Friday, 20th September 2024

ನಾನೂ ಟೀಚರ್ ಆಗಬೇಕು ಅನ್ನುವ ಮಗುವನ್ನು ಹುಡುಕುತ್ತಾ

ಅಭಿವ್ಯಕ್ತಿ

ಟಿ. ದೇವಿದಾಸ್

ಅದೊಂದು ಕಾಲವಿತ್ತು. ಅಷ್ಟೇಕೆ ಈಗಲೂ ಭಾರತದಲ್ಲಿ ಎಷ್ಟೋ ಕಡೆಗಳಲ್ಲಿ ಈ ಪರಿಸ್ಥಿತಿಯಿದೆ. ಮುಖ್ಯವಾಗಿ ಹಳ್ಳಿಗಳಲ್ಲಿ. ನನ್ನೂರಲ್ಲಿ ಒಂದು ಸರಕಾರಿ ಶಾಲೆಯಿದೆ. ಶಾಲೆಯಿರುವುದು ಮೂರು ಕಿ.ಮೀ. ದೂರದ ಸಮುದ್ರ ತೀರದಲ್ಲಿ. ವಿದ್ಯಾರ್ಥಿಗಳೆಲ್ಲ ಬೆಳಗಿನ ಊಟ ಮುಗಿಸಿ ಎಲ್ಲರೂ ಒಟ್ಟಾಗಿ ನಡೆದುಕೊಂಡೇ ಶಾಲೆಗೆ ಹೋಗುವುದು. ಅದು ಮಳೆಗಾಲವಿರಲಿ, ಬೇಸಿಗೆಯಿರಲಿ. ನಮ್ಮಲ್ಲಿ ಚಳಿಗಾಲ ಅಂತ ಪ್ರತ್ಯೇಕ ಇರುವುದಿಲ್ಲ. ಮಲೆನಾಡಿನವರಿಗೆ ಸೆಖೆ, ಕರಾವಳಿಯವರಿಗೆ ಚಳಿಯನ್ನು ಅನುಭವಿಸುವ ಭಾಗ್ಯ ಕಡಿಮೆಯೇ! ಕರಾವಳಿಯವರಿಗೆ ಮಳೆಗಾಲ ಬಂದರೆ ನಮಗೆ ಸ್ವಲ್ಪ ಜಾಸ್ತಿನೇ ಕಿರಿಕಿರಿ. ಕಾರಣ ವಿದ್ಯಾರ್ಥಿಗಳಲ್ಲಿ ಕೊಡೆ ಯಿರುವುದಿಲ್ಲ. ಒಂದು: ಕೊಡೆ ಕೊಳ್ಳುವುದಕ್ಕೆ ಬಡತನ.

ಎರಡು: ಕೊಡೆಯನ್ನು ಇಟ್ಟಲ್ಲೇ ಬಿಟ್ಟುಬರುವ ಚಟ ಇರುವುದರಿಂದ ಮನೆಯಲ್ಲಿ ಹಿರಿಯರು ಕೊಡೆ ಕೊಡುತ್ತಿರಲಿಲ್ಲ. ಆದರೆ ಹಾಗೆಯೇ ಶಾಲೆಗೆ ಹೋಗಲು ಸಾಧ್ಯವಿಲ್ಲ. ಜೋರಾಗಿ ಮಳೆ ಬಂದ ದಿನ, ಶಾಲೆಗೆ ರಜೆ ಘೋಷಣೆಯನ್ನು ಒಂದೋ ಶಾಲೆಯವರು ಮಾಡಬೇಕು, ಇಲ್ಲಾ ಅಂದ್ರೆ ನಾವೇ ಮಾಡಿಕೊಳ್ಳಬೇಕು.

ಎಂಥಾ ಪರಿಸ್ಥಿತಿ ನೋಡಿ! ಅಂತೂ ಆ ದಿನ ಶಾಲೆಗೆ ರಜೆ. ವಾಂತಿ, ಭೇದಿ, ಹೊಟ್ಟೆನೋವೋ, ಇನ್ನೇನೋ ನೋವು ಅಂತ ಮನೆಯಲ್ಲೇ ನಾವು ಉಳಿದು ಬಿಡೋದು. ಆದರೆ ಮನೆಯಲ್ಲಿ ಇದಕ್ಕೆ ಒಪ್ಪಿಗೆ ಇರುತ್ತಿರಲಿಲ್ಲ. ಯಾರದ್ದಾದರೂ ಕೊಡೆಯಲ್ಲಿ ಹೋಗೋ ಮಾರಾಯಾ ಅಂತ ನಾಲ್ಕೈದು ಬಾರಿ ಒತ್ತಡ ತಂದರೂ ಈ ನೋವು ಇದೆಯೆಲ್ಲ, ಇದು ಅವರ ಬಾಯನ್ನು ಮುಚ್ಚಿಸಿ ಬಿಡುತ್ತಿತ್ತು. ಕೇವಲ ನೋವಿನ ನೆಪ, ಮಳೆಯ ನೆಪ, ಇನ್ಯಾವುದೋ ನೆಪ. ಅಷ್ಟೇ ಅಲ್ಲ ತುಂಬಾ ಹೋಮ್ ವರ್ಕ್ ಇದ್ದಾಗಲೂ ನಮಗೆ ವಿಪರೀತ ನೋವು ಕಾಣಿಸಿಕೊಳ್ಳುತ್ತಿತ್ತು. ಆದಿನ ಕೂಡ ಶಾಲೆಗೆ ನಮ್ಮದು ಅನಧಿಕೃತ ರಜೆ ಘೋಷಣೆ ಇದ್ದದ್ದೇ! ಆದರೆ ನಮ್ಮ ಮೇಷ್ಟ್ರುಗಳು ಬಿಡಬೇಕಲ್ವಾ.

