ಪ್ರಸ್ತುತ
ರಮಾನಂದ ಶರ್ಮಾ
ಪಕ್ಷದಲ್ಲಿ ಅಲ್ಲಲ್ಲಿ ಮೆಲು ಧ್ವನಿಯಲ್ಲಿ ಅಪಸ್ವರಗಳು ಮತ್ತು ಅಡ್ಡ ರಾಗಗಳು ಕೇಳಿ ಬರುತ್ತಿವೆ. ಮೋದಿ ಮತ್ತು ಸಂಘಪ ರಿವಾರದ ಮಧ್ಯೆ ಏನೋ ಗುಸು ಗುಸು ಕೇಳಿಬರುತ್ತಿದೆ. ದೆಹಲಿ ಮೂಲದ ಹಿರಿಯ ಪತ್ರಕರ್ತರೊಬ್ಬರು ಈ ನಿಟ್ಟಿನಲ್ಲಿ ಇತ್ತೀಚೆಗೆ ಸುದೀರ್ಘವಾಗಿ ಬರೆದೆ ಬೆಳಕು ಚೆಲ್ಲಿzರೆ. ಇವರಿಬ್ಬರ ಮಧ್ಯೆ ಮೊದಲಿನ ಅತ್ಮೀಯ ಸಂಬಂಧ ಇಲ್ಲವೇ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ.
ಸಂಸತ್ ಚುನಾವಣೆ ಮುಗಿದು ತಿಂಗಳಾಗಿದೆ. ಹೊಸ ಸರಕಾರ ಅಧಿಕಾರ ವಹಿಸಿಕೊಂಡಿದೆ. ರಾಜಕೀಯ ಪಕ್ಷಗಳು ತಮ್ಮ ಸೋಲು ಗೆಲುವಿನ ಪರಾಮರ್ಶೆಯನ್ನು ಮುಗಿಸಿ ತಾವೆಲ್ಲಿ ಎಡವಿದ್ದೇವೆ ಎಂದು ತಿಳಿದು ಮುಂದಿನ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಲು ಚಿಂತನೆ ನಡೆಸಿದ್ದಾರೆ. ಕೇಂದ್ರದಲ್ಲಿನ ಹೊಸ ಸರಕಾರ ತನ್ನ ಮುಂದಿನ ಯೋಜನೆಗಳ ಬಗೆಗೆ ಸಮಾಲೋಚನೆ ನಡೆಸಿದೆ. ಆದರೆ, ಎರಡು ಮುಖ್ಯ ರಾಜಕೀಯ ಪಕ್ಷಗಳಲ್ಲಿ ಒಂದು ರೀತಿಯ ಹೇಳಲಾಗದ, ಅರಗಿಸಿಕೊಳ್ಳಲಾಗದ ತಳಮಳ ಮತ್ತು ಕಸಿವಿಸಿ ದಿನೇದಿನೇ ಹೆಚ್ಚುತ್ತಿದೆ.
ಭಾರತೀಯ ಜನತಾ ಪಕ್ಷವು ಮೂರನೇ ಬಾರಿ ದೆಹಲಿಯಲ್ಲಿ ಗದ್ದುಗೆ ಏರಿದೆ.
ಅದರೆ, ಅದು ತನ್ನ ಕಾಲ ಮೇಲೆ ತಾನು ಕೂರಲಾಗದೇ ಸಮ್ಮಿಶ್ರ ಸರಕಾರ ನಡೆಸಿಕೊಂಡು ಮಿತ್ರಪಕ್ಷಗಳ ಮರ್ಜಿಯ ಮೇಲೆ ಸರಕಾರ ನಡೆಸುತ್ತಿದೆ. ಮಹತ್ವಾಕಾಂಕ್ಷೆಯ ಬಹುಮತ ಪಡೆಯುವ ಅದರ ಕನಸು ನುಚ್ಚು ನೂರಾಗಿ ಸಮ್ಮಿಶ್ರ ಸರಕಾರ ನಡೆಸುವ ಅನಿವಾರ್ಯತೆಯಲ್ಲಿದೆ. ಸಮ್ಮಿಶ್ರ ಸರಕಾರವನ್ನು ನಡೆಸಿ ಕೊಂಡು ಹೋಗುವ ವಾಜಪೇಯಿಯವರ ಚಾಕಚಕ್ಯತೆ ತಾನು ಹೋಗಿದ್ದೇ ದಾರಿ ಎಂದು ನಂಬುವ ಮತ್ತು ತನ್ನದೇ ಫೈನಲ್ ಎನ್ನುವ ಮೋದಿಯವರಲ್ಲಿದೆಯೇ ಎನ್ನುವುದು ಅಗ್ನಿ ಪರೀಕ್ಷೆಗೆ ಒಳಗಾಗುತ್ತಿದೆ.
