Monday, 16th September 2024

’ಇಂದಿರಾ ಗಾಂಧಿ’ ತುರ್ತುಪರಿಸ್ಥಿತಿಯಲ್ಲಿ ’ಪ್ರಜಾಪ್ರಭುತ್ವ’ ಸ್ಥಾಪನೆ ಮಾಡಿದ್ದು ಆರ್‌ಎಸ್‌ಎಸ್‌ !

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

1969 ರಿಂದ 1972ರ ವರೆಗೂ ಸತತವಾಗಿ ಮೂರು ವರ್ಷಗಳ ಕಾಲ ಭಾರತದಲ್ಲಿ ಬರಗಾಲವಿತ್ತು. 1969ರಲ್ಲಿ ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರು, ಕೊಲ್ಲಿ ಯುದ್ಧ ನಡೆದುದ್ದರ ಪರಿಣಾಮವಾಗಿ ತೈಲದ ಬೆಲೆ ಗಗನಕ್ಕೇ ರಿತ್ತು. ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ಘೋಷಣೆಯಾಗಿತ್ತು, ಆಗ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನ ಗಳಿದ್ದವು.

ಪೂರ್ವ ಪಾಕಿಸ್ತಾನದ ಬಂಗಾಳಿ ನಾಯಕನು ಅಭೂತಪೂರ್ವ ಗೆಲುವಿನೊಂದಿಗೆ ಚುನಾವಣೆಯಲ್ಲಿ ಗೆದ್ದು ಬಂದನು, ಆದರೆ ಪಾಕಿಸ್ತಾನದ ಮಿಲಿಟರಿ ಈತನನ್ನು ಪ್ರಧಾನ ಮಂತ್ರಿಯನ್ನಾಗಿ ಸ್ವೀಕರಿಸಲು ತಯಾರಿರಲಿಲ್ಲ. 1971ರಲ್ಲಿ ಭಾರತದಲ್ಲಿ ನಡೆದ ಚುನಾವಣೆಯಲ್ಲಿ ‘ಗರೀಬಿ ಹಟಾವೋ’ ಘೋಷವಾಕ್ಯದೊಂದಿಗೆ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದರು. ಅತ್ತ ಪೂರ್ವ ಪಾಕಿಸ್ತಾನದಲ್ಲಿ ಗಲಭೆಗಳಾಗುತ್ತಿದ್ದವು, ಭಾರತಕ್ಕೆ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಯುದ್ಧ ವೊಂದನ್ನು ಮಾಡಬೇಕಿತ್ತು. 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಕಿಸ್ತಾನವು ಸೋತು ಶರಣಾಯಿತು. ಪರಿಣಾಮವಾಗಿ ‘ಇಂದಿರಾ ಗಾಂಧಿ’ಯ ನೆರವಿನಿಂದ ಬಾಂಗ್ಲಾದೇಶದ ಉಗಮ ವಾಯಿತು.

ಉಗಮವಾದ ಒಂಬತ್ತು ತಿಂಗಳಲ್ಲಿ ಸುಮಾರು ಒಂದು ಕೋಟಿಯಷ್ಟು ಬಾಂಗ್ಲಾದೇಶಿಗಳು ಭಾರತಕ್ಕೆ ವಲಸಿಗರಾಗಿ ಬಂದರು, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಾಹಾಕಾರವೇ ಎದ್ದಿತ್ತು. ಅದೇ ಸಮಯದಲ್ಲಿ ಭಾರತದಲ್ಲಿ ಇಂದಿರಾ ಗಾಂಧಿಯವರ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು, ಭ್ರಷ್ಟಾಚಾರವು ಜಗತ್ತಿ ನೆಡೆ ರುವಂತೆ ಭಾರತದಲ್ಲಿಯೂ ಇದೆ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಕೆಲವು ನಾಯಕರು ಬಹಿರಂಗವಾಗಿ ಹೇಳಿದ್ದರು. ದೇಶದಲ್ಲಿ ಯಾವಾಗ ಭ್ರಷ್ಟಾಚಾರವು ತಾಂಡವವಾಡಲು ಶುರುವಾಯಿತೋ ಗುಜರಾತಿನಲ್ಲಿ ಭ್ರಷ್ಟಾಚಾರದ ವಿರುದ್ಧ ಚಳವಳಿಯೊಂದು ಶುರುವಾಯಿತು, ಗುಜರಾತಿನ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಂಥ ‘ಚಿಮನ್ ಭಾಯ್ ಪಟೇಲ’ ವಿರುದ್ಧ ಹೆಚ್ಚಿನ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆತನ ವಿರುದ್ಧ ಶುರುಮಾಡಿದ್ದಂಥ ಚಳವಳಿಯನ್ನು ‘ನಿರ್ಮಾಣ್ ಆಂದೋಲನ’ವೆಂದು ಕರೆಯಲಾಯಿತು, ನಂತರ ಈ ಆಂದೋಲನವು ಗುಜರಾತಿನಿಂದ ಬಿಹಾರದೆಡೆಗೆ ಹೊರಟಿತ್ತು.

