Tuesday, 3rd December 2024

ಹಿಂದೂ ಟೆರರಿಸಂ ಎಂಬ ಜಗನ್ಮಿಥ್ಯೆ !!!

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಹೌದು, ಹಿಂದೂ ಧರ್ಮದಲ್ಲಿ ನ್ಯೂನತೆಯಿದೆ. ತಪ್ಪುಗಳಿವೆ. ಕೊರತೆಗಳಿವೆ. ಹಿಂದೂ ಎನ್ನುವ ಮುಖ್ಯವಾಹಿನಿಯ ಭಾರತೀಯ ಸಮಾಜಕ್ಕೆ ಬಲಿಷ್ಠ ನಾಯಕರೇ ಇಲ್ಲ. ಮುಂದಾಳೇ ಇಲ್ಲ. ಇದ್ದವರ ಮಾತನ್ನು ಹಿಂದೂಗಳೇ ಕೇಳುವುದಿಲ್ಲ.

ಹಿಂದೂಗಳು ಜಗತ್ತಿನ ಅತ್ಯಂತ ಕಡುಪಾಪಿ ಜನಾಂಗಕ್ಕೆ ಸೇರಿದವರು. ಇವರನ್ನು ಪುಣ್ಯವಂತರನ್ನಾಗಿಸಿ ಸ್ವರ್ಗಕ್ಕೇರಲು ಅರ್ಹ ಗೊಳಿಸುವ ಪ್ರಯತ್ನವನ್ನು ಕ್ರೈಸ್ತ-ಮುಸಲ್ಮಾನ ಸಾಧು ಸಂತರು ವ್ಯಯಿಸಿದ ಹಣವೂ, ಸುಧಾರಣಾ ಸೇನೆಯೂ, ಹಲವು- ಹತ್ತು ಕಾರ್ಯ ಯೋಜನೆಗಳೂ, ಸೈಲೆಂಟಾಗಿ ನಡೆಸಿದ ತಂತ್ರ-ಯಂತ್ರಗಳೂ ಲಾಗಾಯ್ತಿನಿಂದಲೂ ಫಲಕಾರಿಯಾಗಲಿಲ್ಲ ಎಂಬುದು ಯಾರ ಅ ದುರಂತ? ಹೌದು, ಎಷ್ಟು ಬಗೆಯಲ್ಲಿ ಹಿಂದೂ ಎಂಬುದನ್ನು ಅಪಾರ್ಥಗೊಳಿಸಿ ವಿರೂಪಗೊಳಿಸಿ ವಿಕೃತಿಯಾಗಿ ಮಾಡಲು ಸಾಧ್ಯವೋ ಅವೆಲ್ಲವೂ ನಡೆಯುತ್ತಲೇ ಇದೆ.

ಹಿಂದೂ ಎಂಬ ಧರ್ಮ (ಕ್ಷಮಿಸಿ, ಧರ್ಮವೆಂದೇ ಕರೆದು ರೂಢಿಯಾಗಿದ್ದರಿಂದ ಹಾಗೆಯೇ ಬಳಸುತ್ತಿದ್ದೇನೆ) ಕ್ರೂರ; ಅಮಾನವೀಯ; ಬರ್ಬರ; ಹಿಂಸಾತ್ಮಕ; ನಿರ್ದಯ ಎಂದೂ, ಪುರಾಣಗಳು, ವೇದೋಪನಿಷತ್ತು ಗಳು, ಭಗವದ್ಗೀತೆ, ರಾಮಾಯಣ ಮಹಾಭಾರತಗಳು-ಇವುಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ, ಜರೆಯುತ್ತ, ನಿಂದಿಸುತ್ತ, ಸುಳ್ಳೆಂಬ ವಾದ ವಿವಾದಗಳ ಸುತ್ತ ನೀವು ಬದುಕಿದರೆ ನೀವು ಪ್ರಗತಿಪರರು.

