Friday, 29th November 2024

ಕುಮ್ಕೀ ವಿಚಾರದಲ್ಲಿ ಅನ್ನದಾತನಿಗೆ ಪೆಟ್ಟುಕೊಡುತ್ತಿರುವ ಸರಕಾರ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಒಂದು ಕೈಯಿಂದ ಮಾಡಿದ ಪರೋಪಕಾರ ಮತ್ತೊಂದು ಕೈಗೆ ಗೊತ್ತಾಗಬಾರದು ಎಂಬ ಸಹಜ ಮಾತಿದೆ. ಆದರೆ, ಸರಕಾರಕ್ಕೆ ಇದು ಅನ್ವಯಿಸುವುದಿಲ್ಲ. ಯಾರೋ, ಯಾವತ್ತೋ ಕೆಲಜನರ ಹಕ್ಕು ಪರಿಗಣಿಸಿ ಅವರಿಗೆ ಕೊಟ್ಟ ಜಾಗವನ್ನು ಅಧಿಕಾರದ ಮೂಲಕ ದಬಾಯಿಸಿ ಕಿತ್ತುಕೊಳ್ಳುವ ಕಲೆ ಅಧಿಕಾರಿಗಳಿಗೆ ಮತ್ತು ಆಡಳಿತ ಸರಕಾರಕ್ಕೆ ಕರಗತ ಎಂಬುದನ್ನು ಅನುಭವಿಸುತ್ತಿರುವ ನಾಡಿನ ರೈತರು ಹತಾಶೆಯಿಂದ ಕೈಕಟ್ಟಿಕೊಂಡು ನೋಡುವಂತಾಗಿದೆ.

ಹಡಿಲು (ಪಡಿಲ್ಲು) ಭೂಮಿ ಎಂದರೆ, ಬ್ರಿಟಿಷ್ ಆಡಳಿತ ಕಾಲಕ್ಕೆ ಅಥವಾ ಅದಕ್ಕೂ ಹಿಂದೆ ಬಹಳಷ್ಟು ಜಮೀನು ಹೊಂದಿದ್ದು, ಉಳುಮೆ ಅಥವಾ ಬಳಕೆ ಮಾಡದೇ ಹಾಗೆ ಬಿಟ್ಟ ಜಾಗವನ್ನು ಹಡಿಲು ಎಂದು ಕರೆಯುತ್ತಾರೆ. ಇದು ಆಯಾ ಮಾಲಿಕರ ಸ್ವಂತ ಜಮೀನಾದ್ದರಿಂದ ಇದರಲ್ಲಿ ಇತರರ ಯಾರ ಹಕ್ಕು ಇರುವುದಿಲ್ಲ. ಇನ್ನು ಕುಮ್ಕಿ ಜಮೀನು, ಜಾಗ ಎಂದರೆ, ಕೃಷಿಕನಿಗೆ ಸುಮಾರು ಹತ್ತು ಎಕರೆ ಸ್ವಂತ ಜಾಗವಿದ್ದು, ಆ ಕದೀಂ ವರ್ಗದ ಜಮೀನಿಗೆ ಹೊಂದಿಕೊಂಡಂತೆ ಕಾಡು ಇದ್ದು, ಆ ಜಮೀನಿನಿಂದ ಸುಮಾರು ೧೦೦ ಮೀಟರ್‌ಗಳಷ್ಟು ದೂರದ ಜಾಗವನ್ನು ಸಂಕಾಲೆ ಎನ್ನುತ್ತಾರೆ.

