ಬುಲೆಟ್ ಪ್ರೂಫ್
ವಿನಯ್ ಖಾನ್
ಕಳೆದ ಕೆಲ ದಿನಗಳ ಶಿಕಾಗೋನಲ್ಲಿ ಡೆಮಾಕ್ರೆಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಸಿತ್ತು. ಆ ಸಮಾವೇಶ ಅಮೆರಿಕ ಬಿಟ್ಟು ಬೇರೆ ಯಾವುದೇ ದೇಶಕ್ಕೂ ಸಂಬಂಧ ಪಡ
ದಿದ್ದರೂ, ಅಮೆರಿಕದಲ್ಲಿನ ಆಡಳಿತ ಪಕ್ಷದ ರಾಷ್ಟ್ರೀಯ ಮಟ್ಟದ ಸಮಾವೇಶವಾಗಿದ್ದರಿಂದ ಪ್ರಪಂಚದ ಎಲ್ಲ ಪತ್ರಿಕೆ ಹಾಗೂ ವಿಶ್ವದ ಅನೇಕರ ಕಣ್ಣು ಬಿದ್ದಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನವೆಂಬರ್ ನಲ್ಲಿ ನಡೆಯುವ ಚುನಾವಣೆಯ ಬಗ್ಗೆ, ಅದರ ರೂಪುರೇಷ ಬಗ್ಗೆ, ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ರೇಸ್‌ನಿಂದ ಜೋ ಬೈಡೆನ್ ಹಿಂದೆ ಸರಿದ ಮೇಲೆ, ಆ ಪಕ್ಷದ ಹೊಸ ನಾಯಕಿ ಕಮಲಾ ಹ್ಯಾರಿಸ್ ಅನ್ನು ಪರಿಚಯಿಸಲು, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ನಡೆಸಿದ ಕಾರ್ಯಕ್ರಮ. ಅದರಿಂದ ಅಮೆರಿಕದ ಹೊರಗೆ ಅದರಿಂದೇನೂ ಉಪಯೋಗವಿಲ್ಲ.
ಆದರೂ ಆ ಕಾರ್ಯಕ್ರಮದಲ್ಲಿ ಕೆಲವು ಅಂತಾರಾಷ್ಟ್ರೀಯ ಆಗುಹೋಗುಗಳ ಬಗ್ಗೆ ಮಾತಾಡುವುದನ್ನೂ ಮಾಡುತ್ತಾರೆ.
ಸೋಮವಾರ ಡಿಎನ್‌ಸಿ ಕಾರ್ಯಕ್ರಮ ಶುರುವಾಗುವುದಕ್ಕೂ ಮುಂಚೆ ಪ್ಯಾಲೆಸ್ತೀನ್ ಪರವಾಗಿ ಹಲವಾರು ಜನರು ಪ್ರತಿಭಟನೆ ಮಾಡಲು ಶುರು ಮಾಡುತ್ತಾರೆ. ಈಗ ಇಸ್ರೇಲ್, ಪ್ಯಾಲೇಸ್ತೀನ್, ಹಮಾಸ್, ಹಿಜ್ಬುಲ್ಲ, ಇರಾನ್, ಹೌಥಿಗಳ ನಡುವೆ ಸಮಸ್ಯೆ ಇದ್ದರೂ, ಕೆಲವರಿಗೆ ಅಲ್ಲಲ್ಲಿ ಕೆರೆದುಕೊಳ್ಳದಿದ್ದರೆ ಮನಸ್ಸಿಗೆ ಭಾರವಾಗಿರುತ್ತೆ ಅಂತ ಅನ್ನಿಸುತ್ತೆ. ಹಾಗೇ ಸುಮ್ನೆ ಇಸ್ರೇಲಿಗೆ ಧಿಕ್ಕಾರ ಕೂಗುತ್ತಾರೆ. ಪ್ಯಾಲೇಸ್ತೇನಿ ಜನರಿಗೆ ನ್ಯಾಯ ಕೊಡಿಸಿ ಅಂತ ಮೊಸಳೆ ಕಣ್ಣಿರು ಹಾಕಲು ಶುರು ಮಾಡುತ್ತಾರೆ… ಇದೇ ಕೆಲವು ದಿನಗಳ ಮುಂಚೆ ಕೆಲವು ಪ್ಯಾಲೆಸ್ತೀನ್ ಬೆಂಬಲಿಗರು, ಇಂಗ್ಲೆಂಡ್‌ನಲ್ಲಿನ ಇಸ್ರೇಲಿ ರಕ್ಷಣಾ ಸಂಸ್ಥೆಯ ಕಟ್ಟಡದ ಮೇಲೆ ದಾಳಿ ಮಾಡುತ್ತಾರೆ.
