Thursday, 19th September 2024

ಮೂಲ ಸ್ಥಳ ಕುಮ್ಮಟದುರ್ಗದಲ್ಲಿಯೂ ದಸರಾ ಮರುಕಳಿಸಲಿ

ಇತಿಹಾಸ

ಬಸವರಾಜ ಎನ್.ಬೋದೂರು

ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸುವ ದಸರಾ ಹಬ್ಬ ಎಲ್ಲರ ಮನೆ-ಮನದಲ್ಲೂ ಸಂಭ್ರಮ ಉಂಟುಮಾಡುತ್ತದೆ. ದಸರಾ ಮೊದಲು ನಮಗೆಲ್ಲ ನೆನಪಾಗುವುದೇ ಮೈಸೂರು. ಮೈಸೂರು ದಸರಾ ಜಗದ್ವಿಿಖ್ಯಾಾತಿ ಗಳಿಸಿ, ಈಗಲೂ ತನ್ನ ವೈಭವವನ್ನುಳಿಸಿಕೊಂಡು ಮುನ್ನಡೆಯುತ್ತಿಿರುವುದರಿಂದ ದಸರಾ ಎಂದರೆ ಮೈಸೂರು ನೆನಪಾಗುವುದು ಸಹಜ. ಆದರೆ ಮೈಸೂರಲ್ಲಿ ಆಚರಿಸುವ ದಸರಾ ಹಬ್ಬದ ಇತಿಹಾಸ, ಅಂಬಾರಿ ಮೇಲೆ ಮೆರವಣಿಗೆ ಮತ್ತು ರಾಜವಂಶಸ್ಥರು ನಡೆಸುವ (ಈಗ ಖಾಸಗಿ) ದರ್ಬಾರ್ ಚರಿತ್ರೆೆಯನ್ನು ಕೆದಕಿದಾಗ, ಹಲವಾರು ಆಯಾಮಗಳು ತೆರೆದುಕೊಂಡು, ಕುಮ್ಮಟದುರ್ಗಕ್ಕೆೆ ಬಂದು ನಿಲ್ಲುತ್ತದೆ.

ಹಂಪೆಯಲ್ಲಿರುವ ಮಹಾನವಮಿ ದಿಬ್ಬವನ್ನು ಆಧಾರವಾಗಿಟ್ಟುಕೊಂಡು ಮೊದಲು ವಿಜಯನಗರ ಸಾಮ್ರಾಾಜ್ಯದಲ್ಲಿ ದಸರಾ ಪ್ರಾಾರಂಭವಾಯಿತು ಹಲವರು ಹೇಳುತ್ತಾಾರೆ. ಆದರೆ, ವಿಜಯನಗರ ಸಾಮ್ರಾಾಜ್ಯ ಹುಟ್ಟುವುದಕ್ಕೂ ಪೂರ್ವದಲ್ಲಿ ಕೊಪ್ಪಳ ಜಿಲ್ಲೆಯ ಜಬ್ಬಲಗುಡ್ಡದ ಬಳಿ ಇರುವ ಕುಮ್ಮಟದುರ್ಗದ ಅರಸರಾದ ಕಂಪಿಲರಾಯ ಮತ್ತು ಕುಮಾರರಾಮನು ದಸರಾ ಆಚರಣೆಯನ್ನು ಜಾರಿಗೆ ತಂದಿದ್ದರು, ಅದಕ್ಕಾಾಗಿಯೇ ಅವರು ಹೇಮಗುಡ್ಡದಲ್ಲಿ ದುರ್ಗಾಪರಮೇಶ್ವರಿಯನ್ನು ಸ್ಥಾಾಪಿಸಿಕೊಂಡು ವಿಜಯದಶಮಿ ದಿನ ದುರ್ಗಾದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಮೆರವಣಿಗೆ ಮಾಡುವುದರ ಮೂಲಕ ವಿಜೃಂಭಣೆಯಿಂದ ದಸರಾ ಆಚರಿಸುತ್ತಿಿದ್ದರು ಎಂಬುದಕ್ಕೆೆ ಶಾಸನಗಳಲ್ಲಿ ಉಲ್ಲೇಖವಿದೆ ಎಂದು ಹಲವಾರು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.

