ಸುಪ್ತ ಸಾಗರ
rkbhadti@gmail.com
ತೊಂಡೆಯಿಂದ ಹವ್ಯಾಸವಾಗಿ ಆರಂಭವಾದ ಡಿಸೋಜಾರ ತಾರಸಿ ಕೃಷಿ ಇವತ್ತು ಹೊಸದೊಂದು ಕ್ರಾಂತಿಯನ್ನೇ ಮಾಡಿದೆ. ಅಲ್ಲಿ ಬೆಳೆಯದ ಹಣ್ಣುಗಳೇ ಇಲ್ಲ, ಸಿಗದ ತರಕಾರಿಗಳೇ ಇಲ್ಲ. ಈ ಲಾಕ್ ಡೌನ್ ಸನ್ನಿವೇಶದಲ್ಲೂ ಮನೆಯವರೆಲ್ಲರೂ ಇಲ್ಲಿಂದಲೇ ಸಮೃದ್ಧವಾಗಿ ತಾಜಾ ಹಣ್ಣು-ತರಕಾರಿಗಳನ್ನು ಕೊಯ್ದು ಬಳಸಿದ ಬಳಿಕವೂ ಹತ್ತಾರು ಮನೆಗಳಿಗೆ ಉಚಿತವಾಗಿ ಹಂಚಿದ್ದಾರೆ.
ಅಲ್ಲಿ ದ್ರಾಕ್ಷಿ ಗೊಂಚಲುಗಳು ತೊನೆದಾಡುತ್ತಿವೆ. ಮೋಸುಂಬಿ ಮುಗುಳ್ನಗುತ್ತಿದೆ. ಕಿತ್ತಳೆಯ ಕಿಲಕಿಲ ತುಂಬಿದೆ. ಹಲಸು ಹಬ್ಬಿದೆ. ಮಾವು ಮಾಗಿದೆ. ಪೇರಳ ಪೊಗದಸ್ತಾಗಿದೆ. ನೇರಳೆ ನಲಿದಾಡುತ್ತಿದೆ. ನೆಲ್ಲಿ ನಲಿಯುತ್ತಿದೆ. ಗೇರು ಗರ್ವ ತೋರಿದೆ. ಚಿಕ್ಕೂ ಚೆಲುವು ತೋರಿದೆ. ಅಂಜೂರ ಅಂಜಿಕೆ ಇಲ್ಲದೆ ನಿಂತಿದೆ. ಪುನ್ನೇರಳೆ ಪುನಃಪುನಃ ಫಲ ಕೊಡುತ್ತಿದೆ. ದಾಳಿಂಬೆ ಧಾರಾಳವಾಗಿ ಬೆಳೆದಿದೆ. ಬಾಳೆ ಗೊನೆಯ ಭಾರಕ್ಕೆ ಬಾಗಿದೆ, ಪಪ್ಪಾಯ ಫಲಭರಿತವಾಗಿದೆ.
ಸ್ಟಾರ್ -ಟ್, ಬುಗುರಿ, ವಾಟರ್ ಆಪಲ, ಬಿಳಿ-ಕೆಂಪು-ಹಸಿರು ಅವಕಾಡೋ, ಅಂಬಡೆ, ಸೀತಾಫಲ, ರಾಮಫಲ, ಲಕ್ಷ್ಮಣಫಲ ಒಂದೆರಡಲ್ಲ, ಹತ್ತು ಹಲವು ಹಣ್ಣುಗಳ ವೈವಿಧ್ಯ ಅಲ್ಲಿ ಅನಾವರಣಗೊಂಡಿದೆ. ಇಷ್ಟಕ್ಕೆ ಮುಗಿಯುವು ದಿಲ್ಲ. ತೊಂಡೆ ತುಂಬಿ ತುಳುಕುತ್ತಿದೆ. ಬೆಂಡೆ ಬೆರಗು ತೋರುತ್ತಿದೆ. ಅಲಸಂಡೆ, ಅವರೆಗಳು ಆರಾಮಾವಾಗಿವೆ. ಹಸಿರು ಸೊಪ್ಪುಗಳು ಹರಡಿದೆ. ಕುಂಬಳ ಕುದುರಿದೆ. ಗುಳ್ಳ ಬದನೆ ಗರಿಗೆದರಿದೆ. ಹಾಗಲ ಹಬ್ಬಿದೆ. ಬೀನ್ಸ್, ಬೀಟ್ ರೂಟ್, ಕ್ಯಾರೇಟ, ಮೂಲಂಗಿಳೆಲ್ಲ ಮಾಮೂಲಿ ಎಂಬಂತಾಗಿದೆ.
