Friday, 20th September 2024

ಸರಕಾರ ರಚಿಸುವುದು ಇವರ ಬೇಳೆ ಬೇಯಿಸಿಕೊಳ್ಳುವುದಕ್ಕಾ?

ರಾಂ ಎಲ್ಲಂಗಳ, ಮಂಗಳೂರು, ಹವ್ಯಾಾಸಿ ಬರಹಗಾರರು

ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದುದರ ಪರಿಣಾಮ ಚುನಾವಣಾ ಪೂರ್ವ ಮೈತ್ರಿ ಮುರಿಯಿತು. ಚುನಾವಣೋತ್ತರ ಮೈತ್ರಿಗೆ ಮುಂದಾಯಿತು. ಬಿಜೆಪಿಯೊಂದಿಗಿನ ತ್ರಿದಶಕಗಳಷ್ಟು ಹಳೆಯದಾದ ಮೈತ್ರಿ ಮುರಿದು ಹೊಸಮೈತ್ರಿಯತ್ತ ಮುಖ ಮಾಡಿದೆ.

ಈ ಹಿಂದೆ 2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೋತ್ತರ ವಿದ್ಯಮಾನಗಳು ಸಾಕಷ್ಟು ಸುದ್ದಿ ಮಾಡಿದ್ದವು. ವಿಶ್ವವೇ ಹುಬ್ಬೆೆತ್ತಿ ನೋದುವಂತೆ ಮಾಡಿದ್ದವು. ಇದೀಗ 2019ರಲ್ಲಿ ನೆರೆಯ ಮಹರಾಷ್ಟ್ರದ ಸರದಿ. ಅಲ್ಲಿಯ ವಿಧಾನಸಭಾ ಚುನಾವಣೋತ್ತರ ವಿದ್ಯಮಾನಗಳಂತೂ ಕರ್ನಾಟಕಕ್ಕಿಿಂತಲೂ ಒಂದು ಹೆಜ್ಜೆೆ ಮುಂದುವರಿದಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದರೂ ಅನಿಶ್ಚಿಿತೆಯಿನ್ನೂ ಮುಂದುವರಿದಿದೆ.
ರಾಜ್ಯದಲ್ಲಂದು ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿಿದರೂ ಪ್ರಯೋಜನವಾಗಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಿಯಾಗಿ ಪ್ರಮಾಣವಚನ ಸ್ವೀಕಾರ ಕೈಗೊಂಡರೂ ಬಹುಮತ ಸಾಬೀತುಗೊಳಿಸಲಾರದೆ ಹೋದರು. ಕೊನೆಗೆ ತೃತೀಯ ಸ್ಥಾಾನದಲ್ಲಿದ್ದ ಜೆಡಿಎಸ್ ಕಾಂಗ್ರೆೆಸ್ ಜತೆಗೂಡಿ ಮೈತ್ರಿಿ ಸರಕಾರ ರಚಿಸಿತು. ಎಚ್.ಡಿ. ಕುಮಾರಸ್ವಾಾಮಿ ರಾಜ್ಯದ 25ನೇ ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದರು. ಚುನಾವಣಾ ಫಲಿತಾಂಶ ಹೊರಬಿದ್ದು ವಾರವುರುಳಿದ ಬಳಿಕವಾದರೂ ರಾಜ್ಯದಲ್ಲಿ ಸರಕಾರವೊಂದು ಅಸ್ತಿಿತ್ವಕ್ಕೆೆ ಬಂತು.

