ವೈದ್ಯ ವೈವಿಧ್ಯ
drhsmohan@gmail.com
ಪ್ಲೇಗ್ ಕಾಯಿಲೆ ಯುರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶವನ್ನು ೧೪-೧೭ ಶತಮಾನಗಳಲ್ಲಿ ಪುನಃ ಪುನಃ ಕಾಡಿತು. ಬಿರಾಬೆನ್ ಎಂಬ ತಜ್ಞರ ಪ್ರಕಾರ ೧೩೪೬-೧೬೭೧ರ ಮಧ್ಯೆ ಈ ಕಾಯಿಲೆ ಯುರೋಪಿನಲ್ಲಿ ಪ್ರತಿ ವರ್ಷವೂ ತನ್ನ ಪ್ರತಾಪ ಮೆರೆಯಿತು.
ಪ್ಲೇಗ್. ಈ ಭೀಕರ ಕಾಯಿಲೆಯ ಹೆಸರನ್ನು ಕೆಲವರು ಕೇಳಿರಲಿಕ್ಕಿಲ್ಲ. ಪ್ರತಿವರ್ಷ ಸುಮಾರು ೬೦೦ ಜನರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ೨೦೧೭- ೨೦೧೯ರಲ್ಲಿ ಪ್ಲೇಗ್ ಹೆಚ್ಚು ಕಂಡುಬಂದ ದೇಶಗಳೆಂದರೆ, ಆಫ್ರಿಕಾದ ಕಾಂಗೋದ ಡೆಮಾ ಕ್ರೆಟಿಕ್ ರಿಪಬ್ಲಿಕ್, ಮಡಗಾಸ್ಕರ್ ಮತ್ತು ದಕ್ಷಿಣ ಅಮೆರಿಕದ ಪೆರು. ಈ ಪ್ಲೇಗ್ ಇತಿಹಾಸ ವನ್ನು ತೆಗೆದುಕೊಂಡಾಗ, ಇದು ಮುಖ್ಯವಾಗಿ ಮೂರು ಬಾರಿ ದೊಡ್ಡ ಸಾಂಕ್ರಾಮಿಕದ ರೀತಿ ಕಂಡುಬಂದಿದ್ದು ಅರಿವಾಗುತ್ತದೆ.
ಮೊದಲ ಪ್ಲೇಗ್ ಸಾಂಕ್ರಾಮಿಕವು ಕ್ರಿ.ಶ. ೫೪೧-೭೩೧ರ ಅವಽಯಲ್ಲಿ ಈಜಿಪ್ಟ್‌ನಲ್ಲಿ ಆರಂಭಗೊಂಡು ಮೆಡಿಟರೇನಿಯನ್ ಮತ್ತು ಯುರೋಪಿನ ವಾಯವ್ಯ ಭಾಗಕ್ಕೆ ಹರಡಿತು. ಎರಡನೇ ಪ್ಲೇಗ್ ಸಾಂಕ್ರಾಮಿಕವು ೧೩೩೧-೧೮೫೫ರ ಅವಧಿಯಲ್ಲಿ ಏಷ್ಯಾದ ಮಧ್ಯಭಾಗದಿಂದ ಮೆಡಿಟರೇನಿಯನ್ ಮತ್ತು ಯುರೋಪ್, ನಂತರ ಚೀನಾಕ್ಕೆ ಹರಡಿತು. ಮೂರನೇ ಪ್ಲೇಗ್ ಸಾಂಕ್ರಾಮಿಕವು ೧೮೫೫ -೧೯೬೦ರ ಅವಧಿಯಲ್ಲಿ ಚೀನಾದಲ್ಲಿ ಆರಂಭಗೊಂಡು ಜಗತ್ತಿನ ಹಲವೆಡೆ ಹರಡಿತು. ಮುಖ್ಯವಾಗಿ ಭಾರತ ಮತ್ತು ಅಮೆರಿಕದ ಪಶ್ಚಿಮ ಕರಾವಳಿಗೆ ಹೆಚ್ಚಾಗಿ ಹರಡಿತು.
