Monday, 16th September 2024

ಶಿಕ್ಷಕರೇಕೆ ವೃತ್ತಿಯ ಬಗ್ಗೆ ಕಮಿಟೆಡ್ ಆಗಿರುವುದಿಲ್ಲ?

ಟಿ. ದೇವಿದಾಸ್

ಇಂಟ್ರೋೋ;1 ಭೌತಿಕವಾದ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಮೊದಲಿನಂತೆ ಯಾವ ಉತ್ತಮ ಬಾಂಧವ್ಯವೂ ಇರದೆ ಎಲ್ಲವೂ ನಶಿಸುತ್ತಿಿದೆ. ಶಿಕ್ಷಣ ನೀತಿಯ ವ್ಯವಸ್ಥೆೆಯಲ್ಲಿ ಅಂತರಂಗದ ಜ್ಞಾನಕ್ಕೆೆ ಮಹತ್ವ ಕೊಡದೇ ಹೋದರೆ ಯಾವ ಶಿಕ್ಷಕನೂ ವೃತ್ತಿಿಯ ಬಗ್ಗೆೆ ಕಮಿಟೆಡ್ ಆಗಿರಲು ಸಾಧ್ಯವಿಲ್ಲ.

ಕಾಲವಿತ್ತು. ಆಗ ಕಡಿಮೆ ವೇತನವಿದ್ದರೂ ಶಿಕ್ಷಕರಲ್ಲಿ ವೃತ್ತಿಿ ಬದ್ಧತೆಯೆಂಬುದಿತ್ತು. ವೃತ್ತಿಿ ಘನತೆ ಮತ್ತು ಗೌರವವಿತ್ತು. ಖಂಡಿತವಾಗಿ ಈಗಲೂ ಹಲವೆಡೆಯಿದೆಯೆನ್ನಿಿ. ಕಾಡುವ, ಕಿತ್ತು ತಿನ್ನುವ ಬಡತನವಿದ್ದರೂ ಸಮಾಜವೇ ಅವರನ್ನು ಬೆಂಬಲಿಸುತ್ತಿಿತ್ತು. ಅವರನ್ನು ಉಳಿಸಿಕೊಳ್ಳುವ ಕಾಳಜಿಯನ್ನು ಸಮಾಜ ಅಭಿವ್ಯಕ್ತಿಿಸುತ್ತಿಿತ್ತು. ಆಗ ಶಿಕ್ಷಕರೂ ಕಮಿಟೆಡ್ ಆಗಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಆರ್ಥಿಕ ಪರಿಸ್ಥಿಿತಿಯೂ ಬದಲಾಗಿದೆ. ಸರಕಾರ ಶಿಕ್ಷಕರಿಗೆ ಉತ್ತಮ ಸಂಬಳವನ್ನು ನೀಡುತ್ತದೆ. ಹೆಚ್ಚು ಕಡಿಮೆ ಎಲ್ಲಾ ಖಾಸಗಿ ಶಾಲೆಗಳಲ್ಲೂ ಉತ್ತಮ ಸಂಬಳವಿದೆ. ಸಮಾಜ ಅವರನ್ನು ಉಳಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಎಷ್ಟಿಿದ್ದರೂ ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕೆಂಬ ಪ್ರಜ್ಞೆ ಶಿಕ್ಷಕರಲ್ಲಿದೆ. ಆದರೂ ಕೌಟುಂಬಿಕ ಜವಾಬ್ದಾಾರಿ ಹಾಗೂ ಭವಿಷ್ಯದ ಜೀವನದ ನಿರ್ವಹಣೆಗಾಗಿ ಎಷ್ಟು ಹಣವನ್ನು ಗಳಿಸಿದರೂ ಸಾಲದಾಗಿ ಶಿಕ್ಷಕ ಟ್ಯೂಷನ್ನುಗಳನ್ನು ಆರಂಭಿಸಬೇಕಾಗಿ ಬಂದುದರಿಂದ, ವೃತ್ತಿಿಗಿಂತ ಮುಖ್ಯವಾಗಿ ಅದಕ್ಕೇ ಮಹತ್ವ ಕೊಡಬೇಕಾದ ಅನಿವಾರ್ಯತೆ ಹುಟ್ಟಿಿದೆ. ಇದು ವರ್ತಮಾನದ ಸ್ಥಿಿತಿ-ಗತಿ. ಇದರಲ್ಲಿ ಭಾಗಶಃ ಸತ್ಯವೂ ಇದೆ. ಹಣವಿಲ್ಲದಿರೆ ಬದುಕು ಒಂದು ದಿನವೂ ನಡೆಯಲಾರದ ಕಾಲದಲ್ಲಿ ನಾವಿದ್ದೇವೆ. ಬದುಕಿನ ಎಲ್ಲ ಹಣದ ಸುತ್ತಲೇ ಗಿರಕಿ ಹೊಡೆಯುತ್ತಿಿರುವ ಕಾಲವಿದು.

