Tuesday, 3rd December 2024

ಕೀಟನಾಶಕ ಮಾರುವವನು- ಹುಳುಮಾನವ

ತುಂಟರಗಾಳಿ

ಸಿನಿಗನ್ನಡ

ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವುದಕ್ಕೆ ಅಂತಾನೇ ಕೆಲವರು ಕೆಲಸ ಮಾಡ್ತಾರೆ. ಅದರಲ್ಲೂ ಅಭಿಮಾನಿಗಳ ಹೆಸರಲ್ಲಿ
ದುರಭಿಮಾನ ತೋರಿಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಅದರಲ್ಲೂ ಕೆಲವರು ಅಸಹ್ಯ ಸ್ಥಿತಿಗೆ ಇಳಿದಿರುವುದು ನೋಡಿದರೆ ಇವರು ವಿಕೃತ ಅಭಿಮಾನಿ ಗಳು ಎಂಬ ಅನಿಸಿಕೆ ಮೂಡುತ್ತದೆ. ಸುಖಾ ಸುಮ್ಮನೆ ಡಾ.ರಾಜ್ ಕುಮಾರ್‌ ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ಅಸಭ್ಯ ಪೋಗಳನ್ನು ಹಾಕಿ ತಮ್ಮ ವಿಕೃತಿ ಮೆರೆಯುವುದು ಕೆಲವು ಕಲಹಪ್ರಿಯರ ಚಟ.

ಇಂಥವರಿಗೆ ರಾಜ್ ಕುಮಾರ್ ಅಭಿಮಾನಿಗಳು ತಕ್ಕ ಪಾಠ ಕಲಿಸಿ ಅವರಿಂದ ಕ್ಷಮೆ ಕೇಳಿಸಿರುವುದೂ ಆಗಿದೆ. ಆದರೆ ಇಂಥ ಮನೋಸ್ಥಿತಿಗೆ ಕಾರಣ ಏನು ಎನ್ನುವುದನ್ನು ನೋಡಿದರೆ ಇವು ನಿರುದ್ಯೋಗದ ಫಲ ಎನಿಸಿದರೆ ತಪ್ಪಿಲ್ಲ. ಇಂಥವರಿಗೆ ಓದು, ಕೆಲಸ ಇಂಥದ್ಯಾವುದರಲ್ಲೂ ಆಸಕ್ತಿ ಇರೋದಿಲ್ಲ. ಯಾವ ದೊಡ್ಡ ಟ್ಯಾಲೆಂಟೂ ಇರೋದಿಲ್ಲ ಹಾಗಾಗಿ ಫೇಸ್‌ಬುಕ್‌ನಲ್ಲಿ ಅಟೆನ್ಶನ್ ಸೀಕರ್ಸ್ ಆಗಿ ಇಂಥ ಕೆಲಸಗಳಿಗೆ ಕೈ ಹಾಕುತ್ತಾರೆ. ಆದರೆ ಬೇಸರದ ಸಂಗತಿ ಅಂದ್ರೆ ಇದಕ್ಕೆ ಹೆಸರು ಬಳಕೆ ಆಗ್ತಿರೋದು ದರ್ಶನ್ ಅಭಿಮಾನಿಗಳು ಅನ್ನೋ ಟ್ಯಾಗ್.

