Monday, 16th September 2024

ಅಪೂರ್ಣತೆಯು ನಮ್ಮದೇ, ಅದನ್ನು ಒಪ್ಪಿಕೊಂಡು ಮುನ್ನಡೆಯೋಣ

ಶ್ವೇತಪತ್ರ

shwethabc@gmail.com

ಖುಷಿಯಾಗಿರುವುದು ಎಂದರೆ ಬದುಕಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದಲ್ಲ ಅಪರಿಪೂರ್ಣತೆಯ ನಡುವೆಯೂ ಬದುಕಿನ ಖುಷಿ ನಮ್ಮ ಆಯ್ಕೆಯಾಗಬೇಕು -ಸ್ಟೀವ್ ಮಾರ್ ಬೋಲಿ

ಖುಷಿ ಚಿಗುರೊಡೆಯುವುದೇ ಅಪರಿಪೂರ್ಣ ಕ್ಷಣಗಳಲ್ಲಿ. ಖುಷಿಯಾಗಿ ಇದ್ದು ಬಿಡುವುದಷ್ಟೇ ಎಂತಹ ಸಂದಿಗ್ಧ ಪರಿಸ್ಥಿತಿಗಳನ್ನು ನಾವು ಕಂಡುಕೊಳ್ಳ ಬಹುದಾದ ಉತ್ತಮ ಬದುಕಿನ ಡಿಫನಿಶನ್. ಎಲ್ಲರಿಗಿಂತ ನಾವು ಬೆ ಆಗಿ ಇರಬೇಕು ಅನ್ನೋದು ನಮ್ಮ ನಮ್ಮ ಬದುಕುಗಳಲ್ಲಿ ನಾವುಗಳು ಮುಖ್ಯ ವಾಗಿಸಿಕೊಂಡಿರುವ ಗುರಿ. ನಾವುಗಳು ಖುಷಿಯಾಗಿ ರುವುದಕ್ಕೆ ನಮಗೆಲ್ಲ ಪರ್ಫೆಕ್ಟ್ ಆಗಿರುವ ಮನೆ ಬೇಕು, ಸಂಸಾರ ಬೇಕು, ಸಂಗಾತಿ ಬೇಕು, ಕೆಲಸ ಬೇಕು ಹೀಗೆ ನಮ್ಮ ಬೇಕುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ನೆನಪಿರಲಿ ಖುಷಿಯೆನ್ನು ವುದು ರೆಡಿಮೇಡ್ ಆಗಿ ಸಿಗುವುದಲ್ಲ ಅದು ಟೈಲರ್ ಒಬ್ಬ ಹೊಲಿದ ಬಟ್ಟೆಯ ಹಾಗೆ ಇ ಲೂಸ್ ಆಗಿರುತ್ತದೆ ಇಲ್ಲ ಟೈಟ್ ಆಗಿರುತ್ತದೆ.

ಲೂಸ್ ಇದ್ದರೆ ಟೈಟ್ ಮಾಡಿಕೊಳ್ಳುತ್ತ ಟೈಟ್ ಇದ್ದರೆ ಲೂಸ್ ಮಾಡಿಕೊಳ್ಳುತ್ತ Perfectly imperfect life ಜೊತೆ ಒಡನಾಡಬೇಕು. ನಮ್ಮ ಮೇಲೆ ನಾವೇ ಬೆಳೆಸಿಕೊಳ್ಳುವ ನಿರೀಕ್ಷೆಗಳು, ಯಶಸ್ಸು ಮತ್ತು ಸಂತೋಷಗಳ ನಡುವೆ ನಾವು ನಡೆಸುವ ಹುಡುಕಾಟಗಳು, ನಮ್ಮ ಆರೋಗ್ಯ,
ನಮ್ಮ ಬ್ಯಾಂಕ್ ಬ್ಯಾಲೆ, ನಮ್ಮದೇ ದೇಹದ ತೂಕ ಹೀಗೆ ಬೇರೆಯವರ ಬದುಕಿನ ಜೊತೆ ನಾವು ಮಾಡುವ ಕಂಪ್ಯಾರಿಶನ್ ಗಳು ಸದ್ದಿಲ್ಲದೆ ನಮ್ಮೊಳಗೊಂದು ಅಪೂರ್ಣ ಭಾವವನ್ನು ಮೂಡಿಸುತ್ತ ಹೋಗುತ್ತವೆ. ಚೆಂದ ಎನಿಸುವ ಬೇರೆಯವರ ಬದುಕು ನಮಗೆ ಕಾಣುವುದು ಹತ್ತು ಪರ್ಸೆಂಟ್ ಅಷ್ಟೇ ಮಿಕ್ಕಂತೆ ಅವರೂ ಅಪರಿಪೂರ್ಣರೇ.

