Tuesday, 3rd December 2024

ಕೇರಳ ಸ್ಟೋರಿಗಳಿಂದ ಕಾಪಾಡುವರ‍್ಯಾರು ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಒಂದು ಜಾಗೃತ ಎಚ್ಚರಿಕೆಯನ್ನು ಮಕ್ಕಳಲ್ಲಿ ಸೃಷ್ಟಿಸಿ ಮಕ್ಕಳೊಂದಿಗೆ ಪೋಷಕರ ಅಗೋಚರ ಅಸ್ತಿತ್ವವನ್ನು ಸದಾ ಇರಿ ಸಬೇಕು. ಅದಕ್ಕಾಗಿ ಮೊದಲು ತಾಯಿಯಾದವಳು ‘ಕಾಳಿ’ಯಾಗಬೇಕು. ಮಗಳನ್ನು ಓದಿಸಿ ಸರಸ್ವತಿಯನ್ನಾಗಿಸಿ, ಹೋದ ಮನೆಯಲ್ಲಿ ಲಕ್ಷ್ಮೀಯಾಗಿ ಬಾಳುವಂತೆ ಮಾಡಿ ಸಮಾಜದಲ್ಲಿ ಆಕೆಯನ್ನು ‘ಶಕ್ತಿ’ ಸ್ವರೂಪಿಣಿಯನ್ನಾಗಿಸಬೇಕು.

ದೆಹಲಿಯ ಜನನಿಬಿಡ ಪ್ರದೇಶ. ೨೦ ವಯಸ್ಸಿನ ಸಾಹಿಲ್ ಖಾನ್ ಎಂಬ ಮುಸ್ಲಿಂ ಯುವಕ, ೧೬ ವಯಸ್ಸಿನ ‘ಸಾಕ್ಷಿ’ ಎಂಬ ಹಿಂದೂ ಯುವತಿಯನ್ನು ಅದೆಷ್ಟು ಭಯಂಕರವಾಗಿ ಕೊಲೆಗೈದಿದ್ದನೆಂದರೆ ಕಲ್ಲುಹೊಡೆದು ಹೆಣ್ಣನ್ನು ಕೊಲ್ಲುವ ಐಸಿಸ್ ಉಗ್ರರನ್ನೇ ಅದು ನಾಚಿಸುವಂತಿತ್ತು. ಆಕೆಗೆ ಚಾಕುವಿನಿಂದ ೨೦ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಲ್ಲದೆ ಅಲ್ಲಿದ್ದ ಚಪ್ಪಡಿ ಕಲ್ಲನ್ನು ಎತ್ತಿ ಆಕೆಯ ಮೇಲೆ ಐದಾರು ಬಾರಿ ರಭಸ ವಾಗಿ ಎಸೆದಿದ್ದ.

ಒಮ್ಮೆ ಬಿಟ್ಟುಹೋಗಿ ವಾಪಸ್ ಬಂದು, ಮತ್ತೆ ಆಕೆಯ ಮೇಲೆ ಚಪ್ಪಡಿ ಎಸೆದು ವಿಕೃತಿ ಮೆರೆದಿದ್ದ. ಇದಕ್ಕಿಂತಲೂ ಭಯಾನಕ ದೃಶ್ಯ ಯಾವುದು ಗೊತ್ತೇ? ಅವನು ಇಷ್ಟೆಲ್ಲ ಮಾಡುತ್ತಿದ್ದರೂ, ಅಲ್ಲಿಯೇ ಓಡಾಡುತ್ತಿದ್ದ ಜನ, ಎರಡು ನಾಯಿಗಳು ಕಚ್ಚಾಡುತ್ತಿವೆ ಯೇನೋ ಎಂಬಂತೆ ನೋಡಿಕೊಂಡು ಸುಮ್ಮನೆ ಹೊಗಿದ್ದರು. ಆದರೆ, ಈ ಕ್ರೌರ್ಯವನ್ನು ಕಂಡ ನಾಯಿಯೊಂದು ಮಾತ್ರ
ಆತನೆಡೆ ಬೊಗಳಿತ್ತು. ಅಲ್ಲಿಗೆ ಸಮಾಜ, ಸಾರ್ವಜನಿಕರು, ಕಾನೂನು ಎಲ್ಲವೂ ಬದುಕಿದ್ದೂ ಸತ್ತಂತೆ.

