ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ರೋಗಿಗಳು ಮತ್ತು ವೈದ್ಯರುಗಳು – ಇಬ್ಬರೂ ಬಾಯಿಯ ಮೂಲಕ ಕೊಡಬಹುದಾದ ಮಾತ್ರೆ ಅಥವಾ ಪಿಲ್ಸ್ ಗಳಿದ್ದರೆ ಅವುಗಳನ್ನು ಇಷ್ಟ ಪಡುತ್ತಾರೆಯೇ ಹೊರತು ಇಂಜೆಕ್ಷನ್‌ಗಳನ್ನಲ್ಲ. ಅಲ್ಲದೆ ಜೀರ್ಣಾಂಗ ವ್ಯೂಹಕ್ಕೇ ನೇರವಾಗಿ ಔಷಧ ಹೋಗುವುದರಿಂದ ಆ ವ್ಯೂಹಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಹೆಚ್ಚು ಪರಿಣಾಮಕಾರಿ.
ತಮಗೆಲ್ಲ ಕೋವಿಡ್ ಕಾಯಿಲೆಗೆ ಉಪಯೋಗಿಸುತ್ತಿರುವ ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಗೊತ್ತಿದೆ. ವ್ಯಾಕ್ಸಿನ್‌ಗಳ ಆರಂಭದಲ್ಲಿಯೇ ಫೈಜರ್ ಬಯೋನ್ ಟೆಕ್ ಮತ್ತು ಮೊಡೆನಾರ್ರ‍್ ವ್ಯಾಕ್ಸಿನ್‌ಗಳು ಇಂದಿಗೂ ಹೆಚ್ಚು ಪರಿಣಾಮಕಾರಿ; ಜನಪ್ರಿಯವಾಗಿವೆ.
ಇಂಜೆಕ್ಷನ್ ರೂಪದಲ್ಲಿರುವ ಈ ವ್ಯಾಕ್ಸಿನ್‌ಗಳು ಪಿಲ್ಸ್ ಅಥವಾ ಮಾತ್ರೆಗಳ ರೂಪದಲ್ಲಿ ಲಭ್ಯವಾಗುವುದಾದರೆ? ಹೌದು, ಪ್ರಾಣಿಗಳಲ್ಲಿ ಇತ್ತೀಚೆಗೆ ಕೈಗೊಂಡಿರುವ ಒಂದು ಅಧ್ಯಯನ ಅಂತಹ ಸಾಧ್ಯತೆಯ ಬಗ್ಗೆ ನಮಗೆ ತಿಳಿಸುತ್ತದೆ. ಚುಚ್ಚಿಸಿಕೊಳ್ಳುವ ಇಂಜೆಕ್ಷನ್‌ಗಳಿಗಿಂತ ನುಂಗುವ ಮಾತ್ರೆ ಸುಲಭವಲ್ಲವೇ ? ಮೆಸೆಂಜರ್ ಆರ್‌ಎನ್‌ಎ ತಾಂತ್ರಿಕತೆ ಕ್ಯಾನ್ಸರ್, ಝೀಕಾ ವೈರಸ್, ಕೋವಿಡ್-19 ಕಾಯಿಲೆಯ ರೀತಿಯ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ಮಾಡುತ್ತವೆ. ಮತ್ತು ಕಾಯಿಲೆ ಬರದಿರುವಂತೆ ಮಾಡುತ್ತವೆ. ಇದರಲ್ಲಿ ಡಿಎನ್‌ಎಯು ಎಂಆರ್ ಎನ್‌ಎಗೆ ಬದಲಾಗುತ್ತದೆ. ನಂತರ ಎಂಆರ್‌ಎನ್ ಎಯು ಪ್ರೋಟೀನ್‌ಗಳಾಗಿ ಬದಲಾಗುತ್ತದೆ.