ಆದರೆ, ಮಹರಾಷ್ಟ್ರದಲ್ಲಿ ಅಕ್ಟೋೋಬರ್ 21ರಂದು ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡು 20 ದಿನಗಳುರುಳಿದರೂ ಇನ್ನೂ ಸರಕಾರ ಭಾಗ್ಯ ಒದಗಿ ಬಂದಿಲ್ಲ. ಬಿಜೆಪಿ 105 ಸ್ಥಾಾನಗಳನ್ನೂ ಮಿತ್ರಪಕ್ಷ ಶಿವಸೇನೆ 55 ಸ್ಥಾಾನಗಳನ್ನೂ ಪಡೆದು ಸ್ಪಷ್ಟಬಹುಮತವಿದ್ದೂ ಸರಕಾರ ರಚನೆಗೆ ಮಿತ್ರಪಕ್ಷವೇ ತೊಡಕಾದುದೊಂದು ದುರಂತ. ಶಿವಸೇನೆಯ ಬೇಡಿಕೆಗೆ ಮಣಿಯದ ಬಿಜೆಪಿ ಪಕ್ಕಕ್ಕೆೆ ಸರಿಯಿತು. ಸರಕಾರ ರಚನೆಗೆ ಪ್ರಯತ್ನಿಿಸಲು ಬೇರೆಯವರಿಗೆ ಅನುವು ಮಾಡಿಕೊಟ್ಟಿಿತು. ಅವಕಾಶ ಶಿವಸೇನೆಯ ಪಾಲಿಗೆ ವರ್ಗಾವಣೆಗೊಂಡಿತು. ಅದೂ ವಿಫಲಗೊಂಡು ಕೊನೆಗೆ ತೃತೀಯ ಸ್ಥಾಾನಯಾದ ಎನ್‌ಸಿಪಿಗೆ ಆ ಅವಕಾಶ ಬಂದೊದಗಿತು. ಆದರೆ, ನಿಗದಿತ ಕಾಲಾವಕಾಶದೊಳಗಾಗಿ ಸಂಖ್ಯಾಾಬಲ ಹೊಂದಿಸಿಕೊಳ್ಳಲಾರದೆ ಸದ್ಯ ರಾಷ್ಟ್ರಪತಿ ಆಳ್ವಿಿಕೆ ಹೇರಲಾಗಿದೆ. ಇನ್ನೂ ಅಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆೆಸ್ ಜತೆಗೂಡಿಯಾದರೂ ಸರಕಾರ ರಚಿಸುವ ಸರ್ಕಸ್ ನಡೆದಿದೆ!

ಎರಡು ರಾಜ್ಯಗಳ ಚುನಾವಣೋತ್ತರ ವಿದ್ಯಮಾನಗಳನ್ನು ಗಮನಿಸಿದರೆ ಅದರ ಹಿಂದಿರುವುದು ಪಕ್ಷಗಳ ಅಧಿಕಾರದಾಹ ಎಂಬುದು ಸ್ಪಷ್ಟ. ಪ್ರಾಾಯಶಃ ಈ ದಿನಗಳಲ್ಲಿ ಸರಕಾರ ಕಟ್ಟುವಲ್ಲಾಾಗಲೀ ಕೆಡಹುವಲ್ಲಾಾಗಲೀ ಅಧಿಕಾರದಾಹದ್ದೇ ನಿರ್ಣಾಯಕ ಪಾತ್ರವೇನೋ ಅನಿಸುತ್ತದೆ. ರಾಜ್ಯದಲ್ಲಿ ಅಂದು ಮೈತ್ರಿಿ ಸರಕಾರ ಅಸ್ತಿಿತ್ವಕ್ಕೆೆ ಬರಲು ಜೆಡಿಎಸ್ ಮತ್ತು ಕಾಂಗ್ರೆೆಸ್ ಪಕ್ಷಗಳ ಅಧಿಕಾರ ದಾಹವೇ ಕಾರಣವಾಗಿತ್ತು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದೊಂದೇ ಗುರಿಯಾಗಿತ್ತು. ಅಲ್ಲೇನೋ ಪಕ್ಷಗಳ ಅಧಿಕಾರದಾಹ ಪಕ್ಷಗಳೆರಡನ್ನು ಒಂದು ಮಾಡಿತ್ತು. ಮೈತ್ರಿಿ ಬೆಸೆದಿತ್ತು. ಆದರೆ, ಮಹರಾಷ್ಟ್ರದಲ್ಲಿ ಭಿನ್ನ ಪರಿಸ್ಥಿಿತಿ ನಿರ್ಮಾಣವಾಯಿತು. ಮೂರು ದಶಕಗಳಿಂದ ಭದ್ರವಾಗಿದ್ದ ಬಿಜೆಪಿ-ಶಿವಸೇನೆ ಮೈತ್ರಿಿ ಛಿದ್ರಗೊಂಡಿತು. ಶಿವಸೇನೆ ಅಧಿಕಾರ ಹಂಚಿಕೆ ವಿಚಾರವಾಗಿ ಪಟ್ಟು ಹಿಡಿದುದರ ಪರಿಣಾಮವದು.

