Thursday, 28th November 2024

ಆಧುನಿಕ ತಂತ್ರಜ್ಞಾನದ ಗರ್ಭಧಾರಣೆ

Matru Vandana Scheme

ಸ್ವಾಸ್ಥ್ಯ ಸಂಪದ

yoganna55@gmail.com

ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಸೃಷ್ಟಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಎಲ್ಲವನ್ನು ವಿಕಾಸಿಸುತ್ತ, ಸಂತಾನೋತ್ಪತ್ತಿಯ ಮೂಲಕ ಪ್ರಸ್ತುತ ಹಂತವನ್ನು ತಲುಪಿರುತ್ತದೆ. ಸೃಷ್ಟಿಯಲ್ಲಿರುವ ಎಲ್ಲವು ತಮ್ಮ ತಮ್ಮ ಸಂತಾನೋತ್ಪತ್ತಿಯ ಮೂಲಕ ಮುಂದು ವರೆಯಬೇಕೆಂಬುದೇ ಸೃಷ್ಟಿಕರ್ತನ ಅಪೇಕ್ಷೆ.

ಸುಮಾರು 20ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದಾದ ಮಾನವ ಸಂತತಿ ಯೂ ಸಹ ಸಂತಾನೋತ್ಪತ್ತಿಯ  ಮೂಲಕ ಆದಿಮಾನವನಿಂದ ಹಿಡಿದು ಆಧುನಿಕ ಮಾನವನವರೆಗೆ ವಿಕಾಸಗೊಂಡು ಮುಂದುವರೆದುಕೊಂಡುಬಂದಿದೆ. ಸುಮಾರು 200ರಾಷ್ಟ್ರಗಳಲ್ಲಿ ಸುಮಾರು 700ಕೋಟಿ ಜನಸಂಖ್ಯೆ ಇಂದು ಇದೆ. ಭಾರತೀಯರಲ್ಲಿ ಫಲವತ್ತತೆ ಅಧಿಕವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಸಂತಾನಹೀನರ ಸಂಖ್ಯೆಯೂ ಸಹ ಅಧಿಕವಾಗುತ್ತಿದ್ದು, 6 ಜನ ವಿವಾಹಿತ ದಂಪತಿಗಳಲ್ಲಿ ಒಂದು ದಂಪತಿಗಳು ಸಂತಾನ ಹೀನತೆಯಿಂದ ಬಳಲುತ್ತಿದ್ದಾರೆ.

ದಿನೇ ದಿನೇ ಸಂತಾನಹೀನರುಗಳ ಸಂಖ್ಯೆ ಜಾಗತಿಕಮಟ್ಟದಲ್ಲೂ ಅಧಿಕವಾಗುತ್ತಿದ್ದು, ಭಾರತದಲ್ಲಿ ಒಂದು ಮಗುವನ್ನೂ ಹೊಂದಿರದ ದಂಪತಿಗಳ ಸಂಖ್ಯೆ ಸುಮಾರು 27.5ಮಿಲಿಯನ್ ಎಂದು ಅಂದಾಜಿಸಿರುವುದು ಸಂತಾನಹೀನತೆಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ. ಭೌತಿಕ ಅಭಿವೃದ್ಧಿಯ ಹಿನ್ನಡೆಗೆ ಜನಸಂಖ್ಯಾಸ್ಫೋ ಒಂದೆಡೆ ಯಾದರೆ, ಮಾನವರಲ್ಲಿ ಕುಗ್ಗುತ್ತಿರುವ ಫಲವತ್ತತೆ ಮುಂದಿನ ದಿನಗಳಲ್ಲಿ ಮಾನವ ಸಂತತಿಯ ಮುಂದುವರಿಕೆಗೆ ಮತ್ತು ಸಂತಾನಸುಖಾನುಭವಕ್ಕೆ ಧಕ್ಕೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಸಂತಾನಹೀನತೆಗೆ ಕಾರಣಗಳೇನು? ಮಾರ್ಗೋಪಾಯಗಳೇನು? ಎಂಬುವುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಜೂನ್ ತಿಂಗಳು ಸಂತಾನಹೀನತೆಯ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂತಾನ ಹೀನತೆಯ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

ಫಲವತ್ತತೆ (ಗರ್ಭಧಾರಣೆ)

ಸಂಭೋಗದ ಸಮಯದಲ್ಲಿ ಪುರುಷರಲ್ಲಿನ ಅಸಂಖ್ಯಾತ ವೀರ್ಯಾಣುಗಳಲ್ಲೊಂದು ಪ್ರತಿ ಮುಟ್ಟಿನ ಚಕ್ರದ ಮಧ್ಯದ ದಿನ ಬಿಡುಗಡೆಯಾಗುವ ಅಂಡಾಣುವಿನೊಂದರೊಡನೆ ಸಮ್ಮಿಲನಗೊಂಡು ಗರ್ಭ ಧಾರಣೆಯಾಗುತ್ತದೆ.