ಇಂಥವರು ತಮ್ಮ ನಟನ ಮೇಲಿನ ಅಭಿಮಾನದ ಹೆಸರಲ್ಲಿ ಡಾ. ರಾಜ್ ಕುಮಾರ್ ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರನ್ನೂ ಬಿಡಲ್ಲ. ಸುದೀಪ್ ಅನ್ನೂ ಬಿಡಲ್ಲ. ಇಂಥ ಕೆಲಸದಲ್ಲಿ ಅದೇನೋ ವಿಕೃತ ಆನಂದ ಇವರಿಗೆ. ಇಂಥವರ ಅಕೌಂಟ್‌ಗಳು ರಿಪೋರ್ಟ್ ಆಗಿ ಲಾಕ್ ಆದರೆ ಇನ್ನೊಂದು ಅಕೌಂಟ್
ಓಪನ್ ಮಾಡುತ್ತಾರೆ. ಫೇಸ್ ಟು ಫೇಸ್ ಫೇಸ್ ಯಾರೂ ಸಿಗಲ್ಲ ಎಂಬ ನಂಬಿಕೆಯಲ್ಲಿ ಅಶ್ಲೀಲವಾಗಿ ಮಾತನಾಡುತ್ತಾರೆ. ಒಂದು ವೇಳೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕೆ ಇಳಿಯುತ್ತಾರೆ. ಒಟ್ಟಿನಲ್ಲಿ ಫೇಸ್ ಬುಕ್ ನಂಥ ಅಸುರಕ್ಷಿತ ಜಾಲತಾಣಗಳಲ್ಲಿ ಇಂಥ ಅನಿಷ್ಟ ಸಂತತಿಗಳಿಗೆ ಕೊನೆ ಅನ್ನೋದು ಇರೋದಿಲ್ಲ. ಯಾರೇ ಆಗಲಿ, ಇಂಥವರ ಬಗ್ಗೆ ಅದೆಷ್ಟು ಅಂತ ತಲೆಕೆಡಿಸಿಕೊಳ್ಳೋ ಕಾಗುತ್ತೆ, ಒಂದೆರಡು ಸಲ ಇವರಿಗೆ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರ ರೀತಿ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾಗಲ್ಲ ಅನ್ನೋದೇ
ಇಂಥವರ ಭಂಡ ಧೈರ್ಯ.

ಲೂಸ್ ಟಾಕ್-ನರೇಂದ್ರ ಮೋದಿ

ಪ್ರಧಾನ ಮಂತ್ರಿಗಳೇ ಹೇಗಿದೆ ನಿಮ್ಮ ಈ ಬಾರಿಯ ಚುನಾವಣಾ ಅನುಭವ?
-ಚೆನ್ನಾಗಿದೆ, ಆದ್ರೆ ಚೆನ್ನಾಗಿಲ್ಲ

ಏನಿದು ಇತ್ತೀಚೆಗೆ ಬರೀ ಹಿಂಗೇ ಮಾತಾಡ್ತೀರಾ, ಈಗ ಹೇಳಿದ್ದನ್ನ ನಾಳೆ ಇಲ್ಲೇ ಅಂತೀರಾ?

-ಇವತ್ತಿರೋರೇ ನಾಳೆ ಇರಲ್ಲ, ಹಂಗಾಗಿದೆ ಪ್ರಪಂಚ. ಅದಕ್ಕೇ ನಾನು ಹಂಗೇ.

ಅದೂ ಸರಿನೇ, ಆದ್ರೂ ಮುಸಲ್ಮಾನರ ಬಗ್ಗೆ ದಿನಕ್ಕೊಂದು ಥರ ಮಾತಾಡ್ತಾ ಇದ್ದೀರಲ್ಲ

– ರಾಜಕಾರಣಿಯ ಲೈಫಲ್ಲಿ ಎಸಿ, ಬಿಸಿ ಅಂದ್ರೆ ಆಫರ್ ಕ್ರೈ, ಬಿಫೋರ್ ಕ್ರೈ ಥರ. ಚುನಾವಣೆಗೆ ಮುನ್ನ ಮತ್ತು ಚುನಾವಣೆಯ ನಂತರ ಅಂತ ಎರಡು PHASE ಇರ್ತವೆ ಅರ್ಥ ಮಾಡ್ಕೊಳಿ. ಹಾಗಾಗಿ ನಮ್ಮ FACE ಬದಲಾಗುತ್ತೆ ಅಷ್ಟೇ. ಅದಕ್ಕೆ ತಕ್ಕಂತೆ ನಾವು ಸಂದರ್ಶನಗಳಲ್ಲಿ ಮಾತಾಡೋದು.