ಒಬ್ಬ ಹೆಣ್ಣುಮಗಳನ್ನು ಈ ಪರಿ ಅಮಾನವೀಯವಾಗಿ ಹತ್ಯೆಮಾಡುವ ದೃಶ್ಯವನ್ನು ನೋಡಿ ಜಗತ್ತಿನಲ್ಲಿ ಆಕೆಯ ಹೆತ್ತವರು ಮಾತ್ರ ಗಾಬರಿಗೊಳ್ಳಬೇಕೇ ಹೊರತು ಉಳಿದವರಿಗೆ ಏನೂ ಅನಿಸುವುದಿಲ್ಲ. ಹೀಗಿದೆ ಇಂದಿನ ಸಮಾಜ. ಈ ಘಟನೆಗೆ ದೆಹಲಿ ಮುಖ್ಯಮಂತ್ರಿ ‘ಆಮ್ ಆದ್ಮಿ’ ಕೇಜ್ರಿವಾಲ್ ನೀಡಿದ ಪ್ರತಿಕ್ರಿಯೆಯನ್ನು ಗಮನಿಸಿ: ‘ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ
ಅವರೇ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಜವಾಬ್ದಾರಿ. ಇಲ್ಲಿ ಪೊಲೀಸರ ಭಯವಿಲ್ಲ. ಅಪರಾಧಿ ಗಳು ನಿರ್ಭೀತರಾಗಿ ದ್ದಾರೆ. ಏನಾದರೂ ಮಾಡಿ ಸರ್…?’ ಎಂದರು ಕೇಜ್ರಿವಾಲ್.

ಅಲ್ಲಿಗೆ, ಸರಕಾರ ಆಕೆಯ ಸಾವಿಗೆ ನ್ಯಾಯ ಒದಗಿಸುತ್ತದೆ ಎಂಬುದೇ ಹತ್ಯೆಯಾದಂತೆ. ಇನ್ನು ಸಾಕ್ಷಿ ಹತ್ಯೆಯನ್ನು ಖಂಡಿಸಿ ಯಾವ ಮಾನವಹಕ್ಕು ಪೀಡಿತರೂ, ನಟ-ನಟಿಯರೂ ಪೋಸ್ಟರ್ ಹಿಡಿದು ಪ್ರತಿಭಟಿಸಲಿಲ್ಲ. ಬಾಲಿವುಡ್‌ನ ಯಾವ ಪ್ರಭೃತಿ ಗಳೂ ಮೇಣದಬತ್ತಿ ಹಿಡಿದು ನಿಲ್ಲಲಿಲ್ಲ. ಟ್ವೀಟರ್‌ನಲ್ಲಿ ಟ್ರೆಂಡ್ ಆಗಲಿಲ್ಲ. ‘ಲದ್ದಿಜೀವಿ’ಗಳಾಗಲೀ, ಡೋಂಗಿ ಜಾತ್ಯತೀತರಾ ಗಲೀ, ಅರ್ಬನ್ ನಕ್ಸಲರಾಗಲೀ ಕೃತ್ಯವನ್ನು ಖಂಡಿಸಿ ಬೀದಿಗಿಳಿಯಲಿಲ್ಲ. ‘ಸೆಲೆಕ್ಟೆಡ್ ಐಟಂ’ ಪರ ಹೋರಾಟಗಾರರು, ಹಿಂಸಾ ಚೇತನಗಳು, ಕಿಶೋರ್, ರಘುದೀಕ್ಷಿತ್, ಬೀದಿನಾಯಿ ಸಾವಿಗೆ ಅಳುವ ರಮ್ಯಾ, ಆಸ್ಕಿಂಗ್ ಪ್ರಕಾಶ್ ರೈ, ಕಮಲ ಹಾಸನ್ ಹೀಗೆ ಇಂಥವರಾರೂ ಸೊಲ್ಲೆತ್ತಿಲ್ಲ.

