Thursday, 19th September 2024

ಭಾರತ್ ತೇರೇ ತುಕ್ಡೆ ಹೋಂಗೆ ಜಾಗದಲ್ಲಿ ಇಂದು ಭಾರತ್ ಮಾತಾ ಕೀ ಜೈ ಘೋಷಣೆ

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅಲಿಯಾಸ್ ಜೆ.ಎನ್.ಯು ಎಂದರೆ ಎಲ್ಲರಿಗೂ ನೆನಪಾಗುವುದು ದೇಶ ವಿರೋಽ ಭಾಷಣಗಳು, ಹಕೋರರು, ದಾಂಧಲೆ ಎಬ್ಬಿಸುವವರು. ಭಾರತವನ್ನು ತುಂಡು ತುಂಡು ಮಾಡಲು ಬ್ರಿಟಿಷರು ಬಳಸುತ್ತಿದ್ದ ಬ್ರಾಹ್ಮಣ ಹಾಗೂ ದಲಿತ ವಿರೋಧಿ ಅಸ ಹಿಂದೂ ಮುಸಲ್ಮಾನ್ ವಿರೋಧಿ ಅಸ್ತ್ರವನ್ನು ಸಮತೋಲನವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಭಾರತದ ಬಗ್ಗೆ ಕೆಟ್ಟದೊಂದು ಭಾವನೆಯನ್ನು ತಲೆಯಲ್ಲಿ ತುಂಬುವ ಪ್ರಯತ್ನವು ಈ ವಿಶ್ವವಿದ್ಯಾಲಯದಲ್ಲಿ ಯಗ್ಗಿಲ್ಲದೇ ದಶಕಗಳಿಂದ ನಡೆಯುತ್ತಿದೆ.

ಭಾರತ ದೇಶವು ಸ್ವತಂತ್ರ್ಯಗೊಂಡ ನಂತರದ ದಿನದಿಂದಲೂ ಶಿಕ್ಷಣ ಪದ್ಧತಿ ಎಡಪಂಥೀಯರ ಕೈಯಲ್ಲಿಯೇ ಇತ್ತು. ತಮಗಿಷ್ಟ ಬಂದಂತೆ ನಾವುಗಳು ಓದಿದ ಇತಿಹಾಸದ ಪುಸ್ತಕಗಳಲ್ಲಿ ಕಮ್ಯುನಿಸ್ಟ್ ವಾದಗಳು, ಕ್ರಿಶ್ಚಿಯನ್ನರ ಮತಾಂತರವನ್ನು ಸೇವೆಯೆಂದು ಹೇಳುವ ವೈಭವೀಕರಣದ ಕಥೆಗಳು, ಮುಸಲ್ಮಾನ್ ಜಿಹಾದಿಗಳ ನಾಯಕತ್ವವನನ್ನೇ ತುಂಬಲಾಯಿತೇ ಹೊರತು, ನಿಜ ಇತಿಹಾಸ ವನ್ನು ಹೇಳುವ ಪ್ರಯತ್ನವನ್ನು ಮಾಡಲೇ ಇಲ್ಲ.

ಸ್ವತಃ ಜವಾಹರಲಾಲ್ ನೆಹರುಗೆ ಈ ಶಿಕ್ಷಣ ಪದ್ಧತಿಯು ಇಷ್ಟವಾಗಿದ್ದರಿಂದ ಇತಿಹಾಸದ ಪಠ್ಯಪುಸ್ತಕ ಗಳಲ್ಲಿ ಮುದ್ರಿಸಲ್ಪಟ್ಟ ಸುಳ್ಳುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ನಮ್ಮ ದೇಶವನ್ನು ತುಂಡು ತುಂಡು ಮಾಡಲು ಇರುವ ಕಮ್ಯುನಿಸ್ಟ್ ವಾದ, ಕ್ರಿಶ್ಚಿಯನ್ ಮತಾಂತರ, ಮುಸಲ್ಮಾನ್ ಜಿಹಾದಿ ಮನೋಸ್ಥಿತಿಯನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬುವ ವಿಶ್ವವಿದ್ಯಾಲಯ ಜೆ.ಎನ್.ಯು ಎಂದರೆ ತಪ್ಪಿಲ್ಲ. ‘ಕಾರ್ಲ್ ಮಾರ್ಕ್ಸ್ ಚಿಂತನೆಗಳನ್ನು ಬಳಸಿಕೊಂಡು ಭಾರತದ ಸಂಸ್ಕೃತಿಯನ್ನು ಸದಾ ಟೀಕಿಸುವ ರೋಮಿಲಾ ಥಾಪರ್ ಭಾರತವು ಕಂಡಂಥ ಶ್ರೇಷ್ಠ ಲೇಖಕಿಯಂತೆ!