ಹೋಗ್ಲಿ, ನನಗೆ ಮಾತ್ರ ಬರೀ ಕಾಲ್ಪನಿಕ ಸಂದರ್ಶನ ಕೊಡ್ತೀರಾ, ಮೊನ್ನೆ ಯಾವ್ದೋ ಟಿವಿ ಚಾನೆಲ್ ಗೆ ನಿಜವಾದ ಸಂದರ್ಶನ ಕೊಟ್ರಿ. ಇದು ಮೋಸ ಅಲ್ವಾ?
-ನೋಡಪ್ಪಾ ಆ ಸಂದರ್ಶನದ ಸ್ಕ್ರಿ ಕೇಳಿದ್ ತಕ್ಷಣ ನಂಗ್ ಫುಲ್ ಖುಷಿ ಆಯ್ತು. ಅದಕ್ಕೇ ಒಪ್ಕೊಂಡ್ಬಿಟ್ಟೆ, ಆಗ್ಲೇ ಡಿಸೈಡ್ ಮಾಡಿದೆ, ನಾನ್ ಆ ಸಂದರ್ಶನ ಕೊಟ್ಟೇ ಕೊಡ್ತೀನಿ ಅಂತ

ಓಹೋ, ಹಂಗೆ,…ಅಂದಂಗೆ, ನಿಮ್ಮ ಅಬ್ ಕೀ ಬಾರ್ ೪೦೦ ಪಾರ್ ಅನ್ನೋ ಸ್ಲೋಗನ್ ಕೇಳಿ ವಿರೋಧ ಪಕ್ಷಗಳೆ ಹೆದರಿಕೊಂಡು ಬಿಟ್ಟಿದ್ದಾ ವಂತೆ?

-ವಿರೋಧ ಪಕ್ಷಗಳು ಹೆದರಿದ್ದಾವೋ ಇಲ್ವೋ ಗೊತ್ತಿಲ್ಲ ಆದ್ರೆ ೪೦೦ ಪಾರ್ ಅನ್ನೋ ಮಾತು ಕೇಳಿ ಬ್ರಿಯಾನ್ ಲಾರಾ ಮಾತ್ರ ಗಾಬರಿ ಆಗಿದ್ದಾರಂತೆ.

(ಕಾಲ್ಪನಿಕ ಸಂದರ್ಶನ)

ಖೇಮು ಬೆಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಹಾಸ್ಟೆಲ್ ಸರಿ ಇಲ್ಲ ಅಂತ ಕಾರಣ ಹೇಳಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ. ಒಮ್ಮೆ ಖೇಮುನ ಅಮ್ಮ ತನ್ನ ಮಗನನ್ನು ನೋಡಲು ಒಂದು ಭಾನುವಾರ ಬೆಂಗಳೂರಿಗೆ ಬಂದಳು. ಆದರೆ ಬರೋಕೆ ಮುಂಚೆ ಅವಳು ಖೇಮುಗೆ ಹೇಳಿರಲಿಲ್ಲ. ಹಾಗಾಗಿ ಖೇಮುಗೆ ಶಾಕ್ ಕಾದಿತ್ತು. ಯಾಕಂದ್ರೆ ಆ ಮನೆಯಲ್ಲಿ ಖೇಮು ತನ್ನ ಗರ್ಲ್ -ಂಡ್ ಜೊತೆ ಲಿವಿಂಗ್ ಟುಗೆರ್ದ ನಲ್ಲಿ ಇದ್ದ. ಅಮ್ಮ ಬಂದ ಕೂಡಲೇ ತನ್ನ ಬಂಡವಾಳ ಬಯಲಾಗುತ್ತೆ ಅಂಥ ಭಯವಾಯಿತು. ಆದರೆ ಇಬ್ಬರನ್ನೂ ಒಟ್ಟಿಗೇ ನೋಡಿದ ಅಮ್ಮನಿಗೆ ಇವರ ಮಧ್ಯೆ ಸಂಬಂಧ ಇದೆ ಅಂತ ಅನುಮಾನ ಬಂತು. ಆದರೆ ಏನೂ ಕೇಳಲಿಲ್ಲ.