ಸಮಾಜದ ಒಂದು ‘ಪ್ರಭಾವಿ ವರ್ಗ’ದ ಪಾಲಿಗೆ ಇಂಥ ಪ್ರಕರಣ ನಗಣ್ಯ. ಅದು ಹೋಗಲಿ, ರಾಹುಲ್ ಗಾಂಧಿಯಂಥ ಅಪ್ರತಿಮ(?) ನಾಯಕರಾಗಲಿ, ದೇಶವನ್ನು ಆಳಬೇಕೆಂಬ ಕನಸಿನಲ್ಲಿ ವಯಾಗ್ರ ನುಂಗಿ ಎದ್ದು ನಿಂತಿರುವ ಮಮತಾ, ನಿತೀಶ್, ಚಂದ್ರಶೇಖರ್‌ರಾವ್… ಇವರಾರೂ ಸತ್ತ ಸಾಕ್ಷಿಯ ದುಃಖಕ್ಕೆ ಸಾಕ್ಷಿಯಾಗಲಾರರು. ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಲವ್‌ಜೀಹಾದ್ ನಿಷೇಧ ಕಾಯಿದೆ ತಂದರೆ ಅದನ್ನೂ ರಿವರ್ಸ್ ಮಾಡುತ್ತಾರೆ.

ಇಂಥದರ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಲೆಂಬ ಉದ್ದೇಶದಿಂದಲೇ ‘ಕೇರಳ ಸ್ಟೋರಿ’ಸಿನಿಮಾ ಮಾಡಿದರೆ ಅದನ್ನೂ ಸರಕಾರ ಗಳೇ ಬ್ಯಾನ್ ಮಾಡುತ್ತವೆ. ಇನ್ಯಾರು ಕಾಪಾಡುತ್ತಾರೆ ಹಿಂದೂ ಹೆಣ್ಣುಮಕ್ಕಳನ್ನು? ಬುದ್ಧಿಜೀವಿಗಳ ಬಳಿ ಹೋಗಿ ಲವ್ ಜೀಹಾದ್‌ನಿಂದ ಮಗಳನ್ನು ಉಳಿಸಿಕೊಡಿ ಎಂದೇನಾದೂ ಕೇಳಿದರೆ ಅವರೇ ಮುಂದೆ ನಿಂತು ಅದೇ ಮುಸಲ್ಮಾನ ಹುಡುಗ ನೊಂದಿಗೆ ಮದುವೆ ಮಾಡಿಸಿ ಹನಿಮೂನ್ ಪ್ಯಾಕೇಜ್ ವ್ಯವಸ್ಥೆ ಮಾಡಿಬಿಡುತ್ತಾರೆ.

