Wednesday, 30th October 2024

ಸಾಕ್ರೆಟೀಸರ ಭೌತಿಕ ಚಮತ್ಕಾರಕ್ಕೆ ಮನಸೋತವರೇ ಹೆಚ್ಚು !

ಅಭಿಮತ

ಡಾ.ಜಗದೀಶ ಮಾನೆ

ಜೀವನದ ಶಾಶ್ವತ ಸುಖದ ಹಾದಿಯನ್ನು eನವೇ ತೋರಿಸುತ್ತದೆ. ನೈತಿಕತೆಗೂ ಜ್ಞಾನವೇ ತಳಹದಿ, ಜ್ಞಾನ ಇಲ್ಲದಿದ್ದರೆ ಸದ್ಗುಣ ಸಾಧ್ಯವಿಲ್ಲ. ಯಾವುದರ ಬಲದಿಂದ ಮಾನವ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠವಾಗಿರುವನೋ, ಯಾವುದು ತನ್ನ ಜೀವನದ ಹೆಗ್ಗುರುತಾಗಿರುತ್ತದೆಯೋ ಅಂತಹ ಜ್ಞಾನ ಸಂಪಾದನೆ ಮನುಷ್ಯ ಜೀವನದ ಸೂತ್ರವಾಗಬೇಕು.

ಭಾರತದ ಈ ಪುಣ್ಯ ಭೂಮಿಯಲ್ಲಿ ಅವತರಿಸಿದ ಬುದ್ಧ, ರಾಮಕೃಷ್ಣ- ವಿವೇಕಾನಂದ, ಶ್ರೀಸಿದ್ದೇಶ್ವರರಂತಹ ಮಹಾನ್ ಸಂತರು ಹೇಗೆ ಮಾನವ ಕುಲಕ್ಕೆ
ಮಾರ್ಗದರ್ಶಿಗಳಾಗಿದ್ದರೋ, ಹಾಗೆ ಪಶ್ಚಿಮದ ನೆಲದಲ್ಲಿ ಹುಟ್ಟಿದ ಸಾಕ್ರೆಟೀಸ್ ತನ್ನ ತತ್ವಜ್ಞಾನದಿಂದಲೇ ಪಶ್ಚಿಮದ ಕತ್ತಲೆಯ ಅಂಧಕಾರವನ್ನು
ಹೋಗಲಾಡಿಸಿದರು. ಸಾಕ್ರೆಟೀಸ್ ಬಹುದೊಡ್ಡ ತಾರ್ಕಿಕ ನ್ಯಾಯದ ಪಕ್ಷಪಾತಿ, ಪಾಶ್ಚಾತ್ಯ ತತ್ವಶಾಸ್ತ್ರದ ಬೆಳವಣಿಗೆಯಲ್ಲಿ ಅಗ್ರಗಣ್ಯ ಛಾಪು ಮೂಡಿಸಿದ
ವ್ಯಕ್ತಿ. ತರ್ಕದ ಆಭಾಸಗಳನ್ನು ತೋರಿಸುವುದರಲ್ಲಂತೂ ಎತ್ತಿದ ಕೈ.

ಸೌಜನ್ಯ, ಕೌಶಲ್ಯಗಳ ಪರಮಾವತಾರಿಯಾಗಿದ್ದ ಸಾಕ್ರೆಟೀಸ್ ತನ್ನ ಚಿಂತನೆ ಹಾಗೂ ಬೋಧನೆಗಳ ಪ್ರಭಾವದಿಂದಲೇ ಅಥೆ ನಗರದ ಯುವಕರನ್ನು ತನ್ನತ್ತ ಆಕರ್ಷಿಸುತ್ತಿದ್ದ. ಈತನ ಜೀವನದ ಗುರಿ eನ ಸಂಪಾದನೆ ಹಾಗೂ ಉದಾತ್ತವಾದ ನ್ಯಾಯಯುತ ಜೀವನವನ್ನು ನಡೆಸುವುದೇ ಆಗಿತ್ತು. ಆತ ಬಹಳಷ್ಟು ಬಡತನವನ್ನು ಅನುಭವಿಸುತ್ತಿದ್ದ, ಆದರೆ ಹಣದ ವ್ಯಾಮೋಹ ಕಿಂಚಿತ್ತೂ ಇರಲಿಲ್ಲ. ಮೇಲಾಗಿ ತನ್ನ ಕೌಟುಂಬಿಕ ಜೀವನದ ಕಡೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿರಲಿಲ್ಲ.

