ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seetha Rama Serial: ಸಿಹಿ ಫೋಟೋ ಹಿಡಿದುಕೊಂಡು ಮನೆಬಿಟ್ಟು ಹೋದ ಸೀತಾ

Seetha Rama Kannada Serial: ರಾಮ್ ಎಷ್ಟೇ ಸಮಾಧಾನ ಮಾಡಲು ಪ್ರಯತ್ನಿಸಿದರೂ ಈ ಸತ್ಯವನ್ನು ಅರಗಿಸಿಕೊಳ್ಳಲು ಸೀತಾಗೆ ಆಗುತ್ತಿಲ್ಲ. ಇದಕ್ಕಾಗಿ ಸೀತಾ ಸಿಹಿಯ ಫೋಟೋ ಹಿಡಿದುಕೊಂಡು ಅಳುತ್ತ ಮನೆಬಿಟ್ಟು ಹೋಗಿದ್ದಾಳೆ. ರಾಮ್ ಎಲ್ಲೆಡೆ ಸೀತಾಳನ್ನು ಹುಡುಕಿದ್ದಾನೆ.

ಸಿಹಿ ಫೋಟೋ ಹಿಡಿದುಕೊಂಡು ಮನೆಬಿಟ್ಟು ಹೋದ ಸೀತಾ

Seetha rama Serial

Profile Vinay Bhat May 22, 2025 7:19 AM

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಅಂತಿಮ ಹಂತಕ್ಕೆ ಬಂದಿರುವಂತೆ ಕಾಣುತ್ತಿದೆ. ಎಲ್ಲರಿಗೂ ಒಂದೊಂದೆ ಸತ್ಯ ಗೊತ್ತಾಗುತ್ತಿದ್ದು, ಧಾರಾವಾಹಿ ಮುಕ್ತಾಯದ ಸೂಚನೆ ನೀಡುತ್ತಿದೆ. ಕಥಾ ನಾಯಕಿ ಸೀತಾಗೆ ಇಷ್ಟುದಿನ ಮುಚ್ಚಿಟ್ಟಿದ್ದ ಬಹುದೊಡ್ಡ ಸತ್ಯ ಗೊತ್ತಾಗಿ ಹೋಗಿದೆ. ಇಷ್ಟುದಿನ ತನ್ನ ಜೊತೆ ಇದ್ದಿದ್ದು ನನ್ನ ಮಗಳು ಸಿಹಿ ಅಲ್ಲ.. ಆಕೆ ಮಗಳಂತೆ ಕಾಣುವ ಸುಬ್ಬಿ ಎಂಬುದು ತಿಳಿದಾಗಿದೆ. ಇನ್ನೇನು ಕೆಲವೇ ಎಪಿಸೋಡ್​ನಲ್ಲಿ ಇದೆಲ್ಲ ಭಾರ್ಗವಿಯ ಕೃತ್ಯ ಎಂಬುದು ಗೊತ್ತಾಗಬೇಕಿದೆಯಷ್ಟೆ. ಸದ್ಯ ಸೀತಾಗೆ ಸತ್ಯದ ಅರಿವಾಗಿ ಮನೆಬಿಟ್ಟು ಹೋಗಿದ್ದಾಳೆ.

ಸಿಹಿ ಸತ್ತು ಹೋಗಿದ್ದಾಳೆ ಹಾಗೂ ಇಲ್ಲಿರುವುದು ಸುಬ್ಬಿ ಎಂಬುದು ಸೀತಾಳಿಗೆ ಬಿಟ್ಟು ಮತ್ತೆಲ್ಲರಿಗೂ ತಿಳಿದಿತ್ತು. ಸೀತಾಳಿಂದ ಈ ರಹಸ್ಯವನ್ನು ಮರೆಮಾಚಲು ರಾಮ್ ಎಲ್ಲಿಲ್ಲದ ಪ್ರಯತ್ನ ಮಾಡಿದ್ದ. ಆದರೆ, ಈ ಒಂದು ಸತ್ಯ ಸೀತಾಗೆ ಗೊತ್ತಾಗಿದೆ. ಸೀತಾ ನೇರವಾಗಿ ಸುಬ್ಬಿ ಬಳಿ, ಯಾರು ನೀನು ನನ್ನ ಮಗಳು ಅಂತ ಹೇಳಿಕೊಂಡು ಯಾಕೆ ಇಲ್ಲಿ ಬಂದಿದ್ದೀಯಾ? ಎಂದು ಪ್ರಶ್ನಿಸಿದ್ದಾಳೆ. ಆಗ ಸುಬ್ಬಿ, ನಾನು ಸಿಹಿ ಸೀತಮ್ಮ.. ನಿನ್ನ ಮಗಳು ಸಿಹಿ ಎಂದು ಎರಡು ಮೂರು ಬಾರಿ ಹೇಳಿದ್ದಾಳೆ. ಆದರೆ, ಇದನ್ನ ಒಪ್ಪದ ಸೀತಾ, ನನ್ನ ಹತ್ರ ಸುಳ್ಳು ಹೇಳಬೇಡ, ನನ್ಗೆ ಎಲ್ಲ ಸತ್ಯ ಗೊತ್ತಾಗಿದೆ.. ನೀನು ಯಾರು?, ನೀನು ನನ್ನ ಮಗಳು ಸಿಹಿ ಅಲ್ಲ ಅಂದಮೇಲೆ ನೀನು ಯಾರು ಹೇಳು ಎಂದು ಗದರಿದ್ದಾಳೆ.