ವ್ಯಾನ್‌ನಿಂದ ಅದರ ಬೇಲಿ ಮುರಿದು, ಆ ಕಟ್ಟಡವನ್ನು ಮುರಿಯುವುದಕ್ಕೆ ಪ್ರಯತ್ನ ಪಟ್ಟು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಈಗ ಸೆರೆಮನೆಯಲ್ಲಿದ್ದಾರೆ. ಬ್ರಿಟನ್ ನ ಕೆಲವು ಪತ್ರ ಕೆಗಳ ವರದಿ ಪ್ರಕಾರ ಅವರಿಗೆ ಜತೆ ಉಗ್ರರ ನಂಟೂ ಇದೆ. ಹಮಾಸ್ ಬೆಂಬಲಿಸಿ ಹೋರಾಟ ಮಾಡುವವರಿಗೆ ಉಗ್ರರ ನಂಟು ಇದ್ದೇ ಇರಬೇಕು. ಏಕೆಂದರೆ, ಹಮಾಸ್ ಮೊದಲಿಗೆ ಒಂದು ದೇಶವಲ್ಲ ಅಥವಾ ಒಂದು ಸಂಘಟನೆ, ಸಂಸ್ಥೆಯೂ ಅಲ್ಲ. ಹಮಾಸ್ ಒಂದು ಶುದ್ಧ ಭಯೋತ್ಪಾದಕರ ಸಂಘಟನೆ. ಇಸ್ರೇಲ್‌ನಲ್ಲಿ ಆಗಾಗ ಮಾನವ ಬಾಂಬ್‌ಗಳನ್ನು ಹಾಕಿಕೊಂಡು ಜನರನ್ನು ಕೊಲ್ಲುವುದು, ಇಸ್ರೇಲ್ ನಾಗರಿಕರನ್ನು ಕಿಡ್ನ್ಯಾಪ್ ಮಾಡುವುದು, ಪ್ಯಾಲೆಸ್ತೀನ್‌ನಲ್ಲಿರುವ ಮಕ್ಕಳನ್ನು ಇಸ್ರೇಲ್ ಸೈನಿಕರ ಮೇಲೆ ಕಲ್ಲು ಎಸೆಯಲು ಹುರಿದುಂಬಿಸುವುದು, ಜನರ ಕೈಯಲ್ಲಿ ಗನ್‌ಗಳನ್ನು ಕೊಟ್ಟು ಇಸ್ರೇಲ್ ನವರನ್ನು ಸಾಯಿಸಲು ಅಟ್ಟುವುದು, ಆಮೇಲೆ ಏನಾದರೂ ಇಸ್ರೇಲ್ ವಾಪಾಸ್ ಇವರ ಮೇಲೆ ಪ್ರತ್ಯುತ್ತರವಾಗಿ ದಾಳಿ ಮಾಡಿದಾಗ, ವಿಶ್ವಾದ್ಯಂತ ಚರಂಡಿಯಲ್ಲಿ ನಾಯಿಕೊಡೆ ಎದ್ದ ರೀತಿಯಲ್ಲಿ ಜನರ ಕಣ್ಣುಗಳು ಗಾಜಾ, ರಫ್ತು, ಪ್ಯಾಲೇಸ್ತೀನ್‌ನ ಮೇಲೆ ಹೋಗಲು ಶುರುವಾಗುತ್ತದೆ.
ಪ್ಯಾಲೆಸ್ತೀನ್ ಪರವಾಗಿ ಹೋರಾಟ ನಡೆಸುತ್ತಿರುವುದು ಬರೀ ಫ್ರಾನ್ಸ್, ಇಟಲಿ, ಕೆನಡಾ, ಅಮೆರಿಕ, ಬ್ರಿಟನ್‌ನಂತಹ ರಾಷ್ಟ್ರಗಳಲ್ಲಷ್ಟೇ ಅಲ್ಲ. ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲೂ ಇಸ್ರೇಲ್ ಅನ್ನು ವಿರೋಧಿಸಿ ಪ್ರತಿಭಟನೆಯಾಗಿತ್ತು. ಅಷ್ಟೇ ಏಕೇ ಕಾಂಗ್ರೆಸ್ ಸಹ ಪ್ಯಾಲೆಸ್ತೀನ್ ಪರವಾಗಿ ಕೇರಳದ ಮತ್ತಿತರ ಕಡೆಗಳಲ್ಲೂ ಹೋರಾಟ ಮಾಡಿತ್ತು. ಹಾಗೆಯೇ ಭೂಕುಸಿತದಿಂದ ಕೇರಳದಲ್ಲಿ ದೊಡ್ಡ ರಾದ್ಧಾಂತವಾಗಿದ್ದರೂ, ಇಸ್ರೇಲ್ ದಾಳಿಗೆ ಇರಾನ್‌ನಲ್ಲಿ ಸತ್ತ ಇಸ್ಮೈಲ್ ಹನ್ನೈಯಾ ಪರವಾಗಿ ಪ್ರತಿಭಟನೆಯನ್ನು ಮಳಿಯಾಳಿಗಳು ಮಾಡಿದ್ದರು. ಭಾರತದ ರಾಷ್ಟ್ರಪತಿ ಯಾರೆಂದು ಗೊತ್ತಿರದೇ ಇರುವವರಿಗೆಲ್ಲ ಪ್ಯಾಲೆಸ್ತೇನ್ ಪರ ಕಣ್ಣೀರು ಸುರಿಸುತ್ತಿದ್ದರು, ಇಸ್ರೇಲ್‌ಗೆ ವಿರೋಧ ಮಾಡುತ್ತಿದ್ದರು.
