Friday, 20th September 2024

ದೇವರ ಹಿಪ್ಪರಗಿ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡಿ

ಅಭಿಮತ
ವಿಠಲ.ಆರ್.ಯಂಕಂಚಿ

ಕಳೆದ ಹತ್ತು ವರ್ಷಗಳಿಂದ ದೇವರ ಹಿಪ್ಪರಗಿ ಹೇಗಿತ್ತೋ ಇಗಲೂ ಹಾಗೆ ಇದೆ. ಇದಕ್ಕೆೆ ತಾಲೂಕಿನ ಪಟ್ಟ ಮಾತ್ರ ಸೇರಿದೆ ಹೊರತು ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ. ರೈತರು ತಮಗೆ ಬೇಕಾದ ಬೀಜ ಗೊಬ್ಬರಗಳನ್ನು ಇತರೆ ಕೃಷಿ ಚಟುವಟಿಕೆ ಸಾಮಗ್ರಿ ಗಳನ್ನು ತೆಗೆದುಕೊಳ್ಳಲು ಹೋದಾಗ ಅವುಗಳಿಗೆ ಬೇಕಾದ ಎಲ್ಲಾ ಸಾಮಗ್ರಿಗಳು ಸಿಂದಗಿಯಲ್ಲಿ ಸಿಗುತ್ತವೆ. ಹಾಗಾಗಿ ನಮ್ಮ ತಾಲೂಕು ಯಾವುದು? ಕೇವಲ ಘೋಷಣೆ ಮಾಡಿದ್ದಾರೆಯೇ? ಎಂದು ರೈತರು ಕೇಳುತ್ತಿದ್ದಾರೆ.

ದೇವರ ಹಿಪ್ಪರಗಿಯಲ್ಲಿಯ ರೈತ ಸಂಪರ್ಕ ಕೇಂದ್ರ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಯಾವುದೇ ಸಾಮಗ್ರಿಗಳು ಬರುವುದೆ ಇಲ್ಲ. ಕೆಲವೊಂದು ಸಾಮಗ್ರಿಗಳು ಬಂದರೂ ತೀರಾ ಕಳಪೆ ಗುಣಮಟ್ಟದ್ದಾಗಿರುತ್ತವೆ ಎಂದು ಅಲ್ಲಿಗೆ ಹೋಗಿ ನೋಡಿರುವುದನ್ನು ನಾನೇ ಸ್ವತಃ ಹೇಳಬಯಸುತ್ತೆೆನೆ. ದೇವರ ಹಿಪ್ಪರಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಮತ್ತು ಅಧಿಕಾರಿಗಳೆ ಸರಿಯಾಗಿ ಯಾರೂ ಬರುತ್ತಿಲ್ಲ. ಇದೆ ರೀತಿ ಮುಂದುವರಿದರೆ ರೈತರಿಗೆ ಸರಕಾರ ನೀಡುವ ಸವಲತ್ತುಗಳು ಯಾರ ಪಾಲಾಗುತ್ತವೆ ಮತ್ತು ಅಧಿಕಾರಿಗಳ ಕೆಲಸ ಇಲ್ಲೇನು? ಎಂಬುಸದು ನನ್ನ ಪ್ರಶ್ನೆ.

ತಾಲೂಕಿನ ಕೇಂದ್ರಬಿಂದುವಾದ ದೇವರ ಹಿಪ್ಪರಗಿಯಲ್ಲಿಯೇ ಕೇಸರುಮಯವಾದ ವಾತಾವರಣವಿದೆ. ಇನ್ನು ಹಳ್ಳಿಗಳ ಸ್ಥಿತಿ ಹೇಳತಿರದು. ತಾಲೂಕಿನ ಪ್ರತಿಹಳ್ಳಿಗೂ ಹೋಗಬೇಕಾದರೆ ಕಳಪೆ ಮಟ್ಟದ ರಸ್ತೆೆಗಳಿದ್ದು ತಗ್ಗುಗಳಿಂದ ಕೂಡಿವೆ. ರೈತರು ತಮ್ಮ ದಿನನಿತ್ಯದ ವ್ಯವಹಾರವಾದ ತರಕಾರಿ, ಬೀಜ, ಗೊಬ್ಬರಗಳನ್ನು ತರಲು ಮತ್ತು ಬೆಳೆದ ಬೆಳೆಗಳನ್ನು ಸಾಗಿಸಲು ದೊಡ್ಡ ತಲೆನೋವಾಗಿ ಬಿಟ್ಟಿದೆ. ಬೆಳೆ ಬೆಳೆಯುವುದು ಒಂದು ಕಷ್ಟವಾದರೆ ಸಾಗಿಸುವುದು ಅದಕ್ಕಿಿಂತ ದೊಡ್ಡ ಕಷ್ಟದ ಕೆಲಸ. ಊರಿಂದೂರಿಗೆ ಸಾಗಿಸಲು ರಸ್ತೆಯ ಸಮಸ್ಯೆೆಯ ಜತೆಗೆ ಹೊಲ ಗದ್ದೆಗಳಿಗೆ ಹೋಗುವ ರಸ್ತೆಗಳು ಸಹ ಹಾಳಾಗಿ ಹೋಗಿವೆ.

