Thursday, 19th September 2024

ಕಾಶ್ಮೀರ ಭಾರತದಲ್ಲಿ ಲೀನವಾದಾಗ ಅಂಬೇಡ್ಕರ್ ನೆನಪಾದರು.

ಅಭಿಪ್ರಾಯ

ಕುಮಾರ್ ಶೇಣಿ, ರಾಜ್ಯಶಾಸ್ತ್ರ ಉಪನ್ಯಾಾಸಕರು, ಪುತ್ತೂರು 

ಮೋದಿ ಸರಕಾರದ ಎರಡನೇ ಅವಧಿಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ ಅನ್ವಯ ಜಮ್ಮು ಕಾಶ್ಮೀರಕ್ಕೆೆ ನೀಡಲಾದ ವಿಶೇಷ ಸ್ಥಾಾನಮಾನವನ್ನು ಕೇಂದ್ರ ಸರಕಾರ ರದ್ದು ಮಾಡಿದ್ದು ಐತಿಹಾಸಿಕ ನಿರ್ಣಯ.

‘ಕಾಶ್ಮೀರದ ಗಡಿಯನ್ನು ಭಾರತ ರಕ್ಷಿಸಬೇಕೆನ್ನುತ್ತೀರಿ. ನಿಮಗೆ ನಾವು ರಸ್ತೆೆ ಮಾಡಿಕೊಡಬೇಕು. ನಾವೇ ಆಹಾರ ಒದಗಿಸಬೇಕು. ಆಡಳಿತದಲ್ಲಿ ಉಳಿದ ಭಾರತದೊಡನೆ ಸಮಾನ ಸ್ಥಾಾನಮಾನ ಇರಬೇಕೆನ್ನುತ್ತೀರಿ. ಭಾರತವು ಕಾಶ್ಮೀರದ ಆಂತರಿಕ ವಿಷಯದಲ್ಲಿ ತಲೆ ಹಾಕಬಾರದೆಂದರೆ ಏನು ಅರ್ಥ. ಉಳಿದ ಪ್ರಾಾಂತ್ಯಗಳ ಭಾರತೀಯರಿಗೆ ಕಾಶ್ಮೀರದಲ್ಲಿ ಯಾವ ಹಕ್ಕು ಇರಬಾರದೆಂದರೆ ನಿಮ್ಮದು ವಿದೇಶವೇ? ಈ ಬೇಡಿಕೆಗಳಿಗೆ ಒಪ್ಪಿಿಗೆ ನೀಡಿ, 370ನೇ ಬರೆಯುದೆಂದರೆ, ಅದು ದೇಶದ್ರೋಹ. ರಾಷ್ಟ್ರದ ಕಾನೂನು ಮಂತ್ರಿಿಯಾಗಿ ನಾನಿದನ್ನು ವಿರೋಧಿಸುತ್ತೇನೆ. ಎಂದೂ ಒಪ್ಪಲಾರೆ.’

