Thursday, 19th September 2024

ಬಾಳಲು ಎರಡನೇ ಅವಕಾಶವೆಂಬ ಭರವಸೆ ಬೇಕು

ರಾವ್-ಭಾಜಿ 

ಪಿ.ಎಂ.ವಿಜಯೇಂದ್ರ ರಾವ್

ಕೇಸ್ ನಂಬರ್ 1
ನಾನು ಮೊದಲ ಬಾರಿ ಅಮೆರಿಕಗೆ ಹೋಗುವ ಸಲುವಾಗಿ ವೀಸಾ ಪಡೆಯಲು ಮುಂಬೈನ ಅಮೆರಿಕನ್ ಕಾನ್ಸುಲೇಟ್‌ಗೆ ಹೋದೆ. (ಪ್ರಥಮ ಬಾರಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹೊರಟ ಮಗನಿಗೆ ಪೋಷಕರು ದೇವರಿಗೆ ನಮಸ್ಕಾರ ಮಾಡಿ ಹೋಗು, ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಸಂಪೂರ್ಣವಾಗಿ ಅವಲೋಕಿಸು, ಗಾಬರಿ ಆಗಬೇಡ ಅಂತೆ ನೀಡುವ ಸೂಚನೆಗಳಂತೆ ಪರಿಚಿತ ಅನುಭವಿಗಳು ಸಂಭವನೀಯ ಪ್ರಶ್ನೆಗಳನ್ನು ಹಂಚಿಕೊಂಡಿದ್ದರು.

ಜತೆಗೆ ತಡಬಡಾಯಿಸದೆ ಉತ್ತರಿಸೆಂದೂ, ಹೆದರಬಾರದೆಂದೂ, ಸಂದರ್ಶಕರು ಪ್ರಾಮಾಣಿಕತೆಯನ್ನು ಬಯಸುತ್ತಾರೆಂದೂ
ಹೇಳಿದ್ದರು. ನನಗೆ ಅಮೆರಿಕಗೆ ಹೋಗುವ ಜರೂರಿತ್ತು, ಆದರೆ ತವಕವಿರಲಿಲ್ಲ. ವೀಸಾ ಸಿಗದಿದ್ದರೆ ಸ್ವಲ್ಪ ತೊಂದರೆಯಾಗುತ್ತಿತ್ತು, ಆದರೆ ನಿರಾಸೆಯಾಗುತ್ತಿರಲಿಲ್ಲ. ಸರದಿಗೆ ಮುನ್ನ ಕಾನ್ಸುಲೇಟ್ ಕಟ್ಟಡದ ಹೊರಗೆ ಕಾಯುವಾಗ ವೀಸಾ ಸಿಗದವರು ಜೋಲು ಮುಖ ಹಾಕಿಕೊಂಡು ಬರುವುದನ್ನೂ, ವೀಸಾ ಪಡೆದವರು ಗಾಳಿಯಲ್ಲಿ ನಾಲ್ಕು ಅಡಿ ಎತ್ತರಕ್ಕೆ ಎಗರಿ ಸಂಭ್ರಮಿಸುತ್ತಿದ್ದುದನ್ನೂ ನೋಡುತ್ತಿದ್ದೆ. ನನ್ನ ಅನುಭವಗಳೇ ಹಾಗೆ, ಯಾರಿಗೂ ಆಗದ್ದು ನನಗಾಗುತ್ತದೆ.