ಇದನ್ನು ಕುಮ್ಕಿ ಎಂದು ಗುರುತಿಸಿ, ಆಯಾ ಜಮೀನಿನ ಮಾಲಿಕರ ಕೃಷಿಯೇತರ ಕಾರ್ಯಗಳಿಗೆ ಬಳಸಲು ಕೊಟ್ಟ ಜಾಗ ಇದಾಗಿರುತ್ತದೆ. ಇದು ಅಧಿಕೃತ ವಾಗಿ ‘ಕುಮ್ಕಿ ಜಮೀನು ಹಕ್ಕು’ ಎಂದೇ ಸರಕಾರದ ದಾಖಲೆಗಳಲ್ಲಿ ನಮೂದಾಗಿರುತ್ತದೆ. ಕರಾವಳಿ ಭಾಗದಲ್ಲಿ ಕುಮ್ಕಿ, ಎಂದು ಕರೆದರೆ, ಇದನ್ನು
ಕೊಡಗಿನವರು ಜಮ್ಮ ಭೂಮಿ, ಕಾಣೆಬಾನ, ಸೊಪ್ಪಿನಬೆಟ್ಟ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಯಾವುದೇ ಕದೀಂ ವರ್ಗದ ಸ್ಥಳಕ್ಕೆ ಸಂಬಂಧಪಟ್ಟ Sಇ ಕಲಂ ನಂಬರ್ ೬ ರಲ್ಲಿ ಕದೀಂ ಎಂದು ನಮೂದು ಮಾಡಬೇಕಾದ ಜವಾಬ್ದಾರಿ ಸರಕಾರದ ಕಂದಾಯ ಇಲಾಖೆಯದಾಗಿದ್ದು, ೧೯೬೪ ಸೆಕ್ಷನ್ ೭೯(೨)
ಕುಮ್ಕಿ ಪ್ರಿವಿಲೇಜ್‌ನಲ್ಲಿ ಮುಂದುವರೆಸಿಕೊಂಡು ಹೋಗಬೇಕಿದೆ.

ಈ ಮೂಲಕ, ತರಗಲೆ, ಸೊಪ್ಪು, ಕಟ್ಟಿಗೆ ಇತ್ಯಾದಿ ಕೃಷಿ ಚಟುವಟಿಕೆಗಳಿಗೆ ಬಳಸುವ ಹಕ್ಕನ್ನು ಹೊಂದಿರುತ್ತಾನೆ ಎಂಬುದಾಗಿದ್ದು, ಇದು ೧೮೮೬ಕ್ಕೂ ಮೊದಲಿನ ಮೂಲ ಜಮೀನುಗಳಿಗೆ ಅನ್ವಯಿಸುತ್ತಿದ್ದು, ಇಂತಹ ಜಮೀನನ್ನು ಕುಮ್ಕಿ/ಗೇಣಿ ಎಂದು ಗುರುತಿಸಲಾಗಿದೆ. ಮೂಲತಃ ಸೌತ್ ಕೆನರಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಇಂದಿನ ವಿಭಜಿತ ಉಡುಪಿ ಜಿಲ್ಲೆ ಸೇರಿದಂತೆ) ಅಂದಿನ ಮಹರಾಷ್ಟ್ರದ ಮುಂಬೈ
ಆಡಳಿತ ಪ್ರಾಂತ್ಯಕ್ಕೆ ಸೇರಿದ ಪ್ರದೇಶವಾಗಿತ್ತು. ಬ್ರಿಟಿಷ್ ಆಳ್ವಿಕೆ ಯಲ್ಲಿನ ಆಡಳಿತ ಸುಧಾರಣೆಗಾಗಿ ಸೌತ್ ಕೆನರಾ ಜಿಲ್ಲೆಯನ್ನು ಅಂದಿನ ಮದ್ರಾಸು ರಾಜ್ಯದ ಆಡಳಿತ ವ್ಯಾಪ್ತಿಗೆ ಸೇರ್ಪಡೆಗೊಳಿಸಿತು. ಈ ಸಂದರ್ಭದಲ್ಲಿ ಕಾಸರಗೋಡು ಸಹ ಇದರ ಆಡಳಿತ ವ್ಯಾಪ್ತಿಗೆ ಸೇರಿದ್ದಾಗಿತ್ತು.