ಇಂಥ ಲವ್ ಜೀಹಾದ್‌ನ ಸಾವಿರಾರು ಪ್ರಕರಣಗಳು ನಡೆಯುತ್ತಿರುವಾಗ, ಕಾಶ್ಮೀರದಲ್ಲಿ ಲಕ್ಷಾಂತರ ಹಿಂದೂಗಳ ಅತ್ಯಾಚಾರ-ಹತ್ಯೆಯ ಹಸಿಹಸಿ ಸತ್ಯಗಳಿರುವಾಗ ಆಗೆಲ್ಲ ಇಲ್ಲದ ‘ಸೌಹಾರ್ಧ’ ಮನೋಭಾವ, ಅದನ್ನೇ ಸಿನಿಮಾ ಮಾಡಿ ತೋರಿಸಿದಾಗ ಮಾತ್ರ ಜಾಗೃತಗೊಂಡು ಬಿಡುತ್ತದೆ. ಹಿಂದೂಗಳು ಕೋಮುವಾದಿಗಳಾಗಿ ಬಿಡುತ್ತಾರೆ. ಲವ್ ಜೀಹಾದ್ ‘ಲೈವ್’ನಲ್ಲಿರುವು
ದನ್ನು ಕಂಡ ಯುವತಿಯ ಒಡಹುಟ್ಟಿದವರೋ, ಪರಿಚಿತರೋ ಆಕೆಗೆ ತಿಳಿಹೇಳಲು ಹೊರಟರೆ ಅಂಥವರ ಮೇಲೆ ನೈತಿಕ ಪೊಲೀಸ್‌ಗಿರಿ, ಕೋಮುವಾ ದಿಗಳೆಂಬ ಗೂಬೆ ಕೂರಿಸಿ ಅವರ ಮೇಲೂ ಕೇಸು ಜಡಿದು ಜೈಲು ಸೇರಿಸುವ ಸರಕಾರಗಳಿವೆ. ಇದೂ ಸಾಲದೆಂಬಂತೆ ಇಂಥ ಲವರ್‌ಗಳು ಬಿರುಸಾಗಿ ಸೇರುವ ಫೆಬ್ರವರಿ ೧೪ರ ಪ್ರೇಮಿಗಳ ದಿನವನ್ನು ನಾಲ್ಕು ಕತ್ತೆವಯಸ್ಸಿನ ಹೋರಾಟಗಾರರೇ ನಿಂತು ಬೆಂಬಲಿಸುತ್ತಾರೆ.

ಹೀಗೆ ಸಮಾಜವೇ ವ್ಯತಿರಿಕ್ತವಾಗಿರುವಾಗ ಅಮಾಯಕ ಹಿಂದೂ ಹೆಣ್ಣುಮಕ್ಕಳನ್ನು ‘ಕೇರಳ ಸ್ಟೋರಿ‘ಗಳಿಂದ ಕಾಪಾಡುವವ ರಾರು?  ಹತ್ಯೆಯಾದ ಸಾಕ್ಷಿಯ ಹೆತ್ತವರು ಈ ಹಿಂದೆ ಇಂಥದೇ ಪ್ರಕರಣಗಳಲ್ಲಿ ಕೊಲೆ ಆರೋಪಿಗಳಾಗಿ ಜೈಲು ಸೇರಿರು ವವರನ್ನು ಒಮ್ಮೆ ಭೇಟಿ ಮಾಡಿ ಬರಲಿ. ಜೈಲಲ್ಲಿ ಅವರೆಲ್ಲ ಮನೆಯಿಂದ ಬರುವ ಬಿರಿಯಾನಿ ತಿಂದು ಮಜಾ ಉಡಾಯಿಸುತ್ತ ಇರುವುದನ್ನು ಕಣ್ಣಾರೆ ಕಾಣಬಹುದು. ಅಲ್ಲಿಗೆ ಇಂಥ ಪಾಪಿಗಳಿಗೆ ಪ್ರಾಯಶ್ಚಿತ, ಪಶ್ಚಾತಾಪಗಳಿರಲಿ, ಕನಿಷ್ಠ ನೈಜ ಶಿಕ್ಷೆಯೂ ಇರುವುದಿಲ್ಲ. ಹೇಳಿಕೊಳ್ಳಲು ಕಾನೂನಿನ ಶಿಕ್ಷೆಯಷ್ಟೇ!.