ಹಿಂದೂ ಧರ್ಮದ ಗ್ರಂಥಗಳು ಹಿಂಸೆಯನ್ನು ಹುಟ್ಟಿಸುವಂತೆ ಪ್ರಲೋಭನೆ, ಪ್ರಚೋ ದನೆ, ಪ್ರೇರಣೆಯನ್ನು ನೀಡುತ್ತವೆಂದು ಘಂಟಾ ಘೋಷ ವಾಗಿ ನೀವು ಹೇಳುತ್ತಿರಾದರೆ ನಿಮಗೂ, ದೇಶಕ್ಕೂ, ಜಗತ್ತಿಗೂ ಕ್ಷೇಮವಾಗುತ್ತದೆಂದು ಹೇಳಿದವರು, ಬರೆದವರು, ಹಾಗೆಯೇ ಬದುಕಿ ದವರು ಹಿಂದೂ ಟೆರರಿಸಂ ಎಂಬುದನ್ನು ಬಿತ್ತಿದರು. ಕನ್ನಡದ ಜ್ಞಾನಪೀಠಿಯೊಬ್ಬ ಹೇಳಿದ್ದು: ಕರ್ನಾಟಕದಲ್ಲಿ ನಡೆಯು ತ್ತಿರುವ ಎಲ್ಲ ಬಗೆಯ ಹಿಂಸೆಗೆ ಉಡುಪಿಯೇ ಮೂಲ ಎಂದು!

ಅವನೆಂಥಾ ಸಂಶೋಧನೆ ಮಾಡಿ ಹೇಳಿದ್ದನೋ ಶ್ರೀಕೃಷ್ಣನೇ ಬಲ್ಲ! ಅದಕ್ಕೆ ಬನ್ನಂಜೆಯವರು ಅವನಿಗೆ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದು ಇನ್ನೂ ನೆನಪಿದೆ. ಮಜಾ ಏನೆಂದರೆ, ಜ್ಞಾನಪೀಠಕ್ಕಾಗಿ ಅವನು ನಡೆಸಿದ ಲಾಭಿಯ ವಿವರವನ್ನು ಮೊನ್ನೆ ಒಬ್ಬರು ಕಳಿಸಿದ್ದರು! ಓದಿದಾಗ
ದಿಗಿಲಾಗಿಬಿಟ್ಟಿತು! ಇರಲಿ ಬಿಡಿ, ನೆನಪಾಗಿ ಹೇಳಿದೆಯಷ್ಟೆ. ಕ್ರೈಸ್ತ ಮುಸಲ್ಮಾನರ ವಿಷಯದಲ್ಲಿ ಚರಿತ್ರೆಯೆಂಬುದು ಕೇವಲ ಫ್ಯಾಕ್ಟ್! ಹಿಂದೂಗಳ ವಿಷಯದಲ್ಲಿ ಅದು ಸತ್ಯ! ಹೇಗೆ?

ನೋಡಿ: ರಾವಣ ಸೀತೆಯನ್ನು ಕದ್ದೊಯ್ದದ್ದು ಅವಳ ಹಿತಕ್ಕಾಗಿ; ಅವಳ ಪ್ರಗತಿಗಾಗಿ; ಸುಖಕ್ಕಾಗಿ! ರಾವಣ ಶಾಂತಿ ಪ್ರಿಯ. ರಾಮನೇ ಟೆರರಿಸ್ಟ್ ಇದ್ದ! ಅವನ ಬಿಲ್ಲು ಬಾಣಗಳು ಟೆರರಿಸಂ ಸಂಕೇತ. (ಪ್ರಭು ಶ್ರೀರಾಮನನ್ನು ನೆಗೆಟಿವ್ ದೃಷ್ಟಿಕೋನದಲ್ಲಿ ಕಂಡ ಅತಿ ಮಾನುಷ ಬುದ್ಧಿಯವನೊಬ್ಬ ಶ್ರೀರಾಮನಿಗೆ ಮಂದಿರ ಯಾಕೆ ಬೇಕು ಎಂದಿದ್ದ? ರಾಮ ಟೆರರಿಸ್ಟ್ ಆದರೆ, ಶ್ರೀಕೃಷ್ಣನಂತೂ ಮಹಾ ಟೆರರಿಸ್ಟ್. ಕಂಸ ಅತಿ ಶಾಂತಿಪ್ರಿಯ. ಬಹುದೊಡ್ಡ ಕ್ರಾಂತಿಕಾರಿ. ಅತ್ಯಂತ ಸಭ್ಯ. ಜರಾಸಂಧ, ಶಿಶುಪಾಲ, ಪೌಂಡ್ರಕ, ಕರ್ಣ,

