ಸ್ವಾಸ್ಥ್ಯ ಸಂಪದ
Yoganna55@gmail.com
ಹೃದಯಾಘಾತವಾದವರಿಗೆ ೪-೬ ಗಂಟೆಗಳೊಳಗೆ ಕ್ಯಾಥ್‌ಲ್ಯಾಬ್‌ನ ಕರೋನರಿ ಆಂಜಿಯೋಗ್ರಾಂ ಪರೀಕ್ಷೆ ಅತ್ಯವಶ್ಯಕ. ಶೇ. ೭೦ಕ್ಕಿಂತ ಕಡಿಮೆ ವ್ಯಾಸದ ಅಡಚಣೆ ಇದ್ದಲ್ಲಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಅನಗತ್ಯ. ಶೇ. ೭೦ಕ್ಕಿಂತಲೂ ಹೆಚ್ಚು ವ್ಯಾಸದ ಅಡಚಣೆ ಇದ್ದಲ್ಲಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಅತ್ಯವಶ್ಯಕ.
ರಕ್ತ ಹರಿಕಾಂಶದ ಅನುಪಾತ ಅಳತೆ (- -ಕ್ಷನ್- ಎ-ಎ-ಆರ್) ಹೃತ್ ಶುದ್ಧ ರಕ್ತನಾಳದ ಅಡಚಣೆಯ ತೀವ್ರತೆ ಯನ್ನು ಅಳೆಯುವ ಪರೀಕ್ಷೆಯಿದು. ಆಂಜಿಯೋಗ್ರಾಂ ಮಾಡಿ ಅಡಚಣೆ ಪೂರ್ವದ ಹೃತ್ ಶುದ್ಧರಕ್ತನಾಳದ ಒತ್ತಡ ಮತ್ತು ಅಡಚಣೆ ನಂತರದ ಭಾಗದ ಹೃತ್ ಶುದ್ಧರಕ್ತನಾಳದೊಳಗಿನ ಒತ್ತಡಗಳನ್ನು ಅಳೆದು ಅವುಗಳ ಅನುಪಾತವನ್ನು ತಿಳಿದು ಅಡಚಣೆಯ ತೀವ್ರತೆಯನ್ನು ಅರಿಯಲಾಗುತ್ತದೆ. ಆಂಜಿಯೋಪ್ಲಾಸ್ಟಿಯ ಅವಶ್ಯಕತೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಈ ಪರೀಕ್ಷೆ ಸಹಕಾರಿ.
ಸಿ.ಟಿ. ಆಂಜಿಯೋಗ್ರಾಂ: ಸಿ.ಟಿ. ಯಂತ್ರದಿಂದ ರಕ್ತನಾಳಗಳಿಗೆ ಕೆಥಟರ್ ಅನ್ನು ತೂರಿಸದೆ ಹೊರಗಿನಿಂದಲೆ, ಹೃದಯದ ಶುದ್ಧರಕ್ತನಾಳಗಳ ಸ್ವರೂಪವನ್ನು ತಿಳಿಯುವ ಸುರಕ್ಷಿತ ಪರೀಕ್ಷೆಯಿದು. ಯಾವ ಬಗೆಯ ದುಷ್ಪರಿ ಣಾಮಗಳಿಲ್ಲದ ಪರೀಕ್ಷೆ ಇದು. ಹೃದಯದ ಶುದ್ಧರಕ್ತನಾಳಗಳಲ್ಲಿ ಜಿಡ್ಡುಗಟ್ಟಿರುವುದನ್ನು, ಅಡಚಣೆ ಗಳನ್ನು ಮತ್ತು ರಕ್ತಪರಿಚಲನೆ ಯನ್ನು ಇದರಿಂದ ಅರಿಯಬಹುದಾಗಿರುತ್ತದೆ. ಹೃದಯದ ಶುದ್ಧರಕ್ತನಾಳಗಳ ಕಾಯಿಲೆ ಇರುವ ಸಂಭವನೀಯ ಯುವಕರಲ್ಲಿ ಈ ಪರೀಕ್ಷೆ ಉಪಯುಕ್ತ. ಇದು ರೋಗಪತ್ತೆ ಪರೀಕ್ಷೆಯಾಗಿದ್ದು, ಅಡಚಣೆಗಳಿದ್ದಲ್ಲಿ ಅವನ್ನು ನಿವಾರಿಸಲು ಕರೋನರಿ ಆಂಜಿಯೋಗ್ರಾಂ ಪರೀಕ್ಷೆ ಅತ್ಯವಶ್ಯಕ.