ಜೆ.ಎನ್ .ಯು ಶುರುವಾದಾಗಿನಿಂದಲೂ ಈಕೆ ಅಲ್ಲಿ ಪ್ರೊಫೆಸರ್ ಆಗಿದ್ದಾಳೆ. ಭಾರತದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದಂಥ ಕ್ರಿಶ್ಚಿಯನ್
ಮಿಷನರಿಗಳ ಮತಾಂತರವನ್ನು ಸರಿಯೆಂದು ಪ್ರತಿಪಾದಿಸಿದ ಇತಿಹಾಸ ಲೇಖಕಿ ಈಕೆ, ಬ್ರಾಹ್ಮಣ ಹಾಗೂ ದಲಿತನ ನಡುವಿನ
ಶೋಷಣೆಯನ್ನು ಸದಾ ಜೀವಂತವಾಗಿರಿಸಿದ ಕೀರ್ತಿ ಈಕೆಗೆ ಸಲ್ಲಬೇಕು. ಈಕೆಯು ಬರೆದಿರುವ ಇತಿಹಾಸ ವನ್ನೇ ಸರಿಯೆಂದು
ನಂಬಿಕೊಂಡ ವಿದ್ಯಾರ್ಥಿಗಳ ಬಾಯಿಯಲ್ಲಿ ದೇಶದ್ರೋಹದ ಹೇಳಿಕೆಗಳು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ
ಲೇಖಕಿಗೆ ಪ್ರಶಸ್ತಿಗಳ ಸುರಿಮಳೆಗೈದು ಈಕೆಯನ್ನು ದೊಡ್ಡ ಸಾಧಕಿಯನ್ನಾಗಿ ಮಾಡಿದ ಗೌರವ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಕ್ಕೆ ಸಲ್ಲಬೇಕು.

ಈಕೆಯ ಗರಡಿಯಲ್ಲಿ ಬೆಳೆದಂಥ ಮತ್ತೊಬ್ಬ ವಿಷಕನ್ಯೆ ಅರುಂಧತಿ ರಾಯ. ಈಕೆಯ ಮುಖವನ್ನೊಮ್ಮೆ ನೋಡಿದರೆ ಈಕೆಯ ಕೆಲಸವೇನೆಂಬುದನ್ನು ಹೇಳಬಹುದು. ಈಕೆಯು ಅಷ್ಟೇ ಸದಾ ಭಾರತ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಾ ಎಡಚರರ ಸುದ್ದಿಯಲ್ಲಿರುತ್ತಾರೆ. ೨೦೧೦ರಲ್ಲಿ ಮಾವೋವಾದಿಗಳ ಉಗ್ರವಾದವನ್ನು ಸಮರ್ಥಿಸಿಕೊಂಡ ಈಕೆ, ನಕ್ಸಲರನ್ನು ಬಂದೂಕು ಹಿಡಿದಿರುವ ಗಾಂಧಿ ಎಂದು ಕರೆದಳು. ಭಾರತದ ಹೆಮ್ಮೆಯ ಸೈನಿಕರ ಹತ್ಯೆಯನ್ನು ಬೆಂಬಲಿಸಿ ಅವರನ್ನು ಸರಕಾರದ ಏಜೆಂಟ ರೆಂದು ಕರೆದಳು, ಈಕೆಯ ಮಾತನ್ನು ಕೇಳಿದ ವಿದ್ಯಾರ್ಥಿಗಳು ನಮ್ಮ ಸೈನಿಕರ ಸಾವನ್ನು ಜೆ.ಎನ್.ಯು ಆವರಣದಲ್ಲಿ ಸಂಭ್ರಮಿಸಿದರು.

ಎಂತಹ ವಿಪರ್ಯಾಸ ನೋಡಿ, ನಕ್ಸಲರನ್ನು ಗಾಂಧಿಯೆಂದು ಈಕೆ ಒಂದೇ ಒಂದು ಸಲ ಕರೆದದ್ದು, ಈಕೆಯ ಮಾತನ್ನು ನಂಬಿ ಹಲವಾರು ಜನರು ನಕ್ಸಲರನ್ನು ಬೆಂಬಲಿಸಲು ಶುರುಮಾಡಿದ್ದರು. ಈಕೆಯ ಸಮರ್ಥನೆ ಎಷ್ಟಿತ್ತೆಂದರೆ ಈಕೆಯನ್ನು ನಕ್ಸಲರು
ಹಾಗೂ ಸರಕಾರದ ನಡುವೆ ಮಾತುಕತೆಯಾಡುವಂತೆ ಕೇಳಿಕೊಳ್ಳಲಾಯಿತು. ಈಕೆಯ ವ್ಯಾಖ್ಯಾನ ಇಷ್ಟಕ್ಕೆ ಮುಗಿಯುವುದಿಲ್ಲ, ಇತ್ತೀಚಿಗೆ ಜೆ.ಎನ್.ಯುನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಾಣಿಸಿ ಕೊಂಡು, ತನ್ನ ಮುಂದೆಯೇ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಂತಹವರನ್ನು ಸಮರ್ಥಿಸಿಕೊಂಡಳು. ಈಕೆಯು ಸಮರ್ಥಿಸಿಕೊಳ್ಳಲು ಜೆ.ಎನ್ .ಯುನಲ್ಲಿ ತಲೆಗೆ ತುಂಬಿಕೊಂಡಿದ್ದ ಮತ್ತದೇ ಕಮ್ಯೂನಿಸ್ಟ್ ಹಾಗೂ ಜಿಹಾದಿ ಇತಿಹಾಸ ಕಾರಣವಾಗಿತ್ತು. ಒಂದು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವೆಂದರೆ ಸಮಾಜಕ್ಕೆ ಮಾರಕವಾಗುವಂಥ ವಿದ್ಯಾರ್ಥಿಗಳನ್ನು ಬೆಳೆಸುವುದಲ್ಲ, ಇತರೆ ದೇಶದವರೂ ಬಂದು ಒಮ್ಮೆ ಓದಲು ಇಷ್ಟಪಡುವಂತಿರಬೇಕು.