ವ್ಯಾಾವಹಾರಿಕವಾದ ಸಮಾಜದಲ್ಲಿ ಶಾಲೆ-ಶಿಕ್ಷಕ-ವಿದ್ಯಾಾರ್ಥಿ-ಸಮಾಜದ ನಡುವಿನ ಭಾವನಾತ್ಮಕ ಸಂಬಂಧ ಮೊದಲಿನಂತಿಲ್ಲ. ಕಾರಣ ಎಲ್ಲವೂ ಶುದ್ಧ ವ್ಯವಹಾರವಾಗಿ ಬಿಟ್ಟಿಿದೆ. ವಿಶ್ವಾಾಸದಲ್ಲಿ ವ್ಯವಹಾರ ಬೇರೆ, ವ್ಯವಹಾರದಲ್ಲಿ ವಿಶ್ವಾಾಸ ಬೇರೆ. ಬದಲಾದ ಜಾಗತಿಕ ಸ್ಥಿಿತ್ಯಂತರಗಳು ಶಿಕ್ಷಕರಲ್ಲಿ ವೃತ್ತಿಿ ಬದ್ಧತೆಯನ್ನು ಅಪಮೌಲ್ಯಗೊಳಿಸುತ್ತಿಿದೆ. ಕಾರಣ ಅತಿಸೂಕ್ಷ್ಮವೆನಿಸಿದ ಕಾನೂನುಗಳು ಶಿಕ್ಷಣದ ನೀತಿಯಲ್ಲಿ ಒಳಸೇರಿದ್ದರಿಂದ. ಇಂಥ ಕಾನೂನುಗಳಿಗೆ ಶಿಕ್ಷಕ ಬದ್ಧನಾಗಬೇಕಾದ ಪರಿಸ್ಥಿಿತಿ ತಲೆದೋರಿದೆ. ಆದ್ದರಿಂದ ವಿದ್ಯಾಾರ್ಥಿಯ ಮನಸ್ಸನ್ನು ಆತ ಮುಟ್ಟಲಾರ. ಇಂದಿನ ಶಿಕ್ಷಣ ಮುಟ್ಟಲಾರದು. ಕಲಿಕೆಯ ವಿಚಾರವಾಗಿ ಅವಲೋಕಿಸಿದರೆ ವಿದ್ಯಾಾರ್ಥಿಗಳ ಪ್ರಾಾಮಾಣಿಕತೆ, ವಿಧೇಯತೆಯಲ್ಲಿ ಶೈಥಿಲ್ಯ ಎದ್ದು ಕಾಣುತ್ತದೆ. ಅವರಲ್ಲಿ ಶಾಲೆ, ಶಿಕ್ಷಕರು, ಸಮಾಜದ ಬಗ್ಗೆೆ ಗೌರವವಿಲ್ಲ. ಕಲಿಕೆಯಲ್ಲಿನ ಶಿಸ್ತು ಅವರಲ್ಲಿ ಉಢಾಪೆಯಾಗಿದೆ, ಉದಾಸೀನವಾಗಿದೆ. ತನ್ನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಳ್ಳುವ ಪೋಷಕರನ್ನು ನಾನು ನೋಡಿದ್ದೇನೆ. ತನ್ನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರನ್ನು ಏಕವಚನದಲ್ಲಿ ಏರುದನಿಯಲ್ಲಿ ಮಾತಾಡಿಸಿದರೆ ತಮ್ಮ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಿತು ಎಂಬ ಸಾಮಾನ್ಯ ಪೋಷಕರಲ್ಲಿ ಕಾಣಿಸುವುದಿಲ್ಲ. ಅಂತಹ ಪೋಷಕರು ತಮ್ಮ ಮಕ್ಕಳಿಗೆ ಯಾವ ಜೀವನ ಮೌಲ್ಯಗಳನ್ನು ಮನೆಯಲ್ಲಿ ಕಲಿಸಿಯಾರು? ಇದರಿಂದಾಗಿ ವಿದ್ಯಾಾರ್ಥಿಗಳ ಅಂತರಂಗ-ಬಹಿರಂಗವನ್ನು ಅನುಸಂಧಿಸುವ ಪ್ರಕ್ರಿಿಯೆ ತರಗತಿಯಲ್ಲಿ ನಡೆಯುವುದಿಲ್ಲ. ಕೇವಲ ಭೌತಿಕವಾದ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಮೊದಲಿನಂತೆ ಯಾವ ಉತ್ತಮ ಬಾಂಧವ್ಯವೂ ಇರದೆ ಎಲ್ಲವೂ ನಶಿಸುತ್ತಿಿದೆ. ಇದಕ್ಕೆೆ ಸಮಾಜವೂ ಒಂದು ಕಾರಣವಾದರೆ, ಶಿಕ್ಷಣ ಸಂಸ್ಥೆೆಗಳ ಧ್ಯೇಯ-ಧೋರಣೆಗಳು ಇನ್ನೊೊಂದು ನೆಲೆಯಲ್ಲಿ ಕಾರಣವಾಗುತ್ತದೆ. ಯಾವ ಶಿಕ್ಷಣ ವಿಶ್ವಾಾಸಕ್ಕಿಿಂತ ಹೆಚ್ಚಾಾಗಿ ವ್ಯವಹಾರಮುಖಿಯಾಗಿ ಸಂಬಂಧಗಳಿರುತ್ತವೆಯೋ ಅಲ್ಲಿ ಆರ್ಥಿಕತೆಯು ಪ್ರಧಾನವಾಗುತ್ತಾಾ ಹೋಗುತ್ತದೆ. ಶಿಕ್ಷಣದ ಮೂಲ ಉದ್ದೇಶ ಆರ್ಥಿಕತೆಯನ್ನು ಬಲಗೊಳಿಸುವುದು ಹೌದಾದರೂ ತರಗತಿಯಲ್ಲಿ ಅದೊಂದೇ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬೋಧಿಸಲಾಗದು. ಅದರಾಚೆಗಿನ ಜೀವನಮೌಲ್ಯಗಳು ಬೋಧಿಸಲ್ಪಡಬೇಕಾಗುತ್ತದೆ. ಆದರೆ, ಸಮಾಜ ಇದನ್ನು ಸ್ವೀಕರಿಸಲಾರದಷ್ಟು ಮಟ್ಟಿಿಗೆ ಶಾಲೆಯಿಂದ ದೂರವಾಗುತ್ತಿಿದೆ. ಇದು ಎಲ್ಲರಿಗೂ ಅನುಭವವಾಗಿರುವ ಸತ್ಯ. ಇದಕ್ಕೆೆ ಪೂರಕವಾಗಿ ಪ್ರಸಕ್ತ ಶೈಕ್ಷಣಿಕಾತ್ಮಕವಾದ ಆಡಳಿತದ ಪರಿಕಲ್ಪನೆಗಳು ಬೆಳೆದುಕೊಂಡಿವೆ.

