Monday, 16th September 2024

ಜೀವನದಲ್ಲಿ ಸದಾ ಖುಷಿಯ ಆಯ್ಕೆ ನಮ್ಮದಾಗಲಿ

ಶ್ವೇತಪತ್ರ

shwethabc@gmail.com

ಸಂತೋಷ ನಮ್ಮ ಆಯ್ಕೆಯಾಗಬೇಕೇ ಹೊರತು ಯಾವುದೋ ಫಲಿತಾಂಶದ ನಿರೀಕ್ಷೆಯಲ್ಲ. ಸಂತೋಷ ನಮ್ಮ ಆಯ್ಕೆಯಾಗದ ಹೊರತೂ
ಬೇರೇನೂ ನಮ್ಮನ್ನು ಖುಷಿಯಾಗಿರಿಸಲು ಸಾಧ್ಯವಿಲ್ಲ. ಎಷ್ಟು ಸಲ ನಿಮಗೆ ನೀವೇ ಹೇಳಿಕೊಂಡಿದ್ದೀರಿ ನಾನು ಖುಷಿಯಾಗಿರಬೇಕು ಅಂತ? ನಾವು ಹೀಗೆ ಹೇಳಿಕೊಳ್ಳುವುದು ತೀರಾ ಕಡಿಮೆ. ಒಳ್ಳೆ ಕೆಲಸ ತಗೋಬೇಕು, ಬಿಸಿನೆಸ್ ಮಾಡಬೇಕು, ಚೆನ್ನಾಗಿ ಸಂಪಾದನೆ ಮಾಡಬೇಕು, ಕಾರು
ತಗೋಬೇಕು, ಸ್ವಂತಕ್ಕೊಂದು ಮನೆ ಮಾಡ್ಕೋಬೇಕು… ಇದೆಲ್ಲ ಆದರೇನೆ ನಾನು ನೆಮ್ಮದಿ ಯಾಗಿ ಖುಷಿಯಾಗಿರಲು ಸಾಧ್ಯ ಎನ್ನುವ ಕಂಡೀಶನ್ಡ್ ಮನಸ್ಥಿತಿ ನಮ್ಮದು.

ಹೀಗೆ ನಾವೆಲ್ಲ ಖುಷಿಯ ಹುಡುಕಾಟದಲ್ಲಿದ್ದೇವೆಯೇ ಹೊರತು ಖುಷಿಯಾಗಿಲ್ಲ; ಸಂತೋಷವಾಗಿಲ್ಲ. ನಮ್ಮ ಬದುಕಲ್ಲಿ ಏನಿದೆ ಅಥವಾ ಏನು ಘಟಿಸಿದೆ ಎನ್ನುವುದು ನಮ್ಮ ಸಂತೋಷಗಳನ್ನು ನಿರ್ಧರಿಸುವುದಿಲ್ಲ. ಬದಲಾಗಿ ಘಟಿಸುವಿಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವ ನಮ್ಮ ದೃಷ್ಟಿಕೋನ ನಮ್ಮ ಸಂತೋಷ ಅಸಂತೋಷಗಳನ್ನು ತೀರ್ಮಾನಿಸುತ್ತದೆ. ನನ್ನ ಪರಿಚಯದ ಇಬ್ಬರೂ ಗೆಳತಿಯರಿದ್ದಾರೆ. ಒಬ್ಬಳು ದೊಡ್ಡ ಮೊತ್ತದ ಸಂಬಳ ತೆಗೆದುಕೊಳ್ಳುವ ಸಾಫ್ಟ್ ವೇರ್ ಎಂಜಿನಿಯರ್ ಇನ್ನೊಬ್ಬಾಕೆ ಪ್ರೈವೇಟ್ ಕಾಲೇಜಿನಲ್ಲಿ ಟೆಂಪರರಿ ಅಧ್ಯಾಪಕಿ.