‘ಆಲ್ ಐಯ್ಸ್ ಆನ್ ರಫ್ತು’ ಅಂತ ಸಿನಿಮಾಗಳಲ್ಲಿ ನಟಿಸುವ ಹಲವಾರು ಮಂದಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು (ಅದರ ಹಿಂದೆ ಏನು ಲಾಭ ಇತ್ತು ಅಂತ ಯಾರೂ ಹೇಳಿಲ್ಲ ಬಿಡಿ). ಆದರೆ, ಇಸ್ರೇಲ್ ಪ್ಯಾಲೆಸ್ತೀನ್ ಎಲ್ಲಿ ಬರುತ್ತೆ? ಪ್ಯಾಲೆಸ್ತೀನ್, ಹಮಾಸ್ ಎಂದರೇನು? ಈಗ ಇಸ್ರೇಲ್ ಯಾಕೆ ಪ್ಯಾಲೆಸ್ತೀನ್ ಮೇಲೆ ತಿರಗಿ ಬಿದ್ದಿದೇ?ಇಸ್ರೇಲ್ ಯಾಕೆ ಪ್ಯಾಲೆಸ್ತೀನ್‌ನ ೪೦ ಸಾವಿರಕ್ಕೂ ಅಧಿಕ ಜನರನ್ನು ಕೊಂದಿದೆ? ಹಮಾಸ್ ಏಕೆ ಇಸ್ರೇಲ್ ಅನ್ನು ವಿರೋಧಿಸುತ್ತದೆ? ಇರಾನ್ ಏಕೆ ಇಸ್ರೇಲ್‌ನ ಮೂಲೋತ್ಪಾಟನೆ ಮಾಡಬೇಕೆಂದು ಕಾಯುತ್ತಿದೆ? ಪ್ರಪಂಚದ ಹಲವು ರಾಷ್ಟ್ರಗಳ ವಿರೋಧವನ್ನು ಕಟ್ಟಿಕೊಂಡು ಇಸ್ರೇಲ್ ಏಕೆ ಹಮಾಸ್, ಹಿಜಬುಲ್ಲಾದ ವಿರುದ್ಧ ಹೋರಾಟ ಮಾಡುತ್ತಿದೆ? ಅದು ಯಾಕೆ ಸುಮ್ಮ ಸುಮ್ಮನೇ ಪ್ಯಾಲೆಸ್ತೀನ್‌ರನ್ನು ಕೊಲ್ಲುತ್ತಿದೆ? ಯಹೂದಿಗಳು ಯಾರು? ಎಲ್ಲೋ ಸಾವಿರಾರು ಕಿ.ಮೀ. ದೂರದಲ್ಲಿರುವ ದೇಶದಲ್ಲಿ ಆಂತರಿಕ ಭದ್ರತೆಗಾಗಿ ದಾಳಿ ನಡೆಸುತ್ತಾ ಇದ್ದರೆ ನಮ್ಮವರಿಗೇನು ತೊಂದರೆ? ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ, ಇಸ್ರೇಲ್ ಒಂದು ಕ್ಯಾನ್ಸರ್ ಗಡ್ಡಿಯ ಥರ ಅದನ್ನು ಇಡೀ ಪ್ರಪಂಚದಿಂಲೇ ತೆಗೆದು ಹಾಕಬೇಕು ಅಂತ ಹೇಳಿದ್ದೇಕೆ? ಆಲ್ ಐಯ್ಸ್ ಆರ್ ಆನ್ ರಫ್ತು ಅಂತ ಸ್ಟೇಟಸ್ ಹಾಕುತ್ತಿದ್ದರಲ್ಲ,
ಅದರಲ್ಲಿ ರಫ್ತು ಅಂದರೇನು? ಇಡೀ ೫೭ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಇಸ್ರೇಲ್ ಅನ್ನು ಯಾಕೆ ದ್ವೇಷಿಸುತ್ತದೆ? ಇಷ್ಟೆಲ್ಲ ನಡೆಯುತ್ತಿದ್ದರು ವಿಶ್ವಸಂಸ್ಥೆ ಯಾಕೆ ಸುಮ್ಮನಿದೆ? ಅನ್ನುವ ಸಣ್ಣಪುಟ್ಟ ಪ್ರಶ್ನೆಗಳನ್ನೇನಾದರೂ ಕೇಳಿದರೆ ಅಬ್ಬೆಬ್ಬೆ ದಬ್ಬೆಬ್ಬೆ ಎನ್ನುವ ಉತ್ತರ ಬಿಟ್ಟರೆ ಮತ್ತಿನ್ನೇನು ಬರೋದಿಲ್ಲ ಬಿಡಿ! ಪ್ಯಾಲೇಸ್ತೇನಿ ನಾಯಕರು, ಇಸ್ರೇಲ್ ಅಕ್ರಮವಾಗಿ ಪ್ಯಾಲೇಸ್ತೇನ್ ಅನ್ನು ವಶ ಪಡಿಸಿಕೊಳ್ಳುತ್ತಿದ್ದಾರೆ, ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೆ. ಈ ಎಲ್ಲ ಆಧ್ವಾನಕ್ಕೂ ಅರಬ್ಬರು ಕಾರಣ, ಸರಿ ಆಗಿನ ಕಾಲದಲ್ಲಿ ರಾಜಾಳ್ವಿಕೆ ಇತ್ತು. ಏನೂ ಮಾಡಲು ಬರುತ್ತಿರಲಿಲ್ಲ. ಆದರೆ, ಈಗ ಇಸ್ರೇಲ್ ಒಂದು ದೇಶವಾಗಿದೆ, ಆದರೂ ಅಲ್ಲಿ ಶಾಂತಿ ನೆಲೆಯೂರಲು ಬಿಡುತ್ತಿಲ್ಲ.