ಗರ್ಭಧಾರಣೆಗೆ ಆಗಿದ್ದಾಗಿನ ಸಂಭೋಗ ಅದರಲ್ಲೂ ಅಂಡಾಣು ಬಿಡುಗಡೆಯಾಗುವ ಸಮಯದಲ್ಲಿನ ಸಂಭೋಗ ಅತ್ಯವಶ್ಯಕ.
ಬಿಡುಗಡೆಯಾಗುವ ಅಂಡಾಣು ಕೇವಲ 24-37 ಗಂಟೆಗಳ ಕಾಲ ಮಾತ್ರ ಬದುಕುವುದರಿಂದ ಈ ಅವಧಿಯಲ್ಲಿ ವೀರ್ಯಾಣುವಿನ ಸಂಪರ್ಕವಾದಲ್ಲಿ ಗರ್ಭಧಾರಣೆಯಾಗುತ್ತದೆ. ಗರ್ಭಧಾರಣೆಗೆ ಪಕ್ವ ಅಂಡಾಣುವಿನ ಬಿಡುಗಡೆ, ಅಂಡನಾಳ ಮತ್ತು ಗರ್ಭ ಕೋಶಗಳ ಸಹಜಸ್ಥಿತಿ, ರವಾನೆ ಮತ್ತು ಆರೋಗ್ಯಕರ ನಿರ್ದಿಷ್ಟ ಸಂಖ್ಯೆಯ ವೀರ್ಯಾಣುಗಳು ಅಂಡಾಣುವಿನ ಜತೆ ಇರುವಿಕೆ ಮತ್ತು ಸಕಾಲದಲ್ಲಾಗುವ ಸಂಭೋಗ ಅತ್ಯವಶ್ಯಕ.

ಅಂಡಾಣು ಮತ್ತು ವೀರ್ಯಾಣುಗಳ ಉತ್ಪತ್ತಿ ಪಿಟ್ಯೂಟರಿ ಗ್ರಂಥಿಯಲ್ಲಿ ಸುರಿಕೆಯಾಗುವ ಲೈಂಗಿಕ ಹಾರ್ಮೋನುಗಳ ನಿಯಂತ್ರಣ ದಲ್ಲಿದ್ದು, ಇವುಗಳ ಕಾಲೀಕ ಸುರಿಕೆಯಿಂದ ಅಂಡಾಶಯ ಮತ್ತು ವೃಷಣಗಳಿಂದ ಅಂಡಾಣು ಮತ್ತು ವೀರ್ಯಾಣು ಗಳು ಉತ್ಪತ್ತಿಯಾಗುತ್ತವೆ. ಪಿಟ್ಯೂಟರಿ ಗ್ರಂಥಿಯಿಂದ ಬಿಡುಗಡೆಯಾಗುವ ಅಂಡಾಣು ಚೀಲ ಪ್ರಚೋದಕ ಹಾರ್ಮೋನ್ ಅಂಡಾಣು ಚೀಲದಲ್ಲಿರುವ ಅಂಡಾಣುವನ್ನು ಪಕ್ವಗೊಳಿಸುತ್ತದೆ.