ಇಲ್ಲಿ ನಾವು ಮನಗಾಣಬೇಕಿರು ವುದು ನಿನ್ನೆಗಿಂತ ಇಂದು ನಾವೆಷ್ಟು ಬೆಟರ್ ಆಗಿ ಬದುಕಿದ್ದೀವಿ ಹೀಗೆ ಬದುಕಲು ನಮ್ಮ ತಯಾರಿ ಮತ್ತು ಪ್ರಯತ್ನ ಹೇಗಿತ್ತು ಎನ್ನುವುದನ್ನು. ಎಲ್ಲದರಲ್ಲೂ ಪರ್ಫೆಕ್ಟ್ ನೆಸ್ ಹುಡುಕಬೇಕೆಂಬ ನಮ್ಮ ಹಂಬಲವನ್ನು ನಿಧಾನವಾಗಿ ಕಡೆಗಣಿಸುತ್ತಾ ಹೋದಂತೆ ಬದುಕೇ ಪರಿಪೂರ್ಣವಾಗಿ ಬಿಡುತ್ತದೆ. ಈ ನಂಬಿಕೆಯೇ ಬದುಕಿನ ಸಂತೋಷ, ಖುಷಿ ಬೇರೆನಿಲ್ಲ. ನೆನಪಿರಲಿ ನಮಗೆ ನಮ್ಮದೇ ಆದ ಎರಡು ಪ್ರಪಂಚಗಳಿವೆ
ಎಲ್ಲರೊಟ್ಟಿಗೆ ಬದುಕುವ ಸಾಮಾಜಿಕ ಪ್ರಪಂಚ ಒಂದಾದರೆ, ನಮ್ಮೊಳಗಿನ ಮಾನಸಿಕ ಪ್ರಪಂಚವೊಂದು. ಖುಷಿ, ಸಂತೋಷಗಳು ನಮ್ಮವಾಗ ಬೇಕಾದರೆ ಈ ಎರಡು ಪ್ರಪಂಚಗಳ ಬಗ್ಗೆ ಪ್ರತಿದಿನದ, ಪ್ರತಿಕ್ಷಣದ ಅರಿವು ನಮ್ಮದಾಗಬೇಕು.

ಸಂತೋಷದ ಸ್ವಾತಂತ್ರ್ಯ ಯಾರಿಗೆ ಬೇಡ, ಎಲ್ಲಾ ಮಾರ್ಗಗಳಿಂದಲೂ ಸದಾ ಸಂತೋಷ ಅಪೇಕ್ಷಿಸುವ ನಾವು ಪ್ರಯತ್ನಿಸಬೇಕಷ್ಟೇ.
ಮೊದಲನೆಯದಾಗಿ, ನಗುತ್ತಲೇ ಸೋಲನ್ನು ಸೋಲಿಸೋಣ ಸೋಲು ನಮ್ಮ ದೃಷ್ಟಿಯಲ್ಲಿ ಸಣ್ಣದಾದ ಒಂದು ಗ್ರಹಿಕೆಯಾಗಬೇಕಷ್ಟೇ. ಆದರೆ ನಾವು ಅದಕ್ಕೆ ಇಲ್ಲದ ಅರ್ಥ ತುಂಬಿ ದೊಡ್ಡದಾಗಿ ಸುತ್ತೇವೆ. ನಮ್ಮೊಳಗಿನ ನಮ್ಮನ್ನು ಸೋಲಿನ ಕುರಿತಾಗಿ ಪ್ರಶ್ನೆ ಮಾಡಿಕೊಂಡಷ್ಟು ಅದರ ನೋವನ್ನು
ಅನುಭವಿಸಬೇಕಾಗುತ್ತದೆ. ಕಳೆದು ಕೊಂಡ, ಸೋತ ಸಂದರ್ಭಗಳನ್ನು ಬಗೆದಷ್ಟೂ ನೋವು ಹೆಚ್ಚಾಗುತ್ತಲೇ ಇರುತ್ತದೆ. ಎತ್ತರದ ದಾರಿಗಳನ್ನು ಪ್ರeಯ ಅರಿವಿಗೆ ತುಂಬುತ್ತಾ ಮುನ್ನಡೆದುಬಿಡಬೇಕು.