ಇವಷ್ಟೇ ಅಲ್ಲದೆ ‘ಮಧ್ಯಯುಗದ ಕಪ್ಪು ಮರಣ’ ಎಂಬ ಪ್ರತ್ಯೇಕ ಸಾಂಕ್ರಾಮಿಕ ೧೩೩೧- ೧೩೫೩ರಲ್ಲಿ ಕಂಡುಬಂದಿತು. ಇದನ್ನು ಎರಡನೆಯ ಸಾಂಕ್ರಾಮಿಕದ ಮೊದಲ ಭಾಗ ಎಂದು ಗ್ರಹಿಸಲಾಗುತ್ತದೆ. ‘ಪ್ಲೇಗ್’ ಎಂಬ ಶಬ್ದವು ಲ್ಯಾಟಿನ್ ಭಾಷೆಯ ಪ್ಲೇಗಾ (ಗಾಯ ಮಾಡು) ಶಬ್ದ ಮೂಲದಿಂದ ಬಂದಿದೆ. ನವಶಿಲಾ ಯುಗದ ಪತನಕ್ಕೆ ಈ ಪ್ಲೇಗ್ ಕಾಯಿಲೆಯೇ ಕಾರಣ ಎಂದು ಹಲವು ತಜ್ಞರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪೂರಕವಾಗಿ ಸ್ವೀಡನ್‌ನಲ್ಲಿ ೭೯ ಶವಗಳನ್ನು ಹೂತಿರುವ ಸಮಾಧಿ ಪತ್ತೆ ಯಾಗಿದೆ. ಇದರಲ್ಲಿ ಪ್ಲೇಗ್‌ಗೆ ಕಾರಣ ವಾಗುವ ಸೂಕ್ಷ್ಮಜೀವಿ ಯೆರ್ಸೀನಿಯಾ ಪೆಸ್ಟಿಸ್ ಇರುವುದು ಕಂಡುಬಂದಿದೆ. ಈ ಯೆರ್ಸೀನಿಯಾ ಪೆಸ್ಟಿಸ್‌ನ ಪ್ಲಾಸ್ಮಿಡ್ ಗಳು ಪುರಾತನ ಕಂಚಿನ ಯುಗದ (೫೦೦೦ ವರ್ಷದ ಮೊದಲು ಅಂದರೆ ಕ್ರಿ.ಪೂ. ೩೦೦೦) ೭ ವ್ಯಕ್ತಿಗಳಲ್ಲಿ ಕಂಡುಬಂದಿದೆ. ಇವರು ಸೈಬೀರಿಯಾದ ಅ-ನಾಸಿಯೋ ಸಂಸ್ಕೃತಿ, ಎಸ್ಟೋನಿಯಾದ ಕಾರ್ಡೆಡ್ ವೇರ್ ಸಂಸ್ಕೃತಿ, ರಷ್ಯಾದ ಸಿಂಟಸ್ಥ ಸಂಸ್ಕೃತಿ, ಪೋಲಂಡ್‌ನ ಯುನೆಟಿಸ್ ಸಂಸ್ಕೃತಿ ಹಾಗೂ ಸೈಬೀರಿಯಾದ ಆಂಡ್ರೋನೋವೋ ಸಂಸ್ಕೃತಿಗಳಿಗೆ ಸೇರಿದವರು.