ಖೇಮು ತಾನಾಗಿಯೇ, ಇದು ಪಿಜಿ, ಒಬ್ಬನಿಗೇ ಆದರೆ ತುಂಬಾ ದುಬಾರಿ ಆಗುತ್ತೆ. ಅವಳು ತನ್ನ ಕೊಲೀಗ. ಹಾಗಾಗಿ ಬಾಡಿಗೆ ರ್ಶೇ ಆಗುತ್ತೆ ಅಂತ ಅವಳು ಇದೇ ಮನೆಯಲ್ಲಿ ಇರ್ತಾಳೆ, ಆದರೆ, ಅವಳಿಗೆ ಅಂತ ಸೆಪರೇಟ್ ರೂಮಿದೆ ಅಂತ ಬೊಗಳೆ ಬಿಟ್ಟ. ಸರಿ ಅಮ್ಮ ಏನೂ ಮಾತಾಡಲಿಲ್ಲ. ಅಂದು ಅ ಇದ್ದು ಮರುದಿನ ಊರಿಗೆ ಹೊರಟಳು ಅಮ್ಮ. ಅದಾದ ನಂತರ ಖೇಮುನ ಗರ್ಲ್ ಫ್ರೆಂಡ್ ಬಂದು ಖೇಮು ಹತ್ರ ಹೇಳಿದಳು. ನೋಡು ಖೇಮು, ನಿಮ್ಮಮ್ಮನ ಮೇಲೆ ನಾನು ಆಪಾದನೆ ಹೊರಿಸ್ತಾ ಇಲ್ಲ, ಆದರೆ ಅವರು ಬಂದು ಹೋದ ಮೇಲೆ ಮನೆಯಲ್ಲಿದ್ದ ಬೆಳ್ಳಿ ತಟ್ಟೆ ಕಾಣಿಸ್ತಾ ಇಲ್ಲ ಅಂತ ಹೇಳಿದಳು. ಅದಕ್ಕೆ ಅಮ್ಮನ್ನು ಡೈರೆಕ್ಟಾಗಿ ಹಂಗೆ ಕೇಳೋದು ಅಂತ ಸಂಕೋಚ ಮಾಡಿಕೊಂಡ ಖೇಮು ಅಮ್ಮನಿಗೆ ಒಂದು ಮೆಸೇಜ್ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು.

ಅಮ್ಮ, ನಾನು ನಿನ್ನನ್ನು ನಂಬುತ್ತೇನೆ. ನಿನ್ನ ಮೇಲೆ ಅನುಮಾನ ಅಂತಲ್ಲ, ಆದರೆ ನೀನು ಬಂದು ಹೋದ ಮೇಲೆ ಮನೆಯಲ್ಲಿದ್ದ ಬೆಳ್ಳಿ ತಟ್ಟೆ ಕಾಣಿಸ್ತಾ ಇಲ್ಲ ಅಂತಷ್ಟೇ ಹೇಳೋಕೆ ಇಷ್ಟಪಡ್ತೀನಿ. ಐದು ನಿಮಿಷ ಬಿಟ್ಟು ಅಮ್ಮನಿಂದ ರಿಪ್ಲೈ ಬಂತು. ನಾನೂ ನಿನ್ನನ್ನು ನಂಬುತ್ತೇನೆ. ನಿನ್ನ ಮೇಲೆ ಅನುಮಾನ ಅಂತಲ್ಲ. ನಿಮ್ಮಿಬ್ಬರ ಮಧ್ಯೆ ಸಂಬಂಧ ಇದೆ ಅಂತಲೂ ಅಲ್ಲ. ಆದರೆ, ಅವಳು ತನ್ನ ರೂಮಿನ ಮಲಗೋದಾಗಿದ್ರೆ ಅವಳ ಹಾಸಿಗೆಯ ದಿಂಬಿನ ಕೆಳಗೆ ಬೆಳ್ಳಿ ತಟ್ಟೆ ಇಟ್ಟಿರೋದು ಕಾಣಿಸ್ತಾ ಇತ್ತು ಅಂತಷ್ಟೇ ಹೇಳೋಕೆ ಇಷ್ಟಪಡ್ತೀನಿ.