ಈಗ ಮೈಸೂರು ಅರಮನೆಯಲ್ಲಿರುವ 750 ಕೆಜಿ ಅಂಬಾರಿ ಮತ್ತು 250 ಕೆಜಿ ತೂಕದ ಸಿಂಹಾಸನ ಕೂಡ ಗಂಡುಗಲಿ ಕುಮಾರರಾಮನ ಆಸ್ಥಾಾನದಲ್ಲಿದ್ದವು ಎನ್ನುವುದಕ್ಕೆೆ ಹಲವಾರು ದಾಖಲೆಗಳಿವೆ. ಇತ್ತೀಚೆಗೆ ಕುಮ್ಮಟದುರ್ಗ ಹಾಗೂ ಹೇಮಗುಡ್ಡಕ್ಕೆೆ ಆಗಮಿಸಿದ್ದ ಖ್ಯಾಾತ ಸಂಶೋಧಕರಾದ ಡಾ. ಚಿದಾನಂದ ಮೂರ್ತಿಯವರು, ‘ವಿಜಯನಗರ ಸಾಮ್ರಾಾಜ್ಯಕ್ಕೂ ಮುನ್ನ 13ನೇ ಶತಮಾನದಲ್ಲಿ ಕುಮ್ಮಟ ದುರ್ಗದ ಅರಸರು ಹೇಮಗುಡ್ಡದಲ್ಲಿ ದಸರಾ ಆಚರಣೆ ಮಾಡುತ್ತಿಿದ್ದರು, ನೈಜ ಇತಿಹಾಸ ಮುಚ್ಚಿಿಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದ್ದರಿಂದ ಈ ವಿಷಯವೀಗ ಮತ್ತೆೆ ಮುನ್ನೆೆಲೆಗೆೆ ಬಂದಿದೆ.

10ನೇ ಶತಮಾನದಲ್ಲಿ ದೇವಗಿರಿ ಯಾದವರ ಕೊನೆಯ ರಾಜ ರಾಮಚಂದ್ರದೇವನ ಆಸ್ಥಾಾನದಲ್ಲಿ ಈ ರತ್ನಖಚಿತ ಸಿಂಹಾಸನ ಮತ್ತು ಅಂಬಾರಿ ಇದ್ದವು. ದೇವಗಿರಿಯ ಮೇಲೆ ದೆಹಲಿ ಸುಲ್ತಾಾನರು ದಾಳಿ ಮಾಡಿದಾಗ, ರಾಜ ರಾಮಚಂದ್ರದೇವನು ಸೋತು ಸುಲ್ತಾಾನರ ಸೆರೆಯಾಳಾಗುತ್ತಾಾನೆ. ಸುಲ್ತಾಾನರು ದೇವಗಿರಿಯನ್ನು ಕೊಳ್ಳೆೆ ಹೊಡೆಯಲು ಪ್ರಾಾರಂಭಿಸಿದಾಗ, ರಾಮಚಂದ್ರದೇವನು ತನ್ನ ಆಸ್ಥಾಾನದಲ್ಲಿ ದಂಡಾಧಿಕಾರಿಯಾಗಿದ್ದ ಹಾಗೂ ರಾಯದುರ್ಗದ ಆಡಳಿತಾಧಿಕಾರಿಯಾಗಿದ್ದ ಮುಮ್ಮಡಿ ಸಿಂಗೆ ನಾಯಕನಿಗೆ ಸಿಂಹಾಸನ, ಅಂಬಾರಿ ರಕ್ಷಿಸುವ ಹೊಣೆ ಹೊರಿಸುತ್ತಾಾನೆ.