ಅವರಿಗೆ ನಮ್ಮ ಬುದ್ಧಿ ನಮ್ಮ ಮನೆಯವರಿಗಿಂತ ಚೆನ್ನಾಗಿ ಗೊತ್ತಿರುತ್ತಿತ್ತು. ಮನೆಗೇ ಬಂದು ನಮ್ಮ ಕಿವಿ ಹಿಂಡಿ, ಅಗತ್ಯ ಬಿದ್ರೆ ನಾಲ್ಕು ಬಾರಿಸಿ ದರದರ ಎಳೆದುಕೊಂಡೇ ಶಾಲೆಯನ್ನು ಕಾಣಿಸುತ್ತಿದ್ದರು. ಅವರ ಈ ವರ್ತನೆಗೆ ನಮ್ಮ ಅಪ್ಪ, ಅಮ್ಮ, ಮನೆಯವರ್ಯಾಾರದ್ದೂ ಆಕ್ಷೇಪ ಆರೋಪ ಇರುತ್ತಿರಲಿಲ್ಲ. ಈಗಲೂ ನಾನು ಕಲಿತ ಶಾಲೆಯ ವ್ಯವಸ್ಥೆ ಹೆಚ್ಚು ಕಡಿಮೆ ಹೀಗೇ ಇದೆ. ಸ್ವಲ್ಪ ಬದಲಾವಣೆ ಅಂದ್ರೆ ಆಗಿನ ಮೇಷ್ಟ್ರುಗಳಿಲ್ಲ. ಯಾಕೆ ಯಾರೂ ಆಕ್ಷೇಪ, ಆರೋಪ ಮಾಡುತ್ತಿರಲಿಲ್ಲ ಅಂದ್ರೆ, ಮೇಷ್ಟ್ರು ಹೊಡೆದರಷ್ಟೇ ನಮ್ಮ ಮಕ್ಕಳು ಉದ್ಧಾರವಾಗೋದು ಎಂಬ ಬಲವಾದ ನಂಬಿಕೆ, ಗೌರವ ನಮ್ಮನ್ನು ಹೆತ್ತವರಲ್ಲಿ ಇತ್ತು. ಮೇಷ್ಟ್ರು ಅಂದ್ರೆ ಭಯ, ಪ್ರೀತಿ, ಗೌರವ, ಅಭಿಮಾನ ಎಲ್ಲವೂ ಇದ್ದ ಕಾಲವದು. ಈಗಲೂ ಇಲ್ಲ ಅಂಥ ಕಾಲವಿಲ್ಲ
ಎಂದು ನಾನು ಹೇಳುವುದಕ್ಕೆ ಸಿದ್ಧನಿಲ್ಲ. ಆದರೆ ಆ ಪ್ರಮಾಣದ್ದು ಇಲ್ಲ. ಈಗ ಕಾಲ ಬದಲಾಗಿದೆ.

ಶಾಲೆಯೆಂಬ ಒಟ್ಟೂ ಆಕೃತಿಯೇ ಶುದ್ಧ ವ್ಯವಹಾರಿಕವಾಗಿ, ದಂಧೆಯ ನೆಲೆಯಲ್ಲಿ ನಡೆಯುತ್ತಿದೆ. ದಾರಿಯಲ್ಲಿ ನಿಂತು ಮನೆಗೇ ಬಂದು ಕರ್ಕೊಂಡು ಹೋಗೋಕೆ ಅಥವಾ ಹೋಗುವಂಥ ಮೇಷ್ಟ್ರುಗಳು ಈಗಿಲ್ಲ. ಅಪ್ಪ – ಅಮ್ಮನೇ ತಮ್ಮ ಮಕ್ಕಳನ್ನು ಶಾಲೆಗೆ ಬಿಡಬೇಕು ಅಥವ ಶಾಲಾವಾಹನದಲ್ಲೇ ಕಳಿಸಬೇಕು. ಆಗೆಲ್ಲ ಶಾಲೆಗೆ ಮಕ್ಕಳನ್ನು ಸೇರಿಸೋದು ಬಹು ಸುಲಭವಾಗಿತ್ತು.
ಮೇಷ್ಟ್ರುಗಳೇ ಮನೆವರೆಗೆ ಬಂದು ನಮ್ಮ ಶಾಲೆಗೆ ನಿಮ್ಮ ಮಕ್ಕಳನ್ನಾ ಕಳಿಸಿ ಅಂತ ಹೇಳಿ ಕರ್ಕೊಂಡು ಹೋಗೋರು. ಅಡ್ಮಿಷನ್ ಮಾಡಿಸೋರು. ಈಗ ಹಾಗಿಲ್ಲ.