ನನ್ನ ಪ್ರಾಮಾಣಿಕತೆಯ ಅಗ್ನಿ ಪರೀಕ್ಷೆಗೇನೂ ಗುರಿಪಡಿಸದ ಸಂದರ್ಶಕ ನಾನು ಅಮೆರಿಕದಿಂದ ವಾಪಸ್ ಬರುತ್ತೇನೆಂದು ಆತನಲ್ಲಿ ಭರವಸೆ ಹುಟ್ಟಿಸಲಿಲ್ಲವೆಂದೂ, ಮತ್ತೊಬ್ಬ ಆಫೀಸರ್ ನನ್ನ ಬಗ್ಗೆ ಬೇರೆಯದೇ ಅಭಿಪ್ರಾಯ ಹೊಂದಲು ಸಾಧ್ಯ, ಆ ಕಾರಣಕ್ಕೆ ನಾನು ಒಂದು ವಾರದ ನಂತರ ಮತ್ತೊಮ್ಮೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಸೂಚಿಸಿದ. ನನಗೆ ಕೋಪ ಬಂದಿದ್ದು ವೀಸಾ ಸಿಗದಿದ್ದುಕ್ಕಲ್ಲ, ಆತನ ಅಸಂಬದ್ಧ ನಿಲುವಿಗೆ, ಉರಿಸುವ ಮಾತಿಗೆ.

ಎಷ್ಟೇ ಫಜೀತಿಯಾದರೂ ಸಹಿಸಿಕೊಂಡು ಒಂದು ವಾರದ ನಂತರ ಮತ್ತೆ ಹೋದೆ. ಏನೂ ಪ್ರಶ್ನೆ ಕೇಳದೆ ವೀಸಾ ದಯ ಪಾಲಿಸ ಲಾಯಿತು. ಈ ಬಾರಿ ಸಂದರ್ಶಿಸಿದ್ದು ಒಂದು ಹೆಣ್ಣು. ನಾನೇನು ಕರುಣಾಜನಕ ಮೋರೆ ಹೊತ್ತಿರಲಿಲ್ಲ, ಆದರೂ, ಒಳಗಣ್ಣಿನಿಂದ ಆಕೆಯ ಸಹೋದ್ಯೋಗಿ ಉಂಟುಮಾಡಿದ ಕಿರಿಕಿರಿಯನ್ನು ಹೆಂಗರುಳು ಕಂಡಿತ್ತೋ, ತಿಳಿಯಲಾಗಲಿಲ್ಲ. ತದನಂತರದಲ್ಲಿ ಮತ್ತೊಮ್ಮೆ ನನಗೂ, ಅಮೆರಿಕದಲ್ಲಿ ಆ ಮುಂಚೆ ಸುದೀರ್ಘ ಪ್ರವಾಸ ಮಾಡಿಬಂದಿದ್ದ ನನ್ನ ಸಹಧರ್ಮಿಣಿಗೂ ಮುಖಮೂತಿ ನೋಡಿಯೂ ವೀಸಾ ನಿರಾಕರಿಸಲಾಯಿತು. ಅಮೆರಿಕ ಕಾನ್ಸುಲೇಟ್‌ನಲ್ಲಿ ವೀಸಾ ಕೊಡುವುದು, ತಡೆಯುವುದರ ರಹಸ್ಯ ನನಗಂತೂ ಹುಟ್ಟು ಸಾವುಗಳ ರಹಸ್ಯದಷ್ಟೇ ನಿಗೂಢ.

ಆ ರಹಸ್ಯವನ್ನು ಭೇದಿಸಲೋ ಎಂಬಂತೆ ಮೂರನೇ ಬಾರಿಗೆ ವೀಸಾ ಸಂದರ್ಶನಕ್ಕೆ ಹಾಜರಾದೆ. ವಾಷಿಂಗ್ಟನ್‌ನಲ್ಲಿ ನನ್ನ ಸಾಕ್ಷ್ಯ ಚಿತ್ರದ ಡಿವಿಡಿ ಬಿಡುಗಡೆಯಾಗುವುದಿತ್ತು. ಸ್ನೇಹಿತರಾದ ಕೆಆರ್‌ಎಸ್ ಮೂರ್ತಿ ಬಿಡುಗಡೆಗೆ ನೆರವು ನೀಡಿದ್ದರು. ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಯ ದ್ವೈವಾರ್ಷಿಕ ಸಮಾರಂಭವದು. ಅದಕ್ಕೆ ಭಾರತದಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಆಮಂತ್ರಿಸುವು ದರಲ್ಲಿ ನಾನೂ ಪಾತ್ರವಹಿಸಿದ್ದೆ. ಆ ಪ್ರತಿನಿಧಿಗಳಬ್ಬರಾದ ಸ್ನೇಹಿತ ಡಾ.ಸನತ್ ಕುಮಾರ್ ಮತ್ತು ನನ್ನ ವೀಸಾ ಸಂದರ್ಶನ ಒಂದೇ
ದಿನವಿತ್ತು. ಸಂದರ್ಶಕರು ಬೇರೆ ಬೇರೆ. ಅವರಿಗೆ ವೀಸಾ ಸಿಕ್ಕಿತು, ನನಗೆ (ಎಂದಿನಂತೆ) ತಡವಾಗಿ ಒಂದು ತಿಂಗಳ ನಂತರ ಸಿಕ್ಕಿತು.