ಮೈತ್ರಿ ಅಥವಾ ಸಮ್ಮಿಶ್ರ ಸರಕಾರ ನಡೆಸಿ ಕೊಂಡು ಹೋಗುವುದು ಮೇಲುನೋಟಕ್ಕೆ ಕಾಣುವಷ್ಟು ಸುಲಭವಲ್ಲ. ಇದು ತಂತಿಯ ಮೇಲಿನ ನಡಿಗೆ. ಅರಂಭದ ಹನಿಮೂನ್ ಪಿರಿಯಡ್‌ನಲ್ಲಿ ಗೊಂದಲ ಕಾಣದಿರಬಹುದು. ಅದರೆ, ದಿನಗಳು ಕಳೆದಂತೆ ಪರಿಸ್ಥಿತಿ ಬದಲಾಗುತ್ತಿರುತ್ತದೆ. ಕಳೆದ ಹತ್ತು ವಷ ಗಳಲ್ಲಿ ಬಿಜೆಪಿ ತನ್ನ ಅಜೆಂಡಾವನ್ನು ಬುಲ್‌ಡೋಜರ್ ರೀತಿ ನಡೆಸಿಕೊಂಡು ಹೋಗಿತ್ತು. ಆದರೆ, ಇನ್ನು ಈ ಓಟ ನಿರಂತರ ಅಡೆತಡೆಗಳಿಗೆ ಸಿಲುಕುವುದನ್ನು ಅಲ್ಲಗೆಳೆಯಲಾಗುವುದಿಲ್ಲ. ಮೈತ್ರಿ ಕೂಟದ ಅಂಗಪಕ್ಷಗಳೂ ಅಜೆಂಡಾಗಳನ್ನು ಹೊಂದಿದ್ದು, ಬಿಜೆಪಿ ಈ ಅಜಂಡಾಗಳೊಡನೆ ತನ್ನ ಅಜೆಂಡಾವನ್ನು ಸಮೀಕರಿಸುವಾಗ ಹಲವು ವಿಷಯಗಳಲ್ಲಿ ರಾಜಿಮಾಡಿಕೊಳ್ಳಬೇಕಾಗುತ್ತದೆ. ಇಂತಹ ರಾಜಿ ಒಂದು ಹಂತದವರೆಗೆ ನಡೆಯುತ್ತಿದ್ದು, ಒಂದು
ಘಟ್ಟದಲ್ಲಿ ಪೂರ್ಣವಿರಾಮ ಸಾಧ್ಯತೆ ಅನಿವಾರ್ಯವಾಗುತ್ತದೆ. ಬಜೆಟ್ ಅಽವೇಶನದಲ್ಲಿ ಮೈತ್ರಿ ಸರಕಾರದ ಮೊದಲ ಟೆಸ್ಟ್ ಈ ನಿಟ್ಟಿನಲ್ಲಿ ನಡೆಯುತ್ತಿದ್ದು, ಇದರಲ್ಲಿ ತೇರ್ಗಡೆಯಾಗುವುದು
ಬಿಜೆಪಿ ಎಷ್ಟರ ಮಟ್ಟಿಗೆ ಮೈತ್ರಿ ಪಕ್ಷಗಳ ಬೇಡಿಕೆಯನ್ನು ಮನ್ನಿಸುತ್ತದೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ.
ಮೈತ್ರಿ ಪಕ್ಷಗಳು ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಕೆಲವು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟರೂ, ಹೆಚ್ಚಿನ ಒತ್ತಡ ಹೇರಿಲ್ಲ. ಬಜೆಟ್ ಪೂರ್ವದಲ್ಲಿ ನಾಯ್ಡು ಮತ್ತು ನಿತಿಶ್ ಕುಮಾರ ತಮ್ಮ ರಾಜ್ಯಗಳಿಗೆ ೩೦,೦೦೦-೫೦,೦೦೦ ಕೋಟಿ ವಿಶೇಷ ಅನುದಾನದ ಬೇಡಿಕೆ ಇಟ್ಟಿದ್ದು. ಅಕಸ್ಮಾತ್ ಬಜೆಟ್‌ನಲ್ಲಿ ನಿರೀಕ್ಷಿತ ಸ್ಪಂದನೆ ದೊರಕದಿದ್ದರೆ ಮೈತ್ರಿಯಲ್ಲಿ ಬಿರುಕು ಕಾಣುವುದನ್ನು ಅಲ್ಲಗೆಳೆಯಲಾಗದು. ಇದು ಅವರ ಹೊಸ ಬೇಡಿಕೆಯಲ್ಲ. ಇವರು ಬಹುಕಾಲದಿಂದ ಈ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದಿ ಟ್ಟಿದ್ದು, ಈಗ ರಾಜಕೀಯ ವಾತಾವರಣ ಅವರಿಗೆ ಪಕ್ವವಾಗಿದ್ದು, ಬೇಡಿದ್ದನ್ನು ದಕ್ಕಿಸಿಕೊಳ್ಳಲು ಸುಸಮಯವಾಗಿದೆ. ಅಕಸ್ಮಾತ್ ಮೋದಿಯವರು ಈ ಬೇಡಿಕೆಗಳನ್ನು ಮನ್ನಿಸಿದರೆ, ಇದು ಒಂದು ರೀತಿಯಲ್ಲಿ ಸಮೂಹ ಸನ್ನಿಯಂತೆ ಇದ್ದು, ಬೇರೆ ರಾಜ್ಯಗಳೂ ಸರಕಾರದ ಬಾಗಿಲನ್ನು ಈ ನಿಟ್ಟಿನಲ್ಲಿ ಬಡಿಯುವುದು ನಿಶ್ಚಿತ.
ಮೋದಿಯವರಿಗೆ ಇದು ಒಂದು ರೀತಿಯಲ್ಲಿ ‘ಇತ್ತ ಪುಲಿ ಅತ್ತ ಧರಿ’ ಎನ್ನುವಂತೆ ತ್ರಿಶಂಕು ಸ್ಥಿತಿಯ ಅನುಭವವಾಗುವುದು ನಿಶ್ಚಿತ. ಇತ್ತೀಚಿನವರೆಗೆ ಮೋದಿ ಸರಕಾರ ಧ್ವನಿ ಮತದಿಂದ ತನ್ನ
ಎಲ್ಲಾ ಮಸೂದೆಗಳನ್ನು ಅಂಗೀಕರಿಸುತ್ತಿತ್ತು. ಮೂರನೇ ಎರಡು ಬಹುಮತವೂ ಸುಲಭವಾಗಿ ದೊರಕುತ್ತಿತ್ತು. ಅದರೆ, ಮುಂದಿನ ದಿನಗಳಲ್ಲಿ ಇದು ಕಷ್ಟ ಸಾಧ್ಯ. ಸಿಎಎ ಅನುಷ್ಟಾನದ ಬಗೆಗೆ ಮೈತ್ರಿ ಪಕ್ಷಗಳ ಸಹಮತಿ ದೊರಕಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಮತ್ತು ಬ್ಯಾಂಕುಗಳ ಖಾಸಗೀಕರಣದ ಬಗೆಗೆ ಅವರ ಒಪ್ಪಿಗೆ ದೊರೆಯುವುದರ ಬಗೆಗೆ ಅನುಮಾನ ಇದೆ. ಇದನ್ನು ಮೋದಿಯ ವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಹಾಗೆಯೇ ಪಕ್ಷದಲ್ಲಿ ಅಲ್ಲಲ್ಲಿ ಮೆಲು ಧ್ವನಿಯಲ್ಲಿ ಅಪಸ್ವರಗಳು ಮತ್ತು ಅಡ್ಡ ರಾಗಗಳು ಕೇಳಿ ಬರುತ್ತಿವೆ. ಮೋದಿ ಮತ್ತು ಸಂಘಪ ರಿವಾರದ ಮಧ್ಯೆ ಏನೋ ಗುಸು ಗುಸು ಕೇಳಿಬರುತ್ತಿದೆ. ದೆಹಲಿ