ಹೊಸ ಎಂಆರ್‌ಎನ್‌ಎ ಅನ್ನು ಜೀವಕೋಶಗಳೊಳಗೆ ತೂರಿಸಿ ಹೊಸ ಪ್ರೋಟೀನ್ ಗಳಿಗೆ ಸಂಕೇತವಾಗುವಂತೆ ಎಂಆರ್‌ಎನ್‌ಎ ತಾಂತ್ರಿಕತೆ ಕೆಲಸ ಮಾಡುತ್ತದೆ. ಉಳಿದ ವ್ಯಾಕ್ಸಿನ್‌ಗಳಿಗಿಂತ ಈ ತಾಂತ್ರಿಕತೆಯಿಂದ ಕಡಿಮೆ ಸಮಯದಲ್ಲಿ ವ್ಯಾಕ್ಸಿನ್‌ಗಳನ್ನು ಅಭಿವೃದ್ಧಿ ಪಡಿಸಬಹುದು. ಹಾಗಾಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಈ ತಾಂತ್ರಿಕತೆ ತುಂಬಾ ಉಪಯುಕ್ತವೆನಿಸುತ್ತದೆ. ಹಾಗಾಗಿ ಈ ಕೋವಿಡ್ ಸಾಂಕ್ರಾಮಿಕ ದಲ್ಲಿ ಬೇರೆ ತಾಂತ್ರಿಕತೆಯ ವ್ಯಾಕ್ಸಿನ್‌ಗಳಿಗಿಂತ ಎಂಆರ್‌ಎನ್ ಎಲ್ಲಾ ತಾಂತ್ರಿಕತೆಯ ವ್ಯಾಕ್ಸಿನ್‌ಗಳು ಬೇಗ ಬಳಕೆಗೆ ಬಂದವು.
ರೋಗಿಗಳು ಮತ್ತು ವೈದ್ಯರುಗಳು – ಇಬ್ಬರೂ ಬಾಯಿಯ ಮೂಲಕ ಕೊಡಬಹುದಾದ ಮಾತ್ರೆ ಅಥವಾ ಪಿಲ್ಸ್ ಗಳಿದ್ದರೆ ಅವುಗಳನ್ನು ಇಷ್ಟಪಡುತ್ತಾ ರೆಯೇ ಹೊರತು ಇಂಜೆಕ್ಷನ್‌ಗಳನ್ನಲ್ಲ. ಅಲ್ಲದೆ ಜೀರ್ಣಾಂಗ ವ್ಯೂಹಕ್ಕೇ ನೇರವಾಗಿ ಔಷಧ ಹೋಗುವುದರಿಂದ ಆ ವ್ಯೂಹಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಇವು ಇನ್ನೂ ಹೆಚ್ಚು ಪರಿಣಾಮಕಾರಿ. ಆದರೆ ಪ್ರಸ್ತುತ ಇರುವ ರೀತಿಯಲ್ಲಿ ಎಂಆರ್‌ಎನ್‌ಎ ರೀತಿಯ ಔಷಧಗಳು ಬಾಯಿಂದ ನುಂಗಿದ ಕೆಲವೇ ಕ್ಷಣಗಳಲ್ಲಿ ವಿಭಜನೆ ಹೊಂದಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಹಾಗಾಗಿ ಈ ಔಷಧಗಳು ಪ್ರಸ್ತುತ ಮಾಂಸಖಂಡಗಳಿಗೆ, ನೇರವಾಗಿ ರಕ್ತ ನಾಳಗಳಿಗೆ ಅಥವಾ ಚರ್ಮದೊಳಗಡೆ ತೂರಿಸುವ ಇಂಜೆಕ್ಷನ್ ರೂಪದಲ್ಲಿವೆ.
ಇತ್ತೀಚಿನ ಅಧ್ಯಯನದಲ್ಲಿ ಕೇಂಬ್ರಿಡ್ಜ್‌ನ ಎಂಐಟಿಯ ಸಂಶೋಧಕರು ಎಂಆರ್‌ಎನ್ ರೀತಿಯ ಚಿಕಿತ್ಸೆಗೆ ಪಿಲ್ಸ್ ರೂಪದಲ್ಲಿ ಕೊಡಲು
ಬರುವಂತೆ ಒಂದು ಹೊಸ ವಿಧಾನವನ್ನು ಕಂಡು ಹಿಡಿದಿzರೆ. ಈ ರೀತಿಯ ಪ್ರಯೋಗವನ್ನು ಕೆಲವು ಪ್ರಾಣಿಗಳಲ್ಲಿ ಮಾಡಿ ಈ ಸಂಶೋ ಧಕರು ಸಫಲರಾಗಿದ್ದಾರೆ. ಎಂಐಟಿ ಸಂಸ್ಥೆಯಲ್ಲಿ ಸಂಶೋಧಕರು ಹಲವಾರು ವರ್ಷಗಳಿಂದ ಈ ತಾಂತ್ರಿಕತೆಯಿಂದ ಬಾಯಿಯಿಂದ ಕೊಡುವ ಔಷಧಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. 2019 ರಲ್ಲಿ ಇವರು Self -Orienting Millimetre & scale
Applicator (SOMA) ಎಂಬ ಕ್ಯಾಪ್ಸೂಲ್ ಅನ್ನು ನುಂಗಿದಾಗ ಇನ್ಸುಲಿನ್‌ನಂತಹ ಔಷಧ ಸಹಿತ ಎಲ್ಲಿಗೂ ಯಾವುದೇ ರೀತಿಯ ಹಾನಿ
ಮಾಡದೆ ಜಠರದ ಒಳ ಪದರದ ಮೇಲೆ ಹೋಗಿ ಕೂರುತ್ತದೆ. 2021ರಲ್ಲಿ ಮಾನೋಕ್ಲೋನಲ್ ಆಂಟಿಬಾಡಿಯಂತಹ ದೊಡ್ಡ ಗಾತ್ರದ
ಘಟಕಗಳನ್ನು ಸಹಿತ ಈ ಖuIಅ ಕ್ಯಾಪ್ಸೂಲ್ ಉಪಯೋಗಿಸಿ ದ್ರವದ ರೂಪದಲ್ಲಿ ಹೊಟ್ಟೆ ಸೇರುವಂತೆ ಮಾಡಿದರು.
ಈ SOMA ಮಾದರಿ ರೂಪಿಸುವಲ್ಲಿ ಅವರು ಆಮೆಯ ಕ್ರಿಯೆಗಳನ್ನು ಅನುಸರಿಸಿದ್ದಾರೆ. ಆಮೆಯು ತನ್ನ ಬೆನ್ನ ಮೇಲೆ ತಿರುಗಿ ಪುನಃ
ನೆಟ್ಟಗಾಗುವ ಹಾಗೆ ಈ ಕ್ಯಾಪ್ಸೂಲ್ ಜಠರವನ್ನು ಸೇರಿ ತನ್ನನ್ನು ಸ್ಥಾಪಿಸಿಕೊಂಡು ನಂತರ ತನ್ನಲ್ಲಿನ ಔಷಧವನ್ನು ಜಠರದ ಒಳ ಪದರಕ್ಕೆ ಇಂಜೆಕ್ಟ್ ಮಾಡುತ್ತದೆ. ಆ ನಂತರ ತನ್ನ ಸೂಜಿಯನ್ನು ಹಿಂಪಡೆಯುತ್ತದೆ. ಆಗ ಎಂಆರ್ ಎನ್‌ಎದ ನ್ಯಾನೋ ಪಾರ್ಟಿಕಲ್‌ಗಳು ಜೀವಕೋಶದ ಒಳಗೆ ಸೇರುತ್ತವೆ, ನಂತರ ಪ್ರೋಟೀನ್ ಆಗಿ ಬದಲಾವಣೆ ಹೊಂದುತ್ತವೆ.