ಸ್ವಲ್ಪ ಇತಿಹಾಸವನ್ನು ತೆಗೆದರೆ, ಮೊದಲನೇಯದ್ದಾಗಿ ಪ್ಯಾಲೆಸ್ತೀನ್ ಯಹೂದಿಗಳ ದೇಶ. ಇಡೀ ಯಹೂದಿ ಸಮೂಹ ತನ್ನ ಪಾಡಿಗೆ ತಾನಿದ್ದ ಸಮಯ. ಅವರ ಮೇಲೆ ಬೇರೆ ಬೇರೆ ರಾಜರ ದಾಳಿಯಾಗಿ, ಯುದ್ಧಗಳಾಗಿ ಯಹೂದಿಗಳು ರೋಮನ್ನರಿಗೆ ಸೋಲುತ್ತಾರೆ. ಆಗ ಯಹೂದಿಗಳು ರೋಮನ್ನರು ಮಾಡುತ್ತಿದ್ದ ಹಲವು ಅನ್ಯಾಯದ ವಿರುದ್ಧ ಯಹೂದಿಗಳು ರೊಚ್ಚಿಗೇಳುತ್ತಾರೆ, ದಂಗೆ ಏಳುತ್ತಾರೆ. ಆದರೆ, ರೋಮನ್ನರು ಆ ದಂಗೆಯ ಪ್ರತೀಕಾರವಾಗಿ ಇಡೀ ಪ್ಯಾಲೆಸ್ತೀನ್‌ನ ಅಭಿವೃದ್ಧಿಯನ್ನೇ ಮೂಲೆಗೆ ತಳ್ಳುತ್ತಾರೆ. ಅದಾದ ಮೇಲೆ ಪ್ಯಾಲೆಸ್ತೀನ್ ಅನ್ನು ಆಕ್ರಮಿಸಿ ಕೊಂಡ
ಅರಬ್ಬರೂ ಜೆರುಸಲೇಮ್ ಮತ್ತು ಪ್ಯಾಲೆಸ್ತೀನ್‌ಗೆ ಅಭಿವೃದ್ಧಿಯನ್ನುವುದನ್ನೇ ಮರೆಸಿಬಿಟ್ಟರು. ಯಹೂದಿಗಳ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದರು. ಎಷ್ಟು ಜನರನ್ನು
ಕೊಂದರೋ, ರಾತ್ರೋ ರಾತ್ರಿ ದೇಶ ಬಿಟ್ಟು ಓಡಿಸಿದರೋ? ಅದಕ್ಯಾವುದೂ ಲೆಕ್ಕವೇ ಇಲ್ಲ. ಅವರ ದೇಶದಿಂದಲೇ ಅವರನ್ನು ಓಡಿಸಿದರು.
ಅದಾದ ಮೇಲೆ ನೆಲೆಕಾಣದ ಯಹೂದಿಗಳು, ವಿಶ್ವದ ಹಲವೆಡೆ ಚದುರಿಹೋದರೂ ಅವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಪ್ರಮಾಣ ಕಡಿಮೆಯೇ ಆಗಲಿಲ್ಲ. ಯಾವ ದೇಶಕ್ಕೆ ಹೋದರೂ ಅವರ ಮೇಲೆ ಅತ್ಯಾಚಾರ, ಹತ್ಯಾಕಾಂಡ ನಡೆಯುತ್ತಲೇ ಇತ್ತು. ಅವರನ್ನು ಓಡಿಸುತ್ತಲೇ ಇದ್ದರು. ರಷ್ಯಾದಲ್ಲಿ ಹತ್ಯಾಕಾಂಡ ನಡೆಸಿ ಯಹೂದಿಗಳನ್ನು ಹೊರಅಟ್ಟಲು ಶುರು ಮಾಡಿದರು, ಅದಾದ ಮೇಲೆ ಅವರಿಗೆ ತಮ್ಮದೇ ಒಂದು ಸ್ವಂತ ದೇಶಕ್ಕಾಗಿ ಅವರು ಹೋರಾಟ ಮಾಡಲೇ ಬೇಕಾಗಿತ್ತು. ಹೊಸ ದೇಶಕ್ಕಾಗಿ ಬ್ರಿಟನ್‌ನ ಬಳಿ ಅವಲತ್ತುಕೊಂಡಾಗ ಅವರು ಸುಮ್ಮನೇ ದಿನಗಳನ್ನು ಮುಂದೆ ಹಾಕುತ್ತಿದ್ದರು. ಎಲ್ಲವೂ ಹೀಗೇ ನಡೆಯುತ್ತಿದ್ದಾಗ ಎರಡನೇ ಮಹಾಯುದ್ಧದ ಸಮಯದಲ್ಲಿ ಯುರೋಪು ಹಾಗೂ ಜರ್ಮನಿಯ ಹಿಟ್ಲರ್‌ನ ನಾಜಿಗಳು ೬೦ ಲಕ್ಷ ಯಹೂದಿಗಳನ್ನು ಹುಡುಕಿ ಹುಡುಕಿಕೊಂದರು!
ಅದು ಯಹೂದಿಗಳ ಜನಸಂಖ್ಯೆಯ ಮೂರರಲ್ಲಿ ಒಂದಂಶ! ಹಾಗೇ ೧೯೨೦ ರ ಸಮಯದಲ್ಲೇ ದೊಡ್ಡ ಸಂಖ್ಯೆಯ ಯಹೂದಿಗಳು ಪ್ಯಾಲೆಸ್ತೀನ್‌ನಲ್ಲಿ ಜಾಗ ಖರೀದಿಸಿ ಉಳಿಯಲು ಶುರು ಮಾಡಿದ್ದರು. ಅದರ ಜತೆಗೆ ೧೯೪೦ರ ಆಸುಪಾಸಿನಲ್ಲಿ ಹಲವಾರು ಶ್ರೀಮಂತ ಯಹೂದಿಗಳು ತಮ್ಮ ಮೂಲಸ್ಥಾನ ಪ್ಯಾಲೇಸ್ತೇನ್‌ನಲ್ಲಿ ದೊಡ್ಡ ಪ್ರಮಾಣದ ಜಾಗವನ್ನು ಖರೀದಿಸಿಕೊಂಡು, ಯಹೂದಿಗಳು ತಮ್ಮ ಮೂಲಸ್ಥಾನ ಪ್ಯಾಲೆಸ್ತೀನ್‌ಗೆ ಹೋಗಬೇಕಾಯಿತು.