ಮದ್ರಾಸು ರಾಜ್ಯವ್ಯಾಪ್ತಿಯೊಳಗೆ ಜಿಲ್ಲೆ ಬರುತ್ತಿದ್ದಂತೆ ಆಗಿನ ಬ್ರಿಟಿಷರು ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಅಯಾ ರೈತರ ಜಮೀನಿಗೆ ಹೊಂದಿಕೊಂಡಂತೆ ಕುಮ್ಕಿ ಜಮೀನು ಹಕ್ಕು ಹೊಂದಲು ೧೮೮೬ರಲ್ಲಿ ಅಂದಿನ IZbZo ಛಿqಛ್ಞ್ಠಿಛಿ ಆಟZb ಖಠಿZbಜ್ಞಿಜ ubಛ್ಟಿo ಮೂಲಕ ಅಧಿಕೃತ ಆದೇಶವನ್ನು ಅಂದಿನ ಬ್ರಿಟಿಷ್ ರಾಜ್ ಜಾರಿಗೊಳಿಸಿತು. ಈ ಆದೇಶವು ಅಂದಿನ ರೈತರ ಕೃಷಿಕಾರ್ಯಗಳಿಗೆ ಅವರ ಬದುಕಿಗೆ ಬಹಳ ಆಸರೆದಾಯಕವಾಗಿ ಪರಿಣಮಿಸಿದ್ದು, ಬಹಳಷ್ಟು ಹಳೆಯದಾದ ಈ ಕಾನೂನು ಈಗಲೂ ಊರ್ಜಿತದಲ್ಲಿರುತ್ತದೆ. ಈ ಆದೇಶದ ಪ್ರಕಾರ ಪ್ರತಿಯೊಬ್ಬ ಕೃಷಿಕ ತಾನು ಮಾಲಿಕತ್ವ ಹೊಂದಿದ ಭೂಮಿಯಿಂದ ಸುಮಾರು ೪೫೦ ಲಿಂಕ್ಸ್ (ನೂರು ಮೀಟರ್) ನಷ್ಟು ವ್ಯಾಪ್ತಿಯ ಕುಮ್ಕಿ ಜಮೀನು ಜಾಗದಲ್ಲಿ ಕೃಷಿ ಚಟುವಟಿಕೆಗೋಸ್ಕರ ಕಾನೂನುಬದ್ಧ ಅಧಿಕಾರ ಹೊಂದಿರುತ್ತಾನೆ.

ಹೀಗೆ ಈ ಕುಮ್ಕಿ ಎಂಬುದು ಸರಕಾರಿ ಜಮೀನಿನ ಮೇಲೆ ಕದೀಂ ವರ್ಗ ಭೂಮಿಯ ಮಾಲಿಕರು ಹೊಂದಿರುವ ವಿಶೇಷವಾದ ಅಧಿಕೃತ ಸವಲತ್ತು ಆಗಿರುತ್ತದೆ. ಈ ರೀತಿಯ ಹಕ್ಕಿಗೆ ಯಾರು ಕೂಡ ಯಾವುದೇ ರೀತಿಯ ಅಡ್ಡಿ ಆತಂಕಪಡಿಸುವ ಅಧಿಕಾರ ಹೊಂದಿರುವುದಿಲ್ಲ. ಈ ಬಗ್ಗೆ ಕೃಷಿಕರಾದವರು ಕುಮ್ಕಿ ಹಕ್ಕಿನ ರಕ್ಷಣೆಗೆ ಕಾನೂನು ನೆರವು ಪಡೆಯಬಹುದಾಗಿದೆ. ಬ್ರಿಟಿಷರ ಕಾಲದಿಂದ ಅಥವಾ ಅದಕ್ಕೂ ಪರ್ವಕಾಲದಿಂದ ಕೃಷಿ ಮಾಡುತ್ತ ಬರುತ್ತಿದ್ದ ರೈತಾಪಿ ಜನರು ಇಂದಿನಂತೆ ಅಂದು ಯಾವ ರಾಸಾಯನಿಕ ಗೊಬ್ಬರಗಳನ್ನಾಗಲಿ, ಕೀಟನಾಶಕಗಳನ್ನಾಗಲಿ ಬಳಸದೇ ಶುದ್ಧ ಕೃಷಿ, ಸಾವಯವ ಕೃಷಿ ಮಾಡುತ್ತಿದ್ದುದರಿಂದ, ಆಯಾ ಜಮೀನಿಗೆ ಸಾವಯವ ಗೊಬ್ಬರ ಮತ್ತು ಸೊಪ್ಪಿನ ರಸದ ಸಿಂಪರಣೆಗಳನ್ನು ತಯಾರಿಸಲು ಸ್ವಲ್ಪ ಜಾಗದ ಅವಶ್ಯಕತೆ ಯಿರುತ್ತಿತ್ತು. ಇದನ್ನು ಮನಗಂಡ ಅಂದಿನ ಬ್ರಿಟಿಷ್ ಆಡಳಿತವು ಈ ಕದೀಂ ವರ್ಗದವರೆಂದು ಕಾಡಿಗೆ ಹೊಂದಿಕೊಂಡವರನ್ನು ಗುರುತಿಸಿ, ಅಂಥವರಿಗೆ ಕೃಷಿಯೇತರ ಉಪ ಚಟುವಟಿಕೆಗಳಿಗೆ ಅಂತ ಸರಕಾರಿ ಜಾಗವನ್ನು ಆಯಾ ಕೃಷಿಕರಿಗೆ ಹಕ್ಕು ಪೂರ್ವಕವಾಗಿ ಬಳಸಲು ಬಿಟ್ಟುಕೊಟ್ಟ ಜಾಗವಾಗಿದೆ. ಈ ಜಾಗದ ಅಧಿಕಾರವು ಸರಕಾರದ್ದೇ ಅದರೂ, ಅದರ ಬಳಕೆಯ ಹಕ್ಕು ಮಾತ್ರ ಕದೀಂ ಜಮೀನು ವರ್ಗದ ಮಾಲೀಕನಿಗೆ ಸೇರಿರುತ್ತದೆ.