ಮೂಲದ ಹಿರಿಯ ಪತ್ರಕರ್ತರೊಬ್ಬರು ಈ ನಿಟ್ಟಿನಲ್ಲಿ ಇತ್ತೀಚೆಗೆ ಸುದೀರ್ಘವಾಗಿ ಬರೆದೆ ಬೆಳಕು ಚೆಲ್ಲಿzರೆ. ಇವರಿಬ್ಬರ ಮಧ್ಯೆ ಮೊದಲಿನ ಅತ್ಮೀಯ ಸಂಬಂಧ ಇಲ್ಲವೇ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಹೇಳಿದರೆನ್ನಲಾದ ನಾವು ಬೆಳೆದಿದ್ದೇವೆ, ನಮ್ಮ ಕಾಲ ಮೇಲೆ ನಾವು ನಿಲ್ಲುತ್ತೇವೆ, ನಮಗಿನ್ನು ಸಂಘದ ಅವಶ್ಯಕತೆ ಇಲ್ಲ
ಎನ್ನುವ ಮಾತು ಭಾರೀ ಚರ್ಚೆಗೆ ಆಸ್ಪದ ನೀಡಿದೆ. ಬಿಜೆಪಿ ಪಕ್ಷ ದವರಿಗೆ ಅಹಂಕಾರ ಎನ್ನುವ ಪರಿವಾರದವರೊಬ್ಬರ ಹೇಳಿಕೆ, ಅತಿಯಾದ ಅತ್ಮವಿಶ್ವಾಸ ಕೈಕೊಟ್ಟಿತು ಎನ್ನುವ ಯೋಗಿ ಆದಿ
ತ್ಯನಾಥರ ಹೇಳಿಕೆ, ಬಿಜೆಪಿಯು ಕಾಂಗ್ರೆಸ್ ರೀತಿಯಲ್ಲಿ ಕೆಲಸ ಮಾಡಬಾರದು ಎನ್ನುವ ನಿತಿನ್ ಗಡ್ಕರಿ ಹೇಳಿಕೆ, ಏಳು ಬಾರಿ ಸಂಸದನಾದ ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ
ಎನ್ನುವ ರಮೇಶ ಜಿಗಜಿಣಗಿಯವರ ಆಕ್ರೋಶ, ಪಕ್ಷದ ಕಾರ್ಯವೈಖರಿ ಬಗೆಗೆ ಮೆಲು ಧ್ವನಿಯಲ್ಲಿ ಸದಾನಂದ ಗೌಡರ ಅಸಹನೆ, ಯಡಿಯೂರಪ್ಪ ಕುಟುಂಬ -ಈಶ್ವರಪ್ಪ ಮತ್ತು ಯತ್ನಾಳ್
-ವಿಜೆಯೇಂದ್ರರ ಮಧ್ಯ ಇನ್ನೂ ಬಗೆಹರಿಯದ ಮುನಿಸು.
೨೦೨೭ ರಲ್ಲಿ ಮಧ್ಯ ಪ್ರದೇಶದಲ್ಲಿ ಬಿಜೆಪಿಗೆ ಅಧಿಕಾರ ಸಂದೇಹ ಎನ್ನುವ ಅಲ್ಲಿನ ಮಾಜಿ ಮಂತ್ರಿಗಳೊಬ್ಬರ ಆತಂಕ, ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯು
ವಿರೋಽ ಪಕ್ಷದ ಸ್ಥಾನದಲ್ಲಿ ಎನ್ನುವ ಅಲ್ಲಿನ ಪ್ರಮುಖ ಬಿಜೆಪಿ ಧುರೀಣರ ಹೇಳಿಕೆ, ಇತ್ತೀಚೆಗೆ ನಡೆದ ೧೩ ವಿಧಾನಸಭಾ ಉಪಚುನಾವ ಣೆಯಲ್ಲಿ ಕೇವಲ ಮೂರರಲ್ಲಿ ಮಾತ್ರ ಜಯ ಇವು
ಬಿಜೆಪಿಯ ಹಿರಿಯ ನಾಯಕರು ಎದ್ದು ಕುಳಿತು ಚಿಂತಿಸುವಂತೆ ಮಾಡಿದೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಸಂಸತ್ ಚುನಾವಣೆಯಲ್ಲಿ ಅಯೋಧ್ಯೆಯನ್ನು
ಕಳೆದುಕೊಂಡು ಮುಜುಗರ ಅನುಭವಿಸಿದ ಬೆನ್ನ ಕಳೆದ ವಾರದ ವಿಧಾನ ಸಭಾ ಚುನಾವಣೆಯಲ್ಲಿ ಕೇದಾರನಾಥ ಕ್ಷೇತ್ರವನ್ನು ಕಳೆದುಕೊಂಡಿದ್ದು ಪಕ್ಷಕ್ಕೆ ಮಾರ್ಮಿಕ ಪೆಟ್ಟು ಎನ್ನಲಾಗುತ್ತದೆ. ಈ ಉಪಚುನಾವಣೆಗಳ ಫಲಿತಾಂಶವನ್ನು ನೋಡಿ ಭಿನ್ನಮತೀಯ ನಾಯಕ ಡಾ.ಸ್ವಾಮಿಯವರ ಟೈಟಾನ್ ನಂತೆ ಬಿಜೆಪಿ ಮುಳುಗುತ್ತಿದೆ.