ಪ್ರಪಂಚದಲ್ಲೇ ಅತೀ ಶಾಣ್ಯಾ ಸನ್ನಿಸಿಕೊಂಡಿದ್ದ ಯಹೂದಿ ಗಳನ್ನು ಅರಬ್ಬರು ಸ್ವಾಗತಿಸಿ ಬೇಕಾಗಿತ್ತು. ಏಕೆಂದರೆ, ದೊಡ್ ದೊಡ್ಡ ಶ್ರೀಮಂತರು, ವಿಜ್ಞಾನಿಗಳು ಎಲ್ಲದಕ್ಕಿಂತ ಹೆಚ್ಚಾಗಿ ಪ್ರಪಂಚದಲ್ಲೇ ಅತೀ ಹೆಚ್ಚು ನೊಬೆಲ್ ಪಡೆದವರೂ ಯಹೂದಿಗಳೇ. ಅವರನ್ನೇನಾದರು ಸ್ವಾಗತಿಸಿ ಅವರಿಗೆ ಒಳ್ಳೆಯ ನೆಲೆಯನ್ನು ಕಲ್ಪಸಿದ್ದರೆ, ಅದು ಅರಬ್ಬರು ಮತ್ತು ಇಡೀ ಮಧ್ಯಪ್ರಾಚ್ಯಕ್ಕೆ
ಲಾಭವಾಗುತ್ತಿತ್ತು. ಆದರೆ, ಅರಬ್ಬರು ಯಹೂದಿಗಳ ಯುದ್ಧ ಸಾರಿದರು, ಆ ಯುದ್ಧ ಹಲವಾರು ವರ್ಷಗಳ ವರೆಗೂ ನಡೆದು, ಹಲವಾರು ದೇಶಗಳು ಯಹೂದಿಗಳನ್ನು ಬೆಂಬಲಿಸಿದಾಗ,
ಯುದ್ಧ ಇನ್ನೂ ನಿಲ್ಲಲ್ಲವೇನೋ ಎಂದುಕೊಂಡಾಗ, ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ, ಅದಕ್ಕಾಗಿಯೇ ವಿಶೇಷ ಸಮಿತಿ ರಚಿಸಿ, ೧೯೪೭ರ ನವೆಂಬರ್ ೨೭ ರಲ್ಲಿ ಯಹೂದಿ ಮತ್ತು ಅರಬ್ಬರ ನಡುವೆ ಪ್ಯಾಲೇಸ್ತೇನ್ ಅನ್ನು ಇಬ್ಭಾಗ ಮಾಡುವ ನಿರ್ಧಾರಕ್ಕೆ ಬಂತು. ಇಸ್ರೇಲಿಗರು ಈ ನಿರ್ಧಾರವನ್ನು ಸ್ವಾಗತಿಸಿದರು. ಅರಬ್ಬರು ತಿರಸ್ಕರಿಸಿದರು.
೧೯೪೮ ರಮೇ ೧೪ಕ್ಕೆ ಯಹೂದಿಗಳು ಸ್ವತಂತ್ರ ಇಸ್ರೇಲ್ ರಾಷ್ಟ್ರವನ್ನೂ ಘೋಷಣೆ ಮಾಡಿದರು. ಆಗ ಅರಬ್ಬರ ಸೇನೆ ಇಸ್ರೇಲ್ ಅನ್ನು ನಾಶ ಮಾಡುವ ಪಣ ತೊಟ್ಟಿತು. ಆಗ ಅವರು
ಅಲ್ಲಿನ ಅರಬ್ ನಾಗರೀಕರನ್ನು ಕೆಲ ಸಮಯದ ಮಟ್ಟಿಗೆ ಆ ಸ್ಥಳವನ್ನು ಖಾಲಿ ಮಾಡಲು ಸೂಚನೆ ಕೊಟ್ಟು, ಯಹೂದಿಗಳನ್ನು ಸಮುದ್ರಕ್ಕೆ ತಳ್ಳಿ, ಅದರಿಂದ ಲೂಟಿಯಾದ ಸಂಪತ್ತಲ್ಲಿ ಕೆಲ ಭಾಗವನ್ನು ಕೊಡುವ ಮಾತನ್ನೂ ಆಡಿತ್ತು. ಮುಸಲ್ಮಾನರು ಆಳಿದ ಎಲ್ಲ ಕಡೆಗಳಲ್ಲಿ ಮಾಡಿದ ಇಠ್ಠ್ಟಿZ ಇಛಿZoಜ್ಞಿಜ ಅನ್ನು ಮಾಡಿದ ರೀತಿಯಲ್ಲೇ ಇಲ್ಲಿಯೂ ಮಾಡುವುದು ಅದರ ಗುರಿ.
ಆಗಿಂದ ಶುರುವಾದ ಯುದ್ಧ ಇನ್ನೂ ನಿಂತಿಲ್ಲ, ಆಗಾಗ ಶಾಂತಿ ಮಾತುಕತೆ ನಡೆದರೂ ಶಾಂತಿ ನೆಲೆಸಿಲ್ಲ!