ಎಂಆರ್‌ಎನ್‌ಎ ಅನ್ನು ತನ್ನ ಗುರಿ ತಲುಪಿಸುವವರೆಗೆ ರಕ್ಷಿಸಲು ಬೇರೆಯ ವಸ್ತು ಗಳಿಗಿಂತ ಪಾಲಿ (ಬೀಟಾ ಅಮೈನೋ ಎಸ್ಟರ್ಸ್ ) ಎಂಬ ನ್ಯಾನೋ ಪಾರ್ಟಿಕಲ್ ರೀತಿಯ ವಸ್ತು ಹೆಚ್ಚು ಪರಿಣಾಮಕಾರಿ ಎಂದು ಹಿಂದಿನ ಅನುಭವಗಳಿಂದ ಕಂಡುಕೊಂಡಿದ್ದಾರೆ.
ಪ್ರಾಣಿಗಳಲ್ಲಿ ಪರೀಕ್ಷೆ : ಜಠರದಲ್ಲಿ ಎಂಆರ್‌ಎನ್‌ಎ ನಾಶವಾಗುವುದರಿಂದ ಮೇಲಿನ ಪಾಲಿಮರ್‌ಗಳು ರಕ್ಷಿಸುವುದೇ ಎಂದು ಮೊದಲು ಸಂಶೋಧಕರು ಪರೀಕ್ಷಿಸಿದರು; ಆರಂಭದಲ್ಲಿ ಇಲಿಗಳಲ್ಲಿ ನಂತರ ಹಂದಿಗಳಲ್ಲಿ. ಇದರಲ್ಲಿ ಹಲವು ರೀತಿಯ ಪರೀಕ್ಷೆಗಳ ನಂತರ ಮೊದಲು ತಿಳಿಸಿದ SOMA ಕ್ಯಾಪ್ಸೂಲ್ ಗಳು ಜೀರ್ಣಾಂಗ ವ್ಯೂಹದಲ್ಲಿರುವ ನಾಶ ಮಾಡುವ ಎಂಜೈಮ್‌ಗಳನ್ನು ಬೈ ಪಾಸ್ ಮಾಡಿ ಜಠರದ ಒಳಪದರಗಳಿಗೆ ಎಂಆರ್‌ಎನ್‌ಎ ಔಷಧಗಳು ನೇರವಾಗಿ ತಲುಪಿಸಲ್ಪಡುತ್ತವೆ ಎಂದು ಸಂಶೋಧಕರು ನಿರ್ಧಾರಕ್ಕೆ ಬಂದರು. ಈ
ಸಂಶೋಧನೆಯಲ್ಲಿ ಹಲವು ಮಿತಿಗಳನ್ನು ಕಂಡುಕೊಂಡಿದ್ದಾರೆ. ಮೇಲಿನ ವಿಷಯವನ್ನು ದೃಢೀಕರಿಸಲು ಇನ್ನೂ ಹಲವಾರು ಪ್ರಾಣಿಗಳು ಹಾಗೂ ಮಾನವರಲ್ಲಿ ಟ್ರಯಲ್ ನಡೆಸಿ ನಂತರ ಈ ವಿಧಾನದ ಸುರಕ್ಷತೆ ಮತ್ತು ಸಫಲತೆ ನಿರ್ಣಯವಾಗಬೇಕು ಎಂದು ಎಂದು ಸಂಶೋಧಕರ ಅಭಿಮತ. ನ್ಯಾನೋ ಪಾರ್ಟಿಕಲ್ ಆಪ್ಟಿಮೈಸೇಷನ್ ಮಾಡುವುದರಿಂದ ಔಷಧ ನಾಶವಾಗುವುದನ್ನು ಕಡಿಮೆ ಮಾಡಬ ಹುದು. ಅದನ್ನು ಎಂಆರ್‌ಎನ್‌ಎ ಔಷಧವನ್ನು ಕೊಟ್ಟೂ ಪರೀಕ್ಷಿಸಬೇಕು. ಈ ದಿಸೆಯಲ್ಲಿ ಕೆಲವು ಅಂಶಗಳ ಬಗ್ಗೆ ಇನ್ನೂ ವಿಸತವಾದ ಸಂಶೋಧನೆಯ ಅಗತ್ಯವಿದೆ ಎಂದು ಈ ಸಂಶೋಧಕರ ಅಭಿಮತ.