ಬಿಜೆಪಿಯ ಅಂತ್ಯ ಕಾಲ ಸಮೀಪಿಸಿದೆ ಎನ್ನುವ ಪ್ರತಿಕ್ರಿಯೆ ಪಕ್ಷವನ್ನು ದಿಗಿಲು ಬೀಳಿಸುವಂತೆ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ ಭಾಗವತ್ ಅವರು ಇತ್ತೀಚೆಗೆ ಲಖನೌಗೆ ಭೇಟಿ ನೀಡಿದ್ದು, ಅವರು ಯೋಗಿ ಆದಿತ್ಯನಾಥರನ್ನು ಭೇಟಿಯಾಗದಿರುವುದನ್ನು ಮಾಧ್ಯಮವು ಹೈಲೈಟ್ ಮಾಡುತ್ತಿದ್ದು, ನಾನಾ ರೀತಿಯ ಊಹಾ ಪೋಹಗಳನ್ನು ಹುಟ್ಟು ಹಾಕಿದೆ. ಹಾಗೆಯೇ ಮೋಹನ ಭಾಗವತ್‌ರ ಇನ್ನೊಂದು ಹೇಳಿಕೆ ಸ್ವ ಯಂ ಅಭಿವೃದ್ಧಿ ಹಾದಿಯಲ್ಲಿ ಒಬ್ಬ ವ್ಯಕ್ತಿ ಸೂಪರ್ ಮ್ಯಾನ್ ಆಗಬಹುದು. ಭಗವಂತ ವಿಶ್ವರೂಪ ಆಗಬಹುದು, ಅದರೆ ಮುಂದೇನು
ಎಂದು ಗೊತ್ತಿರಲ್ಲ, ಮನುಷ್ಯನಾಗಿದ್ದರೂ ಮಾನವೀಯ ಗುಣ ಗಳ ಕೊರತೆ ಇರುತ್ತದೆ. ಅದನ್ನು ಬೆಳೆಸಿಕೊಳ್ಳಬೇಕು, ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲದ ಕಾರಣ ಮನುಜರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎನ್ನುವ ಹೇಳಿಕೆ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಇದು ನನ್ನನ್ನು ಭಗವಂತನೇ ಕಳುಹಿಸಿರುವಂತೆ ಭಾಸವಾಗುತ್ತೆ ಎನ್ನುವ ಮೋದಿಯವರ ಚುನಾವಣಾ ಸಮಯದಲ್ಲಿನ ಹೇಳಿಕೆಗೆ ಪ್ರತಿಕ್ರಿಯೆ ಎಂದು ಕಾಂಗ್ರೆಸ್ ಪಕ್ಷ ದೊಡ್ಡದಾಗಿ ವಿವಾದ ಎಬ್ಬಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯರ ಮಧ್ಯೆ ಅಂತರ ಹೆಚ್ಚುತ್ತಿದ್ದು, ಬಿಜೆಪಿಯ ಶಕ್ತಿ ಕೇಂದ್ರ ಉತ್ತರ ಪ್ರದೇಶದಲ್ಲಿ ಭಿನ್ನಮತದ ಮೊಳಕೆ ಒಡೆಯುತ್ತಿರುವಂತೆ ಕಾಣುತ್ತಿದೆ. ಉತ್ತರಪ್ರದೇಶದಲ್ಲಿ ಪಕ್ಷದ ಸೋಲಿಗೆ ನಾಯಕರ ವರ್ತನೆ, ನೀರಸ ನಿರ್ವಹಣೆ, ಅಗ್ನಿಪಥ ಮತ್ತು ಸರಕಾರದ ಅಡಳಿತ ವೈಖರಿ