? ಎಂಆರ್‌ಐ ಆಂಜಿಯೋಗ್ರಾಂ: ಎಂಆರ್‌ಐ ಯಂತ್ರದಿಂದ ರಕ್ತನಾಳಗಳೊಳಕ್ಕೆ ಯಾವ ಸಲಕರಣೆ ಗಳನ್ನೂ ತೂರಿಸದೆ ಮಾಡಲಾಗುವ ಸುರಕ್ಷಿತ ರೋಗ ಪತ್ತೆ ಪರೀಕ್ಷೆಯಿದು. ಇದರ ನೆರವಿನಿಂದ ರಕ್ತನಾಳಗಳ ಜಿಡ್ಡು ಗಡಸು ಗೆಡ್ಡೆ ಮತ್ತು ರಕ್ತನಾಳಗಳ ಗೋಡೆಗಳ ಮತ್ತು ರಕ್ತಪರಿಚಲನೆಯ ಕ್ರಮವನ್ನು ಕರಾರು ವಾಕ್ಕಾಗಿ ತಿಳಿಯಬಹುದು. ಶಂಕಿತ ಯುವಕರಲ್ಲಿ ಕಾಯಿಲೆ ಪತ್ತೆಗಾಗಿ ಇದು ಉಪಯುಕ್ತ.
? ಸೂಚಕಗಳು (ಮಾರ್ಕರ‍್ಸ್): ಕತ್ತಿನ ಕೆರೋಟಿಡ್ ರಕ್ತನಾಳದಲ್ಲಿ ಜಿಡ್ಡಿನ ಗೆಡ್ಡೆ ಇರುವುದನ್ನು ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆಯಿಂದ ತಿಳಿದು ಹೃದಯದ
ಶುದ್ಧರಕ್ತನಾಳಗಳಲ್ಲೂ ಜಿಡ್ಡಿನ ಗೆಡ್ಡೆ ಇರುವುದನ್ನು ಪರೋಕ್ಷವಾಗಿ ತಿಳಿಯಬಹುದು. ರಕ್ತದಲ್ಲಿ ಅತಿ ಸೂಕ್ಷ್ಮತೆಯ ಸಿ-ಪ್ರತಿಕ್ರಿಯಿತ ಪ್ರೋಟೀನ್ (ಹೈಲಿಸೆ
ನ್ಸಿಟೀವ್ ಸಿ-ರಿಯಾಕ್ಟೀವ್ ಪ್ರೋಟೀನ್- ಎಚ್‌ಎಸ್ ಸಿಆರ್‌ಪಿ) ಇದು ಹೃದಯದ ಶುದ್ಧರಕ್ತನಾಳಗಳಲ್ಲಿ ಜಿಡ್ಡಿನ ಕೆಂಪೂತುರಿ ಇರುವುದರ ಸೂಚಕ.
? ರಕ್ತದಲ್ಲಿ ಹೃದಯದ ಕಿಣ್ವಗಳ ಪರೀಕ್ಷೆ: ಸಾವಿಗೀಡಾದ ಹೃದಯದ ಸ್ನಾಯುವಿನೊಳಗಿರುವ ಕಿಣ್ವ ಗಳಾದ ಟ್ರೊಪೋನಿನ್ ಐ, ಕ್ರಿಯಾಟಿನಿನ್ -ಸ್ಪೋ
ಕೈನೇಸ್(ಸಿಪಿಕೆ-ಎಂ.ಬಿ.) ಮತ್ತು ಲ್ಯಾಕ್ಟಿಕ್ ಡಿಹೈಡ್ರಾಜಿನೇಶ್ ಕಿಣ್ವಗಳು ಸತ್ತ ಹೃದಯದ ಸ್ನಾಯುವಿನಿಂದ ಹೊರಬರುವುದರಿಂದ ರಕ್ತದಲ್ಲಿ ಇವುಗಳ ಪ್ರಮಾಣ ಹೆಚ್ಚಾಗುತ್ತದೆ. ಇವುಗಳಲ್ಲಿ ಟ್ರೋಪೋನಿನ್-ಐ ಅತಿ ಸೂಕ್ಷ್ಮವಾದ ನಂಬಲರ್ಹ ವಾದ ರೋಗಪತ್ತೆ ದೃಢೀಕರಣ ಪರೀಕ್ಷೆ ಆಗಿದ್ದು, ಇದರ ಏರಿಕೆ ಹೃದಯಾಘಾತವನ್ನು ದೃಢೀಕರಿಸುತ್ತದೆ.