ಆದರೆ ಜೆ.ಎನ್.ಯು. ವಿಚಾರದಲ್ಲಿ ಆಗುತ್ತಿರುವುದೇ ಬೇರೆ, ಹೆಚ್ಚಾಗಿ ಎಡಚರರ ದೇಗುಲವಾಗಿರುವ ಈ ವಿಶ್ವವಿದ್ಯಾಲಯ
ದಲ್ಲಿ ಹೆಚ್ಚಾಗಿ ದೇಶವಿರೋಽ ವಿಚಾರಗಳೇ ಸದಾ ಚಾಲ್ತಿಯಲ್ಲಿರುತ್ತದೆ. ಇವರ ಕೆಲಸಗಳಿಗೆ ಹಣ ಹೊಂದಿಸುವುದು ಇವರಿಗೇನು ಕಷ್ಟವೆನಿಸುವುದಿಲ್ಲ, ಜಗತ್ತಿನ ದೊಡ್ಡಣ್ಣ ಇಂತಹವರಿಗೆ ನೂರಾರು ಮಿಷನರಿಗಳ ಮೂಲಕ ಕೋಟಿ, ಕೋಟಿ ಹಣವನ್ನು ನೀಡುತ್ತದೆ. ಅಮೆರಿಕ ದೇಶದ ಇತಿಹಾಸವನ್ನು ಗಮನಿಸಿದರೆ ಅವರು ಇತರ ದೇಶಗಳನ್ನು ಹಾಳುಮಾಡುವುದೇ ಹೀಗೆ, ಹಣದ ಆಮಿಷವನ್ನೊಡ್ಡಿ ಆ ದೇಶದೊಳಗಿನ ಆಂತರಿಕ ಕಚ್ಚಾಟಗಳನ್ನು ಪ್ರೋತ್ಸಾಹಿಸಿ ಹೆಚ್ಚಿನ ಗಲಭೆಗಳಿಗೆ ಕಾರಣವಾಗುತ್ತದೆ. ಹೇಗಿದ್ದರೂ ತಾವೇ ಮಾಡಿಕೊಂಡಂಥ ಡಾಲರ್ ಜಗತ್ಪ್ರಸಿದ್ಧಿಯಾಗಿದೆ. ತನಗಿಷ್ಟ ಬಂದಷ್ಟು ಪ್ರಿಂಟ್ ಮಾಡಿ ಇತರರಿಗೆ ಹಂಚಬಹುದು.

ಭಾರತದಲ್ಲಿನ ಸಾವಿರಾರು ಕ್ರಿಶ್ಚಿಯನ್ ಮಿಷಿನರಿಗಳು ಜೆ.ಎನ್.ಯುನಲ್ಲಿರುವ ಅರುಂಧತಿ ರಾಯನಂಥವರಿಗೆ ಹಣವನ್ನು ನೀಡುತ್ತವೆ. ಹಣಕ್ಕಾಗಿ ತನ್ನ ದೇಶವನ್ನೇ ಮಾರಿಕೊಳ್ಳುವ ಸ್ವಭಾವದವರು ಹೇಗೆ ತಾನೇ ಭಾರತವನ್ನು ಪ್ರೀತಿಸಲು ಸಾಧ್ಯ? ಇಂತಹ ಕೃತ್ಯಕ್ಕೆ ಬೆಂಬಲಿಸಲು ಅಮೆರಿಕ ದೇಶದ ಜೊತೆ ಕಳೆದೊಂದು ದಶಕದಿಂದ ಸೇರ್ಪಡೆಯಾಗಿರುವ ಮತ್ತೊಂದು ದೇಶ ಚೀನಾ, ಅತ್ತ ಪಾಕಿಸ್ತಾನಕ್ಕೆ ಹಣವನ್ನು ನೀಡಿ ಉಗ್ರರನ್ನು ಭಾರತದೆಡೆಗೆ ಕಳಿಸುತ್ತದೆ, ಇತ್ತ ಭಾರತದೊಳಗೆ ಪಾಕಿಗಳು ಮಾಡಿದ ಕೆಲಸವನ್ನು ಸಮರ್ಥಿಸಿಕೊಳ್ಳಲು ಜೆ.ಎನ್.ಯು ವಿಶ್ವವಿದ್ಯಾಲಯದಿಂದ ಹೊರ ಬಂದಿರುವ ಪತ್ರಕರ್ತರು, ವಿಚಾರವಾದಿಗಳು,
ವಿದ್ಯಾರ್ಥಿ ನಾಯಕರು ಸದಾ ಸಿದ್ಧರಿರುತ್ತಾರೆ.

ಸಮರ್ಥನೆಯ ಜೊತೆಗೆ ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡುತ್ತಾರೆ. ಜೆ.ಎನ್.ಯುನಲ್ಲಿ ಕಲಿತ ದೇಶವಿರೋಧಿ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದ ಕರ್ನಾಟಕದ ಮತ್ತೊಬ್ಬ ಎಡಚರ ಪತ್ರಕರ್ತೆಯೆಂದರೆ ಗೌರಿ ಲಂಕೇಶ್, ಈಕೆಯು ಅಷ್ಟೇ
ನಕ್ಸಲರನ್ನು ಬೆಂಬಲಿಸುತ್ತಾ ಅವರ ಜೊತೆಗೆ ಸಂಪರ್ಕದಲ್ಲಿದ್ದಳೆಂದು ಹಲವರು ಇಂದಿಗೂ ಮಾತನಾಡಿಕೊಳ್ಳುತ್ತಾರೆ. ದೇಶ ವಿರೋಧಿ ಹೇಳಿಕೆಗಳನ್ನು ಬೆಂಬಲಿಸುವ ಈಕೆ, ಕನ್ನಯ್ಯ ಕುಮಾರ್‌ನಂಥ ಹುಡುಗರನ್ನು ಮನೆಗೆ ಕರೆದು ಊಟ ಹಾಕುತ್ತಾಳೆ.