ಕಾರಣ ಎನ್ನುವ ರಾಜ್ಯ ಘಟಕದ ವರದಿ ಇನ್ನೊಂದು ಕಿಡಿಯನ್ನು ಹೊತ್ತಿಸಿದೆ. ಉತ್ತರ ಪ್ರದೇಶದಲ್ಲಿ ಏನಾದರೂ ಎಡವಟ್ಟಾಗಿ ಯೋಗಿಯ ಕೈಯಿಂದ ಅಽಕಾರ ತಪ್ಪಿದರೆ, ಅಖಿಲ ಭಾರತ ಮಟ್ಟದಲ್ಲಿ ಪಕ್ಷಕ್ಕೆ ಶನಿಕಾಟ ಗ್ಯಾರಂಟಿ. ಸಂಘ ಪರಿವಾರ ಮತ್ತು ಬಿಜೆಪಿ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುತ್ತಿರುವಂತೆ, ಸಂಘ ಪರಿವಾರದ ಮುಖವಾಣಿ ಎನ್ನಲಾಗುವ ಅರ್ಗನೈಸರ ಪತ್ರಿಕೆ
ಮಹಾರಾಷ್ಟ್ರದಲ್ಲಿ ಎನ್ ಡಿಎ ಸೋಲಿಗೆ ಬಿಜೆಪಿಯೇ ಕಾರಣ ಎಂದು ನೇರವಾಗಿ ದೂಷಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಯಾವ ಹೋರಾಟವೂ ಪರಿಣಾಮಕಾರಿಯಾಗಿಲ್ಲ ಮತ್ತು ತಾರ್ಕಿಕ ಅಂತ್ಯ ಕಾಣಲಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿzರಂತೆ. ಈ ಮಧ್ಯ ೨೪೫ ಸದಸ್ಯರಿರುವ ರಾಜ್ಯಸಭೆಯಲ್ಲಿ ಅದರ ಸಂಖ್ಯಾಬಲ ೧೦೧ ಕ್ಕೆ ಇಳಿದಿದ್ದು ಮಹತ್ವದ ಮಸೂದೆಗಳನ್ನು ಅನುಮೋದಿಸಿಕೊಳ್ಳುವುದು ದುಸ್ತರವಾಗಿದೆ ಎನ್ನುವ ವಾಸ್ತವ ಪಕ್ಷವನ್ನು ಚಿಂತೆಗೀಡು ಮಾಡಿದೆಯಂತೆ. ಏರಿದ್ದು ಇಳಿಯಲೇಬೇಕು ಎನ್ನುವ ತತ್ವeನ ಮತ್ತು ಹಳೆಯ ಮಾತು ಬಿಜೆಪಿಯನ್ನು ಕಾಡುತ್ತಿರುವಂತೆ ಕಾಣುತ್ತಿದೆ. ಇದು ಬಿಜೆಪಿಗೆ ತಳಮಳವಾದರೆ, ಕಾಂಗ್ರೆಸ್ ಪಕ್ಷದ ಸ್ಥಿತಿ ಮುಖ್ಯವಾಗಿ ಕರ್ನಾಟಕದಲ್ಲಿ ನಿರೀಕ್ಷೆಯಷ್ಟು ಅಹ್ಲಾದಕರವಾಗಿಲ್ಲ.