ಪ್ರತಿಷ್ಠಿತ ಶಾಲೆಗಳಲ್ಲಿ ಅಪ್ಲಿಕೇಶನ್ ಫಾರ್ಮ್ ಪಡೆಯುವುದಕ್ಕೇ ಶಾಲೆಯ ಗೇಟಾಚೆ ರಾತ್ರಿಯಿಡೀ ನಿದ್ದೆ ಬಿಟ್ಟು ನಿಲ್ಲಬೇಕು. ಲಕ್ಷಗಟ್ಟಲೆ ಡೊನೇಷನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಇಂಥ ಶಾಲೆಗಳಲ್ಲಿ ಮೇಷ್ಟ್ರುಗಳು ಮಕ್ಕಳಿಗೆ ಕಲಿಕೆಯ ವಿಚಾರಕ್ಕಾಗಲೀ, ಮಾಡಿದ ತಪ್ಪಿಗಾಗಲೀ, ಅನೈತಿಕವಾಗಿ ವರ್ತಿಸಿದಾಗಾಗಾಲಿ ಹೊಡೆಯೋ ಹಾಗಿಲ್ಲ, ಅಪ್ಪಿತಪ್ಪಿ ಒಂದೆರಡು ಏಟು ಹಾಕಿದರೆ ಹೊಡೆಯುತ್ತಿರುವಾಗಲೇ ಅದು ಟೀವಿಯಲ್ಲಿ ಪ್ರಸಾರವಾಗುತ್ತೆ. ಕಾರಣ ಸಿಸಿಟಿವಿಗಳು ಶಾಲೆಯಲ್ಲಿ ಮೇಷ್ಟ್ರು ಗಳನ್ನು ಮಾತ್ರ ನೋಡುತ್ತಾ ಇರುತ್ತೆ. ‘ನನ್ನ ಮಗ ಅಥವಾ ಮಗಳು ಡಿಸ್ಟಿಂಕ್ಷನ್ ತಗೋಲಿಲ್ಲ. ಆ ಮೇಷ್ಟ್ರು ಸರಿಯಾಗಿ ಪಾಠ ಮಾಡಲ್ಲ’ ಅಂತ ಮ್ಯಾನೇಜ್‌ಮೆಂಟ್‌ಗೆ ದೂರು ಕೊಟ್ಟು, ಆ ಮೇಷ್ಟ್ರುಗಳ ಬದುಕಿನಲ್ಲೇ ಆಟವಾಡೋಕೆ ಪೇರೆಂಟ್‌ಸ್‌‌ಗಳು ಹಠ ತೊಡುತ್ತಾರೆ. ಜಿದ್ದಿಗೆ ಬೀಳುತ್ತಾರೆ.

ಖೆಡ್ಡಾ ತೋಡುತ್ತಾರೆ. ಈ ಮ್ಯಾನೇಜ್‌ಮೆಂಟ್ ಮಂದಿ ಇರ್ತಾರಲ್ಲ, ಇವರದು ಮೈಯೆಲ್ಲಾ ಬಂಗಾರ ಕಿವಿ ಮಾತ್ರ ಹಿತ್ತಾಳೆ. ಇವರೆಲ್ಲಾ ಸರಕಾರದವರಂತೆ ವರ್ತಿಸುವವರೇ ಆಗಿರುತ್ತಾರೆ. ಇವರಿಗೆಲ್ಲಾ ಹಣವೇ ಮುಖ್ಯ. ವಾಸ್ತವ ಏನು ಅಂತ ತಿಳಿಯೋದು ಮುಖ್ಯವಲ್ಲ. ಯಾರದ್ದೋ ಮಾತುಗಳನ್ನು ಕೇಳಿಕೊಂಡು ಆರು ತಿಂಗಳಿಗೋ ವರ್ಷಕ್ಕೋ ಮೇಷ್ಟ್ರುಗಳನ್ನು ಬದಲಾಯಿಸುತ್ತಲೇ ಇವರು ಶಾಲೆಯನ್ನು ಮ್ಯಾನೇಜ್ ಮಾಡ್ತಾರೆ. ‘ಅಷ್ಟೆಲ್ಲ ಹಣಕೊಟ್ಟು ಅವರು ತಮ್ಮ ಮಕ್ಕಳನ್ನು ನಮ್ಮ ಶಾಲೆಯಲ್ಲಿ ಬಿಟ್ಟಿರು ತ್ತಾರೆ.

ಅವರ ಮಾತುಗಳನ್ನು ನಾವು ಕೇಳಬೇಕು. ಇಲ್ಲದೆ ಹೋದ್ರೆ ನಾವು ಶಾಲೆ ನಡೆಸೋದು ಹೇಗೆ ಅಂತ’ ಮ್ಯಾನೇಜ್‌ಮೆಂಟ್‌ನವರು ಪ್ರಶ್ನಿಸುತ್ತಾರೆ. ಆಳುಗರಿಗೆ ಪಂಚೇಂದ್ರಿಯಗಳು ಸರಿಯಿಲ್ಲವಾದರೆ ಎಂಥ ಅನಾಹುತ ಸಂಭವಿಸುತ್ತದೆ ಎಂಬುದನ್ನು ಕಣ್ಣಾರೆ ಕಂಡ ದೇಶ ನಮ್ಮದು. ಶಾಲೆಯನ್ನು ನಡೆಸೋದು ಯಾರು ಅಂತಾನೇ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ನೋಡಿ! ಅಷ್ಟೆಲ್ಲ ಫೀಸು ಕೊಟ್ಟು, ಸಾಕಷ್ಟು ಖರ್ಚುಮಾಡಿ ದೊಡ್ಡದೊಡ್ಡ ಶಾಲೆಗೆ (ಕಟ್ಟಡಗಳು ದೊಡ್ಡದಾಗಿರುವ) ಮಕ್ಕಳನ್ನು
ಸೇರಿಸಿ ಓದಿಸೋದು ಕೆಲವು ಪೇರೆಂಟ್ಸಿಗೆ ಅದೊಂದು ಇನ್ವೆಸ್‌ಟ್‌‌ಮೆಂಟು. ಇನ್ನು ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆ.

