Friday, 20th September 2024

ನೂರುಲ್ಲಾ ಮೇಷ್ಟ್ರು… ನೂರೊಂದು ನೆನಪು..!

ಕೆರೆ ಶಾಲೆ ಎಂಬ ವಿಚಿತ್ರ ಹೆಸರಿನ ಶಾಲೆ ನಿಮಗೆ ಗೊತ್ತಾಾ? ಸಾಗರದಲ್ಲಿದೆ. ಅದು ನಾನು ಓದಿದ ಸ್ಕೂಲು. ಯಾವುದೋ ಮೀನುಗಾರಿಕೆ ಕಲಿಸೋ ಶಾಲೆ ಅಂದ್ಕೋೋಬೇಡಿ. ನಮ್ಮೂರಿನ ಗಣಪತಿ ದೇವಸ್ಥಾಾನದ ಪಕ್ಕದಲ್ಲಿ ಒಂದು ಕೆರೆ ಇದೆ. ಅದೇ ಕೆರೆಗೆ ಆನಿಕೊಂಡು ನಮ್ಮ ಶಾಲೆಯೂ ಇದೆ. ಹಾಗಾಗಿ ಶಾಲೆಗೆ ಈ ಹೆಸರು ಬಂದಿದೆ. ಇಂಗ್ಲಿಿಷಲ್ಲಿ ಟ್ಯಾಾಂಕ್ ಸ್ಕೂಲ್ ಅಂತನೂ ಕರೀತಿದ್ರು. ಆದರೆ ನಮ್ಮ ಇಂಗ್ಲಿಿಷ್ ಅಲ್ಪ ಜ್ಞಾನದಲ್ಲಿ ಟ್ಯಾಾಂಕ್ ಅಂದ್ರೆೆ ಮನೇಲಿರೋ ತೊಟ್ಟಿಿ ಅಂದ್ಕೊೊಂಡಿದ್ವಿಿ. ಥೂ ತೊಟ್ಟಿಿ ಸ್ಕೂಲ್ ಅಂದ ಹಾಗಿರತ್ತೆೆ. ಅದಕ್ಕಿಿಂತ ಕೆರೆ ಶಾಲೆ ಅನ್ನೆೋದೇ ಬೆಟರ್ ಅಂತ ಹಾಗೇ ಕರೀತಿದ್ವಿಿ. ಬ್ರಿಿಟಿಷ್ ಕಾಲದ ಅದೇ ಶೈಲಿಯ ಕಟ್ಟಡ ಅದು. ಆ ಕಾಲದಲ್ಲಿ ಕೋರ್ಟ್ ಆಗಿತ್ತು ಅಂತೆಲ್ಲ ನಮಗೆ ದೊಡ್ಡವರು ಕಥೆ ಹೇಳಿದ್ರು. ಆ ಶಾಲೆಯ ಹಾಲ್ ಹಳೆಯ ಸಿನಿಮಾಗಳಲ್ಲಿ ತೋರಿಸುವ ಕೋರ್ಟ್ ಹಾಲ್ ನಂತೆಯೇ ಇತ್ತು. ಆ ಹಾಲ್ ನೋಡಿದ ಕೂಡಲೇ ಜಡ್‌ಜ್‌ ಸೀಟು, ಕಟಕಟೆ ಎಲ್ಲವೂ ಕಣ್ಮುಂದೆ ಬರುತ್ತಿಿತ್ತು. ಕಾನ್ವೆೆಂಟುಗಳನ್ನೂ ಮೀರಿಸಿದ್ದ ಶಾಲೆ ಕೆರೆಶಾಲೆ. ಅಂದಿನ ದಿನಗಳಲ್ಲಿ ಎಸ್ಸೆೆಸೆಲ್ಸಿಿ ರ್ಯಾಾಂಕ್ ಬಂದವರೆಲ್ಲ ಈ ಶಾಲೆಯಲ್ಲಿ ಓದಿ ಹೋದವರೇ ಆಗಿರುತ್ತಿಿದ್ದರು. ಸರಕಾರಿ ಶಾಲೆಗಳಿಗೆ ಅತಿ ಗೌರವವಿದ್ದ ಕಾಲವದು.