? ಯಾರಿಗೆ ಯಾವ ಪರೀಕ್ಷೆ?: ಹೃದಯಾಘಾತ ಪೂರ್ವ ತೊಂದರೆಗಳಿರುವವರಿಗೆ ಸಾಮಾನ್ಯವಾಗಿ ಇಸಿಜಿಯಲ್ಲಿ ಕಂಡುಬರುವ ನಿರ್ದಿಷ್ಟ ಅಸಹಜ
ಬದಲಾವಣೆಗಳಿಂದ ಕಾಯಿಲೆಯನ್ನು ದೃಢೀಕರಿಸಿಕೊಳ್ಳಬಹುದು ಅಥವಾ ಶಂಕಿಸಬಹುದು. ಇಸಿಜಿ ಯಲ್ಲಿ ಅನುಮಾನಿತ ಅಸಹಜತೆಗಳಿದ್ದಲ್ಲಿ ಮತ್ತು
ಸುಪ್ತ ಕಾಯಿಲೆಯನ್ನು ಶಂಕಿಸಿದವರಲ್ಲಿ ಥ್ರೆಡ್‌ಮಿಲ್ ಪರೀಕ್ಷೆ ರೋಗ ಪತ್ತೆಗೆ ಅತ್ಯವಶ್ಯಕ. ಇಸಿಜಿಯಿಂದ ಅಥವಾ ಥ್ರೆಡ್‌ಮಿಲ್ ಪರೀಕ್ಷೆಯಿಂದ ಕಾಯಿಲೆ
ಅನುಮಾನ ಅಥವಾ ದೃಢೀಕರಣಗೊಂಡ ಮೇಲೆ ರಕ್ತನಾಳಗಳ ಅಡಚಣೆಯ ತೀವ್ರತೆಯನ್ನು ಅರಿಯಲು ಮತ್ತು ಮುಂದಿನ ಚಿಕಿತ್ಸಾ ವಿಧಾನಗಳನ್ನು ರೂಪಿಸಲು ಕರೋನರಿ ಆಂಜಿಯೋಗ್ರಾಂ ಪರೀಕ್ಷೆ ಅತ್ಯವಶ್ಯಕ.
ಹೃದಯಾಘಾತವಾದವರಿಗೆ ೪-೬ ಗಂಟೆಗಳೊಳಗೆ ಕ್ಯಾಥ್‌ಲ್ಯಾಬ್‌ನ ಕರೋನರಿ ಆಂಜಿಯೋಗ್ರಾಂ ಪರೀಕ್ಷೆ ಅತ್ಯವಶ್ಯಕ. ಶೇ. ೭೦ಕ್ಕಿಂತ ಕಡಿಮೆ ವ್ಯಾಸದ ಅಡಚಣೆ ಇದ್ದಲ್ಲಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಅನಗತ್ಯ. ಶೇ. ೭೦ಕ್ಕಿಂತಲೂ ಹೆಚ್ಚು ವ್ಯಾಸದ ಅಡಚಣೆ ಇದ್ದಲ್ಲಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಅತ್ಯವಶ್ಯಕ. ಇಸಿಜಿಯಲ್ಲಿ ಬದಲಾವಣೆಗಳಿರುವ, ಹೃದಯಾಘಾತವಾಗಿರುವ ಮತ್ತು ಹೃದಯಾಘಾತವನ್ನು ಪ್ರಚೋದಿಸುವ ಅಂಶಗಳ ಪ್ರಭಾವವಿದ್ದು, ಹೃತ್ ಶುದ್ಧರಕ್ತನಾಳಗಳ ಕಾಯಿಲೆಯ ಸಾಧ್ಯತೆ ಹೆಚ್ಚಾಗಿ ರುವವರಲ್ಲಿ ಕ್ಯಾಥ್‌ಲ್ಯಾಬ್ ಆಂಜಿಯೋಗ್ರಾಂ ಅನ್ನು ಪ್ರಥಮ ಆದ್ಯತೆಯಾಗಿ ಆಯ್ಕೆ ಮಾಡಿಕೊಳ್ಳ
ಲಾಗುತ್ತದೆ. ಕಾರಣ ಅಡಚಣೆಗಳಿದ್ದಲ್ಲಿ ಅಲ್ಲಿಯೇ ಆಂಜಿಯೋಪ್ಲಾಸ್ಟಿ ಮಾಡಿ ಸ್ಟಂಟ್ ಅಳವಡಿಸಬಹುದು.