ಸ್ವಾತಂತ್ರೋತ್ಸವದ ಫಲಪುಷ್ಟ ಪ್ರದರ್ಶನದ ಬಣ್ಣನೆ ಇಷ್ಟೆಲ್ಲ, ಎಂದುಕೊಳ್ಳಬೇಡಿ. ಹಾಗಿದ್ದರೆ, ಯಾವುದೋ ಪ್ರಗತಿಪರ ಕೃಷಿಕನ ತೋಟದ ವರ್ಣನೆಯಿರ ಬಹುದೆಂದು ನೀವು ಊಹಿಸಿದರೆ ಅದೂ ತಪ್ಪು. ನೀವು ನಂಬಲಿಕ್ಕಿಲ್ಲ. ಇವೆಲ್ಲವೂ ಇರುವುದು ಪುಟ್ಟ ಮನೆಯ ತಾರಸಿಯ ಮೇಲೆ! ಇನ್ನೂ ಬೆರಗಿನ ಸಂಗತಿ ಯೆಂದರೆ ಇದೇ ತಾರಸಿಯ ಮೇಲೆ ಬೆಳೆಯುವ ತೊಂಡೆ ಯನ್ನು ಒಂದೊಮ್ಮೆ ಮಾರಿದರೆ ತಿಂಗಳಿಗೆ ಕನಿಷ್ಠವೆಂದರೂ ೫-೮ ಸಾವಿರ ರೂ ಆದಾಯ ಗಳಿಸಬಹುದಂತೆ! ಏನಿಲ್ಲವೆಂದರೂ ಹತ್ತಿಪ್ಪತ್ತು ಕೆ.ಜಿ. ದ್ರಾಕ್ಷಿಯನ್ನು ವರ್ಷ ಪೂರ್ತಿ ಪಡೆಯಬಹುದಂತೆ.
ಹಾಗೆಂದು ಕಥೆ ಕಟ್ಟಿ ಹೇಳುತ್ತಿಲ್ಲ. ಬೆಳೆದು ತೋರಿಸಿ, ತಮ್ಮ ಮಾತನ್ನು ನಿರೂಪಿಸಿzರೆ ಬ್ಲಾನಿ ಡಿಸೋಜಾ. ಮಂಗಳೂರಿನ ಮಾರ್ನಮಿ ಕಟ್ಟೆ ಸಮೀಪದ ಜೈ ಹಿಂದ್ ರೋಡ್‌ನಲ್ಲಿರುವ ಬ್ಲಾನಿ ಡಿಸೋಜಾ ಅವರ ತಾರಸಿ ತುಂಬ ಚಪ್ಪರದ್ದೇ ಕಾರುಬಾರು. ಅವುಗಳ ಮೇಲೆ ಸೊಂಪಾಗಿ ಹಲವು ಬಗೆಯ ತರಕಾರಿ ಬಳ್ಳಿಗಳು, ಸಿಹಿ ದ್ರಾಕ್ಷಿ ಬಳ್ಳಿ ಹಬ್ಬ ನಿಂತಿವೆ. ಅಲ್ಲಿ ತರಕಾರಿಗೆ ಬರವಿಲ್ಲ, ಹಣ್ಣುಗಳಿಗಾಗಿ ಹುಡುಕಾಡುವುದೇ ಬೇಕಿಲ್ಲ! ಬರಿ ಮನೆಯವರಿಗಾಗಿಯೇ ಅಲ್ಲ, ಹತ್ತಿರದ
ಬಂಧುಗಳಿಗೆ, ಅಕ್ಕಪಕ್ಕದವರಿಗೆ ಹಂಚಿಯೂ ಒಂದಷ್ಟು ಕೊಯ್ಯುವವರಿಲ್ಲದೇ ಕೊಳೆಯುತ್ತದೆ. ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅದು ಕೇವಲ ತಾರಸಿ ತೋಟವಾಗಿ ಉಳಿದಿಲ್ಲ. ತೋಟಗಾರಿಕೆಯ ಪ್ರಯೋಗಶಾಲೆಯಾಗಿ ಹೊರ ಹೊಮ್ಮಿದೆ.