ಭಾರತ್ ತೇರೆ ಟುಕ್ಡೆ ಹೋಂಗೆ ಎಂದು ದೇಶ ವಿರೋಧಿ ಹೇಳಿಕೆಯನ್ನು ನೀಡಿದವರ ಪರವಾಗಿ ನಿಲ್ಲಲು ಸದಾ ತುದಿಗಾಲಿನಲ್ಲಿಯೇ ನಿಂತಿರುವ ಪತ್ರಕರ್ತರು ಜೆ.ಎನ್.ಯು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿಗಳು. ಎಡಚರರ ನಟ್ ವರ್ಕ್ ಹೇಗಿರುತ್ತದೆ ಯೆಂದರೆ ಒಬ್ಬ ಎಡಚರ ಒಂದು ಹೇಳಿಕೆಯನ್ನು ನೀಡಿದನೆಂದರೆ ಅಥವಾ ಪುಸ್ತಕವನ್ನು ಬರೆದನೆಂದರೆ ಅವನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪತ್ರಕರ್ತರು, ನ್ಯಾಯವಾದಿಗಳು, ರಾಜಕೀಯ ನಾಯಕರು, ಅಂತಾಷ್ಟ್ರೀಯ ಮಟ್ಟದ ಪತ್ರಕರ್ತರು ಸಿದ್ಧರಾಗಿರುತ್ತಾರೆ. ಅವನ ಪುಸ್ತಕವನ್ನು ವಿಮರ್ಶೆ ಮಾಡಿ ಇಡೀ ಸಮಾಜದೆದುರು ಅವನು ಹೇಳಿರುವ ಅಂಶಗಳು ಸರಿಯೆಂದು ಹೇಳುತ್ತಾರೆ. ಅವರ ವಿರುದ್ಧ ಮಾತನಾಡಿವರನ್ನು ಕಟ್ಟಿ ಹಾಕಲು ನ್ಯಾಯವಾದಿ ತಯಾರಾಗಿರುತ್ತಾನೆ, ತನ್ನ ಮತ ಬ್ಯಾಂಕನ್ನು ಭದ್ರ ಮಾಡಿಕೊಳ್ಳಲು ರಾಜಕೀಯ ನಾಯಕನೊಬ್ಬ ಮುಂದೆ ಬಂದು ಅವನ ಪರವಾಗಿ ನಿಲ್ಲುತ್ತಾನೆ.

ಒಬ್ಬನ ಬೆನ್ನನ್ನು ಮತ್ತೊಬ್ಬ ಕೆರೆದು, ಕೆರೆದು ಅವನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯ ಬಂದು ಏಳು ದಶಕ ಗಳೇ ಕಳೆದರೂ ಸಹ ಜೆ.ಎನ್.ಯು ವಿದ್ಯಾರ್ಥಿಗಳಿಗೆ ಸರಕಾರವು ಬಹುತೇಕ ಬಿಟ್ಟಿಯಾಗಿ ಊಟ, ವಸತಿ ವ್ಯವಸ್ಥೆ ಮಾಡುತ್ತಿತ್ತು.
ಕೇವಲ ಐವತ್ತು ರುಪಾಯಿಗಳಿಗೆ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ನೀಡಲಾಗುತ್ತಿತ್ತು. ಇಷ್ಟೆ ಮಾಡಿದರೂ ಸಹ ಅಲ್ಲಿನ ವಿದ್ಯಾರ್ಥಿಗಳಲ್ಲಿ ಬಹುತೇಕರು ದೇಶ ವಿರೋಧಿ ಚಟುವಟಿಕೆಗಳಲ್ಲಿಯೇ ತೊಡಗುತ್ತಿದ್ದರು. ಅವರ ವೇಷ ಭೂಷಣವಂತೂ ದೇವರೇ ಮೆಚ್ಚಬೇಕು, ಗಂಡು ಮಕ್ಕಳು ಹೆಣ್ಣು ಮಕ್ಕಳ ಬಟ್ಟೆಯನ್ನು ಹಾಕಿಕೊಂಡು ತಮ್ಮ ಖಾಸಗೀ ಜೀವನದ ಭಾಗವನ್ನು ಯಾರೂ ಪ್ರಶ್ನಿಸಬಾರದೆಂದು ಸಮರ್ಥಿಸಿಕೊಳ್ಳುತ್ತಾರೆ, ಸಿಕ್ಕ ಸಿಕ್ಕಲ್ಲಿ ಗಾಂಜಾ ಸೇದುವ ವಿದ್ಯಾರ್ಥಿಗಳಿದ್ದಾರೆ, ಜೆ.ಎನ್.ಯುನ ವಸತಿ ಗೃಹಗಳಲ್ಲಿ ಸಿಗುವ ಬಳಸಿದ ನಿರೋಧ್ ಗಳಿಗಂತೂ ಲೆಕ್ಕವೇ ಇಲ್ಲದಂತಾಗಿತ್ತು.

ಸ್ವತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ ನೆಹರು ಹೆಸರಿನಲ್ಲಿರುವ ವಿಶ್ವವಿದ್ಯಾಲಯವನ್ನು ಈ ಪರಿ ಹಾಳುಗೆಡವಿದ ಕೀರ್ತಿ
ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರಿಗೆ ಸಲ್ಲಬೇಕು. ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಹಿಂದೆ ಪ್ರಧಾನಿ
ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಅನಾವರಣಗೊಳಿಸಿದರು.

