ಸ್ವಾಸ್ಥ್ಯ ಸಂಪದ
yoganna55@gmail.com
ಬದುಕಿನ ಮೂಲ ಉದ್ದೇಶ ಸದಾಕಾಲ ಸಂತೋಷವಾಗಿರುವುದಾಗಿದ್ದು, ಅದನ್ನು ಗಳಿಕೆ ಮಾಡಲು ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿದೆ. ಯೋಗವನ್ನು ಬಾಲ್ಯದಿಂದಲೇ ಅಭ್ಯಾಸಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಇದರ ಲಾಭ ದೊರೆ ಯುತ್ತದೆ. ಯೋಗಕ್ಕೂ ಇತಿಮಿತಿ ಇದೆ.
ಸ್ವದೇಶಿಯ ಚಿಂತನೆಗಳ ಆಧಾರದ ಮೇಲೆ ಶಿಕ್ಷಣ, ಸಮಾಜ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಮತ್ತು ಆಯಾ ರಾಷ್ಟ್ರ ಗಳ ಸಂಸ್ಕೃತಿ, ಪರಂಪರೆ, ಬಲಿದಾನಿಗಳ ವಿಚಾರದ ಆಧಾರದ ಮೇಲೆ ರಾಷ್ಟ್ರವನ್ನು ಕಟ್ಟಲು ಸಾಧ್ಯವೇ ಹೊರತು ದೇಶಿಯ ಚಿಂತನೆ ಆದರ್ಶಗಳ ಮೇಲಲ್ಲ. ಅದನ್ನು ಕೇಸರಿ ಕರಣ ಎನ್ನುವುದೇ ಅದರೆ, ಆಗಲಿ ಬಿಡಿ. ಬಿಜೆಪಿ ವಿರುದ್ಧ ಗಾಂಧೀ ಕುಟುಂಬದ ಕುಡಿ ಬಿಜೆಪಿ ಸಂಸದ ವರುಣ್ ಗಾಂಧಿ ಇತ್ತೀಚಿನ ದಿನಗಳಲ್ಲಿ ತಮ್ಮ ಸಾರ್ವಜನಿಕ ಸಂಪರ್ಕ ಪ್ರಯತ್ನಗಳಿಗೆ ಗಾಂಧಿ ಸ್ಪರ್ಶ ನೀಡಲು ಪ್ರಯತ್ನಿಸುತ್ತಿದ್ದಾರೆ.
ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ದೂರದ ಪ್ರದೇಶಗಳಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಹಾಯ ಮಾಡಿದ ನಂತರ, ಈಗ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ.
ಇದರ ಜತೆಗೆ ನಿರುದ್ಯೋಗದ ಕಾರಣವನ್ನುಮುಂದಿಟ್ಟುಕೊಂಡು ತಮ್ಮದೇ ಸರಕಾರಕ್ಕೆ ಮುಜುಗರ ಉಂಟಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲು ಹಿಂಜರಿಯುತ್ತಿಲ್ಲ. ಯಾವ ಪ್ರದೇಶಗಳಲ್ಲಿ ಬಿಜೆಪಿಯ ರಾಜಕೀಯ ಪ್ರಭಾವ ಕಡಿಮೆ ಇದೇಯೊ ಅಂತಹ ಕ್ಷೇತ್ರಗಳಲ್ಲಿ ಪೂರ್ವಭಾವಿಯಾಗಿ ತೊಡಗಿಸಿಕೊಳ್ಳವ ಮೂಲಕ ವರುಣ್ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸು ತ್ತಿದ್ದಾರೆ.
ರಾಜ್ಯಪಾಲರನ್ನು ಟೀಕಿಸಿದ ಟಿಎಂಸಿ ಮೇ ೨೮ ರಂದು ಹೈದರಾಬಾದ್‌ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾ ಚಾರದ ನಂತರ ಇತ್ತೀಚೆಗೆ, ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ರಾಜಭವನದಲ್ಲಿ ‘ಮಹಿಳಾ ದರ್ಬಾರ್’ ನಡೆಸಿದರು. 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ, ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡರು ಮತ್ತು ಸಲಹೆ ಗಳನ್ನು ನೀಡಿದರು. ಆದರೆ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯು ಇದರಲ್ಲಿಯೂ ಕೊಂಕನ್ನು ಹುಡುಕಿ ಟೀಕಿಸಿದ್ದು, ಮಹಿಳಾ ದರ್ಬಾರ್ ಅನ್ನೋದು ರಾಜಕೀಯ ನಡೆಯಾಗಿದೆ.
ರಾಜ್ಯಪಾಲರಿಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇದ್ದರೆ ತಮ್ಮ ಹಳೆಯ ಕೆಲಸ ಮಾಡಲು ತಮಿಳುನಾಡು ಬಿಜೆಪಿ ಅಧ್ಯಕ್ಷರ ಬಳಿಗೆ ಹೊಗಲಿ ಎಂದು ಅದು ರಾಜ್ಯಪಾಲರ ಕಾಲೆಳೆದಿದೆ. ಮಕ್ಕಳೊಂದಿಗಿನ ವಿಶೇಷ ದಿನ ಶಿವಸೇನೆ ನಾಯಕ ಹಾಗೂ ಮಹಾ ರಾಷ್ಟ್ರದ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಜೂನ್ 13 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಎಂದಿನಂತೆ
ಪಕ್ಷದ ಕಾರ್ಯಕರ್ತರು ಹಾಗೂ ಹೂಗುಚ್ಛಗಳಿಂದ ಅವರ ಮನೆ ತುಂಬಿ ತುಳುಕುತ್ತಿತ್ತು ಮತ್ತು ಅನೇಕರು ಖುದ್ದಾಗಿ ಹಾರೈಸಲು ಆಗಮಿಸಿದ್ದರು.
ಆದರೆ, ಸಚಿವ ಆದಿತ್ಯ ಮಾತ್ರ ವಿಶೇಷ ಚೇತನ ಮಕ್ಕಳೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಆಯ್ಕೆ ಮಾಡಿ ಕೊಂಡಿದ್ದರು. ಸಚಿವರು ಅವರೊಂದಿಗೆ ಹರಟೆ ಮತ್ತು ಆಟವಾಡಿದರು. ಇದು ಅವರ ವಿಶೇಷ ದಿನವಾಗಿದ್ದರಿಂದ ಮಕ್ಕಳಿಗೂ ಈ ದಿನವನನ್ನು ಸಂತೋಷದ ಕ್ಷಣವಾಗಿಸಿದ್ದು ವಿಶೇಷವಾಗಿತ್ತು.
ನಾರಾಯಣ ನಾರಾಯಣ ! ಎಲ್ಲ ಬಿಟ್ಟ ಮಗ ಭಂಗಿ ನೆಟ್ಟ ಅಂತ ಹಳ್ಳಿಗಳಲ್ಲಿ ಒಂದು ಗಾದೆಯಿದೆ. ಯಾವ ಕಸುಬೂ ಕೈ ಹತ್ತದ ಮಂದಿ ಗಾಂಜಾ ಬೆಳೆಯುತ್ತಾರಂತೆ. ಮುಂದೇನಾಗಬಹುದು ಎಂಬುದನ್ನು ಊಹಿಸಬಹುದು. ರಾಷ್ಟ್ರಪತಿ ಅಭ್ಯರ್ಥಿ ವಿಚಾರದಲ್ಲಿ ಪ್ರತಿಪಕ್ಷಗಳ ಕಸರತ್ತೂ ಹಾಗೇ ಆಗಿದೆ. ಶರದ್ ಪವಾರ್, ಫಾರೂಕ್ ಅಬ್ದುಲ್ಲಾ, ದೇವೇಗೌಡ, ಗೋಪಾಲಕೃಷ್ಣ ಗಾಂಧಿ ಎಲ್ಲರೂ ನಿರಾಕರಿಸಿದ ಬಳಿಕ ಇದೀಗ ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾರಿಗೆ ದುಂಬಾಲು ಬಿದ್ದಿದೆ ದೀದಿ ಪಡೆ. ಅಭ್ಯರ್ಥಿ ಸಿಗಲೇ ಇಷ್ಟು ಕಷ್ಟವಾದ ಮೇಲೆ ಫಲಿತಾಂಶ ಏನಾದೀತು?
ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಪ್ರಸ್ತುತ ಹಂತದ ಅತ್ಯಂತ ಶ್ರೇಷ್ಠಮಟ್ಟದ ಪ್ರಕ್ರಿಯೆ. ಆದುದರಿಂದಾಗಿ ಸೃಷ್ಟಿ ವಿಕಾಸ ಕ್ರಿಯೆಯ ಎಲ್ಲ ಹಂತಗಳ ಪ್ರತಿಬಿಂಬಗಳು ಅವನಲ್ಲಡಗಿವೆ. ಸೃಷ್ಟಿಯು ಭೌತವಿಜ್ಞಾನದ ಪ್ರಕಾರ ವಸ್ತು ಮತ್ತು ಶಕ್ತಿಗಳಿಂದಾ ಗಿದ್ದು, ಮಾನವನೂ ವಸ್ತು ಮತ್ತು ಶಕ್ತಿಗಳ ರೂಪಕವಾಗಿದ್ದಾನೆ. ಅತೀತಶಕ್ತಿಯೊಂದು ಮನುಷ್ಯನನ್ನೂ ಒಳಗೊಂಡಂತೆ ಸೃಷ್ಟಿಯ ಎಲ್ಲವುಗಳ ಪೂರ್ವ ನಿಗದಿತ ಕಾರ್ಯಚಕ್ರಗಳನ್ನು ನಿಯಂತ್ರಿಸುತ್ತಿದ್ದು, ಅತೀತ ಶಕ್ತಿಯ ಅಣು ಮಾನವನನ್ನೂ ಒಳಗೊಂಡಂತೆ ಸೃಷ್ಟಿಯ ಎಲ್ಲವುಗಳಲ್ಲೂ ಇದೆ.