ಇದಾಗಿ ನೂರಾರು ವರ್ಷಗಳ ಕಳೆದ ಬಳಿಕ ಉಳುಮೆ ಮಾಡುತ್ತಿದ್ದ ರೈತರು ಕಾಲ ಕಳೆದಂತೆ ಈ ಜಾಗವನ್ನು ನಮ್ಮ ಹೆಸರಿಗೆ ಬರೆದುಕೊಡಬೇಕು ಅಂತೆಲ್ಲ ರೈತವರ್ಗದವರಿಂದ ಕೆಲೆವೆಡೆ ಹೋರಾಟಗಳು ನಡೆದವು. ಹಲವು ಸರಕಾರಗಳು ಬಂದು ಹೋದರೂ ಕೊಡುವ ವಿಚಾರವನ್ನು ಪಕ್ಕಕ್ಕಿಟ್ಟವು. ದಾಖಲೆಗಳಲ್ಲಿ ಸರಕಾರಿ ಜಾಗವೆಂದಿದ್ದರೂ, ರೈತರಿಂದ ಬಳಸಲ್ಪಡುತ್ತಿದ್ದರೂ ಭೂ ಕಂದಾಯವನ್ನೇನೂ ಸಂಗ್ರಹಿಸುತ್ತಿಲ್ಲವೆಂಬುದು ಸಮಾಧಾನದ
ವಿಚಾರ.

ಇನ್ನೂ ಕೆಲವು ರೈತರು, ನಮಗೆ ಅಧಿಕೃತವಾಗಿ ಬಿಟ್ಟುಕೊಡಿ, ನಾವು ಅದಕ್ಕೆ ಭೂ ಕಂದಾಯ ಕಟ್ತೀವಿ ಎಂದೂ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಯಾವ ಸರಕಾರಗಳು ಅಷ್ಟಾಗಿ ಗಮನ ಕೊಡದಿದ್ದರೂ, ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ೨೦೧೨ರಲ್ಲಿ ಕೊಡಲು ಚಿಂತಿಸಿ, ಅಧಿಸೂಚನೆ ಕೂಡ ಹೊರಡಿಸಿತು. ಅಷ್ಟರಲ್ಲಿ ಚುನಾವಣೆ ಬಂದು ಸರಕಾರ ಬದಲಾಯಿತು. ೨೦೧೩ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ ಸರಕಾರದ ಪ್ರಣಾಳಿಕೆಯಲ್ಲಿ ‘ನಾವು ಅಧಿಕಾರಕ್ಕೆ ಬಂದರೆ, ಕುಮ್ಕಿ ವಿಚಾರದಲ್ಲಿ ರೈತರಿಗೆ ಜಾಗ ಕೊಡುತ್ತೇವೆ’ ಎಂದಿತ್ತು.