ಅದಕ್ಕೆ ಇಸ್ರೇಲ್‌ನ ಜನ ನಡು ರೋಡಿನಲ್ಲೇ ಗನ್‌ಗಳನ್ನು ಹಿಡಿಕೊಂಡು ಓಡಾಡುತ್ತಿರುತ್ತಾರೆ. ಇಸ್ರೇಲಿಗರು ಬಂದಮೇಲೆನೇ ಪ್ಯಾಲೇಸ್ತೀನ್‌ನ ಹಲವರಿಗೆ ಕೆಲಸ ಸಿಕ್ಕಿದೆ. ಆದರೂ, ಹಮಾಸ್, ಹಿಜ್ಬುಲ್ಲಾ ಇನ್ನೂ ಹಲವಾರು ಸಣ್ಣ ಪುಟ್ಟ ಭಯೋತ್ಪಾದಕ ಸಂಘಟನೆಯ ಮಾತುಗಳಿಗೆ ಮರುಳಾಗಿ ಪ್ಯಾಲೆಸ್ತೀನ್‌ನವರು ಇಸ್ರೇಲ್ ವಿರುದ್ಧ ಯಾವಾಗಲೂ ಕತ್ತಿ ಮಸಿಯುತ್ತಿರುತ್ತಾರೆ. ಈ ಎಲ್ಲ ಭಯೋತ್ಪಾದಕ ಸಂಘಟನೆಗಳಿಗೆ ನಾಯಕನಂತೆ ಇರಾನ್ ಸಹ ಬೆಂಬಲಕ್ಕೆ ನಿಂತಿದೆ. ಏಕೆಂದರೆ, ಇಸ್ರೇಲ್‌ನ ವಿರುದ್ಧ ನಿಲ್ಲುವಷ್ಟು ಶಕ್ತಿ ಇರಾನ್‌ಗೆ ಇಲ್ಲವೇ ಇಲ್ಲ. ಇಸ್ರೇಲ್‌ನಲ್ಲಿ ಪ್ರಪಂಚದ ಅತ್ಯಾಧುನಿಕ ಶಸಾಸಗಳ ಆಗರವೇ ಇದೆ, ಆದರೆ, ಇರಾನ್‌ನ ಬಳಿ? ಜಿಹಾದ್, ಉಗ್ರರಿಗೆ ಬೆಂಬಲ, ಆಗಾಗ ಕೆಂಪು ಧ್ವಜ ಹಾರಿಸುವುದು ಬಿಟ್ಟರೇ ಏನೂ ಇಲ್ಲ. ಇನ್ನೂ ಕಳೆದ ವರ್ಷ ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ಒಮ್ಮೇಲೆ ದಾಳಿ ೧೨೦೦ ಜನರನು ಕೊಂದು ಹಲವಾರು ಜನರನ್ನು ಒತ್ತೆಯಾಳಾಗಿ ಉಳಿಸಿಕೊಂಡಿರುವ ಹಮಾಸ್‌ಗೆ ಪ್ಯಾಲೆಸ್ತೀನ್‌ನ ಅಭಿವೃದ್ಧಿ ಮಾಡುವುದರ ಬಗ್ಗೆ ಕೊಂಚಿತ್ತೂ ಯೋಚನೆ ಇಲ್ಲವೇ ಇಲ್ಲ!
ಹಾಗಿದ್ದರೆ, ಪ್ಯಾಲೆಸ್ತೀನ್‌ನವರು ಒಂದು ಊಟಕ್ಕೂ ಗತಿ ಇಲ್ಲದವರ ರೀತಿಯಲ್ಲಿ ಬುದುಕು ಕಟ್ಟಿಕೊಳ್ಳಲಾಗುತ್ತಿರಲಿಲ್ಲ. ಇನ್ನೂ ಯಾವ ಹಮಾಸ್ ನಾಯಕನಿಗೂ ಪ್ಯಾಲೆಸ್ತೀನ್‌ನ ಪರಿಸ್ಥಿತಿ
ಸುಧಾರಿಸಬೇಕೆನ್ನುವ ಮನಸ್ಥಿತಿಯೂ ಇಲ್ಲ, ಅದೇನಾದರೂ ಇತ್ತೆಂದರೆ, ಅಮೆರಿಕ ಮತ್ತಿತರ ದೇಶಗಳು ಶಾಂತಿ ಒಪ್ಪಂದ ಮಾಡಿಸುತ್ತಿರುವುದನ್ನು ಒಪ್ಪುತ್ತಿದ್ದರು. ಆದರೆ, ಅಮೆರಿಕ
ಅಂಥೋನಿ ಬ್ಲಿಂಕೆನ್ ಬಂದು ಶಾಂತಿ ಒಪ್ಪಂದ ಮಾಡಿಸಿಯೇ ತೀರುತ್ತೇನೆ ಎಂದು ಇಸ್ರೇಲ್, ಕತಾರ್ ಮತ್ತು ಸುತ್ತಮುತ್ತಲಿನ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಶಾಂತಿ ಒಪ್ಪಂದಕ್ಕೆ
ಹಮಾಸ್ ನಾಯಕರು ಒಪ್ಪುತ್ತಿದ್ದಾರಾ? ಉಹೂ ಇಲ್ಲ, ಏಕೆ ಒಪ್ಪುತ್ತಾರೆ ಹೇಳಿ, ಪ್ರಪಂಚದೆಲ್ಲೆಡೆ ಸತ್ತವರ ಫೋಟೋ ತೋರಿಸಿ, ಅಲ್ಲಿನ ಜನರ ಬಡತನ ತೋರಿಸಿ, ವಿಶ್ವಸಂಸ್ಥೆ, ಬೇರೆ ದೇಶಗಳಿಂದ ಬಿಲಿಯನ್ ಡಾಲರ್‌ಗಟ್ಟಲೇ ಹಣವನ್ನು ದೋಚುತ್ತಿರುವವರಿಗೆ ಶಾಂತಿ ಒಪ್ಪಂದವಾಯಿತೆಂದರೆ, ಅವರ ಬುಸಿನೆಸ್ ಹೇಗೆ ತಾನೇ ನಡೆದೀತು? ಹಮಾಸ್‌ನ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತೋರಿಸಿ ಸಂಗ್ರಹ ಕೇಳುವಂತಹ ಜಾಹೀರಾತುಗಳು ನಿಮ್ಮ ಯುಟ್ಯೂಬ್ ಫೇಸ್‌ಬುಕ್‌ಗಳಲ್ಲಿ ಬಂದಿರಬಹುದು. ಅದಕ್ಕೆ ಕೆಲವರು ಒಂದಷ್ಟು ಹಣವನ್ನೂ ನೀಡಿರಬಹುದು. ಆದರೆ, ಇಲ್ಲಿ ನೀವು ಹಣ ನೀಡಿದ್ದು ಪ್ಯಾಲೆಸ್ತೀನ್‌ನ ಬಡವರಿಗಾಗಿ ಅಲ್ಲ!