ಇದನ್ನೇ ‘ಆತ್ಮ’ ಎನ್ನುವುದು. ಆತ್ಮ ಅತೀತಶಕ್ತಿಯ ನಿಯಂತ್ರಣದಲ್ಲಿದೆ. ಅಲ್ಲದೆ ಇನ್ನಿತರ ಎಲ್ಲ ಆತ್ಮಗಳೊಡನೆ ಅದು ಪರಸ್ಪರ ಸಂಬಂಧವನ್ನು ಹೊಂದಿದೆ. ಮನುಷ್ಯನ ಮನಸ್ಸು ಸೃಷ್ಟಿಯಲ್ಲಿಯೇ ಅತ್ಯುನ್ನತ ಮಟ್ಟದಲ್ಲಿ ವಿಕಾಸವಾಗಿದ್ದು, ಅದು, ಸೃಷ್ಟಿ ಯಲ್ಲಿರುವ ಎಲ್ಲವುಗಳನ್ನು ಅರ್ಥಮಾಡಿಕೊಳ್ಳುವ, ಊಹಿಸುವ, ಶರ ವೇಗದಲ್ಲಿ ಸಂಚರಿಸುವ ಚಂಚಲಶೀಲ ಗುಣವನ್ನು ಹೊಂದಿದೆ.
ಮನುಷ್ಯ ದೇಹ, ಮನಸ್ಸು ಮತ್ತು ಆತ್ಮಗಳನ್ನೊಳಗೊಂಡ ಸಂಯುಕ್ತ ಅಧ್ಯಾತ್ಮಿಕ ಜೀವಿ. ದೇಹ ಪರಿಸರದಲ್ಲಿ ಲಭಿಸುವ ಆಹಾರ ದಿಂದಾಗಿದ್ದು, ವಸ್ತು ರೂಪದಲ್ಲಿದೆ. ಆತ್ಮ ಅತೀತಶಕ್ತಿಯ ಅಣುವಾಗಿದ್ದು, ಅದು ಶಕ್ತಿಯ ರೂಪದಲ್ಲಿದೆ. ಮನುಷ್ಯನ ದೇಹದಲ್ಲಿ ಜೈವಿಕ ವಿದ್ಯುತ್ ಉತ್ಪತ್ತಿಯಾಗಿ ಅದರಿಂದಲೇ ಜೀವಕೋಶಗಳ ಕಾರ‍್ಯಗಳು ಜರುಗುತ್ತವೆ. ಜೈವಿಕ ವಿದ್ಯುತ್ ಉತ್ಪತ್ತಿಯಾಗದಿದ್ದಲ್ಲಿ ಸಾವುಂಟಾಗುತ್ತದೆ.
ದೇಹದೊಳಗಿನ ಜೈವಿಕ ವಿದ್ಯುತ್ತನ್ನೇ ‘ಆತ್ಮ’ ಎಂದು ಪರಿಗಣಿಸಲಾಗಿದೆ. ಮನಸ್ಸು ದೇಹ ಮತ್ತು ಆತ್ಮಗಳ ನಡುವಿನ ಸಲಕರಣೆ ಯಾಗಿದ್ದು, ಹೊರ ಪ್ರಪಂಚದ ಜತೆ ವ್ಯವಹರಿಸುವುದಲ್ಲದೆ, ದೇಹದ ಆಂತರಿಕ ಕಾರ‍್ಯಗಳನ್ನೂ ನರಮಂಡಲ ಮತ್ತು ಹಾರ್ಮೋನ್ ಗಳ ಮುಖಾಂತರ ನಿಯಂತ್ರಿಸುತ್ತದೆ. ಮನಸ್ಸು ದೇಹ, ಆತ್ಮ, ಪರಿಸರ, ದೇಹದೊಳಗಿನ ಪರಿಸರ ಮತ್ತು ಅತೀತ ಶಕ್ತಿ ಇವುಗಳೊಡನೆ ಸಮನ್ವಯವನ್ನು ಸಂಘಟಿಸಿ ಆರೋಗ್ಯ ಸ್ಥಿತಿಯನ್ನುಂಟುಮಾಡುತ್ತದೆ. ಏರುಪೇರಾದಲ್ಲಿ ಅನಾರೋಗ್ಯ ಉಂಟಾಗುತ್ತದೆ.
ಆರೋಗ್ಯ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆರೋಗ್ಯವೆಂದರೆ ಅದು ಕೇವಲ ರೋಗ ರಹಿತ ಅಥವಾ ಊನರಹಿತ ಸ್ಥಿತಿಯಾಗಿರದೇ ದೈಹಿಕ ವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ ಸುಸ್ಥಿತಿಯಲ್ಲಿರುವುದು ಎಂದರ್ಥ. ಸುಸ್ಥಿತಿ ಎಂದರೆ ಸಂತೋಷ ಎಂದಾಗಿದ್ದು, ಆರೋಗ್ಯವೆಂದರೆ ಸಂತೋಷವಾಗಿರುವುದು ಎಂದರ್ಥ. ದೇಹದ ಆರೋಗ್ಯ ಪ್ರಧಾನವಾಗಿ ಆಹಾರ, ವ್ಯಾಯಾಮ ಗಳನ್ನೂ ಅವಲಂಬಿಸಿರುತ್ತದೆ. ಸಾಮಾಜಿಕ ಆರೋಗ್ಯವೆಂದರೆ ವಿಶ್ವದ ಆರೋಗ್ಯ, ಸೃಷ್ಟಿಯಲ್ಲಿನ ಎಲ್ಲವುಗಳ ಆರೋಗ್ಯ ಸ್ಥಿತಿ ಯನ್ನು ಅವಲಂಬಿಸಿರುತ್ತದೆ.