ಸಿಟಿ ಮತ್ತು ಎಂಆರ್‌ಐ ಆಂಜಿಯೋ ಗ್ರಾಂಗಳು ಹೊರಗಿನಿಂದ ಮಾಡುವ ಸುರಕ್ಷಿತ ಪರೀಕ್ಷೆ ಗಳಾಗಿದ್ದು, ಯುವಕರಲ್ಲಿ, ಕಾಯಿಲೆ ಶಂಕಿತರಲ್ಲಿ ಮತ್ತು ಪ್ರಚೋದಕ ಅಂಶಗಳ ಪ್ರಭಾವವಿರುವವರಲ್ಲಿ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ಯಾವ ಅವಘಡಗಳೂ ಇಲ್ಲದ ಸಿ.ಟಿ. ಮತ್ತು ಎಂಆರ್‌ಐ ಆಂಜಿಯೋಗ್ರಾಂಗಳು ಉಪಯುಕ್ತ. ಈ ಪರೀಕ್ಷೆಯಿಂದ ಅಡಚಣೆ ದೃಢ ಪಟ್ಟಲ್ಲಿ ಅಡಚಣೆ ನಿವಾರಣೆಗೆ ಕ್ಯಾಥ್‌ಲ್ಯಾಬ್ ಆಂಜಿಯೋಗ್ರಾಂ ಅತ್ಯವಶ್ಯಕ. ರಕ್ತ ಕಿಣ್ವದ
ಪರೀಕ್ಷೆಗಳನ್ನು, ಹೃದಯಾಘಾತವನ್ನು ಇಸಿಜಿ ಪರೀಕ್ಷೆ ಯಿಂದ ಶಂಕಿಸಿದವರಲ್ಲಿ ಕೈಗೊಳ್ಳಲಾಗುತ್ತದೆ.
? ಚಿಕಿತ್ಸೆ: ಜೀವನಶೈಲಿ ಬದಲಾವಣೆ, ಔಷಧಗಳು, ಆಂಜಿಯೋಪ್ಲಾಸ್ಟಿ ಮತ್ತು ಹೃದಯ ಶುದ್ಧರಕ್ತ ನಾಳಗಳಿಗೆ ಬದಲಿ ರಕ್ತನಾಳಗಳ ಜೋಡಣೆ ಇವು ಲಭ್ಯ ಚಿಕಿತ್ಸಾ ವಿಧಾನಗಳು. ಇವು ಹೃದಯಾಘಾತ ಪೂರ್ವ ಹಂತ ಅಥವಾ ಹೃದಯಾಘಾತದ ಹಂತ ವನ್ನವಲಂಬಿಸಿರುತ್ತವೆ. ಹೃದಯಾಘಾತ ಪೂರ್ವ ಹಂತದ ರೋಗಿಗಳ ಹೃದಯ ಶುದ್ಧರಕ್ತನಾಳದ ಅಡಚಣೆ ಶೇ. ೭೦ಕ್ಕಿಂತಲೂ ಕಡಿಮೆ ಇದ್ದಲ್ಲಿ ಔಷಧ ಮತ್ತು ಜೀವನಶೈಲಿ ಬದಲಾವಣೆ ಚಿಕಿತ್ಸೆಗಳಿಂದಲೇ ಕಾಯಿಲೆಯನ್ನು ನಿಯಂತ್ರಿಸಿಕೊಳ್ಳಬಹುದು.