ಇದು ಡಾ. ಬಿ. ಆರ್. ಅಂಬೇಡ್ಕರ್ ಅವರು ಕಾಶ್ಮೀರದ ಶೇಖ್ ಅಬ್ದುಲ್ಲಾಾರಿಗೆ ಹೇಳಿದ ಮಾತುಗಳು. ಕಾಶ್ಮೀರಕ್ಕೆೆ ವಿಶೇಷ ಪ್ರಾಾತಿನಿಧ್ಯವನ್ನು ನೀಡುವ 370ನೇ ವಿಧಿಯನ್ನು ಭಾರತದ ಸಂವಿಧಾನದಲ್ಲಿ ಸೇರಿಸಬೇಕು ಎಂದು ಶೇಖ್ ಅಬ್ದುಲ್ಲಾಾ ಹೇಳಿದಾಗ ಅಂಬೇಡ್ಕರ್ ಪ್ರತಿಕ್ರಿಿಯೆ ಇದಾಗಿತ್ತು ಎಂದು ಅನೇಕ ರಾಜಕೀಯ ಚಿಂತಕರು ಹೇಳುತ್ತಾಾರೆ. ಅಂಬೇಡ್ಕರ್ ಕಾಶ್ಮೀರದ 370ನೇ ವಿಧಿಗೆ ಸಂಪೂರ್ಣವಾಗಿ ವಿರೋಧಿಸಿದ್ದರು. ಎಂದು ಸಾಲುಗಳಲ್ಲಿ ತಿಳಿದು ಬರುತ್ತದೆ. ಆದರೆ ನೆಹರೂ, ಅಂಬೇಡ್ಕರ್ ಅವರ ಅಭಿಪ್ರಾಾಯಗಳನ್ನು ಬದಿಗೆ ಸರಿಸಿ, ಕಾಶ್ಮೀರದಲ್ಲಿ 370ನೇ ವಿಧಿಯನ್ನು ಜಾರಿಗೊಳಿಸಿಬಿಟ್ಟರು. ಭೂಲೋಕದ ಸ್ವರ್ಗ ಎನಿಸಿಕೊಂಡಿದ್ದ ಕಾಶ್ಮೀರ, ಪ್ರತ್ಯೇಕತಾವಾದಿಗಳ ಸ್ವರ್ಗ ಎಂದುಕೊಳ್ಳುವ ಮಟ್ಟಿಿಗೆ ಬದಲಾಗಿಬಿಟ್ಟಿಿತು.

ಕಾಶ್ಮೀರ ವಿಚಾರದಲ್ಲಿ ಮಾತ್ರವಲ್ಲದೇ, ಇತರ ಅನೇಕ ವಿಚಾರಗಳಲ್ಲಿ ಅಂಬೇಡ್ಕರ್ ತಮ್ಮ ಅಭಿಪ್ರಾಾಯಗಳನ್ನು ಮಂಡಿಸಿದ್ದರು. ಅದು ಹಲವು ಸಲ, ಕಾಂಗ್ರೆೆಸ್ ವಿರೋಧಿ ವಿಚಾರಧಾರೆಯಾಗಿಯೂ ಬದಲಾಗುತ್ತಿಿತ್ತು. ಮುಖ್ಯವಾಗಿ ದೇಶ ವಿಭಜನೆಯ ವಿಚಾರದಲ್ಲಿ ಅಂಬೇಡ್ಕರ್, ದ್ವಿಿ ರಾಷ್ಟ್ರ ಸಿದ್ಧಾಾಂತವನ್ನು ಬಲವಾಗಿಯೇ 1940ರ ಕಾಲಘಟ್ಟದಲ್ಲಯೇ ಇದನ್ನು ಅಂಬೇಡ್ಕರ್, ತಮ್ಮ ‘ಥಾಟ್‌ಸ್‌ ಆನ್ ಪಾಕಿಸ್ತಾಾನ್’ ಪುಸ್ತಕದಲ್ಲಿ ಇದನ್ನು ತಿಳಿಸುತ್ತಾಾರೆ. ಹಿಂದೂ-ಮುಸ್ಲಿಿಂ ಈ ದೇಶದೊಳಗೆ ಏಕತೆಯಿಂದ ಬಾಳಲು ಸಾಧ್ಯವಿಲ್ಲ. ಆದ್ದರಿಂದ ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದರೆ, ವಿಭಜನೆಗೂ ಮೊದಲೇ ಜನಸಂಖ್ಯೆೆ ವಿನಿಮಯವಾಗಬೇಕು. ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದ್ದರು.