ಹೊಲದಲ್ಲಿ ಹೋಗಿ ಕೆಲಸ ಮಾಡಲು ಅಗದ ದಣಿವು ರಸ್ತೆೆಯಲ್ಲಿಯೇ ದಣಿವಾಗಿ ಅದೇಷ್ಟೋ ಜನರು ಮರಳಿ ಮನೆಗೆ ಹೋಗಬೇಕಾದ ಸ್ಥಿತಿಗತಿಗಳು ನಮ್ಮ ಕಣ್ಮುಂದೆ ಇವೆ. ಹಾಗಾಗಿ ಸಂಬಂಧಿಸಿದ ಸಚಿವರ ಅಧಿಕಾರಿಗಳ ಗಮನಕ್ಕೆೆ ತಂದು ಇವುಗಳನ್ನು ಸರಿಪಡಿಸಿ ಜನರ ಸಮಸ್ಯೆೆಗೆ ಕಿವಿಗೊಡುವಿರೆಂದು ಭಾವಿಸಿದ್ದೇನೆ.

ಸಾರ್ವಜನಿಕ ಶೌಚಾಲಯದ ಕೊರತೆ: ಹಳ್ಳಿಗಳಲ್ಲಿಯ ಸಾರ್ವಜನಿಕ ಶೌಚಾಲಯದ ಕೊರತೆ ಯಾವ ಯೋಜನೆಗಳು  ಬಂದರೂ ನಿವಾರಿಸಲು ಸಾಧ್ಯವಿಲ್ಲ ಎನ್ನುವಂತಾಗಿದೆ.ಪ್ರತಿಹಳ್ಳಿಗೂ ಹೋಗಿ ಅಲ್ಲಿಯ ಸಾರ್ವಜನಿಕ ಶೌಚಾಲಯದ ವ್ಯವಸ್ಥೆೆ ಹೇಳತಿರದು. ಊರನ್ನು ಸುಧಾರಿಸುವ ಮೊದಲು ಶೌಚಾಲಯವನ್ನು ಸುಧಾರಿಸಬೇಕಾಗಿದೆ. ಪುರುಷರು ಬಯಲು ಶೌಚಾಲಯಕ್ಕೆೆ ತೆರಳುತ್ತಾರೆ. ಮಹಿಳೆಯರು ಎಲ್ಲಿಗೆ ಹೋಗಬೇಕು? ಸರಕಾರದ ಯೋಜನೆಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿವೆ. ಬಹುತೇಕ ಹಳ್ಳಿಗಳಲ್ಲಿ ಯಂತ್ರಗಳು ಕೆಟ್ಟು ಹೋಗಿವೆ. ಅವುಗಳನ್ನು ಸರಿ ಮಾಡಲು ಯಾರೂ ಬರುತ್ತಿಲ್ಲ.

ಒಂದೆಡೆ ಸರಿಯಾಗಿದ್ದರೂ ಒಂದು ಕೊಡ ನೀರಿಗೆ 6-7 ರುಪಾಯಿ ನೀಡಬೇಕಿದೆ. ಬಡವರು ನಿರ್ಗತಿಕರು, ಕೂಲಿ ಕಾರ್ಮಿಕರು ಮತ್ತು ರೈತರು ಶುದ್ಧವಾದ ನೀರನ್ನು ಕುಡಿಯಲು ಈ ಯೋಜನೆ ಮಾಡಿರುವುದು ಶ್ಲಾಾಘನೀಯ ಆದರೆ ಅದರ ಯಂತ್ರಗಳನ್ನು ಸರಿಪಡಿಸದೆ ಇರುವುದು ನೋವಿನ ಸಂಗತಿ. ಘಟಕದ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಬೇಕು. ಇದನ್ನು ಅವರು ಮಾಡದಿ ರುವುದನ್ನು ಸಹ ಸಂಬಂಧಿಸಿದವರು ಗಮನಹರಿಸಬೇಕು.

ಸರಕಾರದ ಆಸ್ತಿ ದೇವರ ಆಸ್ತಿ ಎಂಬ ಮಾತಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ದೀಪ ಬೆಳಗಲು ವಿದ್ಯುತ್ ಕಂಬಗಳನ್ನು ನೆಟ್ಟಿರುತ್ತಾರೆ. ಬಲ್‌ಬ್‌‌ಗಳು ಕೆಟ್ಟು ಹಲವಾರು ತಿಂಗಳುಗಳಾದರೂ ಒಮ್ಮೊೊಮ್ಮೆ ಸರಿಪಡಿಸುವುದೆ ಇಲ್ಲ. ಪ್ರತಿ ಹಳ್ಳಿಗೆ ಒಂದು ಗ್ರಂಥಾಲಯವನ್ನು ಮಂಜೂರು ಮಾಡಬೇಕು. ಪ್ರತಿ ಹಳ್ಳಿಗೆ ಮದ್ಯ ಮಾರಾಟ ಮಳಿಗೆಗಳ ಪರವಾನಗಿ ನೀಡುವದು ಸರಿಯಾದ ಬೆಳವಣಿಗೆಯಲ್ಲ. ಹಾಲು ಉತ್ಪಾದಕ  ಘಟಕಗಳನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಒದಗಿಸಬೇಕು. ಸರಕಾರ ಕೂಡಲೇ ಇತ್ತ ಗಮನಹರಿಸಿ ನೂತನ ತಾಲೂಕು ಕೇಂದ್ರವಾದ ದೇವರ ಹಿಪ್ಪರಗಿಗೆ ವಿಶೇಷವಾದ ಅನುದಾನದ ಪ್ಯಾಕೇಜ್ ನೀಡಿ ಅಭಿವದ್ಧಿಗೆ ಸಹಕರಿಸಬೇಕು.