ಆಮಂತ್ರಿತರಿಗೆ ವೀಸಾ, ಆಮಂತ್ರಿಸಿದವರಿಗೆ ವೀಸಾ ಇಲ್ಲ. ನನ್ನ ಕಾರ್ಯಕ್ರಮಕ್ಕೆ ನಾನೇ ಹೋಗಲಾಗಲಿಲ್ಲ. ದುಡ್ಡು ಉಳಿಯಿತು ಬಿಡಿ, ಅಂದುಕೊಂಡೆನಾದರೂ, ವೀಸಾ ರಹಸ್ಯ ಮಾತ್ರ ಮತ್ತಷ್ಟು ಜಟಿಲವಾಯಿತು.

ಕೇಸ್ ನಂಬರ್ 2
ಕೆಲವು ವರ್ಷಗಳ ಹಿಂದೆ, ವ್ಯವಹಾರದ ಕಾರಣಕ್ಕೆ ಅಮೆರಿಕದ ಸಂಬಂಧಿಕರೊಬ್ಬರಿಗೆ ಹಣ ಕಳಿಸುವುದಿತ್ತು. ತುಸು ಹೆಚ್ಚೇ ಅನ್ನಬಹುದಾದ ಮೊತ್ತ. ನೇರಾನೇರ ವ್ಯವಹಾರ. ಕಪ್ಪು ಹಣವಲ್ಲ. ಆದರೆ, ಆಡಿಟರ್ ಹೆದರಿಸಿಬಿಟ್ಟರು. ಇಷ್ಟು ಹಣ ಕಳಿಸಿದರೆ ಜಾರಿ ನಿರ್ದೇಶನಾಲಯದ (ಇಡಿ) ಗಮನಕ್ಕೆ ಹೋಗುತ್ತದೆ.

ನೂರಾರು ಪ್ರಶ್ನೆಗಳನ್ನು ಕೇಳುತ್ತಾರೆ. ಜೀವನವೇ ಬೇಡ ಅನ್ನಿಸಿಬಿಡುತ್ತದೆ. ಆಗಿನ್ನೂ ಡಿಕೆ ಶಿವಕುಮಾರ್ ಜಾರಿ ನಿರ್ದೇಶನದ ಕೆಂಗಣ್ಣಿಗೆ ಬಿದ್ದಿರಲಿಲ್ಲ. ಯಾವುದಕ್ಕೂ ಇರಲೆಂದು ಮತ್ತೊಬ್ಬ ಲೆಕ್ಕಿಗರನ್ನು ನೋಡಿದೆವು. ಮತ್ತೊಂದು ಅಭಿಪ್ರಾಯ. ಕಳಿಸ ಬಹುದು, ತೊಂದರೆ ಇಲ್ಲ, ಎಂದರು. ಇಡಿ ಅಧಿಕಾರಿಗಳ ಮೂರನೇ ಕಣ್ಣಿಗೆ ಬಿದ್ದುಬಿಟ್ಟರೇ – ಮೊದಲ ಅಭಿಪ್ರಾಯದಿಂದ ಬೆವರಿದ ಮೈ ಇನ್ನೂ ಆರಿರಲಿಲ್ಲ. ಇದೇನಿದು, ಅಮೆರಿಕಗೆ ಸಂಬಂಧಪಟ್ಟ ವ್ಯವಹಾರಗಳೆಲ್ಲವೂ ಗೋಜಲೇ ಎನ್ನಿಸಿತು. ಯಾವುದಕ್ಕೂ ಇರಲಿ ಎಂದು ಮೂರನೆಯವರನ್ನು ನೋಡಿದೆವು. ಮತ್ತೆ ಎದೆಯಲ್ಲಿ ಭಯವನ್ನು ಉತ್ಪಾದಿಸಿದರು. ನಾಲ್ಕನೆ ಯವರು. ವಿಭಿನ್ನ ಅಭಿಪ್ರಾಯ. ಹೀಗೆ ಅಭಿಪ್ರಾಯಗಳಿಗೆ ಕೊನೆಯಿಲ್ಲ ಎಂಬುದು ಮನಸ್ಸಿಗೆ ಬಂತು. ಇದೇನು ಹವಾಲಾ ದಂಧೆ ಯಲ್ಲವಲ್ಲ ಎಂದು ಧೈರ್ಯ ತುಂಬಿಕೊಂಡು ಸೀದಾ ಬ್ಯಾಂಕಿಗೆ ಹೋಗಿ ಹಣವನ್ನು ವರ್ಗಾವಣೆ ಮಾಡಿದೆವು.