ಜಯಪ್ರಕಾಶ್ ನಾರಾಯಣ್ ಅವರು ವಿರೋಧ ಪಕ್ಷಗಳ ನೇತೃತ್ವ ವಹಿಸಿ ಈ ಆಂದೋಲನವನ್ನು ದೊಡ್ಡ ಮಟ್ಟಕ್ಕೆ ತೆಗೆದೆಕೊಂಡು ಹೋಗುವಲ್ಲಿ ಯಶಸ್ವಿ ಯಾದರು. ರಾಷ್ಟ್ರೀಯ ಸ್ವಯಂ ಸೇವಕ  ಸಂಘದ ಸರಸಂಘಚಾಲಕರಾಗಿದ್ದಂಥ ‘ಬಾಳಾಸಾಹೇಬ’ರು ಸ್ವಯಂಸೇವಕರಿಗೆ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪರೋಕ್ಷವಾಗಿ ಕರೆಕೊಟ್ಟರು, ಬಹಿರಂಗವಾಗಿ ಹೇಳದಿದ್ದರೂ ಸಹ ಆಂದೋಲನದಲ್ಲಿ ನಿರತರಾಗಿದ್ದ ಸ್ವಯಂಸೇವಕರಿಂದ ಇದು ಅರ್ಥವಾಗಿತ್ತು.
‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ವು ನಿರ್ಮಾಣ್ ಆಂದೋಲನ’ಕ್ಕೆ ನೀಡಿದ ಬೆಂಬಲದ ವಿರುದ್ಧ ಪ್ರಶ್ನೆಕೇಳಿದ ಪತ್ರಕರ್ತನಿಗೆ ಬಾಳಾಸಾಹೇಬರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ಈ ದೇಶದ ನಾಗರಿಕನಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿಎತ್ತುವುದು ತಪ್ಪೇ ಎಂದು ಕೇಳಿದ್ದರು? ಭ್ರಷ್ಟಾಚಾರದ
ಸಮಸ್ಯೆಯು ಎಲ್ಲರನ್ನೂ ಕಾಡುವಂತೆ ಸ್ವಯಂಸೇವಕನನ್ನೂ ಸಹ ಕಾಡುತ್ತದೆ, ಈ ಸಮಸ್ಯೆ ಬಗೆಹರಿದರೆ ಅವನಿಗೂ ಒಳ್ಳೆಯದಲ್ಲವೇ? ಒಳ್ಳೆಯ ಕಾರ್ಯಕ್ಕೆ ಯಾಕೆ ಆತ ಕೈ ಜೋಡಿಸಬಾರದು? ಎಂದು ಕೇಳಿದ್ದರು.

ಕೆಲವೇ ಕೆಲವು ತಿಂಗಳಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನವು ದೊಡ್ಡಮಟ್ಟದಲ್ಲಿ ದೇಶದಾದ್ಯಂತ ಹರಡಿ, ಸ್ವಯಂಸೇವಕರೇ ಈ ಆಂದೋಲನದ ಹಿಂದಿನ ರೂವಾರಿಗಳೆಂಬ ವಿಷಯ ಇಂದಿರಾ ಗಾಂಧಿಗೆ ತಿಳಿಯಿತು. ಜನವರಿ 1975ರಲ್ಲಿ ಇಂದಿರಾ ಗಾಂಧಿಯ ವಕೀಲನೊಬ್ಬ ಪತ್ರದ ಮೂಲಕ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ವನ್ನು ನಿಷೇಧ ಮಾಡಬೇಕೆಂಬ ಸಂದೇಶವನ್ನು ರವಾನಿಸಿದ್ದ. ವಿಪರ್ಯಾಸ ನೋಡಿ 1948ರಲ್ಲಿ ಇಂದಿರಾ ಗಾಂಧಿಯ ಅಪ್ಪ ಜವಾಹರಲಾಲ್ ನೆಹರು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಕಾರ್ಯಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಮಹಾತ್ಮ ಗಾಂಧಿಯವರ ಕೊಲೆಯಲ್ಲಿ ಸಿಕ್ಕಿಸುವ
ಪ್ರಯತ್ನ ಮಾಡಿ, ಸಂಘವನ್ನು ನಿಷೇಧ ಮಾಡಿದ್ದರು.