ಅಡಚಣೆ ಶೇ. ೭೦ಕ್ಕಿಂತಲೂ ಅಧಿಕವಾಗಿದ್ದಲ್ಲಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆಯಿಂದ ಸಂಭವನೀಯ ಹೃದಯಾಘಾತವನ್ನು ತಡೆಗಟ್ಟಬಹುದು. ಹೃದಯಾಘಾತದ ಪೂರ್ವ ಹಂತದವರಿಗೆ ರಕ್ತಹೆಪ್ಪನ್ನು ತಡೆಗಟ್ಟುವ ಔಷಧಗಳು (ಆಸ್ಪರಿನ್, ಕ್ಲೋಪಿಡೋಗ್ರಿಲ್), ರಕ್ತನಾಳ ಜಿಡ್ಡು ಗಡಸುರೋಗ ನಿಯಂತ್ರಕ ಮತ್ತು ಜಿಡ್ಡು ಕಡಿಮೆ ಮಾಡುವ ಸ್ಟ್ಯಾಟಿನ್ ಔಷಧಗಳನ್ನು ಜೀವನವಿಡೀ ಸೇವಿಸಬೇಕಾಗುತ್ತದೆ. ಹೃದಯದ ಶುದ್ಧರಕ್ತನಾಳದ ಹಿಗ್ಗಕಗಳು (ನೈಟ್ರೇಸ್) ಸಹಕಾರಿ. ಸ್ಟಂಟ್ ಅಳವಡಿಕೆ ಮಾಡಲು ಸಾಧ್ಯವಿಲ್ಲದ ಅಥವಾ ಸ್ಟಂಟ್ ಅಳವಡಿಕೆ ವಿಫಲವಾದ ಹೃದಯಾಘಾತ ಪೂರ್ವ ಹಂತದವರಿಗೆ ಹೃದಯದ ಶುದ್ಧರಕ್ತನಾಳಗಳಿಗೆ ಬದಲೀ ರಕ್ತನಾಳ ಅಳವಡಿಸುವಿಕೆ ಶಸಕ್ರಿಯೆ ಅನಿವಾರ್ಯ ವಾಗಬಹುದು.
? ಆಂಜಿಯೋಪ್ಲಾಸ್ಟಿ (ಹೃದಯ ಶುದ್ಧರಕ್ತನಾಳ ಸ್ವರೂಪೀಕರಣ): ಕರೋನರಿ ಆಂಜಿಯೋಗ್ರಫಿ ಪರೀಕ್ಷೆಯಲ್ಲಿ ಶೇ. ೭೦ಕ್ಕಿಂತಲೂ ಹೆಚ್ಚು ಅಡಚಣೆಗೀಡಾದ ಹೃದಯದ ಶುದ್ಧ ರಕ್ತನಾಳದ ಜಿಡ್ಡು ಗೆಡ್ಡೆಯನ್ನು ಒಡೆದು, ತೆಗೆದು ಅಡಚಣೆಯನ್ನು ನಿವಾರಿಸಿ ರಕ್ತಚಲನೆಯನ್ನು ಪುನರ್‌ಸ್ಥಾಪಿಸುವ ಶಸ್ತ್ರಕ್ರಿಯೆಯನ್ನು ಆಂಜಿಯೋಪ್ಲಾಸ್ಟಿ ಎನ್ನಲಾಗುತ್ತದೆ.