ಬದಲಿಗೆ ಅವರ ನಾಯಕರಿಗಾಗಿ. ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಹಲವಾರು ದೇಶಗಳು ಪ್ಯಾಲೆಸ್ತೀನ್‌ಗಾಗಿ ಪ್ರತಿವರ್ಷ ಸಾವಿರಾರು ಕೋಟಿ ದೇಣಿಗೆಯನ್ನು ಕೊಡುತ್ತಲೇ ಬಂದಿದ್ದಾರೆ. ಇನ್ನೂ
ಶ್ರೀಮಂತ ಮುಸಲ್ಮಾನರೂ ಮಿಲಿಯನ್ ಡಾಲರ್‌ಗಟ್ಟಲೇ ಹಣವನ್ನು ಕೊಡುತ್ತಲೇ ಬಂದಿದ್ದಾರೆ. ಆದರೆ, ಆ ಹಣವೆಲ್ಲ ಪ್ಯಾಲೇಸ್ತೇನ್‌ನ ಉದ್ಧಾರಕ್ಕಾಗಿ ಹೋಗಿದೆ ಎಂದು ಅಂದುಕೊಂಡರೆ ಅದು
ಅವರ ದೊಡ್ಡ ಭ್ರಮೆ. ಅದೆಲ್ಲ ಸೇರಿದ್ದು, ಪ್ರಪಂಚದ ಹಲವಾರು ದೇಶಗಳಲ್ಲಿ ಬ್ಯಾಂಕ್ ಅಕೌಂಟ್ ಹೊಂದಿದ್ದಂತಹ ಹಮಾಸ್ ನಾಯಕರ ಅಕೌಂಟ್‌ಗೆ. ಇಲ್ಲಿ ಕೆಲವೇ ಕೆಲವು ಉದಾಹರಣೆಗಳನ್ನು ನೋಡಿ, ಇರಾನ್‌ನಲ್ಲಿ, ಇಸ್ರೇಲ್ ದಾಳಿಯಿಂದ ಸತ್ತ ಇಸ್ಮೈಲ್ ಹನೈಯ್ಯಾ ಆಸ್ತಿ ೪.೫ ಬಿಲಿಯನ್ ಡಾಲರ್!
ಮತ್ತೊಬ್ಬ ಹಮಾಸ್‌ನ ನಾಯಕ ಅಬು ಮಾರ್ಜುಕ್ ಅವನು ಹಮಾಸ್‌ನ ಅಂತಾರಾಷ್ಟ್ರೀಯ ವಿಚಾರದ ಹಾಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಅವನ ಒಟ್ಟು ಆಸ್ತಿ ೩ ಬಿಲಿಯನ್ ಡಾಲರ್. ಮತ್ತೊಬ್ಬ ನಾಯಕ ಖಲೇದ್ ಮಾಶಾಲ್‌ದ್ದು ೪ ಬಿಲಿಯನ್ ಡಾಲರ್, ನಾಯಕರದ್ದೆಲ್ಲ ಇಷ್ಟೊಂದು ಆಸ್ತಿಯಿದ್ದರೆ, ಹಮಾಸ್‌ನ ಪ್ರತಿ ವರ್ಷದ ವಹಿವಾಟು ಬರೀ ಒಂದೇ ಬಿಲಿಯನ್ ಡಾಲರ್!