ಪುರಾತನ ಕಂಚಿನ ಯುಗದ ಸಂದರ್ಭದಲ್ಲಿ ಯುರೋಪ್ ಮತ್ತು ಏಷ್ಯಾ ಖಂಡಗಳಲ್ಲಿ ಯೆರ್ಸೀನಿಯಾ ಪೆಸ್ಟಿಸ್‌ನ ಅವಶೇಷಗಳು ಕಂಡುಬಂದಿವೆ. ಈ ಯೆರ್ಸೀ ನಿಯಾ ಪೆಸ್ಟಿಸ್ ಮೊದಲ ಬಾರಿ ಕಂಡುಬಂದುದು ೫೭೮೩ ವರ್ಷಗಳ ಹಿಂದೆ ಎಂದು ಹೇಳಲಾಗಿದೆ. ಈ ಬ್ಯಾಕ್ಟೀರಿಯಾದಲ್ಲಿರುವ ಮ್ಯೂರಿನ್ ಎಂಬ ವಿಷವು ಚಿಗಟಗಳಿಗೆ ಸೋಂಕು ರವಾನಿಸುತ್ತದೆ, ಅದು ನಂತರ ಬ್ಯುಬೋನಿಕ್ ಪ್ಲೇಗ್ ಅನ್ನು ಹರಡುತ್ತದೆ. ಕ್ರಿ.ಪೂ. ೪೩೦ರ ಪೆಲೋಪೊನ್ನೇಶಿಯನ್ ಯುದ್ಧದ ಎರಡನೇ ವರ್ಷದಲ್ಲಿ ಥುಸಿಡೈಡ್ಸ್ ಎಂಬಾತ ಇಥಿಯೋಪಿಯದಲ್ಲಿ ಆರಂಭವಾದ ಒಂದು ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ವಿವರಿಸಿದ್ದಾನೆ. ಅದು ನಂತರ ಈಜಿಪ್ಟ್, ಲಿಬಿಯಾ ಮಾರ್ಗವಾಗಿ ಗ್ರೀಕ್ ಜಗತ್ತಿಗೆ ಬಂದಿದೆ. ಆ ಸಂದರ್ಭದಲ್ಲಿ ಅಥೆನ್ಸ್‌ನ ಪ್ಲೇಗ್‌ನಲ್ಲಿ ಆ ನಗರದ ೧/೩ ಭಾಗದ ಜನರು ಮರಣ ಹೊಂದಿದರು. ಈ ಯುದ್ಧದಲ್ಲಿ ಬಹಳಷ್ಟು ಜನರ ನಾಶವಾಗಲು ಪ್ಲೇಗ್ ಕಾರಣ ಎಂಬುದನ್ನು ಆಧುನಿಕ ಇತಿಹಾಸ ತಜ್ಞರು ಒಪ್ಪುವುದಿಲ್ಲ.
ಬಹಳ ದೀರ್ಘಕಾಲದ ಈ ಸಾಂಕ್ರಾಮಿಕಕ್ಕೆ ಕಾರಣ ಪ್ಲೇಗ್ ಕಾಯಿಲೆಯೇ ಸರಿ ಎಂದು ಒಪ್ಪಿತವಾಗಿದ್ದರೂ ಈಗಿನ ತಜ್ಞರು ಟೈ-ಸ್, ಸಿಡುಬು ಅಥವಾ ದಢಾರ ಕಾಯಿಲೆ ಅಗಿರಬಹುದೆಂದು ಅಭಿಪ್ರಾಯ ಪಡುತ್ತಾರೆ. ಆ ಕಾಲದ ಹಲ್ಲಿನ ಡಿಎನ್‌ಎ ಅಧ್ಯಯನ ಮಾಡಿದಾಗ ಅದಕ್ಕೆ ಕಾರಣ ಟೈಫಾಯಿಡ್ ಕಾಯಿಲೆ ಎಂದು
ದೃಢವಾಯಿತು. ಕ್ರಿ.ಶ. ಮೊದಲ ಶತಮಾನದಲ್ಲಿ ಗ್ರೀಕ್ ಅನಾಟಮಿ ತಜ್ಞನಾದ ರ-ಸ್ ಆಫ್ ಎ-ಸಿಸ್ ಎಂಬಾತ ಲಿಬಿಯಾ, ಈಜಿಪ್ಟ್ ಮತ್ತು ಸಿರಿಯಾದಲ್ಲಿ
ಆಗ ಕಂಡುಬಂದ ಪ್ಲೇಗ್ ಬಗ್ಗೆ ಪ್ರಸ್ತಾಪ ಮಾಡುತ್ತಾನೆ.