ಅಪಾರ ವಿಶ್ವಾಸವಿಟ್ಟಿದ್ದ ಪಂಚ ಗ್ಯಾರಂಟಿಗಳು ಸಂಸತ್ ಚುನಾವಣೆಯಲ್ಲಿ ಫಲ ನೀಡಲಿಲ್ಲ. ಗೌರವಾನ್ವಿತ ಸೀಟುಗಳು ದೊರಕಿದರೂ, ತೃಪ್ತಿಯಾಗಲಿಲ್ಲ. ಮೂವರು ಉಪಮುಖ್ಯಮಂತ್ರಿಗಳ ನೇಮಕ ಮತ್ತು ಮುಖ್ಯಮಂತ್ರಿ ಬದಲಾವಣೆ ಬೇಡಿಕೆಗಳು ಹೈಕಮಾಂಡ್ ಎಚ್ಚರಿಕೆ ಹೊರತಾಗಿಯೂ ಅಗಾಗ ತಲೆ ಎತ್ತುತ್ತಲೇ ಇದೆ. ಈ ನಿಟ್ಟಿನಲ್ಲಿ ಅದೆಷ್ಟು ಬಾರಿ ಹೈಕಮಾಂಡ್ ಎಚ್ಚರಿಸಿದೆಯೆನೋ? ಆಂತರಿಕ ಹೊಂದಾಣಿಕೆ ರಾಜಕಾರಣದಿಂದಾಗಿ ಪಕ್ಷ ಸೋಲನ್ನು ಅನುಭವಿಸಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿದ್ದು, ಹಲವು ಧುರೀಣರು ಇದಕ್ಕೆ ಸಹಮತಿ ವ್ಯಕ್ತ
ಮಾಡಿದ್ದಾರೆ ಮತ್ತು ಇನ್ನು ಕೆಲವರು ಅಲ್ಲಗೆಳೆದಿದ್ದಾರೆ.
ಒಟ್ಟಿನಲ್ಲಿ ಪಕ್ಷದಲ್ಲಿ ಏನೋ ಎಡವಟ್ಟು ಇದ್ದಂತೆ ಕಾಣುತ್ತದೆ. ಸಂಸತ್ ಚುನಾವಣೆ ನಂತರ ರಾಜ್ಯ ಸರಕಾರ ಬಿದ್ದು ಹೋಗುತ್ತದೆ ಎನ್ನುವ ಹುಯಿಲು ಸದ್ಯಕ್ಕೆ ದೂರವಾದಂತಿದೆ. ಆದರೆ,ಯಾವಾಗ ಬುಸ್ ಎಂದು ಹೆಡೆ ಬಿಚ್ಚಬಹುದು ಎಂದು ಹೇಳಲಾಗುತ್ತಿಲ್ಲ. ಪೆಟ್ರೋಲ್ ಮತ್ತು ಹಾಲಿನ ದರ ಏರಿಕೆಗೆ ಜನತೆ ಆಕ್ರೋಶ ವ್ಯಕ್ತವಾಗುತ್ತಿರುವಂತೆ ಸಾರಿಗೆ ದರ ಗೇರ್ ಬದಲಿಸುವ ಸಾಧ್ಯತೆಗಳು ಕಾಣುತ್ತಿದೆ. ಹಾಗೆಯೇ ಸರಕಾರಿ ನೌಕರರ ಸಂಬಳ ೨೭%ರಷ್ಟು ಹೆಚ್ಚಾಗುತ್ತಿದೆ. ಯಾವುದೇ ಸರಕಾರ ಇದ್ದರೂ ಇಂತಹ ಏರಿಕೆಗಳು ಸಹಜ. ಅದರೆ, ಜನತೆಯ ಕೊಳ್ಳುವ ಶಕ್ತಿ ಕುಂದಿದಾಗ ಆಕ್ರೋಶ ಅನಿವಾರ್ಯ ಮತ್ತು ಅದರ ಪರಿಣಾಮವನ್ನು ಸರಕಾರ ಸಹಿಸಲೇಬೇಕು.ಗ್ಯಾರಂಟಿಗಳಿಂ ದಾಗಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುವ ಕೂಗು ದೊಡ್ಡ ದಾಗುತ್ತಿದೆ.