ಅಧಿಕಾರ ಬಂದು ಎರಡು ವರ್ಷಗಳಾಗುತ್ತ ಬಂದರೂ ಈ ವಿಚಾರದಲ್ಲಿ ಸರಕಾರದ್ದು ದಿವ್ಯಮೌನ. ಅಂದಿನ ಕಂದಾಯ ಸಚಿವರಾಗಿದ್ದ
ಶ್ರೀನಿವಾಸ್ ಪ್ರಸಾದರು ಈ ವಿಚಾರವನ್ನು ಸರಿಪಡಿಸಲು ರೈತರ ಸಭೆ ಕರೆದು ಈ ಕುಮ್ಕೀ ವಿಚಾರದ ಸಮಗ್ರತೆ ಅರಿತುಕೊಳ್ಳುವಷ್ಟರಲ್ಲಿ, ಕೆಲ ಪ್ರಗತಿಪರರು ಎನಿಸಿಕೊಂಡ ಗುಂಪು ಸಚಿವರನ್ನು ಬೇಟಿಮಾಡಿ, ಈ ವಿಚಾರದಲ್ಲಿ ಜಮೀನನ್ನು ರೈತರಿಗೆ ನೀವು ಕೊಡಬಾರದು. ವಸತಿಗಳಿಗೆ ಜಾಗ ಕಡಿಮೆಯಾಗ್ತಾ ಇದೆ, ಬಡವರಿಗೆ ಕಟ್ಟಿಕೊಳ್ಳಲು ಮನೆ ಇತ್ಯಾದಿಗಳಿಗೆ ನಿವೇಶನವಿಲ್ಲ ಎಂದು ಈ ವಿಚಾರವನ್ನು ತಡೆಹಿಡಿಯಲು ಯಶಸ್ವಿಯಾಯಿತು
ಕೂಡ.

೨೦೧೫-೧೬(ರ ಸುಮಾರಿನಲ್ಲಿ ಈ ಕುರಿತು ರೈತರು ಹೈಕೋರ್ಟ್‌ಗೆ ಹೋಗಿದ್ದು, ಈ ವಿಚಾರವು ಇನ್ನೂ ಹಾಗೆ ಬಾಕಿಯಿದೆ. ಇದರ ಮಧ್ಯೆ, ಪ್ರಸ್ತುತ ಸರಕಾರವು ಮಾರ್ಚ್ ೧೨ರಂದು ಒಂದು ಸುತ್ತೊಲೆ ಹೊರಡಿಸಿ, ಇಡೀ ರಾಜ್ಯದಲ್ಲಿ, ಸರಕಾರಿ ಜಮೀನಿನಲ್ಲಿ ಯಾರೆಲ್ಲ ಕೃಷಿ ಮಾಡಿಕೊಂಡಿದ್ದೀರೋ
ಅದನ್ನು ಅದೇ ರೈತರಿಗೆ ೩೦ ವರ್ಷಗಳಿಗೆ ಲೀಸ್ (ಔಛಿZoಛಿ) ಕೊಡುವುದು ಮತ್ತು ಅದಕ್ಕೆ ಎಷ್ಟು ದರ (ಇeZಜಛಿo)ನಿಗದಿ ಆಗುತ್ತದೆಯೋ ಅದನ್ನು ಒಮ್ಮೆಲೆ ಕಟ್ಟಬೇಕು ಎಂದು ಹೇಳಿತು. ಈ ಮೂಲಕ, ಬ್ರಿಟೀಷರ ಕಾಲದಿಂದಲೂ ಅತ್ಯಂತ ಗೌರವಯುತವಾಗಿ ರೈತರಿಗೆ ಕೃಷಿಕಾರ್ಯಕ್ಕೆ ಬಿಟ್ಟುಕೊಟ್ಟ ಕುಮ್ಕೀ ಹಕ್ಕನ್ನು ಪ್ರಸ್ತುತ ಸರಕಾರವು ತನ್ನ ಆದಾಯ ಹೆಚ್ಚಿಸಿಕೊಳ್ಳಲು ಮತ್ತು ರೈತರ ಹಕ್ಕಿನ ಮೇಲೆ ಧಮನಿತ ಸವಾರಿ ಮಾಡಲು ಈ ಮೂಲಕ ಸುತ್ತೋಲೆ ಹೊರಡಿಸಿದೆ ಎಂದು ರೈತರು ಕಟುವಾಗಿ ವಿರೋಧಿಸಿದರು.