ಭಾರತಕ್ಕೆ ಶೀಘ್ರ ಎಂಆರ್‌ಎನ್‌ಎ!: ಪೂನಾ ಮೂಲದ ಗೆನ್ನೋವಾ ಬಯೋಫಾರ್ಮಸ್ಯುಟಿಕಲ್ಸ್ ಬಹುಶಃ ಏಪ್ರಿಲ್ ತಿಂಗಳಲ್ಲಿ ( 2022) ಭಾರತದ ಮೊಟ್ಟ ಮೊದಲ ಎಂಆರ್‌ಎನ್‌ಎ ವ್ಯಾಕ್ಸಿನ್ ಹೊರತರಲಿದೆ. ಇದು ಸಾಂಪ್ರದಾಯಿಕ ಇಂಜೆಕ್ಷನ್ ರೂಪದ ವ್ಯಾಕ್ಸಿನ್. ಈ ಕೋವಿಡ್ ಕಾಯಿಲೆ ಎಂಆರ್‌ಎನ್‌ಎ ತಂತ್ರeನದ ವ್ಯಾಕ್ಸಿನ್ ಬರುವಲ್ಲಿ ನಾಂದಿ ಹಾಡಿದೆ, ಹಾಗೆಯೇ ಈ ತಂತ್ರಜ್ಞಾನದ ಹಿರಿಮೆಯನ್ನೂ ಎತ್ತಿ ತೋರಿಸಿದೆ. ಈ ಬಗ್ಗೆ ಯಾವ ಹಿಂದಿನ ಇತಿಹಾಸವಿಲ್ಲದ ಭಾರತೀಯ ಕಂಪನಿ ತನ್ನದೇ ರೀತಿಯಿಂದ ಈ ತಂತ್ರಜ್ಞಾನದ ರೀತ್ಯಾ
ವ್ಯಾಕ್ಸಿನ್ ತಯಾರಿಸುತ್ತಿದೆ. ಕೋವಿಡ್ ಕಾಯಿಲೆ ಅಲ್ಲದೆ ಬೇರೆ ಇತರ ಕಾಯಿಲೆಗಳಲ್ಲೂ ಈ ಉಪಯುಕ್ತತೆಯನ್ನು ಎತ್ತಿ ತೋರಿಸುತ್ತದೆ
ಎನ್ನಲಾಗಿದೆ.
ಎಂಆರ್‌ಎನ್‌ಎ ವ್ಯಾಕ್ಸಿನ್: ನಮ್ಮ ದೇಹದ ಪ್ರತಿರೋಧ ವ್ಯವಸ್ಥೆಯನ್ನು ಪ್ರಚೋದಿಸಿ ಆಂಟಿ ಬಾಡಿಗಳು ಜೀವಂತ ವೈರಸ್‌ನಿಂದ ಉಂಟಾಗುವ ಸೋಂಕನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತವೆ. ಸಾಂಪ್ರದಾಯಿಕ ಪದ್ಧತಿ ಎಂದರೆ ವೈರಸ್‌ನ ಸ್ವಲ್ಪ ಭಾಗ ಅಥವಾ ಇಡೀ ವೈರಸ್ ಅನ್ನು ವ್ಯಕ್ತಿಯ ದೇಹಕ್ಕೆ ಚುಚ್ಚುವುದು, ಹಾಗೆಯೇ ಆ ವೈರಸ್ ಮತ್ತೆ ವೃದ್ಧಿಸದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಕೋವಿಡ್ ಗೆ ಕಾರಣವಾದ ಸಾರ್ಸ್ ಸಿಒವಿ – 2 ವೈರಸ್‌ಗೆ ಹೀಗೆ ಮಾಡಿದರೆ ಪಾರ್ಶ್ವ ಪರಿಣಾಮಗಳು ಕಾಣಿಸಿಕೊಳ್ಳುವ ಅಪಾಯವಿದೆ.