1940ರಲ್ಲಿ ಮಹಮ್ಮದ್ ಆಲಿ ಜಿನ್ನಾಾ ಕೂಡ, ಮುಸ್ಲಿಿಂ ಲೀಗ್‌ನ ಶೃಂಗ ಸಭೆಯನ್ನು ಉದ್ದೇಶಿಸಿ ಇದೇ ಮಾತುಗಳನ್ನು ಹೇಳುತ್ತಾಾರೆ. ಹಿಂದೂ ಮತ್ತು ಮುಸ್ಲಿಿಂ ಎರಡು ಪ್ರತ್ಯೇಕ ನಾಗರಿಕತೆಗಳು. ಆದ್ದರಿಂದ ಈ ದೇಶದ ಒಳಗೆ ಎರಡೂ ನಾಗರಿಕತೆಗಳು ಸಮ್ಮಿಿಲನವಾಗುವುದು ಸಾಧ್ಯವಿಲ್ಲ. ಆದಕಾರಣ ಪ್ರತ್ಯೇಕ ರಾಷ್ಟ್ರದ ಅವಶ್ಯಕತೆ ಎಂದರು. ಈ ಮಾತುಗಳು ಮುಸ್ಲಿಿಮರ ಮನವೊಲಿಸಲೋ? ಅಥವಾ ಸ್ವಾಾರ್ಥ ರಾಜಕಾರಣವೋ? ಎಂಬುದು ಇಂದಿಗೂ ಸೃಷ್ಟವಾಗಿಲ್ಲ. ಯಾಕೆಂದರೆ ಅದೇ ಮಹಮ್ಮದ್ ಆಲಿ ಜಿನ್ನಾಾ ಪಾಕಿಸ್ತಾಾನ ರಚನೆ ಆದ ನಂತರ ಪಾಕಿಸ್ತಾಾನವನ್ನು ಜಾತ್ಯತೀತ ರಾಷ್ಟ್ರ ಎಂದು ಘೋಷಿಸುತ್ತಾಾರೆ.

ಆಂಬೇಡ್ಕರ್ ಈ ಎಲ್ಲಾಾ ಆಲೋಚನೆಗಳು ಕಾಂಗ್ರೆೆಸ್ ವಿರೋಧಿಯಾಗಿ ಕಾಣತೊಡಗಿದವು. ಮುಖ್ಯವಾಗಿ 1947ರ ವಿಭಜನೆಯವರೆಗೆ, ಕಾಂಗ್ರೆೆಸ್ಸಿಿನ ಅನೇಕ ಮುಖಂಡರು ದ್ವಿಿ ರಾಷ್ಟ್ರ ಸಿದ್ಧಾಾಂತದ ವಿರೋಧಿಸುತ್ತಲೇ ಇದ್ದರು. ಕೊನೆ ಕ್ಷಣದಲ್ಲಿ ವಿಭಜನೆಗೆ ಒಪ್ಪಿಿಕೊಂಡರು. ಇದು 1947ರಲ್ಲಿ ಒಂದು ದೊಡ್ಡ ಹಿಂಸಾಚಾರಕ್ಕೆೆ ಕಾರಣವಾಯಿತು ಎಂಬುದು ಕಟು ಸತ್ಯ. ಇವೆಲ್ಲವನ್ನೂ ಗಮನಿಸಿದ ಅಂಬೇಡ್ಕರ್ ಅವರಿಗೆ 370ನೇ ವಿಧಿ ಮತ್ತೊೊಂದು ಆವಾಂತರವನ್ನು ಸೃಷ್ಟಿಿಸುತ್ತದೆ ಎಂಬುದು ಅರಿವಾಗಿತ್ತು. ಅದಕ್ಕಾಾಗಿಯೇ 370ನೇ ವಿಧಿಯನ್ನು ಬಲವಾಗಿ ವಿರೋಧಿಸಿದ್ದರು. ಆದರೆ, ಅವರ ವಿರೋಧದ ನಡುವೆಯೇ 370ನೇ ವಿಧಿ ಜಾರಿಗೊಳಿಸಲಾಯಿತು. ಸಂಸತ್ತಿಿನ ಆ ಸಭೆಗೆ ಅಂಬೇಡ್ಕರ್