ಎರಡನೆಯದಾಗಿ ಅವಶ್ಯಕತೆ ಬಿದ್ದರೆ ಬದುಕನ್ನು ಮತ್ತೆ ಸೊನ್ನೆಯಿಂದ ಶುರುವಿಟ್ಟುಕೊಳ್ಳಬೇಕು. ಬದುಕೆಂಬ ಬದುಕಿನ ಅನೇಕ ನಿರೀಕ್ಷೆಗಳಿಗೆ, ಷರತ್ತುಗಳಿಗೆ ನಾವು ಬದ್ಧರಾಗಿ ಬಿಟ್ಟಿರುತ್ತೇವೆ (ಕಂಡಿಷನ್ಡ್). ಈ ಕಂಡಿಶ ಮನಸ್ಥಿತಿಗಳಾಚೆ ಬದುಕಬೇಕೆಂಬ ಹಂಬಲ ನಮ್ಮದಾಗಬೇಕು, ಬದುಕಿನ ಹೊಸ ಪಯಣವ ಜೊತೆಯಾಗಿಸುತ್ತ ಹಳೆಯ ಕಲ್ಪನೆಗಳನ್ನು ಹಿಂದೆ ಸರಿಸುತ್ತ ಹೊಸ ಹೆಜ್ಜೆ ಮುಂದಕ್ಕೆ ಇಡೋಣ ಆಗ ಬದುಕು ನಮ್ಮ ಆಯ್ಕೆಯಂತೆ ಹೊಸದಾಗಿ ಕಾಣತೊಡಗುತ್ತದೆ.

ಮೂರನೆಯದು- ನಿಮ್ಮಿಂದ ಆಚೆಗೆ ನೋಡುವುದನ್ನು ನಿಲ್ಲಿಸಿ ನಿಮ್ಮಿಂದ ಆಚೆಗೆ ಏನು ಇಲ್ಲ. ಪ್ರಯತ್ನ, ಆತ್ಮವಿಶ್ವಾಸ ನಾನು ಮಾಡಬ ಎಂಬ ಧೈರ್ಯ ಎಲ್ಲವೂ ನೀವೇ ಎಲ್ಲವೂ ನಿಮ್ಮೊಳಗೆ ನಾವು ಪರಿಪೂರ್ಣರು ಎಂಬ ಅನಿಸಿಕೆ ಮನಸ್ಸಿಗೆ ಮಾಡಿಬಿಟ್ಟರೆ ನಮ್ಮನ್ನು ನಾವು ಒಲಿಸಿಕೊಂಡಂತ ನೆನಪಿರಲಿ!

ನಾಲ್ಕನೆಯದು- ನಿಮ್ಮ ಬದುಕನ್ನು ನೀವು ಉಸಿರಾಡಲು ಬಿಡಿ ಪ್ರತಿಯೊಂದು ಕ್ಷಣಗಳನ್ನು ಕಂಟ್ರೋಲ್ ಮಾಡಿದಷ್ಟು ಬದುಕಿನ ಹಾದಿ ಹಳಿತಪ್ಪುತ್ತದೆ. ಎಚ್ಚರಿಕೆಯ ಪ್ರeಯ ಜೊತೆಗೆ ನಮ್ಮ ಜಂಜಾಟಗಳನ್ನು ನಾವು ಅನುಭವಿಸಲೇಬೇಕು, ಈ ಅನುಭವಗಳು ಮುಂದಿನ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಮಾರ್ಗಸೂಚಿ ಗಳಾಗಬೇಕು.

ಐದನೆಯದು- ನಿಮಗೋಸ್ಕರ ನೀವು ಬದುಕಿ ನಿಮ್ಮ ಅನಿಸಿಕೆಯಂತೆ ನೀವು ಬದುಕಿದರೆ ಅದರಲ್ಲಿ ಯಾವ ಅಪರಾಧವೂ ಇಲ್ಲ. ಬೇರೆಯವರು ಏನೆಂದು ಕೊಂಡಾರೋ ಎಂಬ ಯೋಚನೆಗಳು ನಮ್ಮನ್ನು ಕಾಡಿದಷ್ಟು ಅವರ ಅನಿಸಿಕೆ ಅಭಿಪ್ರಾಯಗಳಿಗೆ ತಕ್ಕದ್ದಾಗಿ ನಡೆದುಕೊಳ್ಳುತ್ತೇವೆ. ನಮ್ಮತನ ನಿಧಾನ ಮರೆಯಾಗುತ್ತದೆ. ಎಲ್ಲರನ್ನೂ ಎಲ್ಲ ಸಂದರ್ಭಗಳಲ್ಲೂ ಖುಷಿಯಾಗಿರಿಸಲು ಸಾಧ್ಯವಿಲ್ಲ, ನಮ್ಮ ಖುಷಿಗಾಗಿ ನಾವು ಕೆಲವೊಮ್ಮೆ ನಮ್ಮ ಮನಸ್ಸಿನ ಇಚ್ಚೆಯಂತೆ ನಡೆದುಕೊಳ್ಳಬೇಕಾಗುತ್ತದೆ.