ಸಾಫ್ಟ್ ವೇರ್ ಎಂಜಿನಿಯರ್ ಗೆಳತಿಯದ್ದು ಯಾವಾಗಲೂ ಕೊರಗುವಿಕೆ. ಗಂಡ ಸರಿ ಇಲ್ಲ, ಅತ್ತೆ-ಮಾವಂದು ಹಿಂಸೆ, ಮಗಳು ಮಾತು ಕೇಳಲ್ಲ, ನಿದ್ದೆ ಬರಲ್ಲ ನನಗೆ ಡಿಪ್ರಶನ್ನು…. ಹೀಗೆ ಎಷ್ಟು ಸಲ ಕೌನ್ಸಲಿಂಗ್ ಮಾಡಿದರೂ ದಿನಕ್ಕೊಂದು ಹೊಸ ಸಮಸ್ಯೆ ತರುತ್ತಾಳೆ. ಅದೇ ಪ್ರೈವೇಟ್ ಕಾಲೇಜಿನ ಗೆಳತಿಯ ಅಮ್ಮನಿಗೆ ಅನಾರೋಗ್ಯ, ಶೀಟ್ ಮನೆಯಲ್ಲಿ ಬದುಕು. ಆದರೂ ಒಂದು ದಿನಕ್ಕೂ ಕೊರಗಿದ್ದಿಲ್ಲ. ಹೊಸ ಅನುಭವ ಹೊಸ ಸಾಧ್ಯತೆಗಳ ಹುಡುಕಾಟ ದಲ್ಲಿ ಖುಷಿಯಾಗಿದ್ದಾಳೆ. ಇಲ್ಲಿ ನನಗನಿಸಿದ್ದು ಸುರಕ್ಷಿತ ಕೆಲಸ ಅಥವಾ ಸಂಬಳ ನಮ್ಮನ್ನು ಖುಷಿಯಾಗಿರಿಸಬಹುದಾಗಿದ್ದರೆ ಜಗತ್ತೆ ಸಂತೃಪ್ತವಾಗಿ ಬಿಡುತ್ತಿತ್ತು. ಆದರೆ ಯಾವತ್ತಿಗೂ ನಮ್ಮದು ಅತೃಪ್ತ ಮನಸ್ಸು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಲೇ ಇರುತ್ತದೆ. ಬದುಕಿನ ಎಲ್ಲ ಹಿಂನ್ಸರಿತಗಳ ನಡುವೆಯೂ ಮನಸ್ಸುಗಳಲ್ಲಿ ಮೊಳಕೆಯೊಡೆಯಬೇಕಾದದ್ದು ಖುಷಿ. ಬದುಕಲ್ಲಿ ಖಾಲಿ ಬಿಟ್ಟ ಜಾಗವನ್ನು ತುಂಬಬಲ್ಲ ಶಕ್ತಿ ಸಂತೋಷಕ್ಕಿದೆ.

ಸದಾ ಸಂತೋಷವಾಗಿರುವುದು ಸುಲಭವಲ್ಲ. ದಿನನಿತ್ಯದ ಜಂಜಾಟಗಳ ನಡುವೆ ಖುಷಿಯಾಗಿರುವುದು ದೊಡ್ಡ ಸವಾಲೇ. ಮನಸ್ಸಿಗೆ ಖುಷಿ ಮೂಡಿಸಿ ಕೊಳ್ಳುವ ನಿರ್ಣಯದ ಜತೆ ಪ್ರಯತ್ನವನ್ನು ಚೂರು ಚೂರೇ ದಿನವೂ ಕೂಡಿಸುತ್ತ ಬಂದರೆ ತುಂಬು ಖುಷಿ ಮನೆಯದ್ದು ಮನಸ್ಸಿನದ್ದು ಆಗುತ್ತದೆ. ಒಂದು ವಿಷಯ ನೆನಪಿರಲಿ ನಮ್ಮ ಖುಷಿಗಳಿಗೆ ನಾವೇ ಜವಾಬ್ದಾರರು. ಹಾಗಾಗಿ ಬದುಕಲ್ಲಿ ಏನಿಲ್ಲ ಎನ್ನುವುದಕ್ಕಿಂತ ಏನಿದೆ ಎನ್ನುವ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳೋಣ.