ಕೇಸ್ ನಂಬರ್ 3

ನಮ್ಮ ಜತೆ ವಾಸವಿದ್ದ ಅತ್ತೆಗೆ ಕಾಯಿಲೆ. ಕ್ರಮೇಣ ಉಲ್ಬಣಗೊಳ್ಳುತ್ತಿತ್ತು. ಶ್ರವಣ ಕುಮಾರಿಯಂತೆ ಪತ್ನಿ ನೋಡಿಕೊಳ್ಳುತ್ತಿದ್ದಳು. ಕಂಡ ಕಂಡ ವೈದ್ಯರನ್ನು ಭೇಟಿ ಮಾಡಲಾಯಿತು. ಇಂಥದ್ದೇ ಎಂದು ಸ್ಪಷ್ಟವಾದ ರೋಗ ನಿಧಾನವಿಲ್ಲ, ವೈದ್ಯಕೀಯ ಅಭಿಪ್ರಾಯಗಳು ನಮ್ಮ ಭಾರತದಷ್ಟೇ ವೈವಿಧ್ಯ. ಸ್ಕ್ಯಾನಿಂಗ್‌ನಿಂದಲೂ ಬಗೆಹರಿಯಲಿಲ್ಲ. ನನ್ನ ಒಬ್ಬ ಭಾವ ವೈದ್ಯರು, ಬುದ್ಧಿವಂತ ಕೂಡ. ಅವರ ವಾಸ ಗುರುಗ್ರಾಮದಲ್ಲಿ. ಫೋನಿನ ಟೆಲಿ-ಸಲಹೆ. ಇದು ಖಚಿತವಾಗಿ ಟಿಬಿ, ಎಂದು ಹೇಳಿ ಅದಕ್ಕೆ
ತಕ್ಕ ಔಷಧಗಳನ್ನು ಸೂಚಿಸಿದರು. ವಿಜ್ಞಾನ ಅಭ್ಯಸಿಸದ, ಆದರೆ ತಾಯಿಯ ಸಮಸ್ಯೆಯನ್ನು ಅರಿಯಲು ಆ ದಿನಗಳಲ್ಲಿ ವಿಶೇಷವಾಗಿ ಅಧ್ಯಯನ ನಡೆಸಿದ ಶ್ರೀಮತಿ ಅದು ಟಿಬಿ ಅಲ್ಲ ಎಂದೇ ಸಾಧಿಸಿ ಹೇಳಲಾದ ಔಷಧಗಳನ್ನು ನೀಡಲಿಲ್ಲ. ಅದು ಟಿಬಿ ಆಗಿರಲಿಲ್ಲ.