ಈ ಪ್ರತಿಷ್ಠೆಯ ಪ್ರಶ್ನೆ ಬಿಡೋಣ. ಇನ್ವೆಸ್‌ಟ್‌‌ಮೆಂಟು ಅಂದೆನಲ್ಲಾ, ಯಾಕೆ? ನೋಡಿ: ಮುಂದೊಂದು ದಿನ ತಮ್ಮ ಮಕ್ಕಳು ಕೆಲಸಕ್ಕೆ ಸೇರಿ ತಾವು ಮಾಡಿದ ಸಾಲ ತೀರಿಸುತ್ತಾರೆ, ತಾವು ರಿಟೈರ್‌ಡ್‌ ಆಗಿ ನೆಮ್ಮದಿಯ ಜೀವನ ಸಾಗಿಸಬಹುದು. ತಾವು ಹಾಕಿದ ದುಡ್ಡು ಬಡ್ಡಿ ಸಮೇತ ಬರುವಷ್ಟು ಮಗನ/ಳ ಸಂಬಳ ಇರುತ್ತೆ ಅಂತ ಕನಸು ಅವರದ್ದು. ಆದರೆ ಅಷ್ಟೊತ್ತಿಗೆ ಇವರಿಗೆಷ್ಟು ವಯಸ್ಸಾಗಿರುತ್ತೋ? ಬದುಕಿರುತ್ತಾರೋ ಇಲ್ಲವೋ? ಮಕ್ಕಳೇನಾದ್ರೂ ಇವರನ್ನು ಬಿಟ್ಟು ಅಮೆರಿಕದಲ್ಲೋ, ಇಂಗ್ಲೆಂಡಲ್ಲೋ ಸೆಟ್‌ಲ್‌ ಆದರೆ ಇವರ ಗತಿಯೇನು? ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣಬೇಕು ನಿಜ.

ಆದರೆ, ಎಲ್ಲವೂ ನಾವಂದುಕೊಂಡಂತೆ ಇರಲ್ಲ. ಅಲ್ವಾ? ಅತೀಯಾದ ಕನಸು ಒಳ್ಳೆಯದಲ್ಲ. ಈ ರೀತಿಯ ಅತೀಯಾದ ಕನಸು ಕಾಣುವ ಹೆತ್ತವರೆಲ್ಲರೂ ತಮ್ಮ ವರ್ತಮಾನದ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರಂತ ವಾಸ್ತವ.
ಇದರ ಬದಲಿಗೆ ತಮ್ಮ ಮಕ್ಕಳಿಗೆ ಜೀವನ ಶಿಕ್ಷಣವನ್ನು ಹೆತ್ತವರು ಕೊಡಬಹುದಲ್ಲ! ಇವತ್ತಿನ ಕಾಲಕ್ಕೆ ತಕ್ಕ ಹಾಗೆ ಬೆಳೆಸಿ. ಅದೇ ಸಮಯಕ್ಕೆ ಬಾಲ್ಯದಿಂದಲೇ ಮೌಲ್ಯಗಳನ್ನೂ ಕಳಿಸಿ. ಸಮಷ್ಟಿಯ ಪ್ರಜ್ಞೆಯನ್ನು ರೂಢಿಸಿ.

ಸಮೂಹವೊಂದು ಸ್ವೀಕರಿಸಬಹುದಾದ ಗುಣ – ಸ್ವಭಾವ – ವ್ಯಕ್ತಿತ್ವವನ್ನು ನಮ್ಮ ನಮ್ಮ ಮಕ್ಕಳಲ್ಲಿ ಎಳವೆಯಲ್ಲೇ ಬೆಳೆಸಲು ಸಾಧ್ಯವಿದೆ. ಎಲ್ಲವನ್ನೂ ಶಾಲೆಯಿಂದಲೇ ಆಗಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ‘ಮನೆಯೇ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರು’ ಅಂತ ಮೇಷ್ಟ್ರುಗಳು ಹೇಳಿಕೊಟ್ಟಿದ್ದು ಅಷ್ಟು ಬೇಗ ಮರೆತು ಹೋಯ್ತಾ? ಅಮೆರಿಕದ ಒಬ್ಬ ಮಹಿಳಾ ಪ್ರಿನ್ಸಿಪಾಲ್ ಸ್ಕೂಲ್ ವೆಬ್ ಸೈಟ್‌ನಲ್ಲಿ ಹೀಗೆ ಬರೆದುಕೊಂಡಿದ್ದರು: ‘ನಾನು ನನ್ನ ಬಾಲ್ಯವನ್ನು ಮನೆಯ ಹೊರಗೆ ಕಾಣಿಸುತ್ತಿದ್ದ ಮಿಂಚುಹುಳುಗಳನ್ನು ನೋಡಿ ಆನಂದಿಸುತ್ತಾ ಕಳೆದೆ. ನನ್ನ ಇಪ್ಪತ್ತೆದನೇ ವಯಸ್ಸಿನಲ್ಲಿ ಮದುವೆಯಾದೆ.
ನನಗೆ ಇಬ್ಬರು ಮಕ್ಕಳು. ಒಬ್ಬ ಕಾಲೇಜು ಓದುತ್ತಿದ್ದಾನೆ.

ನಮ್ಮದು ಸುಖೀ ಕುಟುಂಬ. ಈ ಶಾಲೆಯ ಪ್ರಿನ್ಸಿಪಾಲ್ ಆಗಿ ನಾನು ಹೇಳುವುದಿಷ್ಟೆ: ನೀವು, ನಿಮ್ಮ ಮಕ್ಕಳು ಮತ್ತು ನಾವು ಒಟ್ಟಾಗಿ ಸೇರಿ ಹೊಸತನವನ್ನು ಸೃಷ್ಟಿಸಬಹುದು. ಸ್ವಾರ್ಥವನ್ನು ಬಿಡೋಣ. ನಾವೆಲ್ಲ ಒಂದು ಕುಟುಂಬದಂತೆ ಕಲೆತು ಈ ಮಕ್ಕಳ ಭವಿಷ್ಯವನ್ನು ರೂಪಿಸುವ ಕಡೆ ಮುನ್ನಡೆಯೋಣ’. ‘ವಾಹ್…ಎಂಥಾ ಮಾತು ನೋಡಿ!’ ಸಮಷ್ಟಿ ಪ್ರಜ್ಞೆಗೆ ಇದಕ್ಕಿಂತ ಬೇರೆ ಉತ್ತಮ ಉದಾಹರಣೆ ಬೇಕಾ? ಅಮೆರಿಕಾದ ಪ್ರತಿ ಸರಕಾರಿ ಶಾಲೆಯೂ ಒಂದು ವೆಬ್ ಸೈಟನ್ನು ಹೊಂದಿರುತ್ತದೆ. ಅದರಲ್ಲಿ ಶಾಲೆಯ ಧ್ಯೇಯೋದ್ದೇಶ, ಪೋಷಕರ ಪಾತ್ರ, ಬಸ್ ವೇಳಾಪಟ್ಟಿ, ಜೊತೆಗೆ ಶಾಲೆಯಲ್ಲಿರುವ ಎಲ್ಲಾ ಸಿಬ್ಬಂದಿಯ ಫೋನ್
ಮತ್ತು ಈಮೇಲ್ ವಿಳಾಸವಿರುತ್ತೆ. ಪ್ರಾಾಂಶುಪಾಲರು ಮತ್ತು ಟೀಚರುಗಳು ತಮ್ಮ ಪೂರ್ವಾಪರಗಳನ್ನು ಮುಕ್ತವಾಗಿ ಅಲ್ಲಿ ದಾಖಲಿಸುತ್ತಾರೆ.