ನಾನು ಹೇಳೋಕೆ ಹೊರಟಿದ್ದು ಶಾಲೆ ವಿಷಯವಲ್ಲ. ನನ್ನ ವಿಷಯವೂ ಅಲ್ಲ. ನೂರುಲ್ಲಾ ವಿಷಯ. ಈ ಹೆಸರು ನಾನು ಜೀವನದಲ್ಲಿ ಎರಡನೇ ಬಾರಿಗೆ ಕೇಳಿದ್ದೆ. ಎರಡನೇ ಬಾರಿ ಕೇಳಿದ್ದ ನೂರುಲ್ಲಾ ಎಂಬುವವರು ನಮ್ಮ ಮೇಷ್ಟ್ರಾಾಗಿ ಬಂದಿದ್ರು. ಮೊದಲನೇ ಬಾರಿ ಕೇಳಿದ್ದು ಸ್ಟೂಡೆಂಟ್ ನೂರುಲ್ಲಾ! ಈ ಸ್ಟೂಡೆಂಟ್ ನೂರುಲ್ಲಾ ಹೆಸರು ಖುದ್ದು ಅವನಿಗೇ ಸರಿಯಾಗಿ ಹೇಳೋಕೆ ಬರ್ತಿರಲಿಲ್ಲ. ಮೇಷ್ಟ್ರು ಕೇಳಿದ್ರೆೆ ನೂರಿಲ್ಲಾ ಅಂತಿದ್ದ. ಹಾಜರಿ ಪುಸ್ತಕದಲ್ಲೂ ಅವನ ಹೆಸರು ನೂರಿಲ್ಲಾ ಎಂದೇ ನಮೂದಾಗಿತ್ತು. ಮೇಷ್ಟ್ರು-ಟೀಚರ್‌ಗಳು (ಆ ಕಾಲದಲ್ಲಿ ನಾವು ಗಂಡಸರನ್ನೆೆಲ್ಲ ಮೇಷ್ಟ್ರು, ಹೆಂಗಸ್ರನ್ನೆೆಲ್ಲ ಟೀಚರು ಅಂದ್ಕೊೊಂಡಿದ್ವಿಿ!) ಆತ ಟೆಸ್ಟಲ್ಲಿ ಸೊನ್ನೆೆ ಸುತ್ತಿಿದಾಗ ನೂರಿಲ್ಲ ಐವತ್ತೂ ಇಲ್ಲ ಬರೀ ಸೊನ್ನೆೆ ಅಂತ ಬಯ್ತಿಿದ್ರು. ಆತ ನನ್ನ ಪಕ್ಕಾಾನೇ ಕೂರ್ತಿದ್ದ. ನಾನು ನವೀನ. ಅವ್ನು ನೂರಿಲ್ಲ. ಅಕ್ಷರಮಾಲೆ ಪ್ರಕಾರ ಪಕ್ಕಪಕ್ಕಾಾನೇ ಕೂರೋದಾಗಿತ್ತು. ತುಂಬ ಮುದ್ದಾಗಿದ್ದ ನೂರಿಲ್ಲಾ ಕಣ್ಣಿಿಗೆ ಕಾಡಿಗೆ ಹಚ್ಚಿಿಕೊಂಡು ಬರ್ತಿದ್ದ. ಅವರ ಮನೆಯಲ್ಲಿ ಐದು ಗಂಡು ಐದು ಹೆಣ್ಣು.