ನಮ್ಮ ಖುಷಿಗಳನ್ನು ನಿರ್ಧರಿಸುವುದು ನಮ್ಮದೇ ಆಲೋಚನೆಗಳು. ನಾವು ಖುಷಿಯಾಗಿರುವುದಕ್ಕೆ, ಖುಷಿಯ ಆಲೋಚನೆಗಳು ನಮ್ಮವಾಗಬೇಕು. ಆದರೆ ಇದಕ್ಕೆ ಯಾವಾಗಲೂ ವಿರುದ್ಧವಾಗಿಯೇ ನಾವು ನಡೆದುಕೊಳ್ಳುವುದು ಹೌದಲ್ಲವೇ? ಯಾರದೋ ಜತೆಗಿನ ಘರ್ಷಣೆ ತಿಕ್ಕಾಟ, ಯಾರೋ ನಮ್ಮನ್ನು ಅವಮಾನಿಸಿದ್ದು ವಾರಾನುಗಟ್ಟಲೆ ನಮ್ಮ ಮನಸ್ಸಿನೊಳಗೆ ಟ್ಚ್ಚ್ಠmqs ಆಗಿಬಿಟ್ಟರೆ ಖುಷಿಗೆ ಸಂತೋಷಕ್ಕೆ ಜಾಗವೆಲ್ಲಿ? ಹೈಟೆಕ್ ಪ್ರಪಂಚ ನಮಗೆ ಹೆಚ್ಚು ಹತ್ತಿರವಾಗಿ ಮನುಷ್ಯ ಸಂಬಂಧಿ ಸ್ಪರ್ಶವನ್ನು ನಮ್ಮ ಅರಿವಿಗೆ ಬಾರದಷ್ಟು ಪ್ರತ್ಯೇಕಿಸಿ ಬಿಟ್ಟಿದೆ. ಬೆನ್ನಿಗೊಂದು ಕೆಲಸ, ಕೈತುಂಬಾ ಸಂಬಳ, ಸಂಬಳದ ಜತೆಗಿನ ಇಎಂಐ ಬರ್ಡನ್‌ಗಳು ಮನೆಯನ್ನೇನೋ ತುಂಬಿಸಿವೆ ಮನಸ್ಸನ್ನು ಖಾಲಿಯಾಗಿಸಿವೆ.

ನಾವೆಲ್ಲ ದೊಡ್ಡ ದೊಡ್ಡ ಬಿಸಿನೆಸ್ ಪ್ರವೀಣರಾಗಿರಬಹುದು. ಉತ್ತಮ ಸಂಬಳ ಪಡೆಯುವ ವ್ಯಕ್ತಿಗಳ ಆಗಿರಬಹುದು ಅಥವಾ ಉತ್ತಮವಾಗಿ
ಮನೆಯನ್ನು ನಿರ್ವಹಿಸಿಕೊಂಡು ಹೋಗುವ ಗೃಹಿಣಿಗಳಾಗಿರಬಹುದು. ಸಂತೋಷಗಳು ನಮ್ಮ ಆಯ್ಕೆಗಳಾಗಿರುತ್ತವೆ. ಬದುಕಿನ ಪ್ರತಿ ಕ್ಷಣಗಳನ್ನು ಎಚ್ಚರಿಸುತ್ತ, ಅವುಗಳಿಗೆ ಅರ್ಥ ತುಂಬುತ್ತ ಹೋಗುವುದೇ ಖುಷಿಯನ್ನು ಮನಗಾಣುವ ಮೊದಲ ಮೆಟ್ಟಿಲು. ಈ ಅರಿವಿಗೆ ಬದುಕಿನ ಎಂತಹುದೇ
ಸವಾಲಿನ ಸಂದರ್ಭವನ್ನು ಹೊಸ ಆರಂಭವಾಗಿ ಬದಲಾಯಿಸುವ ಶಕ್ತಿ ಇದೆ. ಈ ಕ್ಷಣದಲ್ಲಿ ಬದುಕುವ ತಿಳುವಳಿಕೆ ಮನದಾಳದಲ್ಲಿ ನೈಜ ಬದಲಾವಣೆಯನ್ನುಂಟು ಮಾಡುತ್ತಾ ಖುಷಿಯನ್ನು ಮೂಡಿಸುತ್ತದೆ.