ಅಮೆರಿಕದಲ್ಲಿ ಖಾಸಗಿ ಮತ್ತು ಸರಕಾರಿ ಶಾಲೆಗಳೆರಡರಲ್ಲೂ ಒಂದೇ ರೀತಿಯ ಮೂಲಭೂತ ಸೌಕರ‌್ಯಗಳಿರುತ್ತವೆ. ಆದರೆ
ಪಠ್ಯದ ವಿಚಾರದಲ್ಲಿ ಸರಕಾರಿ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ಹೇರುವುದಿಲ್ಲ. ಹಾಗಾಗಿ ಮಕ್ಕಳು ನಾಲ್ಕನೆಯ ತರಗತಿಯವರೆಗೆ ಹಾಯಾಗಿ ತಿಂದುಂಡು ಆಟ ಆಡುತ್ತಾ ಬೆಳೆಯುತ್ತಾರೆ. ಮಕ್ಕಳ ವಿದ್ಯಾಭ್ಯಾಸದ ಖರ್ಚು, ಭತ್ಯೆೆ, ಊಟ, ಪುಸ್ತಕ
ಇವೆಲ್ಲದಕ್ಕೂ ಹಣವನ್ನು ಸರಕಾರ ನೀಡುತ್ತದೆ. ಖಾಸಗಿ ಶಾಲೆಗಳಿಗಿಂತಲೂ ದೊಡ್ಡದಾದ ಆಟದ ಮೈದಾನ, ಲೈಬ್ರರಿ ಸರಕಾರಿ ಶಾಲೆಗಳಲ್ಲಿರುತ್ತದೆ.

ಹೀಗಿದ್ದರೂ ಖಾಸಗಿ ಶಾಲೆಗಳಿಗೇ ಹೆಚ್ಚು ಹಣ ನೀಡಿಯಾದರೂ ತಮ್ಮ ಮಕ್ಕಳನ್ನು ಸೇರಿಸುವವರು ಇಲ್ಲಿಂದ ಅಲ್ಲಿ
ಹೋಗಿ ನೆಲೆಸಿರುವ ಭಾರತೀಯರು. ಕಾರಣ ಖಾಸಗಿ ಶಾಲೆಗಳಲ್ಲಿ ಆಟಕ್ಕಿಿಂತ ಪಠ್ಯಕ್ಕೆೆ ಹೆಚ್ಚು ಒತ್ತು ನೀಡುತ್ತಾರೆ ಎಂದು. ಅಮೆರಿಕದಲ್ಲಿ ಪಾಸು – ಫೇಲು ಮುಖ್ಯವಲ್ಲ. ಶಾಲೆಯಲ್ಲಿ ಮಗು ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ನಿರತವಾಗಿರಬೇಕು ಅನ್ನುವುದು ಅಲ್ಲಿಯ ಸರಕಾರಿ ಶಾಲೆಗಳ ನೀತಿ. ಹಾಗಾಗಿ ಅಮೆರಿಕದ ಶೇಕಡಾ ಎಂಬತ್ತೆೆಂಟರಷ್ಟು ಮಕ್ಕಳು ಸರಕಾರಿ ಶಾಲೆಗಳಲ್ಲೇ ಓದುತ್ತಾರೆ. ಇಲ್ಲಿಂದ ವಲಸೆ ಹೋದವರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಾರೆ.

ಭಾರತದ ಸಂದರ್ಭದಲ್ಲಿ ಮಾತನಾಡುವುದಾದರೆ ಇದಕ್ಕೆೆ ತೀರಾ ವಿರುದ್ಧವಾದ ಪರಿಸ್ಥಿತಿ ನಮ್ಮದು. ಶಾಲೆಗೆ ಸೇರುವುದು ಮಗುವಿಗೆ ಮತ್ತೊೊಂದು ಜನ್ಮದ ಆರಂಭವೇ ಸರಿ. ಆ ಹೊತ್ತಿನಲ್ಲಿ ಮಗುವಿನಲ್ಲಿ ಸ್ವಂತ ಶಕ್ತಿಯೆಂಬುದೇ ಇರುವುದಿಲ್ಲ. ಬಳಿಯಲ್ಲಿರುವ ತಾಯಿ ಅಥವಾ ತಂದೆಯೇ ಅದರ ಶಕ್ತಿ. ಶಾಲೆಯಲ್ಲಿ ಶಿಕ್ಷಕರು ಆ ಶಕ್ತಿ ಎಂದು. ಮೊಟ್ಟಮೊದಲು ಶಾಲೆ
ಯನ್ನು ಪ್ರವೇಶಿಸುವ ಹೊತ್ತು ಮಗುವಿನ ಮನಸ್ಸು ಹೇಗಿರುತ್ತದೆ ಎಂಬುದನ್ನು ಸಂಶೋಧಿಸಿ ತಿಳಿಸುವ ಯಾವುದೇ ವಿಧಾನವನ್ನು ಅಥವಾ ಸಾಧನವನ್ನು ಯಾರೂ ಈ ತನಕ ಕಂಡುಹಿಡಿದಿಲ್ಲ. ಪ್ರಾಾಯಃ ಕಂಡು ಹಿಡಿಯುವುದೂ ಇಲ್ಲ. ಆದರೆ ತಾಯಿ, ತಂದೆ, ಶಿಕ್ಷಕರಿಗೆ ಮಗುವಿನ ಮನಸ್ಸನ್ನು ಅರ್ಥೈಸಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ಆ ಮಹಿಳಾ
ಪ್ರಿನ್ಸಿಪಾಲ್ ಬರೆದುಕೊಂಡ ಮಾತುಗಳನ್ನು ನಾವು ಸಾಧ್ಯವಾಗಿಸಬಹುದಲ್ಲ!