ಜತೆಯಾಗಿಯೇ ಚುನಾವಣೆ ಎದುರಿಸಿದ್ದ ಶಿವಸೇನೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ವರಸೆ ಬದಲಿಸಿತು. 50:50ರ ಅನುಪಾತದಲ್ಲಿ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿಯಿತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆೆ ಮೊದಲ ಬಾರಿಗೆ ಗೆದ್ದು ಬಂದ ತಮ್ಮ ಮಗ ಆದರ್ಶ ಠಾಕ್ರೆೆಯನ್ನು ಮುಖ್ಯಮಂತ್ರಿಿ ಗಾದಿಗೇರಿಸಲು ಹಂಬಲಿಸಿ ಹಠಹಿಡಿದು ನಿಂತರು. ಬಿಜೆಪಿ ಒಪ್ಪಲಿಲ್ಲ. ದೇವೇಂದ್ರ ಫಡ್ನವೀಸ್ ಶಿವಸೇನೆಯನ್ನು ಕಟ್ಟಿಿಕೊಂಡು ದ್ವಿಿತೀಯ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಿಯಾಗುವ ವಿಚಾರ ಕೈಬಿಟ್ಟರು. ಸರಕಾರ ರಚನೆಯಿಂದ ಹಿಂದೆ ಸರಿದರು. ಮೈತ್ರಿಿ ಮುರಿಯಿತು.

ಮೈತ್ರಿಿ ಮುರಿದುದಷ್ಟೇ ಅಲ್ಲ. ಬಿಜೆಪಿಯೊಂದಿಗೆ ಟೂ ಬಿಟ್ಟ ಶಿವಸೇನೆ ಎನ್‌ಸಿಪಿಯೊಡಗೂಡಿ ಸರಕಾರ ರಚಿಸಲು ಮುಂದಾಯಿತು. ಅದಕ್ಕಾಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಒಡ್ಡಿಿದ ಷರತ್ತನ್ನು ಪಾಲಿಸಲೆಂದು ಎನ್‌ಡಿಎ ಮೈತ್ರಿಿಕೂಟದಿಂದ ಹೊರಬಂತು. ಮೋದಿ ಸಚಿವ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಶಿವಸೇನೆಯ ಸಂಸದ ಅರವಿಂದ ಸಾವಂತ್ ಸಚಿವ ಸ್ಥಾಾನದಿಂದ ಹೊರನಡೆದರು. ಇಷ್ಟಾಾದರೂ ಎನ್‌ಸಿಪಿಯೊಂದಿಗೆ ಕೈಜೋಡಿಸಿ ಸರಕಾರ ರಚಿಸಲಾಗಿಲ್ಲ. ಅಧಿಕಾರಕ್ಕೆೆ ಪಟ್ಟುಹಿಡಿದ ಶಿವಸೇನೆಗೆ ಅಧೋಗತಿಯಾಯಿತು. ಅಧಿಕಾರದಾಸೆಯ ಬೆಂಬತ್ತಿಿ ಹೋಗಿ ತನಗೆ ತಾನೇ ಖೆಡ್ಡಾಾ ತೋಡಿಕೊಂಡ ಹಾಗಾಯಿತು. ಲಾಟರಿ ಗೆದ್ದವನೊಬ್ಬನ ಕತೆ ನೆನಪಿಸುವಂತಾಯಿತು. ಹತ್ತು ರುಪಾಯಿ, ಕೊಟ್ಟು ಲಾಟರಿ ಟಿಕೆಟ್ ಕೊಂಡುಕೊಂಡವನೊಬ್ಬನಿಗೆ ಲಾಟರಿ ಮಗುಚಿತು. ಲಾಟರಿ ಅಂಗಡಿಯವನ ಬಳಿ ಹೋಗಿ ಕೇಳಿದಾಗ ಆತ ಟ್ಯಾಾಕ್‌ಸ್‌ ಎಲ್ಲಾಾ ಕಳೆದು ಅರುವತ್ತೈದು ಲಕ್ಷ ಸಿಗುತ್ತೆೆ ಅಂದನಂತೆ. ಅದಕ್ಕೊೊಪ್ಪದ ಗಿರಾಕಿ ಕೊಟ್ಟರೆ ಕೋಟಿ ಕೊಡು. ಇಲ್ಲಾಾಂದ್ರೆೆ ತಗೋ ನಿನ್ನ ಟಿಕೆಟ್. ನನ್ನ ಹತ್ತು ರುಪಾಯಿ. ಕೊಟ್ಟುಬಿಡು ಅಂದನಂತೆ. ಸದ್ಯ ಶಿವಸೇನೆಯದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆ ಲಾಟರಿ ಗಿರಾಕಿ ಪಾಡು!