ಅಲ್ಲಾ ಸ್ವಾಮಿ, ಪ್ಯಾಲೆಸ್ತೀನ್‌ನ ಜನರು ಈ ನಾಯಕರ ಮಾತು ಕೇಳಿ ರಕ್ತಸುರಿಸಿ ಸಾಯುತ್ತಿದ್ದರೆ, ಈ ನಾಯಕರ ಡಜನ್‌ಗಟ್ಟಲೇ ಮಕ್ಕಳು ಇರಾನ್, ದುಬೈ, ಈಜಿಪ್ಟ್‌ನಂತಹ ದೇಶಗಳಲ್ಲಿ ಮಜಾ ಮಾಡುತ್ತಾ ಸುತ್ತಾಡುತ್ತಿದ್ದಾರೆ. ಆದರೆ, ಅಲ್ಲಿನ ನಿರ್ಗತಿಕರು, ಬಡವರು, ದಿಕ್ಕುದೆಶೆ ಇಲ್ಲದವರು ಮಾತ್ರ ಧರ್ಮ, ಜಿಹಾದ್ ಹೆಸರಲ್ಲಿ ಇಸ್ರೇಲ್‌ನ ಮೇಲೆ ಸುಖಾಸುಮ್ಮನೆ ದಾಳಿ ಮಾಡಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆಕಡೆ ಯುದ್ಧ ಸಹ ನಿಲ್ಲುತ್ತಿಲ್ಲ. ಹಮಾಸ್ ಅನ್ನು ನಂಬಿಕೊಂಡು ಬದುಕಿದ್ದಂತಹ ಜನದಲ್ಲಿ ಇಲ್ಲಿಯವರೆಗೆ ೪೦ ಸಾವಿರಕ್ಕೂ ಹೆಚ್ಚುಜನ ೧೦ ತಿಂಗಳಲ್ಲಿ ಮಡಿದ್ದಾರೆ. ಇನ್ನೂ ಎಷ್ಟು ಜೀವಗಳ ಮೇಲೆ ಈ ಯುದ್ಧ ನಿರ್ಧರಿತವಾಗುತ್ತದೋ ಯಾರಿಗೂ ಗೊತ್ತಿಲ್ಲ! ಅಷ್ಟಕ್ಕೂ ಅಳಿದುಳಿದವರು ಬದುಕಬೇಕೆಂದರೆ, ಶಾಂತಿ ಒಪ್ಪಂದ ಮಾಡಿಕೊಳ್ಳಲೇ ಬೇಕು!
ನಾವೆಲ್ಲ ಇಸ್ರೇಲ್‌ನ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಇಡೀ ಪ್ರಪಂಚವನ್ನು ಬುರ್ಖಾದಡಿಯಲ್ಲಿ ಮುಚ್ಚಿಡಲು ಯೋಚಿಸುತ್ತಿರುವ, ಜಿಹಾದ್ ಮಾಡಲೇ ಬೇಕೆಂದರು ಪಣತೊಟ್ಟಿರುವ, ಇಡೀ ಪ್ರಂಪಚಕ್ಕೆ ಶರಿಯಾ ಕಾನೂನನ್ನು ಹೇರಲು ಹೋರಾಡುತ್ತಿರುವ ಮಾನಸಿಕತೆಯ ಬಗ್ಗೆ ತಿಳಿದೇ ತಿಳಿಯುತ್ತದೆ. ಭಾರತದ ಪರಿಸ್ಥಿತಿ ಇಸ್ರೇಲ್ ಪರಿಸ್ಥಿತಿಗಿಂತ
ತುಂಬಾ ಬೇರೆಯೇನೂ ಇಲ್ಲ. ಸುತ್ತಲೂ ಭಾರತವನ್ನು ಬುಡಮೇಲು ಮಾಡಬೇಕೆಂದು ಕಾಯುತ್ತಿರುವ ದೇಶಗಳು. ಅದಕ್ಕಿಂತ ಜಾಸ್ತಿ ಭಾರತದಲ್ಲೇ ಇರುವಂತವರು ಚೀನಾ ಮತ್ತಿತರ
ದೇಶಗಳ ಜೊತೆ ಕೈಜೋಡಿಸಿ ಭಾರತವನ್ನು ಸರ್ವನಾಶ ಮಾಡಲು ಸೆಣಸುತ್ತಿದ್ದಾರೆ. ಬೇರೆ ದೇಶದವರಿಗೆ ಭಾರತಕ್ಕೆ ಬಂದು ಪ್ರಜಾತಂತ್ರ ಪುನರ್ ಸ್ಥಾಪಿಸಿ ಎಂದು ಅಂಗಲಾಚುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ಆದ ಗತಿಯೇ ಭಾರತಕ್ಕಾಗಲಿ ಎಂದು ಬಾಯಿಬಿಟ್ಟುಕೊಂಡು ಕಾಯುತ್ತಿದ್ದಾರೆ.
ಹೇಗಾದರೂ ಮಾಡಿ ದೇಶವನ್ನು ಹಾಳು ಮಾಡಬೇಕೆಂದೇ ದೊಡ್ಡ ದೊಡ್ಡ ಸಂಚು ನಡೆಸುತ್ತಿದ್ದಾರೆ. ಆದರೆ, ಅವರು ಯಾರೂ ಭಯೋತ್ಪಾದಕರಲ್ಲ, ರಾಜಕಾರಣಿ, ಬುದ್ಧಿಜೀವಿಗಳ ಹೆಸರಿನಲ್ಲಿರುವ ಭಯೋತ್ಪಾದಕರು! ಏನಾದರೂ ಇರಲಿ, ತನ್ನ ದೇಶದ ಶಾಂತಿಗಾಗಿ, ನಾಗರೀಕರ ರಕ್ಷಣೆಗಾಗಿ ಎಂತಹ ಹೆಜ್ಜೆಯನ್ನಾದರೂ ಇಡುತ್ತೇನೆ. ಏನು ಬೇಕಾದರೂ ಮಾಡಿ ತೀರುತ್ತೇನೆ ಎಂದು ಪಣ ತೊಟ್ಟಿರುವ ಇಸ್ರೇಲ್‌ಗೆ ಒಂದು ಹ್ಯಾಟ್ಸ್ ಆಫ್!