ಇಂಥವರಿಗೆ ಗಲ್ಲುಶಿಕ್ಷೆ ಆಗುವುದರೊಳಗೆ ನೇಣಿನ ಕುಣಿಕೆಯ ಹಗ್ಗವೇ (ನ್ಯಾಯಾಂಗ ವ್ಯವಸ್ಥೆ) ಒಣಗಿ ಪುಸುಕಲಾಗಿ ಉದುರಿ ಹೋಗುತ್ತದಷ್ಟೇ! ಹೀಗಾಗಿ ಇಂದು ಹಿಂದೂ ಹೆಣ್ಣುಮಕ್ಕಳು ಹಾಳಾಗಿ ಹೋದರೆ ಕೇಳುವವರು ಅಥವಾ ಹಾಳಾಗದಂತೆ ತಡೆಯುವವರು ಯಾರೂ ಇಲ್ಲ. ಅದಕ್ಕೇ ಹೇಳಿದ್ದು ನಮ್ಮನಮ್ಮ ಮಗಳನ್ನು ನಾವೇ ಕಾಪಾಡಿಕೊಳ್ಳಬೇಕೆಂದು. ಹಾಗಂತ ಹತ್ಯೆಯಾದ ಸಾಕ್ಷಿ ‘ನೆಲನೋಡುಕುತ ಹೋಗಿ ಬರುವ’ ಮುಗ್ಧೆಯಲ್ಲ. (ವಿವೇಕ-ಸಾಮಾಜಿಕ ಜ್ಞಾನದಲ್ಲಿ ಆಕೆ ಮುಗ್ಧಳೇ) ೧೬ರ ಹರೆಯದ ಪ್ರೀತಿಯ ಬಲೆಗೆ ಬಿದ್ದು ಪಾಪಿ ಸಾಹಿಲ್ ಖಾನ್‌ಗೆ ಮರುಳಾದವಳು. ಆದರೆ ಇಲ್ಲೂ ವಂಚನೆ ಇಲ್ಲದಿಲ್ಲ, ಸಾಹಿಲ್ ತಾನು ಹಿಂದೂ ಹುಡುಗನಂತೆ ಬಿಂಬಿಸಿಕೊಂಡಿದ್ದು ವರದಿಯಾಗಿದೆ.

ನಂತರ ಆಕೆ (ಬಹುಶಃ ಕೇರಳ ಸ್ಟೋರಿ ಸಿನಿಮಾ ನೋಡಿ ಎಚ್ಚೆತ್ತುಕೊಂಡಿರಬೇಕು!) ಸಾಹಿಲ್‌ನನ್ನು ವಿರೋಧಿಸಿದ್ದಾಳೆ. ಇದರಿಂದ ಕ್ರುದ್ಧನಾದ ಸಾಹಿಲ್ ಈ ಪರಿ ಕ್ರೌರ್ಯಕ್ಕೆ ಮುಂದಾಗಿದ್ದು. ‘ಕೇರಳ ಸ್ಟೋರಿ’ಯ ಒಂದು ಸನ್ನಿವೇಶದಲ್ಲಿ ಲವ್
ಜೀಹಾದ್‌ಗೆ ಬಲಿಯಾದ ಹೀರೋಯಿನ್‌ಗಳಲ್ಲೊಬ್ಬಳು ತನ್ನ ಪೋಷಕರಿಗೆ ‘ನಿವ್ಯಾಕೆ ನನಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಗಳನ್ನು ಕಲಿಸಿ ನನ್ನನ್ನು ಸರಿಯಾಗಿ ತಿದ್ದಲಿಲ್ಲ’ ಎಂದು ಗೋಳಿಡುತ್ತಾಳೆ.