ಸಂದರ್ಶಕರ ತಾಣವಾಗಿದೆ. ಹವ್ಯಾಸಿಗಳಿಗೆ ತೋಟದ ಹುಚ್ಚು ಹತ್ತಿಸಿದೆ. ಅಧ್ಯಯನಿಗಳಿಗೆ ಅರಿವಿನ ಮನೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಗರವಾಸಿ ಗಳೆಲ್ಲರಿಗೂ ಕೃಷಿ-ಪರಿಸರದ ನಿಟ್ಟಿನಲ್ಲಿ ಮಾದರಿ ತಾಣವಾಗಿ ನಿಂತಿದೆ. ಹಾಗೆ ನೋಡಿದರೆ, ಡಿಸೋಜಾರ ತಾರಸಿ ಕೃಷಿ ಆರಂಭ ವಾದದ್ದು ತೊಂಡೆಯಿಂದ. ಒಮ್ಮೆ ಚಿಗುರಿತೆಂದರೆ ಹತ್ತಾರು ವರ್ಷ ಉಳಿಯಬಲ್ಲ, ವರ್ಷದ ಎಲ್ಲ ತಿಂಗಳೂ ಸಮೃದ್ಧ ಬೆಳೆಯನ್ನು ನೀಡಬಲ್ಲ ತೊಂಡೆ ಬಳ್ಳಿಯನ್ನು, ಒಂದು ಬುಡ ಇರಲಿ ಎಂಬ ಉದಾಸೀನದಿಂದಲೇ ಮನೆಯ ಪಕ್ಕದ ಕಿಚನ್ ಗಾರ್ಡನ್‌ನಲ್ಲಿ ಊರಿದ್ದರು ಡಿಸೋಜರು. ಆಗಿನ್ನೂ ಗಲ್ಫ್ ನಲ್ಲಿನ ಉದ್ಯೋಗ ಬಿಟ್ಟು ಸ್ವದೇಶಕ್ಕೆ ಮರಳಿದ್ದರು ಅವರು.
ಹಾಗೆ ಹಬ್ಬಲು ಆರಂಭಿಸಿದ ತೊಂಡೆ ಬಳ್ಳಿ ಬೆಳೆಯುತ್ತಾ ಹೋಗಿ ಟೆರೆಸ್ ಅನ್ನೂ ತಲುಪಿತ್ತು. ಹೇಗೂ ಎತ್ತರಕ್ಕೆ ಬೆಳೆದಿದೆ, ಅಲ್ಲಿಯೇ ಒಂದು ಚಪ್ಪರದಂತೆ ಮಾಡಿ ಹಬ್ಬಿಸಿದರೆ ಕೊಯ್ಯಲೂ ಸುಲಭ, ಜಾಗವೂ ಉಳಿಯುತ್ತಿದೆ ಎಂಬ ಯೋಚನೆ ಬಂತು. ಅದು ಯಶಸ್ವಿಯಾದಾಗ ತಾರಸಿಯಲ್ಲಿ ಇಷ್ಟೊಂದು ಜಾಗ ಖಾಲಿಯೇ ಇದೆಯ, ಅ ಪುಟ್ಟ ತೋಟವೊಂದನ್ನು ಬೆಳೆಸಬಾರದೇಕೆ ಎಂದು ಚಿಂತಿಸಿದರು. ಈಗ ಡಿಸೋಜಾರ ತಾರಸಿಯಲ್ಲಿರುವ ನಾಲ್ಕು ತೊಂಡೆ ಬಳ್ಳಿಗಳಲ್ಲಿ ಮೂರು ೧೫ ವರ್ಷಗಳ ಹಿಂದೆಯೇ ನಾಟಿ ಮಾಡಿದ್ದು. ಇಂದಿಗೂ ಒಂದಿನಿತೂ ವ್ಯತ್ಯಯವಿಲ್ಲದೇ ಕಾಯಿ ಬಿಡುತ್ತಿದೆ.