ಅದೇನೂ ಅಸಾಧ್ಯದ ಕಾರ‌್ಯವಲ್ಲ. ಆದರೆ ಯಾರೂ ಸಿಲಬಸ್ಸಿನಾಚೆ ಜಿಗಿಯ ಬಾರದು ಅನ್ನುವ ನಮ್ಮ ವ್ಯವಸ್ಥೆೆ (ನಮ್ಮಲ್ಲಿನ ಅನೇಕ ಟೀಚರುಗಳೂ ಅದೇ ಮೆಂಟಾಲಿಟಿಯವರು ಎಂಬ ಮಾತು ಬೇರೆ) ಶಿಕ್ಷಕರ ಮುಂದೆ ಒಂದು ಲಕ್ಷ್ಮಣರೇಖೆಯನ್ನು ಎಳೆದುಬಿಟ್ಟಿದೆ. ಪಠ್ಯದಲ್ಲಿರುವುದನ್ನು ಚಾಚೂ ತಪ್ಪದೆ ಮಕ್ಕಳ ಮಿದುಳಿಗೆ ರವಾನಿಸುವ ಕೆಲಸ ಮಾಡುವವರೇ ಬೆಸ್‌ಟ್‌
ಟೀಚರ್. ಮಗು ‘C’ for Cat ಎಂದೇ ಹೇಳಬೇಕು.

Clean, Car, Cap, Cow, Cut, Cold, Cup, Can, Camel ಅಂದರೆ ಅದು ತಪ್ಪು. ಮಕ್ಕಳ ಪೋಷಕರು ಬಯಸುವುದೂ ಅದನ್ನೇ. ್ಟParents Teachers ಮೀಟಿಂಗು ಅನ್ನೋೋದು ಪೋಷಕರ ಪಾಲಿಗೆ ದೂರು ನೀಡುವುದಕ್ಕೊೊಂದು ಸಿದ್ಧ ವೇದಿಕೆ. ಶಿಕ್ಷಕರ ಪಾಲಿಗೆ ಇದು ಪೋಷಕರನ್ನು ಸಂತೈಸುವ ಕಾರ‌್ಯಕ್ರಮ. ಅದೊಂದು ದಿನ ಸಣ್ಣಮಟ್ಟಿಗಿನ ಯುದ್ಧ ನಡೆದೇ ಬಿಡುತ್ತದೆ. ಅಲ್ಲಿ
ಮಾತಿಗೆ ಮಾತು, ವಾದ – ಪ್ರತಿವಾದ ಸಾಮಾನ್ಯ. ಮನಸುಗಳು ವಿರುದ್ಧವಾಗಿ ವರ್ತಿಸಲು ಇದು ನಾಂದಿಯಾಗುತ್ತದೆ. ವೈಮನಸುಗಳು ಹುಟ್ಟಿಕೊಳ್ಳುತ್ತವೆ. ಅದರ ಬದಲಿಗೆ ರಚನಾತ್ಮಕ ಸಲಹೆಗಳಾಗಲಿ, ಆ ಮಹಿಳಾ ಪ್ರಿನ್ಸಿಪಾಲ್ ಬರೆದುಕೊಂಡಂತೆ ಸಮಷ್ಟಿಯ ಒಳಿತಿಗಾಗಲಿ, ಒಂದು ಪ್ರಶಂಸೆಯ ಮಾತಾಗಲಿ ಕೇಳಿಸುವುದು ಅಪರೂಪ. ಇಂಗ್ಲೆೆಂಡಿನಲ್ಲೋೋ, ಜರ್ಮನಿ
ಯಲ್ಲೋ, ಫ್ರಾನ್ಸಿನಲ್ಲೋ, ಅಮೆರಿಕದಲ್ಲೋ ಇನ್ಯಾವುದೋ ದೇಶದಲ್ಲಿ ಕೆಲಸ ಮಾಡುತ್ತಿರುವ ಸಾಫ್‌ಟ್‌‌ವೇರ್
ಎಂಜಿನಿಯರುಗಳ ಪೈಕಿ ಹೆಚ್ಚಿನವರು ಬೆಂಗಳೂರಿನಲ್ಲೇ ತಯಾರಾದವರು ಎಂದು ನಾವು ಹೆಮ್ಮೆಪಡುತ್ತೇವೆ.
ಇನ್ನೊೊಂದೆಡೆ ನೂರಾ ಇಪ್ಪತ್ತೆೆಂಟು ಕೋಟಿ ಜನಸಂಖ್ಯೆೆಯನ್ನು ಹೊಂದಿರುವ ನಮ್ಮ ದೇಶ ಒಲಂಪಿಕ್‌ಸ್‌‌ನಲ್ಲಿ ಒಂದು ಚಿನ್ನದ ಪದಕ ಗೆಲ್ಲುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ದುಃಖಿಸುತ್ತೇವೆ. ಕಾರಣ ಇಷ್ಟೆೆ, ಮಗ ತೊಂಬತ್ತು ಪರ್ಸೆಂಟ್ ಪಡೆದರೆ ಹೆಮ್ಮೆ ಪಡುವ ಅಪ್ಪ, ಅಮ್ಮ ಅದೇ ಮಗ ವಾಲಿಬಾಲ್ ನಲ್ಲೋ, ಬಾಸ್ಕೆೆಟ್‌ಬಾಲ್‌ನಲ್ಲೋ, ಅಥ್ಲೆೆಟಿಕ್‌ಸ್‌‌ನಲ್ಲೋ
ಇನ್ಯಾವುದೋ ಆಟದಲ್ಲಿ ಗೆದ್ದು ಬಂದಾಗ ಆ ಪರಿ ಹೆಮ್ಮೆಪಡುವುದಿಲ್ಲ.