ಆರನೆಯದು- ಬದುಕಿನ ಬಗ್ಗೆ ಪ್ರೀತಿ ಮತ್ತು ಆಶಾವಾದವಿರಲಿ ಯಾವಾಗಲೂ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ ಸೋತೆವೆಂದು ಕುಗ್ಗುವುದು ಇಲ್ಲ, ಎಂತಹುದೇ ಸಂದರ್ಭವಿರಲಿ ಭರವಸೆ ಕಳೆದುಕೊಳ್ಳದೆ ಬೆಳಕಿಗೆ ಬದುಕನ್ನೊಡ್ಡುವುದು. ಎರಡರಲ್ಲ ಯಾವುದು ಹೆಚ್ಚು ಆಶಾವಾದವೋ ಅದನ್ನೇ ಆಯ್ಕೆ ಮಾಡಿಕೊಳ್ಳೋಣ ಕುಸಿದಷ್ಟು ಬದೀಕೀ ದುರ್ಬಲಗೊಳ್ಳುತ್ತದೆ.

ಏಳನೆಯದು- ಸಾಧನೆಯ ಹಾದಿಗೆ ಒಂದೊಂದೇ ಹೆಜ್ಜೆಗಳನ್ನು ಎತ್ತಿಡೋಣ ಸಾವಿರ ಮೈಲುಗಳ ದಾರಿಯ ಪಯಣ ಶುರುವಾಗುವುದೇ ಮೊದಲ ಹೆಜ್ಜೆಯಿಂದ ಮುಂದುವರೆಯುವುದು ಒಂದೊಂದೇ ಹೆಜ್ಜೆಗಳನ್ನಿಡುತ್ತ ಸಾಗುವುದರಿಂದ. ಸುಂದರವಾದ ಸೀರೆಯೊಂದು ರೂಪ ಪಡೆಯುವುದು ಹತ್ತು ಸಾವಿರಗಳ ಒಂದೊಂದೆ ನೇಯ್ಗೆಯಿಂದ ನಿಮಗನ್ನಿಸಿದ್ದನ್ನು ನಿಧಾನವಾಗಿ ಬದುಕಿನ ಎಲ್ಲಾ ಆಯಾಮಗಳಿಂದಲೂ ಯೋಚಿಸಿ ಮುಂದಡಿ ಇಡಿ.

ಕೊನೆಯದಾಗಿ ನೆನಪಿಡಿ ಬದುಕನ್ನು ನೋಡುವುದರಲ್ಲಿ ಎರಡು ದೃಷ್ಟಿಕೋನಗಳಿವೆ. ಒಂದು ನಾವು ಅಂದುಕೊಂಡಿದ್ದು ಆದ ಮೇಲೆ ಸಂತೋಷ ವಾಗಿರುತ್ತೇವೆ ಅನ್ನುವುದು ಎರಡನೆಯದು ಏನೇ ಬಂದರೂ ಸಂತೋಷವಾಗಿರುತ್ತೇವೆ ಅನ್ನುವುದು ಎರಡರಲ್ಲಿ ಆಯ್ಕೆ ನಮ್ಮದೇ. ನಾವೆ ತುಂಬಾ ಸೀರಿಯಸ್ಸಾಗಿ perfectionist  ಗಳಾಗಿ ಒಂದಾದ ಮೇಲೊಂದು ನಿಮಿಷ, ಗಂಟೆಗಳನ್ನ ಲೆಕ್ಕಹಾಕುತ್ತಾ ಬದುಕಿ ಬಿಟ್ಟಿದ್ದೇವೆ. Lets relax! ಸಣ್ಣಪುಟ್ಟ ತಪ್ಪುಗಳು, ಒಂದಿಷ್ಟು ಪೆದ್ದುತನ, ಒಂದಿಷ್ಟು ಹುಚ್ಚಾಟ ಎಲ್ಲವೂ ಬೇಕು ಬದುಕಿಗೆ.

ಬದುಕನ್ನ ಬದಲಾಯಿಸಿ ಸಂತೋಷಗಳನ್ನ ಹುಡುಕಬೇಕಿಲ್ಲ ನಾವೊಂದಿಷ್ಟು ಬದಲಾದರೆ ಸಾಕು ಸಣ್ಣಪುಟ್ಟ ಹೊಂದಾಣಿಕೆಗಳಲ್ಲಿ ಸಂತೋಷವಿದೆ ಈ ಅರಿವು ನಮ್ಮಲ್ಲಿ ಮೂಡಬೇಕು. ಹಾಗಾಗಿ ನಿಮ್ಮ ಬದುಕಿನ ಖುಷಿಗಳಿಗೆ ನೀವೇ ಜವಾಬ್ದಾರರು. ಬದುಕಿನ ಬದಲಾವಣೆಗಳಿಗೆ ಮನಸ್ಸನ್ನು ಅಡಾ
ಮಾಡಿಕೊಳ್ಳಿ. ಬದಲಾವಣೆ ಅನಿವಾರ್ಯ ಅದಕ್ಕೆ ಒಗ್ಗಿಕೊಂಡರೆ ಖುಷಿ ನಿರಂತರ. ಬದುಕು ಎಷ್ಟೇ ಅಪರಿಪೂರ್ಣವಾಗಿರಲಿ ಖುಷಿ  ಕಡಿಮೆಯಾಗ ದಿರಲಿ.