ಸುತ್ತೋಲೆಯಲ್ಲಿ ಇಡೀ ರಾಜ್ಯವೆಂದು ಉಲ್ಲೇಖಿಸಿದ್ದರೂ, ಉಡುಪಿ, ದಕ್ಷಣ ಕನ್ನಡ ಜಿವ್ಯಾಪ್ತಿ ವಿಚಾರಕ್ಕೆ ಬಂದಾಗ, ಅದು ನೇರವಾಗಿ ಕುಮ್ಕೀ ಜಾಗದ ವಿಚಾರಕ್ಕೆ ವ್ಯಾಖ್ಯಾನವೊಳಪಡುತ್ತದೆ. ಕುಮ್ಕೀ ಜಾಗದ ವಿಚಾರವು ಮೂಲದಿಂದಲೂ ಬಂದಂತಹ ರೈತರ ಹಕ್ಕು ಇದಾಗಿದ್ದು, ಇದರಲ್ಲಿ ಸರಕಾರಕ್ಕೆ ಯಾವ ಅಧಿಕಾರವೂ ಇಲ್ಲವೆಂದು ಮೂಲ ಕಾಯ್ದೆಯಲ್ಲಿಯೇ ಇದೆಯೆಂದು ಈ ಕರಾವಳಿ ಭಾಗದ ರೈತರು ತೀವ್ರವಾಗಿ ಪ್ರತಿಭಟಿಸಿದ್ದಾರೆ ಮತ್ತು ಈ
ಸುತ್ತೋಲೆಯ ವಿಚಾರವನ್ನು ವಿರೋಧಿಸಿದ್ದಾರೆ.

ಅಂದಿನ ಕುಮ್ಕೀ ಜಾಗವು ರೈತರ ಕೃಷಿ ಚಟುವಟಿಕೆಗಳಿಗೆ ಬಿಟ್ಟುಕೊಟ್ಟzಗಿತ್ತು. ಕಾಲ ಕಳೆದಂತೆ, ಪ್ರಸ್ತುತ ದಿನಕ್ಕೆ ಗಮನಿಸಿ ನೋಡಿದಾಗ, ಇಂದು ಸರಕಾರವೇ ಗೊಬ್ಬರವನ್ನು ನೀಡುತ್ತಿರುವುದರಿಂದ ಮತ್ತು ನೂರಾರು ವಿಧದ ರಾಸಾಯನಿಕ ಮತ್ತು ಇತರೆ ಮಾದರಿ ಗೊಬ್ಬರಗಳು ಅರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಈ ಜಾಗವನ್ನು ಇತರೆ ಉತ್ಪನ್ನಗಳ ಬೆಳೆಗಳ ಬಳಕೆಗೆ ಕಾಲಕ್ರಮೇಣ ರೈತರು ಬಳಸುತ್ತ ಬಂದರು.

