Thursday, 19th September 2024

’ಮುಸಲ್ಮಾನ’ರ ಬಹುದೊಡ್ಡ ಆಸೆಗೆ ಕೊಳ್ಳಿಯಿಟ್ಟರಾ ಯೋಗಿ ?

ವೀಕೆಂಡ್ ವಿಥ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಪೆಟ್ರೋಲ್ ಬೆಲೆ ಏರಿಕೆಯಾಗಿದೆ, ಬೇಳೆ ಕಾಳುಗಳ ಬೆಲೆ ಏರಿಕೆಯಾಗಿದೆ, ದೇಶದಲ್ಲಿ ಆಮದು ಹೆಚ್ಚಾಗುತ್ತಿದೆ, ಚಿನ್ನದ ಬೆಲೆ ಏರಿಕೆಯಾಗಿದೆ, ರಿಯಲ್ ಎಸ್ಟೇಟ್ ಬೆಲೆ ಹೆಚ್ಚಾಗಿದೆ, ಹೀಗೆ ದಿನನಿತ್ಯ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆಯೆಂದು ಬೊಬ್ಬೆ ಹೊಡೆದುಕೊಳ್ಳುವ ಮೋದಿ ವಿರೋಧಿಗಳಿಗೆ ಭಾರತದ ಪ್ರತಿ ಯೊಂದು ಸಮಸ್ಯೆಯ ಮೂಲವಾದಂಥ ‘ಜನಸಂಖ್ಯಾ ಸ್ಫೋಟ’ವನ್ನು ತಡೆಯಲು ಕಾನೂನೊಂದನ್ನು ರೂಪಿಸಲು ‘ಯೋಗಿ ಆದಿತ್ಯನಾಥ್’ ಸರಕಾರ ಮುಂದಾ ದರೆ ಅದನ್ನೂ ವಿರೋಧಿಸುವಲ್ಲಿ ನಿರತರಾಗಿದ್ದಾರೆ.

ಜಗತ್ತಿನ ಯಾವುದೇ ದೇಶದ ಮೂಲ ಸಮಸ್ಯೆಗಳ ಮೂಲ ಅಲ್ಲಿನ ಜನಸಂಖ್ಯೆ. ಜನಸಂಖ್ಯೆ ಹಾಗೂ ಸಂಪ ನ್ಮೂಲಗಳ ನಡುವಿನ ವ್ಯತ್ಯಾಸ ಹೆಚ್ಚಾದಂತೆ ಆ ದೇಶದ ಸಮಸ್ಯೆಗಳು ದಿನ ಬೆಳಗಾದಂತೆ ಹೆಚ್ಚುತ್ತಲೇ ಇರುತ್ತವೆ. ಮಾತು ಮಾತಿಗೂ ಭಾರತದ ಅಭಿವೃದ್ಧಿಯನ್ನು ಅಮೆರಿಕ ದೇಶಕ್ಕೆ ಹೋಲಿಕೆ ಮಾಡುವವರಿಗೆ ಭಾರತದ ಭೂ ಭಾಗಕ್ಕಿಂತಲೂ ಅಮೆರಿಕದ ಭೂಭಾಗವು ಮೂರು ಪಟ್ಟು ಹೆಚ್ಚಿದೆಯೆಂಬ ಸತ್ಯ ತಿಳಿದಿಲ್ಲ, ಅಮೆರಿಕದ ಜನಸಂಖ್ಯೆ ಸುಮಾರು 37 ಕೋಟಿಯಷ್ಟಿದೆ, ಆದರೆ ಭಾರತದ ಜನಸಂಖ್ಯೆ 137 ಕೋಟಿಯನ್ನು ದಾಟಿದೆ. ಅಮೆರಿಕ ದೇಶದಲ್ಲಿನ ಭೂಭಾಗವನ್ನು ಹಂಚಿದರೆ ಬಹುಶಃ ಒಬ್ಬೊಬ್ಬರಿಗೆ ಸುಮಾರು 10 ಎಕರೆ ಸಿಗಬಹುದು, ಆದರೆ ಭಾರತದ ಭೂಭಾಗವನ್ನು ಹಂಚಿದರೆ ಒಬ್ಬೊಬ್ಬರಿಗೆ 20/30 ವಿಸ್ತೀರ್ಣದ ಸೈಟಿನಷ್ಟು ಜಾಗ ಸಿಗುವುದೂ ಸಹ ಅನುಮಾನ.