ಹಾಗಾಗಿ ವ್ಯಾಕ್ಸಿನ್ ಶಾಸವನ್ನು ಶೋಧಿಸಿ ಸುರಕ್ಷಿತವಾಗಿ ಪ್ರತಿರೋಧ ಪ್ರಕ್ರಿಯೆ ಉಂಟಾಗಲು ಪ್ರಯತ್ನಿಸಲಾಗುತ್ತದೆ. ಈ ಕೋವಿಡ್ ಸಾಂಕ್ರಾಮಿಕದಲ್ಲಿ ಕರೋನ ವೈರಸ್‌ನ ಸ್ಪೈಕ್ ಪ್ರೋಟೀನ್‌ನ ಸ್ವಲ್ಪ ಭಾಗವನ್ನು ದೇಹಕ್ಕೆ ಚುಚ್ಚಲಾಗುತ್ತದೆ. ಇದರಿಂದ ದೇಹದ ಪ್ರತಿ ರೋಧ ಶಕ್ತಿ ಜಾಗೃತವಾಗಿ ಕರೋನ ವೈರಸ್ ವಿರುದ್ಧ ಆಂಟಿಬಾಡಿಗಳು ಹುಟ್ಟುತ್ತವೆ. ಕೆಲವು ವ್ಯಾಕ್ಸಿನ್‌ಗಳು ಸ್ಪೈಕ್ ಪ್ರೋಟೀನ್‌ನ ಜೀನ್ ಗಳನ್ನು ಸುತ್ತುವರಿಯಲು ಡಿಎನ್‌ಎ ತುಣುಕನ್ನು ಉಪಯೋಗಿಸುತ್ತವೆ. ಎಂಆರ್‌ಎನ್‌ಎ ದ ವ್ಯಾಕ್ಸಿನ್ ಇದೇ ರೀತಿಯಲ್ಲಿ ಕೆಲಸ ಮಾಡು ತ್ತದೆ. ದೇಹದಲ್ಲಿ ಪ್ರತಿರೋಧ ಪ್ರಕ್ರಿಯೆ ಜಾಗೃತವಾಗಲು ಅದು ದೇಹಕ್ಕೆ ತೂರಿಸಿದ ಜೆನೆಟಿಕ್ ಕೋಡ್‌ನ ತುಣುಕಿನ ರೀತಿ ವರ್ತಿಸುತ್ತದೆ.
ಬೇರೆ ವ್ಯಾಕ್ಸಿನ್‌ಗಿಂತ ಭಿನ್ನ ಹೇಗೆ?: ಜೀವಕೋಶಗಳು ಸ್ಪೈಕ್ ಪ್ರೋಟೀನ್ ಉತ್ಪಾದಿಸಲು ಡಿಎನ್‌ಎಯ ಒಂದು ತುಣುಕು ಆರ್‌ಎನ್‌ಎ ಆಗಿ ಪರಿವರ್ತನೆ ಹೊಂದಬೇಕು. ಈ ಎಂಆರ್‌ಎನ್‌ಎ ಲಸಿಕೆ ತುಂಬಾ ಶಿಥಿಲವಾಗಿರುತ್ತದೆ. ಅದು ಕೊಠಡಿಯ ತಾಪಮಾನದಲ್ಲಿ ಅಥವಾ ದೇಹಕ್ಕೆ ಎಂಜೈಮ್ ಚುಚ್ಚಿದಾಗ ತುಣುಕು ತುಣುಕಾಗಿ ಬೇರ್ಪಡುತ್ತವೆ. ಅದು ಒಡೆಯದಿರುವಂತೆ ಮಾಡಲು ಆರ್‌ಎನ್‌ಎ ಸುತ್ತ ಒಂದು ರೀತಿಯ ಎಣ್ಣಿ ಅಥವಾ ಕೊಬ್ಬಿನ ಜೀವಕೋಶಗಳನ್ನು ಸುತ್ತಬೇಕು. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ಎಂಆರ್‌ಎನ್‌ಎ ಮತ್ತು ಕೊಬ್ಬಿನ ಘಟಕವು ದೇಹವನ್ನು ಆರಂಭದ ಹಂತದಲ್ಲಿ ಕರೋನ ವೈರಸ್ ಆಕ್ರಮಿಸುವ ರೀತಿಯಲ್ಲಿ ಮಾಡಬೇಕು.