ಆಗ ಮುಮ್ಮಡಿ ಸಿಂಗೆ ನಾಯಕ ಅಂಬಾರಿ ಮತ್ತು ರಾಯದುರ್ಗದ ಕೋಟೆಯಲ್ಲಿ ಮುಚ್ಚಿಿಟ್ಟು, ನಂತರ ತಾನೇ ಸ್ವತಂತ್ರವಾಗಿ ರಾಜ್ಯ ಕಟ್ಟಿಿ ಅವುಗಳನ್ನು ರಕ್ಷಣೆ ಮಾಡತೊಡಗಿದ. ತನ್ನ ರಾಜ್ಯವನ್ನು ಬಳ್ಳಾಾರಿ ಜಿಲ್ಲೆಯ ಕಂಪಲಿವರೆಗೆ ವಿಸ್ತರಿಸಿ ಆಡಳಿತ ನಡೆಸುತ್ತಾಾನೆ. ನಂತರ ಆಡಳಿತಕ್ಕೆೆ ಬಂದ ಆತನ ಮಗ ಕಂಪಿಲರಾಯ, ಕೊಪ್ಪಳ ಜಿಲ್ಲೆಯ ಆನೆಗೊಂದಿ, ಕುಮ್ಮಟದುರ್ಗ ಹಾಗೂ ಬಳ್ಳಾಾರಿಯ ಹೊಸಮಲೆ ದುರ್ಗದವರೆಗೆ ರಾಜ್ಯ ವಿಸ್ತರಿಸಿ ಆಡಳಿತ ಮಾಡುತ್ತ, ಅಂಬಾರಿ ಹಾಗೂ ಸಿಂಹಾಸನ ಕಾಪಾಡಿಕೊಂಡಿದ್ದ. ಆತ ಕಂಪಲಿಯಿಂದ ಹೊಸಮಲೆದುರ್ಗದಲ್ಲಿ ರಾಜ್ಯ ಕಟ್ಟಿಿ ಆಡಳಿತ ನಡೆಸುತ್ತಿಿರುವಾಗಲೇ ಮಗ ಕುಮಾರರಾಮ ಜಬ್ಬಲಗುಡ್ಡದ ಬಳಿ ಇರುವ ಕುಮ್ಮಟದುರ್ಗದಲ್ಲಿ ಕೋಟೆ ಕಟ್ಟಿಿ ಅದಕ್ಕೆೆ ತಾನೇ ರಾಜನಾದ. ಆನಂತರ ಕಂಪಿಲರಾಯನು ಮಗನ ರಾಜ್ಯಕ್ಕೆೆ ಅಂಬಾರಿ, ಸಿಂಹಾಸನವನ್ನು ವರ್ಗಾಯಿಸಿ, ಸ್ವಲ್ಪ ಸಮಯ ಕಳೆದ ಮೇಲೆ ತಾನೂ ಕುಮ್ಮಟದುರ್ಗಕ್ಕೆೆ ಬಂದು ಮಗನೊಂದಿಗೆ ನೆಲೆಸುತ್ತಾಾನೆ.

ಕುಮ್ಮಟದುರ್ಗಕ್ಕೆೆ ಹತ್ತಿಿರದಲ್ಲಿರುವ ಹೇಮಗುಡ್ಡದಲ್ಲಿ ದುರ್ಗಾಪರಮೇಶ್ವರಿಯನ್ನು ಸ್ಥಾಾಪಿಸಿಕೊಂಡು ಪ್ರತಿ ವರ್ಷ ದಸರಾ ಹಬ್ಬ ಆಚರಿಸಲು ಪ್ರಾಾರಂಭಿಸುತ್ತಾಾರೆ. ಕುಮಾರರಾಮನ ಸಹೋದರಿಯ ಮಕ್ಕಳಾದ ಹಕ್ಕ-ಬುಕ್ಕರು ತಮ್ಮ ತಂದೆಯಾದ ಭಾವ ಸಂಗಮನೊಂದಿಗೆ ಕುಮಾರರಾಮನ ರಾಜ್ಯದಲ್ಲಿ ಭಂಡಾರದ ಕಾವಲುಗಾರರಾಗಿ ನಿರ್ವಹಿಸುತ್ತಿಿರುತ್ತಾಾರೆ. ಹೀಗಿರುವಾಗ ದಕ್ಷಿಣ ಭಾರತದ ಮೇಲೆ ಸಂಪತ್ತು ಕೊಳ್ಳೆೆ ಹೊಡೆಯಲು ದಂಡೆತ್ತಿಿ ಬಂದವನು ದೆಹಲಿ ಸುಲ್ತಾಾನ ಅಲ್ಲಾವುದ್ದೀನ್ ಖಿಲ್ಜಿಿ. ಕ್ರಿಿಶ 1315ರಲ್ಲಿ ಮೊದಲು ಸುಲ್ತಾಾನ, ತದನಂತರ ಆತನ ಸೇನಾಧಿಪತಿ ಮಲ್ಲಿಕಾಫರ್ (ನೇಮಿಖಾನ್) ದಾಳಿ ಮಾಡಿ ಹೀನಾಯ ಸೋಲು ಅನುಭವಿಸುತ್ತಾಾರೆ. ಆಮೇಲೆ ಬಂದ ಇನ್ನೊೊಬ್ಬ ದಾಳಿಕಾರ, ಮಹಮ್ಮದ್ ಬಿನ್ ತುಘಲಕ್ ಸತತ 11 ವರ್ಷಗಳ ಕಾಲ ಕುಮಾರರಾಮನೊಂದಿಗೆ ಕಾದಾಡುತ್ತಾಾನೆ.