ಮನುಷ್ಯ ಸೃಷ್ಟಿಯ ಎಲ್ಲವುಗಳೊಡನೆ ಜೋಡಿತ. ಅವೆಲ್ಲವುಗಳ ಸ್ಥಿತಿಗತಿ ಇವನ ಆರೋಗ್ಯದ ಮೇಲೂ ಪರಿಣಾಮ ಬೀರುವು ದರಿಂದ ಅವುಗಳ ಆರೋಗ್ಯವೂ ಇವನ ಆರೋಗ್ಯಕ್ಕೆ ಅತ್ಯವಶ್ಯಕ. ಮನಸ್ಸು ದೇಹದೊಳಗಿನ ಮತ್ತು ದೇಹದ ಹೊರಗಿನ ಅಂಶ ಗಳ ಪ್ರಭಾವಕ್ಕೀಡಾಗುವುದರಿಂದ ಇದರ ಸದೃಢ ಸ್ಥಿತಿ ಅಂದರೆ ಸಂತೋಷಕರ ಸ್ಥಿತಿ ಅತ್ಯವಶ್ಯಕ.
ಅಧ್ಯಾತ್ಮಿಕ ಆರೋಗ್ಯ ಯಾವುದು?
ಅತೀತಶಕ್ತಿಯ ಅರಿವು ಮತ್ತು ಅದರೊಡನೆ ಅನುಸಂಧಾನದ ಹಿನ್ನೆಲೆಯಲ್ಲಿ ತಾನು ಸೃಷ್ಟಿಯ ಎಲ್ಲವುಗಳೊಡನೆ ಪೂರ್ವ ನಿಗದಿತವಾಗಿ ಜೋಡಿತನಾಗಿದ್ದೇನೆ, ಅವೆಲ್ಲವುಗಳ ಉಳಿವಿನಲ್ಲಿ ತನ್ನ ಉಳಿವಿದೆ ಎಂಬ ಸಮಗ್ರ ದೃಷ್ಟಿಕೋನದಿಂದ ಮನಸ್ಸನ್ನು ಕೃಷಿಮಾಡಿಕೊಂಡು, ಬದುಕಿನ ಅಂತಿಮಸತ್ಯಗಳನ್ನು ಅರಿತು ಅದಕ್ಕನುಗುಣವಾದ ಜೀವನಶೈಲಿಯನ್ನು ರೂಢಿಸಿಕೊಂಡು ಸದಾಕಾಲ ಸಂತೋಷದಿಂದಿರುವುದೇ ಅಧ್ಯಾತ್ಮಿಕ ಆರೋಗ್ಯ. ಅಧ್ಯಾತ್ಮಿಕ ಆರೋಗ್ಯವುದೈಹಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಗಳನ್ನು ನಿಯಂತ್ರಿಸುವ ಎಲ್ಲ ಅಂಶಗಳ ನಿಯಂತ್ರಣಗಳನ್ನೊಳಗೊಂಡಿದೆ.
ಇದು ಸೃಷ್ಟಿಗೆ ಸಂಬಂಧಿಸಿದ ವೈಜ್ಞಾನಿಕ ಅಂಶಗಳು ಮತ್ತು ಅವುಗಳನ್ನು ಪೋಷಿಸುವ ಹಾಗೂ ವಿಶ್ವಪ್ರಜ್ಞೆ ಮೂಡಿಸುವ ಜೀವನಶೈಲಿಯನ್ನು ರೂಢಿಸಿಕೊಳ್ಳುವ ತತ್ತ್ವಶಾಸದ ಅಂಶಗಳನ್ನೊಳಗೊಂಡಿದೆ.
ಯೋಗ ಎಂದರೇನು?
ಯೋಗ ಎಂದರೆ ಕೂಡಿಸುವುದು ಎಂದರ್ಥ. ಮೊದಲ ಹಂತದಲ್ಲಿ ದೇಹ, ಮನಸ್ಸು ಮತ್ತು ಆತ್ಮ ಗಳನ್ನು ಪರಸ್ಪರ ಸಂಯೋಜಿಸಿ ಕೊಂಡು (ಸ್ವಯಂ ಸಂಯೋಗ) ಅನಂತರ ಪರಿಸರದೊಂದಿಗೆ ವಿಲೀನವಾಗಿ ಅಂತಿಮವಾಗಿ ಅತೀತಶಕ್ತಿಯೊಡನೆ ಅನುಸಂಧಿಸಿ ನಿರಂತರವಾಗಿ ಸಂತೋಷವಾಗಿರುವ ಜೀವನಶೈಲಿಯೇ ಯೋಗ. ಅಧ್ಯಾತ್ಮಿಕ ಆರೋಗ್ಯವೂ ಸಹ ನಿರಂತರ ಸಂತೋಷವನ್ನು ಪಡೆಯುವುದಾಗಿದ್ದು, ಯೋಗ ಅಧ್ಯಾತ್ಮಿಕ ಆರೋಗ್ಯವನ್ನು ಗಳಿಸುವ ಪ್ರಮುಖ ಹಾದಿ.