ಕಾರಣ, ವೈಭೋಗದ ಜೀವನ ಸಾಕ್ರೆಟೀಸರಿಗೆ ಮಹತ್ವದ್ದು ಅಂತ ಯಾವತ್ತೂ ಅನಿಸಲಿಲ್ಲ. ಹಾಗಾಗಿ ಆತ ತಾನು ಭೋಧಿಸಿದ ತತ್ವಗಳನ್ನೇ ತನ್ನ ಜೀವನದ ಗುರಿಯಾಗಿಸಿಕೊಂಡ. ಸಾಕ್ರೆಟೀಸ್ ನಿಂದಲೇ ಆತನ ಶಿಷ್ಯ ಪ್ಲೇಟೋ ತನಗುಂಟಾದ ಎಲ್ಲ ಮೂಲಭೂತ ಸಮಸ್ಯೆಗಳಿಗೂ ತತ್ವಶಾಸ್ತ್ರದಿಂದಲೇ ಪರಿಹಾರವನ್ನು ಕಂಡುಕೊಂಡಿದ್ದ. ಹಾಗೆ ಪ್ಲೇಟೋವಿನ ಶಿಷ್ಯ ಅರಿಸ್ಟಾಟಲ್ ಕೂಡಾ ಸಾಕ್ರಟೀಸರಿಂದ ಪ್ರಭಾವಿತನಾಗುವುದರೊಂದಿಗೆ ಮಹಾನ್ ಜ್ಞಾನಿಯಾದ. ಆ ಮೂಲಕ ಪಾಶ್ಚಾತ್ಯ ಗ್ರೀಕ್ ತತ್ವಶಾಸದ ಎರಡು ಮಹಾ ಸ್ತಂಭಗಳಂತಿದ್ದ ಪ್ಲೇಟೋ ಮತ್ತು ಅರಿಸ್ಟಾಟಲ್‌ರನ್ನು ರೂಪಿಸಿದ ಕೀರ್ತಿ ಸಾಕ್ರೆಟೀಸರದ್ದು.

ಸಾಕ್ರುಟೀಸ್ ವ್ಯವಸ್ಥೆ ಬದ್ಧವಾದ ಯಾವುದೇ ತಾತ್ವಿಕ ಚಿಂತನೆಯನ್ನು ಕಟ್ಟಲಿಲ್ಲ, ಕೈನೋಪೆನನ ನೆನಪುಗಳು ಮತ್ತು ಪ್ಲೇಟೋನ ಬರಹಗಳಿಂದ ಸಾಕ್ರೆಟೀಸ್ ಚಿಂತನೆಗಳನ್ನು ಸ್ಪಷ್ಟವಾಗಿ ಅರಿಯಬಹುದು. ಅಥೆ ನಗರದ ಯುವಕರು, ನಾಗರಿಕ ಪ್ರಜೆಗಳು ಆತನ ವ್ಯಕ್ತಿತ್ವ ಮತ್ತು ಪಾಂಡಿತ್ಯಕ್ಕೆ ಆಕರ್ಷಿತರಾಗುತ್ತ ಆತ ನೊಂದಿಗೆ ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತಿದ್ದರು. ಚರ್ಚಾತ್ಮಕ ವಿಷಯದ ಎಲ್ಲ ರಹಸ್ಯಗಳನ್ನು ಅನೇಕ ವೇಳೆ ತಾನು ತಿಳಿದಿದ್ದರೂ ತಿಳಿಯದವರಂತೆ ನಟಿಸಿ ಅದನ್ನು ತನಗೆ ತಿಳಿಸಿಕೊಡಬೇಕೆಂದು ಪ್ರಾರ್ಥಿಸಿ ಪ್ರಶ್ನಿಸುತ್ತಿದ್ದ.

