೆೆಯಲ್ಲಿ ಸದಾ ಇರುತ್ತಾಾರೆ. ಇದರ ಮಧ್ಯೆೆ ಕೆಲವು ಪ್ರಾಾಮಾಣಿಕ ವೈದ್ಯರಂತೆ ಖಂಡಿತವಾಗಲೂ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಇದ್ದೇ ಇರುತ್ತಾಾರೆ. ಅದರ ಬಗ್ಗೆೆ ಯಾವುದೇ ಸಂಶಯವಿಲ್ಲ. ಸರಕಾರ ಹೊಸ ಮೆಡಿಕಲ್ ಕಾಲೇಜುಗಳನ್ನು ಸ್ಥಾಾಪಿಸುವುದು ತಪ್ಪಲ್ಲ. ಅದಕ್ಕಿಿಂತ ಮೊದಲು ಇರುವ ಮೆಡಿಕಲ್ ಕಾಲೇಜುಗಳಿಗೆ ಸೂಕ್ತ ಸೌಲಬ್ಯ ನೀಡುವುದು ಮುಖ್ಯ.