ಅನಂತರ ಬಿಡುಗಡೆಯಾಗುವ ಅಂಡಾಣು ಬಿಡುಗಡೆಗೊಳಿಸುವ ಹಾರ್ಮೋನ್ (ಲ್ಯೂಟಿನೈ ಸಿಂಗ್ ಹಾರ್ಮೋನ್-ಎಲ್.ಎಚ್) ಪಕ್ವ ಅಂಡಾಣು ವನ್ನು ಚೀಲದಿಂದ ಬಿಡುಗಡೆಮಾಡಿ ಗರ್ಭಧಾರಣೆಗೆ ಸಿಗುವಂತಾಗಿಸುತ್ತದೆ. ಪುರುಷರಲ್ಲಿ ಎಫ್.ಎಸ್.ಎಚ್. ಮತ್ತು ಎಲ್.ಎಚ್. ಹಾರ್ಮೋನ್‌ಗಳು ವೃಷಣಗಳ ಮೇಲೆ ಪರಿಣಾಮಬೀರಿ ವೀರ್ಯಾಣುಗಳನ್ನು ಉತ್ಪತ್ತಿಮಾಡುತ್ತವೆ. ಸ್ತ್ರೀರಲ್ಲಿ ಒಂದು ಮುಟ್ಟಿನ ಚಕ್ರದಲ್ಲಿ ಅಂದರೆ ತಿಂಗಳಿಗೊಮ್ಮೆ ಸಾಮಾನ್ಯವಾಗಿ ಒಂದು ಅಂಡಾಣು ಮುಟ್ಟಿನ ಅಂತ್ಯ ದವರೆವಿಗೂ ಬಿಡುಗಡೆ ಯಾಗುತ್ತದೆ.

ಆದರೆ ಪುರುಷರಲ್ಲಿ ವೀರ್ಯಾಣುಗಳು ಮುಪ್ಪಿನಲ್ಲೂ ನಿರಂತರವಾಗಿ ಉತ್ಪತ್ತಿಯಾಗಿ ಅವರು ಗಳಲ್ಲಿ ಸಂತಾನೋತ್ಪತ್ತಿಯ ಸಾಮರ್ಥ್ಯ ಅಂತಿಮ ದಿನಗಳವರೆವಿಗೂ ಇರುತ್ತದೆ. ಇವುಗಳ ಲ್ಲಾಗುವ ಏರುಪೇರುಗಳಿಂದ ಸಹಜ ಅಂಡಾಣು ವೀರ್ಯಾಣುಗಳ ಉತ್ಪತ್ತಿಗೆ ಧಕ್ಕೆಯಾಗುತ್ತದೆ. ಗರ್ಭನಿರೋಧಕದ ಯಾವುದೇ ವಿಧಾನಗಳಿಲ್ಲದೆ ಆಗಿಂದಾಗ್ಗೆ ಸಂಭೋಗ ಮಾಡುವ ಶೇ.30ರಷ್ಟು
ದಂಪತಿಗಳಲ್ಲಿ 3 ತಿಂಗಳಲ್ಲೂ, ಶೇ.75ರಷ್ಟು ದಂಪತಿಗಳಲ್ಲಿ 6ತಿಂಗಳುಗಳಲ್ಲೂ ಮತ್ತು ಶೇ.90ರಷ್ಟು ದಂಪತಿಗಳಲ್ಲಿ ಒಂದು ವರ್ಷದೊಳಗೆ ಸಾಮಾನ್ಯವಾಗಿ ಗರ್ಭಧಾರಣೆಯಾಗುತ್ತದೆ.

ಗರ್ಭಧಾರಣೆ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಕನಿಷ್ಠ ೩ರಿಂದ ೬ದಿನಗಳಿಗೊಮ್ಮೆ ಅದರಲ್ಲೂ ಮುಂದಿನ ಮುಟ್ಟಿನ ರಕ್ತಸ್ರಾ ವದ ದಿನದ ಹಿಂದಿನ ಹದಿನಾಲ್ಕನೇ ದಿನದಂದು ಸಂಭೋಗಿಸಬೇಕು. ಇದು ಮುಟ್ಟಿನ ಚಕ್ರ 28 ದಿನಗಳಿಗೊಮ್ಮೆ ಕರಾರು ವಾಕ್ಕಾಗಿ ಆಗುವವರಲ್ಲಿ ಫಲಪ್ರದವಾಗುವ ಸಾಧ್ಯತೆ ಹೆಚ್ಚು. ಸ್ತ್ರೀರಲ್ಲಿ ಅಂಡಾಣು ಬಿಡುಗಡೆಯಾದಾಗ ದೇಹದ ತಾಪಮಾನ ಹೆಚ್ಚಾಗುತ್ತದೆಯಾದುದರಿಂದ ಪ್ರತಿನಿತ್ಯ ದೇಹದ ಉಷ್ಣತೆಯನ್ನು ಪರೀಕ್ಷಿಸಿ ಉಷ್ಣತೆ ಹೆಚ್ಚಾದ ದಿನವನ್ನು ಗುರುತಿಸಿ ಅಂಡಾಣು ಬಿಡುಗಡೆಯಾದ ದಿನವನ್ನು ಗುರುತಿಸಿಕೊಳ್ಳಬಹುದು.