ಆಗ ಜನರು ತಮಗೆ ತೋರಿದ ಉತ್ತರಗಳನ್ನು ಹೇಳುತ್ತಿದ್ದರು. ಆ ಎಲ್ಲ ಉತ್ತರಗಳನ್ನು ತಾಳ್ಮೆಯಿಂದ ಕೇಳಿ ತರ್ಕ-ವಿತರ್ಕ ಮಾಡುತ್ತಾ ಅವರ ಉತ್ತರಗಳಲ್ಲಿ ಇರಬಹುದಾದ ಅಸಮಂಜಸತೆ ತೋರಿಸಿ ಎದುರಿಗಿರುವವರು ತಲೆಬಾಗುವಂತೆ ಮಾಡುತ್ತಿದ್ದ. ಕೊನೆಗೆ ಉತ್ತರದ ಗುಣ ಅವಗುಣಗಳನ್ನು ವಿಮರ್ಶೆ ಮಾಡಿ ತನ್ನ ಅಭಿಪ್ರಾಯವನ್ನು ಪ್ರಕಟಿಸುತ್ತಿದ್ದ. ಅವರು ತಮ್ಮ ಅಭಿಪ್ರಾಯವನ್ನು ಹೇಗೆಲ್ಲ ತಿಳಿದುಕೊಳ್ಳಬೇಕೆಂಬುದನ್ನು ಯೋಚಿಸಿ ಕಡೆಗೆ ಯಥಾರ್ಥ ಅಂಶ ಹೊರಬೀಳುವವರೆಗೂ ಅವುಗಳನ್ನು ಹೇಗೆ ಚರ್ಚಿಸಬೇಕು ಎಂದು ನಿರೂಪಿಸುತ್ತಿದ್ದ. ಆದರೆ ತನ್ನ ತೀರ್ಮಾನವೇ ಅಂತಿಮ ತೀರ್ಮಾನವಲ್ಲ, ಈ ವಿಚಾರ ತರ್ಕ ಹೀಗೆ ಮುಂದುವರೆಯುತ್ತಿರಬೇಕೆಂದು ನಮ್ರವಾಗಿ ಅವರಿಗೆ ಹೇಳುತ್ತಿದ್ದ.

ಸಾಕ್ರುಟೀಸನ ಆ ಭೌತಿಕ ಚಮತ್ಕಾರಕ್ಕೆ ಎಲ್ಲರೂ ಮನಸೋಲುತಿದ್ದರು. ಹೀಗೆ ಅವರ ಜ್ಞಾನ ಬಲದಿಂದ ಎದುರಾಳಿಯ ಜ್ಞಾನ ಪರಿನಿಧಿಯು, ತಾರ್ಕಿಕ
ಅಸಮಂಜಸತೆ, ವೈಯಕ್ತಿಕ ಅಹಂಕಾರವೆಲ್ಲ ಹೊರಬಿದ್ದು ತಲೆ ತಗ್ಗಿಸುವಂತೆ ಮಾಡುತ್ತಿದ್ದ. ಇದನ್ನೇ ಸಾಕ್ರೆಟೀಸ್‌ನ ವ್ಯಂಗ್ಯ ಪದ್ಧತಿ ಅಂತ ಕರೆಯ ಲಾಗುತ್ತದೆ. ಇದೇ ಎಂದಿಗೂ ‘ಸಾಕ್ರುಟೀಕ್ ಐರನಿ’ ಎಂದು ಪ್ರಸಿದ್ಧವಾಗಿದೆ. ಈ ವಾದ ವಿಧಾನವನ್ನು ಪ್ಲೇಟೋವಿನ ರಿಪಬ್ಲಿಕ್ ಗ್ರಂಥದಲ್ಲಿ ‘ಕೆಪಲೋಸ್ ಪ್ರಾಸಿಮ್ಯಾಕಸ್ ಗೌಕನ್’ರ ಸಂಭಾಷಣೆಯಲ್ಲೂ ಗಮನಿಸಬಹುದು.