ನಮ್ಮಲ್ಲಿ ಪೋಷಕರು ಎಚ್ಚೆತ್ತುಕೊಳ್ಳಲೆಂದೇ ಅನೇಕ ನಾಣ್ಣುಡಿಗಳಿವೆ. ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ತಾಯಿಂತೆ ಮಗಳು ನೂಲಿನಂತೆ ಸೀರೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ, ಬೆಳೆದ ಮಗಳು ಸೆರಗಿನ ಕೆಂಡದಂತೆ..’ ಇಂಥ ಮಾತುಗಳನ್ನು ಹಿರಿಯರು ಅಷ್ಟಿಲ್ಲದೇ ಹೇಳಿದ್ದಾರೆಯೇ? ಜಗತ್ತಿನಲ್ಲಿ ಹೆಣ್ಣಿನ ಮೂಲವಿರುವುದೇ ನಮ್ಮ
ಭಾರತದಲ್ಲಿ. ಸಕಲ ಸೌಭಾಗ್ಯಗಳನ್ನು ಹೆಣ್ಣಿಗೆ ಹೋಲಿಸಿ ಪೂಜಿಸುವ ಸಂಸ್ಕೃತಿ ನಮ್ಮದು.

ಇಂದಿನ ‘ಮುಂದುವರೆದ’ ಯುವತಿಯರು ತೊಡುವ ವಸ್ತ್ರ ಯುವಕರನ್ನು ಪ್ರಚೋದಿಸುತ್ತವೆ ಎಂದು ಯಾವನಾದರು ಹೇಳಿದರೆ ಅದು ದೊಡ್ಡ ಯಡವಟ್ಟಾಗಿಬಿಡುತ್ತದೆ. ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಹಕ್ಕು, ಸ್ತ್ರೀ ಶೋಷಣೆ, ಪುರುಷ ದೌರ್ಜನ್ಯ ಎಂದೆಲ್ಲ ಅಬ್ಬರಿಸಿ
ಆಕೆಯ ವಸಕ್ಕಿಂತ ಈತನ ಹೇಳಿಕೆಯನ್ನೇ ಅಸಹ್ಯವಾಗಿಸುತ್ತದೆ ಸಮಾಜ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ’ ಎಂದು ಗೌರವಿಸುವ ಹಿಂದೂ ನಾರಿಯನ್ನು ಪ್ರಾಣಿಗಳಿಗೂ ಕೀಳಾಗಿ ಬಳಸಿಕೊಳ್ಳುವ ಮತಾಂಧರ ಲವ್ ಜೀಹಾದ್‌ ನಿಂದ ತಪ್ಪಿಸಿಕೊಳ್ಳಬೇಕೆಂದರೆ ಮೊದಲಿಗೆ ತಾಯಿಯಾದವಳು ಎಚ್ಚೆತ್ತುಕೊಳ್ಳಬೇಕು.

ಮಗಳಿಗೆ ಮನೆಯಲ್ಲಿಯೇ ಸರಿಯಾದ ಸಂಸ್ಕಾರ, ಸಾಂಸ್ಕೃತಿಕ ಪ್ರಜ್ಞೆ, ವಿವೇಚನೆ, ಪ್ರಪಂಚ ಜ್ಞಾನ, ಸಮಾಜದಲ್ಲಿನ ನಕಾರಾ ತ್ಮಕ ವಿಚಾರಗಳ ತಿಳಿವಳಿಕೆ, ಮತಾಂಧರ ಕುರಿತ ಅರಿವು ನೀಡಬೇಕು. ಹದಿಹರೆಯವೇನೋ ಮದವೇರಿದ ಕುದುರೆಯೇ. ಆದರೂ ಹಿಂದೆಲ್ಲ ಅಂತರ್ಜಾತೀಯ ಪ್ರೇಮಗಳಿದ್ದವೇ ಹೊರತು ಧರ್ಮಗಳ ನಡುವೆ ಒಂದು ಸ್ಪಷ್ಟ ಅಂತರ ವಿತ್ತು; ಎಚ್ಚರಿಕೆ ಇತ್ತು. ಧರ್ಮಾಂತರದ ವಿವಾಹ ಸಹನೀಯವಲ್ಲವೆಂಬ ಪರಿಜ್ಞಾನವಿತ್ತು.

