ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಟೈಮ್ ಮ್ಯಾಗಜಿನ್‌ ಮುಖಪುಟ

ಜಗತ್ತಿನಲ್ಲಿ ಯಾವುದಾದರೂ ಒಂದು ಮ್ಯಾಗಜಿನ್‌ನ ಮುಖಪುಟ ಅತಿ ಹೆಚ್ಚು ಜನರನ್ನು ಆಕರ್ಷಿಸಿ ದ್ದರೆ, ಅದು ನಗ್ನಚಿತ್ರಗಳುಳ್ಳ ‘ಪ್ಲೇ ಬಾಯ್’ ಪತ್ರಿಕೆಯದ್ದು ಎಂದು ಅನೇಕರು ಭಾವಿಸಿರಬಹುದು. ಆದರೆ‌ ನಿಜಕ್ಕೂ ಈ ವಿಷಯದಲ್ಲಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ‘ಟೈಮ್’ ಮ್ಯಾಗಜಿನ್ ಅಂದ್ರೆ ಆಶ್ಚರ್ಯವಾಗಬಹುದು. ‘ಟೈಮ್’ ಮ್ಯಾಗಜಿನ್‌ನ‌ ಮೊದಲ ಸಂಚಿಕೆ ಬಂದಿದ್ದು 1923ರ ಮಾರ್ಚ್ 3 ರಂದು

ಟೈಮ್ ಮ್ಯಾಗಜಿನ್‌ ಮುಖಪುಟ

ಸಂಪಾದಕರ ಸದ್ಯಶೋಧನೆ

ಜಗತ್ತಿನಲ್ಲಿ ಯಾವುದಾದರೂ ಒಂದು ಮ್ಯಾಗಜಿನ್‌ನ ಮುಖಪುಟ ಅತಿ ಹೆಚ್ಚು ಜನರನ್ನು ಆಕರ್ಷಿಸಿ ದ್ದರೆ, ಅದು ನಗ್ನಚಿತ್ರಗಳುಳ್ಳ ‘ಪ್ಲೇ ಬಾಯ್’ ಪತ್ರಿಕೆಯದ್ದು ಎಂದು ಅನೇಕರು ಭಾವಿಸಿರಬಹುದು. ಆದರೆ‌ ನಿಜಕ್ಕೂ ಈ ವಿಷಯದಲ್ಲಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ‘ಟೈಮ್’ ಮ್ಯಾಗಜಿನ್ ಅಂದ್ರೆ ಆಶ್ಚರ್ಯವಾಗಬಹುದು. ‘ಟೈಮ್’ ಮ್ಯಾಗಜಿನ್‌ನ‌ ಮೊದಲ ಸಂಚಿಕೆ ಬಂದಿದ್ದು 1923ರ ಮಾರ್ಚ್ 3 ರಂದು. ತರುವಾಯದ‌ ಇಷ್ಟೂ ವರ್ಷಗಳಲ್ಲಿ ‘ಟೈಮ್’ ಮುಖಪುಟದ ವೈಶಿಷ್ಟ್ಯ ಅಂದ್ರೆ ಮುಖಪುಟದ ಕೆಂಪು ಚೌಕಟ್ಟು. ಈ ಚೌಕಟ್ಟು ಇಲ್ಲದೇ ಆ ಪತ್ರಿಕೆಯ ಮುಖಪುಟವನ್ನು ಊಹಿಸಿ ಕೊಳ್ಳುವುದೂ ಕಷ್ಟ. ಟೈಮ್ ಮ್ಯಾಗಜಿನ್‌ನ ಯಾವುದೇ ಮುಖಪುಟಕ್ಕೆ ಒಂದು ಉತ್ತಮ ‘ಆರ್ಟ್’ಗೆ ಇರುವ ಬೆಲೆಯಿದೆ.