ದುಃಶ್ಶಾಸನ, ದುರ್ಯೋಧನಾದಿಗಳು ಹಿಂದೂ ಸಮಾಜದಲ್ಲಿರುವ ಅನಿಷ್ಟಗಳಿಗೆ ಮೋಚಕರಾಗಿ ಹುಟ್ಟಿ ಬಂದ ಮಹಾನ್
ಸುಧಾರಕರು. ಶ್ರೀಕೃಷ್ಣ ನಯವಂಚಕ. ಪಕ್ಷಪಾತಿ. ಅವನ ಚಕ್ರ, ಗದೆ, ಕತ್ತಿ, ಬಿಲ್ಲು-ಮುಂತಾದವೆಲ್ಲವೂ ಟೆರರಿಸಂ ಸಂಕೇತಗಳು. ವಿಷ್ಣು ಸಹಸ್ರನಾಮ ಅವನನ್ನು ಸರ್ವಪ್ರಹರಣಾಯುಧ ಎಂದದ್ದೇ ಪ್ರಮಾಣ. ಎಲ್ಲ ದೇವತೆಗಳ ಕೈಯಲ್ಲಿರುವ ಆಯುಧಗಳು ಹಿಂಸೆಯನ್ನು ಪ್ರಚೋದಿಸುತ್ತವೆ. (ಅತೀ ಬುದ್ಧಿವಂತನೊಬ್ಬ ಚಾಮುಂಡಿಯನ್ನು ಹಿಂಸ್ರಕಿ ಎಂದು ಕರೆದಿದ್ದ!) ಬಲರಾಮರೂ ಅಷ್ಟೆ.

ನರಸಿಂಹ ಅತೀದೊಡ್ಡ ಟೆರರಿಸ್ಟ್. ವರಾಹ, ಕಲ್ಕಿ, ಅತಿಭೀಷಣ, ದಾರುಣ ಭಯಾನಕ ಟೆರರಿಸ್ಟ್‌ಗಳು! ಗಣಪತಿ, ಸುಬ್ರಹ್ಮಣ್ಯ,
ಹನುಮಂತ (ಅವನೇ ಬಜರಂಗ ಬಲಿ, ಬಜರಂಗದಳದ ಸ್ಥಾಪಕ!), ಶಿವ, ಬ್ರಹ್ಮ, ದೇವತೆಗಳೆಲ್ಲರೂ ಹಿಂದೂ ಟೆರರಿಸ್ಟ್ ಗಳು. ಯಾಕೆಂದರೆ, ಅವರುಗಳ ಕೈಯಲ್ಲಿ ಆಯುಧಗಳಿವೆ. ಆಯುಧ ಹಿಡಿಯದೇ ಹಣ ಕೊಟ್ಟು, ಹೆಣ್ಣು ತೋರಿಸಿ, ಸೀಟು ಕೊಟ್ಟು ಮತಾಂತರ ಮಾಡುವವರೇ ಶಾಂತಿಪ್ರಿಯರು. ಶಾಂತಿದೂತರು. ಅವರು ದೇವರಿಂದ ಕಳಿಸಲ್ಪಟ್ಟವರು.

ಊರುಗಳಿಗೇ ಹಸಿರು ಬಳಿದು ಅರೇಬಿಯಾಕ್ಕೆ ಮಾರುವವರು ಮಹಾಶಾಂತಿಪ್ರಿಯರು. ಇವರು ಆಗಾಗ ಭಾರತದಲ್ಲಿ ನಡೆಸುವ ಬಾಂಬುಸೋಟಗಳು ಜನಸಂಖ್ಯಾ ನಿಯಂತ್ರಣದ ಉಪಕಾರದ ಅಮೃತ ಫಲಗಳು. ಅಫ್ಜಲ್ ಗುರುವೇ ವಿಶ್ವಗುರು! ಇಸ್ಲಾಂ ವಿಚಾರದಲ್ಲಿ ಮತಕ್ಕೂ ಭಯೋತ್ಪಾದನೆಗೂ ಸಂಬಂಧವಿಲ್ಲ. ಟೆರರಿಸಂ ಈಸ್ ಟೆರರಿಸಂ. It has no religion ಎನ್ನುತ್ತಾರೆ ಮಹಾನ್ ದಾರ್ಶನಿಕ ರಾದ ಸರದೀಪ ದೇಸಾಯಿ, ಬರ್ಖಾ ದತ್, ಗೋಸ್ವಾಮಿ, ಅಮಿತಾಭ್- ಎಲ್ಲ ಎನ್ ಡಿ ಟಿವಿ, ಸಿಎನ್‌ಎನ್, ಐಬಿನ್ ಇತ್ಯಾದಿ ಲಹರಿ ಗಳಲ್ಲಿ! ಪಾಪಿ ಹಿಂದೂಗಳದ್ದು ಹೀಗಲ್ಲ. ಅವರದ್ದು it is rooted in their very religion!