ಸಾಮಾಜಿಕವಾಗಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಆದರೂ ಹಿಂದೂ ಕುಟುಂಬಗಳಿಗೆ ಅವರದ್ದೇ ಆದ ಪದ್ಧತಿ, ಸಂಪ್ರದಾಯ, ಆಚಾರ ವಿಚಾರಗಳಿರುತ್ತವೆ. ಹೆತ್ತವರನ್ನೇ ನಿರ್ಲಕ್ಷಿಸಿ ಮಗಳು ಮುಸಲ್ಮಾನ ವ್ಯಕ್ತಿಯೊಂದಿಗೆ ಓಡಿಹೋದರೆ ಯಾವ ಹಿಂದೂ ಕುಟುಂಬವೂ ಪಟಾಕಿ ಹೊಡೆದು ಸಹಿ ಹಂಚಿ ಸಂಭ್ರಮಿಸುವುದಿಲ್ಲ. ಇಂದು ವ್ಯವಸ್ಥಿತ ಲವ್‌ಜೀಹಾದ್ ಆಕ್ರಮಣದ ‘ಸಾಫ್ಟ ವೇರ್’ ಚಾಲನೆಗೊಂಡು ಹಿಂದೂ ಹೆಣ್ಣುಮಕ್ಕಳನ್ನು ಫ್ರಿಜ್ ನಲ್ಲಿ, ಸೂಟ್‌ಕೇಸ್‌ನಲ್ಲಿ, ಉಗ್ರರ ಕೇಂದ್ರಗಳಲ್ಲಿ ‘ಹಾರ್ಡ್‌ವೇರ್’ ನಂತೆ ಬಳಕೆಮಾಡುವ ಒಂದು ದೊಡ್ಡ ಜಾಲವೇ ‘ಆಕ್ಟಿವೇಟ್’ ಆಗಿದ್ದರೂ ಅದು ಮುಗ್ಧ ಹಿಂದೂ ಕುಟುಂಬಗಳ ಅನುಭವಕ್ಕೆ
ಬರುತ್ತಿಲ್ಲ. ಬಂದದ್ದು ಪಕ್ಕದ ಮನೆಯ ಕುಟುಂಬಕ್ಕೆ ಮಾತ್ರ; ‘ನಮಗಲ್ಲ’!!

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹೆಣ್ಣುಮಕ್ಕಳು, ಮುಸ್ಲಿಂ ಹುಡುಗನನ್ನು ಬಯಸುವಂತೆ ಪ್ರಚೋದಿಸುವ ಹೊಸಾ ‘ಥಿಯರಿ’ಯ ಆಕರ್ಷಣೆಗಳು, ರೀಲ್ಸ್‌ಗಳು ಹೆಚ್ಚಾಗುತ್ತಿವೆ. ಬಿಹಾರ್ ನಲ್ಲಿ ನಿಷತ್ರಿಝಾ ರೆಹಮಾನ್ ಎಂಬ ಮುಸ್ಲಿಂ ಯುವಕ ನಿಶಾಂತ್‌ರಾಜ್ ಎಂಬ ಬ್ರಾಹ್ಮಣನ ರೂಪದಲ್ಲಿ ಹಿಂದೂ ಮನೆಯ ಬಾಡಿಗೆದಾರನಾಗಿ ವಕ್ಕರಿಸಿ, ಆ ಮನೆಯ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಿವೆಸಗಿ, ಅದರ ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡಿ ಸಿಕ್ಕಿಬಿದ್ದಿರುವ ಸುದ್ದಿ ಬಂದಿದೆ.