ಆಗಿನ ಅಲೆಕ್ಸಾಂಡ್ರಿಯಾದ ವೈದ್ಯರುಗಳಾದ ಡಯೋಸ್ಕೋರೈಡ್ಸ್ ಮತ್ತು ಪೊಸಿಡೋನಿಯಸ್ ಇವರು ಒಮ್ಮೆಲೇ ಕಂಡುಬಂದ ಜ್ವರ, ನೋವು, ಭಾವೋನ್ಮಾದ ಈ ರೀತಿಯ ರೋಗಲಕ್ಷಣಗಳನ್ನು ವಿವರಿಸಿದ್ದಾರೆ. ಹಾಗೆಯೇ ಇಂಥವರಲ್ಲಿ ದೊಡ್ಡ ಗಡುಸಾದ ಗೆಡ್ಡೆಗಳು ಮೊಳಕಾಲ ಹಿಂದೆ, ಮುಂಗೈಭಾಗದಲ್ಲಿ ಹಾಗೂ
ಕಂಕುಳಲ್ಲಿ ಕಂಡುಬಂದವು. ಈ ಸಾಂಕ್ರಾಮಿಕದಲ್ಲಿ ಸೋಂಕಿತ ವ್ಯಕ್ತಿಗಳ ಮರಣದ ಸಂಖ್ಯೆ ತುಂಬಾ ಜಾಸ್ತಿ ಪ್ರಮಾಣದಲ್ಲಿ ಇತ್ತು. ಹಾಗೆಯೇ ಕ್ರಿ.ಪೂ. ಮೂರನೇ ಶತಮಾನದಲ್ಲಿದ್ದ ಅಲೆಕ್ಸಾಂಡ್ರಿಯದ ವೈದ್ಯನಾದ ಡಯೋನಿಸಿಯಸ್ ಕರ್ಟಿಸ್ ಕೂಡ ಈ ರೀತಿಯ ಗೆಡ್ಡೆಗಳ ಬಗ್ಗೆ ವರದಿ ಮಾಡಿದ್ದ ಎಂದು ರ-ಸ್ ಅವರು ಬರೆದಿದ್ದಾರೆ.
ಕ್ರಿ.ಶ. ಎರಡನೇ ಶತಮಾನದಲ್ಲಿ ೧೬೮-೧೬೯ರ ಹೊತ್ತಿಗೆ ಅಂಟೋನಿನ್ ಪ್ಲೇಗ್ ಕಂಡುಬಂದಿತು. ಇದು ರೋಮ್‌ನಲ್ಲಿ ಆರಂಭಗೊಂಡು ನಂತರ ಬೇರೆ ಕಡೆ ಹಬ್ಬಿತು. ಇದು ಬಹಳಷ್ಟು ಜನರ ಮರಣಕ್ಕೆ ಕಾರಣವಾಯಿತು. ಇದರಲ್ಲಿ ಸುಮಾರು ಶೇ. ೭-೧೦ ಜನರು ಮಡಿದರು ಎನ್ನಲಾಗಿದೆ. ೧೬೫-೧೬೮ರ ಒಟ್ಟೂ ಅವಧಿಯಲ್ಲಿ ೩.೫ರಿಂದ ೫ ಮಿಲಿಯನ್ ಜನರು ಮಡಿದರು ಎನ್ನಲಾಗಿದೆ. ಆ ಸಾಮ್ರಾಜ್ಯದ ಅರ್ಧಕ್ಕರ್ಧ ಜನರು ಮರಣಹೊಂದಿದರು ಎಂದು ಒಟ್ರೋಸೀಲ್ ಎಂಬ ಪುರಾತತ್ತ್ವ ಶಾಸಜ್ಞರು ಅಭಿಪ್ರಾಯ ಪಡುತ್ತಾರೆ.