ಪಟ್ಟು ಹಿಡಿದು ಕೂತರೆ ಹೀಗೆಯೇ ಆಗುವುದು. ಕೈಗೆ ಬಂದ ತುತ್ತೂ ಬಾಯಿಗಿಲ್ಲದಂತಾಗುವುದು. ಪಟ್ಟು ಬಿಡದ ಪರಿಣಾಮ ಮೈತ್ರಿಿ ಮುರಿದ ಇನ್ನಷ್ಟು ಉದಾಹರಣೆಗಳಿವೆ. ಹಿಂದೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆೆ ವಿಶೇಷ ಸ್ಥಾಾನಮಾನಕ್ಕೆೆ ಪಟ್ಟುಹಿಡಿದರು. ಎನ್‌ಡಿಎ ಸರಕಾರ ಅದಕ್ಕೊೊಪ್ಪದ ಕಾರಣ ನಾಯ್ಡು ಮೈತ್ರಿಿಕೂಟದಿಂದ ಹೊರನಡೆದರು. ಪರಿಣಾಮವಾಗಿ ಮುಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ನೆಲಕ್ಕಚ್ಚಿಿತು. ಎಲ್ಲರಿಗೂ ಎಲ್ಲ ಪಕ್ಷಗಳಿಗೂ ಅಧಿಕಾರ ಬೇಕು. ಆದರೆ, ತುಸು ಹೊಂದಿಕೊಂಡು ಹೋಗುವ ವ್ಯವಧಾನ ಯಾರಿಗೂ ಇಲ್ಲ. ಎಲ್ಲವೂ ತಮ್ಮ ಮೂಗಿನ ನೇರಕ್ಕೆೆ ನಡೆಯಬೇಕು ಎಂಬುದೇ ಎಲ್ಲರ ನಿಲುವು!