ಒಂದು ಕೊಯ್ಲು ಮುಗಿಯುತ್ತಿದ್ದಂತೆಯೇ ಕಟಾವು ಮಾಡಿ, ಮತ್ತೆ ಚಿಗುರುವಂತೆ ಸರದಿಯ ಮೇಲೆ ಆರೈಕೆ ಮಾಡುತ್ತಾರೆ. ಹೀಗೆಯೇ ಏನಿಲ್ಲವೆಂದರೂ ವಾರಕ್ಕೆ
೩೦ -೪೦ ಕೆಜಿ ತೊಂಡೆ ಕಾಯಿ ಕೊಯ್ಯುತ್ತಾರತಂತೆ. ಮನೆಗೆ ಬಳಸಿ, ಆಪ್ತರಿಗೆ ಹಂಚಿ ಉಳಿದದ್ದನ್ನು ಮಂಗಳೂರಿನ ಪೇಟೆಗೆ ಹೋಗಿ ಮಾರಿ ಕೆಜಿಗೆ ೫೦ ರೂ.ನಂತೆ ತಿಂಗಳಿಗೆ ಸರಾಸರಿ ೩ ಸಾವಿರ ರೂ. ಆದಾಯ ಪಡೆದಿದ್ದಾರೆ. ಹೀಗೆ ತೊಂಡೆಯಿಂದ ಹವ್ಯಾಸವಾಗಿ ಆರಂಭವಾದ ಡಿಸೋಜಾರ ತಾರಸಿ ಕೃಷಿ ಇವತ್ತು ಹೊಸದೊಂದು ಕ್ರಾಂತಿ ಯನ್ನೇ ಮಾಡಿದೆ. ಅಲ್ಲಿ ಬೆಳೆಯದ ಹಣ್ಣುಗಳೇ ಇಲ್ಲ, ಸಿಗದ ತರಕಾರಿಗಳೇ ಇಲ್ಲ.
ಈ ಲಾಕ್ ಡೌನ್ ಸನ್ನಿವೇಶದಲ್ಲೂ ಮನೆಯವರೆಲ್ಲರೂ ಇಲ್ಲಿಂದಲೇ ಸಮೃದ್ಧವಾಗಿ ತಾಜಾ ಹಣ್ಣು- ತರಕಾರಿಗಳನ್ನು ಕೊಯ್ದು ಬಳಸಿದ ಬಳಿಕವೂ ಹತ್ತಾರು ಮನೆ
ಗಳಿಗೆ ಉಚಿತವಾಗಿ ಹಂಚಿzರೆ. ಹಸಿರಿನ ಸ್ವಾವಲಂಬನೆ’ಯ ಪರಿಕಲ್ಪನೆಯನ್ನು ಸಾಕರಗೊಳಿಸಿಕೊಂಡ ತೃಪ್ತಿಯ ಜತೆಗೆ ಹಲವು ಮೊದಲುಗಳ ಸಾಧನೆಯನ್ನು ತೋರಿದ್ದಾರೆ. ಈ ಇಪ್ಪತ್ತು ವರ್ಷಗಳಲ್ಲಿ ಆರಂಭಿಕ ದಿನಗಳನ್ನು ಬಿಟ್ಟರೆ, ಮತ್ತೆಂದೂ ಹಣ್ಣು-ತರಕಾರಿಗಳಿಗಾಗಿ ಮಾರುಕಟ್ಟೆಗೆ ಈ ಮನೆಯವರು ಹೋಗಿದ್ದೇ ಇಲ್ಲ. ಸೊಪ್ಪು-ತರಕಾರಿಗಳ ಮಾತು ಹಾಗಿರಲಿ, ಬೇಕು, ಬೇಕೆನಿಸಿದ ವೈವಿಧ್ಯಮಯ ಹಣ್ಣುಗಳ ಸಸಿಗಳನ್ನು ತಾರಸಿಯ ಬೆಳೆಸಿಕೊಂಡು, ಫಲಬಿಟ್ಟು ಮಾಗಿದ ಬಳಿಕ ಕೈಯ್ಯಾರೆ ಕೊಯ್ದು ಸವಿಯುವ ಪರಮಾನಂದವನ್ನು ಮನೆಯವರೆಲ್ಲ ಅನುಭವಿಸುತ್ತಿದ್ದಾರೆ.