ಇನ್ನು ಕೆಲ ಕುಟುಂಬಗಳು ಭಾಗವಾದಾಗ, ಅವರಿಗೆ ಬಂದ ಕುಮ್ಕಿ ಜಾಗದಲ್ಲಿ ಚಿಕ್ಕಪುಟ್ಟ ಬೆಳೆಗಳನ್ನು ಹಾಕುತ್ತ ಬಂದರು. ಮುಂದೆ ಇದು ತೋಟದ ಭಾಗವಾಗಿಯೇ ಉಳಿದು ಬಂದಿದೆ. ಆದರೂ ಸಹ ಇದು ಇಂದಿಗೂ ಸರಕಾರಿ ದಾಖಲೆಯಲ್ಲಿ ಕುಮ್ಕೀ ಸರಕಾರ ಜಾಗವೆಂತಲೇ ಇದೆ. ಇದನ್ನು ಗಮನಿಸಿದ ಸರಕಾರವು ಇದೇ ಮಾರ್ಚ್ ೧೨ರಂದು ಒಂದು ಸುತ್ತೋಲೆ ಹೊರಡಿಸಿ, ೩ ತಿಂಗಳೊಳಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸುವಂತೆ ಸೂಚಿಸಿದೆ. ಇದಕ್ಕೆ ಸ್ಥಳೀಯ ರೈತರು ವಿರೋಧಿಸಿ, ಇದಕ್ಕೆ ಯಾರೂ ಬೆಂಬಲಿಸಬಾರದು, ಇದು ನಮ್ಮ ಕೃಷಿಕ ಹಕ್ಕು ಆಗಿದ್ದು, ಇದರ ಮೇಲೆ ಸರಕಾರದ ಯಾವ ಆದೇಶವು
ಜಾರಿಯಾಗಲು ಬರುವದಿಲ್ಲ ಎಂದು ಬಲವಾಗಿಯೇ ವಿರೋಧಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯಿತು.

ನಮ್ಮಲ್ಲಿ ಬಂದಂತಹ ಭೂ ಸುಧಾರಣಾ ಕಾಯ್ದೆ, ಭೂ ಕಂದಾಯ ಕಾಯ್ದೆಗಳು ಸೇರಿದಂತೆ ಇತರೆ ಯಾವ ಭೂ ಕಾಯ್ದೆಗಳ ಮೂಲಕ ವಿವೇಚಿಸಿದರೂ ಈ ಕುಮ್ಕಿ ಜಮೀನು ಹಕ್ಕು ವಿಚಾರದಲ್ಲಿ ಆಳುವ ಸರಕಾರಗಳು ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು  ಅರಿತುಕೊಂಡೇ ಈ ಒಂದು ೩೦ ವರ್ಷಗಳ ವರೆಗೆ ಲೀಸ್ ಹುನ್ನಾರದ ಸುತ್ತೋಲೆಯ ನಾಟಕವಾಡುತ್ತಿದೆ ಸರಕಾರ, ಇದಕ್ಕೆ ಯಾವ ರೈತರು ಒಪ್ಪುತ್ತಾರೋ ಅವರು ಕುಮ್ಕೀ ಹಕ್ಕನ್ನು ಕಳೆದುಕೊಳ್ಳು ತ್ತಾರೆ ಎಂದು ಕೆಲ ರೈತ ಮುಖಂಡರ ವಾದವೂ ಆಗಿದೆ.

೧೯೭೪ರ ನಂತರ, ಯಾವುದೇ ಸರಕಾರದ ಭೂಮಿಯನ್ನು ಲೀಸ್‌ಗೆ ಕೊಡೋದಿಕ್ಕೆ ಹಕ್ಕು ಇಲ್ಲವೆಂದು ಇನ್ನೂ ಕೆಲ ರೈತರ ವಾದ. ಇದರ ಸತ್ಯಾಸತ್ಯತೆ ಗಳನ್ನು ಪ್ರಾಜ್ಞರೇ ಅರಿತು ರೈತರ ಸಮಸ್ಯೆಗಳನ್ನು ಸರಿಪಡಿಸಬೇಕಿದೆ. ಇದಕ್ಕೆ ಅಧಿಕಾರದಲ್ಲಿರುವ ಸರಕಾರಗಳು ಕೂಡ ಸಮಯ ಮಿತಿಯಲ್ಲಿ ಅನ್ನದಾತನ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಅವರೊಂದಿಗೆ ಗೌರವಯುತ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳ ಬಹುದೇನೋ. ಕೆಲಸ ಮಾಡಿಕೊಡುವ ಕಾಲಮಿತಿ ಮತ್ತು ಸಮಸ್ಯೆ ಅನುಭವಿಸುತ್ತಿರುವವರ ವಿಚಾರಕ್ಕೆ ಆಳುವವರ ಹೃದಯಗಳು ಮಿಡಿಯಬೇಕಷ್ಠೆ!