ವಿಶ್ವ ಯೋಗ ದಿನಾಚರಣೆ
ಯೋಗ, ಭಾರತೀಯ ಪ್ರಾಚೀನ ಆರೋಗ್ಯ ವಿಜ್ಞಾನದ ಪ್ರಮುಖ ಅಂಗವಾಗಿದ್ದು, ರೋಗ ಬಾರದಂತೆಯೇ ಸಕಾರಾತ್ಮಕ ಆರೋಗ್ಯ ವನ್ನು ಗಳಿಸಿಕೊಳ್ಳಲು ಭಾರತೀಯ ಪ್ರಾಚೀನ ಆರೋಗ್ಯ ವಿಜ್ಞಾನಿಗಳು ಕಂಡುಕೊಂಡ ಸಕಾರಾತ್ಮಕ ಆರೋಗ್ಯವರ್ಧಕ ಮಾರ್ಗ. ಶ್ರೀ ಪತಂಜಲಿ ಮಹರ್ಷಿ ಯೋಗದ ಪ್ರಮುಖ ಅಂಶಗಳನ್ನು ಪ್ರಪ್ರಥಮವಾಗಿ ಯೋಗ ಸೂತ್ರಗಳ ಮೂಲಕ ದಾಖಲಿಸಿದ
ಪ್ರಥಮ ಅಧ್ಯಾತ್ಮಿಕ ವಿಜ್ಞಾನಿ.
ಯೋಗ ಮತ್ತು ಅಧ್ಯಾತ್ಮಿಕ ಆರೋಗ್ಯ ಭಾರತ ವಿಶ್ವ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅದ್ವಿತೀಯ ಕೊಡುಗೆ. ಸ್ವತಃ ಯೋಗದ ಮಹಿಮೆ ಯನ್ನು ಆಸ್ವಾದಿಸುತ್ತಿರುವ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರು 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗದ ಪ್ರಾಮುಖ್ಯದ ಬಗ್ಗೆ ಭಾಷಣ ಮಾಡಿ ಅದನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವ ಅಗತ್ಯವನ್ನು ಮನದಟ್ಟು ಮಾಡಿ ಕೊಟ್ಟ ಪರಿಣಾಮವಾಗಿ 2015ರಿಂದ ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ.
ಈ ಸಂದರ್ಭದಲ್ಲಿ ಪ್ರತಿವರ್ಷ ಯೋಗದಿಂದುಂಟಾಗುವ ಲಾಭದ ಅಂಶವೊಂದನ್ನು ಘೋಷಣಾ ವಾಕ್ಯವನ್ನಾಗಿಸಿ ಅದನ್ನು ರ್ಷವಿಡೀ ಪ್ರಚಾರಮಾಡುವ ಕಾರ್ಯವನ್ನು ಪ್ರಪಂಚಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. 2021ರ ಘೋಷಣಾ ವಾಕ್ಯ ‘ಸುಸ್ಥಿತಿಗಾಗಿ ಯೋಗ’ ಎಂಬುದಾಗಿದ್ದು, 2022ರ ಘೋಷಣಾವಾಕ್ಯ ‘ಮಾನವೀಯತೆಗಾಗಿ ಯೋಗ’ ಎಂಬುದಾಗಿದೆ. ಯೋಗ ವಿಶ್ವಪ್ರಜ್ಞೆ ಯನ್ನು ಮೂಡಿಸಿ ತನ್ನಂತೆಯೇ ಎಲ್ಲರೂ ಎಂಬ ಭಾವವನ್ನುಂಟುಮಾಡಿ, ಮಾನವೀಯತೆಯನ್ನುಂಟು ಮಾಡುತ್ತದೆ.
ಯೋಗಕ್ಕೆ ಅಧಿಕೃತವಾಗಿ ಪ್ರಾಪಂಚಿಕ ಮಾನ್ಯತೆಯನ್ನು ತಂದುಕೊಟ್ಟು, ಪ್ರಪಂಚಾದ್ಯಂತ ಯೋಗವನ್ನು ಅನುಸರಿಸುವಂತಾ ಗಿಸಿದ ಹೆಮ್ಮೆ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಗುಪ್ತವಾಗಿ ಲಿಖಿತರೂಪದಲ್ಲಿದ್ದ ಯೋಗವನ್ನು ಮೈಸೂರಿನ ಮಹಾರಾಜ ರಾದ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರೋತ್ಸಾಹದಿಂದ ತಿರುಮಲೆ ಕೃಷ್ಣಮಾಚಾರ್ಯರು ಮೈಸೂರಿನಲ್ಲಿ ಯೋಗಶಾಲೆಯನ್ನು
ಪ್ರಾರಂಭಿಸಿ ಜನಸಾಮಾನ್ಯರಿಗೆ ಯೋಗವನ್ನು ತಲುಪಿಸಿ ಆಧುನಿಕ ಯೋಗದ ಪಿತಾಮಹರಾಗಿದ್ದಾರೆ.