ಹೈಟೆಕ್ ಪ್ರಪಂಚ ನಮಗೆ ಹೆಚ್ಚು ಹತ್ತಿರವಾಗಿ ಮನುಷ್ಯ ಸಂಬಂಧಿ ಸ್ಪರ್ಶವನ್ನು ನಮ್ಮ ಅರಿವಿಗೆ ಬಾರದಷ್ಟು ಪ್ರತ್ಯೇಕಿಸಿಬಿಟ್ಟಿದೆ. ಬೆನ್ನಿಗೊಂದು ಕೆಲಸ ಕೈತುಂಬಾ ಸಂಬಳ ಸಂಬಳದ ಜೊತೆಗಿನ ಇಎಂಐ ಬರ್ಡನ್‌ಗಳು ಮನೆಯನ್ನೇನೋ ತುಂಬಿಸಿವೆ ಮನಸ್ಸನ್ನು ಖಾಲಿಯಾಗಿಸಿವೆ. ನಾವೆಲ್ಲ ದೊಡ್ಡ
ದೊಡ್ಡ ಬಿಸಿನೆಸ್ ಪ್ರವೀಣರಾಗಿರಬಹುದು ಉತ್ತಮ ಸಂಬಳ ಪಡೆಯುವ ವ್ಯಕ್ತಿಗಳ ಆಗಿರಬಹುದು ಅಥವಾ ಉತ್ತಮವಾಗಿ ಮನೆಯನ್ನು ನಿರ್ವಹಿಸಿಕೊಂಡು ಹೋಗುವ ಗೃಹಿಣಿಯರಾಗಿರಬಹುದು ಸಂತೋಷಗಳು ನಮ್ಮ ಆಯ್ಕೆಗಳಾಗಿರುತ್ತವೆ.

ಕಳೆದು ಹೋಗಿರುವ ಸಂತೋಷಗಳನ್ನು ಪುನಃ ಪಡೆದುಕೊಳ್ಳಲು ಕ್ರಿಯಾಶೀಲ ದಾರಿಗಳು ಇಲ್ಲಿವೆ:

೧) ಬೇರೆಯವರ ಬದುಕಿನ ಜೊತೆ ಹಠಕ್ಕೆ ಬೀಳುವುದು ಬೇಡ ಹಟಕ್ಕೆ ಬಿದ್ದಂತೆ ನಾವು ಬೇರೆಯವರ ಜೊತೆ ಸ್ಪರ್ಧೆಗೆ ಇಳಿದು ಬಿಡ್ತೀವಿ ಎಷ್ಟರಮಟ್ಟಿಗೆ ಗೊತ್ತಾ? ಕಲೀಗ್ ಒಬ್ಬರು ತಮ್ಮ ಪ್ರೆಗ್ನನ್ಸಿ ಕನರ್ಮ್ ಆಯ್ತು ಅನ್ನೋ ಖುಷಿಯ ವಿಚಾರವನ್ನು ನಮ್ಮೆಲ್ಲರ ಜೊತೆ ಹಂಚಿಕೊಂಡರು ಇದಾಗಿ ಒಂದು ಸ್ವಲ್ಪ ದಿನ ಕಳೆದಿರಬಹುದು ಮತ್ತೊಬ್ಬ ಕಲೀಗನನ್ನದು ಪ್ರೆಗ್ನನ್ಸಿ ಕನರ್ಮ್ ಆಯ್ತು ಅಂದ್ರು ಅವರ ಮಾತು ಎಷ್ಟು ಅಗ್ರೆಸಿವ್‌ವಾಗಿತ್ತು ಅಂದರೆ ಇಲ್ಲಿ ಅವರು ಖುಷಿ ಹಂಚಿಕೊಂಡಿದ್ದಕ್ಕಿಂತ ಪೈಪೋಟಿಗಿಳಿದಿದ್ದು ಎದ್ದು ಕಾಣಿಸುತ್ತಿತ್ತು.

