Monday, 16th September 2024

ಮಹಾತೀರ್ಪುಃ ಪ್ರಬುದ್ಧತೆ ಮೆರೆದ ಭಾರತೀಯರು

ಅಭಿಮತ

 ಮುರುಗೇಶ ಆರ್. ನಿರಾಣಿ, ಶಾಸಕರು, ಬೀಳಗಿ

ಸುಮಾರು ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆೆಯ ಮೇಲೆ ಗಾಢ ಪರಿಣಾಮ ಬೀರಿದ ಅಯೋಧ್ಯೆೆಯ ರಾಮಜನ್ಮ ಭೂಮಿ ಬಾಬರಿ ಮಸೀದಿ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಶನಿವಾರ ಪ್ರಕಟಿಸಿತು.

ಅಯೋಧ್ಯೆೆ ವಿವಾದವು ಹಲವು ಬಾರಿ ರಕ್ತಪಾತಕ್ಕೆೆ ಕಾರಣವಾಗಿದೆ. ರಾಷ್ಟ್ರದ ಶಾಂತಿಯನ್ನು ಕದಡಿದೆ. ಈ ಬಾರಿಯ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟನೆಗೆ ಮುನ್ನವೂ ದೇಶದಾದ್ಯಂತ ತೀವ್ರ ಆತಂಕ, ಭಯ, ಕಳವಳ ಸೃಷ್ಟಿಿಯಾಗಿತ್ತು. ಭಾರತದ ಮಹಾ ಜನತೆ ಈ ತೀರ್ಪನ್ನು ಅತ್ಯಂತ ಪ್ರಬುದ್ಧವಾಗಿ ಸ್ವೀಕರಿಸಿ, ಶಾಂತಿ-ಸೌಹಾರ್ದತೆ ಎಲ್ಲಕ್ಕಿಿಂತಲೂ ಮುಖ್ಯ ಎಂಬ ಇತಿಹಾಸ ಬರೆದಿರುವುದು ನಿಜಕ್ಕೂ ಹೆಮ್ಮೆೆ.

ದೇಶದ ಯಾವುದೇ ಮೂಲೆಯಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ತೀರ್ಪನ್ನು ಹಿಂದೂಗಳು-ಮುಸ್ಲಿಿಮರು ಹೃದಯಪೂರ್ವಕವಾಗಿ ಸ್ವಾಾಗತಿಸಿದ್ದಾಾರೆ. ಭಾರತ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಮಾತು ಅಕ್ಷರಶಃ ಅನಾವರಣಗೊಂಡಿದೆ. ಈ ತೀರ್ಪಿನಲ್ಲಿಯೂ ಕೂಡ ಸಾಮರಸ್ಯದ ವಿಚಾರಗಳು ಪ್ರಸ್ತಾಾಪವಾಗಿವೆ. ವಿವಾದಿತ 2.77 ಎಕರೆ ನಿವೇಶನ ಸಂಪೂರ್ಣವಾಗಿ ರಾಮಲಲ್ಲಾಾಗೆ ಸೇರಿದ್ದು, ಪ್ರಕರಣದ ಕಕ್ಷಿದಾರ ಸುನ್ನಿಿ ವಕ್‌ಫ್‌ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಾಗಿ ಅಯೋಧ್ಯೆೆಯ ಪ್ರಮುಖ ಪ್ರದೇಶದಲ್ಲಿ 5 ಎಕರೆ ವಿಸ್ತಾಾರದ ಜಮೀನು ನೀಡಬೇಕು ಎಂದು ಮುಖ್ಯ ನ್ಯಾಾಯಮೂರ್ತಿ ರಂಜನ್ ಗೊಗೋಯ್ ಹಾಗೂ ನ್ಯಾಾಯಮೂರ್ತಿಗಳಾದ ಶರಾದ್ ಅರವಿಂದ್ ಬೊಬ್ಡೆೆ, ಅಶೋಕ್ ಭೂಷಣ್, ಧನಂಜಯ್ ವೈ. ಚಂದ್ರಚೂಡ ಮತ್ತು ಎಸ್.ಅಬ್ದುಲ್ ನಜೀರ್ ನೇತೃತ್ವದ ನ್ಯಾಾಯಪೀಠ ಸರ್ವ ಸಮ್ಮತ ತೀರ್ಪು ನೀಡಿದೆ. ಈ ಸಮಿತಿಯ ಸದಸ್ಯರಾಗಿರುವ ನ್ಯಾಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಕನ್ನಡಿಗರು ಎಂಬುದು ಹೆಮ್ಮೆೆಯ ಸಂಗತಿ.