ಹತ್ತೊಂಬತ್ತನೆಯ ಶತಮಾನದಲ್ಲಿಯೇ ಸದೃಢ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಕರು ಮರೆಯುವ ಹಾಗಿಲ್ಲ. ತನ್ನ ಕಡಿಮೆ ಆಯುಷ್ಯದಲ್ಲಿ ದೇಶದ ಯುವಕರಿಗೆ ಸ್ವಾಮಿಗಳು ನೀಡಿದ ಸಂದೇಶವನ್ನು ಪಾಲಿಸಿದ್ದರೆ, ಇಂದು ದೇಶ ವಿರೋಧಿ ಕಾರ್ಯಗಳಲ್ಲಿ ತೊಡಗುತ್ತಿರುವ ಜೆ.ಎನ್.ಯು ವಿದ್ಯಾರ್ಥಿಗಳು ಇರುತ್ತಿರಲಿಲ್ಲ. ಯುವ ತರುಣರು ತಮ್ಮ ಮಾಂಸ ಖಂಡಗಳನ್ನು ಗಟ್ಟಿ ಮಾಡಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಬೇಕೆಂಬ ಸ್ವಾಮಿ ವಿವೇಕಾನಂದರ ಕನಸಿನ ವಿರುದ್ಧವೇ ನಿಂತಂಥ ಜೆ.ಎನ್.ಯು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶ ಕಟ್ಟುವುದಿರಲಿ, ಭಾರತ ಮಾತೆಯನ್ನು ಹೀಯಾಳಿಸುವುದರಲ್ಲಿ ನಿರತರಾಗಿದ್ದರು.

ಜೆ.ಎನ್.ಯು.ನಲ್ಲಿ ಕಮ್ಯುನಿಸ್ಟರ ಬಲವೆಷ್ಟಿದೆಯೆಂದರೆ ಎ.ಬಿ.ವಿ.ಪಿಯಂಥ ವಿದ್ಯಾರ್ಥಿ ಸಂಘಟನೆಗಳು ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ, ಅಷ್ಟೊಂದು ವ್ಯವಸ್ಥಿತವಾಗಿ ಅಲ್ಲಿನ ಕಮ್ಮಿ ನಿಷ್ಠೆಯ ವಿದ್ಯಾರ್ಥಿಗಳಿಗೆ ಸರಕಾರ ಹಾಗೂ ಕೆಲವು ಪತ್ರಕರ್ತರ
ಬೆಂಬಲವಿತ್ತು. ಹೊರದೇಶಗಳಿಂದ ಬಂದಂಥ ಹಣ ಹಾಗೂ ಕಾಂಗ್ರೆಸ್ಸಿನ ಕುಮ್ಮಕ್ಕಿನಿಂದ ಈ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳು ಹಿಂದೂ ಧರ್ಮದ ದೇವರುಗಳ ಮೇಲೆ ಗಧಾ ಪ್ರಹಾರ ಮಾಡಲು ಶುರು ಮಾಡಿದ್ದರು. ದುರ್ಗಾಷ್ಟಮಿಯಂದು
ಮಹಿಷಾಸುರನ ಪೂಜೆಯನ್ನು ಮಾಡಿ ತಾಯಿ ದುರ್ಗೆಗೆ ಮಾಡಬಾರದ ಅಪಮಾನವನ್ನು ಮಾಡಿದ್ದರು.

ದುರ್ಗೆಯನ್ನು ಕೀಳು ಹೆಣ್ಣಂತೆ ಚಿತ್ರಿಸಿ ಆಕೆಯು ಮಹಿಷನ ಜೊತೆ ರತಿಸುಖವನ್ನು ಅನುಭವಿಸಿ, ನಂತರ ಅವನನ್ನು ಮೋಸ ದಿಂದ ಕೊಂದಳೆಂದು ಹೇಳಿದರು. ವಿಪರ್ಯಾಸವೆಂದರೆ ಇಂತಹ ಕೃತ್ಯಕ್ಕೆ ಇವರು ಬಳಸಿಕೊಂಡಿದ್ದು ದಲಿತ ವಿದ್ಯಾರ್ಥಿಗಳನ್ನು, ೨೦೧೪ರಲ್ಲಿ ಆಲ್ ಇಂಡಿಯಾ ಬ್ಯಾಕ್ ವರ್ಡ್ ಸ್ಟೂಡೆಂಟ್ಸ ಫಾರಂ ತನ್ನ ಅಧ್ಯಕ್ಷತೆಯಲ್ಲಿ ಈ ಕೆಲಸ ಮಾಡಿತ್ತು. ದಲಿತರನ್ನು ಸದಾ ರಾಜಕೀಯ ಗಾಳಕ್ಕಾಗಿ ಬಳಸಿಕೊಳ್ಳುವ ನಾಯಕರಿಗೆ ಮಹಿಷನ ವಿಚಾರದಲ್ಲಿ ಬಳಸಿಕೊಳ್ಳುವುದು ಏನು ದೊಡ್ಡದಾಗಿರ ಲಿಲ್ಲ.