ಇದೊಂದು ಪುಟ್ಟ ಉದಾಹರಣೆಯಷ್ಟೇ ಬೆಳಗಾದರೆ ಈ ತರಹದ ಅನೇಕ ಹಠಗಳು ನಮ್ಮ ಕಣ್ಣೆದುರು ಕಾಣಸಿಗುತ್ತವೆ. ನಮ್ಮೊಳಗೂ ಇದ್ದಿರಬಹುದು
ಸ್ವಲ್ಪ ನಿಧಾನಿಸೋಣ. ನಮ್ಮ ಹಠದ ಆಲೋಚನೆಗಳಿಗೆ, ಆಸೆಗಳಿಗೆ ಬ್ರೇಕ್ ಹಾಕದೆ ಹೋದರೆ ಎಡವಿಬಿಡಬಹುದು ಎಚ್ಚರವಿರಲಿ. ಸೂರ್ಯ ಮತ್ತು ಚಂದ್ರರ ನಡುವೆ ಹೋಲಿಕೆ ಯಾಕೆ ಸಮಯ ಬಂದಾಗ ಇಬ್ಬರೂ ಅವರದೇ ರೀತಿಯಲ್ಲಿ ಬೆಳಗುತ್ತಾರೆ.

೨) ನಿಮ್ಮ ಬದುಕಿನ ಅನುಭವ ಮತ್ತು ಜವಾಬ್ದಾರಿ ನಿಮ್ಮದಾಗಿರಲಿ ಸಾಮಾನ್ಯವಾಗಿ ನಾವು ನಮ್ಮ ಸೋಲುಗಳನ್ನು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ ಅವುಗಳಿಗೆ ಬೇರೆಯವರನ್ನೋ ಇಲ್ಲ ಪರಿಸ್ಥಿತಿಗಳನ್ನೋ ಹೊಣೆ ಮಾಡಲು ಪ್ರಯತ್ನಿಸುತ್ತೇವೆ ಆದರೆ ಯೋಚಿಸಿ ನೋಡಿ ನಮ್ಮ ಬದುಕಿನ ಅನುಭವಗಳ್ಳೆಲ್ಲವೂ ನಮ್ಮದೇ ಆಸೆ ಆಯ್ಕೆ ಕ್ರಿಯೆ ಪ್ರತಿಕ್ರಿಯೆಗಳ ಫಲಿತಾಂಶಗಳೇ ಆಗಿರುತ್ತವೆ ಹಾಗಾಗಿ ಮೊದಲು ನಮ್ಮ ಜೀವನದ ಅನುಭವ
ಗಳು ನಮ್ಮವೇ ಎಂಬ ಜವಾಬ್ದಾರಿಯನ್ನು ಒಪ್ಪಿಕೊಳ್ಳೋಣ. ಈ  ಪರಿವರ್ತನೆ ನಾಳೆ ನಮ್ಮ ಬದುಕು ಹೇಗಿರಬೇಕೆಂಬ ನಿಯಂತ್ರಣವನ್ನು ರೂಪಿಸಿಕೊಳ್ಳುವುದನ್ನು ಕಲಿಸುತ್ತದೆ. ವ್ಯಕ್ತಿತ್ವ ನಿಧಾನವಾಗಿ ಮಾಗುತ್ತದೆ.

೩) ನಿಮ್ಮ ಬಗ್ಗೆ ನೀವು ಪ್ರತಿಯೊಬ್ಬರಿಗೂ ವಿವರಿಸುವ ಅಗತ್ಯವಿಲ್ಲ ಅನೇಕ ಸಲ ನಾವು ನಮ್ಮ ಅಸ್ಥಿರತೆ ಅಭದ್ರತೆಯ ಕಾರಣಕ್ಕಾಗಿ ಪ್ರತಿಯೊಂದನ್ನು ಬೇರೆಯವರಿಗೆ ವಿವರಿಸಿ ಹೇಳಲು ಪ್ರಯತ್ನಿಸುತ್ತೇವೆ ಅಗತ್ಯವಿಲ್ಲ. ನಾನು ಯಾಕೆ ಹೀಗೆ ಮಾಡಿದೆ ನಾನು ಯಾಕೆ ಹೀಗೆ ಯೋಚಿಸಿದೆ ನಾನು ಯಾಕೆ ಹೀಗೆ ನಿರ್ಧಾರ ತೆಗೆದುಕೊಂಡೆ ನಾನು ಯಾಕೆ ಹೀಗೆ ನಡೆದುಕೊಂಡೆ ಎಂಬುದು ನಿಮಗೆ ಗೊತ್ತಿದ್ದರೆ ಸಾಕು. ಅದು ಸರಿ ಅನಿಸಿಯೇ ನೀವು ಆ ಕ್ಷಣಕ್ಕೆ ಪ್ರತಿಕ್ರಿಯಿಸುತ್ತೀರಿ. ಬೈಚಾ ಅದು ತಪ್ಪಾಗಿದ್ದರೆ ಒಂದು ಪುಟ್ಟ ಕ್ಷಮೆ ಕೇಳಿ ಬಿಡಿ ಅದನ್ನು ಬಿಟ್ಟು ನಿಮ್ಮ ಯೋಚನೆಯಿಂದ ಹಿಡಿದು ನಿಮ್ಮ ಪ್ರತಿಕ್ರಿಯೆವರೆಗಿನ ಎಲ್ಲ ನಡವಳಿಕೆಗಳಿಗೆ ವಿವರಣೆಯ ಅಗತ್ಯವಿಲ್ಲ.