ಕ್ರೈಸ್ತ, ಮುಸಲ್ಮಾನರು ಹಿಂದೂಗಳನ್ನು ಸಾಯಿಸುವಾಗ, ಕಾಶ್ಮೀರದಿಂದ ಹೊರದಬ್ಬುವಾಗ ಗೃಹಮಂತ್ರಿ, ಪ್ರಧಾನಮಂತ್ರಿ ಸೈಲೆಂಟಾ ಗಿರಬೇಕು. ಅದು ಸುಧಾರಣೆಯ ಹಾದಿ! ಇಂಡಿಯಾದ ಹಿತ ಅದರಲ್ಲಿದೆ. Of course ಭಾರತದ್ದಲ್ಲ! ಆಕಸ್ಮಾತ್ ಹಿಂದೂ ಇಂಥವುಗಳನ್ನು ವಿರೋಧಿಸಿದರೆ, ಪ್ರತಿಭಟಿಸಿದರೆ ಅದು ಹಿಂದೂ ಟೆರರಿಸಂ! ಆಗ ಜಗತ್ತಿನ ಎಲ್ಲ ಪ್ರಗತಿಪರರೂ, ಎಡಚರರೂ, ಕಮ್ಯುನಿಸ್ಟರೂ ಸೇರಿ ಖಂಡಿಸಬೇಕು. ಹಿಂದೂ ಧರ್ಮದ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡಬೇಕು. ಹಿಂದೂ ಧರ್ಮ ಅಸಹಿಷ್ಣುತೆಯಿಂದ
ತುಂಬಿದೆಯೆಂದು ನೆಗೆಟಿವಿಸಂ ಹುಟ್ಟಿಸಬೇಕು. ಹರಡಬೇಕು!

ಇನ್ನೂ ಮುಂದುವರೆದು, ಶಿವಾಜಿ, ರಾಣಾಪ್ರತಾಪ, ಮದಕರಿ, ಜಾನ್ಸಿ, ಓಬವ್ವ, ಅಬ್ಬಕ್ಕರೆರೂ ಟೆರರಿಸ್ಟ್. ಅರವಿಂದ, ವಿವೇಕಾನಂದ, ದಯಾನಂದರು, ರಾಜಾರಾಮರು ಟೆರರಿಸ್ಟರು! ಹಿಂದೂ ಮಠಾಧೀಶರುಗಳು ಟೆರರಿಸ್ಟುಗಳು! ಈಗ ನಿಮಗೆ ಗೊತ್ತಾಗಿರ ಬೇಕಲ್ಲ: ಹಿಂದೂ= ಜಾತಿವಾದಿ=ಟೆರರಿಸ್ಟ್. ಇದು ಇತ್ತೀಚಿನ ಸಂಶೋಧನೆ ಎಂತ ಕಂಡರೂ ನೆಹರೂ ಪ್ರಧಾನಿ ಲಾಗಾಯ್ತಿನಿಂದಲೂ ಸೃಷ್ಟಿ ಯಾದದ್ದು. ಪ್ರತಿಭಟಿಸಿದ ಎಲ್ಲ ಹಿಂದೂಗಳು ಟೆರರಿಸ್ಟುಗಳು. ಪೋಲಿಸರು, ವೈದ್ಯರು ಆಯುಧವನ್ನು ಹಿಡಿಯುತ್ತಾರೆ. ಅವರು ಟೆರರಿಸ್ಟ್‌ ಗಳು! ಪರೀಕ್ಷೆಯಲ್ಲಿ ಫೈಲು ಮಾಡಿದ ಮೇಷ್ಟ್ರು ಟೆರರಿಸ್ಟ್!