ಒಮ್ಮೆ ಗ್ರೀಸ್ ದೇಶದ ಜನರಲ್ಲಿ ಮಹಾನ್ ಜ್ಞಾನಿ ಯಾರೆಂದು ಪ್ರಶ್ನೆ ಉದ್ಭವಿಸಿ ಬಳಿಕ ಚರ್ಚೆಸಲ್ಪಟ್ಟಿತ್ತು. ಆಗ ಜನರು ಆ ನಗರದ ಅಧಿದೇವತೆಯಾದ ‘ಆರ್ಕೆಲ’ ನನ್ನು ಈ ಬಗ್ಗೆ ಪ್ರಶ್ನಿಸುತ್ತಾರೆ. ಆಗ ‘ಸಾಕ್ರೆಟೀಸ್’ ಎಂಬ ಉತ್ತರ ದೊರಕುತ್ತದೆ. ಆದರೆ ಅದಕ್ಕೆ ಸಾಕ್ರೆಟೀಸ್ ಹೀಗೆ ಹೇಳುತ್ತಾನೆ. ‘ಉಳಿದವರು ತನ್ನಂತೆಯೇ ಅಜ್ಞಾನಿಗಳಾಗಿದ್ದರು. ಅವರಿಗೆ ತಮ್ಮ ಜ್ಞಾನದ ಅರಿವು ಇಲ್ಲವೆಂದು ತನಗೆ ತನ್ನ ಅಜ್ಞಾನ ತಿಳಿದಿರುವುದರಿಂದ ತಾನು ಅವರಿಗಿಂತ ಜ್ಞಾನಿ, ದೇವವಾಣಿ ನುಡಿದಿದ್ದು ಸತ್ಯವೆಂದು’ ಹೇಳಿದ. ಪ್ರತಿಯೊಬ್ಬರೂ ತಮ್ಮ ಜ್ಞಾನದ ಪರಿಮಿತಿಯನ್ನು ಅರಿತು ಅದನ್ನು ವಿಸ್ತರಿಸಿ ಕೊಳ್ಳಬೇಕು.

ಮನುಷ್ಯನನ್ನ ಕುರಿತಾದ ಚಿಂತನೆಯು ತಾತ್ವಿಕವಾಗಿ ಸಾಕ್ರೆಟೀಸ್ ಮತ್ತು ಆತನ ಸಮಕಾಲಿನ ಚಿಂತಕ ಸೊಫಿಸ್ಟ್‌ರಿಂದ ಆರಂಭವಾಗಿತ್ತು. ಇವರಿಗೆ ಜಗತ್ತಿನ ಸಮಸ್ಯೆಗಳಿಗಿಂತ ಮಾನವ ಸಮಸ್ಯೆಗಳೇ ಪ್ರಮುಖ ಅಂತ ಅನಿಸಿತ್ತು. ಸೂಫಿಷ್ಟರ ದೃಷ್ಟಿಯಲ್ಲಿ ಸತ್ಯ, ಸೌಂದರ್ಯ, ನ್ಯಾಯ ಹೀಗೆ ಮುಂತಾದ ಮೌಲ್ಯ ಗಳು ಮಾನವನ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಭಾವನೆ, ಅನಿಸಿಕೆಗಳನ್ನು ಅವಲಂಬಿಸಿರುವುದರಿಂದ ಸತ್ಯವು ವ್ಯಕ್ತಿ ನಿಷ್ಠವಾಗಿರುತ್ತದೆ. ಹೀಗಾಗಿ ಈ ಮೌಲ್ಯಗಳು ಸಾಪೇಕ್ಷವಾಗಿರುತ್ತವೆ. ಆದ್ದರಿಂದ ಮನುಷ್ಯನೇ ಎಲ್ಲದಕ್ಕೂ ಮಾನದಂಡ, ಅವನ ಅನುಭವವೇ ಪರಮ ಪ್ರಮಾಣವಾಗಿರುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಸಾಕ್ರೆಟೀಸ್ ಸೂಫಿಷ್ಟರ ಈ ಅಭಿಪ್ರಾಯವನ್ನು ಒಪ್ಪದೇ, ಸತ್ಯವೂ ಸಾರ್ವತ್ರಿಕವಾದದ್ದು, ವಸ್ತುನಿಷ್ಠವಾದದ್ದು, ಸರ್ವ ಸಮ್ಮತವಾದದ್ದು, ವೈಚಾರಿಕವಾದದ್ದು, eನಾಧರಿತವಾದದ್ದು, ಸರ್ವರಿಗೂ ಹಿತಕರ ಮತ್ತು ಪರಮ ಶ್ರೇಷ್ಠವಾದದ್ದೆಂದು ನಂಬಿದ್ದ.