ಗಂಡುಮಕ್ಕಳ ಹೆಸರೆಲ್ಲ ‘ಲ್ಲಾ’ ಇಂದ ಕೊನೆಯಾಗ್ತಿಿದ್ರೆೆ, ಹೆಣ್ಣುಮಕ್ಕಳ ಹೆಸರೆಲ್ಲಾ ಶಹನಾಜ್, ಶಾತಾಜ್.. ಹೀಗೆ ಜ್ ಇಂದ ಕೊನೆಗೊಳ್ತಿಿತ್ತು. ಅವರ ಮನೇಲಿ ಹತ್ತು ಜನ ಮಕ್ಕಳು ಅನ್ನೆೋದೇ ನಮಗೆ ದೊಡ್ಡ ಅಚ್ಚರಿ. ಅವರ ಹೆಸರನ್ನೆೆಲ್ಲ ಅವನ ಬಾಯಲ್ಲಿ ಕೇಳೋಕೆ ಇನ್ನೂ ಖುಷಿ. ಅದೇನೋ ಪ್ರೀತಿ ಅವನಿಗೆ ನಾನೆಂದರೆ. ಮನೆಗೆ ಕರೆದುಕೊಂಡು ಹೋಗ್ತಿಿದ್ದ. ಏನಾದರೂ ತಿನ್ನೆೋಕೆ ಕೊಡಬೇಕೆಂದು ಅವನಿಗೆ ಆಸೆ. ಆದರೆ ಅವರ ಮನೆಯವರಿಗೆ ಈ ಬ್ರಾಾಹ್ಮಣರ ಹುಡುಗ ಮನೆಗೆ ಬಂದಿದ್ದೇ ದೊಡ್ಡ ವಿಷಯ. ತಿನ್ನೆೋಕೆಲ್ಲ ಕೊಟ್ಟು ಅವನನ್ನು ಅಶುದ್ಧ ಮಾಡೋದು ಬೇಡ ಅನ್ನುವಂತೆ ಅವರು ಮುಜುಗರಕ್ಕೊೊಳಗಾಗ್ತಿಿದ್ರು. ಮೂರುನಾಲ್ಕು ಸಲ ಲೋಟ ತೊಳೆದು ಕುಡಿಯೋಕೆ ನೀರು ಕೊಟ್ಟರು. ಅದ್ಯಾಾಕೋ ಮೊದಲಿಂದಲೂ ವಾಸನೆಗೆ ಅತಿ ಸೆನ್ಸಿಿಟಿವ್ ಆದ ನನಗೆ ಮೊಟ್ಟೆೆ-ನಾನ್ ವೆಜ್‌ಗಳು ಪಾತ್ರೆೆಗಂಟಿ ಉಳಿಸುವ ವಾಸನೆ ಒಂದಿರುತ್ತಲ್ಲ ಅದು ಮೂಗಿಗಡರಿತ್ತು.

ಆ ವಾಸನೆ ಅದೇ ಎಂದು ಅರ್ಥವಾಗಿದ್ದು ಎಷ್ಟೋೋ ವರ್ಷಗಳ ನಂತರ ಬಿಡಿ. ಮನೆಗೆ ಬಂದು ಕೇಳಿದ್ದೆ, ‘ಅಮ್ಮಾಾ ನೂರಿಲ್ಲ ಮನೇಲಿ ನೀರು ಯಾಕೆ ಬೇರೆ ಥರ ವಾಸನೆ ಇತ್ತು?’ ಅಮ್ಮನಿಗೆ ನಾನು ಅತಿ ಸೂಕ್ಷ್ಮ ಅನ್ನೋೋದು ಗೊತ್ತಿಿರೋದ್ರಿಿಂದ, ನಮ್ಮನೇದು ಬಾವಿ ನೀರು-ಅವರ ಮನೇದು ನಲ್ಲಿ ನೀರು. ಅದ್ಕೇ ಹಾಗೆ ಅಂತ ಹೇಳಿ ಮುಗಿಸಿದ್ದರು. ಆಗಿನಿಂದ ನೂರಿಲ್ಲ ನನಗೆಷ್ಟೇ ಇಷ್ಟ ಅಂದರೂ ನಾನು ಅವರ ಮನೇಲಿ ಏನಾದ್ರೂ ತಿನ್ನೋೋಕೆ ಮಾತ್ರ ಹಿಂಜರೀತಿದ್ದೆ. ಆಗಿನ್ನೂ ಮೂರನೇ ಕ್ಲಾಾಸು.