ಇಂದು ಮೈಸೂರು ಯೋಗ ಶಿಕ್ಷಣದ ಪ್ರಮುಖ ಕೇಂದ್ರವಾಗಿದ್ದು, ವಿದೇಶೀಯರನ್ನು ಆಕರ್ಷಿಸಿ ಯೋಗ ಶಿಕ್ಷಣದ ತಾರಾಷ್ಟ್ರೀಯ
ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಕೇಂದ್ರ ಸರಕಾರದ ಆಯುಷ್ ಇಲಾಖೆ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಆಯೋಜಿಸುತ್ತಿದ್ದು, ೨೦೨೨ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಈ ಬಾರಿ ಯೋಗದ ಹಬ್ ಆಗಿರುವ ಮೈಸೂರಿನಲ್ಲಿ ಆಚರಿಸುತ್ತಿದ್ದು, ಸ್ವತಃ ಪ್ರಧಾನಮಂತ್ರಿಗಳೇ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವುದು ಮೈಸೂರಿಗೆ ಹೆಮ್ಮೆಯ ವಿಷಯವಾಗಿದೆ.
ಯೋಗದ ಪ್ರಕಾರಗಳು
ಯೋಗ ಕೇವಲ ಆಸನಗಳುಳ್ಳ ದೈಹಿಕ ವ್ಯಾಯಾಮವಲ್ಲ, ಅದು ಅಧ್ಯಾತ್ಮಿಕ ವಿಜ್ಞಾನದ ಹಿನ್ನೆಲೆಯಲ್ಲಿ ನಿರಂತರ ಸುಖವನ್ನು ಕಾಣಲು ಮನುಷ್ಯ ಪಾಲಿಸಬೇಕಾದ ನಾನಾ ವೈಜ್ಞಾನಿಕ ಅಂಶಗಳನ್ನುಳ್ಳ ಜೀವನಶೈಲಿ. ಯೋಗ, ಜ್ಞಾನಯೋಗ, ಕರ್ಮಯೋಗ,
ಭಕ್ತಿಯೋಗ ಮತ್ತು ರಾಜಯೋಗ ಎಂಬ ನಾಲ್ಕು ವಿವಿಧ ಪ್ರಕಾರಗಳನ್ನೊಳಗೊಂಡಿದೆ.
ಜ್ಞಾನಯೋಗ ಮನುಷ್ಯನನ್ನೂ ಒಳಗೊಂಡಂತೆ ಸೃಷ್ಟಿಗೆ ಸಂಬಂಧಿಸಿದ ಎಲ್ಲ ವೈಜ್ಞಾನಿಕ ಅಂಶಗಳನ್ನು ಒಳಗೊಂಡ
ಅಧ್ಯಾತ್ಮಿಕ ವಿಜ್ಞಾನ. ಈ ಜ್ಞಾನದ ಅರಿವಿನಿಂದಲೇ ಸಮಗ್ರ ದೃಷ್ಟಿಕೋನ ಉಂಟಾಗಿ ಸುಸ್ಥಿತಿಯ ಭಾವ ಉಂಟಾಗುತ್ತದೆ. ಕರ್ಮಯೋಗ ತಾನು ಸಂತೋಷವಾಗಿರಲು ದೈನಂದಿನ ಬದುಕಿನಲ್ಲಿ ಯಾವ ಕರ್ಮಗಳನ್ನು ಮಾಡಬೇಕು ಮತ್ತು ಮಾಡ ಬಾರದು ಎಂಬ ಅಂಶಗಳನ್ನೊಳಗೊಂಡಿದೆ. ಕರ್ಮಗಳನ್ನು, ಸೃಷ್ಟಿಯ ಪೂರ್ವನಿಗದಿತ ಕಾರ್ಯಚಕ್ರಗಳ ಪೋಷಣೆಗೆ ಪೂರಕ ವಾಗುವ ಮತ್ತು ಮಾರಕವಾಗುವ ಕಾರ್ಯಗಳೆಂದು ವಿಂಗಡಿಸಿ ಪೂರಕಕಾರ್ಯಗಳನ್ನು ಮಾತ್ರ ಕೈಗೊಳ್ಳಬೇಕೆಂದು, ಮಾರಕ ವಾದ ಕಾರ್ಯಗಳನ್ನು ಕೈಗೊಳ್ಳಬಾರದೆಂಬುದನ್ನು ಕರ್ಮಯೋಗ ಪ್ರತಿಪಾದಿಸುತ್ತದೆ.