ಅಂಡಾಣು ಬಿಡುಗಡೆಯಾಗುವುದನ್ನು ಲ್ಯೂಟಿನೈಸಿಂಗ್ ಹಾರ್ಮೋನನ್ನು ಮೂತ್ರ ದಲ್ಲಿ ಸ್ಟ್ರಿಪ್ ಒಂದರಿಂದ ಪರೀಕ್ಷಿಸಿ ನಿಖರಪಡಿಸಿ ಕೊಳ್ಳಬಹುದು. ಅಂಡಾಣು ಬಿಡುಗಡೆಯನ್ನು ನಿಖರಪಡಿಸಿಕೊಳ್ಳಲು ಇದು ಅತ್ಯಂತ ನಿಖರವಾದ ವಿಧಾನ. ಅಂಡಾಣು ಬಿಡುಗಡೆ ಯನ್ನು ಖಚಿತಪಡಿಸಿಕೊಂಡು ಅಂದು ಸಂಭೋಗಮಾಡುವುದರಿಂದ ಖಚಿತ ಗರ್ಭ ಧಾರಣೆಯ ಸಂಭವ ಹೆಚ್ಚಾಗುತ್ತದೆ. ಸ್ತ್ರೀಯರಲ್ಲಿ 30ವರ್ಷಗಳವರೆವಿಗೆ ಫಲವತ್ತತೆಯ ಸಾಮರ್ಥ್ಯ ಅಧಿಕವಾಗಿದ್ದು, ಅನಂತರ ಕ್ಷೀಣಿಸುತ್ತದೆ.

ಸಂತಾನಹೀನತೆಗೆ ಕಾರಣಗಳು
ಗರ್ಭನಿರೋಧಕ ವಿಧಾನಗಳಿಲ್ಲದೆ ಆಗಾಗ ಸಂಭೋಗಿಸುತ್ತಿದ್ದರೂ ದಂಪತಿಗಳಿಗೆ ಒಂದು ವರ್ಷದೊಳಗೆ ಗರ್ಭಧಾರಣೆ ಯಾಗದಿದ್ದಲ್ಲಿ ಅಂತಹವರನ್ನು ಸಂತಾನಹೀನರು ಎಂದು ಪರಿಗಣಿಸಿ ಕಾರಣಗಳನ್ನು ಕಂಡುಕೊಳ್ಳಲು ಪರೀಕ್ಷೆಗೆ ಒಳಪಡಿಸು ವುದು ಅತ್ಯವಶ್ಯಕ. ಸಂತಾನಹೀನತೆಗೆ ಕಾರಣಗಳು ಪುರುಷರಲ್ಲಿ, ಸ್ತ್ರೀರಲ್ಲಿ ಅಥವಾ ಇಬ್ಬರಲ್ಲೂ ಇರಬಹುದು.

ದಂಪತಿಗಳಿಗೆ ಪ್ರಾರಂಭದಿಂದಲೂ ಒಂದು ಮಗುವೂ ಆಗದಿರಬಹುದು ಅಥವಾ ಒಂದು ಮಗುವಾದ ನಂತರ ಮತ್ತೊಂದು ಮಗು
ಆಗದಿರಬಹುದು. ಧೂಮ ಪಾನ, ಮದ್ಯಪಾನ, ಸ್ಥೂಲಕಾಯ, ಮಾನಸಿಕ ಒತ್ತಡ, ಅತಿಯಾದ ಕಾಫಿ ಮತ್ತು ಟೀ ಸೇವನೆ(ದಿನಕ್ಕೆ 5-6 ಕಪ್), ಕೆಲವು ಔಷಧಗಳ ಸೇವನೆ, ಸಕ್ಕರೆಕಾಯಿಲೆ, ಥೈರಾಯಿಡ್ ಗ್ರಂಥಿಯ ಕಾಯಿಲೆಗಳು, ಕ್ಷಯ ಮತ್ತು ಕೆಲ ಔಷಧಗಳ ಸೇವನೆ ಇವು ಸೀ ಪುರುಷರಿಬ್ಬರಲ್ಲೂ ಸಂತಾನಹೀನತೆಗೆ ಕಾರಣವಾಗುತ್ತವೆ.