ಕಳೆದು ಹೋಗಿರುವ ಸಂತೋಷಗಳನ್ನು ಪುನಃ ಪಡೆದುಕೊಳ್ಳಲು ಕ್ರಿಯಾಶೀಲ ದಾರಿಗಳು ಇಲ್ಲಿವೆ:

೧.ಬೇರೆಯವರ ಬದುಕಿನ ಜತೆ ಹಠಕ್ಕೆ ಬೀಳುವುದು ಬೇಡ

ಹಟಕ್ಕೆ ಬಿದ್ದಂತೆ ನಾವು ಬೇರೆಯವರ ಜತೆ ಸ್ಪರ್ಧೆಗೆ ಇಳಿದು ಬಿಡ್ತೀವಿ. ಎಷ್ಟರಮಟ್ಟಿಗೆ ಗೊತ್ತಾ? ಕಲೀಗ್ ಒಬ್ಬರು ತಮ್ಮ ಪ್ರೆಗ್ನನ್ಸಿ ಕನರ್ಮ್ ಆಯ್ತು ಅನ್ನೋ ಖುಷಿಯ ವಿಚಾರವನ್ನ ನಮ್ಮೆಲ್ಲರ ಜತೆ ಹಂಚಿಕೊಂಡರು. ಇದಾಗಿ ಒಂದು ಸ್ವಲ್ಪ ದಿನ ಕಳೆದಿರಬಹುದು ಮತ್ತೊಬ್ಬ ಕಲೀಗ್ ಸಹ ನನ್ನದೂ ಪ್ರೆಗ್ನನ್ಸಿಕನರ್ಮ್ ಆಯ್ತು ಅಂದ್ರು. ಅವರ ಮಾತು ಎಷ್ಟು ಅಗ್ರೇಸಿವ್ ಆಗಿತ್ತು ಅಂದರೆ ಇಲ್ಲಿ ಅವರು ಖುಷಿ ಹಂಚಿಕೊಂಡಿದ್ದ ಕ್ಕಿಂತ ಪೈಪೋಟಿಗಿಳಿದಿದ್ದು ಎದ್ದು ಕಾಣಿಸುತ್ತಿತ್ತು.

ಇದೊಂದು ಪುಟ್ಟ ಉದಾಹರಣೆಯಷ್ಟೇ ಬೆಳಗಾದರೆ ಈ ತರಹದ ಅನೇಕ ಹಠಗಳು ನಮ್ಮ ಕಣ್ಣೆದುರು ಕಾಣಸಿಗುತ್ತವೆ . ನಮ್ಮೊಳಗೂ ಇದ್ದಿರಬಹುದು ಸ್ವಲ್ಪ ನಿಧಾನಿಸೋಣ. ನಮ್ಮ ಹಠದ ಆಲೋಚನೆಗಳಿಗೆ, ಆಸೆಗಳಿಗೆ ಬ್ರೇಕ್ ಹಾಕದೆ ಹೋದರೆ ಎಡವಿ ಬಿಡಬಹುದು, ಎಚ್ಚರವಿರಲಿ. ನಮ್ಮ ಬದುಕಿನ
ಖುಷಿಯನ್ನು ಕದ್ದು ಬಿಡುವ ಕಳ್ಳನೇ ಈ ಕಂಪಾರಿಸನ್ ಎಂಬ ಸದಾ ಬೇರೆಯವರ ಬದುಕಿಗೆ ನಮ್ಮ ಬದುಕನ್ನು ಹೋಲಿಸಿ ನೋಡುವ ನಮ್ಮದೇ ಮನಃಸ್ಥಿತಿ. ಸೂರ್ಯ ಮತ್ತು ಚಂದ್ರರ ನಡುವೆ ಹೋಲಿಕೆ ಯಾಕೆ ಸಮಯ ಬಂದಾಗ ಇಬ್ಬರೂ ಅವರದೇ ರೀತಿಯಲ್ಲಿ ಬೆಳಗುತ್ತಾರೆ.