ಭಕ್ತಿಯೋಗ, ಮನುಷ್ಯನನ್ನೂ ಒಳಗೊಂಡಂತೆ ಇಡೀ ಸೃಷ್ಟಿಯ ಇರುವಿಕೆ ಮತ್ತು ನಿರ್ವಹಣೆಗೆ ಅತೀತಶಕ್ತಿಯೊಂದು ಕಾರಣ ವಾಗಿದ್ದು, ಅದಕ್ಕೆ ಭಕ್ತಿಯಿಂದ ಸಮರ್ಪಿಸಿಕೊಂಡು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಅದಕ್ಕೆ ಸಮರ್ಪಿಸಿ, ಫಲಾಪೇಕ್ಷೆ ಗಳನ್ನು ಅತೀತ ಶಕ್ತಿಗೆ ಬಿಡುವ ಭಕ್ತಿಭಾವವನ್ನೊಳಗೊಂಡಿದೆ.
ರಾಜಯೋಗ ದೇಹ, ಮನಸ್ಸು ಮತ್ತು ಆತ್ಮಗಳನ್ನು ಆರೋಗ್ಯಕರವಾಗಿಡುವ ಅಂಶಗಳ ಪರಿಪಾಲ ನೆಗಳನ್ನೊಳಗೊಂಡಿದ್ದು, ಅವುಗಳನ್ನು ಪರಸ್ಪರಸಂಯೋಜಿಸಿ ಇಡೀ ಸೃಷ್ಟಿಯೊಡನೆ ತನ್ನನ್ನು ವಿಲೀನಗೊಳಿಸಿ ಅಂತಿಮವಾಗಿ ಅತೀತಶಕ್ತಿಯೊಡನೆ
ಬೆಸೆಯುವ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ 8 ಅಂಶಗಳ ವಿಧಾನ ಗಳನ್ನೊಳಗೊಂಡಿದೆ.
‘ಯಮ’, ಬದುಕಿನಲ್ಲಿ ಏನನ್ನು ಮಾಡಬಾರದು ಎಂಬವುಗಳನ್ನು, ‘ನಿಯಮ’ ಅಂದರೆ ಏನನ್ನು ಮಾಡಬೇಕು ಎಂಬವುಗಳನ್ನು, ‘ಆಸನ’ ಸುಸ್ಥಿತಿಯ ದೈಹಿಕ ಭಂಗಿಗಳನ್ನೂ, ‘ಪ್ರಾಣಾಯಾಮ’ ಉಸಿರಿನ ವ್ಯಾಯಾಮದ ಮೂಲಕ ಮನಸ್ಸನ್ನು ಮತ್ತು ಜೈವಿಕ
ಶಕ್ತಿಗಳನ್ನು ನಿಯಂತ್ರಿಸುವ ವಿಧಾನಗಳನ್ನು, ‘ಪ್ರತ್ಯಾಹಾರ’ ಮನಸ್ಸನ್ನು ವಸ್ತು ಅಥವಾ ವಿಷಯಗಳಿಂದ ವಿಕೇಂದ್ರೀಕರಿಸುವ ವಿಧಾನಗಳನ್ನು, ‘ಧಾರಣ’ ಮನಸ್ಸನ್ನು ವಸ್ತು ಅಥವಾ ವಿಷಯಗಳ ಮೇಲೆ ಕೇಂದ್ರೀಕರಿಸುವ ವಿಧಾನಗಳನ್ನು, ‘ಧ್ಯಾನ’,
ಬಹಿರ್ಮುಖಿ ಹಾಗೂ ಚಂಚಲಶೀಲ ಮನಸ್ಸನ್ನು ಶಾಂತಗೊಳಿಸಿ ಅಂತರ್ಮುಖಿಯನ್ನಾಗಿಸಿ, ದೇಹ ಮತ್ತು ಆತ್ಮಗಳೊಡನೆ ಸಂಯೋಜಿಸಿ, ಮನಸ್ಸನ್ನು ಬಾಹ್ಯ ಸುಖಗಳಿಂದ ವಿಮೋಚಿಸಿ ನಿರಂತರವಾದ ಆಂತರಿಕ ಸುಖಾನುಭವವನ್ನುಂಟು ಮಾಡುವ
ವಿಧಾನಗಳನ್ನು ಮತ್ತು ‘ಸಮಾಧಿ’ ಮನಸ್ಸನ್ನು ಎಲ್ಲಾ ಆಲೋಚನೆಗಳಿಂದ ವಿಮುಕ್ತಗೊಳಿಸಿ ಸೃಷ್ಟಿ ಮತ್ತು ಅತೀತಶಕ್ತಿಯಲ್ಲಿ ವಿಲೀನಗೊಳಿಸಿ ತಾನು ಸೃಷ್ಟಿಯಲ್ಲಿನ ಒಂದು ಅಣು ಎಂಬ ಭಾವವನ್ನುಂಟುಮಾಡುವ ವಿಧಾನಗಳನ್ನೊಳಗೊಂಡಿದೆ.