ಸುದೀರ್ಘವಾದ 1045 ಪುಟಗಳ ಈ ತೀರ್ಪಿನಲ್ಲಿ ಉಲ್ಲೇಖವಾದ ವಿಚಾರಗಳನ್ನು ಪ್ರತಿಯೊಬ್ಬ ಭಾರತೀಯ ಆಸಕ್ತಿಿಯಿಂದ ಓದುವುದು ಅವಶ್ಯವಿದೆ. ನಾನಾ ಧರ್ಮಗಳ ನಂಬಿಕೆಯ ನಡುವೆ ತಾರತಮ್ಮಕ್ಕೆೆ ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲ. ಎಲ್ಲರ ಮತ್ತು ಎಲ್ಲ ರೀತಿಯ ನಂಬಿಕೆ, ಪೂಜೆ-ಪುನಸ್ಕಾಾರ ಶ್ರದ್ಧೆೆ ಸಮಾನ ಎಂದು ಪೀಠ ಹೇಳಿದೆ. ಭಾರತದ ಸಂವಿಧಾನದ ಆಶಯಗಳನ್ನು ಎತ್ತಿಿ ಹಿಡಿದಿದೆ.
ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ನಿಚ್ಚಳವಾಗಿ ಸ್ಥಿಿರಾಸ್ತಿಿಗೆ ಸಂಬಂಧಿಸಿದ ವಿವಾದವಾಗಿದೆ. ಈ ವಿವಾದವನ್ನು ಧರ್ಮ ಅಥವಾ ನಂಬಿಕೆಯ ಮಾನದಂಡದಲ್ಲಿ ನಿರ್ಧರಿಸುವುದು ಸಾಧ್ಯವಿಲ್ಲ. ಸಾಕ್ಷಾಧಾರಗಳ ಮೇಲೆ ಮಾತ್ರ ತೀರ್ಪು ನೀಡಲು ಸಾಧ್ಯ ಎಂದೂ ಪೀಠ ಸ್ಪಷ್ಟವಾಗಿ ಹೇಳಿದೆ.

ಇತಿಹಾಸ, ಸಿದ್ಧಾಾಂತ, ಧರ್ಮ ಮತ್ತು ರಾಜಕೀಯ ತಕರಾರುಗಳಿಗಿಂತ ಕಾನೂನು ಬೇರೆಯಾಗಿಯೇ ಇರಬೇಕು ಎಂದು ನ್ಯಾಾಯಪೀಠ ಹೇಳಿರುವ ಮಾತು ಮುಂದಿನ ದಿನಗಳಲ್ಲಿ ಎಲ್ಲ ವಿವಾದಗಳಿಗೆ ಒಂದು ಆದರ್ಶ ಗೈಡಿಂಗ್ ಪೋಲ್ ಆಗುವುದು ಖಂಡಿತಾ. ಅಂತಹ ತೂಕ ಈ ಅಭಿಪ್ರಾಾಯದಲ್ಲಿ ವ್ಯಕ್ತವಾಗಿದೆ.