ಉತ್ತರಪ್ರದೇಶದಲ್ಲಿ ಸೀಮಾಗೌತಮ್ ಎಂಬ ಯುವತಿಯನ್ನು ನಾವೇದ್ ಎಂಬ ಮುಸ್ಲಿಂ ಯುವಕ ಬಸಿರು ಮಾಡಿ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಪೀಡಿಸಿದ ಫಲವಾಗಿ ಆಕೆ ಹೆಣವಾಗಿದ್ದಾಳೆ. ಇಂಥ ಪ್ರಕರಣಗಳಿಂದ ಸಾವಿರಾರು ಹಿಂದೂ ಕುಟುಂಬಗಳ ನೆಮ್ಮದಿ ಹಾಳಾಗಿ ತಂದೆ ತಾಯಿ ಮಾನಮರ್ಯಾದೆ ಕಳೆದು ಕೊಂಡು ಕೊರಗಿ ಯಮಯಾತನೆಯಲ್ಲಿ ಸತ್ತಿದ್ದಾರೆ. ಹೀಗಿರುವಾಗ ಹೆಣ್ಣು ಹೆತ್ತವರು ಏನು ಮಾಡಬೇಕು? ಬಾಲ್ಯದಿಂದಲೂ ಸದಾ ಮಗಳ ಸಂಪರ್ಕದಲ್ಲಿದ್ದು ಆಕೆಯ ಭಾವನೆಗಳನ್ನು ಗುರುತಿಸುವಂತಾಗಬೇಕು.

ಆಕೆ ಯಾವ ವಿಚಾರಕ್ಕೆ ಆಕರ್ಶಿತಳಾಗುತ್ತಾಳೆ, ಯಾವಯಾವ ಸಂಗತಿಗಳು ಆಕೆ ಮೇಲೆ ಪ್ರಭಾವ ಬೀರಬಹುದು, ಶಾಲೆ-
ಕಾಲೇಜಾಗಲಿ, ಯಾವುದೇ ಸ್ಥಳಗಳಗಲಿ, ಆಕೆ ಯಾರ್ಯಾರ ಭೇಟಿ-ಪರಿಚಯ-ಸ್ನೇಹಕ್ಕೆ ಒಳಗಾಗುತ್ತಾಳೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಹೆತ್ತವರು ಆಕೆಯೊಂದಿಗೆ ಸದಾ ಪಕ್ಕದ ನಿಂತಿರುವಂಥ ‘ಬೌದ್ಧಿಕ’ ಉಪಸ್ಥಿತಿಯನ್ನು ಆಕೆಯ
ಲ್ಲಿ ಇರಿಸಬೇಕಿದೆ. ಕೌಟುಂಬಿಕ ಆಚಾರ ವಿಚಾರಗಳಲ್ಲಿ ತೊಡಗಿಸಿಕೊಂಡು ಭಯಭಕ್ತಿಯಿಂದ ನಡೆದು ಕೊಳ್ಳುವುದರೊಂದಿಗೆ ಸಮಾಜದಲ್ಲೂ ಅಂಥ ಒಂದು ಜಾಗೃತ ಎಚ್ಚರಿಕೆಯನ್ನು ಮಕ್ಕಳಲ್ಲಿ ಸೃಷ್ಟಿಸಿ ಮಕ್ಕಳೊಂದಿಗೆ ಪೋಷಕರ ಅಗೋಚರ ಅಸ್ತಿತ್ವವನ್ನು ಸದಾ ಇರಿಸಬೇಕು. ಅದಕ್ಕಾಗಿ ಮೊದಲು ತಾಯಿ ಯಾದವಳು ‘ಕಾಳಿ’ಯಾಗಬೇಕು.

ಮಗಳನ್ನು ಓದಿಸಿ ಸರಸ್ವತಿಯನ್ನಾಗಿಸಿ, ಹೋದ ಮನೆಯಲ್ಲಿ ಲಕ್ಷ್ಮೀಯಾಗಿ ಬಾಳುವಂತೆ ಮಾಡಿ ಸಮಾಜದಲ್ಲಿ ಆಕೆಯನ್ನು ‘ಶಕ್ತಿ’ ಸ್ವರೂಪಿಣಿಯನ್ನಾಗಿಸಬೇಕು.