ಆಗ ಶಾಲೆಗೆ ಹೊಸತಾಗಿ ಬಂದಿದ್ದು ನೂರುಲ್ಲಾ ಮೇಷ್ಟ್ರು. ಎಲ್ಲ ಮಕ್ಕಳಿಗೂ ನಮ್ಮ ಕ್ಲಾಾಸ್‌ಮೇಟ್ ಹೆಸರಿನ ಮೇಷ್ಟ್ರೊೊಬ್ರು ಬಂದಿದಾರೆ ಅಂತ ಖುಷಿ. ಅಟೆಂಡೆನ್‌ಸ್‌ ಪುಸ್ತಕದಲ್ಲಿ ಮೊದಲ ದಿನವೇ ಅವರು ಅವನ ಹೆಸರನ್ನು ‘ನೂರುಲ್ಲಾ’ ಎಂದು ತಿದ್ದಿದ್ದರು. ಮೊದಲ ದಿನವೇ ಅವರೆಡೆಗೆ ಆಕರ್ಷಿತನಾಗಿದ್ದೆ ನಾನು. ಕಾರಣ ಅವರು ನನ್ನ ಚಿಕ್ಕಪ್ಪನನ್ನು ನೆನಪಿಸುತ್ತಿಿದ್ದರು. ಮಾತು, ಆದರ್ಶಗಳು, ಪಾಠ ಹೇಳಿಕೊಡುತ್ತಿಿದ್ದ ರೀತಿ, ಕನ್ನಡದ ಸ್ಪಷ್ಟತೆ ಎಲ್ಲವೂ ನನ್ನ ಚಿಕ್ಕಪ್ಪನೇ ಅನಿಸುವಂತೆ ಮಾಡಿದ್ದವು. ಶಾಲೆ ಮುಗಿಸಿ ಮನೆಗೆ ಬಂದವನೇ ಮನೆಯವರೊಂದಿಗೆ ಖುಷಿಯಿಂದ ಹೇಳಿಕೊಂಡಿದ್ದೆ, ‘ಚಿಕ್ಕಪ್ಪನ ಥರಾನೇ ಇರೋ ಮೇಷ್ಟ್ರು ಬಂದಿದಾರೆ. ನೂರುಲ್ಲಾ ಅಂತ ಹೆಸರು’ ಎಂದು. ಅವರು ನೋಡೋಕೆ ಚೂರೂ ಹಾಗಿರಲಿಲ್ಲ ಅನ್ನೋೋದು ನನಗೆ ಮಾತ್ರ ಅನಿಸಿರಲೇ ಇಲ್ಲ. ಚಿಕ್ಕಪ್ಪನಂತಿದ್ದಾರೆ ಅನ್ನೆೋ ಕಾರಣಕ್ಕೆೆ ಇನ್ನಷ್ಟು ಮತ್ತಷ್ಟು ಇಷ್ಟವಾಗಿ ಹೋದರು. ಅವರನ್ನು ಕದ್ದುಕದ್ದು ನೋಡೋದು, ಅವರೆದುರು ಹೋಗಿ ಸುಖಾಸುಮ್ಮನೆ ‘ನಮಸ್ತೇ ಸಾರ್’ ಹೇಳೋದು, ಇಂಪ್ರೆೆಸ್ ಮಾಡೋಕೆ ಹೋಮ್‌ವರ್ಕ್ ಮಾಡೋದು ಇವೆಲ್ಲ ಸ್ವಲ್ಪ ಜಾಸ್ತಿಿಯೇ ಆಯ್ತು.

ಅದೆಲ್ಲ ಆ ವಯಸ್ಸಲ್ಲೇ ನನಗೆ ಅತಿ ಅನಿಸಿತ್ತು. ಆದರೆ ನನ್ನ ಮೇಲೆ ಅವರಿಗೂ ಅದೇ ರೀತಿಯ ಪ್ರೀತಿ ಹುಟ್ಟಿಿಬಿಟ್ಟಿಿತ್ತು. ಶಾಲೆಯ ವಾರ್ಷಿಕೋತ್ಸವಕ್ಕೆೆ ನನ್ನಿಿಂದ ಏಕಪಾತ್ರಾಾಭಿನಯ ಮಾಡಿಸೋದು ಎಂದು ನಿರ್ಧರಿಸಿದ ಅವರು, ಒಂದು ನಾಟಕ ತಂದಿದ್ದರು.