ಲೈನ್ ಮ್ಯಾನ್

‘ಅಬ್ ಕೀ ಬಾರ್, ೪೦೦ ಪಾರ್’
ಮೊನ್ನೆ ಮೋದಿ ಚುನಾವಣೆ ಪ್ರಚಾರಕ್ಕಾಗಿ ಅಡಿಗೆ ಮಾಡಿ ಜನಸಾಮಾನ್ಯನಿಗೆ ಬಡಿಸಿದ್ದು ಯಾಕೆ?

-ನಂಗೆ ಬರೀ ‘ಪಾಕ್’ ಶಾಸ್ತ್ರ ಅಷ್ಟೇ ಅಲ್ಲ, ಪಾಕ ಶಾಸನೂ ಬರುತ್ತೆ ಅಂತ ಹೇಳೋಕೆ

ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಆತ್ಮ ವಿಶ್ವಾಸ

-ಎಲೆಕ್ಷನ್ ದಿನಾನೂ ಕೈಗೆ ಮಸಿ, ರಿಸಲ್ಟ ದಿನಾನೂ ಕೈ’ಗೆ ಮಸಿ

ಕ್ರಿಕೆಟ್ ಅಭಿಮಾನಿಗಳ ಮಾತು
-ಜೀವನದ ಸಣ್ಣ ಸಣ್ಣ ಖುಷಿಗಳಲ್ಲಿ ‘ಇವತ್ತು ಕ್ರಿಕೆಟ್ ಮ್ಯಾಚಿದೆ’ ಅನ್ನೋದೂ ಒಂದು.

ಐಪಿಎಲ್ ಮ್ಯಾಚ್ ನಡೀವಾಗ
-ಲೈವ್ ಮ್ಯಾಚ್ ನಡೀತಾ ಇದ್ರೂ ‘ರೆಕಾರ್ಡ್’ಗಳದ್ದೇ ಪಾರುಪತ್ಯ ಮೊಬೈಲ್ ವಿಷ್ಯ

-ಕೆಲವ್ರು ಫೋನ್ ನಲ್ಲಿ ಮಾತಾಡೋದು ‘ಅವಶ್ಯಕತೆ’ಗೋಸ್ಕರ,

-ಇನ್ನು ಕೆಲವ್ರು, ‘ಕತೆ’ ಹೊಡೆಯೋಕೋಸ್ಕರ

ಮೊದಲಿನ ಯುವಜನ

ನೀವ್ ಯಾವ್ ಕಡೆ? ಬಯಲ್ ಸೀಮೆ ಈಗಿನ ಯುವಜನ

ನೀವ್ ಯಾವ್ ಕಡೆ? ಮೊಬೈಲ್ ಸೀಮೆ

ಹುಡುಗೀರಿಗೆ ಲೈನ್ ಹೊಡೆಯೋಕಂತ ಸಂಜೆ ಹೊತ್ತು ವಾಕ್ ಹೋಗೋದು

‘Eve’ning walk

ಜೈಲಿನಲ್ಲಿ ಖೈದಿಗಳಿಗೆ ಅಡಿಗೆ ಮಾಡೋ ಕೆಲಸ ಕೊಟ್ರೆ ಅದು

ಮಾಡಿದ್ದುಣ್ಣೋ ಮಹರಾಯ

ಕಾಫಿ ಕಲಟ್ ಟೀಶರ್ಟ್‌ನ ಏನಂತಾರೆ ?

ಯಾವುದೇ ಕಲರ್ ಇರ್ಲಿ, ಟೀ ಶರ್ಟೇ ಅಂತಾರೆ.

ಕೀಟನಾಶಕ ಮಾರುವವನು
-ಹುಳು ಮಾನ