ಹಾಗಾಗಿ ವಸ್ತುವಿನ ಲಕ್ಷಣ ವ್ಯಾಖ್ಯೆಯನ್ನು ನಿರೂಪಿಸುವುದರ ಮೂಲಕ ವಸ್ತುನಿಷ್ಠ ಸತ್ಯತೆಯನ್ನು ಸಾಧಿಸಿ ತೋರಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಿ ಸೂಫಿಷ್ಟರ ದೃಷ್ಟಿಕೋನವನ್ನು ತನ್ನ ವೈಚಾರಿಕ ನೈಪುಣ್ಯತೆಯ ಆಧಾರದಿಂದಲೇ ಖಂಡಿಸಿದ್ದರು ಸಾಕ್ರೆಟೀಸ್. ಸಾಕ್ರೆಟೀಸನ ಜೀವನ ಲಕ್ಷವು ದ್ರವ್ಯಾರ್ಜನೆಯಾಗಿರದೆ, ಲೌಕಿಕ ಪ್ರಪಂಚದ ಸುಖ ಸಂಪಾ ದನೆಯೂ ಆಗಿರದೆ ಉದಾತ್ತ ನ್ಯಾಯ ಧರ್ಮಗಳಿಗೆ ಎಡೆ ಮಾಡಿಕೊಡದೆ ಆಧ್ಯಾತ್ಮಿಕತೆಯತ್ತ ಸಾಗಿತ್ತು.

ನಾನು ಯಾರು? ನನ್ನ ನಿಜ ಸ್ವರೂಪವೇನು? ನನ್ನ ಮೂಲ ಯಾವುದು? ನನ್ನ ತರ್ಕ, ಗುರಿ, ಧ್ಯೇಯಗಳೇನು? ಅದನ್ನು ಸಾಕ್ಷಾತ್ ಕರಿಸಿಕೊಳ್ಳುವ ಬಗೆ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳ ಕುರಿತು ಆಳವಾದ ಚಿಂತನೆ ನಡೆಸಿ ಉತ್ತರವನ್ನು ಕಂಡುಕೊಳ್ಳುವುದಾಗಿತ್ತು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯುವ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆ ಇದೆ ಎಂದು ಪ್ರತಿಪಾದನೆ ಮಾಡುತ್ತಾ, ಮಾನವನಿಗೆ ತನ್ನನ್ನು ತಾನು ತಿಳಿಯುವುದಕ್ಕಿಂತ ಹೆಚ್ಚಿನ ದಾದ ಕರ್ತವ್ಯ ಯಾವುದಿಲ್ಲ, ತನ್ನನ್ನು ತಾನು ಪರೀಕ್ಷೆಗೆ ಒಳಪಡಿಸದ ಮಾನವನ ಜೀವನ ಮೃಗಗಳ ಬದುಕಿಗೆ ಸಮಾನ, ಆದ್ದರಿಂದ ಮನುಷ್ಯ ಮೊದಲು ತನ್ನನ್ನು ತಾನು ತಿಳಿಯಬೇಕಿದೆ, ಅದಕ್ಕಾಗಿ ಆತ್ಮ ಶೋಧನೆ ಪರೀಕ್ಷೆಗೆ ನಾವು ಪಾತ್ರರಾಗಬೇಕೆನ್ನುತ್ತಾನೆ.

ಹೀಗೆ ತನ್ನ ಎದುರಾಳಿಯಲ್ಲಿನ ಮೂಢತ್ವವನ್ನು ತೋರಿಸಿಕೊಡುವುದೇ ತನ್ನ ಗುರಿಯಾಗಿರದೇ ತನ್ಮೂಲಕ ಅವರಿಗೆ ಜ್ಞಾನೋದಯವಾಗಿ ಅವರು
ಸತ್ಯ ನಿಷ್ಠರಾಗಬೇಕು ಎನ್ನುವುದಾಗಿತ್ತು. ಅವರು ಹೇಳುತ್ತಾರೆ ‘ಜ್ಞಾನ ಮಾನವನಿಗೆ ಪರಮ ಶ್ರೇಷ್ಠವಾದದ್ದು, ಅದು ಕೇವಲ ಶಬ್ದಾರ್ಥ ತಿಳುವಳಿಕೆ ಆಗಿರದೆ ಅದೊಂದು ಅದಮ್ಯ ಶಕ್ತಿಯಾಗಿದೆ. ಜ್ಞಾನ ಶೂನ್ಯತೆಯೇ ಮಾನವನಲ್ಲಿನ ಅಜ್ಞಾನ ಹಾಗೂ ದುಷ್ಟತನಕ್ಕೆ ಮತ್ತು ಆತನಿಂದ ಸಮಾಜದಲ್ಲೂ
ಉಂಟಾಗುವ ಅನಿಷ್ಟತನಕ್ಕೆ ಕಾರಣವಾಗುತ್ತದೆ.