ಅದನ್ನು ಸಂಗ್ರಹಿಸುವುದು ಅತ್ಯುತ್ತಮ ಹವ್ಯಾಸಗಳಂದು ಎಂಬ ಅಭಿಪ್ರಾಯವೂ ಇದೆ. ಮೂರು-ನಾಲ್ಕು ತಲೆಮಾರುಗಳಿಂದ ‘ಟೈಮ’ ಮ್ಯಾಗಜಿನ್‌ಗಳನ್ನು ಸಂಗ್ರಹಿಸಿದ ಅವೆಷ್ಟೋ ಓದುಗರಿದ್ದಾರೆ. ‘ಟೈಮ್’ ಮ್ಯಾಗಜಿನ್ 16 ಲಕ್ಷ ಪ್ರತಿಗಳನ್ನು ಪ್ರಕಟಿಸಿದರೆ, ಆ ಪೈಕಿ ಕನಿಷ್ಠ ಒಂದು ಲಕ್ಷ ಪ್ರತಿಗಳನ್ನು ಮಾರಾಟ ಮಾಡದೇ ಕಾದಿಡುತ್ತದೆ.

ಇದನ್ನೂ ಓದಿ: Vishweshwar Bhat Column: ಜಪಾನಿಯರ ಹೆಸರುಗಳು

ಅದಕ್ಕೆ ಮುಂದಿನ ನೂರು ವರ್ಷಗಳವರೆಗೂ ಬೇಡಿಕೆ ಇರುತ್ತದೆ. ಒಂದಿಂದು ಕಾರಣದಿಂದ ಪ್ರತಿ ಸಂಚಿಕೆಯೂ ‘ಸಂಗ್ರಹಯೋಗ್ಯ’. ‘ಟೈಮ್’ ಮ್ಯಾಗಜಿನ್ ಮುಖಪುಟದ ಬಗ್ಗೆ ಅನೇಕ ಪುಸ್ತಕಗಳೂ ಪ್ರಕಟವಾಗಿವೆ. ಆ ಪೈಕಿ ನನಗೆ ನೆನಪಿರುವ ಉತ್ತಮ ಕೃತಿ ಅಂದ್ರೆ Inside The Red Border: A history of our world, told through the pages of TIME Magazine. ಈ ಕೃತಿಯನ್ನು ಓದಿದರೆ ಪ್ರತಿ ಮುಖ ಪುಟಕ್ಕೂ ಒಂದು ಐತಿಹಾಸಿಕ ಮಹತ್ವವಿದೆಯೇನೋ ಎಂಬ ಭಾವನೆ ಮೂಡಿಸುವ ಪ್ರಯತ್ನ ಎದ್ದು ಕಾಣುತ್ತದೆ.

ಒಟ್ಟಾರೆಯಾಗಿ ‘ಟೈಮ್’ ಮ್ಯಾಗಜಿನ್‌ನ ಮುಖಪುಟಗಳಿಗೆ ಎಲ್ಲಿಲ್ಲದ ಪ್ರಾಮುಖ್ಯ. ಅಮೆರಿಕದ ಪ್ರಸಿದ್ಧ ನ್ಯಾಷನಲ್ ಪೋರ್ಟ್ರೈಟ್ ಗ್ಯಾಲರಿಯಂದೇ ‘ಟೈಮ್’‌ ಮ್ಯಾಗಜಿನ್‌ನ ಎರಡು ಸಾವಿರಕ್ಕೂ ಅಧಿಕ ಮುಖಪುಟಗಳು ಪ್ರದರ್ಶನಕ್ಕಿವೆ.‌ ಅಲ್ಲಿನ ಪ್ರತಿ ಮುಖಪುಟವೂ ಬೆಲೆ ಕಟ್ಟಲಾಗದಷ್ಟು ಅಮೂಲ್ಯ. ಇಲ್ಲಿ ತನಕ ಪ್ರಕಟವಾದ ಸಾವಿರಾರು ಮುಖಪುಟಗಳ ಪೈಕಿ ಪ್ರತಿಯೊಂದೂ ಒಂದಿಂ ದು ಕಾರಣಕ್ಕೆ ಮಹತ್ವದ್ದೆನಿಸಿದೆ. ಅಮೆರಿಕದ ಅಧ್ಯಕ್ಷರಾಗಿದ್ದ ದಿವಂಗತ ರಿಚರ್ಡ್ ನಿಕ್ಸನ್‌ಗೂ, ‘ಟೈಮ್’ ಮ್ಯಾಗಜಿನ್‌ಗೂ ಅದ್ಯಾವ ಅವಿನಾಭಾವ ಸಂಬಂಧವೋ? ಕಾರಣ ನಿಕ್ಸನ್ ಅವರಷ್ಟು ‘ಟೈಮ್’ ಮುಖಪುಟದಲ್ಲಿ‌ ಯಾರೂ ಕಾಣಿಸಿಕೊಂಡಿಲ್ಲ.