ಕೇಸ್ ನಂಬರ್ 4
ನನಗೆ ಭೌತಶಾಸ್ತ್ರದಲ್ಲಿ ವಿಶೇಷ ಆಸಕ್ತಿ. ಸ್ನಾತಕೋತ್ತರ ಪದವಿಯನ್ನು ಪಡೆದು ಸಂಶೋಧನೆ ಮಾಡಬೇಕೆಂಬ ಹೆಬ್ಬಯಕೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅದು ಬೇಕಿರಲಿಲ್ಲ ಅನ್ನಿಸುತ್ತೆ. ಅಲ್ಲಿಯವರೆವಿಗೂ ಹುಡುಗಾಟದ ತೊಡಗಿ ಓದನ್ನು ಕಡೆಗಣಿ ಸಿದ್ದ ನಾನು ಎರಡನೇ ವರ್ಷದ ಪದವಿ ಪರೀಕ್ಷೆಗೆ ಕೊನೇ ಘಳಿಗೆಯ ತಯಾರಿ ನಡೆಸಿ ಪ್ರಥಮ ದರ್ಜೆಯಲ್ಲಿ ಪಾಸಾಗುವ ಭರವಸೆ ಹೊಂದಿದ್ದೆ. ಫಲಿತಾಂಶವನ್ನೂ ನೋಡಲಿಕ್ಕೆ ಧಾವಿಸಿರಲಿಲ್ಲ.ಇಲ್ಲಿ, ಸೆಂಟರ್ ಫ್ರೆಶ್ ಚೂಯಿಂಗ್ ಗಮ್ಮಿನ ಟಿವಿ ಜಾಹೀರಾತನ್ನು ನೆನಪಿಸಿಕೊಳ್ಳಬೇಕು. ತರಗತಿಗೆ ಲೇಟಾಗಿ ಬರುವ ವಿದ್ಯಾರ್ಥಿಯನ್ನು ಉಪನ್ಯಾಸಕ ಗೆಟ್ ಔಟ್ ಎಂದು ಗದರಿಸಿ ಹೊರಹಾಕುತ್ತಾನೆ. ಹೊರಗೆ ಹೋದವನು ಗಮ್ಮನ್ನು ಬಾಯಿಗೆ ಹಾಕಿಕೊಂಡು ತರಗತಿಯನ್ನು ಪುನರ್‌ಪ್ರವೇಶಿಸುತ್ತಾನೆ.

ಮುಂಬೈ ಹೈ ಕೋರ್ಟಿನಿಂದ ಜಾಮೀನು ಪಡೆಯಲಾಗದ ಅರ್ನಾಬ್ ಗೋಸ್ವಾಮಿ ಸುಪ್ರೀಂ ಕೋರ್ಟಿನಿಂದ ಸಲೀಸಾಗಿ ಜಾಮೀನು ಪಡೆದು ತನ್ನ ಸ್ಟುಡಿಯೋಗೆ ಪುನರ್‌ಪ್ರವೇಶಿಸಿದ್ದು ನೋಡಿ ಇಷ್ಟೆ ಬರೆದಿದ್ದು. ಜೈಲಿನಿಂದ ಬಿಡುಗಡೆಗೊಂಡ ಅಮೆರಿಕ ವೀಸಾನುಭವಿಯಂತೆ ವೀರಾನುವೇಶದಿಂದ ಪ್ರತಿಕ್ರಿಯಿಸಿದ್ದಕ್ಕೆ ಕಾರಣ ಜೈಲಿಗೆ ಬಿಡುಗಡೆ ಹೊಂದಿದ್ದಕ್ಕಿಂತ ನಮ್ಮ ಹದಗೆಟ್ಟ ವ್ಯವಸ್ಥೆಯಲ್ಲೂ ಎರಡನೆಯ ಅವಕಾಶವೆಂಬ ಬಾಗಿಲು ಮುಚ್ಚದಿರುವುದಕ್ಕೆ. ಎರಡನೆಯ ಅವಕಾಶ ಕೆಲವೊಮ್ಮೆ ಮೊದಲನೇ ಅವಕಾಶವೂ ಸಿಗದಿರುವುದು ನತದೃಷ್ಟರಿಗೆ ಮಾತ್ರ. ನನಗೆ ಬಾಳೋದಕ್ಕೆ ನೀವು ಒಂದೇ ಒಂದು ಅವಕಾಶ ಕೊಡಬೇಕಾಗಿತ್ತು ಅನ್ನುವ ಶರಪಂಜರದ ಕಲ್ಪನಾ ಮಾತು ಈ ಸಂದರ್ಭದಲ್ಲಿ ಸ್ಮರಣೀಯ. ಆದರೆ ಗಣಿತದಲ್ಲಿ ಫೇಲ್ ಆಗಿದ್ದೆ. 27 ಅಂಕಗಳು. ನನ್ನಿಂದ ಗಣಿತ ಪಾಠ ಹೇಳಿಸಿಕೊಂಡ ಕಸಿನ್‌ಗೆ 72. ಪುನರ್ ಮೌಲ್ಯಮಾಪನಕ್ಕೆ ಅವಕಾಶವಿಲ್ಲದ ದಿನಗಳು.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವಾಚಕರ ವಾಣಿ ವಿಭಾಗಕ್ಕೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಬಾವಿಗೆ ಬಿದ್ದ ಬಿಂದಿಗೆಯನ್ನಾದರೂ ಗಂಗಾ ಮಾತೆ ಮತ್ತೆ ಮೇಲುತ್ತಾಳೆ, ಒಮ್ಮೆಗೇ ಒಡಲಲ್ಲಿ ಸೇರಿಸಿಕೊಳ್ಳುವುದಿಲ್ಲ!