ಜ್ಞಾನದ ಅಭಾವವೇ ಮನುಷ್ಯನನ್ನು ದುರ್ಗನಿಯಾಗಿ ಸುಶೀಲನನ್ನಾಗಿ ಮಾಡುತ್ತದೆ. ಆದ್ದರಿಂದ ಜ್ಞಾನಪೂರ್ವಕವಾಗಿ ವಿವೇಚನ ಪೂರ್ವಕವಾಗಿ
ನಡೆಯುವುದೇ ವಿವೇಕಿಯ ಲಕ್ಷಣ. ಎಲ್ಲದಕ್ಕೂ ಜ್ಞಾನವೇ ಮುಖ್ಯ, ಆ ಜ್ಞಾನ ಸಂಪಾದನೆ ಪ್ರತಿಯೊಬ್ಬರ ಜೀವನದ ಪರಮ ಧ್ಯೇಯವಾಗಬೇಕು, ಹಾಗಾದಾಗ ಸತ್ಯವನ್ನು ತಿಳಿದು ಜೀವನ ಸುಂದರವಾಗುತ್ತದೆ’. ಈ ಹಿನ್ನೆಲೆಯಲ್ಲಿ ಸಾಕ್ರೆಟೀಸ್ ಜ್ಞಾನಕ್ಕೆ ಪರಮ ಶ್ರೇಷ್ಠವಾದ ಸ್ಥಾನವನ್ನು ಕಲ್ಪಿಸಿದ್ದಾzನೆ.
ಜೀವನದ ಶಾಶ್ವತ ಸುಖದ ಹಾದಿಯನ್ನು ಜ್ಞಾನವೇ ತೋರಿಸುತ್ತದೆ.

ನೈತಿಕತೆಗೂ ಜ್ಞಾನವೇ ತಳಹದಿ, ಜ್ಞಾನ ಇಲ್ಲದಿದ್ದರೆ ಸದ್ಗುಣ ಸಾಧ್ಯವಿಲ್ಲ. ಯಾವುದರ ಬಲದಿಂದ ಮಾನವ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠವಾಗಿರು ವನೋ, ಯಾವುದು ತನ್ನ ಜೀವನದ ಹೆಗ್ಗುರುತಾಗಿರುತ್ತದೆಯೋ ಅಂತಹ ಜ್ಞಾನ ಸಂಪಾದನೆ ಮನುಷ್ಯ ಜೀವನದ ಸೂತ್ರವಾಗಬೇಕು. ಮಾನವನ ವಿಶೇಷತೆಯೆ eನವೆಂದಾಗ ಆತನ ಶೀಲ ಚರಿತ್ರೆಗಳು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಧ್ಯ. ಶೀಲ, ಚಾರಿತ್ರ್ಯ, ಸದ್ಗುಣ ಮುಂತಾದವು
ಮಾನವನ ಆನುವಂಶಿಕತೆಯ ಸ್ವತ್ತಲ್ಲ!