ಶಿಕ್ಷಕರನ್ನೇ ಪ್ರತಿಯೊಂದಕ್ಕೂ ಗುರಿಯಾಗಿಸುವ ಮತ್ತು ಬದುಕಿನ ಅಗತ್ಯಕ್ಕಾಾಗುವಷ್ಟಾಾದರೂ ಸಂಬಳ ನೀಡುವುದಿಲ್ಲವಾದರೆ ಯಾವ ವೃತ್ತಿಿ ಬದ್ಧತೆ, ಗೌರವ ಹುಟ್ಟಲು ಸಾಧ್ಯ? ಎಲ್ಲವೂ ವ್ಯವಹಾರವಾಗಿ ಬದಲಾದದ್ದು ಇಂಥ ಪರಿಸ್ಥಿಿತಿಯಿಂದ. ನಾವು ಸಂಬಳ ಕೊಡುತ್ತೇವೆ, ನಾವು ಫೀಸು ಕೊಡುತ್ತೇವೆ, ಆದ್ದರಿಂದ ಇಂತಿಷ್ಟು ಅಂಕಗಳು ಬರಲೇಬೇಕು ಎಂಬುದಕ್ಕೆೆ ಕಲಿಕೆ ಮತ್ತು ಬೋಧನೆ ಸಂತೆಯಲ್ಲಿ ಮಾರಾಟಕ್ಕಿಿಟ್ಟ ಸರಕುಗಳಲ್ಲವಲ್ಲ! ಶಿಕ್ಷಣ ನೀತಿಯ ವ್ಯವಸ್ಥೆೆಯಲ್ಲಿ ಅಂತರಂಗದ ಜ್ಞಾನಕ್ಕೆೆ ಮಹತ್ವ ಕೊಡದೇ ಹೋದರೆ ಯಾವ ಶಿಕ್ಷಕನೂ ವೃತ್ತಿಿಯ ಬಗ್ಗೆೆ ಕಮಿಟೆಡ್ ಆಗಿರಲು ಸಾಧ್ಯವಿಲ್ಲ. ಕೇವಲ ಭೌತಿಕವಾದ ಉಪಯುಕ್ತತೆಯ ಬಗ್ಗೆೆ ಮಾತ್ರ ಆತ ಬದ್ಧನಾಗುವ ಅಂದರೆ ಮತ್ತೆೆ ಹಣದ ಅಸ್ತಿಿತ್ವವೇ ಮುಖ್ಯವಾಗುತ್ತಾಾ ಹೋಗುತ್ತದೆ. ಅಂಕಗಳಿಗೆ ಹೊರತಾಗಿ ಯಾವ ಜೀವನ ಮೌಲ್ಯಗಳು ವಿದ್ಯಾಾರ್ಥಿಗಳಿಗೆ ಶಿಕ್ಷಕನಿಂದ ದೊರೆಯದೇ ಇದ್ದಾಗ ಶಾಲೆ-ಶಿಕ್ಷಕ-ಸಮುದಾಯದ ಮಧ್ಯೆೆ ಯಾವ ಸಂಬಂಧಗಳು ಏರ್ಪಡಲು ಸಾಧ್ಯ ಹೇಳಿ?

ಯಾವುದನ್ನು ಸರಕುಗಳನ್ನಾಾಗಿ ನೋಡಬಾರದಿತ್ತೋೋ, ಅಥವಾ ಶಿಕ್ಷಕನನ್ನು ಸರಕುಗಳನ್ನು ಮಾರುವ ಮಾಲೀಕನಂತೆ ಕಾಣಬಾರದಿತ್ತೋೋ ಅದು ಘಟಿಸಿದ್ದರಿಂದಾಗಿಯೇ ವರ್ತಮಾನದ ಶಿಕ್ಷಣ ವ್ಯವಸ್ಥೆೆ ಕೊಡು-ಕೊಳ್ಳುವಿಕೆಯ ದಾರಿಹಿಡಿದಿದ್ದು. ಕೇವಲ ಅಂಕಗಳಿಕೆಗೆ ಒಟ್ಟೂ ವ್ಯವಸ್ಥೆೆಯೇ ಮಹತ್ವ ನೀಡುತ್ತಿಿರುವದರಿಂದ ಶಿಕ್ಷಕನಿಗೆ ಬದ್ಧತೆಗಾಗಲೀ, ಸ್ವಾಾಧ್ಯಾಾಯಕ್ಕಾಾಗಲೀ ಅವಕಾಶವೇ ಅಸಾಧ್ಯವಾಗುತ್ತಿಿದೆ. ಶಿಕ್ಷಕರು ಹೊಂದಿಕೊಳ್ಳುತ್ತಾಾ ಶಾಲೆಗಳಲ್ಲಿ ಪ್ರತಿಭೆಗಳನ್ನು ಗುರುತಿಸುವ ಗೋಜಿಗೆ ಹೋಗದೆ ಕೇವಲ ಉತ್ತಮವಾದ ಅಂಕಗಳು ಬರುವಂತೆ ವಿದ್ಯಾಾರ್ಥಿಗಳನ್ನು ತಯಾರು ಮಾಡಲೆತ್ನಿಿಸುತ್ತಾಾರೆ. ಹೆತ್ತವರೂ ಶಾಲೆಯವರೂ ತಮ್ಮ ಮಕ್ಕಳು ಹೆಚ್ಚು ಹೆಚ್ಚು ಅಂಕಗಳನ್ನು