ಪುರುಷರಲ್ಲಿನ ಕಾರಣಗಳು
ಶೇ.೩೫ಕ್ಕೂ ಹೆಚ್ಚಿನ ದಂಪತಿಗಳಲ್ಲಿ ಸಂತಾನಹೀನತೆಗೆ ಪುರುಷರಲ್ಲಿನ ದೋಷಗಳು ಕಾರಣವಾಗಿವೆ. ಪುರುಷರಲ್ಲಿ ವೀರ್ಯಾಣು ಗಳ ಉತ್ಪತ್ತಿಯಲ್ಲಿ, ಸಂಖ್ಯೆಯಲ್ಲಿ ಅಥವಾ ರಚನೆಯಲ್ಲಿ ದೋಷವಿರಬಹುದು.

1ಎಂಎಲ್ ವೀರ್ಯದಲ್ಲಿ 40-300ಮಿಲಿಯನ್ ವೀರ್ಯಾಣುಗಳಿರುತ್ತವೆ. ಸಹಜ ಗರ್ಭಧಾರಣೆಗೆ ಕನಿಷ್ಠ 10-20 ಮಿಲಿಯನ್ ಆರೋಗ್ಯಕರ ವೀರ್ಯಾಣುಗಳು ಅತ್ಯವಶ್ಯಕ. ಒಂದು ಸ್ಖಲನದಲ್ಲಿ 39-900 ಮಿಲಿಯನ್‌ಗಳಷ್ಟು ವೀರ್ಯಾಣುಗಳಿರುತ್ತವೆ. ವೃಷಣಗಳಿಗೆ ಬೀಳುವ ಪೆಟ್ಟು, ಮಮ್ಸ್, ವೃಷಣಗಳ ಕಾಯಿಲೆಗಳು ಪಿಟ್ಯೂಟರಿ ಗ್ರಂಥಿಗಳ ಕಾಯಿಲೆಗಳು ಮತ್ತು ವಂಶವಾಹಿಗಳ ನ್ಯೂನತೆ ವೀರ್ಯಾಣುಗಳ ದೋಷಕ್ಕೆ ಮುಖ್ಯ ಕಾರಣಗಳು.

ಸ್ತ್ರೀಯರಲ್ಲಿನ ಕಾರಣಗಳು
ಅಂಡಾಣು ಬಿಡುಗಡೆಯಲ್ಲಿನ ಸಮಸ್ಯೆಗಳು (ಶೇ. 20), ಅಂಡನಾಳಗಳ ಅಡಚಣೆಗಳು ಮತ್ತು ಗರ್ಭಕೋಶದ ಸಮಸ್ಯೆಗಳು (ಶೇ.30) ಸರ್ವಿಕ್ಸ್‌ನ ಮ್ಯೂಕಸ್‌ನ ಸಮಸ್ಯೆಗಳು(ಶೇ.5) ಮತ್ತು ಗೊತ್ತುಮಾಡಲಾಗದ ಅಂಶಗಳು(ಶೇ.10). ಸರ್ವಿಕ್ಸ್‌ನ ಮ್ಯೂಕಸ್
ದ್ರವದಲ್ಲಿ ವೀರ್ಯಾಣುಗಳನ್ನು ನಾಶಮಾಡುವ ನಿರೋಧಕ ವಸ್ತುಗಳು ಇದ್ದಲ್ಲಿ ಗರ್ಭಧಾರಣೆ ಯಾಗುವುದಿಲ್ಲ.

ದೃಢೀಕರಣ ಪರೀಕ್ಷೆಗಳು
ಸೀಯರಲ್ಲಿ ಯೋನಿಯೊಳಗಿನ ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಅಂಡಾಣು ಬಿಡುಗಡೆ ಮತ್ತು ಸಂತಾನಾಂಗಗಳಾದ ಅಂಡಾ ಶಯಗಳು, ಅಂಡನಾಳಗಳು, ಗರ್ಭಕೋಶಗಳ ನ್ಯೂನತೆಯನ್ನು ಪತ್ತೆಮಾಡಿಕೊಳ್ಳಲಾಗುತ್ತದೆ. ಗರ್ಭಕೋಶ- ಅಂಡನಾಳಗಳ ಚಿತ್ರೀಕರಣ, ಒಳ ಗರ್ಭಕೋಶ ಪದರದ ಬಯಾಪ್ಸಿಯಿಂದ ಗರ್ಭಕೋಶದ ರಚನೆಯನ್ನು ತಿಳಿದುಕೊಳ್ಳಲಾಗುತ್ತದೆ.