ಇತಿಹಾಸ ಮರುಕಳಿಸಿದಂತೆ ಇಂದಿರಾ ಗಾಂಽ ಅಽಕಾರಕ್ಕೆ ಬಂದ ಮೇಲೆ ಮತ್ತದೇ ಪ್ರಯತ್ನಕ್ಕೆ ಕೈ ಹಾಕಿದ್ದರು. ಈಗಲೂ ಅಷ್ಟೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಲ್ಲಸಲ್ಲದ ಆರೋಪವನ್ನು ಹೊರಿಸಿ ಸಂಘವನ್ನು ನಿಷೇಧ ಮಾಡುವ ಬಗ್ಗೆಯೇ ಯೋಚಿಸುತ್ತಿರುತ್ತದೆ. ಇಂದಿರಾ ಗಾಂಽಯ ವಕೀಲ ನೀಡಿದ್ದ ಸಲಹೆಯು ಹೇಗೋ
ಪತ್ರಕರ್ತರಿಗೆ ಸೋರಿಕೆಯಾಗಿತ್ತು. 20-06-1975 ರಂದು ‘”INDIAN EXPRESS’’ ಪತ್ರಿಕೆಯಲ್ಲಿ ಈ ವಿಷಯವು ಪ್ರಕಟವಾಗಿತ್ತು. ಪರಿಣಾಮ, ದೇಶ ದಾದ್ಯಂತ ಸರಕಾರದ ವಿರುದ್ಧ ಮಾತುಗಳು ಕೇಳಿಬಂದವು. ಹಾಗಾಗಿ ಇಂದಿರಾ ಗಾಂಧಿ ಸಂಘವನ್ನು ನಿಷೇಧ ಮಾಡುವ ನಿರ್ಧಾರವನ್ನು ಕೈಬಿಟ್ಟರು. ಕಮ್ಯುನಿಸ್ಟರ ಮಾತು ಕೇಳಿ ಕಾಂಗ್ರೆಸ್ ಸರಕಾರ ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ, ಇದರ ಭಾಗವಾಗಿ ಸಂಘವನ್ನು ನಿಷೇಧ
ಮಾಡುವತ್ತ ಚಿಂತನೆ ನಡೆಸುತ್ತಿದೆ, ಶಿಸ್ತಿಗೆ ಹೆಸರಾಗಿರುವ ಸಂಘವು ಇಂಥ ಬೆದರಿಕೆಗೆ ಹೆದರುವುದಿಲ್ಲವೆಂದು ‘ಬಾಳಾಸಾಹೇಬ’ ಪತ್ರಕರ್ತರ ಮುಂದೆ ಹೇಳಿದ್ದರು.

ಇಷ್ಟಾದರೂ ಇಂದಿರಾ ಗಾಂಧಿಯವರ ಮೇಲೆ ಸಂಘಕ್ಕೆ ನಂಬಿಕೆ ಇರಲಿಲ್ಲ, ಇಂದಲ್ಲ ನಾಳೆ ಸಂಘವನ್ನು ಬ್ಯಾನ್ ಮಾಡಬಹುದೆಂಬ ಅನುಮಾನದಿಂದ ಸುಮಾರು 2000 ಪ್ರಚಾರಕರು ಯಾರಿಗೂ ತಿಳಿಯದ ರೀತಿಯಲ್ಲಿ ಆಂದೋಲನವನ್ನು ಮುಂದಿನ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಲಾಯಿತು. ಇಂದಿರಾ ಗಾಂಧಿ ಸಂಘವನ್ನು ಬ್ಯಾನ್ ಮಾಡಿದರೆ ಸಂಘವು ಯಾವ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಯೋಜನೆಯು ತಯಾರಾಗಿತ್ತು. ಇದೇ ಸಮಯದಲ್ಲಿ ಅಲಹಾಬಾದ್ ನ್ಯಾಯಾಲಯವು ಇಂದಿರಾಗಾಂಧಿಯವರ 1971ರ ಚುನಾವಣೆಯಲ್ಲಿ ನಡೆದ ಅಕ್ರಮಗಳನ್ನು ಪರಿಗಣಿಸಿ ಅವರ ವಿರುದ್ಧ ತೀರ್ಪನ್ನು ನೀಡಿತು.
ಇಂದಿರಾ ಗಾಂಧಿಯವರ ಗೆಲುವನ್ನು ಅಸಿಂಧುಗೊಳಿಸಿ, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದೆಂದು ತೀರ್ಪನ್ನು ನೀಡಿತು.