ಮಿಷನರಿ ಪೋಷಿತ ಕ್ರಿಶ್ಚಿಯನ್ನರು ತಮ್ಮ ಹಣ ಬಲದ ಮೂಲಕ ಜೆ.ಎನ್.ಯುನಲ್ಲಿ ದಲಿತ ಹುಡುಗರ ಮೂಲಕ ಈ ಕೃತ್ಯ ವೆಸಗಿಸಿದ್ದರು. ಮಹಿಷನ ಪೂಜೆಯ ಆಚರಣೆಯು ದೆಹಲಿಯ ಜೆ.ಎನ್.ಯುನಿಂದ ಕರ್ನಾಟಕಕ್ಕೂ ಕಾಲಿಟ್ಟಿದೆ. ಪ್ರತಿ ವರ್ಷವೂ ಅತ್ತ ಮೈಸೂರಿನಲ್ಲಿ ದಸರೆಯ ಸಂಧರ್ಭದಲ್ಲಿ ಚಾಮುಂಡೇಶ್ವರಿ ಪೂಜೆ ನಡೆಯುತ್ತಿದ್ದರೆ ಇತ್ತ ಮಹಿಷನ ವಂಶಸ್ಥರು ಆತನ ಪೂಜೆಯನ್ನು ಆಚರಿಸುತ್ತಾರೆ. ನಾನು ಆಗಲೇ ಹೇಳಿದ ಹಾಗೆ ಅಮೆರಿಕ ದೇಶದ ಹಲವು ಕ್ರಿಶ್ಚಿಯನ್ ಮಿಷನರಿಗಳು ಭಾರತದ ಸಂಸ್ಕೃತಿಯನ್ನು ಒಡೆಯಲು, ತಮ್ಮ ಬಳಿಯಿರುವ ಹಣದ ಮೂಲಕ ಜೆ.ಎನ್.ಯು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿವೆ.

೧೯೭೬ರಲ್ಲಿ ವಿದೇಶಿ ದೇಣಿಗೆಯನ್ನು ನಿಯಂತ್ರಿಸಲು ತಂದಂಥ ಕಾನೂನಿನನ್ವಯ ಇಂತಹ ಚಟುವಟಿಕೆಗಳಿಗೆ ಹಣವನ್ನು ಬಳಸುವಂತಿಲ್ಲ, ಆದರೂ ಸರಕಾರಕ್ಕೆ ಲೆಕ್ಕವನ್ನು ಸರಿಯಾಗಿ ನೀಡದೆ ಹಲವು ಕ್ರಿಶ್ಚಿಯನ್ ಮಿಷನರಿಗಳು ತಮ್ಮ ಸಮಾಜ ಸೇವೆಯ ಹೆಸರಿನಲ್ಲಿ ಈ ಕೆಲಸವನ್ನು ಮಾಡುತ್ತಿದ್ದವು. ಕಮ್ಯುನಿಸ್ಟರ ಬೇರುಗಳು ನಾವು ಅಂದುಕೊಂಡಂತೆ ಸಂಪೂರ್ಣವಾಗಿ ನಾಶವಾಗಿಲ್ಲ, ೨೦೧೪ರ ವರೆಗೂ ಅವರಿಗೆ ಸಿಗುತ್ತಿದಂಥ ಸವಲತ್ತುಗಳು ಈಗ ಕಡಿಮೆಯಾಗಿವೆಯೇ ಹೊರತು, ಅವರಂತೂ ತಮ್ಮ
ಬುದ್ಧಿಯನ್ನು ಬಿಟ್ಟಿಲ್ಲ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ವಿದೇಶದಿಂದ ಬರುತ್ತಿದಂಥ ದೇಣಿಗೆಗಳಿಗೆ
ಕಡಿವಾಣ ಹಾಕಿ ಇವರಿಗೆ ಸಿಗುತ್ತಿದ್ದಂಥ ಹಣ ಸಹಾಯವನ್ನು ಕಡಿಮೆ ಮಾಡಿದರು ಹಾಗೂ ನೂರಾರು ಎನ್.ಜಿ.ಒಗಳ
ನೋಂದಣಿಯನ್ನು ರದ್ದು ಮಾಡಿದರು.

ಕಳೆದ ವಾರ ಕೇರಳದ ಚರ್ಚ್‌ವೊಂದರಲ್ಲಿ ಐದುನೂರು ಕೋಟಿಯಷ್ಟು ಕಪ್ಪು ಹಣವು ಕ್ಕಿದೆಯೆಂದು ಪತ್ರಿಕೆಗಳಲ್ಲಿ ವರದಿ ಯಾಗಿತ್ತು. ಅಲ್ಲಿನ ಪಾದ್ರಿ ಸುಮಾರು ಮೂವತ್ತು ಎನ್.ಜಿ.ಒಗಳ ಮೂಲಕ ಹಣ ವರ್ಗಾವಣೆಯನ್ನು ಮಾಡಿ ಮತಾಂತರಕ್ಕೆ ಬಳಸುತ್ತಿದ್ದನೆಂಬ ಸುದ್ದಿಯು ವರದಿಯಾಗಿತ್ತು. ಒಂದೇ ಒಂದು ಚರ್ಚ್‌ನಲ್ಲಿ ಈ ಮಟ್ಟದ ಹಣ ಸಂದಾಯವಾಗುತ್ತದೆಯೆಂದರೆ ಇಂತಹ ಸಾವಿರಾರು ಚರ್ಚ್‌ಗಳಲ್ಲಿ ಅದೆಷ್ಟು ಹಣ ಸಂಗ್ರಹವಾಗಬಹುದು.