ರಕ್ತದಲ್ಲಿ ಸ್ತ್ರೀ ಲೈಂಗಿಕ ಹಾರ್ಮೋನ್‌ಗಳ ಅಳತೆ ಇವುಗಳಿಂದ ಸಂತಾನಹೀನತೆಗೆ ನಿರ್ದಿಷ್ಟ ಕಾರಣವನ್ನು ಕಂಡುಕೊಳ್ಳ ಲಾಗುತ್ತದೆ.

ಚಿಕಿತ್ಸಾ ವಿಧಾನಗಳು
ಚಿಕಿತ್ಸಾ ವಿಧಾನಗಳು ಕಾರಣಗಳನ್ನವಲಂಬಿಸಿರುತ್ತವೆ. ದಂಪತಿಗಳಿಬ್ಬರಲ್ಲೂ ಏನೂ ಸಮಸ್ಯೆಗಳಿಲ್ಲದಿದ್ದಲ್ಲಿ ಗರ್ಭಧಾರಣೆ ಯಾಗುವ ದಿನಗಳಂದು ಸಂಭೋಗಿಸಬೇಕೆಂದು ಸಲಹೆ ನೀಡಬೇಕು. ಚಿಕಿತ್ಸಾ ವಿಧಾನ ಗಳನ್ನು ದೇಹದೊಳಗಿನ ಸಹಕಾರಿತ ಗರ್ಭಧಾರಣೆ ಮತ್ತು ದೇಹದ ಹೊರಗಿನ ಸಹಕಾರಿತ ಗರ್ಭಧಾರಣೆ ಎಂದು ವರ್ಗೀಕರಿಸಲಾಗಿದೆ. ದೇಹದೊಳಗಿನ ಸಹಕಾರಿತ ಗರ್ಭಧಾರಣೆಯಲ್ಲಿ ಅಂಡಾಣು ಮತ್ತು ವೀರ್ಯಾಣುಗಳನ್ನು ಅಂಡನಾಳ ಅಥವಾ ಗರ್ಭಕೋಶದೊಳಗೆ ಸಮ್ಮಿಶ್ರಿಸಿ ಗರ್ಭ ಧಾರಣೆ ಮಾಡಲಾಗುತ್ತದೆ. ಅಂಡಾಣು ಮತ್ತು ವೀರ್ಯಾಣುಗಳು ಅದೇ ದಂಪತಿಗಳದ್ದಾಗಿರಬಹುದು ಅಥವಾ ಇವುಗಳಲ್ಲಿ ಯಾವುದಾದರೊಂದು ಅಥವಾ ಎರಡೂ ಸಹ ದಾನಿಗಳದ್ದಾಗಿರಬಹುದು.

ಪಿಟ್ಯೂಟರಿ ಗ್ರಂಥಿಯಲ್ಲಿ ಲೈಂಗಿಕ ಹಾರ್ಮೋನುಗಳು ಜನ್ಮದತ್ತವಾಗಿ ಉತ್ಪತ್ತಿಯಾಗದಿರುವಿಕೆ, ಅಂಡಾಶಯಗಳು ಬೆಳವಣಿಗೆ ಯಾಗದಿರುವಿಕೆ, ಸಂದರ್ಭಗಳಲ್ಲಿ ಲೈಂಗಿಕ ಹಾರ್ಮೋನುಗಳನ್ನು ನೀಡಿ ಬೆಳವಣಿಗೆಯನ್ನು ಸರಿಪಡಿಸಲಾಗುತ್ತದೆ. ಗರ್ಭ ಕೋಶದ ಸರಿಪಡಿಸಲಾಗದ ಜನ್ಮದತ್ತ ನ್ಯೂನತೆಯಿದ್ದಲ್ಲಿ ಬಾಡಿಗೆ ಗರ್ಭಕೋಶದ ಸಂತಾನೋತ್ಪತ್ತಿ ಅನಿವಾರ್ಯ. ಸ್ತ್ರೀ ಸಂತಾನಾಂಗಗಳು ಸಹಜವಾಗಿದ್ದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿದ್ದಲ್ಲಿ ವೀರ್ಯಾಣುಗಳನ್ನು ಸಂಗ್ರಹಿಸಿ ಯೋನಿಯ ಮುಖಾಂತರ ಗರ್ಭಕೋಶದೊಳಕ್ಕೆ ಅಥವಾ ಅಂಡನಾಳಕ್ಕೆ ಅವುಗಳನ್ನು ಅಂಡಾಣು ಬಿಡುಗಡೆಯನ್ನು
ಖಾತರಿಪಡಿಸಿಕೊಂಡು ನೀಡಲಾಗುತ್ತದೆ.