ಟಿಪ್ಪುು ಸುಲ್ತಾಾನ್ ಮತ್ತು ಮದಕರಿ ನಾಯಕರ ನಡುವಣ ಸಂವಾದ ಅದು. ಮದಕರಿ ನಾಯಕನನ್ನು ಟಿಪ್ಪುು ಸೆರೆಹಿಡಿಸಿದ್ದಾನೆ. ಕೋಳ ತೊಡಿಸಿ ಅವನನ್ನು ಟಿಪ್ಪುು ಆಸ್ಥಾಾನಕ್ಕೆೆ ಕರೆತರಲಾಗಿದೆ. ಅಲ್ಲಿ ಟಿಪ್ಪುು ತುಂಬ ವ್ಯಂಗ್ಯದಿಂದ ಮದಕರಿಯನ್ನು ಹೀಯಾಳಿಸಿ ಮಾತನಾಡುತ್ತಾಾನೆ. ಆದರೆ ಮದಕರಿ ಸಾವಿಗೂ ಭಯಪಡದೆ ಟಿಪ್ಪುುವಿಗೆ ಪ್ರತ್ಯುತ್ತರ ನೀಡುತ್ತಾಾನೆ. ಕೊನೆಯಲ್ಲಿ ‘ಮತ್ತೆೆ ಹುಟ್ಟಿಿಬರುತ್ತೇನೆ’ ಎಂಬ ಗರ್ಜನೆ ಮಾಡಿ ಮದಕರಿ ಪ್ರಾಾಣತ್ಯಾಾಗಕ್ಕೆೆ ಸಿದ್ಧವಾಗುವುದರೊಂದಿಗೆ ಏಕಪಾತ್ರಾಾಭಿನಯ ಮುಗಿಯುತ್ತದೆ.

‘ಸಾರ್, ಟಿಪ್ಪೂೂಗೆ ಮೈಸೂರು ಹುಲಿ ಅಂತಾರೆ. ಅವನ್ಯಾಾಕೆ ಈ ನಾಟಕದಲ್ಲಿ ಹೀಗೆ ಮಾಡಿದ್ದಾನೆ? ಇದು ನಿಜಾನಾ ಸುಮ್ ಸುಮ್ನೇನಾ’ ಅಂತ ಅವರನ್ನ ಕೇಳಿದ್ದೆ.ಅದಕ್ಕೆೆ ಮೇಷ್ಟ್ರು, ‘ನವೀನಾ.. ಟಿಪ್ಪುು ಮೈಸೂರಿಗೆ ಹುಲಿ ಆದರೆ ಮದಕರಿ ಚಿತ್ರದುರ್ಗದ ಹುಲಿ. ಯಾರಿಗಿಂತ ಯಾರೂ ಕಮ್ಮಿಿ ಇರ್ಲಿಲ್ಲ. ಇಬ್ಬರೂ ವೀರರೇ. ಇದರಲ್ಲಿ ಒಳ್ಳೇವ್ರು ಕೆಟ್ಟವ್ರು ಅನ್ನೆೋದೆಲ್ಲ ಇಲ್ಲ’ ಅಂದರು.
ಆದರೆ ಹುಲಿ ಅನಿಸ್ಕೊೊಂಡ ವೀರ ಮದಕರಿ ನಾಯಕನನ್ನು ಮೋಸದಿಂದ ಸೆರೆಹಿಡಿದಿದ್ದು ತಪ್ಪಲ್ವಾಾ? ಅಂತ ನಾನು ಮತ್ತೆೆ ಕೇಳಿದಾಗ,

ನೂರುಲ್ಲಾ ಮೇಷ್ಟ್ರು ಹೇಳಿದ್ದು, ‘ನವೀನಾ… ಅಕ್ಕಪಕ್ಕದ ಮನೆಯವರು ಮಿತ್ರರಾಗಿ ಇರ್ಬೇಕು ಅಂದರೆ ಅವರಿಬ್ಬರಿಗೂ ಒಬ್ಬ ಶತ್ರು ಬರಬೇಕು. ಮದಕರಿ-ಟಿಪ್ಪುು ಕಾಲದಲ್ಲಿ ಬ್ರಿಿಟಿಷರು ಬಂದಿದ್ದರೆ, ಅವರಿಬ್ಬರೂ ಶತ್ರುಗಳು ಆಗ್ತಾಾನೇ ಇರಲಿಲ್ಲ. ಇಬ್ಬರೂ ಸೇರಿ ಬ್ರಿಿಟಿಷರ ವಿರುದ್ಧ ಹೋರಾಡ್ತಿಿದ್ರು. ಧರ್ಮ ಅನ್ನೆೋದು ಬಣ್ಣ ಅಷ್ಟೆೆ ಅಸಲಿ ಶತ್ರುತ್ವಗಳು ಬೇರೆ ಲಾಭಕ್ಕಾಾಗಿ ಶುರು ಆಗೋದು. ಧರ್ಮ, ಜಾತಿ ಅನ್ನೆೋದೆಲ್ಲ ನೆಪ ಅಷ್ಟೆೆ.

ಸ್ವಾಾತಂತ್ರ್ಯದ ಕಥೆಗಳನ್ನು ಹೇಳ್ತಾಾ ಕಣ್ಣೀರಾಗ್ತಾಾ ಇದ್ದ ನೂರುಲ್ಲಾ ಮೇಷ್ಟ್ರು ಓದಿದ್ದು ಅಂದಿಗೆ ಬರೀ ಎಸ್ಸೆೆಸೆಲ್ಸಿಿ. ಅದ್ಯಾಾವುದೋ ತ್ಯಾಾವಣಗಿ ಎಂಬ ಊರಿನಿಂದ ಬಂದು, ಮೂವತ್ತು ರುಪಾಯಿಯ ಬಾಡಿಗೆ ಮನೆಯಲ್ಲಿದ್ರು. ಅವರ ಮನೆಗೆ ಹೋದರೆ, ಸಂಕೋಚದಿಂದ ಮುದ್ದೆಯಾಗುತ್ತಿಿದ್ದರು. ನಮ್ಮ ಮನೆಗಳಿಗೆ ಬಂದರೂ ಸಂಕೋಚವೇ. ತಾವು ನಮಾಜ್ ಮಾಡೋದು, ಮುಸ್ಲಿಿಂ ಅನ್ನೆೋದು ಬಹಿರಂಗ ಪಡಿಸಬೇಕಾದ ವಿಚಾರವಲ್ಲ ಅದು ತೀರಾ ಪರ್ಸನಲ್ ಎಂಬಂತೆ ಬದುಕಿದ ಅವರನ್ನು, ‘ಸಾರ್ ನಮಾಜ್ ಮಾಡೋದು ಕಲಿಸಿ’ ಅಂತ ಕೇಳಿದ್ದೆ. ಅದಕ್ಕೆೆ ಅವರು, ‘ನಮಾಜ್ಗೂ ನಮಸ್ಕಾಾರಕ್ಕೂ ಏನೂ ವ್ಯತ್ಯಾಾಸ ಇಲ್ಲ ನವೀನಾ.. ಶೈಲಿಯಷ್ಟೇ ಬೇರೆ’ ಎಂದಿದ್ದರು. ಟಿಪ್ಪುು-ಮದಕರಿಯ ಏಕಪಾತ್ರಾಾಭಿನಯಕ್ಕೆೆ ಪ್ರಶಸ್ತಿಿ ಸಿಕ್ಕಾಾಗ ನೂರುಲ್ಲಾ ಮೇಷ್ಟ್ರು ಮುಖದಲ್ಲಿ ಇದ್ದ ಹೆಮ್ಮೆೆ ಎಂದಿಗೂ ಮರೆಯಲಾಗದು. ಪ್ರಶಸ್ತಿಿ ಸಿಕ್ಕ ದಿನ ಅಂದಿದ್ದ ಮಾತೊಂದು ನೆನಪಾಗುತ್ತಿಿದೆ. ಸುಮಾರು ಮೂವತ್ತೆೆರಡು ವರ್ಷಗಳ ಹಿಂದಿನ ಮಾತಿದು.