ಯೋಗವನ್ನು ಪ್ರತಿನಿತ್ಯ ಜೀವನಶೈಲಿಯ ವಿಧಾನವನ್ನಾಗಿ ಪಾಲಿಸಬೇಕು. ಯೋಗದ ವಿವಿಧ ಎಲ್ಲಾ ಪ್ರಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಅತ್ಯುತ್ತಮ ಲಾಭವನ್ನು ಪಡೆಯಬಹುದು. ಯಾವುದಾದರೊಂದು ಪ್ರಕಾರದ ಅನುಕರಣೆ ಯಿಂದಲೂ ಲಾಭ ದೊರಕಬಹುದು. ಯೋಗದ ವಿವಿಧ ಪ್ರಕಾರಗಳನ್ನು ಪ್ರಚಲಿತ ಎಲ್ಲ ಧರ್ಮಗಳಲ್ಲೂ ಗುರುತಿಸಬಹು ದಾಗಿದ್ದು, ಪ್ರತಿಯೊಂದು ಧರ್ಮದ ಸಿದ್ಧಾಂತಗಳನ್ನು ಯೋಗದ ಮೂಲಕ್ಕೆ ವೈಜ್ಞಾನಿಕವಾಗಿ ಜೋಡಿಸಬಹುದಾಗಿದ್ದು,
ಸೂಕ್ಷ್ಮ ವಾಗಿ ಗಮನಿಸಿದಲ್ಲಿ ಯೋಗ ಸಿದ್ಧಾಂತವೇ ಪ್ರತಿಯೊಂದು ಧರ್ಮದ ಮೂಲಮಂತ್ರವಾಗಿದೆ.
ಯೋಗದ ಲಾಭಗಳು
ಯೋಗಾಭ್ಯಾಸ ದೇಹದೊಳಗಿನ ಜೈವಿಕ ಶಕ್ತಿಗಳನ್ನು ಸಮತೋಲನದಲ್ಲಿಟ್ಟು, ದೇಹದೊಳಗಿನ ಆಂತರಿಕ ಭೌತಿಕ ಮತ್ತು ರಾಸಾಯನಿಕ ಪರಿಸರಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಪ್ರೀತಿ, ಧೈರ್ಯ, ಸಂತೋಷ, ಸಹಕಾರ, ಆತ್ಮವಿಶ್ವಾಸ, ಜೀವನೋತ್ಸಾಹ ಇತ್ಯಾದಿ ಸಕಾರಾತ್ಮಕ ಭಾವಗಳು ಮೇಲುಗೈ ಪಡೆದು, ದ್ವೇಷ, ಅಧೈರ್ಯ, ಅಸಂತೋಷ, ಅಸಹಕಾರ, ಅವಿಶ್ವಾಸ, ನಿರುತ್ಸಾಹ ಇತ್ಯಾದಿ ನಕಾರಾತ್ಮಕ ಭಾವಗಳು ಮರೆಯಾಗುತ್ತವೆ.
ದೇಹದ ನಿರೋಧಕ ವ್ಯವಸ್ಥೆ ಬಲಯುತವಾಗಿ ರೋಗ ರುಜಿನಗಳ ಸಾಧ್ಯತೆ ಕಡಿಮೆಯಾಗುತ್ತದೆ. ದೇಹದ ಅಂಗಾಂಗಗಳ ಕಾರ್ಯ ಸಾಮರ್ಥ್ಯ ಹೆಚ್ಚಾಗುತ್ತದೆ. ಮನಸ್ಸು ಸಾಮಾನ್ಯರಿಗಿಲ್ಲದ ಅತೀತಶಕ್ತಿಯನ್ನು ಗಳಿಸಿ ಸೃಷ್ಟಿಯಲ್ಲಿರುವ ಎಲ್ಲವುಗಳನ್ನು ಸೂಕ್ಷ್ಮ
ವಾಗಿ ಸ್ವಯಂ ಗ್ರಹಿಸುವ ಅತೀತ ಶಕ್ತಿಯನ್ನು ಪಡೆದುಕೊಂಡು ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ವಾಸ್ಥ್ಯ ಮನೊಭಾವ ಮೈದಳೆಯುತ್ತದೆ.
ಬದುಕಿನ ಮೂಲ ಉದ್ದೇಶ ಸದಾಕಾಲ ಸಂತೋಷವಾಗಿರುವುದಾಗಿದ್ದು, ಅದನ್ನು ಗಳಿಕೆ ಮಾಡಲು ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿದೆ. ಯೋಗವನ್ನು ಬಾಲ್ಯದಿಂದಲೇ ಅಭ್ಯಾಸಮಾಡುವದರಿಂದ ಗರಿಷ್ಠ ಪ್ರಮಾಣದಲ್ಲಿ ಇದರ ಲಾಭ ದೊರೆಯು ತ್ತದೆ. ಯೋಗಕ್ಕೂ ಇತಿಮಿತಿ ಇದೆ. ಎಲ್ಲಾ ಕಾಯಿಲೆಗಳಿಗೂ ಯೋಗ ಮದ್ದು ಎಂಬುದು ವೈಜ್ಞಾನಿಕವಲ್ಲ. ಆಧ್ಯಾತ್ಮಿಕ ಆರೋಗ್ಯ ವನ್ನು ಗಳಿಸಲು ಯಾವ ಧರ್ಮಾಚರಣೆಗಳೂ ಇಲ್ಲದ, ಜಾತ್ಯತೀತ, ಧರ್ಮಾತೀತವಾದ, ವೈಜ್ಞಾನಿಕವಾದ ಏಕೈಕ ಮಾರ್ಗ ಯೋಗ.