ಅಧಿಕಾರಕ್ಕಾಾಗಿ, ಸಚಿವ ಸ್ಥಾಾನ ಗಿಟ್ಟಿಿಸಿಕೊಳ್ಳುವುದಕ್ಕಾಾಗಿ ಅಷ್ಟೇ ಅಲ್ಲ. ಚುನಾವಣಾ ಟಿಕೆಟ್ ಹಂಚಿಕೆ ವಿಚಾರದಲ್ಲೂ ಪಟ್ಟು ಹಿಡಿಯುವುದು ಸರ್ವೇ ಸಾಮಾನ್ಯ. ಜಾರ್ಖಂಡ್ ವಿಧಾನಸಭಾ ಚುನಾವಣಾ ಸೀಟು ಹಂಚಿಕೆ ವಿಚಾರದಲ್ಲೂ ಹೀಗಾಗಿದೆ. ಸೀಟು ಹಂಚಿಕೆಯಲ್ಲಿ ಸರಿಯಾದ ಸೂತ್ರ ಅನುಸರಿಸುವಂತೆ ಮಿತ್ರಪಕ್ಷಗಳಾದ ಅಖಿಲ್ ಜಾರ್ಖಂಡ್ ವಿದ್ಯಾಾರ್ಥಿ ಒಕ್ಕೂಟ ಮತ್ತು ಲೋಕಜನ ಪಕ್ಷ ಪಟ್ಟುಹಿಡಿದುದರ ಪರಿಣಾಮ ಎನ್‌ಡಿಎಯಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿದೆ. ಬಿಜೆಪಿಯನ್ನು ಇಕ್ಕಟ್ಟಿಿಗೆ ಸಿಲುಕಿಸಿದೆ.
ಹೇಗಾದರೂ ಸೈ. ಗೆದ್ದು ಅಧಿಕಾರಕ್ಕೆೆ ಬರುವುದೇ ಮುಖ್ಯವಾಗಿ ಹೋದಾಗ ಒಂದೊಮ್ಮೆೆ ಟಿಕೆಟ್ ಸಿಗದೆ ಹೋದಾಗ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಇದೆ. ಇಲ್ಲವೇ ಪಕ್ಷಾಂತರಗೊಂಡು ಬೇರೆ ಪಕ್ಷಗಳಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ಇದೆ. ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆೆಗಳ ಚುನಾವಣೆ ಇದಕ್ಕೆೆ ಸಾಕ್ಷಿ. ಮೊನ್ನೆೆತನಕ ಹೆಗಲಿಗೆ ಕೈ ಹಾಕಿಕೊಂಡು ಒಟ್ಟಿಿಗೆ ಹೋಗುತ್ತಿಿದ್ದ ಒಂದೇ ಪಕ್ಷದ ಕಾರ್ಯಕರ್ತರೂ ಟಿಕೆಟ್ ಸಿಗದೆ ಭಿನ್ನಭಿನ್ನ ಪಕ್ಷಗಳಿಂದ ಕಣಕ್ಕಿಿಳಿದು ಮುಖಾಮುಖಿಯಾದಾಗ ಮತದಾರರಲ್ಲಿ ಗೊಂದಲಕ್ಕೆೆಡೆಯಾಗುತ್ತದೆ. ಉತ್ಸಾಾಹ ಕಡಿಮೆಯಾಗುತ್ತದೆ. ಮತದಾನ ಪ್ರಮಾಣದಲ್ಲಿ ಕುಸಿತವಾಗುತ್ತದೆ. ಬುದ್ಧಿಿವಂತರ ಜಿಲ್ಲೆೆಯೆಂದೇ ಹೆಸರಾಗಿರುವ ದಕ್ಷಿಿಣ ಕನ್ನಡ ಜಿಲ್ಲೆೆಯ ಮಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಮೊನ್ನೆೆ ಶೇ.59.67 ಮತದಾನ ದಾಖಲಾಯಿತಷ್ಟೆೆ.