(ಯಾವಾಗ ಕಾಶ್ಮೀರದಲ್ಲಿ 370ನೇ ವಿಧಿ ಜಾರಿಯಾಯಿತೋ, ಕಾಶ್ಮೀರದ ಮೇಲಿನ ಭಾರತದ ಹಿಡಿತ ಸಡಿಲಗೊಂಡಿತು. ಉಳಿದ ಭಾರತೀಯರಿಗೆ ಕಾಶ್ಮೀರ ಒಂದು ವಿದೇಶ ಎಂಬ ಭಾವನೆ ಬರುವಂತೆ ನಿಯಮಗಳನ್ನು ಜಾರಿ ಮಾಡಲಾಯಿತು. ಉಳಿದ ಭಾರತೀಯರ ಎಲ್ಲಾಾ ಹಕ್ಕುಗಳನನ್ನು, ಕಾಶ್ಮೀರದಲ್ಲಿ ತಡೆಹಿಡಿಯಲಾಯಿತು. ಕಾಶ್ಮೀರದಲ್ಲಿ ಯಾವುದೇ ಆಸ್ತಿಿಯನ್ನು ಇತರರು ಖರೀದಿ ಮಾಡುವಂತಿಲ್ಲ ಎಂಬಂತಹ ಅನೇಕ ಕಾನೂನುಗಳನ್ನು ಜಾರಿ ಮಾಡಲಾಯಿತು.)

ನಂತರದ ಏಳು ದಶಕಗಳು ಕಾಶ್ಮೀರ ಅನೇಕ ಬದಲಾವಣೆಗಳನ್ನು ಕಂಡಿತು. ಕಾಶ್ಮೀರದ ಅಭಿವೃದ್ಧಿಿಗಾಗಿ 370ನೇ ವಿಧಿ ಅದರಿಂದ ಕಾಶ್ಮೀರಕ್ಕೆೆ ಹಾನಿಯಾದದ್ದೇ ಜಾಸ್ತಿಿ. ಕಾಶ್ಮೀರದಲ್ಲಿ ಭಾರತ ವಿರೋಧಿ ಘೋಷಣೆಗಳು ಕೇಳತೊಡಗಿದವು. ರಕ್ಷಣಾ ಸಿಬ್ಬಂದಿಗಳ ಮೇಲೆ ಕಲ್ಲಿನ ತೂರಾಟ ನಡೆಯತೊಡಗಿತು. ಸ್ವಘೋಷಿತ ಮಾನವ ಹಕ್ಕುಗಳ ಹೋರಾಟಗಾರರು ಅದನ್ನು ಸಮರ್ಥಿಸಿಕೊಂಡರು. ಕಾಶ್ಮೀರ ಪಾಕಿಸ್ತಾಾನಕ್ಕೆೆ ಸೇರಬೇಕು ಎಂಬ ವಾದ, ಭಾರತದ ಒಳಗಡೆಯಿಂದಲೇ ಕೇಳಬರತೊಡಗಿತು. ಪಾಕ್ ಪ್ರಾಾಯೋಜಿತ ಪ್ರತ್ಯೇಕತಾ ಹೋರಾಟ ಜೋರಾಗಿ ನಡೆಯತೊಡಗಿತು. ಯಾವಾಗ ಮೋದಿ ಸರಕಾರ ಚಾಲ್ತಿಿಗೆ ಬಂತೋ, ಇದೆಲ್ಲದರ ಸದ್ದಡಗಿತು.

(ಕಾಶ್ಮೀರದಲ್ಲಿ ಹೆಚ್ಚಿಿನ ಅಧಿಕಾರದಲ್ಲಿ ಇದ್ದದ್ದು ಅಬ್ದುಲ್ಲಾಾ ಕುಟುಂಬವೇ. ಆದರೆ, 370ನೇ ವಿಧಿಯ ರದ್ದತಿಯ ಕುರಿತು ಚರ್ಚೆಯಾಯಿತೋ, ಕಾಶ್ಮೀರದ ರಾಜಕಾರಣಿಗಳು, ತಮ್ಮ ಅಸ್ತಿಿತ್ವದ ಕುರಿತು ಚಿಂತಿಸಲಾರಂಬಿಸಿದರು. ಅದಕ್ಕಾಾಗಿ ಹಲವಾರು ವಾದಗಳನ್ನು ಮಂಡಿಸತೊಡಗಿದರು. 370ನೇ ವಿಧಿಯನ್ನು ತೆಗೆದು ಹಾಕಲು ಸಂವಿಧಾನ ರಚನಾ ಸಮಿತಿಯಿಂದ ಮಾತ್ರ ಸಾಧ್ಯ ಎಂಬ ಮೂರ್ಖತನದ ಮಾತುಗಳು ಬರತೊಡಗಿದವು.