? ಸ್ಟಂಟ್ ಅಳವಡಿಕೆ: ಹೃದಯದ ಶುದ್ಧರಕ್ತನಾಳದ ಅಡಚಣೆ ನಿವಾರಿಸಿದ ಸ್ಥಳಕ್ಕೆ ಟೈಟ್ಯಾನಿಯಂನಿಂದ ಮಾಡಲ್ಪಟ್ಟ ಜಾಲರಿಯಂಥ ರಚನೆಯಾದ ಸ್ಟಂಟ್
(ಒತ್ತು ನಳಿಕೆ) ಅನ್ನು ರಕ್ತನಾಳದ ಗೋಡೆಗಳಿಗೆ ಒತ್ತಾಸೆಯಾಗಿಡಲಾಗುತ್ತದೆ. ಕ್ರಮೇಣ ಸ್ಟಂಟ್ ರಕ್ತನಾಳದ ಗೋಡೆಗೆ ಜೀವಕೋಶಗಳಿಂದ ಬಂಧಿತ
ವಾಗಿ ಸ್ಥಿರವಾಗುತ್ತದೆ. ಈ ಸ್ಟಂಟಿನಲ್ಲಿ ಮತ್ತೊಮ್ಮೆ ರಕ್ತ ಹೆಪ್ಪುಗಟ್ಟುವಿಕೆಯನ್ನು ಮತ್ತು ರಕ್ತನಾಳಗಳಲ್ಲಿ ಕೆಂಪೂತುರಿಯನ್ನು ತಡೆಯುವ ರಾಸಾಯನಿಕಗಳಿದ್ದು, ಇವು ಮತ್ತೊಮ್ಮೆ ರಕ್ತನಾಳ ಅಡಚಣೆ ಯಾಗುವುದನ್ನು ತಡೆಯುತ್ತದೆ. ಏಕರಕ್ತನಾಳಗಳ ಕಾಯಿಲೆಗೆ ಸಾಮಾನ್ಯವಾಗಿ ಸ್ಟಂಟ್ ಅನ್ನು ಅಳವಡಿಸಲಾಗುತ್ತದೆ ಯಾದರೂ ಇಂದು ಬಹುರಕ್ತನಾಳಗಳ ಅಡಚಣೆಗಳಿಗೂ ಸ್ಟಂಟ್ ಅನ್ನು ಅಳವಡಿಸಲಾಗಿದ್ದು, ಕೆಲವರಲ್ಲಿ ೨ಕ್ಕಿಂತ ಹೆಚ್ಚು ಸ್ಟಂಟ್‌ಗಳನ್ನು ಅಳವಡಿಸಲಾಗುತ್ತದೆ. ಪ್ರಪಂಚದಲ್ಲಿ ಇಂದು ಗರಿಷ್ಠ ೬೭ ಸ್ಟಂಟ್ ಗಳನ್ನು ಅಳವಡಿಸಿಕೊಂಡಿರುವ ಉದಾಹರಣೆಗಳಿವೆ.
ಅತಿ ಸುಲಭವಾಗಿ ಕೆಲವೇ ಗಂಟೆಗಳಲ್ಲಿ ಮಾಡಲಾಗುವ ಅಂದೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸರಳ ಚಿಕಿತ್ಸೆ ಇದಾದುದರಿಂದ ಇಂದು ಇದು ಹೆಚ್ಚು
ಜನಪ್ರಿಯವಾಗಿದೆ. ಸ್ಟಂಟ್ ಒಳಗೆ ಪುನಃ ರಕ್ತ ಹೆಪ್ಪುಗಟ್ಟುವಿಕೆ ಸಂಭವಿಸಬಹುದಾದ ಅಪರೂಪದ ಅವಘಡ. ಸರಿಯಾಗಿ ಸ್ಟಂಟ್ ಅನ್ನು ಅಳವಡಿಸದಿರುವಿಕೆ, ನಿವಾರಣೆಯಾಗದೆ ಉಳಿದ ಅಡಚಣೆ, ಗುರುತಿಸಲಾಗದೇ ಉಳಿದ ರಕ್ತನಾಳಗಳ ಛೇದನ ಇವು ಇದಕ್ಕೆ ಬಹುಮುಖ್ಯ ಕಾರಣ. ಸ್ಟಂಟ್ ಅಳವಡಿಸಿದ ಮೇಲೂ ಜೀವನವಿಡೀ ೨ ಪ್ಲೇಟ್ ಲೇಟ್ ನಿರೋಧಕಗಳನ್ನು ಕಡ್ಡಾಯವಾಗಿ ತೆಗೆದು ಕೊಳ್ಳಬೇಕು. ಈ ಔಷಧಗಳನ್ನು ತೆಗೆದುಕೊಳ್ಳದಿದ್ದವರಲ್ಲಿ ಈ ಸಮಸ್ಯೆ ಉಂಟಾಗ ಬಹುದು. ೬ ತಿಂಗಳೊಳಗೆ ಅಡಚಣೆ ಕಾಣಿಸಿಕೊಳ್ಳುತ್ತದೆ. ಇಂಥವರಲ್ಲಿ ಎದೆನೋವು ಮತ್ತು ದಮ್ಮುಗಳು ಮರುಕಳಿಸುತ್ತವೆ. ಅಂಥ ಸಂದರ್ಭಗಳಲ್ಲಿ ಹೆಪ್ಪುಗಟ್ಟಿದ ಸ್ಟಂಟ್ ಅನ್ನು ತೆಗೆದು ಪುನಃ ಹೊಸ ಸ್ಟಂಟ್ ಅನ್ನು ಅಳವಡಿಸ ಲಾಗುತ್ತದೆ.