ಬಹುಮತ ಪಡೆದ ಪಕ್ಷ ಸರಕಾರ ರಚಿಸಬೇಕು. ಬಹುಮತದ ಕೊರತೆ ಕಂಡು ಬಂದಲ್ಲಿ ಬೇರೆ ಪಕ್ಷದೊಂದಿಗೆ ಮೈತ್ರಿಿ ಮಾಡಿಕೊಂಡು ಸರಕಾರ ರಚಿಸಲು ಅವಕಾಶವಿದೆ. ಆದರೆ, ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದುದರ ಪರಿಣಾಮ ಚುನಾವಣಾ ಪೂರ್ವ ಮೈತ್ರಿಿ ಮುರಿಯಿತು. ಚುನಾವಣೋತ್ತರ ಮೈತ್ರಿಿಗೆ ಮುಂದಾಯಿತು. ಬಿಜೆಪಿಯೊಂದಿಗಿನ ತ್ರಿಿದಶಕಗಳಷ್ಟು ಹಳೆಯದಾದ ಮೈತ್ರಿಿ ಮುರಿದು ಹೊಸಮೈತ್ರಿಿಯತ್ತ ಮುಖ ಮಾಡಿತು. ಎನ್‌ಸಿಪಿ ಮುಖಂಡ ಶರದ್ ಪವಾರ್ ನಿಗದಿತ ಅವಧಿಯೊಳಗಾಗಿ ಸಂಖ್ಯಾಾಬಲ ಹೊಂದಿಸಿಕೊಳ್ಳಲಾರದೆ ಹೋದರು. ಅಲ್ಲಿ ಇನ್ನೂ ಸರಕಾರ ರಚನೆಯಾಗಿಲ್ಲ. ಆರಿಸಿ ಕಳುಹಿದವರ ಅಹವಾಲು ಕೇಳುವರಿಲ್ಲ. ಈ ಸೌಭಾಗ್ಯಕ್ಕೆೆ ಕೋಟಿ ಕೋಟಿ ಸುರಿದು ಚುನಾವಣೆ ನಡೆಸುವ ಅಗತ್ಯವಿತ್ತೇ ಎಂಬುದೇ ಪ್ರಶ್ನೆೆ.

ಸದ್ಯ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಿಕೆ ಹೇರಲಾಗಿದೆ. ಅದೇನೂ ಹೊಸದಲ್ಲ. ಸಂವಿಧಾನದ 356ನೇ ವಿಧಿಯಲ್ಲಿ ಅದಕ್ಕೆೆ ಅವಕಾಶವಿದೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾನಾ ರಾಜ್ಯಗಳಲ್ಲಿ ಒಟ್ಟಾಾಗಿ ಸುಮಾರು 50 ಬಾರಿ ರಾಷ್ಟ್ರಪತಿ ಆಳ್ವಿಿಕೆ ಹೇರಿದ ಉದಾಹರಣೆಯಿದೆ. ಆದರೆ, ಇದೀಗ ಅಲ್ಲಿ ರಾಷ್ಟ್ರಪತಿ ಆಳ್ವಿಿಕೆ ಹೇರಿಕೆ ಮಾಡಿರುವುದನ್ನು ಪ್ರಶ್ನಿಿಸಿ ಎನ್‌ಸಿಪಿ, ಶಿವಸೇನೆ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿವೆ. ಸಮಾನ ಮನಸ್ಕರಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳಲು ಅಸಮರ್ಥವಾದ ಶಿವಸೇನೆ ಕಾಂಗ್ರೆೆಸ್ ಮತ್ತು ಎನ್‌ಸಿಪಿಗಳೊಂದಿಗೆ ಕೈಜೋಡಿ ಸರಕಾರ ರಚಿಸಲು ಶತಾಯ ಗತಾಯ ಶ್ರಮಿಸುತ್ತಿಿದೆ. ಬಡಪಾಯಿ ಮತದಾರರು ಇನ್ನೂ ಎಂತೆಂತಹ ರಾಜಕೀಯ ಪ್ರಹಸನಗಳಿಗೆ ಮೂಕ ಪ್ರೇಕ್ಷಕನಾಗಿರಬೇಕೋ! ಜನನಾಯಕರೇ ಸಾಕು. ಪಟ್ಟು ಸಡಿಲಿಸಿ ಪ್ರಜಾಹಿತವನ್ನು ಗೌರವಿಸಿ. ಅಷ್ಟಕ್ಕೂ ಸರಕಾರ ರಚಿಸುವುದು ನಿಮ್ಮ ಬೇಳೆ ಬೇಯಿಸಿಕೊಳ್ಳುದಕ್ಕಾಾ? ಹೇಳಿ…