ಪಡೆದರೆ ಸಾಕೆಂಬ ಮನಸ್ಥಿಿತಿಯನ್ನು ಹೊಂದಿರುವುದರಿಂದ ಶಿಕ್ಷಕರು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಪಾಠ ಬೋಧನೆಯನ್ನು ಅಂಕಗಳಿಕೆಯ ಮಾರ್ಗೋಪಾಯವಾಗಿ ಮಾಡಿಕೊಳ್ಳಬೇಕಾಗಿದೆ. ಶಿಕ್ಷಣ ಇಲಾಖೆಯೂ, ಪ್ರತಿಶಾಲೆಯೂ ಬೋಧನೆ ಮತ್ತು ಕಲಿಕೆಗೆ ಹೆಚ್ಚು ಒತ್ತು ನೀಡುವುದು ಸತ್ಯವಾದರೂ ಹೆಚ್ಚು ಅಂಕಗಳನ್ನೇ ಪಡೆಯುವಂತಾಬೇಕೆಂಬುದು ಇದರ ಹಿಂದಿನ ಇಂಥ ಸಂದರ್ಭದಲ್ಲಿ ಶಿಕ್ಷಕ ಕಮಿಟ್ ಮೆಂಟ್ ಇರುವವನಂತೆ ನಟಿಸಬೇಕಾಗುತ್ತದೆ. ಕಾರಣ ಉದ್ಯೋೋಗ ಕಳೆದುಕೊಳ್ಳುವ ಭಯ ಅವನಲ್ಲಿರುತ್ತದೆ. ಈ ನಟನೆಯೂ ಕೂಡ ಬೋಧನೆಗಲ್ಲ, ವಿದ್ಯಾಾರ್ಥಿಗಳಿಗಲ್ಲ, ಕೇವಲ ಮ್ಯಾಾನೇಜ್ಮೆೆಂಟ್‌ಗೆ. ಇಂದಿನ ಮ್ಯಾಾನೇಜ್ಮೆೆಂಟ್‌ಗೆ ಶಿಕ್ಷಕನ ಪ್ರತಿಭೆ ಮುಖ್ಯವಲ್ಲ, ಅವನ ನಟನೆಯಾದರೂ ಅಡ್ದಿಿಯಿಲ್ಲ, ತಮಗೆ ಸೆಲ್ಯೂಟ್ ಹೊಡೆಯಲೇಬೇಕೆಂಬ ಮನೋಸ್ಥಿಿತಿಯವರು. ಯಾರು ಸಲ್ಯೂಟ್ ಹೊಡಿತಾನೋ ಅದೇ ಅವನ ಉದ್ಯೋೋಗ ಭದ್ರತೆ ಮತ್ತು ಸಂಬಳದೇರಿಕೆಯ ಮಾನದಂಡವಾಗಿರುತ್ತದೆ. ಆದರೆ, ಸತ್ಯವಿದಲ್ಲ. ಶಿಕ್ಷಕನೊಬ್ಬನ ನಿಜವಾದ ಕಮಿಟ್‌ಮೆಂಟ್ ಅಥವಾ ಬದ್ಧತೆಯಿರಬೇಕಾದುದು ವಿದ್ಯಾಾರ್ಥಿಗೆ ಸಂಸ್ಥೆೆಗೆ, ವಿದ್ಯಾಾರ್ಥಿಗೆ ಪೋಷಕರಿಗೆ ತೋರಿಕೆಯ ಬದ್ಧತೆಯ ನಾಟಕವಾಡುತ್ತಾಾ ಸಂಸ್ಥೆೆಗಳನ್ನು ಸ್ವಾಾರ್ಥಕ್ಕೆೆ ಎಷ್ಟು ಸಾಧ್ಯವೋ ಅಷ್ಟೂ ರೀತಿಯಲ್ಲಿ ಬಳಸಿಕೊಳ್ಳುವವರಿದ್ದಾರೆ. ಲಕ್ಷಗಟ್ಟಲೆ ಫೀಸು ಕೊಡುವ ಪೋಷಕರು ಇಂಥ ಶಾಲೆಗಳಲ್ಲಿ ಪ್ರಭುತ್ವವನ್ನು ಸ್ಥಾಾಪಿಸ ಬಯಸುವುದು ತಪ್ಪುು ಅಂತ ಅನಿಸಲಾರದು. ಶಿಕ್ಷಕ ಅಂಥ ಪೋಷಕರಿಗೂ ಬದ್ಧತೆಯ ನಾಟಕವಾಡಬೇಕಾಗುತ್ತದೆ. ವರ್ತಮಾನದ ಈ ಎಲ್ಲಾ ಒತ್ತಡಗಳು ಸೃಷ್ಟಿಿಸುವ ಬಿಕ್ಕಟ್ಟಿಿನ ಸನ್ನಿಿವೇಶದಲ್ಲಿ ಶಿಕ್ಷಕ ವೃತ್ತಿಿಗೆ ಕಮಿಟೆಡ್ ಆಗಲು ಸಾಧ್ಯವಾಗುವುದಾದರೂ ಹೇಗೆ? ಶಿಕ್ಷಣ ವ್ಯವಸ್ಥೆೆಯ ಒಟ್ಟೂ ನಡೆಯೇ ಹಳಿ ತಪ್ಪಿಿದ್ದರಿಂದ ಎಂಬುದು ಕೇವಲ ಪ್ರಹಸನವಾಗೇ ನಡೆಯುತ್ತಿಿದೆ. ಅಷ್ಟಕ್ಕೂ ಈ ಕಮಿಟ್‌ಮೆಂಟ್ ಎಂಬುದು ಎಲ್ಲಾ ಕ್ಷೇತ್ರದಲ್ಲೂ ಮರೆಯಾಗಿ ಹೋಗಿದೆ. ಪಿಯುಸಿಯಲ್ಲಿ ಒಳ್ಳೆೆಯ ಕಾಲೇಜಿಗೆ (ಹೆಚ್ಚು ಫೀಸು ತಗೊಳ್ಳುವ ಕಾಲೇಜು ಒಳ್ಳೆೆಯದೆಂಬ ಮನಸ್ಥಿಿತಿ) ಸೇರಬೇಕಾದರೆ ಉತ್ತಮ ಅಂಕಗಳು ಬೇಕು, ಇಲ್ಲವಾದರೆ ಹೆಚ್ಚು ಹಣ ನೀಡಬೇಕು. ಈ ಅನಿವಾರ್ಯತೆಯಿಂದ ಹೆತ್ತವರು ಅಂಕಕ್ಕೇ ಪ್ರಾಾಧಾನ್ಯ ಕೊಡುವುದರಿಂದ ಶಿಕ್ಷಕರಲ್ಲಿ ವೃತ್ತಿಿ ಬದ್ಧತೆಯೆಂಬುದು ಸೊರಗುತ್ತಿಿದೆ. ಬೋಧನೆಗೆ ಹೆಚ್ಚಿಿನ ಓದು ಅನಗತ್ಯವೆನಿಸಿ ಇರುವ ಜ್ಞಾನದಲ್ಲೇ ಬೋಧಿಸುವ ವಾತಾವರಣ ಬೆಳೆದಿದೆ.

ಪುಸ್ತಕಗಳನ್ನು ಅಭ್ಯಾಾಸ ಅಥವಾ ಹವ್ಯಾಾಸ ಶಿಕ್ಷಕರಲ್ಲೂ ವಿದ್ಯಾಾರ್ಥಿಗಳಲ್ಲೂ ಕಡಿಮೆಯಾಗುತ್ತಿಿರುವುದು ಈ ಕಾರಣದಿಂದಾಗಿ. ತರಗತಿಯಲ್ಲಿ ಪಾಠಮಾಡುವ ಶಿಕ್ಷಕನನ್ನು ಯಾವುದೋ ವಿಚಾರಣೆಗೆ ಅಥವಾ ಅನನ್ಯ ಕಾರ್ಯ ನಿಮಿತ್ತ ಹೊರಬರುವಂತೆ ಮಾಡುವ ಮೇಲಧಿಕಾರಿಗಳ ಮೇಲೆ ಕ್ರಿಿಮಿನಲ್ ಮೊಕದ್ದಮೆ ಹಾಕುವಂಥ ಹಕ್ಕಿಿನ ಕಾನೂನು ಆ ಶಿಕ್ಷಕನಿಗೆ ಇದ್ದರೆ ಎಷ್ಟೋೋ ಶಾಲೆಗಳಲ್ಲಿ ಪಾಠ ಬೋಧನೆ ಸುಗಮವಾಗಬಹುದು. ಶಿಕ್ಷಕರೂ ಈ ಬದ್ಧತೆಯನ್ನು ತರಗತಿಯಲ್ಲಿ ಹೊಂದಿರಬೇಕಾಗುತ್ತದೆ. ತಾನು ಬೋಧಿಸುವ ವಿದ್ಯಾಾರ್ಥಿ ಯಾವ ಜಾತಿ, ಯಾವ ಮನೆತನದವ, ಇವನ ತಂದೆ-ತಾಯಿಗಳಾರು, ಅವರ ಹಿನ್ನೆೆಲೆಯೇನು-ಎಂಬುದರ ಕಡೆಗೆ ಗಮನ ಹರಿಸದೆ ಇವನು ನನ್ನ ವಿದ್ಯಾಾರ್ಥಿಯೆಂ ದಷ್ಟೇ ಪರಿಗಣಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬದ್ಧತೆಯನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕಾಗುತ್ತದೆ. ಶಾಲೆಯ ಆಂತರಿಕವಾದ ಶೈಕ್ಷಣಿಕ ಆಡಳಿತ ನೀತಿಯು ಶಿಕ್ಷಕರ ಬದ್ಧತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ವೇತನ ತಾರತಮ್ಯ, ಕೆಲಸ ಹಂಚುವಿಕೆಯಲ್ಲಿ ಪಕ್ಷಪಾತ, ಜಾತೀಯತೆ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಶಿಕ್ಷಕನ ಪ್ರತಿಭೆಯನ್ನು ಗುರುತಿಸದಿರುವುದು, ಸುಳ್ಳು ಅಥವಾ ತಪ್ಪುು ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡುವುದು. ಹೀಗಿರುವೆಡೆಯೆಲ್ಲ ಶಿಕ್ಷಕ ತನ್ನ ಬದ್ಧತೆಯನ್ನು ನಾಟಕೀಯವಾಗಿ ತೋರ್ಪಡಿಸುತ್ತಾಾ ಮೇಲಧಿಕಾರಿಗಳನ್ನು ಮುಂದಾಗುತ್ತಾಾನೆ. ಸರಕಾರಿ ಶಾಲೆಗಳಲ್ಲಿಯಂತೆ ಖಾಸಗಿ ಶಾಲೆಗಳಲ್ಲೂ ಇಂಥ ನಾಟಕಗಳು ಸಾಮಾನ್ಯವಾಗಿರುತ್ತದೆ. ಅಲ್ಲಿ ಒಬ್ಬ ಶಿಕ್ಷಕನ ಬದ್ಧತೆಯ ಅಸ್ತಿಿತ್ವವಿರುವುದು ಪಾಲಕರಿಂದ ಯಾವ ದೂರು ಬರದಂತೆ ಎಚ್ಚರವಹಿಸುವುದರಲ್ಲಿ, ತನ್ನ ವಿದ್ಯಾಾರ್ಥಿಗಳನ್ನೇ ಓಲೈಸುವುದರಲ್ಲಿ, ಮುಖವಾಡ ಧರಿಸಿ ಮ್ಯಾಾನೇಜ್ಮೆೆಂಟನ್ನು ತೃಪ್ತಿಿಗೊಳಿಸುವುದರಲ್ಲಿ. ಆದರೆ, ಶಿಕ್ಷಕನೊಬ್ಬನ ನಿಜವಾದ ಬದ್ಧತೆಯಿರಬೇಕಾದ್ದು ವಿದ್ಯಾಾರ್ಥಿಯ ಬಗ್ಗೆೆ, ಅನ್ನ ನೀಡುವ ಶಾಲೆಯ ಬಗ್ಗೆೆ. ಆದರೆ, ಲಕ್ಷಗಟ್ಟಲೆ ಸುರಿದು ತಮ್ಮ ಪ್ರಭುತ್ವ ಸ್ಥಾಾಪಿಸಿಕೊಳ್ಳುವ ಪೋಷಕರಿಂದಾಗಿಯೂ ಶಿಕ್ಷಕನ ಬದ್ಧತೆ ಕ್ಷೀಣವಾಗುತ್ತದೆ. ಯಾವುದಕ್ಕೂ ಹೆದರಬೇಕಾದ ಕಾಲದಲ್ಲೂ ಹಿಂದಿನ ಶಿಕ್ಷಕರಲ್ಲಿ ಬದ್ಧತೆಯೆಂಬುದು ತರಗತಿಯಾಚೆಯೂ ಇತ್ತು. ತನ್ನ ವಿದ್ಯಾಾರ್ಥಿ ಸಮಾಜದಲ್ಲಿ ಒಳ್ಳೆೆಯ ಹೆಸರನ್ನು ಪಡೆಯಬೇಕೆಂಬ ಬದ್ಧತೆಯನ್ನು ಹಿಂದಿನವರು ಹೊಂದಿರುವುದರಿಂದ ಅಂಥ ಅಧ್ಯಾಾಪಕರಲ್ಲಿ ಕಲಿತ ಆ ತಲೆಮಾರಿನ ವಿದ್ಯಾಾರ್ಥಿಗಳಲ್ಲಿ ತಾವೆಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಇಂದಿಗೂ ತಮ್ಮ ಗುರುಗಳ ಮೇಲಿನ ಪ್ರೀತಿ, ಭಕ್ತಿಿ, ಗೌರವ, ಘನತೆಯೇನೂ ಕಡಿಮೆಯಾಗಲಿಲ್ಲ. ಈಗಲೂ ಅವರ ಪಾಲಿಗೆ ಅಂದಿನ ಅಧ್ಯಾಾಪಕರು ಗುರುಗಳಾಗೇ ಇದ್ದಾರೆ. ಅವರೇನೇ ಹೇಳಿದರೂ, ಮಾಡಿದರೂ ಸರಿಯೆಂಬ ಧೋರಣೆ ಈ ಸಮಾಜದಲ್ಲಿ ಆಗಲೂ ಇತ್ತು, ಈಗಲೂ ಇದೆ.

ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದಾಗ ಎರಡೆರಡು ಕಾರ್ಯಗಳನ್ನು ಒಬ್ಬನೇ ಶಿಕ್ಷಕ ನಿರ್ವಹಿಸಬೇಕಾಗಿ ಬಂದ ಸಂದರ್ಭಗಳಲ್ಲಿ (ಆ ಕಾರ್ಯಗಳಿಗೆ ಅಂತ ಪ್ರತ್ಯೇಕವಾಗಿ ಹಣವನ್ನು ಕೊಡುವುದಿಲ್ಲ) ಯಾವ ಬದ್ಧತೆಯನ್ನು ಶಿಕ್ಷಕರಿಂದ ನಿರೀಕ್ಷಿಸುವುದು ಸಾಧ್ಯ? ಖಾಸಗಿ ಶಾಲೆಗಳಲ್ಲಿ ಈ ಸಮಸ್ಯೆೆ ಇರಲಾರದು. ಇದ್ದರೆ ಪಾಲಕರು ಗಲಾಟೆ ಮಾಡುತ್ತಾಾರೆ. ಆದರೆ, ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರು ಬಡವರಾಗಿರುತ್ತಾಾರೆ. ಅವರು ಇಂಥ ಗಲಾಟೆಗೆ ಬರುವ ಧೈರ್ಯ ಮಾಡುವುದಿಲ್ಲ. ಹಣದ ಮದ ಅವರಲ್ಲಿ ಇರುವುದಿಲ್ಲ. ಬದಲಿಗೆ ಊರವರೆಲ್ಲಾ ಒಂದು ತೀರ್ಮಾನಕ್ಕೆೆ ಬಂದು ಸಂಬಂಧಪಟ್ಟ ಮೇಲಧಿಕಾರಿಗೆ ದೂರು ಕೊಡುತ್ತಾಾರೆ. ತನ್ಮೂಲಕ ಸಮಸ್ಯೆೆಯನ್ನು ಬಗೆಹರಿಸಿಕೊಳ್ಳುತ್ತಾಾರೆ. ಸರಕಾರಿ ಶಾಲೆಗಳಲ್ಲಿ ಕೊರತೆ, ಅವ್ಯವಸ್ಥೆೆ, ಅಧಿಕಾರದ ದರ್ಪ ಕಾಣುತ್ತದಾದರೆ, ಖಾಸಗಿ ಶಾಲೆಗಳಲ್ಲಿ ಬಾಸಿಸಂ ಮತ್ತು ಶೋಷಣೆ ಕಾಣುತ್ತದೆ. ಎಲ್ಲವೂ ಹಣದಿಂದಲೇ ಅಳೆಯುವ ಮನಸ್ಥಿಿತಿಯವರಿಗೆ ಕಲಿಕೆಯೆಂಬುದು ಈಗ ಹೇಳಿ ಇನ್ನೊೊಂದು ಗಳಿಗೆಯಲ್ಲಿ ನೂರಕ್ಕೆೆ ನೂರು ಅಂಕ ಬಂದು ಬಿಡಬೇಕು. ಬರಲು ಸಾಧ್ಯವೇ ಇಲ್ಲವೆಂದಾದರೆ ಹೇಗಾದರೂ ಮಾಡಿ ಬರಿಸಲೇಬೇಕೆಂಬ ಮನಸ್ಥಿಿತಿಯುಳ್ಳವರಲ್ಲಿ ಶಿಕ್ಷಕರ ಬಗ್ಗೆೆ ಯಾವ ಒಳ್ಳೆೆಯ ಭಾವನೆ ಸಾಧ್ಯ? ತಮ್ಮ ಮಕ್ಕಳಿಗೆ ಕಲಿಸುವ ಶಿಕ್ಷಕನನ್ನು ತಮ್ಮ ಮಕ್ಕಳೆದುರೇ ಏಕವಚನದಲ್ಲಿ ಅಗೌರವದಿಂದ ಪ್ರಶ್ನಿಿಸುವ ಪಾಲಕರ ಮುಂದೆ ತನ್ನ ವೃತ್ತಿಿಬದ್ಧತೆಯನ್ನು ಶಿಕ್ಷಕ ಹೇಗೆ ಉಳಿಸಿಕೊಂಡಾನು? ಅವನೂ ಹಣಗಳಿಕೆಯ ಸುಲಭಮಾರ್ಗಕ್ಕೆೆ ಆತುಕೊಳ್ಳುತ್ತಾಾನೆ. ಆಗಲೇ ವೃತ್ತಿಿಬದ್ಧತೆ ಸಂಪೂರ್ಣವಾಗಿ ಸಾಯುವುದು. ಪರೋಕ್ಷವಾಗಿ ಇದು ಪರಿಣಾಮ ಬೀರುವುದು ಮಕ್ಕಳ ಕಲಿಕೆಯ ಮೇಲೆ. ಶಾಲೆಯ ಮೇಲೆ. ಶಿಕ್ಷಣ ವ್ಯವಸ್ಥೆೆಯ ಮೇಲೆ, ಯಾವ ಶಿಕ್ಷಕನೂ ವೃತ್ತಿಿ ಬದ್ಧತೆಯನ್ನು ಅಷ್ಟು ಸುಲಭವಾಗಿ ಕಳೆದುಕೊಳ್ಳಲಾರ.

ಕಲಿಕೆಯಲ್ಲಿ ಕಳ್ಳಬುದ್ಧಿಿಯ ವಿದ್ಯಾಾರ್ಥಿಯಿರಬಹುದು, ಆದರೆ, ಬೋಧನೆಯಲ್ಲಿ ಶಿಕ್ಷಕನಿರಲಾರ. ಇದ್ದರೂ ಸಾವಿರಕ್ಕೊೊಂದಿರಬಹುದಷ್ಟೆೆ. ಸಿಲೆಬಸ್ ಮುಗಿಸಬೇಕು, ಪುನರಾವರ್ತನೆ ಮಾಡಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸಬೇಕು, ತಾನು ಬೋಧಿಸುವ ವಿಷಯದಲ್ಲಿ ಉತ್ತಮ ಅಂಕಗಳನ್ನು ಮಕ್ಕಳಿಂದ ತೆಗೆಯಿಸಬೇಕು, ಪೋಷಕರಿಗೆ ಅವರ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆೆ ಹೇಳಬೇಕು, ತನ್ನ ಶಾಲೆಯು ಅತ್ಯುತ್ತಮ ಶ್ರೇಣಿಯಲ್ಲಿರಬೇಕೆಂಬ ಹಂಬಲದಲ್ಲೇ ಶೈಕ್ಷಣಿಕ ವರ್ಷದುದ್ದಕ್ಕೂ ಚಿಂತಿಸುವ ಶಿಕ್ಷಕರ ಬದ್ಧತೆಯನ್ನು ಪ್ರಶ್ನಿಿಸಲು ಯಾರಿಂದಲೂ ಸಾಧ್ಯವಿಲ್ಲ. (ಒಂದು ವಿಚಾರವನ್ನು ಇಲ್ಲಿ ಹೇಳಬೇಕು; ಒಬ್ಬ ವ್ಯಕ್ತಿಿಯ ಕಲಿಕೆಯ ಸಾಮರ್ಥ್ಯವು ಸುಮಾರು ಮೂವತ್ತು-ಮೂವತ್ತೈದು ವರ್ಷಗಳ ಅನಂತರ ಬರುತ್ತದೆ. ಆ ವಯಸ್ಸಿಿಗೆ ಬರುವಷ್ಟರಲ್ಲಿ ಒಂದು ಧೋರಣೆ ಅನುಭವ ಸಹಜವಾಗಿಯೇ ರೂಪುಗೊಂಡಿರುತ್ತದೆ. ಆಮೇಲಿನ ಕಲಿಕೆಯಲ್ಲಿ ಮಾಹಿತಿಗಳ ಸಂಗ್ರಹದಲ್ಲಿ ವ್ಯತ್ಯಾಾಸವಾಗಬಹುದೇ ಹೊರತು ಧೋರಣೆಗಳಲ್ಲಲ್ಲ. ರೂಪಿತಗೊಂಡ ಧೋರಣೆಗಳಲ್ಲಿ ಕಾಣುವ ವ್ಯಕ್ತಿಿತ್ವಾಾಂಶಗಳು ವೃತ್ತಿಿಯ ಮೇಲೂ ಪರಿಣಾಮ ಬೀರುತ್ತವೆ. ಸಮಾಜದ ಆಲೋಚನೆಗಳು, ಸಂಬಳ, ಸ್ಥಾಾನಮಾನ, ನಡೆಸಿಕೊಳ್ಳುವ ರೀತಿ, ಜಾತೀಯತೆ, ಕೆಲಸಕ್ಕೆೆ ಸಿಗುವ ಗೌರವ, ಮೈಗಳ್ಳತನ-ಇವೆಲ್ಲವೂ ಶಿಕ್ಷಕರಾದ ಮೇಲೂ ವ್ಯಕ್ತಿಿತ್ವದ ಮೇಲೆ, ವೃತ್ತಿಿಯ ಮೇಲೆ ಪರಿಣಾಮ ಬೀರುವಂಥವು. ಅನಾವಶ್ಯಕವಾಗಿ ಶಿಕ್ಷಕರನ್ನು ಪ್ರತಿಯೊಂದಕ್ಕೂ ದೂಷಿಸುತ್ತಾಾ ಹೋದರೆ ತರಗತಿಯೊಳಗಿನ ವರ್ತನೆಗಳು ಅಂಥಾದ್ದೇನೂ ಪರಿಣಾಮವನ್ನು ಉಂಟು ಮಾಡಲಾರದು. ಇದು ಸಮಾಜಕ್ಕೆೆ, ದೇಶಕ್ಕೆೆ ವಿಹಿತವಲ್ಲ ಶಿಕ್ಷಕನಿಗೆ ಪರ್ಯಾಯವೆಂಬುದನ್ನು ಸೃಷ್ಟಿಿಸಲು ಸಾಧ್ಯವಾಗಿಲ್ಲ, ಸಾಧ್ಯವಾಗುವುದೂ ಇಲ್ಲ) ಪರಿಸ್ಥಿಿತಿ, ಸಂದರ್ಭ, ಸನ್ನಿಿವೇಶಗಳು ಸೃಷ್ಟಿಿಸುವ ಬಿಕ್ಕಟ್ಟು, ಶಿಕ್ಷಣ ವ್ಯವಸ್ಥೆೆ, ಶೈಕ್ಷಣಿಕ ಆಡಳಿತ ನೀತಿಗಳು, ಮೇಲಧಿಕಾರಿಗಳ ಕಣ್ಣಿಿಗೆ ಗುರಿಯಾಗುವುದು, ಅವರ ಮರ್ಜಿಗೆ ಬಲಿಯಾಗುವುದು, ಶಿಕ್ಷಕರನ್ನು ಸಮಾಜ ನಡೆಸಿಕೊಳ್ಳುವ ಬಗೆಯಿಂದಾಗಿ ಶಿಕ್ಷಕನಲ್ಲಿ ವೃತ್ತಿಿ ಬದ್ಧತೆ ಮತ್ತು ಗೌರವ ಬಲಹೀನವಾಗುತ್ತದೆಯೇ ಹೊರತು ಅನ್ಯಕಾರಣಗಳಿಂದಲ್ಲ. ಶಿಕ್ಷಣ ವ್ಯವಸ್ಥೆೆಯೇ ಶುದ್ಧ ವ್ಯವಹಾರದ ದೃಷ್ಟಿಿಯಲ್ಲಿ ಎಲ್ಲೆಡೆಯೂ ಇದಕ್ಕೆೆ ಪೂರಕವಾಗಿ ಸ್ಪಂದಿಸುತ್ತಿಿರುವುದರಿಂದ ಶಿಕ್ಷಣ ವ್ಯವಸ್ಥೆೆ ಅಥವಾ ಶಿಕ್ಷಕರು ಅಂತಲ್ಲ, ಎಲ್ಲಾ ವಿಧದಲ್ಲೂ ವೃತ್ತಿಿಬದ್ಧತೆಯೆಂಬುದು ಮಾಯವಾಗುತ್ತಿಿದೆ. ಎಲ್ಲಿ ನೋಡಿದರೂ ಹೊಲಸು ರಾಜಕೀಯದ ಛಾಯೆಯೇ ಕಾಣುತ್ತಿಿರುವುದು ನಮ್ಮ ನಡುವಿನ ದುರಂತ.

Leave a Reply

Your email address will not be published. Required fields are marked *