ಇವೆಲ್ಲದರ ನಡುವೆ ಗಮನ ಸೆಳೆದಿರುವುದು ಕಾಬೂಲ್ ದ್ರಾಕ್ಷಿಯ ವೈಭವ. ಡಿಸೋಜಾರ ಇಡೀ ತಾರಸಿ ತೋಟದ ಆಕರ್ಷಣೆಯೇ ದ್ರಾಕ್ಷಿ ಬಳ್ಳಿಗಳು. ಬಹುಶಃ ತೋಟವನ್ನು ನೆಲದ ಚಪ್ಪರವನ್ನು ಬಿಟ್ಟು ತಾರಸಿಯಲ್ಲೀ ಹೀಗೆ ಹಬ್ಬಿಸಿಯೂ ದ್ರಾಕ್ಷಿಯನ್ನು ಬೆಳೆದುಕೊಳ್ಳಬಹುದು ಎಂದು ತೋರಿಸಿಕೊಟ್ಟ ಮೊದಲಿಗರು ಬ್ಲಾನಿ. ಕಡುಗೆಂಪು ಬಣ್ಣದ ಈ ತಳಿಯ ೪ ಬಳ್ಳಿಗಳಿದ್ದು, ಕಳೆದ ವರ್ಷ ಸರಿಸುಮಾರು ೪೦ ಕೆಜಿಯಷ್ಟು ದ್ರಾಕ್ಷಿ ಹಣ್ಣು ಸಿಕ್ಕಿದೆ.
ತೊಂಡೆಯಂತೆಯೇ ದ್ರಾಕ್ಷಿಯನ್ನೂ ನೆಲದಲ್ಲಿ ನೆಟ್ಟು ಟೆರೆಸ್ಗೆ ಹಬ್ಬಿಸಿದ್ದಾರೆ. ತಾರಸಿಯಲ್ಲೂ ನೆಟ್ಟು ಬೆಳೆಸಬಹುದು. ಆದರೆ ಫಸಲು ಸ್ವಲ್ಪ ಕಡಿಮೆ ಇರುತ್ತದೆ
ಎನ್ನುತ್ತಾರೆ ಅವರು. ಈ ಬಳ್ಳಿಗಳು ನೆಟ್ಟ ಒಂದೂವರೆ ವರ್ಷ ದಿಂದಲೇ ಫಲ ನೀಡಲಾರಂಭಿಸಿದ್ದು, ಕರಾವಳಿಯ ಅತಿ ಮಳೆ ಯಲ್ಲೂ ಸ್ವಲ್ಪ ತಾಂತ್ರಿಕ ಬದಲಾವಣೆಯೊಂದಿಗೆ ಬೆಳೆದಿರುವುದು ಹೆಗ್ಗಳಿಕೆ. ಐದು ವರ್ಷಗಳ ಹಿಂದೆ ನರ್ಸರಿಯೊಂದಕ್ಕೆ ಭೇಟಿ ನೀಡಿದಾಗ ಅಕಸ್ಮಾತ್ ಸಿಕ್ಕ ೨ ದ್ರಾಕ್ಷಿ ಗಿಡಗಳು ಇಂದು
ಸಮೃದ್ಧವಾಗಿ ಹೊಟ್ಟೆ ತುಂಬಿಸುತ್ತಿವೆ. ಇದು ಯಶಸ್ವಿಯಾದದ್ದರಿಂದ ಮತ್ತೆರಡು ಗಿಡ ಹಾಕಿದ್ದೇನೆ. ಗಿಡಗಳ ಬುಡಕ್ಕೆ ನಾಲ್ಕೆದು ತಿಂಗಳಿಗೊಮ್ಮೆ ತರಗೆಲೆ-ಮಣ್ಣು ಹಾಕುತ್ತೇನೆ.