ಹೂಡಿದ ಏಳು ಯುದ್ಧಗಳಲ್ಲಿ ಒಂದರಲ್ಲಿಯೂ ಜಯ ಕಾಣದೆ ಶತ್ರುಗಳು ಕಂಗಾಲಾಗಿ, ತೆಲುಗು ದೇಶದ ಪ್ರತಾಪರುದ್ರನ ಮಗಳು ಮಾತಂಗಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆೆ ಬಂದು, ಮೋಸದಿಂದ ಕುಮಾರರಾಮನನ್ನು ಕೊಲ್ಲುತ್ತಾಾರೆ. ಆಗ ಹಕ್ಕ-ಬುಕ್ಕರು ಅಂಬಾರಿ ಮತ್ತು ಸಿಂಹಾಸನವನ್ನು ಹುತ್ತದಲ್ಲಿ ಹುಗಿದು ಬಚ್ಚಿಿಟ್ಟು ಸುಲ್ತಾಾನರ ಸೆರೆಯಾಳಾಗುತ್ತಾಾರೆ. ಸುಲ್ತಾಾನರ ಸೇನೆ ಇವರನ್ನು ದೆಹಲಿಗೆ ಕೊಂಡೊಯ್ಯುತ್ತದೆ. ಇನ್ನುಳಿದ ಸಂಪತ್ತನ್ನೆೆಲ್ಲ ಮಂತ್ರಿಿ ಬೈಚಪ್ಪ ನಾಯಕನು ಆನೆಗೊಂದಿ ವಾಲಿಖಿಲ್ಲಾಕ್ಕೆೆ ಸಾಗಿಸುತ್ತಾಾನೆ.

ದೆಹಲಿಯಿಂದ ವಾಪಸ್ ಬಂದ ಹಕ್ಕ-ಬುಕ್ಕರು ಹುತ್ತದಲ್ಲಿ ಹುಗಿದ ಅಂಬಾರಿ ಮತ್ತು ಸಿಂಹಾಸನವನ್ನು ಹೊರ ತೆಗೆದು ಆನೆಗೊಂದಿಗೆ ಸಾಗಿಸಿ ಅಲ್ಲಿ 1336ರಲ್ಲಿ ಸಾಮ್ರಾಾಜ್ಯ ಕಟ್ಟುತ್ತಾಾರೆ. ಆನೆಗೊಂದಿಯಲ್ಲಿಯೂ ಸಹ ದುರ್ಗಾಪರಮೇಶ್ವರಿಯನ್ನು ಸ್ಥಾಾಪಿಸಿಕೊಂಡು ಯುದ್ಧಕ್ಕೆೆ ಹೋಗುವಾಗ, ಜಯಶಾಲಿಯಾಗಿ ಬಂದಾಗ, ಈ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಮಾಡುತ್ತಿಿದ್ದರು. ದಸರಾ ಇಲ್ಲಿಯೂ ಮುಂದುವರಿಯಿತು.