ಜೆ.ಎಫ್. ಗಿಲಿಯಮ್ ಎಂಬ ಮತ್ತೊಬ್ಬ ತಜ್ಞರು ಈ ಆಂಟೋನಿನ್ ಪ್ಲೇಗ್ ಆ ಕಾಲದ ಯಾವುದೇ ಸಾಂಕ್ರಾಮಿಕಕ್ಕಿಂತ ಹೆಚ್ಚು ಜನರ ಮರಣಕ್ಕೆ ಕಾರಣವಾಯಿತು ಎಂದು ಅಭಿಪ್ರಾಯ ಪಡುತ್ತಾರೆ.
ಮೊದಲ ಪ್ಲೇಗ್ ಸಾಂಕ್ರಾಮಿಕ
ಕ್ರಿ.ಶ. ೫೪೧-೫೪೨ರಲ್ಲಿ ಕಂಡುಬಂದ ಈ ಸಾಂಕ್ರಾಮಿಕಕ್ಕೆ ಪ್ಲೇಗ್ ಆಫ್ ಜಸ್ಟೀನಿಯನ್ ಎಂದೂ ಕರೆಯುತ್ತಾರೆ. ಇದು ಬ್ಯೂಬೋನಿಕ್ ಪ್ಲೇಗ್‌ನ ಮೊದಲ ಬಾರಿ ದಾಖಲಿಸಿದ ಸಾಂಕ್ರಾಮಿಕ. ಇದು ಚೀನಾದಲ್ಲಿ ಆರಂಭವಾಯಿತು ಎನ್ನಲಾಗುತ್ತದೆ. ಅದು ನಂತರ ಆಫ್ರಿಕಾ ಖಂಡಕ್ಕೆ ಹರಡಿತು. ಅಲ್ಲಿನ ಕಾನ್‌ಸ್ಟಾಂಟಿನೋಪಲ್ ನಲ್ಲಿ ಪ್ರತಿದಿನ ೧೦,೦೦೦ ಜನರು ಮರಣ ಹೊಂದುತ್ತಿದ್ದರು. ಬಹುಶಃ ಈ ಸಾಂಕ್ರಾಮಿಕ ಆ ನಗರದ ಶೇ. ೪೦ ಜನರ ಮರಣಕ್ಕೆ ಕಾರಣವಾಯಿತು ಎಂದರೆ ಅದರ ಭೀಕರತೆಯನ್ನು ಊಹಿಸಿ.
ಹಾಗೆಯೇ ಅದು ಪೂರ್ವದ ಮೆಡಿಟರೇನಿಯನ್ ಭಾಗದ ಶೇ. ೨೫ ಜನರ ಮರಣಕ್ಕೂ ಕಾರಣವಾಯಿತು. ಕ್ರಿ.ಶ. ೫೮೮ರಲ್ಲಿ ಎರಡನೇ ಅಲೆ ಮೆಡಿಟರೇನಿಯನ್ ನಲ್ಲಿ ಹರಡಿ ಈಗಿನ ಫ್ರಾನ್ಸ್‌ನಲ್ಲಿ ಕೇಂದ್ರಿತವಾಗಿತ್ತು. ಈ ಎರಡೂ ಅಲೆ ಸೇರಿ ಈ ಜಸ್ಟೀನಿಯನ್ ಪ್ಲೇಗ್ ೧೦೦ ಮಿಲಿಯನ್ ಜನರನ್ನು ಕೊಂದಿತು ಎನ್ನಲಾಗಿದೆ. ೫೪೧-೭೦೦ ವರ್ಷಗಳ ಮಧ್ಯೆ ಈ ಸಾಂಕ್ರಾಮಿಕವು ಯುರೋಪಿನ ಜನಸಂಖ್ಯೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಿತು. ಅದು ಅರಬರ ಆ ಕಾಲದ ವಿಜಯಕ್ಕೂ ಕಾರಣವಾಯಿತು ಎನ್ನಲಾಗಿದೆ. ೫೬೦ರಲ್ಲಿ ಕಂಡುಬಂದ ಸಾಂಕ್ರಾಮಿಕವನ್ನು ತೊಡೆಯಲ್ಲಿ ಕಾಯಿ ಮತ್ತು ಅಸಾಮಾನ್ಯ ಜ್ವರದ ಕಾಯಿಲೆ ಎಂದು ೭೯೦ರಲ್ಲಿ ಬಣ್ಣಿಸಲಾಯಿತು. ಇದರಲ್ಲಿ ಕಂಡುಬಂದ ಗೆಡ್ಡೆಗಳು ಪ್ಲೇಗ್ ಮತ್ತು ಯೆರ್ಸೀನಿಯಾ ಪೆಸ್ಟಿಸ್ ಸೂಕ್ಷ್ಮ ಜೀವಿಯದೇ ಹೌದು ಎಂದು ನಂತರ ಖಚಿತಪಡಿಸಲಾಯಿತು.