ಬೇಕಿದ್ದರೆ ನೀವೇ ಆಲೋಚಿಸಿ ನೋಡಿ: ಎಲ್‌ಕೆಜಿಯಲ್ಲಿದ್ದಾಗ ಅದ್ಭುತವಾಗಿ ಡ್ರಾಯಿಂಗ್ ಮಾಡುತ್ತಿದ್ದ ಮಗು  ದೊಡ್ಡಾಗುತ್ತಾ
ಬಂದ ಹಾಗೆ ಪೇಂಟಿಂಗ್ ಬಾಕ್‌ಸ್‌ ಅನ್ನು ಅಪ್ಪಿತಪ್ಪಿಯೂ ಮುಟ್ಟುವುದಿಲ್ಲ. ದಿನಾ ಸಂಜೆ ಆಟವಾಡುತ್ತಿದ್ದ ಹುಡುಗ ಮನೆಯ ಮೂಲೆಗೆ ಸೇರಿಬಿಟ್ಟಿರುತ್ತಾನೆ.

ಒಂದು ಸಂದರ್ಭದಲ್ಲಿ ಅತ್ಯುತ್ತಮವಾಗಿ ಚೆಸ್ ಅನ್ನೋೋ, ಕೇರಂ ಅನ್ನೋೋ, ಈಜನ್ನೋೋ, ಕಥೆ – ಕವನ ಬರೆಯುವುದನ್ನೋೋ, ಮಾಡುತ್ತಿಿದ್ದ ಮಕ್ಕಳು ಎಲ್ಲವನ್ನೂ ನಿಲ್ಲಿಸಿ ಒಂದೇ ಸಮನೆ ಮೌನಕ್ಕೆೆ ಶರಣಾಗಿ ಬಿಡುತ್ತಾಾರೆ. ಇದರ ಹಿಂದೆ ಹೆತ್ತವರ ಪಿತೂರಿ ಇದೆ. ಕ್ರೀಡೆ ಅಥವಾ ಕಲೆ ಬದುಕನ್ನು ರೂಪಿಸುವುದಿಲ್ಲ, ಹೊಟ್ಟೆೆ ತುಂಬಿಸುವುದಿಲ್ಲ ಎಂಬ ಸಿದ್ಧಾಾಂತ ಅವರದ್ದು.  ಹೋಗಲಿ ಬಿಡಿ. ವಿದೇಶವನ್ನು ಉದ್ಧಾಾರ ಮಾಡುತ್ತಿರುವ ನಮ್ಮ ಸಾಫ್‌ಟ್‌‌ವೇರುಗಳು ತಮಗೆ ಜನ್ಮಕೊಟ್ಟ,
ವಿದ್ಯಾಭ್ಯಾಸ ನೀಡಿದ ಈ ದೇಶದ ಋಣಸಂದಾಯ ಮಾಡುತ್ತಾರಾ? ಆ ನೆಲೆಯಲ್ಲಿ ಯೋಚನೆಯನ್ನಾದರೂ ಮಾಡುತ್ತಾರಾ? ಅದೂ ಇಲ್ಲ. ಎಲ್ಲೋ ಒಂದಿಷ್ಟು ನಿದರ್ಶನಗಳು ಹುಡುಕಿದರೆ ಸಿಕ್ಕೀತು. ಸಿಗುತ್ತದೆ. ಇದರ ಬದಲು ತಮ್ಮ ಸಂಬಳದಲ್ಲಿ
ಅರ್ಧದಷ್ಟನ್ನು ತೆಗೆದಿರಿಸಿ ದೊಡ್ಡದೊಡ್ಡ ಷಹರುಗಳಲ್ಲಿ ಸೈಟುಗಳನ್ನು ಖರೀದಿ ಮಾಡುತ್ತಾರೆ.

ನೀವು ಬೇಕಾದರೆ ಕೇಳಿನೋಡಿ: ‘ಮಗು, ನೀನು ದೊಡ್ಡವನಾದ ಮೇಲೆ ಏನು ಮಾಡುತ್ತೀ?’ ಎಂದು. ಮಗು ಹೇಳುತ್ತೆೆ: ‘ನಾನು, ಡಾಕ್ಟರ್ ಆಗ್ತೀನಿ, ಎಂಜಿನಿಯರ್ ಆಗ್ತೀನಿ, ನಾನು ತುಂಬಾ ಹಣ ತಗೊಂಡು ದೊಡ್ಡ ಮನೆ ಕಟ್ತೀನಿ’ ಅಂತ ಅದ್ಯಾವುದೋ ಅಪಾರ್ಟ್‌ಮೆಂಟ್ ತೋರಿಸಿಕೊಂಡು ಹೇಳುತ್ತೆೆ. ಹಾಗಾದರೆ ನಮ್ಮಲ್ಲಿ ಎಲ್ಲರೂ ಡಾಕ್ಟ್ರು, ಎಂಜಿನಿಯರುಗಳು ಆಗಿಯೇ ಬದುಕಿದ್ದಾರಾ? ಅಥವಾ ಬದುಕುತ್ತಿದ್ದಾರಾ? ಬದುಕಬೇಕಾ? ನಮ್ಮ ನಮ್ಮ ಮನೆಯಲ್ಲಿರುವ ಹಿರಿಯರು ಈವರೆಗೆ ಬದುಕಿದ ‘ಜೀವನ’ ಜೀವನವೇ ಅಲ್ಲ ಎಂಬಷ್ಟು ಅಸಹ್ಯ ಈಗಿನವರಲ್ಲಿ ಬೆಳೆದುಬಿಟ್ಟಿದೆ.