೨.ನಿಮ್ಮ ಬದುಕಿನ ಅನುಭವ ಮತ್ತು ಜವಾಬ್ದಾರಿ ನಿಮ್ಮದಾಗಿರಲಿ

ಸಾಮಾನ್ಯವಾಗಿ ನಾವು ನಮ್ಮ ಸೋಲುಗಳನ್ನು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವುಗಳಿಗೆ ಬೇರೆಯವರನ್ನೋ ಇಲ್ಲ ಪರಿಸ್ಥಿತಿಗಳನ್ನೋ ಹೊಣೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಯೋಚಿಸಿ ನೋಡಿ, ನಮ್ಮ ಬದುಕಿನ ಅನುಭವಗಳ್ಳೆಲ್ಲವೂ ನಮ್ಮದೇ ಆಸೆ ಆಯ್ಕೆ ಕ್ರಿಯೆ ಪ್ರತಿಕ್ರಿಯೆಗಳ ಫಲಿತಾಂಶಗಳೇ ಆಗಿರುತ್ತವೆ. ಹಾಗಾಗಿ ಮೊದಲು ನಮ್ಮ ಜೀವನದ ಅನುಭವಗಳು ನಮ್ಮವೇ ಎಂಬ ಜವಾಬ್ದಾರಿಯನ್ನ ಒಪ್ಪಿಕೊಳ್ಳೋಣ. ಈ ಪರಿವರ್ತನೆ ನಾಳೆ ನಮ್ಮ ಬದುಕು ಹೇಗಿರಬೇಕೆಂಬ ನಿಯಂತ್ರಣವನ್ನು ರೂಪಿಸಿಕೊಳ್ಳುವುದನ್ನು ಕಲಿಸುತ್ತದೆ. ಇವತ್ತಿಗೆ ನಾನು ಕೋಪ ಮಾಡಿಕೊಳ್ಳುವುದಿಲ್ಲ,

ಆತಂಕ ಪಡುವುದಿಲ್ಲ ಎಂಬ ಬದಲಾವಣೆಗಳನ್ನು ಅನ್ವಯಿಸಿಕೊಳ್ಳುತ್ತ ಹೋಗೋಣ. ವ್ಯಕ್ತಿತ್ವ ನಿಧಾನವಾಗಿ ಮಾಗುತ್ತದೆ.

೩.ಕಾಂಪ್ರಮೈಸ್ ಬೇಡ
ಚಿಕ್ಕ ಪುಟ್ಟ ಆಸೆ ಆಲೋಚನೆಗಳಿಗೆ ನಾವು ಹೆಚ್ಚಿನ ಸಲ ರಾಜಿಯಾಗಿಬಿಡುತ್ತೇವೆ. ಆ ಕ್ಷಣದ ಮನಸ್ಸಿನ ಘರ್ಷಣೆಗಳಿಂದ ಪಾರಾಗಲು ನಮಗೆ ಸುಲಭ ಮಾರ್ಗವೇ ಕಾಂಪ್ರಮೈಸ್‌ನ ಆಯ್ಕೆಯಾಗಿರುತ್ತದೆ. ಬದುಕಿನ ಗುರಿಗಳು ಪರಿಪೂರ್ಣವಾಗಿರಲಿ. ಬಲವಂತದ ಒಪ್ಪಿಕೊಳ್ಳುವಿಕೆಯನ್ನು ನಿರಾಕರಿಸುತ್ತ
ಗಟ್ಟಿಯಾಗಿ ನಡೆದು ಬಿಡೋಣ.

೪.ಜಡ್ಜ್ ಮೆಂಟಲ್ ಆಗುವುದು ಬೇಡ
ನಮ್ಮ ಬದುಕಿನ ಅನುಭವಕ್ಕೆ ಬರುವ ಪ್ರತಿ ವ್ಯಕ್ತಿಗಳನ್ನು ವ್ಯಕ್ತಿತ್ವಗಳನ್ನು ಸಂದರ್ಭಗಳನ್ನು ಬಹಳ ಸುಲಭವಾಗಿ ನಾವು ಪಾಸಿಟಿವ್ ಅಥವಾ ನೆಗೆಟಿವ್ ಆಗಿ ತೀರ್ಮಾನಿಸಿಬಿಡುತ್ತೇವೆ. ನೆನಪಿರಲಿ ಹೀಗೆ ಇನ್ನೊಬ್ಬರನ್ನು ಜಡ್ಜ್ ಮಾಡಿಬಿಡುವ ಮೊದಲು ನಮ್ಮಂದು ಪ್ರeಪೂರ್ವಕವಾದ ಅರಿವಿgಬೇಕು. ಆ ಅರಿವು ಬರೀ ಬೇರೆಯವರನ್ನು ವಿಮರ್ಶಿಸುವುದಲ್ಲ, ನಮ್ಮ ವ್ಯಕ್ತಿತ್ವವನ್ನು ತಿವಿದು ಎಚ್ಚರಿಸುವಂತಿರಬೇಕು.