ಸಿದ್ದರಾಮಯ್ಯನವರಿಗೆ ಇದು ಸವಾಲಾಗಿ ಪರಿಣಮಿಸಿದೆ. ಆರ್ಥಿಕ ಸ್ಥಿತಿಗತಿಯ ಬಗೆಗೆ ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ರಾಯರೆಡ್ಡಿಯವರ ಹೇಳಿಕೆ, ಅವರು ಅಂತಹ ಹೇಳಿಕೆಯನ್ನು ಅಲ್ಲಗೆಳೆದಿದ್ದರೂ ಸರಕಾರಕ್ಕೆ ಇರುಸು ಮುರಿಸು ಉಂಟು ಮಾಡಿದೆ ಮತ್ತು ನಾನಾ ರೀತಿಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸರಕಾರದ ತಲೆ ನೋವಿಗೆ ಇದು ಸಾಲದು ಎನ್ನುವಂತೆ ಕ್ಷಣಕ್ಷಣಕ್ಕೆ ತಿರುವು ಪಡೆಯುತ್ತಿರುವ ೧೮೭ ಕೋಟಿಯ ವಾಲ್ಮೀಕಿ ನಿಗಮದ ಹಗರಣ, ೫೦೦೦ ಕೋಟಿಯದು ಎನ್ನಲಾಗುತ್ತಿರುವ ಮೈಸೂರಿನ ಮುಡಾ ನಿವೇಶನ ಹಂಚಿಕೆ ಹಗರಣ, ವಕ್ಫ್ ಬೋರ್ಡ್‌ನಲ್ಲಿ ವಂಚನೆ , ಟ್ರಕ್ ಟರ್ಮಿನಲ್ ಗುತ್ತಿಗೆ ನೀಡುವಲ್ಲಿ ನಡೆದಿದೆ ಎಂದು ಹೇಳಲಾದ ಹಗರಣ, ಪ್ರವಾಸೋದ್ಯಮ ಇಲಾಖೆಯಲ್ಲಿ ನಡೆದಿದೆ ಎಂದು ವರದಿಯಾಗಿರುವ ಹಗರಣ ಮುಂತಾದವುಗಳು ರಾಜ್ಯ ರಾಜಕೀಯವನ್ನು ನಡುಗಿಸುತ್ತಿದೆ. ಈ ಪ್ರಕರಣಗಳ ನಿಟ್ಟಿನಲ್ಲಿ ಮಾಧ್ಯಮದಲ್ಲಿ ದಿನಕ್ಕೊಂದು ತಿರುವು ಕಾಣುತ್ತಿದ್ದು, ವಿಚಾರಣೆ ಹಂತದಲ್ಲಿರುವುದರಿಂದ ಇದರ ಹಿಂದಿನ ಸತ್ಯಾ ಸತ್ಯತೆ ತಿಳಿಯದು.
ಮೊದ ಮೊದಲು ಒಂದೇ ಪಕ್ಷದವರ ಹೆಸರು ಕೇಳುತ್ತಿದ್ದು, ದಿನಗಳು ಕಳೆದಂತೆ ಹೊಸ ಹೊಸ ಹೆಸರುಗಳು ಹೊರ ಬರುತ್ತಿವೆ ಮತ್ತು ಕೆಲವರ ಬಂಧನವಾಗಿದೆ. ಅಂತಿಮವಾಗಿ ವಿಚಾರಣೆ ಮುಗಿದಾಗ ಮುಗ್ದರಿಗೆ ದಂಡನೆಯಾಗ ದಿರಲಿ ಎನ್ನುವುದು ಜನತೆಯ ಆಶಯವಾಗಿರುತ್ತದೆ. ಚುನಾವಣೆಯ ನಂತರ ಸ್ವಲ್ಪ ಕಾಲ ಸ್ತಬ್ದವಾಗಿರಬೇಕಾದ ರಾಜಕೀಯದಲ್ಲಿ ದಿಢೀರ್ ಎಂದು ಚಟುವಟಿಕೆಗಳು ಕಾಣುತ್ತಿವೆ. ಮುಂದೆ ಏನೋ, ನಾಳೆ ಏನೋ ಎನ್ನುವ ತವಕ, ತಳಮಳ, ಕಸಿವಿಸಿ ಮತ್ತು ತಲ್ಲಣ ಎದ್ದು ಕಾಣುತ್ತಿದೆ. ವಿಪರ್ಯಾಸವೆಂದರೆ ಇವು ಎರಡೂ ಪಕ್ಷಗಳಲ್ಲಿ ಕಾಣುತ್ತಿದ್ದು,ಇನ್ನೊಂದು ಪಕ್ಷವನ್ನು ಬೊಟ್ಟು ಮಾಡಿ ತೋರಿಸುವಂತಿಲ್ಲ. ಕೆಲವರು ರಕ್ಷಣಾತ್ಮಕ ಆಟಆಡುವ ಪರಿಸ್ಥಿತಿ ಬಂದಂತೆ ಕಾಣುತ್ತದೆ.
(ಲೇಖಕರು : ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)