2014ರಲ್ಲಿ ಮೊದಲ ಬಾರಿಗೆ ಮೋದಿ ಸರಕಾರ ಅಧಿಕಾರಕ್ಕೆೆ ಬಂದಾಗ ಕಾಶ್ಮೀರದ ದಿಕ್ಕು ಬದಲಾಗಲಿದೆ ಎಂದು ಹಲವರು ಅಂದಾಜಿಸಿದ್ದರು. ಆದರೆ, ಮೋದಿ ಸರಕಾರದ ಎರಡನೇ ಅವಧಿಗೆ ಕಾಯಬೇಕಾಯಿತು. ಗೃಹಮಂತ್ರಿಿ ಅಮಿತ್ ಕಾಶ್ಮೀರದ 370ನೇ ವಿಧಿಯ ರದ್ದತಿಯ ಕುರಿತು ಘೋಷಿಸುತ್ತಿಿದ್ದಂತೆ, ಸಂಸತ್ತಿಿನಲ್ಲಿ ಕಾರಣಗಳೇ ಇಲ್ಲದೇ ವಿರೋಧಗಳು ಹುಟ್ಟಿಿಕೊಂಡವು. ಅಮಿತ್ ಶಾ ಬಳಿ 370ನೇ ಸಾಂವಿಧಾನಿಕ ವಿಧಿ ರದ್ದತಿಗೆ ನೂರಾರು ಕಾರಣಗಳು ಇದ್ದವು. ಆದರೆ, ಅದೆಲ್ಲವನ್ನೂ ಮೀರಿ ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಾಡಳಿತ ಪ್ರದೇಶವಾಗಿ ಘೋಷಿಸಿತು.)

370ನೇ ವಿಧಿ ರದ್ದಾಾದ ತಕ್ಷಣ, ಅದುವರೆಗೆ ಪರೋಕ್ಷವಾಗಿ ಭಾರತ ವಿರೋಧಿಗಳಿಗೆ ಸಹಾಯ ಮಾಡುತ್ತಿಿದ್ದ, ಪಾಕ್ ನೇರವಾಗಿ ಭಾರತದ ಈ ನಡೆಯನ್ನು ವಿರೋಧಿಸತೊಡಗಿತು. ಇಮ್ರಾಾನ್‌ಖಾನ್ ವಿಶ್ವಮಟ್ಟದಲ್ಲಿ ಭಾರತವನ್ನು ಅಪರಾಧಿಯನ್ನಾಾಗಿಸುವ ಪ್ರಯತ್ನವು ನಡೆಯಿತು. ಈ ಎಲ್ಲಾಾ ಪ್ರಯತ್ನಗಳು ಫಲಕೊಡಲಿಲ್ಲ. ಇದೀಗ ಲೆಫ್ಟಿಿನೆಂಟ್ ಗವರ್ನರ್‌ಗಳ ಮೂಲಕ ಕೆಲಸ ಆರಂಭಗೊಂಡಿದೆ. ದೇಶ ವಿರೋಧಿಗಳನ್ನು ಮಟ್ಟಹಾಕುವುದು ಮೊದಲ ಕೆಲಸ ಆಗಬೇಕು ಅಷ್ಟೇ.