ತೀರ್ಪು ಬಂದಾಕ್ಷಣ ರಾತ್ರೋ ರಾತ್ರಿ ಇಂದಿರಾ ಗಾಂಧಿ ಸಂವಿಧಾನವನ್ನು ತಿದ್ದುಪಡಿ ಮಾಡಿ ತನ್ನ ಚುನಾವಣೆಯ ವಿಷಯವು ನ್ಯಾಯವ್ಯಾಪ್ತಿಗೆ ಬರುವುದಿಲ್ಲ
ವೆಂದರು. ಇದನ್ನು ಕಂಡ ನ್ಯಾಯಾಲಯವು ಈ ತಿದ್ದುಪಡಿಯು ಸಂವಿಧಾನದ ಮೂಲ ಉದ್ದೇಶಗಳ ವಿರುದ್ಧವಿರುವ ಕಾರಣ, ದೇಶದ ಸಾರ್ವಭೌಮಕ್ಕೆ ಧಕ್ಕೆ ಬಂದಿದೆ ಎಂದಿತ್ತು. ನಂತರ ದೇಶದಾದ್ಯಂತ ಇಂದಿರಾ ಗಾಂಧಿಯ ವಿರುದ್ಧದ ಕೂಗು ಸೃಷ್ಟಿಯಾಯಿತು. ಸಿಕ್ಕ ಸಿಕ್ಕವರನ್ನು ಜೈಲಿಗೆ ಹಾಕಲಾಯಿತು.
ಮೊದಲ ಬಾರಿಗೆ ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು.

04-07-1975ರಂದು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡಲಾಯಿತು. ಒಟ್ಟು ೨೭ ಸಂಘಟನೆಯನ್ನು ಬ್ಯಾನ್ ಮಾಡಲಾಯಿತು. ಆದರೆ ಇಂದಿರಾ ಗಾಂಧಿಯ ಟಾರ್ಗೆಟ್ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ವೇ ಆಗಿತ್ತು, ಯಾಕೆಂದರೆ ಉಳಿದ ಸಂಘಟನೆಗಳು ಅಷ್ಟೊಂದು ಶಕ್ತಿಯುತವಾಗಿರಲಿಲ್ಲ.
ಸರಸಂಘಚಾಲಕರಾಗಿದ್ದಂಥ ಬಾಳಾ ಸಾಹೇಬರನ್ನು ಬಂಧಿಸಿ ಯರವಡಾ ಜೈಲಿನಲ್ಲಿಡಲಾಯಿತು. ಜೈಲಿನಿಂದಲೇ ತುರ್ತು ಪರಿಸ್ಥಿತಿಯ ವಿರುದ್ಧ ಬಾಳಾ ಸಾಹೇಬರು ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ದೇಶದ ನಾಲ್ಕು ದಿಕ್ಕುಗಳಿಗೆ ನಾಲ್ಕು ಪ್ರಚಾರಕರನ್ನು ನೇಮಿಸಿ, ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವನ್ನು ಮುಂದುವರಿಸಲು ಸೂಚಿಸಿದರು.

ಜೈಲಿನಲ್ಲಿದ್ದಂಥ ಇತರ ಹೋರಾಟಗಾರರು ಬಾಳಾಸಾಹೇಬರೊನ್ನೊಮ್ಮೆ ಕೇಳಿದರಂತೆ, ನೀವು ಜೈಲಿನಲ್ಲಿದ್ದರೂ ಸಹ ಹೊರಗಡೆ ತಮ್ಮ ಹೋರಾಟ ಅಷ್ಟು ಸರಾಗವಾಗಿ ಹೇಗೆ ನಡೆಯುತ್ತಿದೆ? ಆಗ ಬಾಳಾಸಾಹೇಬರು ಹೇಳಿದ್ದರಂತೆ, ಇಂದಿರಾ ಗಾಂಧಿ ಒಬ್ಬ ಸರಸಂಘಚಾಲಕನನ್ನು ಬಂಧಿಸಿರಬಹುದು. ಹೊರಗಡೆ ನಾಲ್ಕು ಜನ ಸರಸಂಘಚಾಲಕರಿದ್ದಾರೆ. ಬಾಳಸಾಹೇಬರ ಈ ಮಾತುಗಳಿಂದ ತಿಳಿಯುವುದೇನೆಂದರೆ ಸಂಘದಲ್ಲಿ ಸ್ಥಾನವೆಂಬುದು ಮುಖ್ಯವಾಗುವುದಿಲ್ಲ, ಮಾಡುವ ಕೆಲಸ ಮುಖ್ಯವಾಗುತ್ತದೆ. ಪ್ರತಿಯೊಬ್ಬ ಹಿರಿಯ ನಾಯಕರೂ ಸಹ ಸಮಾನವಾಗಿ, ಪೈಪೋಟಿ ಇಲ್ಲದೇ ಕೆಲಸ ಮಾಡುತ್ತಾರೆ.