೪) ಬದುಕಿಗೆ ಉತ್ಸಾಹ ತುಂಬಬಲ್ಲ ಅಭಿರುಚಿಗಳನ್ನು ಅನುಸರಿಸಿ ನೀವು ಪ್ರೀತಿಯಿಂದ ತೊಡಗಬಲ್ಲ ಕೆಲಸಗಳಿಗೆ ನಿಮ್ಮದು ಮೊದಲ ಆದ್ಯತೆ ಯಾಗಿರಲಿ ನಿಮ್ಮ ಒಳದನಿಯ ಮಾತುಗಳಿಗೆ ಕಿವಿಯಾಗಿ ನೀವು ಮಾಡುವ ಯಾವುದೇ ಕೆಲಸಗಳಲ್ಲಿ ಪ್ರೀತಿ ಮತ್ತು ಖುಷಿ ತುಂಬಿರಲಿ. ಕೆಲಸದ ಮೇಲೆ ಪ್ರೀತಿ ಮೂಡಿ ಬಿಟ್ಟರೆ ಅಲ್ಲಿ ಭಯ ಅಭದ್ರತೆಗಳಿಗೆ ಜಾಗವಿಲ್ಲ ಪ್ರೀತಿ ಮತ್ತು ಉತ್ಸಾಹಕ್ಕೆ ಕತ್ತಲೆ ಜಗತ್ತಿನೊಳಗೂ ಕೈಹಿಡಿದು ನಡೆಸುವ ದೊಡ್ಡ
ಶಕ್ತಿ ಇರುತ್ತದೆ.

೫) ನಮ್ಮ ಆರಾಮದ ನೆಲೆಯನ್ನು ದಾಟೋಣ ಆಗಲ್ಲ ಎನ್ನುವ ಸಂಗತಿ ಹುಟ್ಟುಕೊಳ್ಳುವುದೇ ನಾವು ಒಂದು ವಿಷಯಕ್ಕೆ ವ್ಯಕ್ತಿಗೆ ಕೆಲಸಕ್ಕೆ ಸಂದರ್ಭಕ್ಕೆ ಇನ್ಯಾವುದೋ ವಲಯಕ್ಕೆ ಅಂಟಿಕೊಂಡು ಬಿಟ್ಟಿದ್ದರೆ. ಅಂಟಿಕೊಂಡಿರುವ ಯೋಚನೆ ನಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಮಾಡಿಬಿಡುತ್ತದೆ ನೀವೇನಾದರೂ ಅಸಾಧಾರಣದ ಬಗ್ಗೆ ಯೋಚಿಸಿದ್ದೀರಾ? ಆರಾಮದ ಮನಸ್ಥಿತಿಯನ್ನು ದಾಟಿ. ಆಗ ನಿಮ್ಮ ಮಿತಿಗಳಾಚೆ ಬದುಕನ್ನು ನೋಡಬಹು ದಾದ ಹೊಸ ಸಾಧ್ಯತೆಗಳು ನಿಮಗೆ ಕಾಣಸಿಗುತ್ತವೆ.

ಮುಗಿಸುವ ಮುನ್ನ- ಒಂದು ಸೂರ್ತಿಯ ಕಥೆ ಒಂದೂರು, ಆ ಊರಿನಲ್ಲಿ ಸುಮತಿ ಎಂಬ ಹುಡುಗಿ. ಊರಿನ ಗುಡ್ಡದ ಮೇಲೆ ಅವಳ ಮನೆ. ಮನೆಗೆ ನೀರು ತರಲು ಗುಡ್ಡದಿಂದ ಕೆಳಗೆ ಬರಬೇಕಿತ್ತು ಸುಮತಿ ದಿನವೂ ಎರಡು ಕೊಡ ಹಿಡಿದು ಮನೆಗೆ ನೀರು ತುಂಬುತ್ತಿದ್ದಳು.ಒಂದು ಕೊಡಕ್ಕೆ ನೀಲಿ
ಬಣ್ಣ ಮತ್ತೊಂದ್ದಕ್ಕೆ ಕೆಂಪು ಬಣ್ಣ ಬಳಿದು ಹೂವಿನ ಚಿತ್ರ ಬಿಡಿಸಿದ್ದಳು. ಒಂದು ದಿನ ನೀಲಿ ಕೊಡದಲ್ಲಿ ಸಣ್ಣದೊಂದು ಬಿರುಕುಂಟಾಗಿರುವುದನ್ನು ಸುಮತಿ ಗಮನಿಸಿದಳು. ಆದರೂ ನಿಧಾನಕ್ಕೆ ಕೊಡದ ಅಂಚಿನ ನೀರು ತುಂಬಿಸಿ ಮನೆಗೆ ಒಯ್ಯುತ್ತಿದ್ದಳು.