ಹುಟ್ಟು ಸ್ವಭಾವದಿಂದಲೂ ರೂಪಿತವಾದುದಲ್ಲ, ಬದಲಿಗೆ ಅದನ್ನು ಆಚರಣೆಯ ಮೂಲಕ ಮತ್ತು ಜ್ಞಾನದ ಸಂಪಾದನೆಯ ಮೂಲಕವೇ ಸಾಧಿಸ ಬೇಕು. ಹಾಗಾಗಿ ಸಾಕ್ರಟೀಸಿನ ದೃಷ್ಟಿಯಲ್ಲಿ ‘ಜ್ಞಾನವೇ ಸದ್ಗುಣ, ಸದ್ಗುಣವೇ ಜ್ಞಾನ’ ಈ ಸದ್ಗುಣಗಳ ಸಂಪಾದನೆಯೇ ಜ್ಞಾನದ ಮುಖ. ಜ್ಞಾನ ನೈತಿಕತೆಯ ವರ್ತನೆಗೂ ತಳಹದಿಯಾಗಿದೆ. ಸದ್ಗುಣಗಳ ಸಂಪಾದನೆ ಜ್ಞಾನದ ಮುಖಾಂತರವೇ ಆಗುವುದರಿಂದ ಇವುಗಳನ್ನು ಒಂದೇ ನಾಣ್ಯದ
ಎರಡು ಮುಖ ಎಂದು ಸಾಕ್ರೆಟೀಸ್ ಹೇಳುತ್ತಾನೆ. ಆತನ ದೃಷ್ಟಿಯಲ್ಲಿ ನೀತಿಯನ್ನು ನೈತಿಕ ಜ್ಞಾನವನ್ನು ಮೀರಿದ ಮತ್ತೊಂದು ವಿದ್ಯೆ ಇಲ್ಲ. ಎಲ್ಲ ತಿಳಿದು
ನೀತಿಯನ್ನು ತಿಳಿಯದೆ ಇದ್ದರೆ ಏನನ್ನೂ ತಿಳಿದಂತಾಗುವುದಿಲ್ಲ. ಆದ್ದರಿಂದ ಮಾನವನ ಗುರಿ ಅದನ್ನು ತಿಳಿದು ಜೀವನ ಸಾರ್ಥಕ ಮಾಡಿಕೊಳ್ಳುವುದೇ ಆಗಿದೆ.

‘ತಾನು ಸಾವಿಗೆ ಯಾವತ್ತೂ ಹೆದರುವುದಿಲ್ಲ ಆದರೆ, ಧರ್ಮಕ್ಕೂ ಸತ್ಯಕ್ಕೂ ವಿರೋಧವಾಗಿ ನಡೆಯಲು ಮಾತ್ರ ನಾನು ಅಂಜುತ್ತೇನೆಂದು’ ಸಾಕ್ರೆಟೀಸ್ ಹೇಳಿದ್ದ! ಸಾಕ್ರಟೀಸರ ಈ ಮಾತಿನಿಂದ ಸಾಕ್ರೆಟೀಸ್ ತನ್ನ ಜೀವನದಲ್ಲಿ ನೈತಿಕತೆಗೆ ಕೊಟ್ಟ ಪ್ರಶಸ್ತಿ ತಿಳಿಯುತ್ತದೆ. ಸದ್ಗುಣಿಯಾದವನು ವಿವೇಕ, ಧೈರ್ಯ,
ಆತ್ಮಸಂಯಮ ಮತ್ತು ನ್ಯಾಯಶೀಲತೆ ಎಂಬ ನಾಲ್ಕು ಪ್ರಮುಖ ಗುಣಗಳನ್ನು ಹೊಂದಿರುತ್ತಾನೆ. ಆತ ತನ್ನ ಸದ್ಗುಣದ ಸಹಾಯದಿಂದಲೇ ಕಠಿಣ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಅದೇ ನೈತಿಕ ಜೀವನದ ಮುಖ್ಯ ಗುರಿ. ಹೀಗೆ ಸಾಕ್ರೆಟೀಸ್ ಯುವಕರಿಗೆ ಬೋಧಿಸಿದ ಜ್ಞಾನವು
ಸೂಫಿಸ್ಟರು ಬೋಧಿಸಿದ ಜ್ಞಾನಕ್ಕಿಂತ ವಿಶಿಷ್ಟವಾಗಿದೆ.