ಗಂಡನ ವೀರ್ಯಾಣುಗಳ ದೋಷವಿದ್ದಲ್ಲಿ ದಾನಿಯ ವೀರ್ಯಾಣುಗಳನ್ನು ನೀಡಲಾಗುತ್ತದೆ. ಅಂಡಾಣುಗಳ ಉತ್ಪತ್ತಿಯ ದೋಷವಿದ್ದು, ಇನ್ನೆಲ್ಲವೂ ಸಹಜವಾಗಿದ್ದಲ್ಲಿ ಅಂಡಾಣು ಉತ್ಪತ್ತಿಯನ್ನು ಪ್ರಚೋದಿಸುವ ಔಷಧಗಳನ್ನು ನೀಡಿ ಹೆಚ್ಚು ಅಂಡಾಣುಗಳನ್ನು ಉತ್ಪತ್ತಿಮಾಡಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲಾಗುತ್ತದೆ.

ಅಂಡನಾಳಗಳ ಅಡಚಣೆ, ಎಂಡೋಮೆಟ್ರಿಯೋಸಿಸ್ ಮತ್ತು ದೇಹದೊಳಗಿನ ಗರ್ಭಧಾರಣೆ ವಿಧಾನಗಳು ವಿಫಲವಾದ ಸಂದರ್ಭಗಳಲ್ಲಿ ಗರ್ಭಕೋಶ ಸಹಜವಾಗಿದ್ದಲ್ಲಿ ದೇಹದ ಹೊರಗಿನ ಸಹ ಕಾರಿತ ಗರ್ಭಧಾರಣೆಯ ವಿಧಾನವನ್ನು ಆಯ್ಕೆ
ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಕಾರಣಕ್ಕನುಗುಣವಾಗಿ ಅಂಡಾಣು ಮತ್ತು ವೀರ್ಯಾಣುಗಳು ದಂಪತಿಗಳದ್ದೇ ಆಗಿರಬಹುದು ಅಥವಾ ಯಾವುದಾದರೊಂದು ಇಲ್ಲವೇ ಎರಡೂ ದಾನಿಗಳದ್ದಾಗಿ ರಬಹುದು. ವೀರ್ಯಾಣು ಮತ್ತು ಅಂಡಾಣುಗಳನ್ನು
ಸಂಗ್ರಹಿಸಿ ಇವುಗಳನ್ನು ಐವಿಎಫ್ ಲ್ಯಾಬ್‌ನಲ್ಲಿ ಕೃಷಿ ಮಾಡಿ ಸಮ್ಮಿಲನಗೊಳಿಸಿ ಭ್ರೂಣವನ್ನು ಉತ್ಪತ್ತಿ ಮಾಡಿ ಅದನ್ನು ಗರ್ಭಕೋಶದೊಳಕ್ಕೆ ರವಾನಿಸಿ ಹುದುಗಿಸ ಲಾಗುತ್ತದೆ.

ವೀರ್ಯಾಣುಗಳನ್ನು ಅಂಡಾಣುಗಳ ಸುತ್ತ ಸುತ್ತುವರಿಸಿ ವೀರ್ಯಾಣುವೇ ಅಂಡಾಣುವಿನೊಳಕ್ಕೆ ಹೊಕ್ಕುವಂತಾಗಿಸಿ ಹೊರಗೆ
ಗರ್ಭ ಧಾರಣೆ ಮಾಡಬಹುದು ಅಥವಾ ವೀರ್ಯಾಣುವನ್ನು ಅಂಡಾಣುವಿನ ಜೀವರಸದೊಳಕ್ಕೆ ಚುಚ್ಚುಮದ್ದಾಗಿ ನೀಡಿ ಹೊರಗೆ ಗರ್ಭಧಾರಣೆ ಮಾಡಿ, ಅನಂತರ ಗರ್ಭಕೋಶದೊಳಕ್ಕೆ ವರ್ಗಾಯಿಸಲಾಗುತ್ತದೆ.