ಅವರು 55 ಸಲ ಮುಖಪುಟಕ್ಕೆ ವಸ್ತುವಾಗಿದ್ದರು. ಮಹಿಳೆಯರ ಪೈಕಿ, ಅತಿ ಹೆಚ್ಚು ಕಾಣಿಸಿಕೊಂಡವ ರೆಂದರೆ ಹಿಲರಿ ಕ್ಲಿಂಟನ್. 2013ರವರೆಗೆ ಅವರು 19 ಸಲ ಮುಖಪುಟಕ್ಕೇರಿದ್ದರು. ಕಳೆದ ಇಷ್ಟೂ ವರ್ಷಗಳಲ್ಲಿ ಅತಿ ಹೆಚ್ಚು ಮಾರಾಟವಾದ ಸಂಚಿಕೆಯೆಂದರೆ 2001ರ ಸೆಪ್ಟೆಂಬರ್ 14ರಂದು ಪ್ರಕಟ ವಾಗಿದ್ದು.

ಭಯೋತ್ಪಾದಕ ದಾಳಿಗೆ ನ್ಯೂಯಾರ್ಕಿನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡ ಧ್ವಂಸವಾದ ಚಿತ್ರವುಳ್ಳ ಸಂಚಿಕೆಯದು. ಇಡೀ ಮುಖಪುಟದಲ್ಲಿ ಅವಳಿ ಕಟ್ಟಡಗಳಿಂದ ಬೆಂಕಿಯ ಉಂಡೆ ಸಿಡಿ ಯುತ್ತಿರುವ ಚಿತ್ರ. ಯಾವುದೇ ಹೆಡ್‌ಲೈನ್ ಇಲ್ಲ. ಸಣ್ಣ ಅಕ್ಷರಗಳಲ್ಲಿ ‘ಸೆಪ್ಟೆಂಬರ್ 11, 2001’ ಎಂದಷ್ಟೇ ಮುದ್ರಿತವಾಗಿತ್ತು. ಅದೊಂದೇ ಸಂಚಿಕೆಯ 34 ಲಕ್ಷ ಪ್ರತಿಗಳು ಮಾರಾಟವಾಗಿದ್ದವು!

ಮುಖಪುಟದಲ್ಲಿ ‘ಟೈಮ್’ ಮ್ಯಾಗಜಿನ್ ಮಾಡದ ಪ್ರಯೋಗಗಳಿಲ್ಲ. 1966ರ ಏಪ್ರಿಲ್ 8ರ ಸಂಚಿಕೆ ಯಲ್ಲಿ ಮೊದಲ ಬಾರಿಗೆ ಇಡೀ ಮುಖಪುಟದಲ್ಲಿ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಬರೀ ಮೂರು (Is God Dead ?) ಪದಗಳನ್ನಷ್ಟೇ ಪ್ರಕಟಿಸಿತ್ತು. ಮುಖಪುಟಕ್ಕೆ ಯಾವತ್ತೂ ಕೆಂಪು ಚೌಕಟ್ಟೇ ಏಕೆ? ಇದಕ್ಕೆ ಹಿಂದೊಮ್ಮೆ ಮ್ಯಾಗಜಿನ್ ನೀಡಿದ ಕಾರಣ- ‘ಸುಂದರವಾದ ಯುವತಿ, ಪುಟಾಣಿ ಮಕ್ಕಳು ಅಥವಾ ಕೆಂಪು ಮತ್ತು ಹಳದಿ ಬಣ್ಣಗಳು ಎಲ್ಲಿದ್ದರೂ ಗಮನ ಸೆಳೆಯುತ್ತವೆ. ನಾವು ಕೆಂಪು ಬಣ್ಣದ ಚೌಕಟ್ಟನ್ನು ಆಯ್ದುಕೊಂಡೆವು’.