ಡಿಎನ್ ಎಯು ಆರ್‌ಎನ್‌ಎ ಗಿಂತ ಹೆಚ್ಚು ದೃಢವಾಗಿರುತ್ತದೆ. ಆದರೆ ಕೆಲಸದ ಕಾರ್ಯಕ್ಷಮತೆಯಲ್ಲಿ ಎರಡೂ ಒಂದೇ ರೀತಿಯಲ್ಲಿ ಪರಿ ಣಾಮಕಾರಿ. ಈ ಎಂಆರ್‌ಎನ್‌ಎ ವ್ಯಾಕ್ಸಿನ್ ನ ಋಣಾತ್ಮಕ ಅಂಶ ಎಂದರೆ ಅವುಗಳನ್ನು ಮೈನಸ್ 90ಡಿಗ್ರಿ ಸೆಲ್ಸಿಯಸ್ ಮತ್ತು ಮೈನಸ್ ೫೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ಫ್ರೀಜ್ ಆಗುವಂತೆ ರಕ್ಷಿಸಬೇಕು. ಇವುಗಳನ್ನು ವ್ಯಾವಹಾರಿಕ ಫ್ರಿಜ್‌ಗಳಲ್ಲಿ 2 ವಾರದವರೆಗೆ ಹಾಳಾಗದಂತೆ ಇಡಬಹುದು. ಮೈನಸ್ 2 ಡಿಗ್ರಿ ಸೆಲ್ಸಿಯಸ್‌ನಲ್ಲಿ ದ್ರವೀಕರಿಸಿ ರಕ್ಷಿಸಿದರೆ ಒಂದು ತಿಂಗಳವರೆಗೆ ಹಾಳಾಗುವುದಿಲ್ಲ. ಈ ಅಂಶದಿಂದಲೇ ಈ ರೀತಿಯ ವ್ಯಾಕ್ಸಿನ್‌ಗಳು ಭಾರತವನ್ನು ಇಷ್ಟರವರೆಗೆ ಪ್ರವೇಶಿಸಿಲ್ಲ.
ಎಂಆರ್‌ಎನ್‌ಎ ಮತ್ತು ಡಿಎನ್‌ಎ ವ್ಯಾಕ್ಸಿನ್‌ಗಳ ಧನಾತ್ಮಕ ಅಂಶ ಎಂದರೆ – ಅವೆರಡಕ್ಕೆ ಬರೀ ಜೆನೆಟಿಕ್ ಕೋಡ್‌ನ ಅಗತ್ಯವಿದೆ. ಹಾಗೆಯೇ ಇವುಗಳನ್ನು ಆಗಾಗ ಹೊಸ ಹೊಸ ರೀತಿಯಲ್ಲಿ ನವೀಕರಿಸಬಹುದು. ಹಾಗೆ ಮಾಡಿದಾಗ ವೈರಸ್ ಬೇರೆ ಬೇರೆ ಪ್ರಭೇದಗಳಿಗೆ ವ್ಯಾಕ್ಸಿನ್‌ಗಳನ್ನು ಬದಲಿಸುತ್ತ ಇರಬಹುದು. ಆದರೆ ಇದುವರೆಗೆ ಯಾವುದೇ ವ್ಯಾಕ್ಸಿನ್ ಅನ್ನು ಡೆಲ್ಟಾ ಮತ್ತು ಒಮೈಕ್ರಾನ್ ಪ್ರಭೇದಗಳಿಗೆ ಹೊಂದುವಂತೆ ನವೀಕರಿಸಲಿಲ್ಲ ಎಂಬುದು ವಸ್ತುಸ್ಥಿತಿ. ಹಾಗೆಯೇ ಇದನ್ನು ಇನ್ನೂ ಹಲವು ಕಾಯಿಲೆಗಳಲ್ಲಿ ಉಪಯೋಗಿಸಬಹುದು.