ಬಾಳಾ ಸಾಹೇಬರು ಜೈಲಿನಲ್ಲಿರುವಾಗ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡುವ ವೇಳೆ, ತುರ್ತು ಪರಿಸ್ಥಿತಿಯು 14 ವರ್ಷಗಳ ಕಾಲ ಇರಬಹುದು, ಅಲ್ಲಿಯ ವರೆಗೂ ನಾವು ನಮ್ಮ ಹೋರಾಟವನ್ನು ಗಟ್ಟಿಯಾಗಿ ನಿಂತು ಮುಂದುವರಿಸಬೇಕು, ಈ ಹೋರಾಟವು ಒಂದು ಯುದ್ಧವಿದ್ದಂತೆ ತಾಳ್ಮೆ ಹಾಗೂ ನಿರಂತರ
ಹೋರಾಟದ ಮೂಲಕವಷ್ಟೇ ನಾವು ಈ ಯುದ್ಧವನ್ನು ಗೆಲ್ಲಬೇಕು ಅದಕ್ಕಾಗಿ ಎಲ್ಲರೂ ಸಿದ್ಧರಾಗಿರಬೇಕೆಂದು ಹೇಳುತ್ತಿದ್ದರು. ಬಾಳಾಸಾಹೇಬರು ಸ್ವಯಂ ಸೇವಕ ರಿಗೆ ಯಾವಾಗಲೂ ‘ಇಸ್ರೇಲ್ ’ದೇಶದ ಉದಾಹರಣೆಯನ್ನು ನೀಡುತ್ತಿದ್ದರು.

ಯಹೂದಿಗಳ ನಿರಂತರ ದೇಶಾಭಿಮಾನ ಹಾಗೂ ಇಚ್ಛಾಶಕ್ತಿಯ ಪರಿಣಾಮವಾಗಿ ಯಾವುದೇ ಸಮಸ್ಯೆ ಬಂದರೂ ಸಹ ಇಸ್ರೇಲ್ ಎದುರಿಸಲು ಸಿದ್ಧವಿರುತ್ತದೆ, ಹಾಗೆಯೇ ಸಂಘದ ಕಾರ್ಯಕರ್ತರೂ ಸಹ ನಿರಂತರ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಜೈಲಿನಲ್ಲಿದ್ದಂಥ ‘ಬಾಳಾಸಾಹೇಬರು’ ಸಂಘದ ಹಿರಿಯರಿಗೆ
ಪತ್ರದ ಮೂಲಕ ಒಂದು ವಿಷಯವನ್ನು ಮುಟ್ಟಿಸುತ್ತಾರೆ, ಈ ಹೋರಾಟದ ಮುಂದುವರಿದ ಭಾಗವಾಗಿ ತಾನು ಜೈಲಿನಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿರುವುದಾಗಿ ಹೇಳುತ್ತಾರೆ. ತಾನೊಬ್ಬ ಮಧುಮೇಹದ ರೋಗಿಯಾಗಿರುವುದರಿಂದ ಮೂರರಿಂದ ನಾಲ್ಕು ದಿವಸಗಳ ಕಾಲ
ಉಪವಾಸ ಮಾಡಿದರೆ ತನ್ನ ಜೀವಕ್ಕೆ ಸಂಚಕಾರ ಬರುತ್ತದೆ ಎಂದು ಪತ್ರದಲ್ಲಿ ಬರೆದಿರುತ್ತಾರೆ. ಈ ಪತ್ರವನ್ನು ಕಂಡು ದಿಗ್ಬ್ರಾಂತರಾದಂಥ ಸಂಘದ ಹಿರಿಯರು ಜೈಲಿನಲ್ಲಿ ಬಾಳಾಸಾಹೇಬರನ್ನು ಭೇಟಿ ಮಾಡಿ ಅಂಥ ನಿರ್ಧಾರವನ್ನು ಕೈಗೊಳ್ಳುವುದು ಬೇಡವೆಂದು ಮನವೊಲಿಸಿ, ಬೇರೆ ರೀತಿಯ ಅಹಿಂಸಾ ಹೋರಾಟವನ್ನು ಮಾಡೋಣವೆಂದು ಹೇಳುತ್ತಾರೆ.

ಬಾಳಾಸಾಹೇಬರ ಧೈರ್ಯ ಯಾವ ಮಟ್ಟಿಗಿತ್ತೆಂಬುದಕ್ಕೆ ಈ ಘಟನೆಯೇ ಸಾಕ್ಷಿ, ಸಾವಿಗೂ ಹೆದರದೆ ದೇಶಕ್ಕಾಗಿ ಭ್ರಷ್ಟ ಸರಕಾರದ ವಿರುದ್ಧ ಹೋರಾಡಲು ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧವೆಂಬ ಸಂದೇಶ ಈ ಘಟನೆಯಿಂದ ತಿಳಿಯುತ್ತದೆ. 04-12-1976ರಲ್ಲಿ ಲಂಡನ್‌ನಿಂದ ಬಂದಿದ್ದ ಪತ್ರಕರ್ತನೊಬ್ಬ, ರತ ದಲ್ಲಿ ಸತ್ತು ಹೋಗಿರುವ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲು ಕೇವಲ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದಿಂದ ಮಾತ್ರ ಸಾಧ್ಯವೆಂದು ಹೇಳಿದ್ದ. ಈತನ ಮಾತಿಗೆ ಹಲವಾರು ಜನರು ಸಹಮತ ವ್ಯಕ್ತಪಡಿಸಿದ್ದರು, ಈಗಲೂ ಅಷ್ಟೇ ಬಹುತೇಕರು ಸಂಘವಿಲ್ಲದಿದ್ದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತದಲ್ಲಿ ಪ್ರಜಾ ಪ್ರಭುತ್ವವನ್ನು ಮರುಸ್ಥಾಪಿಸಲು ಸಾಧ್ಯವಿರಲಿಲ್ಲವೆಂದು ಹೇಳುತ್ತಾರೆ.