ಶಾಶ್ವತ ಶಾಂತಿ ಮತ್ತು ಸೌಹಾರ್ದದ ದೃಷ್ಟಿಿಯಿಂದ 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ನೀಡಿದ್ದ ತೀರ್ಪು ಜಾರಿಗೆ ಯೋಗ್ಯವಾಗಿಲ್ಲ ಎಂದು ಪೀಠ ಅಭಿಪ್ರಾಾಯ ವ್ಯಕ್ತಪಡಿಸಿರುವುದು ಗಮನಾರ್ಹ ಸಂಗತಿ. ಸುನ್ನಿಿ ವಕ್‌ಫ್‌ ಮಂಡಳಿ, ರಾಮಲಲ್ಲಾಾ ಮತ್ತು ನಿರ್ಮೋಹಿ ಅಖಾಡಕ್ಕೆೆ ವಿವಾದಿತ 2.77 ಎಕರೆ ಭೂಮಿಯನ್ನು ಸಮನಾಗಿ ಮೂರು ಭಾಗಮಾಡಿ ಹಂಚಬೇಕು ಎಂದು ಅಲಹಾಬಾದ್ ಹೈ ಕೋರ್ಟ್ ತೀರ್ಪು ನೀಡಿತ್ತು. ವಿವಾದಿತ ಜಮೀನು ಕಕ್ಷಿದಾರರ ಮಧ್ಯ ವಿಭಜಿಸುವುದರಿಂದ ಸಮಸ್ಯೆೆ ಬಗೆಹರಿಯುವುದಿಲ್ಲ. ಇದು ಕಕ್ಷಿದಾರರ ಹಿತಾಸಕ್ತಿಿಗೆ ಪೂರಕವಲ್ಲ ಎಂದು ಪೀಠ ಅಲಹಾಬಾದ್ ತೀರ್ಪನ್ನು ಪಕ್ಕಕ್ಕೆೆ ಸರಿಸಿರುವುದು ಸರಿಯಾದ ಅಭಿಪ್ರಾಾಯವಾಗಿದೆ.

ಈ ಪ್ರಕರಣದಲ್ಲಿ ಸೂಕ್ಷ್ಮ ಭಾವನಾತ್ಮಕ ಅಂಶಗಳು ಅಡಕವಾಗಿದ್ದವು. ರಾಜಕೀಯವಾಗಿಯೂ ಈ ವಿವಾದ ಗಂಭೀರ ಸ್ವರೂಪದ್ದಾಾಗಿತ್ತು. ಇದು ಕೇವಲ ಇಬ್ಬರು ವ್ಯಕ್ತಿಿಗಳ ವಿವಾದವಾಗಿರಲಿಲ್ಲ. ಬದಲಿಗೆ ಎರಡು ಬಹುದೊಡ್ಡ ಸಮುದಾಯಗಳ ನಡುವಿನ ಸೂಕ್ಷ್ಮ ಸಂವೇದನಾಶೀಲ ಪ್ರಕರಣವಾಗಿತ್ತು. ಇಂತಹ ದೊಡ್ಡ ಮಹತ್ವ ಪೂರ್ಣ, ಸುದೀರ್ಘ ಕಾಲದ ಮೊಕದ್ದಮೆಗೆ ನ್ಯಾಾಯಪೀಠ ಸರ್ವ ಸಮ್ಮತ ತೀರ್ಪು ನೀಡಿರುವುದು ಐತಿಹಾಸಿಕ ಎಂಬುದರಲ್ಲಿ ಸಂಶಯವೇ ಇಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಪ್ರಕರಣ ಗಮನ ಸೆಳೆದಿತ್ತು. ಭಾರತೀಯರು ಮತೀಯ ಕಲಹದಲ್ಲಿ ನರಳುತ್ತಿಿದ್ದಾಾರೆ ಎಂಬ ಹಗುರ ಮಾತುಗಳು ಅಂತಾರಾಷ್ಟ್ರೀಯ ರಾಜಕೀಯ ವೇದಿಕೆ ಮೇಲೆ ಕೇಳಿ ಬರುತ್ತಿಿದ್ದವು. ಈ ತೀರ್ಪನ್ನು ಸಹನೆ, ಸಂಯಮ ಮತ್ತು ಪ್ರೀತಿಯಿಂದ ಭಾರತದ ಎಲ್ಲ ವರ್ಗದ, ಎಲ್ಲ ಸಮುದಾಯದ ಜನಗಳು ಹೃದಯ ತುಂಬಿ ಸ್ವಾಾಗತಿಸಿರುವುದು ಭಾರತದ ಗೌರವವನ್ನು ಜಗತ್ತಿಿನಲ್ಲಿ ಹೆಚ್ಚಿಿಸಿದೆ.