ಇಂತಹ ಹಣದಿಂದಲೇ ಭಾರತದಲ್ಲಿನ ಆಂತರಿಕ ಸಂಸ್ಕೃತಿಯನ್ನು ಕೊಲ್ಲುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ, ಇಂತಹ ಪ್ರಯತ್ನವನ್ನು ರಾಷ್ಟ್ರ ಮಟ್ಟದಲ್ಲಿ ಬೆಂಬಲಿಸುವ ಸಲುವಾಗಿ ಜೆ.ಎನ್.ಯುನ ವಿದ್ಯಾರ್ಥಿಗಳನ್ನು ನಿರಂತರವಾಗಿ ಬಳಸಿಕೊಳ್ಳ ಲಾಗುತ್ತದೆ. ಸ್ವಾಮಿ ವಿವೇಕಾನಂದರು ಕಂಡಂಥ ಭಾರತದ ಕನಸನ್ನು ನನಸು ಮಾಡಲು ಜೆ.ಎನ್.ಯು ವಿದ್ಯಾರ್ಥಿಗಳಿಗೆ
ಪ್ರೇರಣೆಯೇ ಸಿಗಲಿಲ್ಲ, ಕಾರಣ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್, ಬ್ರಿಟಿಷರು ಮಾಡಿದ ಕೆಲಸವನ್ನೇ ಮತ್ತೆ ಮಾಡಿ ತಿರುಚಿದ ಇತಿಹಾಸವನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿದ್ದರು. ಯುವಕರನ್ನು ಏಳಿ ಎದ್ದೇಳಿ ದೇಶ ಕಟ್ಟುವಲ್ಲಿ ನಿರತರಾಗಿ, ಎಂದು ಪ್ರೇರೇಪಿಸಿದ್ದ ಸ್ವಾಮಿ ವಿವೇಕಾನಂದರ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಬೋಧಿಸಲೇ ಇಲ್ಲ.

ನಮ್ಮವ ಶಾಲೆಗಳಲ್ಲಿನ ಪಠ್ಯ ಪುಸ್ತಕಗಳಲ್ಲೂ ಎಲ್ಲಾ ಒಂದು ಕಡೆ ಇರಲೆಂದು ಸೇರಿಸಲಾಯಿತೇ ಹೊರತು ಯುವಕರ ಜೀವನದ
ಒಂದು ಪ್ರಮುಖ ಅಂಶವನ್ನಾಗಿ ಮಾಡಲೇಯಿಲ್ಲ. ಕ್ರಿಶ್ಚಿಯನ್ ಮಿಷನರಿ ಹಾಗೂ ಕಮ್ಯುನಿಸ್ಟರು ಮದರ್ ತೆರೇಸಾರನ್ನು
ಸಮಾಜ ಸೇವೆಯ ಪಿತಾಮಹಾಳಂತೆ ತೋರಿಸಿದರೆ ಹೊರತು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಕರಲ್ಲಿ ತುಂಬಿದ
ಸಿಸ್ಟರ್ ನಿವೇದಿತಾ ಮಾಡಿದ ಸಮಾಜ ಸೇವೆಯನ್ನು ಎಲ್ಲಿಯೂ ಹೇಳಲೇ ಇಲ್ಲ.

ಜೆ.ಎನ್.ಯುನಿಂದ ಹೊರ ಬಂದಂಥ ಇತಿಹಾಸಕಾರರು ಕನಿಷ್ಠ ಪಕ್ಷ ಆಕೆಯ ಒಂದು ಸಣ್ಣ ಪಠ್ಯವನ್ನೂ ಪುಸ್ತಕದಲ್ಲಿ ಮಕ್ಕಳಿಗೆ ಹೇಳುವ ಪ್ರಯತ್ನ ಮಾಡಲಿಲ್ಲ. ಹಿಂದೂಗಳು ಮೂರ್ತಿ ಪೂಜೆ ಮಾಡುವುದನ್ನು ಟೀಕಿಸುವ ಜೆ.ಎನ್.ಯು ಪೋಷಿತ ಇತಿಹಾಸ ಕಾರರು, ಮುಸಲ್ಮಾನರು ಆಚರಿಸುವ ಟಿಪ್ಪುಸುಲ್ತಾನ್ ಜಯಂತಿಯನ್ನು ಬೆಂಬಲಿಸುತ್ತಾರೆ.

ಟಿಪ್ಪು ಸುಲ್ತಾನನ ಜಯಂತಿಯನ್ನು ಮಾಡುವುದೂ ಸಹ ಒಂದು ರೀತಿಯ ಮೂರ್ತಿ ಪೂಜೆಯಲ್ಲವೇ? ಒಂದೆಡೆ ಸಮರ್ಥನೆ,
ಒಂದೆಡೆ ವಿರೋಧ ವ್ಯಕ್ತಪಡಿಸುವ ಎಡಚರರು ಉಸರವಳ್ಳಿ ಯಂತೆ ತಮ್ಮ ಬಣ್ಣ ಬದಲಾಯಿಸುತ್ತಿರುತ್ತಾರೆ. ಕ್ರಿಶ್ಚಿಯನ್ನರ ಪರ ವಾಗಿ ನಿಲ್ಲಲು ಇವರಿಗೆ ಪಾಶಿಮಾತ್ಯ ದೇಶದಿಂದ ಹಣಬಂದರೆ, ಮುಸಲ್ಮಾನರನ್ನು ಬೆಂಬಲಿಸಲು ಪಾಕಿಸ್ತಾನದಿಂದ ಹಣ ಬರುತ್ತಿತ್ತು. (ಈಗ ಅವರಿಗಂಟಿರುವ ದರಿದ್ರ ಪರಿಸ್ಥಿತಿಯಲ್ಲಿ ಅವರಿಗೆ ತಿನ್ನಲು ಅನ್ನವಿಲ್ಲ ಬಿಡಿ). ಇನ್ನು ಇಲ್ಲಿನ ವಿದ್ಯಾರ್ಥಿಗಳು ಹಾಗೂ ಇತಿಹಾಸಕಾರರು ಮಾಡುವ ದೇಶ ವಿರೋಧಿ ಕೆಲಸಗಳಿಗೆ ಕೈ ಜೋಡಿಸಲು ಒಂದಷ್ಟು ಸಿನಿಮಾ ಮಂದಿಯೂ ಇದ್ದಾರೆ.