2003ರಲ್ಲಿ ‘ದಿ ಹಿಂದೂ’ ದಿನಪತ್ರಿಕೆಯು ತನ್ನ ಮುಖವಾಣಿಯಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತುರ್ತು ಪರಿಸ್ಥಿಯ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಿದೆ, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಿದ್ದು ಸಂಘವೆಂದು ಹೇಳಿತ್ತು. ಜೈಲಿನಲ್ಲಿದ್ದುಕೊಂಡು ‘ಬಾಳಾ ಸಾಹೇಬರು’ ಇಂದಿರಾ ಗಾಂಧಿಯವರಿಗೆ ಪತ್ರವೊಂದನ್ನು ಬರೆಯುತ್ತಾರೆ, ಇಡೀ ಸರಕಾರವೇ ನಿಮ್ಮ ಕೈಯಲ್ಲಿರುವಾಗ ಸಂಘದ ಕಚೇರಿಗಳನ್ನೆಲ್ಲ ತಲಾಶ್ ಮಾಡಿ ಸಂಘದ ವಿರುದ್ಧದ ಒಂದೇ ಒಂದು ಆರೋಪವನ್ನು ಸಾಬೀತುಪಡಿಸುವ ಪುರಾವೆಗಳು ಸಿಗುತ್ತದೆಯೇ ನೋಡಿಯೆಂದು ಸವಾಲು ಹಾಕುತ್ತಾರೆ. ಇಂದಿರಾ ಗಾಂಧಿಗೆ ಉತ್ತರಿಸಲು ಯಾವ ದಾರಿಯೂ ಇರುವುದಿಲ್ಲ. ಜೈಲಿನಲ್ಲಿ ಬಾಳಾಸಾಹೇಬರು ಇತರರೊಂದಿಗೆ ತಾನೊಬ್ಬ ದೊಡ್ಡ ಮನುಷ್ಯನ ರೀತಿಯಲ್ಲಿ ನಡೆದು ಕೊಳ್ಳಲಿಲ್ಲವೆಂದು ಅವರ ಜೈಲಿನ ಸಹಪಾಠಿಗಳು ಹೇಳುತ್ತಾರೆ.

ಇತರರು ಬಳಸಿದ ತಟ್ಟೆ, ಲೋಟ, ಪಾತ್ರೆಗಳನ್ನೇ ಬಾಳಾಸಾಹೇಬರೂ ಕೂಡ ಬಳಸುತ್ತಿದ್ದರಂತೆ, ಇತರರಂತೆ ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳು ತ್ತಿದ್ದರಂತೆ, ತಮ್ಮ ತಟ್ಟೆ ಹಾಗೂ ಲೋಟವನ್ನು ತಾವೇ ತೊಳೆದುಕೊಳ್ಳುತ್ತಿದ್ದರಂತೆ, ತಮ್ಮ ಸರಳತೆಯ ಮೂಲಕ ಇತರರಿಗೆ ಮಾದರಿಯಾಗಿದ್ದರೆಂದು
ಹೇಳುತ್ತಾರೆ. ಜೈಲಿನಲ್ಲಿ ‘ಜನತಾ ಪಕ್ಷ’ದ ಸ್ಥಾಪನೆಯ ಬಗ್ಗೆ ಚರ್ಚೆಗಳು ಶುರುವಾಗಿದ್ದವು, ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವನ್ನು ಅಧಿಕಾರಕ್ಕೆ ತಂದು ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಯನ್ನು ಅಂತ್ಯಗೊಳಿಸಬೇಕೆಂಬ ಉದ್ದೇಶದಿಂದ ಮುಂದಿನ ಚುನಾವಣೆಯಲ್ಲಿ ಜನತಾ ಪಕ್ಷವು ಚುನಾ ವಣೆಗೆ ನಿಲ್ಲಬೇಕೆಂಬ ನಿರ್ಧಾರಕ್ಕೆ ಬರಲಾಗಿತ್ತು, ವಿವಿಧ ಪಕ್ಷಗಳ ಜತೆಗಿನ ಮೈತ್ರಿ ಕೂಟದ ಒಡಂಬಡಿಕೆಯ ಕರಡು ಪತ್ರವನ್ನು ಜೈಲಿನಲ್ಲಿಯೇ ಅಂತಿಮಗೊಳಿಸಲಾಗಿತ್ತು.