ಎರಡನೇ ಪ್ಲೇಗ್ ಸಾಂಕ್ರಾಮಿಕ
೧೪ರಿಂದ ೧೯ನೇ ಶತಮಾನದವರೆಗೆ. ೧೩೩೧ರಿಂದ ೧೩೫೧ರವರೆಗೆ ಭೀಕರವಾದ ಸಾಂಕ್ರಾಮಿಕ ಚೀನಾದಲ್ಲಿ ಆರಂಭವಾಗಿ ಆನಂತರ ಏಷ್ಯಾ, ಯುರೋಪ್ ಮತ್ತು ಆಫ್ರಿಕಾಗಳಿಗೆ ಹಬ್ಬಿತು. ಇದನ್ನು ‘ಕಪ್ಪು ಮರಣ’ (ಆZh ಈಛಿZಠಿe) ಎಂದೂ ಕರೆಯುತ್ತಾರೆ. ಅದು ಜಗತ್ತಿನ ಆಗಿನ ಜನಸಂಖ್ಯೆಯನ್ನು ೪೫೦ ಮಿಲಿಯನ್‌ನಿಂದ ೩೫೦-೩೭೫ ಮಿಲಿಯನ್‌ಗಳಿಗೆ ಕಡಿಮೆ ಮಾಡಿತು. ಚೀನಾದಲ್ಲಿ ಅದರ ಜನಸಂಖ್ಯೆಯ ಅರ್ಧ ಜನರು ಮರಣ ಹೊಂದಿದರು, ಅಂದರೆ ೧೨೦ ಮಿಲಿಯನ್ ನಿಂದ ೬೫ ಮಿಲಿಯನ್‌ಗೆ ಅಲ್ಲಿನ ಜನಸಂಖ್ಯೆ ಬಂದಿತು.