ಗೆನ್ನೋವಾ ಭಿನ್ನವೇ? : ಆ ಸಂಸ್ಥೆ ತನ್ನ ವ್ಯಾಕ್ಸಿನ್ ಬಗ್ಗೆ ಹೆಚ್ಚು ಮಾಹಿತಿಯನ್ನು ಹೊರಗೆಡಹಿಲ್ಲ. ಆದರೆ ಆ ಸಂಸ್ಥೆಯ ಮುಖ್ಯಸ್ಥ ಸಂಜಯ ಸಿಂಗ್ ಅವರು ಮೊದಲು ತಿಳಿಸಿದ ಮಾಹಿತಿಯ ಪ್ರಕಾರ – ಈ ವ್ಯಾಕ್ಸಿನ್‌ನಲ್ಲಿ ಲಿಪಿಡ್‌ಗಳು ಮತ್ತು ಎಂಜೈಮ್ ಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸುವುದರಿಂದ ಈ ವ್ಯಾಕ್ಸಿನ್ ಅನ್ನು ಮೈನಸ್ 2 ಡಿಗ್ರಿ – 8 ಡಿಗ್ರಿ ತಾಪಮಾನದಲ್ಲಿ ರಕ್ಷಿಸಿಡಬಹುದು. ಆದರೆ ಇದರ ಹಲವಾರು ಭಾಗಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕು ಎಂಬುದು ವಸ್ತುಸ್ಥಿತಿ.
ಇತ್ತೀಚಿನ ಮಾಹಿತಿಯ ಪ್ರಕಾರ ಗೆನ್ನೋವಾ ದ ಈ ಎಂಆರ್‌ಎನ್‌ಎ ವ್ಯಾಕ್ಸಿನ್ ವಿದೇಶಗಳ -ರ್ಜ ಬಯೋನ್ ಟೆಕ್ ಮತ್ತು ಮೊಡೆರ್ನಾ ವ್ಯಾಕ್ಸಿನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ ಈಗ ನಾವು ಉಪಯೋಗಿಸುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗಳಿಗಿಂತ ಸ್ವಲ್ಪ ದುಬಾರಿ.
ಈ ವ್ಯಾಕ್ಸಿನ್ ಇತ್ತೀಚೆಗೆ ಯಾವ ಹಂತದಲ್ಲಿದೆ? ದ್ಯ ಈ ವ್ಯಾಕ್ಸಿನ್ 2-3 ನೆಯ ಟ್ರಯಲ್ ಹಂತದಲ್ಲಿದೆ. ಅದರ ಸುರಕ್ಷತೆ, ತಡೆದುಕೊಳ್ಳು ವಿಕೆ ಮತ್ತು ಅದರ ಪ್ರತಿರೋಧ ಪ್ರಕ್ರಿಯೆಯ ಮಾಪನವನ್ನು ಆರೋಗ್ಯವಂತ ವ್ಯಕ್ತಿಗಳಲ್ಲಿ ಮಾಡಲಾಗುತ್ತದೆ. ಅದಕ್ಕಾಗಿ ೪೦೦೦ ಸ್ವಯಂ ಸೇವಕರನ್ನು ಆರಿಸಿಕೊಳ್ಳಲಾಗಿದೆ. ಫೇಸ್ 1ರ ಟ್ರಯಲ್ ನ ಫಲಿತಾಂಶ ಸದ್ಯದ ಹೊರಬೀಳಲಿದೆ.