ಬೇಸಿಗೆಯಲ್ಲಿ ಪ್ರತಿದಿನ ೪- ೫ ಲೀ. ನೀರು ಕೊಡುತ್ತೇವೆ. ರೋಗ, ಕೀಟ ಬಾಧೆಯೆಂಬುದು ಕಂಡೇ ಇಲ್ಲ. ಎಂದು ನೆನಪಿಸಿಕೊಳ್ಳುತ್ತಾರೆ ತಾರಸಿ ಕೃಷಿಕ ಡಿಸೋಜಾ. ಇದರಿಂದ ಪ್ರೇರಿತರಾದ ಬ್ಲಾನಿ, ಹಣ್ಣುಗಳ ಸಾಮ್ರಾಜ್ಯಕ್ಕೇ ಮುನ್ನಡಿ ಬರೆದರು. ಇಂದು ವರ ತಾರಸಿಯಲ್ಲಿ ವಾಮನ ರೂಪದ ನಾಲ್ಕು ಜಾತಿಯ ಪೇರಳೆ, ನಾಲ್ಕು ಜಾತಿಯ ಮಾವು, ಮೂರು ಬಗೆಯ ಸಪೋಟಾ, ದಾಳಿಂಬೆ, ಮೂಸುಂಬಿ, ಕಿತ್ತಳೆ , ಅಂಜೂರ, ಸಿಹಿ ಹುಣಸೆ, ಬುಗುರಿ ಹಣ್ಣು, ನೆಲ್ಲಿ, ದ್ವಾರೆಹುಳಿ, ಅಮಟೆಕಾಯಿ, ಸೀತಾಫಲ, ರಾಮಫಲ, ನೇರಳೆ ಹಣ್ಣು, ವಿಳ್ಯದೆಲೆ, ಲವಂಗ, ಕಾಳು ಮೆಣಸು ಹೀಗೆ ೨೦೦ಕ್ಕೂ ಹೆಚ್ಚು ಬಗೆಯ ಹಣ್ಣುಗಳು ನಲಿದಾಡುತ್ತಿವೆ.
ಇಷ್ಟಕ್ಕೇ ಅವರ ಹಣ್ಣುಗಳ ಹುಚ್ಚು ನಿಲ್ಲಲಿಲ್ಲ. ಇಸ್ರೆಲ್ ನ ಆಲಿವ್, ಥಾಯ್ಲೆಂಡ್‌ನ ಮಾವು, ಬ್ರೆಜಿಲ್ ನುಗ್ಗೆ, ಆಸ್ಪ್ರೇಲಿಯಾ ಮೂಲದ ಫ್ಯಾಶನ್ ಪ್ರುಟ್ (ರೆಡ್),
ಶ್ರೀಲಂಕಾದ ಒಂದೆಲಗ, ಜಮೈಕಾದ ಮಿಲ್ಕಿ ಫ್ರೂಟ್ ಹೀಗೆ ದೇಶ ವಿದೇಶಗಳ ಅಪರೂಪದ -ಳ ವೈವಿಧ್ಯವೂ ಇವರ ತಾರಸಿಯ ವೈಭವವನ್ನು ಹೆಚ್ಚಿಸಿದೆ. ಇನ್ನಂತೂ ತರಕಾರಿಗಳ ಬಗ್ಗೆ ಕೇಳಲೇಬೇಡಿ. ತೊಂಡೆಯಂಥೂ ಇದ್ದದ್ದೇ. ಹೀರೆ, ಹಾಗಲ, ಸೋರೆಕಾಯಿ, ಮುಳ್ಳು ಸೌತೆ, ಪಡುವಲ, ಬೀನ್ಸ್, ಬದನೆ, ಟೊಮೇಟೊ, ಬೆಂಡೆ ಬೇಕಷ್ಟು ಮಾತ್ರವಲ್ಲ, ಸಾಕು ಸಾಕೆಂಬುವಷ್ಟು ಬೆಳೆದುಕೊಳ್ಳುತ್ತಾರೆ.