ಕೆಲವು ಆಹಾರಪದಾರ್ಥಗಳು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು ಅಥವಾ ಕುಂದಿಸಬಹುದು. ಕಿತ್ತಳೆ, ದ್ರಾಕ್ಷಿ, ಸಿಟ್ರಸ್ ಹಣ್ಣುಗಳು, ಸೇಬು, ಮಾವಿನಹಣ್ಣು, ಜೇನುತುಪ್ಪ, ಕಲ್ಲಂಗಡಿ, ನಿಂಬೆ, ಬಾಳೆಹಣ್ಣು, ಬೀನ್ಸ್, ಟೊಮ್ಯಾಟೋ, ಬೆಳ್ಳುಳ್ಳಿ, ಮೆಣಸು, ಅರಿಶಿಣ ಇತ್ಯಾದಿ ಆಹಾರ ಪದಾರ್ಥಗಳು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಗರ್ಭಧಾರಣೆ ಬಯಸು ವವರು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಗರ್ಭಧಾರಣೆ ಸಾಧ್ಯತೆ ಹೆಚ್ಚಾಗುತ್ತದೆ.

ಪೈನಾಪಲ್, ಪಿರಂಗಿ, ಚೀಸ್, ಸೋಡ, ರಕ್ತ ಗ್ಲುಕೋಸ್ ಏರಿಸುವ ಆಹಾರ ಪದಾರ್ಥಗಳಾದ ಸಿಹಿ, ಸಕ್ಕರೆ, ಅಕ್ಕಿ, ಪೊಟ್ಯಾಟೋ, ಜಂಕ್ ಆಹಾರ ಪದಾರ್ಥಗಳು ಸಂತಾನಹೀನತೆಯನ್ನುಂಟುಮಾಡುವುದರಿಂದ ಗರ್ಭಧಾರಣೆ ಬಯಸುವವರಲ್ಲಿ ಇವುಗಳು ನಿಷಿದ್ಧ. ಸಹಕಾರಿತ ತಂತ್ರಜ್ಞಾನದ ಹೊರಗಿನ ಗರ್ಭಧಾರಣೆಯಲ್ಲಿ ಅಪರೂಪವಾಗಿ, ಅವಳಿಗಳು, ಸ್ಥಾನಪಲ್ಲಟದ ಗರ್ಭ ಧಾರಣೆ(ಎಕ್ಟೋಪಿಕ್ ಪ್ರೆಗ್ನೆನ್ಸಿ) ಅವಧಿಪೂರ್ವದ ಹೆರಿಗೆ, ಗರ್ಭಪಾತ, ಮಗುವಿನಲ್ಲಿ ನ್ಯೂನತೆಗಳು, ಕಡಿಮೆ ತೂಕದ ಮಗು, ಅತಿಪ್ರಚೋದಿತ ಅಂಡಾಶಯದ ಸಿಂಡ್ರೋಮ್ ಮತ್ತು ಕ್ಯಾನ್ಸರ್‌ಗಳ ಜಟಿಲತೆಗಳುಂಟಾಗಬಹುದು.

ಸಂತಾನಸುಖವನ್ನು ಸೃಷ್ಟಿಕರ್ತ ಲೈಂಗಿಕ ಸುಖದೊಡನೆ ಜೋಡಿಸಿರುವುದರ ಹಿಂದಿನ ಮರ್ಮವನ್ನು ಅವನೇ ಬಲ್ಲ. ದಂಪತಿ ಗಳಿಗೆ ಮಗುವಿನೊಂದಿಗಿನ ಸಾಂಸಾರಿಕ ಸುಖ ಅನನ್ಯವಾದುದು. ಅದರಲ್ಲೂ ತಾಯಿಗಂತೂ ಗಂಡನ ಸಾಂಗತ್ಯದ ಸುಖಕ್ಕಿಂತ ಕೂಸಿನೊಂದಿಗೆ ಹಂಚಿಕೊಳ್ಳುವ ಮಾತೃಪ್ರೇಮ ಅದ್ವಿತೀಯವಾದುದರಿಂದ ಪ್ರತಿಯೊಂದು ಹೆಣ್ಣು ಸಂತಾನಸುಖ ವನ್ನು ಸಹಜ ವಾಗಿಯೇ ಬಯಸುತ್ತಾಳೆ. ಸಂತಾನಹೀನತೆಯಿಂದ ವಂಚಿತರಾಗುತ್ತಿರುವ ದಂಪತಿಗಳಿಗೆ ಸಂತಸ ನೀಡುವಲ್ಲಿ ಆಧುನಿಕ ತಂತ್ರಜ್ಞಾನದ ಸಹಕಾರಿತ ಗರ್ಭಧಾರಣೆ ವರದಾನವಾಗಿದೆ.