ನಂತರದ ದಿನಗಳಲ್ಲಿ ಬುಕ್ಕರಾಯನು ಹಂಪಿಗೆ ವಿಜಯನಗರ ಸಾಮ್ರಾಾಜ್ಯ ಸ್ಥಳಾಂತರಿಸಿ ದಸರಾ ಮುಂದುವರಿಸುತ್ತಾಾನೆ. ವಿಜಯ ನಗರ ಸಾಮ್ರಾಾಜ್ಯ ಆಳಿದ ನಾಲ್ಕು ಮನೆತನಗಳು ಕೂಡ ದಸರಾವನ್ನು ಇನ್ನಷ್ಟು ಎತ್ತರಕ್ಕೆೆ ವಿಸ್ತರಿಸಿ ವಿಜೃಂಭಣೆಯಿಂದ ಆಚರಿಸಿದರು. ಕೃಷ್ಣದೇವರಾಯನ ಕಾಲದಲ್ಲಿ ಹೊಸ ಸ್ವರೂಪವನ್ನು ಪಡೆದುಕೊಂಡು ಜಗದಗಲ ಹೆಸರುವಾಸಿಯಾಯಿತು. ಆಗ ದಕ್ಷಿಣ ಸಾಮಂತ ಪಾಳೆಯಗಾರರೆಲ್ಲ ದಸರಾ ಉತ್ಸವದಲ್ಲಿ ಪಾಲ್ಗೊೊಂಡು ಕಾಣಿಕೆ ನೀಡಿ ಹೋಗುತ್ತಿಿದ್ದರು. ವಿದೇಶಿಯರೂ ಕೂಡ ದಸರಾ ಹಬ್ಬದಲ್ಲಿ ಪಾಲ್ಗೊೊಳ್ಳುತ್ತಿಿದ್ದರಂತೆ.

ಅರವಿಡು ವಂಶದ ರಾಜ ರಾಮರಾಯನು ಕ್ರಿಿಶ1565 ರಲ್ಲಿ, ರಕ್ಕಸ ತಂಗಡಗಿ ಯುದ್ಧದಲ್ಲಿ ಮಡಿದಾಗ, ಆತನ ವಂಶಸ್ಥರು ವಿಜಯನಗರದ ರಾಜಧಾನಿಯನ್ನು ಆಂಧ್ರದ ಪೆನುಗೊಂಡಕ್ಕೆೆ ವರ್ಗಾಯಿಸಿ, ಸಿಂಹಾಸನ, ಅಂಬಾರಿ ಹಾಗೂ ಅಪಾರ ಸಂಪತ್ತನ್ನು ಆನೆಗಳ ಮೇಲೆ ಹೇರಿಕೊಂಡು ಹೋಗುತ್ತಾಾರೆ. ಮುಂದೆ ವೈರಿಗಳ ದಾಳಿಯಿಂದ ಪೆನುಗೊಂಡ ನಾಶವಾದಾಗ ಅಲ್ಲಿಂದ ಅಂಬಾರಿ, ಸಿಂಹಾಸನವನ್ನು ಮೈಸೂರಿನ ರಾಜಧಾನಿಯಾಗಿದ್ದ ಸ್ಥಳಾಂತರಿಸಿ, ವಿಜಯನಗರ ಸಾಮ್ರಾಾಜ್ಯದ ಗವರ್ನರ್ ಆಗಿದ್ದ ಶ್ರೀರಂಗದೇವರಾಯ ಅಂದಿನ ಮೈಸೂರಿನ ಒಡೆಯರಾದ ರಾಜಾ ಒಡೆಯರ್‌ಗೆ 1610 ರಲ್ಲಿ ಹಸ್ತಾಾಂತರಿಸುತ್ತಾಾನೆ.