ಹೀಗೆ ದಿನಗಳೆದವು, ನೀಲಿ ಕೊಡದ ಬಿರುಕು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಹೋಯಿತು. ದಿನಾಗಲೂ ನೀಲಿ ಕೊಡ ಕೆಂಪು ಕೊಡದ ಬಳಿ ಗೋಳಾಡುವುದ್ದಕ್ಕೆ ಶುರುಮಾಡಿತು. ನಾನು ಉಪಯೋಗಕ್ಕೆ ಬಾರದವ, ನನ್ನಿಂದ ಯಾವುದೇ ಪ್ರಯೋಜನವಿಲ್ಲ, ನನ್ನಿಂದ ನೀರೆಲ್ಲ ಚೆಲ್ಲಿ
ಹಾಳಾಗುತ್ತಿದೆ. ಒಂದು ದಿನ ಬಿರುಕು ಇನ್ನು ಹೆಚ್ಚಾಯಿತು. ಆಗ ತಡೆಯಲಾರದೆ ನೀಲಿ ಕೊಡ ಸುಮತಿಯನ್ನು ಕುರಿತು ನಾನು ನಿನ್ನ ನೀಲಿ ಕೊಡ ನಾನೊಬ್ಬ ಅಪ್ರಯೋಜಕ, ನನ್ನಿಂದ ಏನೂ ಒಳ್ಳೆಯದಾಗದು, ನನ್ನ ಬಿರುಕಿನಿಂದ ನೀರೆಲ್ಲ ಸೋರಿ, ಚೆಲ್ಲಿ ಹಾಳಾಗುತ್ತಿದೆ ದಯವಿಟ್ಟು ನನ್ನನ್ನು ಎಸೆದುಬಿಡು ಎಂದು ಗೋಳಾಡಿತು. ಎಲ್ಲವನ್ನು ತಾಳ್ಮೆಯಿಂದ ಕೇಳಿಸಿಕೊಂಡ ಸುಮತಿ ನೀಲಿಕೊಡದ ಜೊತೆ ಗುಡ್ಡದ ಹತ್ತಿರ ಬಂದು ಗುಡ್ಡದ ಒಂದು
ಬದಿಯನ್ನು ಕೆಳಗಿನಿಂದ ಮೇಲೆ ನೋಡಲು ಹೇಳಿದಳು ನೀಲಿ ಕೊಡ ಗುಡ್ಡದ ಬದುವನ್ನೊಮ್ಮೆ ನೋಡಿತು.

ಇಡೀ ಬದು ಹಸುರಾಗಿತ್ತು ಜಾಜಿ, ಸೂಜಿ, ಕೆಂಗುಲಾಬಿ, ಮಲ್ಲಿಗೆ ಗಿಡಗಳು ಅರಳಿ ನಗುತ್ತ ನಿಂತಿದ್ದವು. ಆಗ ಸುಮತಿ ಹೇಳಿದಳು- ಇದೆಲ್ಲ ಸಾಧ್ಯ ವಾಗಿದ್ದು ನಿನ್ನಿಂದ ನೀಲಿ ಕೊಡ ನಿನ್ನಲ್ಲಿ ಬಿರುಕು ಕಾಣಿಸಿಕೊಂಡಾಗಲೇ ನಾನು ಈ ಬದುಗಳ ದಡದಲ್ಲಿ ಹೂವಿನ ಬೀಜಗಳನ್ನು ಹಾಕಿದೆ. ದಿನವೂ ನೀನು ಸೋರಿಸಿದ ನೀರಿನಿಂದ ಗಿಡಗಳೆಲ್ಲ ಬೆಳೆದು ಹೂವುಗಳು ಅರಳಿ ನಿಂತಿವೆ. ನೀನು ನಿಷ್ಪ್ರಯೋಜಕನಲ್ಲ. ನಿನ್ನಿಂದ ಪ್ರಕೃತಿ ಮೈದಳೆದು ನಿಂತಿದ್ದಾಳೆ ಎಂದಳು ಸುಮತಿ.

ನೀಲಿ ಕೊಡಕ್ಕೆ ತನ್ನ ಅಪೂರ್ಣತೆಯಲ್ಲೂ, ಬದುಕನ್ನು ಪೂರ್ಣವಾಗಿಸಿಕೊಂಡ ಭಾವ!