ಹಣಕ್ಕೆ ಅಂಕ ಕೊಡುವವರು ಪ್ರಗತಿಪರರು! ಅದು ಲೋಕೋಪಕಾರ! ಹಿಂದೂಗಳನ್ನು ಮುಸ್ಲಿಮರು ಕೊಂದರೆ ಹಿಂದೂವಿನದ್ದೇ ತಪ್ಪು. ಆ ತಪ್ಪಿಗೆ ಅದು ಶಿಕ್ಷೆ. ಇಂಥ ಶಿಕ್ಷೆಗಳು ಫ್ಯಾಕ್ಟ್! ಆದರೆ ಸತ್ಯವಲ್ಲ ಎಂಬ ಮನಸ್ಥಿತಿಯವರಿಗೆ ಜಾತಿಯನ್ನು ಬ್ರಾಹ್ಮಣರು ಸೃಷ್ಟಿಸಲಿಲ್ಲ; ಅದು ಅನಾದಿ ಎಂದ ಅಂಬೇಡ್ಕರರೂ ಜಾತಿವಾದಿ ಎನಿಸಲ್ಪಟ್ಟರು! ಬೌದ್ಧಮತದ ಅತೀ ಮಡಿವಂತಿಕೆ, ಅಹಿಂಸಾಚರಣೆ, ಮಾಂಸ ವರ್ಜನೆ ಗಳಿಂದ ಜಾತಿ ಬಿಗಡಾಯಿಸಿತೆಂದು ಅವರು ಬರೆದದ್ದು ಜಾತಿಗೆ ಪ್ರೋತ್ಸಾಹಕರ! ಅಂಬೇಡ್ಕರರನ್ನು ಪ್ರಗತಿಪರರು, ಎಡಚರರು ಕಮ್ಯುನಿಸ್ಟರು ಓದಬಾರದು. ಓದಿದರೆ ಜ್ಞಾನ ಬಂದು ಬಿಡುತ್ತದೆ. ಅದು ಬಲು ಅಪಾಯಕಾರಿ! ಹಾಗಾದರೆ ಓದಬೇಕಾದವರು ಯಾರು? ನೀವೇ ಊಹಿಸಿ.

ವಿವೇಕಾನಂದರು ಜಾತಿವಾದಿ! ಸುಭಾಸ್ ಚಂದ್ರ ಬೋಸರು ಮಹಾ ಟೆರರಿಸ್ಟ್! ಲಾಲ್ ಬಾಲ್ ಪಾಲರು ಟೆರರಿಸ್ಟರು! ಭಗತ್ ಸಿಂಗ್, ಆಜಾದ್, ರಾಜಗುರು, ಸುಖದೇವ, ಧಿಂಗ್ರಾ, ಅಲ್ಲೂರಿಯಂಥ ನೂರಾರು ಕ್ರಾಂತಿವೀರರು ಟೆರರಿಸ್ಟ್‌ಗಳು! ಪಟೇಲರು ಟೆರರಿಸ್ಟ್! ಮೋದಿ ಕೂಡ! ಈಗಲಾದರೂ ಗೊತ್ತಾಯಿತಲ್ಲ? ಯಾರು ಯಾಕೆ ಟೆರರಿಸ್ಟುಗಳು ಅಂತ! ಹೀಗೆ ಹಿಂದೂ ಟೆರರಿಸಂ ಬಗ್ಗೆ ಬರೆಯುವ ಜರೆಯುವ ಕೊರೆಯುವ ನಿಂದಿಸುವವರೆಲ್ಲರೂ ಜಗದೋದ್ಧಾರಕರು! ಕ್ಲಾಸೆಲೆಸ್ ಸೊಸೈಟಿ ವಿಥ್ ಓನ್ಲಿ ಟು ಕ್ಲಾಸೆಸ್, ಮಾಸೆಸ್ ಆಂಡ್ ಬಾಸಸ್ – ಎಂಬುದು ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಸತ್ತಿರಬಹುದು. ಆದರೆ ಭಾರತದಲ್ಲಿ ಸಾಯಬಾರದು.