ಮೂರ್ತವಾದ ಒಂದು ಅಸಹ್ಯ ಈಗಿನವರಲಿ ನಡೆಯಲ್ಲಿದೆ. ಅಮೆರಿಕದವರ ಹಗಲು ಅವರಿಗೆ ಅರ್ಥಪೂರ್ಣವಾಗಬೇಕಾದರೆ ನಮ್ಮವರು ರಾತ್ರಿ ನಿದ್ರೆೆ ಬಿಡಬೇಕು. ಎಂಥಾ ದುರಂತ ನೋಡಿ ನಮ್ಮವರದ್ದು! ಪ್ರಸಿದ್ಧ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್
ಸುಮಾರು ಆರು ದಶಕಗಳ ಹಿಂದೆ ತನ್ನ ಅಪ್ಪನ ಮಾತನ್ನು ಕೇಳಿದ್ದರೆ ಇಂದು ನಾವು ನೂರಾರು ಮಧುರ ಗೀತೆಗಳಿಂದ ವಂಚಿತರಾಗುತ್ತಿದ್ದೆೆವು. ಅವರದು ರಾಜ ಮನೆತನ. ಮಗ ಚೆನ್ನಾಗಿ ಓದಿ ಲಾಯರ್ ಆಗಿ ವಿದೇಶಗಳಲ್ಲಿ ಪ್ರಾಕ್ಟೀಸು ಮಾಡುವಂತಾಗಬೇಕು ಎಂದು ಅವರ ತಂದೆ ಬಯಸುತ್ತಾರೆ. ಆದರೆ ಮಗ ಹೊಲಗದ್ದೆೆಗಳಲ್ಲಿ ಓಡಾಡುತ್ತಾ ಅಲ್ಲಿನ ಬಡ ಹೆಣ್ಣುಮಕ್ಕಳು ಹಾಡುವ ಜನಪದೀಯ ಗೀತೆಗಳನ್ನು ಕೇಳುತ್ತಾ ಪರಿಸರದ ಮಡಿಲಲ್ಲಿ ಬೆಳೆಯುತ್ತಾನೆ. ಆತನಿಗೆ ಸಂಗೀತ ವೆಂದರೆ ಇಷ್ಟ. ಮಗನ ಈ ಅಭಿರುಚಿ ಅಪ್ಪನಿಗೆ ನಿರಾಶೆಯನ್ನುಂಟು ಮಾಡುತ್ತದೆ.

ಮಗ ಕೋಟ್ಯಂತರ ಜನರ ಮನಸ್ಸು ಗೆಲ್ಲುತ್ತಾನೆ. ಐಸಾಕ್‌ನ್ಯೂಟನ್, ರೊನಾಲ್‌ಡ್‌ ರಾಸ್, ಗ್ರೆೆಗರಿ ಮೆಂಡೆಲ್, ಗೆಲಿಲಿಯೊ,
ಥಾಮಸ್ ಆಲ್ವ ಎಡಿಸನ್, ಮೈಕೆಲ್ ಫಾರಡೆ, ಮೇರಿಕ್ಯೂರಿ, ಅಲ್ಬರ್ಟ್ ಐನ್‌ಸ್ಟೀನ್ – ಇವರೆಲ್ಲರ ಬದುಕಿನ ಹಿನ್ನೆೆಲೆಯನ್ನು ಓದಿದಾಗ ಮೇಲಿನ ನನ್ನ ಮಾತುಗಳು ಅರ್ಥವಾದೀತು. ಜಗತ್ತಿನ ಎಲ್ಲಾ ಅಪ್ಪ – ಅಮ್ಮಂದಿರಿಗೂ ತಮ್ಮ ಮಗನೋ, ಮಗಳೋ
ತಮ್ಮಿಿಚ್ಛೆೆಯಂತೆ ಬೆಳೆಯಬೇಕು ಎಂಬ ಹಠ. ಚೆನ್ನಾಗ ಓದು, ಚೆನ್ನಾಗಿ ಕಾಸು ಸಂಪಾದನೆ ಮಾಡು ಅನ್ನುವುದು ಅವರ ಉಪದೇಶ. ಈ ಕಾರಣಕ್ಕೆೆ ನಮ್ಮ ಶಾಲೆಗಳಲ್ಲಿ ಸಂಗೀತ, ಕ್ರೀಡೆ, ಮೊದಲಾದ ವಿಭಾಗಗಳಲ್ಲಿ ನೈಪುಣ್ಯ ಹೊಂದಿರುವ ಟೀಚರುಗಳು
ಇರುವುದು ಕಡಿಮೆ. ‘ಜಾಗಕ್ಕೊೊಂದು ಜನ’ ಎಂಬಂತೆ ಇರುತ್ತಾಾರೆ. ದೈಹಿಕ ಶಿಕ್ಷಕರು ಇದ್ದರೂ ಅವರಿಗೆ ಮಿಕ್ಕ ಟೀಚರುಗಳಿ ಗಿರುವ ಸ್ಥಾನಮಾನವಿರುವುದಿಲ್ಲ.