ಹೀಗಿದೆ ಅಯೋಧ್ಯೆೆ…
* ಸರಯೂ ನದಿಯ ತಟದಲ್ಲಿ ಅಯೋಧ್ಯೆೆ ನೆಲೆಯಾಗಿದೆ.
* ಅಯೋಧ್ಯೆೆಯು ದೇವರಿಂದ ನಿರ್ಮಾಣವಾಗಿದೆ. ಎಂದು ಅಥರ್ವವೇದ ಉಲ್ಲೇಖಿಸುತ್ತದೆ.
* ರಾಮಾಯಣ ಹಿಂದೂ ಪುರಾಣಗಳಲ್ಲಿ ಅಯೋಧ್ಯೆೆಯ ಉಲ್ಲೇಖವಿದೆ.
* ಯಾತ್ರಿಿಕರ ಪ್ರಮುಖ ತಾಣ; ರಾಮನ ಜನ್ಮಸ್ಥಳ ಎಂಬ ನಂಬಿಕೆಯಿದೆ.
* ಅಯೋಧ್ಯೆೆಯಲ್ಲಿ 7 ಸಾವಿರ ಮಂದಿರಗಳಿದ್ದವು ಎಂದು ಇತಿಹಾಸ ಹೇಳುತ್ತದೆ. 100ಕ್ಕೂ ಹೆಚ್ಚು ದೇಗುಲಗಳ ಕುರುಹುಗಳು ಪತ್ತೆೆಯಾಗಿಸಿವೆ.
* ಬೌದ್ಧ, ಜೈನ್ ಪಂಥದ ಹಲವು ಸ್ಮಾಾರಕಗಳು ಇಲ್ಲಿ ಇವೆ.
* ಹನುಮಾನಘಡಿ, ಲಕ್ಷ್ಮಣ ಘಾಟ್, ಕಾಲಾ ರಾಮಮಂದಿರ, ಕನಕ ಭವನ ಇಲ್ಲಿನ ಕೆಲವು ಪ್ರಮುಖ ಸ್ಮಾಾರಕಗಳು.

ಇದುವರೆಗಿನ ಎಲ್ಲ ವಿವಾದ ಮತ್ತು ದ್ವೇಷವನ್ನು ದೂರವಿಟ್ಟು ಕೋಮು-ಸೌಹಾರ್ದತೆ ಮತ್ತು ಶಾಂತಿ ಸ್ಥಾಾಪಿಸುವ ಕಾಲ ಇದೀಗ ಬಂದಿದೆ. ಈ ನಿಟ್ಟಿಿನಲ್ಲಿ ನಾವೆಲ್ಲರೂ ಮುಂದೆ ಸಾಗೋಣ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸೋಣ ಒಗ್ಗಟ್ಟಿಿನಿಂದ ಭವ್ಯಭಾರತ ಕಟ್ಟೋೋಣ.
ಧೈರ್ಯ, ಶೌರ್ಯ, ಸಾಹಸ, ಉದಾರತೆಯ ಸಿಖ್ ಸಮುದಾಯದ ಗುರು ನಾನಕರ 550 ನೆಯ ಜಯಂತಿಯನ್ನು ರಾಷ್ಟ್ರದ ತುಂಬ ಸಂಭ್ರಮದಿಂದ ಆಚರಿಸಲಾಗುತ್ತಿಿದೆ. ಜಾತಿ ಧರ್ಮಗಳ ಭೇದವಿಲ್ಲದ ಸರ್ವ ಸಮಾನತೆಯ ಸರಳ ಬದುಕಿನ ಹಾದಿಯಲ್ಲಿ ನಡೆದ ಗುರು ನಾನಕರು, ಜಗತ್ತಿಿಗೇ ಗುರುಗಳಾದವರು. ಅವರ 550 ನೆಯ ಜನ್ಮ ವರ್ಷದ ಆಚರಣೆ ದೇಶದ ತುಂಬ ನಡೆಯುತ್ತಿಿರುವ ಸಂದರ್ಭದಲ್ಲಿಯೇ ಈ ಸೌಹಾರ್ದತೆಯ ತೀರ್ಪು ಬಂದಿದ್ದು ಸಂತಸದ ಸಂಗತಿ.