ಯುರೋಪ್‌ನಲ್ಲಿ ೧/೩ ರಷ್ಟು ಜನರು ಮಡಿದರು. ಅಂದರೆ ೭೫ ಮಿಲಿಯನ್‌ನಿಂದ ೫೦ ಮಿಲಿಯನ್‌ಗೆ ಅಲ್ಲಿನ ಜನಸಂಖ್ಯೆ ಕಡಿಮೆ ಆಯಿತು. ಆಫ್ರಿಕಾದಲ್ಲಿ ಜನಸಂಖ್ಯೆಯ ೧/೮ರಷ್ಟು ಮಂದಿ ಮಡಿದರು. ಅಂದರೆ ೭೦ ಮಿಲಿಯನ್‌ನಿಂದ ೬೦ ಮಿಲಿಯನ್‌ಗೆ ಜನಸಂಖ್ಯೆ ಕಡಿಮೆಯಾಯಿತು. ವೈರಸ್ ಅಲ್ಲದ ಯಾವುದೇ ಸಾಂಕ್ರಾಮಿಕದಲ್ಲಿ ಇದು ಗರಿಷ್ಠ ಪ್ರಮಾಣದ ಮರಣವನ್ನು ತಂದ ಸಾಂಕ್ರಾಮಿಕ ಎನ್ನಲಾಗುತ್ತದೆ. ಹಾಗೆಯೇ ಇಂಗ್ಲೆಂಡಿನ ೪.೨ ಮಿಲಿಯನ್ ಜನಸಂಖ್ಯೆಯ
೧/೩ನೇ ಭಾಗ ಅಂದರೆ ೧.೪ ಮಿಲಿಯನ್ ಜನರು ಮಡಿದರು. ಹಾಗೆಯೇ ಇಟಲಿಯಲ್ಲಿ ಇದಕ್ಕಿಂತ ಹೆಚ್ಚು ಶೇಕಡಾವಾರು ಜನರು ಮಡಿದರು. ಆದರೆ ಜರ್ಮನಿಯ ಉತ್ತರ ಮತ್ತು ಪೂರ್ವ ಭಾಗ, ಬೊಹೆಮಿಯಾ, ಪೋಲಂಡ್ ಮತ್ತು ಹಂಗರಿ ಈ ದೇಶಗಳಲ್ಲಿ ಕಡಿಮೆ ಸಂಖ್ಯೆಯ ಜನರು ಮಡಿದರು ಎನ್ನಲಾಗಿದೆ. ಆದರೆ ಉಳಿದ ದೇಶಗಳಾದ ರಷ್ಯಾ ಮತ್ತು ಬಾಲ್ಕನ್‌ಗಳ ಸರಿಯಾದ ಅಂಕಿ ಸಂಖ್ಯೆಗಳು ಲಭ್ಯವಿಲ್ಲ.
ತುಂಬಾ ಶೀತದ ವಾತಾವರಣ ಮತ್ತು ಅಗಾಧವಾದ ಭೂ ಭಾಗಗಳಿಂದ ರಷ್ಯಾದಲ್ಲಿ ಬಹಳ ಕಡಿಮೆ ತೊಂದರೆಯಾಗಿದೆ ಎನ್ನಲಾಗಿದೆ. ಈ ಪ್ಲೇಗ್ ಕಾಯಿಲೆ ಯುರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶವನ್ನು ೧೪-೧೭ ಶತಮಾನಗಳಲ್ಲಿ ಪುನಃ ಪುನಃ ಕಾಡಿತು. ಬಿರಾಬೆನ್ ಎಂಬ ತಜ್ಞರ ಪ್ರಕಾರ ೧೩೪೬-೧೬೭೧ರ ಮಧ್ಯೆ ಈ ಕಾಯಿಲೆ ಯುರೋಪಿನಲ್ಲಿ ಪ್ರತಿ ವರ್ಷವೂ ತನ್ನ ಪ್ರತಾಪ ಮೆರೆಯಿತು. ಈ ಎರಡನೇ ಪ್ಲೇಗ್ ಸಾಂಕ್ರಾಮಿಕ ಈ ಕೆಳಗಿನ ವರ್ಷಗಳಲ್ಲಿ ಬಹಳಷ್ಟು
ಹೆಚ್ಚಾಗಿ ಕಂಡುಬಂದಿತು: ೧೩೬೦-೧೩೬೩, ೧೩೭೪, ೧೪೦೦, ೧೪೩೮-೧೪೩೯, ೧೪೫೬-೧೪೫೭, ೧೪೬೪-೧೪೬೬, ೧೪೮೧-೧೪೮೫, ೧೫೦೦-೧೫೦೩, ೧೫೧೮-೧೫೩೧, ೧೫೪೪-೧೫೪೮, ೧೫೬೩-೧೫೬೬, ೧೫೭೩-೧೫೮೮, ೧೫೯೬-೧೫೯೯, ೧೬೦೨-೧೬೧೧, ೧೬೨೩-೧೬೪೦, ೧೬೪೪-೧೬೫೪ ಮತ್ತು ೧೬೬೪-೧೬೬೭. ಇದರ ನಂತರ ಪ್ಲೇಗ್ ಕಂಡುಬಂದರೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಯುರೋಪಿನಲ್ಲಿ, ೧೮ ಮತ್ತು ೧೯ನೆಯ
ಶತಮಾನದಲ್ಲಿ ಆಫ್ರಿಕಾದಲ್ಲಿ ಕಂಡುಬಂದಿತ್ತು.