ಒಡಂಬಡಿಕೆಯ ಕರಡು ಪ್ರತಿಯನ್ನು ಮೊರಾರ್ಜಿ ದೇಸಾಯಿ ಹಾಗೂ ಜೋಶಿಯವರಿಗೆ ಕಳುಹಿಸಲಾಯಿತು. ಅವರುಗಳ ಸಲಹೆ ಪಡೆದು ಬಾಳಾಸಾಹೇಬರಿಗೆ ಕರಡು ಪ್ರತಿಯನ್ನು ಕಳುಹಿಸಲಾಯಿತು. ಕರಡು ಪ್ರತಿಯನ್ನು ಜೈಲಿನಲ್ಲಿದ್ದಂಥ ಸುಮಾರು 12 ವಕೀಲರ ಜತೆಗೆ ಸುಮಾರು ನಾಲ್ಕು ತಿಂಗಳುಗಳ ಕಾಲ ಚರ್ಚಿಸಿ ಬಾಳಾಸಾಹೇಬರು ಅಂತಿಮ ಕರಡು ಪ್ರತಿಯನ್ನು ‘ಮೊರಾರ್ಜಿ ದೇಸಾಯಿ’ಯವರಿಗೆ ಕಳುಹಿಸಿದರೆಂದು ಅವರ ಜತೆ ಜೈಲಿನಲ್ಲಿದ್ದಂಥ ಸಹಪಾಠಿಯೊಬ್ಬರು ಹೇಳಿದ್ದಾರೆ. ಅಂತಿಮ ಕರಡನ್ನು ಇತರ ಪಕ್ಷದವರ ಜತೆ ಚರ್ಚಿಸಿ ಮೊರಾರ್ಜಿ ದೇಸಾಯಿ ಅಂತಿಮ ಒಡಂಬಡಿಕೆ ಪತ್ರವನ್ನು ಸಿದ್ದಪಡಿಸಿದ್ದರು. ಇದೇ ಸಮಯದಲ್ಲಿ ಇಂದಿರಾ ಗಾಂಧಿಯ ಬೇಹುಗಾರಿಕಾ ತಂಡವು ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗುವುದು ನಿಶ್ಚಿತವೆಂದು ಹೇಳಿತ್ತು, ಇಂದಿರಾಗಾಂಧಿ ಹೇರಿದ್ದಂಥ ತುರ್ತು ಪರಿಸ್ಥಿತಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿಯವರ ಮೇಲೆ ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸುವ ಒತ್ತಡವಿತ್ತು. ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳು
ಭಾರತದಲ್ಲಿ ನಡೆಯುತ್ತಿದ್ದಂಥ ಪ್ರಜಾಪ್ರಭುತ್ವದ ಕಗ್ಗೊಲೆಯ ಬಗ್ಗೆ ಸದಾ ವರದಿ ಮಾಡುತ್ತಿದ್ದವು. ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಇಂದಿರಾಗಾಂಧಿಗೆ ಸೋಲಿನ ಭಯ ಕಾಡತೊಡಗಿತ್ತು, ಸಂಘವು ‘ಜನತಾ ಪಕ್ಷ’ಕ್ಕೆ ಬೆಂಬಲ ಸೂಚಿಸಿದರೆ ತನ್ನ ಸೋಲು ಖಚಿತವೆಂಬುದು ಆಕೆಗೆ ತಿಳಿದಿತ್ತು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಪ್ರಚಾರಕರೊಬ್ಬರಿಗೆ ಕೆಲವು ಸರಕಾರಿ ಅಧಿಕಾರಿಗಳ ಮೂಲಕ ಒಂದು ಸಂದೇಶವನ್ನು ಕಳುಹಿಸಲಾಗಿತ್ತು. ಸಂಘವು ‘ಜನತಾ ಪಕ್ಷ’ಕ್ಕೆ ನೀಡಿರುವ ಬೆಂಬಲದಿಂದ ದೂರ ಉಳಿಯದಿದ್ದರೆ ಸರಕಾರ ಹೇರಿರುವ ‘ನಿಷೇಧ’ವನ್ನು ಹಿಂಪಡೆಯುವುದಿಲ್ಲ, ಜನರ ನಡುವೆ ಸಂಘಕ್ಕೆ ವಿರೋಧವಿದ್ದು ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುತ್ತದೆ ಆಗ ತೆರೆಯ ಹಿಂದೆ ಕೆಲಸ ಮಾಡುತ್ತಿರುವ ಸ್ವಯಂಸೇವಕರನ್ನು ಬಂಧಿಸಲಾಗುವುದು, ಆದ್ದರಿಂದ ಅವರ ಕುಟುಂಬಗಳಿಗೆ ತೊಂದರೆ ಯಾಗುತ್ತದೆ, ಇದೆಲ್ಲವೂ ಬೇಡವೆಂದರೆ ಸಂಘವು ‘ಜನತಾ ಪಕ್ಷ’ದಿಂದ ದೂರ ಉಳಿಯಬೇಕು.