‘ನವೀನಾ.. ಈ ನಾಟಕ ಮಾಡಿಸಿದ್ದಕ್ಕೆೆ ನನ್ನ ಮೇಲೆ ತುಂಬಾ ಜನ ಕೋಪಗೊಂಡಿದ್ದಾರೆ. ಕೋಪಗೊಂಡಿರೋದು ಮುಸ್ಲಿಿಮರೇ. ಹಾಗಂತ ಹಿಂದೂಗಳು ನನ್ನನ್ನು ತಮ್ಮವರೆಂದು ನೋಡ್ತಿಿಲ್ಲ. ನಿನಗೆ ಈ ವಯಸ್ಸಲ್ಲಿ ಇದೆಲ್ಲ ಅರ್ಥವಾಗೊಲ್ಲ. ಮನುಷ್ಯ ಧರ್ಮ, ಜಾತಿ ಇದನ್ನೆೆಲ್ಲ ಮೀರಿ ಬೆಳೀಬೇಕು. ನಾವು ಓದಿದ್ದು, ಕೇಳಿದ್ದು ಎಲ್ಲವೂ ಸುಳ್ಳಾಾಗಿರಬಹುದು. ಇತಿಹಾಸ ಸುಳ್ಳಾಾಗಿರಬಹುದು, ಪುರಾಣ ಸುಳ್ಳಾಾಗಿರಬಹುದು, ನಾವು ಅದರಿಂದ ತೆಗೆದುಕೊಳ್ಳಬೇಕಾಗಿರೋದು, ಬರಿ ಆದರ್ಶಗಳನ್ನು ಮಾತ್ರ. ಟಿಪ್ಪುು ಮತ್ತು ಮದಕರಿ ಅನ್ನೆೋದನ್ನು ನೀನು ಇತಿಹಾಸ ಅಂತಾದ್ರೂ ಅಂದ್ಕೊೊ, ಕಾಲ್ಪನಿಕ ಅಂತಾದ್ರೂ ಅಂದ್ಕೊೊ. ಟಿಪ್ಪುು ಪಾತ್ರದಲ್ಲಿ ಮದಕರಿಯನ್ನು ಕಲ್ಪಿಿಸಿಕೋ, ಮದಕರಿ ಪಾತ್ರದಲ್ಲಿ ಟಿಪ್ಪುುವನ್ನು ಕಲ್ಪಿಿಸಿಕೊ. ಹೇಗಾದ್ರೂ ಸರಿ, ಯಾವತ್ತಿಿಗೂ ಒಳ್ಳೇದನ್ನು ಬೆಂಬಲಿಸಿ, ಒಳ್ಳೇದನ್ನು ಕಲಿ. ಧರ್ಮ ಹೇಳೋದೂ ಅದನ್ನೇ. ಅದಕ್ಕೇ ಅದನ್ನು ಧರ್ಮ ಅನ್ನೋೋದು. ಟಿಪ್ಪುುವಿನಲ್ಲಿರೋ ಹಲವು ಒಳ್ಳೇ ವಿಚಾರಗಳು ನಮಗೆ ಗೊತ್ತಿಿಲ್ಲದೇ ಇರಬಹುದು. ಇದ್ದರೆ ಅದರಿಂದ ಪ್ರಭಾವಿತನಾಗು, ಮದಕರಿಯಲ್ಲಿದ್ದರೆ ಅವನ ಒಳ್ಳೇತನಗಳಿಂದ ನೀನು ಒಳ್ಳೇವ್ನಾಾಗು. ಅವರಲ್ಲಿರೋ ಕೆಟ್ಟತನ ಕಂಡು, ಹೀಗೆ ನಾನಾಗಬಾರದು ಅನ್ನೋೋದನ್ನು ಕಲಿ. ಜೀವನ ಬರಿ ಕಲಿಕೆ. ಇತಿಹಾಸ, ಪುರಾಣ ಇವೆಲ್ಲ ಮಾರ್ಕ್‌ಸ್‌ ತಗೋಳೋಕೂ ಅಲ್ಲ, ಅಂದಿನ ಕಥೆಗಳನ್ನು ನೆನಪಿಸಿಕೊಂಡು ನಾವು ಕೆಟ್ಟ ಭಾವ ಮೂಡಿಸಿಕೊಳ್ಳುವುದಕ್ಕೂ ಅಲ್ಲ. ನಾವು ಮನುಷ್ಯರಾಗೋದಕ್ಕೆೆ ಬೇಕಿರೋ ಪಾಠಗಳು ಅವು..’ ಹೀಗೆ ಹೇಳ್ತಾಾ ಹೋಗ್ತಿಿದ್ರು. ಅದು ಹೇಗೆ ಅದೆಲ್ಲ ಅರ್ಥ ಆಗ್ತಿಿತ್ತೆೋ.. ನನಗಂತೂ ಅವರು ದೇವರ ಹಾಗೆ ಕಾಣ್ತಿಿದ್ರು.

ನಾನು ನನ್ನೊೊಂದಿಗೆ ನೂರಿಲ್ಲಾ! ಜತೆಗೊಂದಿಷ್ಟು ಜನ ರಾಘವೇಂದ್ರಗಳು, ದಿನೇಶಗಳು, ಮಂಜುನಾಥಗಳು, ಅನೀಸು ಎಲ್ಲರೂ ಕೇಳಿಸಿಕೊಳ್ತಾಾ, ನಿಜಕ್ಕೂ ಜಾತಿ ಧರ್ಮಭೇದ ಮರೆತಿದ್ದೆವು.