ಇದಲ್ಲದೇ ಪ್ಲಾಸ್ಟಿಕ್ ಗ್ರೊ ಬ್ಯಾಗ್‌ನಲ್ಲಿ ಪುದೀನಾ, ಮೆಣಸು, ಶುಂಠಿ, ಕರಿಮೆಣಸು, ನುಗ್ಗೆ, ಸೊಪ್ಪುಗಳ ವೈವಿಧ್ಯವಿದೆ. ಇಷ್ಟೆಲ್ಲ ಬೆಳೆದಿರುವುದು ಹಾಗಿದ್ದರೆ ವಿಶಾಲ ಬಂಗಲೆಯ ತಾರಸಿಯಲ್ಲಿ ಎಂದು ಕೊಳ್ಳಬೇಡಿ. ೧೨೦೦ ಅಡಿ ಅಳತೆಯ ತಾರಸಿ ಮತ್ತು ೧೫ ಸೆಂಟ್ಸ್ ಅಳತೆಯ ಮನೆಯ ಆವರಣದಲ್ಲಿ ಬೆಳೆದಿದೆ. ತೀರಾ
ವಾಣಿಜ್ಯ ಉದ್ದೇಶಕ್ಕೆ ಅಲ್ಲದೇ ಹವ್ಯಾಸವಾಗಿ ತಾರಸಿ ಕೃಷಿ ಕೈಗೊಂಡೂ ಇಂಥ ಪ್ರತಿಫಲ ಸಿಕ್ಕಿರುವಾಗಿ ವೃತ್ತಿಪರವಾಗಿ ಕೈಗೊಂಡರೆ ಇದೇ ಅಳತೆಯಲ್ಲಿ ಒಂದು ಕುಟುಂಬ ಆರಾಮವಾಗಿ ಹಸಿರು ಸ್ವಾವಲಂಬನೆಯೊಂದಿಗೆ ಸಮೃದ್ಧ ಆದಾಯ ವನ್ನೂ ಗಳಿಸಿಕೊಳ್ಳಬಹುದು ಎನ್ನುತ್ತಾರೆ ಬ್ಲಾನಿ.
ಇಷ್ಟಕ್ಕೆಲ್ಲ ಹಗಲೂ ರಾತ್ರಿಯ ದುಡಿಮೆಯೇನೂ ಬೇಕಾಗಿಲ್ಲ. ತುಸು ಕಸಿ ತಾಂತ್ರಿಕತೆ, ಒಂದಷ್ಟು ಬುದ್ಧಿವಂತಿಕೆ ಯೊಂದಿಗೆ ವ್ಯವಹರಿಸಿದರೆ ಏನೆಲ್ಲ ಸಾಧ್ಯತೆಗಳಿವೆ. ದಿನದಲ್ಲಿ ಬೆಳಗ್ಗೆ-ಸಂಜೆ ತಲಾ ಅರ್ಧ ಗಂಟೆ, ವಾರಾಂತ್ಯದಲ್ಲಿ ಒಮದೆರಡು ಗಂಟೆ ಕಳೆದರೆ ಬೇಕಾದ್ದನ್ನು ಎಲ್ಲರೂ ಬೆಳೆದು ಕೊಳ್ಳಬಹುದು. ನಿಮ್ಮ ಪರಿಕಲ್ಪನೆ, ಅಗತ್ಯಕ್ಕನುಗುಣವಾಗಿ ಆರಂಭಿಕ ಬಂಡವಾಳ ಬೇಕು. ಬೆಂಗಳೂರಿನಂಥ ನಗರದಲ್ಲಿ ಕೆಲ ವಾಟರ್ ಪ್ರೂಫಿಂಗ್ ವ್ಯವಸ್ಥೆ ಬೇಕು. ತಾರಸಿಗೆ ಭಾರವಾಗದಂತೆ ಕೋಕೋಫಿಟ್, ಮರಳು ಬಳಕೆ ಉತ್ತಮ. ಕನಿಷ್ಠ ನೀರಿನಲ್ಲಿ, ಮನೆಯ ತ್ಯಾಜ್ಯವನ್ನೇ ಗೊಬ್ಬರವಾಗಿ ಪರಿವರ್ತಿಸಿಕೊಂಡು, ರೋಗ ರಹಿತ ಹಣ್ಣು ತರಕಾರಿಗಳನ್ನು
ಬೆಳೆದುಕೊಳ್ಳಬಹುದು ಎಂದು ವಿವರಿಸುತ್ತಾರೆ ಡಿಸೋಜಾ.