ಹಾಗೆ ಶ್ರೀರಂಗ ಪಟ್ಟಣದಲ್ಲಿ ದಸರಾ ಉತ್ಸವ ಪ್ರಾಾರಂಭವಾಯಿತು. ನಂತರ ಮೈಸೂರಿಗೆ ರಾಜಧಾನಿ ಬದಲಾಯಿಸಿ, ಅಂಬಾರಿ, ಸಿಂಹಾಸನ ಅಲ್ಲಿಗೆ ಸ್ಥಳಾಂತರಿಸಿ ಕ್ರಿಿಶ 1800 ರಲ್ಲಿ ಮೈಸೂರಿನ ಒಡೆಯರು ದಸರಾ ಉತ್ಸವ ಆರಂಭಿಸಿದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ.

ಒಟ್ಟಾಾರೆಯಾಗಿ ಮೈಸೂರು ದಸರಕ್ಕೆೆ ಕಡುಗಲಿ ಕುಮಾರರಾಮನ ನಾಡು ಕುಮ್ಮಟ ದುರ್ಗವೇ ಮೂಲವಾಗಿದ್ದು ಕೂಡ ತವರು ನೆಲವಾದ ಹೇಮಗುಡ್ಡ, ಆನೆಗೊಂದಿ ಹಾಗೂ ಹಂಪೆಯಲ್ಲಿ ದಸರಾ ತನ್ನ ಪರಂಪರೆಯನ್ನು ಉಳಿಸಿಕೊಂಡಿದೆ. ಈಗಲೂ ಇಲ್ಲಿ ವಿಜಯದಶಮಿ ದಿನ ಆನೆಯ ಮೇಲೆ ಅಂಬಾರಿ (ಕಟ್ಟಿಿಗೆಯಿಂದ ತಯಾರಿಸಿದ ಅಂಬಾರಿ) ಮೆರವಣಿಗೆ ಮಾಡಲಾಗುತ್ತದೆ. ಹಿಂದಿನಿಂದಲೂ ಬಂದ ವಿಧಿವಿಧಾನಗಳನ್ನು ಅನುಸರಿಸುತ್ತಾಾ ಧಾರ್ಮಿಕ ಆಚರಣೆಯ ಸಂಸ್ಕೃತಿಯನ್ನು ಉಳಿಸಿಕೊಂಡು ಬರಲಾಗಿದೆ. ಆದರೆ ಕುಮ್ಮಟದುರ್ಗಕ್ಕೂ, ಮೈಸೂರಿಗೂ ಅವಿನಾಭಾವ ನಂಟು ಇರುವುದು ಬಹಳ ಜನರಿಗೆ ಗೊತ್ತಿಿಲ್ಲ.

ಈ ನಿಟ್ಟಿಿನಲ್ಲಿ ಸರಕಾರ ಮೈಸೂರು ದಸರಾದಂತೆ ಕುಮಾರರಾಮನ ಕುಮ್ಮಟದುರ್ಗದ ಹೇಮಗುಡ್ಡದಲ್ಲೂ ಆಚರಿಸಲು ಮುಂದಾಗಬೇಕಿದೆ. ಇದರಿಂದ ಮುಂದಿನ ಪೀಳಿಗೆಗೆ ಇತಿಹಾಸದ ಪರಿಚಯವಾಗುತ್ತದೆ, ಜತೆಗೆ ದಸರಾ ನಡೆದುಬಂದುದರ ಬಗ್ಗೆೆ ಅರಿವು ಮೂಡಿಸಿದಂತಾಗುತ್ತದೆ. ಇದರೊಂದಿಗೆ ಈ ಭಾಗದ ಜನರ, ಇತಿಹಾಸಪ್ರಿಿಯರ ಹಾಗೂ ಸಂಘ-ಸಂಸ್ಥೆೆಗಳ ಮತ್ತು ಕುಮಾರರಾಮನ ವಂಶಸ್ಥರ ಭಾವನೆಗಳನ್ನು ಗೌರವಿಸಿದಂತಾಗುತ್ತದೆ ಎನ್ನುವುದು ಕಲ್ಯಾಾಣ ಕರ್ನಾಟಕ ಭಾಗದ ಜನರ ಆಶಯ.
-ಬಸವರಾಜ ಎನ್ ಬೋದೂರು

Leave a Reply

Your email address will not be published. Required fields are marked *