ಜಿಯಾಫ್ರಿ ಪಾರ್ಕರ್ ಎಂಬ ತಜ್ಞರ ಪ್ರಕಾರ ೧೬೨೮-೩೧ರ ಸಾಂಕ್ರಾಮಿಕದಲ್ಲಿ ಫ್ರಾನ್ಸ್ ದೇಶವೊಂದೇ ಒಂದು ಮಿಲಿಯನ್ ಜನರನ್ನು ಕಳೆದುಕೊಂಡಿತು. ಇಂಗ್ಲೆಂಡ್ ಬಗ್ಗೆ ಸರಿಯಾದ ಮಾಹಿತಿ ದೊರಕಿಲ್ಲ. ಈ ಘಟನೆಯ ಮೊದಲು ಅಲ್ಲಿನ ಜನಸಂಖ್ಯೆ ೭ ಮಿಲಿಯನ್ ಎಂದು ಅಂದಾಜಿಸಿದ್ದರೆ ೧೩೦೦ರಲ್ಲಿ ಅದು ೪ ಮಿಲಿಯನ್‌ಗೆ ಬಂದಿತ್ತು. ಹಾಗೆಯೇ ಈ ಸಾಂಕ್ರಾಮಿಕದ ನಂತರ ಅದು ೨ ಮಿಲಿಯನ್‌ಗೆ ಬಂದಿತು ಎನ್ನಲಾಗಿದೆ. ೧೩೫೦ರ ಕೊನೆಯ ಹೊತ್ತಿಗೆ ಕಪ್ಪುಮರಣದ ಅವಧಿ ಮುಗಿದಿತ್ತು. ಆದರೆ ಅದು ಇಂಗ್ಲೆಂಡಿನಲ್ಲಿ ಅವಸಾನವಾಗಿರಲಿಲ್ಲ.
ಮುಂದಿನ ೧೦೦ ವರ್ಷಗಳಲ್ಲಿ ಹಲವು ಬಾರಿ ಅದು ಮತ್ತೆ ಕಾಣಿಸಿಕೊಂಡಿತು. ಉದಾಹರಣೆಗೆ ೧೩೬-೧೩೬೨, ೧೩೬೯, ೧೩೭೯-೮೩, ೧೩೮೯-೯೩. ಹಾಗೆಯೇ ೧೫ನೇ ಶತಮಾನದ ಆದಿಭಾಗದ ಎಲ್ಲಾ ವರ್ಷಗಳಲ್ಲಿ ಅದು ಕಂಡುಬಂದಿತು. ೧೪೭೧ರಲ್ಲಿ ಕಾಣಿಸಿಕೊಂಡ ಪ್ಲೇಗ್‌ನಲ್ಲಿ ಅಧಿಕ ಎಂದರೆ ಜನಸಂಖ್ಯೆಯ ಶೇ. ೧೦-೧೫ ಜನರು ಮರಣ ಹೊಂದಿದ್ದರೆ, ೧೪೭೯-೮೦ರಲ್ಲಿ ಕಂಡುಬಂದ ಪ್ಲೇಗ್‌ನಲ್ಲಿ ಶೇ. ೨೦ ರಷ್ಟು ಜನರು ಮಡಿದಿದ್ದರು. ಇದರ ಮುಂದಿನ ಕರಾಳ ಕಥೆಯನ್ನು ಮುಂದಿನ ವಾರ ಈ ಲೇಖನದ ೨ನೆಯ ಕಂತಿನಲ್ಲಿ ಪರಿಶೀಲಿಸೋಣ.