೫.ಭಾವನೆಗಳು ಭಾರವಾಗದಿರಲಿ

ಎಲ್ಲವನ್ನೂ ಎಲ್ಲರನ್ನೂ ತುಂಬ ಗಂಭೀರವಾಗಿ ತೆಗೆದುಕೊಳ್ಳುತ್ತ ಹೋದಂತೆ ನಮ್ಮ ಭಾವನೆಗಳು ಆಲೋಚನೆ ಗಳು ನಮಗೆ ಹೊರೆಯಾಗುತ್ತವೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ವಾಸ್ತವವೇನು ಗೊತ್ತಾ? ನಮ್ಮ ಸ್ವಭಾವವನ್ನು ನಿರೂಪಿಸುವುದು. ಈ ಕ್ಷಣದ ನಮ್ಮ ಆಲೋಚನೆಯೂ ಅಲ್ಲ ಭಾವನೆಯೂ ಅಲ್ಲ. ಆದರೆ ನಮ್ಮ ಪ್ರತಿಕ್ರಿಯೆ ನಮ್ಮನ್ನು ಯಾರೆಂದು ವ್ಯಾಖ್ಯಾನಿಸುತ್ತದೆ. ಬದುಕನ್ನು ಸರಳವಾಗಿ ನೋಡಿಬಿಟ್ಟರೆ ಗೊಂದಲಗಳಿಗೆ ಜಾಗವೇ ಇರುವುದಿಲ್ಲ

೬.ದೃಢತೆ ನಮ್ಮ ವ್ಯಕ್ತಿತ್ವದ ಛಾಪಾಗಿರಲಿ
ನಿಮ್ಮ ಅನಿಸಿಕೆಗಳನ್ನು ನಿರ್ಧಾರವನ್ನು ವ್ಯಕ್ತಪಡಿಸುವಾಗ ಯಾವುದೇ ಹಿಂಜರಿಕೆ ಭಯವಿಲ್ಲದೆ ಅಭಿಪ್ರಾಯವನ್ನು ಎದುರಿಗಿರುವವರಿಗೆ ದೃಢವಾಗಿ ಹೇಳುವ ಛಾತಿಯನ್ನು ಬೆಳೆಸಿಕೊಳ್ಳಿ. ಇದೊಂದು ಬದುಕಿಗೆ ಬೇಕಾದ ಮುಖ್ಯವಾದ ಕೌಶಲ್ಯ. ಎಷ್ಟೋ ಬಾರಿ ಮುಂದೆ ಆಗಬಿಡಬಹುದಾದ
ಪರಿಣಾಮಗಳ ಕುರಿತಾದ ಹಿಂಜರಿಕೆ ನಮ್ಮ ವ್ಯಕ್ತಪಡಿಸುವಿಕೆಯನ್ನು ತಡೆದುಬಿಡುತ್ತದೆ. ಕಳೆದುಕೊಂಡುಬಿಡಬಹುದೆಂಬ ಸದಾ ನಮ್ಮನ್ನು ಕಾಡುವ ನಮ್ಮವೇ ಭಯಗಳನ್ನು ನಾವು ಎದುರಿಸುವುದನ್ನು ಕಲಿತು ಬಿಟ್ಟರೆ ಆ ದೃಢತೆಯೇ ನಮಗೆ ಸ್ವಯಂ ರಕ್ಷಣೆಯನ್ನು ಒದಗಿಸುತ್ತದೆ.