ಅಮೆರಿಕ ದೇಶದಲ್ಲಿ ಜನಸಂಖ್ಯೆಗಿಂತಲೂ ಹೆಚ್ಚಿನ ಸಂಪನ್ಮೂಲವನ್ನು ಕಾಣಬಹುದು. ಮುಂದುವರಿದ ಐರೋಪ್ಯ ದೇಶಗಳಾದ ಜರ್ಮನಿ, ಬ್ರಿಟಿಷ್ ದ್ವೀಪಗಳು, ಫ್ರಾನ್ಸ್, ಇಟಲಿ ದೇಶಗಳನ್ನು ಹೊಗಳುವ ಮೋದಿ ವಿರೋಧಿಗಳು ಅಲ್ಲಿನ ಅಭಿವೃದ್ಧಿಯ ಯಶಸ್ಸಿನ ಹಿಂದಿನ ಕಾರಣ ಕಡಿಮೆ ಜನಸಂಖ್ಯೆಯೆಂಬುದರ ಅರಿವಿದ್ದರೂ
ತಮ್ಮ ಮತಬ್ಯಾಂಕ್ ಆಗಿರುವ ಮುಸಲ್ಮಾನರ ವೋಟು ಎಲ್ಲಿ ತಮ್ಮ ಕೈ ತಪ್ಪುವುದೆಂಬ ಭಯದಿಂದ ದೇಶದ ಹಿತಾಸಕ್ತಿಯನ್ನು ಮರೆತು ರಾಜಕೀಯ ಮಾಡುವಲ್ಲಿ ನಿರತರಾಗಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ನಶಿಸಿಹೋಗಿದ್ದ ‘ಜಪಾನ್’ ದೇಶವು ಜಗತ್ತಿನಲ್ಲಿ ನಂಬರ್ ಒನ್ ದೇಶವಾಗಲು ಕಾರಣವಾದದ್ದು ಜನಸಂಖ್ಯಾ ನೀತಿ, ಈಗ ಜಪಾನಿನಲ್ಲಿ ಜನಸಂಖ್ಯಾ ನೀತಿಯಿಂದ ಯುವಕ ಯುವತಿಯರ ಜನಸಂಖ್ಯೆ ಕಡಿಮೆಯಾಗಿರುವುದು ನಿಜವಾದರೂ ಸಹ, ಅಂದು ಜಪಾನ್ ತೆಗೆದು ಕೊಂಡ ನಿರ್ಧಾರದಿಂದ ಇಡೀ ಜಗತ್ತೇ ಇಂದು ತನ್ನೆಡೆಗೆ ನೋಡುವಂತಾಯಿತು. ಜಪಾನ್ ಈಗ ತನ್ನ ಜನಸಂಖ್ಯಾ ನೀತಿಯನ್ನು ಸಡಿಲಿಸುವ ಎಲ್ಲಾ
ಅವಕಾಶವೂ ಇದೆ, ಹಾಗಾಗಿ ಜಪಾನ್ ನೂತನ ನೀತಿಗಳ ಮೂಲಕ ತನ್ನ ಜನಸಂಖ್ಯೆಯನ್ನು ಈಗ ಹೆಚ್ಚಿಸುವಲ್ಲಿ ತೊಡಗಿದೆ.