ಹಣ್ಣುಗಳಿಗಾಗಿ ೨೧- ೨೧ ಅಳತೆಯ ಗ್ರೊ ಬ್ಯಾಗ್‌ನಲ್ಲಿ ಅರ್ಧದಷ್ಟು ಮಣ್ಣು ತುಂಬಿಸುತ್ತೇನೆ. ಉಳಿದ ಭಾಗದಲ್ಲಿ ಮರಳು, ಕೋಕೋಫಿಟ್, ಸಗಣಿ ಗೊಬ್ಬರ ತುಂಬಿ ಗಿಡ ನೆಡುತ್ತೇನೆ. ಬಹುತೇಕ ಎಲ್ಲ ಗಿಡಗಳಿಗೆ ನಿತ್ಯ ನೀರು ಪೂರೈಕೆ. ಹದಿನೈದು ದಿನಕ್ಕೊಮ್ಮೆ ತರಗೆಲೆ, ಅಡುಗೆ ಮನೆಯ ತ್ಯಾಜ್ಯ ಹಾಗೂ ಸಗಣಿಯ ಸಾವಯವ ಗೊಬ್ಬರ. ಕೀಟ- ರೋಗ, ನಿಯಂತ್ರಣಕ್ಕೆ ಬೇವಿನ ಎಣ್ಣೆ (೧೦ ಮಿಲಿ ಲೀಟರ್ ಬೇವಿನ ಎಣ್ಣೆ, ೧ ಲೀಟರ್ ನೀರು, ೧ ಚಿಟಿಕೆ ಸೋಪಿನ ಪುಡಿ) ಮಿಶ್ರಣ ಸಿಂಪಡನೆ. ಅದೇ ಗಿಡಗಳ ಹಣ್ಣೆಲೆಗಳೂ ಆಯಾ ಗಿಡಗಳಿಗೆ ಗೊಬ್ಬರ. ಹೀಗೆ ನನ್ನ ತಾರಸಿಯಲ್ಲಿ ೫೦ ಗ್ರೊ ಬ್ಯಾಗ್ಗಳಿವೆ.
ಇಂಥ ಬ್ಯಾಗ್‌ಗಳು ೪ ರಿಂದ ೫ ವರ್ಷ ಬಾಳಿಕೆ ಬರುತ್ತದೆ. ಒಂದು ಬ್ಯಾಗ್‌ನಲ್ಲಿ ೨೦ ಕೆಜಿ ಮಣ್ಣು ಹಿಡಿಯುತ್ತದೆ. ಅವರವರ ಅಗತ್ಯಕ್ಕನುಗುಣ, ಜಾಗದ ಪರಿಮಿತಿಯಲ್ಲಿ ಬ್ಯಾಗ್‌ಗಳ ಸಂಖ್ಯೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಗಿಡಗಳಿಗೆ ಬೇಕಾದಷ್ಟೆ ನೀರು ಕೊಡುತ್ತೆನೆ. ಕೆಳಗೆ ತಟ್ಟೆ ಇಟ್ಟು ನೀರು ಹನಿಸಿದರೆ ಅದನ್ನೇ ಗಿಡಗಳು ಹೀರಿಕೊಳ್ಳುತ್ತವೆ. ಇದರಿಮದ ತಾರಸಿ ನೆನೆದು ಸೋರುವುದು ತಪ್ಪುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಮನೆ ಬಳಕೆಯ ಜತೆಗೆ ಆದಾಯಕ್ಕೂ ದಾರಿ. ಹೀಗಾಗಿ ಇಂಥ ಸುಲಭದ ದಾರಿಯನ್ನು ಹಲವರಿಗೆ ಸೂಕ್ತ ಮಾಹಿತಿ ಯೊಂದಿಗೆ ಹಂಚಿದ್ದೇನೆ. ವಿದ್ಯಾರ್ಥಿಗಳು ಸೇರಿದಂತೆ. ಕಳೆದ
ಮೂರು ವರ್ಷಗಳಲ್ಲಿ ಸುಮಾರು ೪ ಸಾವಿರ ಜನ ಭೇಟಿ ತಮ್ಮಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದಿzರೆ ಎನ್ನುತ್ತಾರೆ ಬ್ಲಾನಿ.