ಅಕ್ಬರ್ ಬಾದಶಹಾ ಸಿಖ್ ಗುರುಗಳನ್ನು ಅತ್ಯಂತ ಗೌರವದಿಂದ ಕಂಡಿದ್ದಾಾರೆ. 1569ರಲ್ಲಿ ಅಕ್ಬರ್ ಪಂಜಾಬಿಗೆ ಬಂದಾಗ ಗುರುದ್ವಾಾರಕ್ಕೆೆ ಭೇಟಿ ನೀಡಿದ್ದರು. ಗುರುನಾನಕರ ಧರ್ಮ ನನಗೆ ಅತ್ಯಂತ ಪ್ರಿಿಯವಾಗಿದೆ. ಲಂಗರಿನಲ್ಲಿ ಪ್ರೀತಿಯಿಂದ ಬಡಿಸಿದ ಸರಳ ಊಟ ನನ್ನ ಮನಸ್ಸನ್ನು ಪ್ರಸನ್ನಗೊಳಿಸಿದೆ. ನನ್ನ ಅಹಂಕಾರಗಳು ಸದ್ದಿಲ್ಲದೇ ಕರಗಿಹೋಗಿವೆ ಎಂದು ಅಕ್ಬರ್ ಹೇಳಿದ ಮಾತುಗಳನ್ನು ಮತ್ತೆೆ ಮತ್ತೆೆ ಈಗ ನೆನಪು ಮಾಡಿಕೊಳ್ಳುವುದಲ್ಲಿ ಅವಶ್ಯವಿದೆ.
ತೀರ್ಪು ಅತ್ಯಂತ ಸಮತೋಲಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಾಣಿ ಸ್ವಾಾಗತಿಸಿದ್ದಾಾರೆ. ದೇಶದಲ್ಲಿ ನಿರುದ್ಯೋೋಗ ಸಮಸ್ಯೆೆ ತೀವ್ರವಾಗಿ ಏರುತ್ತಿಿದೆ. ಬೆಲೆ ಏರಿಕೆಯಿಂದಾಗಿ ಬಡಜನರ ಬದುಕು ಕಷ್ಟಮಯವಾಗಿದೆ. ನೆರೆಹಾವಳಿಯ ಸಮಸ್ಯೆೆ ಎಲ್ಲರನ್ನು ಕಾಡುತ್ತಿಿದೆ. ಬಡತನ ಮತ್ತು ಆರ್ಥಿಕ ಸಮಸ್ಯೆೆಗಳನ್ನು ನಿವಾರಿಸುವತ್ತ ನಾಯಕರೆಲ್ಲರೂ ತುರ್ತು ಗಮನ ಕೊಡಬೇಕು.

ಮನುಷ್ಯ ಜಾತಿ ತಾನ್ನೊೊಂದೆ ವಲಂಃ ಈಚೆಗೆ ಕೃಷ್ಣ-ಘಟಪ್ರಭಾ ನದಿಗಳ ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ಮನೆ-ಮಾರು ಕಳೆದುಕೊಂಡು ನಿರಾಶ್ರಿಿತರಾಗಿದ್ದರು. ಸುಮಾರು 500 ಕುಟುಂಬಗಳಿಗೆ ನಮ್ಮ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಕಾಲೋನಿಯಲ್ಲಿ ಅವರ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆೆ ನಮ್ಮ ಎಂಆರ್‌ಎನ್ ಫೌಂಡೇಶನ್ ಪರವಾಗಿ ಮಾಡಲಾಗಿತ್ತು. ಅವರು ಬೇರೆ ಬೇರೆ ಜಾತಿ-ಧರ್ಮ ನಂಬಿಕೆಗಳಿಗೆ ಸೇರಿದವರು. ಆದರೆ, ಅವರೆಲ್ಲ 40 ದಿನ ನಮ್ಮಲ್ಲಿ ಒಂದೇ ತಾಯಿಯ ಮಕ್ಕಳಾಗಿ ಬದುಕಿದರು. ಕಷ್ಟಗಳಿಗೆ ಮನುಷ್ಯರನ್ನು ಬೆಸೆಯುವ ಶಕ್ತಿಿ ಇದ್ದಂತೆ ಕಾಣುತ್ತಿಿದೆ. ‘ಮನುಜಕುಲಂ ಒಂದೇ ವಲಂ’ ಎಂದು ಆದಿಕವಿ ಪಂಪ ಹೇಳಿದ ಮಾತು ಎಲ್ಲರಿಗೂ ಸ್ಮರಣೀಯ.
ನಿರೂಪಣೆ: ಮಲ್ಲಿಕಾರ್ಜುನ ಹೆಗ್ಗಳಗಿ

Leave a Reply

Your email address will not be published. Required fields are marked *