ಬೆದರಿಕೆಗೆ ಬಗ್ಗದ ಸಂಘವು, ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ಹಿಂದೆ ಒಮ್ಮೆ ಸಂಘವು ತನ್ನ ಸಹಕಾರವನ್ನು ನೀಡಲು ಮುಂದೆ ಬಂದಾಗ
ಬೇಡವೆಂದಿರಿ, ಈಗ ಕಾಲ ಮಿಂಚಿಹೋಗಿದೆ. ತುರ್ತು ಪರಿಸ್ಥಿತಿಯ ಸಮಸ್ಯೆಯನ್ನು ಚುನಾವಣೆಯ ಮೂಲಕವೇ ಬಗೆಹರಿಸಬೇಕೆಂದು ತೀರ್ಮಾನಿಸಿಯಾಗಿದೆ ಯೆಂಬ ಸ್ಪಷ್ಟ ಸಂದೇಶವನ್ನು  ರವಾನಿಸಿಯಾಗಿತ್ತು.

ಅಪ್ಪಿ ತಪ್ಪಿ ಚುನಾವಣೆಯನ್ನು ‘ಜನತಾ ಪಕ್ಷ’ವು ಸೋತು, ಸಂಘದ ಮೇಲೆ ನಿಮ್ಮ ಸೇಡನ್ನು ಮುಂದುವರಿಸಿದರೆ ನಮ್ಮ ಸ್ವಯಂ ಸೇವಕರು ಹೋರಾಟವನ್ನು ಮುಂದುವರಿಸಲು ತಯಾರಾಗಿದ್ದರೆಂಬ ಸಂದೇಶವನ್ನೂ ಸಹ ಕಳುಹಿಸಲಾಗಿತ್ತು. ‘ಸಂಘ’ವು ತನ್ನ ಮೇಲಿನ ನಿಷೇಧದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಭಾರತ ದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತಿತ್ತು. ‘ಜನತಾ ಪಕ್ಷ’ವು ತನ್ನ ಪ್ರಣಾಳಿಕೆಯಲ್ಲಿ ’ಸಂಘದ ಮೇಲಿನ ನಿಷೇಧವನ್ನು ತೆಗೆಯು ತ್ತೇವೆ’ ಎಂದು ಹಾಕಲು ಮುಂದಾದಾಗ ಬಾಳಾಸಾಹೇಬ್ ಬೇಡವೆಂದಿದ್ದರು, ಸಂಘದ ಕೆಲಸವೇನಿದ್ದರೂ ದೇಶವನ್ನು ಸರ್ವಾಧಿಕಾರಿಯಿಂದ ಮುಕ್ತ ಗೊಳಿಸಿ ಪ್ರಜಾಪ್ರಭುತ್ವವನ್ನು ಪುರ್ನ ನಿರ್ಮಾಣ ಮಾಡುವುದೆಂದಿದ್ದರು.

ಇಷ್ಟು ದೊಡ್ಡ ಹೋರಾಟದ ಫಲವಾಗಿ ದೇಶದಲ್ಲಿ ಸರ್ವಾಧಿಕಾರಿಯ ಆಡಳಿತ ಅಂತ್ಯವಾಯಿತು, ಪ್ರಜಾಪ್ರಭುತ್ವ ಪುರ್ನ ಸ್ಥಾಪಿತವಾಯಿತು. ‘ಜನತಾ ಪಕ್ಷ’ವು ಅಽಕಾರಕ್ಕೆ ಬಂದಿತ್ತು, ಸುಮಾರು 30 ವರ್ಷಗಳ ಬಳಿಕ ಭಾರತದಲ್ಲಿ ಕಾಂಗ್ರೆಸ್ಸೇತರ ಸರಕಾರವು ಅಧಿಕಾರಕ್ಕೆ ಬಂದಿತ್ತು. 21 ತಿಂಗಳುಗಳ ನಂತರ
‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಮೇಲಿನ ನಿಷೇಧವನ್ನು ನೂತನ ಸರಕಾರ ಹಿಂಪಡೆಯಿತು, ಬಾಳಾಸಾಹೇಬರು ಜೈಲಿನಿಂದ ಹೊರಬಂದರು ಯಥಾ ಪ್ರಕಾರ ತಮ್ಮ ಸಂಘದ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಘವು ತಮಗೆ ನೀಡಿದ್ದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಕೆಲಸ ಮಾಡಿದರು.

Leave a Reply

Your email address will not be published. Required fields are marked *