ಕತ್ತಲೆ ಕೋಣೆಗೆ ಬೆಳಕು ಬೀಳುವ ಮೊದಲು ಬಾಗಿಲು ಕಿಟಕಿಗಳನ್ನು ತೆರೆಯುವುದು ಸಂಭ್ರಮದಂತಿತ್ತು, ಹೊರಗೆ ಸೂರ್ಯನ ಪ್ರಕಾಶವಿಲ್ಲದಿದ್ದರೆ ಕಿಟಕಿ ಬಾಗಿಲು ತೆರೆದ ಮಾತ್ರಕ್ಕೆ ಏನೋ ಪ್ರಯೋಜನವಿಲ್ಲ. ಹಾಗೆಯೇ ತರ್ಕ, ವಿಧಾನ, ಲಕ್ಷಣ, ನಿರೂಪಣೆ ಮತ್ತು ದೃಷ್ಟಾಂತಗಳೆಲ್ಲವೂ ಮನಸ್ಸಿನ ಕಗ್ಗತ್ತಲೆ ಯನ್ನು ಓಡಿಸುವ ಉಪಾಯಗಳೇ ಹೊರತು ಅವುಗಳಿಂದಲೇ ಜ್ಞಾನ ದೊರೆಯುವುದಿಲ್ಲ. ಇವೆಲ್ಲವುಗಳ ಮೂಲಕ ಮನಸ್ಸು ನಿರ್ಮಲವಾದರೆ ಆತ್ಮ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಎಲ್ಲರಲ್ಲೂ ಈ ಆತ್ಮ ತನ್ನ ಪ್ರಕಾಶವನ್ನು ಉಂಟು ಮಾಡಬೇಕೆನ್ನುವುದು ಸಾಕ್ರೆಟೀಸ್‌ನ ಪ್ರಮುಖ ಉದ್ದೇಶ ವಾಗಿದೆ. ಈ ನಿಟ್ಟಿನಲ್ಲಿ ಸಾಕ್ರೆಟೀಸರಿಗೆ ಪ್ಲೇಟೋ ಹಾಗೂ ಅರಿಸ್ಟಾಟಲ್ ರಂತಹ ಪರಮ ಶ್ರೇಷ್ಠ ಶಿಷ್ಯರಿದ್ದರು.

ಸಾಕ್ರೆಟೀಸ್ ತತ್ವದ ಪ್ರಭಾವದಿಂದಲೇ ಅವರು ಅಮೂಲ್ಯವಾದ ಕೊಡುಗೆಗಳನ್ನು ಕೊಡುವಂತಾಯಿತು. ಹೀಗೆ ಮಹಾನ್ ಕೊಡುಗೆಗಳನ್ನು ಕೊಟ್ಟ
ಸಾಕ್ರೆಟೀಸರ ಬಗ್ಗೆ ಜೂಲಿಯನ್ ಚಕ್ರವರ್ತಿ ಹೇಳುತ್ತಾನೆ, ಸಾಕ್ರೆಟೀಸ್ ರಣರಂಗದಲ್ಲಿ ನೂರಾಳುಗಳನ್ನು ಕೊಂದು ಗೆದ್ದ ವೀರನಲ್ಲ! ಬದಲಾಗಿ ತನ್ನನ್ನು
ತಾನು ಗೆದ್ದ ಋಷಿ, ಅಲೆಕ್ಸಾಂಡರ್‌ನ ವಿಜಯದಿಂದ ಯಾರಿಗೆ ಮೋಕ್ಷ ಸಿಕ್ಕಿದೆ? ಆದರೆ ತತ್ವಜ್ಞಾನದಿಂದ ಮೋಕ್ಷ ಪಡೆದಿರುವವರೆಲ್ಲರೂ ಸಾಕ್ರೆಟೀಸ್‌ಗೆ
ರುಣಿಗಳು ಎಂದಿದ್ದ. ಹೀಗೆ ಸಾಕ್ರಟಿಸ್ ಕ್ರಿ.ಪೂ ೪೬೯ ರಲ್ಲಿ ಅತ್ಯಂತ ಬಡ ಕುಟುಂಬವೊಂದರಲ್ಲಿ ಹುಟ್ಟಿ ಕ್ರಿ.ಪೂ ೩೯೯ ರವರೆಗೆ ಬದುಕಿ, ಕಷ್ಟ ಸಹಿಷ್ಣುತೆ,
ಇಂದ್ರಿಯ ನಿಗ್ರಹದಿಂದ ತನ್ನ ಬದುಕಿನುದ್ದಕ್ಕೂ ಸತ್ಯದ ಮಾರ್ಗಗಳನ್ನು ಅನುಸರಿಸುತ್ತಲೇ ಪರಮ ಜ್ಞಾನವನ್ನು ಬೋಧಿಸುತ್ತಾ ನಾಡಿನ ಏಳಿಗೆಗಾಗಿ,
ಮಾನವ ಕುಲದ ಉದ್ಧಾರಕ್ಕೆ ತನ್ನ ಬದುಕನ್ನೇ ಮುಡುಪಾಗಿಟ್ಟು ದೇವರಾಗಿಬಿಟ್ಟ.

(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು ಮತ್ತು
ರಾಜಕೀಯ ವಿಶ್ಲೇಷಕರು)