ಸತ್ತರೆ ಹಿಂದೂ ಟೆರರಿಸಂ ಉಚ್ಛ್ರಾಯಕ್ಕೆ ಬರುತ್ತದೆ. ಅದನ್ನು ತಡೆಯಲು ಈ ಸೋಕಾಲ್ಡ ಪುಟುಗೋಸಿ ಎಡಪಂಥೀಯರು ಗುತ್ತಿಗೆ ಪಡೆದು ಕೊಂಡಿದ್ದಾರೆ. ಅವರಲ್ಲಿ ಕೆಲವರು ಮೇಲೆ ಹೋಗಿದ್ದಾರೆ. ಇದ್ದವರಿಗೆ ಉಸಿರು ಕಟ್ಟಿದೆ. ಎಲ್ಲೂ ಮೋದಿ ಫೋಬಿಯಾ! ಆದರೂ ಇಂಥ ಪುಟಗೋಸಿಗಳು ಹೇಳಿದ್ದು ಸತ್ಯ! ಹಿಂದೂಯೇತರರದು ಫ್ಯಾಕ್ಟ್! ಹೌದು, ಹಿಂದೂ ಧರ್ಮದಲ್ಲಿ ನ್ಯೂನತೆಯಿದೆ. ತಪ್ಪುಗಳಿವೆ. ಕೊರತೆ ಗಳಿವೆ. ಹಿಂದೂ ಎನ್ನುವ ಮುಖ್ಯವಾಹಿನಿಯ ಭಾರತೀಯ ಸಮಾಜಕ್ಕೆ ಬಲಿಷ್ಠ ನಾಯಕರೇ ಇಲ್ಲ. ಮುಂದಾಳೇ ಇಲ್ಲ. ಇದ್ದವರ ಮಾತನ್ನು ಹಿಂದೂಗಳೇ ಕೇಳುವುದಿಲ್ಲ. ಧರ್ಮ ಸಂರಕ್ಷಣೆ, ರಾಜಕಾರಣ, ಸಮಾಜ ಚಿಂತನೆಯಲ್ಲಿ ಕ್ರೈಸ್ತ ಮುಸ್ಲಿಮರು ನಡಕೊಂಡ ರೀತಿಯಲ್ಲಿ ಹಿಂದೂವಲ್ಲಿಲ್ಲ, ಹಿಂದೂವಲ್ಲಿ ಏಕತೆಯಿಲ್ಲ.

ಹೆಚ್ಚುತ್ತಿರುವ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಅರಿವಿಲ್ಲ. ಹೆಚ್ಚುತ್ತಿರುವ ಅವರ ಜನಸಂಖ್ಯೆಯ ಬಗ್ಗೆಯೂ ಎಚ್ಚರವಿಲ್ಲ. ಅವರ ತುಷ್ಟೀಕರ
ಣದ ದುರಂತ ಫಲದ ಬಗ್ಗೆ ಯಾವ ಭಯವೂ ಇಲ್ಲ. ಅನಾಚಾರ, ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ಬೇಕಾದರೂ ಆಗಲಿ. ನಮಗೆ ತೊಂದರೆಯಾಗದಿದ್ದರೆ ಸಾಕು ಎಂಬ ಹಿಂದೂವಿನ ಮನೋಭಾವವೇ ಅವನನ್ನು ಅಥವಾ ಅಂಥದ್ದಕ್ಕೆ ಅವನ ಸೊಲ್ಲು ಏರಿತೆಂದರೆ ಅವನು ಟೆರರಿಸ್ಟ್! ದುಷ್ಟ ರಾಜಕಾರಣದ ದುರಂತದ ಫಲವಿದು! ಮುಸ್ಲಿಂ ತುಷ್ಟೀಕರಣದ ಪರಿಣಾಮ ಇನ್ಮುಂದೆ ಘೋರವಾಗಿಯೇ ಇರುತ್ತದೆ ಎನಿಸಲು ಸುರುವಾಗಿ ಬಿಟ್ಟಿದೆ. ಮುಸ್ಲಿಮ್ ಭಯೋತ್ಪಾದನೆ ರಕ್ತಬೀಜಾಸುರನಂತೆ! ಒಬ್ಬರು ಹೋದರೆ ಇನ್ನೊಬ್ಬ ಆ ಸ್ಥಾನ ತುಂಬುವು ದಕ್ಕೆ ಸಿದ್ಧ! ಒಬ್ಬನೇ ನಾಯಕ, ಆದರೆ, ಹಿಂದೂಗಳಲ್ಲಿ too many leaders.

ಮುಸ್ಲಿಂ ನಾಯಕತ್ವ ಸೋಲುವುದೇ ಇಲ್ಲ. ಒಬ್ಬ ಮುಸಲ್ಮಾನ ನಾಯಕ ಸುಧಾರಿಸಿ ದಾರಿಗೆ ಬಂದು ಸಮರಸತೆಯನ್ನು ಬೋಧಿಸಿದರೆ ಅವನನ್ನು ಇತರರು ಕೊಲ್ಲುತ್ತಾರೆ! ಆದರೂ ಅದು ಟೆರರಿಸಂ ಅಲ್ಲ! ಎಲ್ಲೂ ಕಾಣುವುದು ಹಿಂದೂ ಟೆರರಿಸಂ ಎಂಬ ಜಗನ್ಮಿಥ್ಯೆ ಮಾತ್ರ!