? ಹೃದಯದ ಶುದ್ಧ ರಕ್ತನಾಳಗಳಿಗೆ ಬದಲೀ ರಕ್ತನಾಳ ಅಳವಡಿಸುವಿಕೆ (ಕರೋನರಿ ಬೈಪಾಸ್ ಸರ್ಜರಿ- ಸಿಎಬಿಜಿ): ಒಂದಕ್ಕಿಂತ ಹೆಚ್ಚು ಶುದ್ಧರಕ್ತನಾಳಗಳು
ಅಡಚಣೆಗೀಡಾಗಿದ್ದಲ್ಲಿ, ಒಂದೇ ರಕ್ತನಾಳ ಹಲವಾರು ಕಡೆ ಅಡಚಣೆಗೀಡಾಗಿದ್ದಲ್ಲಿ ಮತ್ತು ಸ್ಟಂಟ್ ಅಳವಡಿಕೆ ವಿಫಲತೆಯಾದ ಸಂದರ್ಭಗಳಲ್ಲಿ ಈ ಶಸ್ತ್ರಕ್ರಿಯೆ ಯನ್ನು ಕೈಗೊಳ್ಳಲಾಗುತ್ತದೆ. ಅಡಚಣೆ ಗೀಡಾದ ಹೃತ್ ಶುದ್ಧರಕ್ತನಾಳದ ಬದಲಿಗೆ ರೋಗಿಯ ಮುಂಗೈನ ರೇಡಿಯಲ್ ಶುದ್ಧರಕ್ತನಾಳ, ಅಥವಾ ಸ್ತನದ ಒಳ ಶುದ್ಧರಕ್ತನಾಳ ಅಥವಾ ಕಾಲಿನ ಸೆಫಾನಸ್ ಅಶುದ್ಧ ರಕ್ತನಾಳಗಳನ್ನು ತೆಗೆದು ಅವುಗಳ ಒಂದು ತುದಿಯನ್ನು ಅಯೋರ್ಟಾ ಶುದ್ಧರಕ್ತ ನಾಳಕ್ಕೂ ಮತ್ತೊಂದು ತುದಿಯನ್ನು ಅಡಚಣೆ ಗೀಡಾದ ಹೃತ್ ಶುದ್ಧ ರಕ್ತನಾಳದ ಸಹಜ ಭಾಗಕ್ಕೂ ಹೊಲಿದು ಜೋಡಿಸಲಾಗುತ್ತದೆ. ಅಯೋರ್ಟಾ ದಿಂದ ಜೋಡಿತ ಬದಲಿ ಶುದ್ಧ ರಕ್ತನಾಳದ ಮೂಲಕ ಹೃದಯದ ರಕ್ತಕುಂದಿಕೆ ಭಾಗಕ್ಕೆ ರಕ್ತ ಸರಬರಾಜಾಗುತ್ತದೆ.
ಅಗತ್ಯಕ್ಕನುಗುಣವಾಗಿ ಒಂದು, ಎರಡು ಅಥವಾ ಮೂರು ಬದಲಿ ಶುದ್ಧರಕ್ತನಾಳಗಳನ್ನು ಅಳವಡಿಸಲಾಗುತ್ತದೆ. ಜೋಡಿತ ಶುದ್ಧರಕ್ತನಾಳಗಳು ಕಾಯಿಲೆ ಗೀಡಾಗುವ ಸಂಭವ ಅತ್ಯಲ್ಪ. ಈ ಶಸ್ತ್ರಕ್ರಿಯೆ ಆಂಜಿಯೊಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಗಿಂತ ಶ್ರೇಷ್ಠವಾದರೂ ಇದರಿಂದ ಉಂಟಾಗಬಹುದಾದ ಅವಘಡಗಳ ಸಾಧ್ಯತೆ, ಅವಽ ಮತ್ತು ವೆಚ್ಚ ಹೆಚ್ಚಾದುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಈ ಶಸಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ.
(ಮುಂದುವರಿಯುವುದು)