ಎರಡನೇ ಅವಕಾಶವಿಲ್ಲ. ನೋ ಅಪೀಲ. ನನಗೆ ಪ್ರಿಯವಾದ ವಿದ್ಯಾಭ್ಯಾಸ ವಿರೋಧಿ ನಿಲುವನ್ನೇ ಮತ್ತೆ ಮೈಗೂಡಿಸಿಕೊಂಡೆ.
ಈ ತರಹದ ಪ್ರಕರಣಗಳು ಅನೇಕ. ಎಲ್ಲರ ಬಾಳಿನಲ್ಲೂ ನಿತ್ಯ ಸಂಭವಿಸುತ್ತವೆ. ಎರಡನೇ ಅವಕಾಶ ಸಿಗುವ ಸಾಧ್ಯತೆಯೂ ಇರುತ್ತದೆ, ಸಿಗದಿರುವ ಸಾಧ್ಯತೆಯೂ ಇರುತ್ತದೆ. ಎರಡನೇ ಅವಕಾಶ ಸಿಗುವಂಥ ಸಂದರ್ಭದಲ್ಲಿ ಕೂಡ, ಮೊದಲ ಅವಕಾಶದಲ್ಲಿ ಆಗಿರಬಹುದಾದಂತಹ ಅನ್ಯಾಯವನ್ನು ಸರಿಪಡಿಸುವಂತಹ ಫಲಿತಾಂಶ ದೊರಕುತ್ತದೆ ಅನ್ನುವ ಖಾತರಿ ಸದಾ ಇರುವುದಿಲ್ಲ.
(ಆದರೂ ಆ ಖಾತರಿ ಇದ್ದೇ ಇದೆ ಎನ್ನುವಂತೆ ನಾವು ವರ್ತಿಸುತ್ತೇವೆ.) ಪ್ರೀತಿಸಿದ ಹುಡುಗಿಯಿಂದ ತಿರಸ್ಕರಿಸಲ್ಪಟ್ಟ ಹುಡುಗ ರೆಲ್ಲರೂ ಕೆರೆಬಾವಿ ನೋಡಿಕೊಳ್ಳುವುದಿಲ್ಲ.

ನೆಚ್ಚಿದ ಹುಡುಗ ಕೈಕೊಟ್ಟಿದ್ದಕ್ಕೆ ಹುಡುಗರೆಲ್ಲರೂ ನೇಣು ಬಿಗಿದುಕೊಳ್ಳುವುದಿಲ್ಲ. ಪ್ರಯತ್ನ ಮುಂದುವರಿಸುತ್ತಾರೆ.

Leave a Reply

Your email address will not be published. Required fields are marked *