ಆಗ ಸುಬ್ಬಿ, ಹೌದು ನಾನು ಸಿಹಿ ಅಲ್ಲ.. ಎಂಬ ಸತ್ಯವನ್ನು ತೆರೆದಿಟ್ಟಿದ್ದಾಳೆ. ಈ ವಿಚಾರವಾಗಿ ರಾಮ್ ಎಷ್ಟೇ ಸಮಾಧಾನ ಮಾಡಲು ಪ್ರಯತ್ನಿಸಿದರೂ ಈ ಸತ್ಯವನ್ನು ಅರಗಿಸಿಕೊಳ್ಳಲು ಸೀತಾಗೆ ಆಗುತ್ತಿಲ್ಲ. ಇದಕ್ಕಾಗಿ ಸೀತಾ ಸಿಹಿಯ ಫೋಟೋ ಹಿಡಿದುಕೊಂಡು ಅಳುತ್ತ ಮನೆಬಿಟ್ಟು ಹೋಗಿದ್ದಾಳೆ. ರಾಮ್ ಎಲ್ಲೆಡೆ ಸೀತಾಳನ್ನು ಹುಡುಕಿದ್ದಾನೆ. ಬಳಿಕ ಎಲ್ಲಾದರು ಸೀತಾ ಮೊದಲಿದ್ದ ಮನೆಗೆ ತೆರಳಿರಬಹುದು ಎಂಬ ಅನುಮಾನ ಮೂಡಿ ಅಲ್ಲಿದ್ದ ಅಜ್ಜನಿಗೆ ಕಾಲ್ ಮಾಡಿದ್ದಾನೆ.



ಆಗ ಅಜ್ಜ ಸೀತಾ ಇಲ್ಲಿ ಬಂದಿದ್ದಾಳೆ ಆದ್ರೆ ನಮ್ಮ ಮನೆಯಲ್ಲಿಲ್ಲ.. ಅವಳ ಮನೆಗೆ ಹೋಗಿ ಬಾಗಿಲು ಹಾಕೊಂಡು ಕೂತಿದ್ದಾಳೆ.. ಡೋರ್ ತೆಗಿತಿಲ್ಲ ಎಂದಿದ್ದಾರೆ. ರಾಮ್ ತಕ್ಷಣ ಅಲ್ಲಿಗೆ ಹೊರಟಿದ್ದಾನೆ. ಅತ್ತ ಸೀತಾ ಕತ್ತಲೆ ರೂಮ್​ನಲ್ಲಿ ಸಿಹಿಯ ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾಳೆ. ಸಿಹಿ ಯಾಕೇ ಹೀಗೆ ಮಾಡ್ದೆ.. ನನ್ನನ್ನ ಬಿಟ್ಟು ಯಾಕೆ ಹೋದೆ.. ಪ್ಲೀಸ್ ವಾಪಾಸ್ ಬಾ.. ಎಂದು ಅತ್ತಿದ್ದಾಳೆ ಸೀತಾ. ಸದ್ಯ ಕೊನೆಯ ಹಂತಕ್ಕೆ ತಲುಪಿರುವ ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿಯ ಆಟ ಹೇಗೆ ಬಯಲಾಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.

Aishwarya Shindogi: ಐಶ್ವರ್ಯಾ ಸಿಂಧೋಗಿ ಖರೀದಿಸಿದ ಹೊಸ ಕಾರು ಹೇಗಿದೆ?: ಇದರ ಬೆಲೆ ಎಷ್ಟು ಗೊತ್ತೇ?