ಇತ್ತೀಚಿಗೆ ದೀಪಿಕಾ ಪಡುಕೋಣೆ ನಡುರಾತ್ರಿಯಲ್ಲಿ ಜೆ.ಎನ್.ಯು ವಿಶ್ವವಿದ್ಯಾಲಯದ ಆವರಣಕ್ಕೆ ಭೇಟಿ ನೀಡಿ ಅಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಪರವಾಗಿ ನಿಂತಳು. ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ನೋಡಬೇಕೆಂಬ ಆಸೆಯಿರುವ ದೀಪಿಕಾಳಿಗೆ ಎಲ್ಲಿಂದ ತಾನೇ ಒಳ್ಳೆಯ ಬುದ್ಧಿ ಬರಬೇಕು? ಆಕೆ ಹೋಗಿ ಅವರ ಜೊತೆ ನಿಂತಾಕ್ಷಣ, ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತಷ್ಟು ನಶೆಯೇರಿತ್ತು. ದೇಶದಾದ್ಯಂತ ಅವಳ ವಿರುದ್ಧ ಕೋಟ್ಯಂತರ ಜನರು ತಿರುಗಿ ಬಿದ್ದರು, ಆಕೆಯ ಚೆಪಾಕ್ ಸಿನಿಮಾ ಪಚಕ್ ಆಗಿತ್ತು, ಆದರೂ ಆಕೆಯು ಸೂಚಿಸಿದ ಬೆಂಬಲದಿಂದ ಒಂದಷ್ಟು ದೇಶ ವಿರೋಧಿ ಕಮ್ಮ್ಯುನಿಸ್ಟರಿಗೆ ರೆಕ್ಕೆ ಪುಕ್ಕವು ಬಲಿತಿತ್ತು.

ಇವಳ ರೀತಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಪ್ರಕಾಶ್ ರಾಜ್ ಎಂಬ ಚಿತ್ರ ನಟ ಸದಾ ಜೆ.ಎನ್.ಯು ವಿದ್ಯಾರ್ಥಿಗಳ ಪುಂಡಾಟಿಕೆಯನ್ನು ಬೆಂಬಲಿಸುತ್ತಿರುತ್ತಾನೆ. ಇತ್ತ ಕನ್ನಡ ಚಿತ್ರರಂಗದಲ್ಲಿಯೂ ಚೇತನ್ ಅಹಿಂಸೆ ಎಂಬ ನಟನಿದ್ದಾನೆ. ಈತನೂ ಅಷ್ಟೇ ಜೆ.ಎನ್.ಯು ವಿದ್ಯಾರ್ಥಿಗಳ ಪ್ರತಿಭಟನೆಯ ಪರವಾಗಿ ಸದಾ ನಿಲ್ಲುತ್ತಾನೆ. ದೇಶವನ್ನು ಒಡೆಯುವ ಸಲುವಾಗಿ ಜೆ.ಎನ್.ಯು ವಿಶ್ವವಿದ್ಯಾಲಯದ ಮೂಲಕ ಹಲವು ರೀತಿಯ ಪ್ರಯತ್ನಗಳನ್ನು ಕ್ರಿಶ್ಚಿಯನ್ನರು, ಕಮ್ಯುನಿಸ್ಟರು, ಮುಸ್ಲಿಂ ಜಿಹಾದಿಗಳು ಆಗಾಗ ಮಾಡುತ್ತಲೇ ಇರುತ್ತಾರೆ. ಇಂತಹ ದೇಶ ವಿರೋಧಿ ಕೆಲಸಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಇತಿಹಾಸಕಾರರನ್ನು ಮಟ್ಟ ಹಾಕುವ ಕೆಲಸವನ್ನು ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಮಾಡುತ್ತಲೇ ಬಂದಿzರೆ. ಇದರ ಮುಂದುವರಿದ ಭಾಗವಾಗಿ ಮೊನ್ನೆ ಜೆ.ಎನ್.ಯು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾಮಿ
ವಿವೇಕಾನಂದರ ದೊಡ್ಡದೊಂದು ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರ ಇಂತಹದ್ದೊಂದು ಮಹತ್ತರವಾದ ಕಾರ್ಯವನ್ನು ಪ್ರಧಾನಿಯವರು ಮಾಡಿzರೆ. ಪ್ರತಿಮೆ ಅನಾವರಣಗೊಳ್ಳುತ್ತಿದಂತೆಯೇ ಕೈ ಮೇಲಿನ ರೋಮಗಳು ಎದ್ದು ನಿಲ್ಲುತ್ತಿದ್ದವು. ಭಾರತ್ ತೇರೇ ತುಕ್ಡೆ ಹೋಂಗೆ ಎಂಬ ಘೋಷಣೆಯನ್ನು ಕೇಳುತ್ತಿದ್ದಂಥ ಆವರಣದಲ್ಲಿ ಇಂದು ಭಾರತ್ ಮಾತಾ ಕೀ ಜೈಎಂಬ ಘೋಷಣೆಯನ್ನು ಮೊಳಗಿಸಿದ ಕೀರ್ತಿ ಆಧುನಿಕ ನರೇಂದ್ರನಿಗೆ ಸಲ್ಲಬೇಕು.

Leave a Reply

Your email address will not be published. Required fields are marked *