ಈ ಎಲ್ಲಾಾ ಬದಲಾವಣೆಗಳು ಆದಾಗ ಅಂಬೇಡ್ಕರ್ ನೆನಪಾದರು. ಇತರ ಎಲ್ಲಾಾ ವಿಚಾರಗಳಿಗಿಂತ ದೇಶ ಮೊದಲು ಎಂಬ ‘ಅಂಬೇಡ್ಕರ್’ ಧೋರಣೆ ಶ್ರೇಷ್ಠ ಎನಿಸತೊಡಗಿತು. ಅಂಬೇಡ್ಕರ್ ಅವರ ಚಿಂತನೆಗಳನ್ನು ಬೆಂಬಲಿಸುವ ಅನೇಕ ಜನರು ಇಂದು 370ನೇ ವಿಧಿ ರದ್ದತಿಯನ್ನು ವಿರೋಧಿಸತೊಡಗಿದ್ದಾಾರೆ. ಅಂಬೇಡ್ಕರ್ ಹೇಳಿದ ಮಾತುಗಳನ್ನು ನೆಹರೂ ಕೇಳಿದ್ದರೆ, ಕಾಶ್ಮೀರದಲ್ಲಿ 370ನೇ ವಿಧಿ ಜಾರಿಯಾಗುತ್ತಲೇ ಇರಲಿಲ್ಲ. ಕಾಶ್ಮೀರದ ‘ಏಳು ದಶಕಗಳ ಇತಿಹಾಸ’ ಬೇರೆ ರೀತಿಯೇ ಇರುತ್ತಿಿತ್ತು ಎಂಬುದು ಕಟುಸತ್ಯ. 370ನೇ ವಿಧಿಗೆ ಸಮ್ಮತಿಸದೇ ಇದ್ದರೆ, ಈ ಎಲ್ಲಾಾ ಆವಾಂತರಗಳು ನಡೆಯುತ್ತಿಿರಲೇ ಇಲ್ಲ. ಕಾಶ್ಮೀರ ಭೂಲೋಕದ ಸ್ವರ್ಗವಾಗಿ ನಳನಳಿಸುತ್ತಿಿತ್ತು.

‘ಭಾರತ ಸರಕಾರ ಎಷ್ಟು ಶಕ್ತಿಿಯುತವಾಗಿ ಧೈರ್ಯದಿಂದ ಮುಂದುವರಿಯುತ್ತದೆ ಎಂಬುದರ ಮೇಲೆ ಭವಿಷ್ಯ ನಿಂತಿದೆ’. ನಮ್ಮ ಬಲದ ಮೇಲೆ ನಮಗೆ ನಂಬಿಕೆ ಇಲ್ಲದಿದ್ದರೆ ಒಂದು ಉಳಿಯುವ ಆರ್ಹತೆ ಇಲ್ಲ ಎಂದು ಸರದಾರ್ ವಲ್ಲಭಭಾಯಿ ಪಟೇಲರ ಭಾರತದ ಏಕೀಕರಣದ ಸಮಯದಲ್ಲಿ ಹೇಳಿದ್ದರು. ಬಹುಷ ಅವರ ಮಾತುಗಳು ಇಂದು ನಿಜವಾಗುತ್ತಿಿದೆ. ಭಾರತ ತನ್ನ ದಿಟ್ಟ ನಿರ್ಧಾರದಿಂದ ಕಾಶ್ಮೀರದಲ್ಲಿ ಬದಲಾವಣೆಯನ್ನು ತರುತ್ತಿಿದೆ. ‘ಉಕ್ಕಿಿನ ಮನುಷ್ಯನ ಜನ್ಮದಿನ’ದ ಸಮಯದಲ್ಲಿ ಕಾಶ್ಮೀರದಲ್ಲಿ ಒಂದು ಒಳ್ಳೆೆಯ ಬದಲಾವಣೆ ಆರಂಭಗೊಂಡಿದೆ. ಕಾಶ್ಮೀರ ಭೂಲೋಕದ ಸ್ವರ್ಗವಾಗಿ ಮಿಂಚಲಿ ಎಂಬುದು ಭಾರತೀಯರೆಲ್ಲರ ಹಾರೈಕೆ.

Leave a Reply

Your email address will not be published. Required fields are marked *