೮.ನಿಮ್ಮ ಬಗ್ಗೆ ಪ್ರತಿಯೊಬ್ಬರಿಗೂ ವಿವರಿಸುವ ಅಗತ್ಯವಿಲ್ಲ

ಅನೇಕ ಸಲ ನಾವು ನಮ್ಮ ಅಸ್ಥಿರತೆ ಅಭದ್ರತೆಯ ಕಾರಣಕ್ಕಾಗಿ ಪ್ರತಿಯೊಂದನ್ನು ಬೇರೆಯವರಿಗೆ ವಿವರಿಸಿ ಹೇಳಲು ಪ್ರಯತ್ನಿಸುತ್ತೇವೆ, ಅಗತ್ಯವಿಲ್ಲ. ನಾನು ಯಾಕೆ ಹೀಗೆ ಮಾಡಿದೆ, ನಾನು ಯಾಕೆ ಹೀಗೆ ಯೋಚಿಸಿದೆ, ನಾನು ಯಾಕೆ ಹೀಗೆ ನಿರ್ಧಾರ ತೆಗೆದುಕೊಂಡೆ, ನಾನು ಯಾಕೆ ಹೀಗೆ ನಡೆದುಕೊಂಡೇ ಎಂಬುದು ನಿಮಗೆ ಗೊತ್ತಿದ್ದರೆ ಸಾಕು. ಅದು ಸರಿ ಅನಿಸಿಯೇ ನೀವು ಆ ಕ್ಷಣಕ್ಕೆ ಪ್ರತಿಕ್ರಿಯಿಸುತ್ತೀರಿ. ಬೈ ಚಾನ್ಸ್ ಅದು ತಪ್ಪಾಗಿದ್ದರೆ ಒಂದು ಪುಟ್ಟ ಕ್ಷಮೆ ಕೇಳಿ ಬಿಡಿ. ಅದನ್ನು ಬಿಟ್ಟು ನಿಮ್ಮ ಯೋಚನೆಯಿಂದ ಹಿಡಿದು ನಿಮ್ಮ ಪ್ರತಿಕ್ರಿಯೆವರೆಗಿನ ಎಲ್ಲ ನಡವಳಿಕೆಗಳಿಗೆ ವಿವರಣೆಯ ಅಗತ್ಯವಿಲ್ಲ.

೯. ಬದುಕಿಗೆ ಉತ್ಸಾಹ ತುಂಬಬಲ್ಲ ಅಭಿರುಚಿ ಅನುಸರಿಸಿ ನೀವು ಪ್ರೀತಿಯಿಂದ ತೊಡಗಬಲ್ಲ ಕೆಲಸಗಳಿಗೆ ನಿಮ್ಮದು ಮೊದಲ ಆದ್ಯತೆಯಾಗಿರಲಿ. ನಿಮ್ಮ ಒಳದನಿಯ ಮಾತುಗಳಿಗೆ ಕಿವಿಯಾಗಿ ನೀವು ಮಾಡುವ ಯಾವುದೇ ಕೆಲಸಗಳಲ್ಲಿ ಪ್ರೀತಿ ಮತ್ತು ಖುಷಿ ತುಂಬಿರಲಿ. ಕೆಲಸದ ಮೇಲೆ ಪ್ರೀತಿ ಮೂಡಿ ಬಿಟ್ಟರೆ ಅಲ್ಲಿ ಭಯ ಅಭದ್ರತೆಗಳಿಗೆ ಜಾಗವಿಲ್ಲ. ಪ್ರೀತಿ ಮತ್ತು ಉತ್ಸಾಹಕ್ಕೆ ಕತ್ತಲೆ ಜಗತ್ತಿನೊಳಗೂ ಕೈಹಿಡಿದು ನಡೆಸುವ ದೊಡ್ಡ
ಶಕ್ತಿ ಇರುತ್ತದೆ. ಉತ್ಸಾಹ ಉಕ್ಕಿಸಿ ಕೊಳ್ಳಬೇಕ್ಕಷ್ಟೇ.

೧೦. ನಮ್ಮ ಆರಾಮದ ನೆಲೆಯನ್ನು ದಾಟೋಣ

ಆಗಲ್ಲ ಎನ್ನುವ ಸಂಗತಿ ಹುಟ್ಟುಕೊಳ್ಳುವುದೇ ನಾವು ಒಂದು  ವಿಷಯಕ್ಕೆ ವ್ಯಕ್ತಿಗೆ ಕೆಲಸಕ್ಕೆ ಸಂದರ್ಭಕ್ಕೆ ಇನ್ಯಾವುದೋ ವಲಯಕ್ಕೆ ಅಂಟಿಕೊಂಡು ಬಿಟ್ಟಿದ್ದರೆ. ಅಂಟಿಕೊಂಡಿರುವ ಯೋಚನೆ ನಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಮಾಡಿ ಬಿಡುತ್ತದೆ ನೀವೇನಾದರೂ ಅಸಾಧಾರಣವಾದ್ದದ್ದರ ಬಗ್ಗೆ ಯೋಚಿಸಿದ್ದೀರಾ? ಆರಾಮದ ಮನಸ್ಥಿತಿಯನ್ನು ದಾಟಿ. ಆಗ ನಿಮ್ಮ ಮಿತಿಗಳಾಚೆ ಬದುಕನ್ನು ನೋಡಬಹುದಾದ ಹೊಸ ಸಾಧ್ಯತೆಗಳು ನಿಮಗೆ ಕಾಣಸಿಗುತ್ತವೆ.