ಸರಕಾರಗಳು ರಚಿಸುವ ಯಾವ ನೀತಿಗಳೂ ಶಾಶ್ವತವಲ್ಲ, ಕಾಲಕ್ಕೆ ತಕ್ಕಂತೆ ದೇಶ ಹಾಗೂ ಜನಗಳ ಹಿತದೃಷ್ಟಿಯಿಂದ ಆಗಾಗ ಬದಲಾಯಿಸಬೇಕಾಗುತ್ತದೆ.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದಲೂ ಜನಸಂಖ್ಯೆಯನ್ನು ನಿಯಂತ್ರಿಸಲು ಕಾನೂನೊಂದನ್ನು ತರುತ್ತಾರೆಂಬ ವಿಶ್ವಾಸ ಬಹುತೇಕ
ಭಾರತೀಯರಿಗಿತ್ತು. ಇದರ ಭಾಗವಾಗಿ ಅಸ್ಸಾಂ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಮುಂದಾಗಿದ್ದಾರೆ. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನಿನ ಕರಡು ಪ್ರತಿಯನ್ನು ಸಾರ್ವಜನಿಕರ ಮುಂದೆ ಚರ್ಚೆಗೆ ಇಟ್ಟಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಯೂ ಇನ್ನು 6 ತಿಂಗಳಲ್ಲಿರುವುದರಿಂದ ಯೋಗಿಜೀ ಚುನಾವಣಾ ದೃಷ್ಟಿಯಿಂದ ಈ ಕಾಯಿದೆಯನ್ನು ತರಲು ಮುಂದಾಗಿದ್ದರೆಂಬ ವಾದವನ್ನು ಮೋದಿ ವಿರೋಧಿಗಳು ಜನರ ಮುಂದಿಡುತ್ತಿದ್ದಾರೆ. ಜನಸಂಖ್ಯಾ ನಿಯಂತ್ರಣ ದೃಷ್ಟಿಯ ಮೊಟ್ಟ ಮೊದಲ ಹೆಜ್ಜೆಯಾಗಿ ‘ತ್ರಿವಳಿ ತಲಾಕ್’ ಕಾಯಿದೆ ಯನ್ನು ಜಾರಿಗೊಳಿಸಿದ್ದರ ಪರಿಣಾಮವಾಗಿ ಚುನಾವಣೆಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ನರೇಂದ್ರ ಮೋದಿಯವರ ಪರವಾಗಿ ನಿಂತರು. ಭಾರತದ ಪ್ರತಿಯೊಂದು ರಾಜ್ಯದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಜನಸಂಖ್ಯಾ ಕಾಯಿದೆಯನ್ನು ಜಾರಿಗೆ ತರಲು ಬಿಟ್ಟರೆ, ಎಲ್ಲಿ ದೇಶದ ಮತದಾರ ಪುನಃ ಮೋದಿಯವರ ಪರವಾಗಿ ನಿಲ್ಲುತ್ತಾನೆಂಬ ಭಯ ವಿರೋಧಿಗಳನ್ನು ಕಾಡುತ್ತಿದೆ.

ವಿಪರ್ಯಾಸವೆಂದರೆ ಈ ಕಾಯಿದೆಯಿಂದ ಉತ್ತರ ಪ್ರದೇಶದಲ್ಲಿ ಹೆಚ್ಚು ಸಮಸ್ಯೆಯನ್ನು ಅನುಭವಿಸುವವರು ಬಿಜೆಪಿ ಶಾಸಕರುಗಳು. ಯೋಗಿ ಸರಕಾರದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಶಾಸಕರುಗಳಿಗೆ ಎರಡಕ್ಕಿಂತಲೂ ಹೆಚ್ಚಿನ ಮಕ್ಕಳಿವೆ, ಈ ಕಾಯಿದೆಯ ಬಗ್ಗೆ ಹೆಚ್ಚಾಗಿ ಚಿಂತಿಸಬೇಕಿರುವುದು ಯೋಗಿಯೇ ಹೊರತು ಅವರ ವಿರೋಧಿಗಳಲ್ಲ. ಮುಸಲ್ಮಾನರನ್ನು ಟಾರ್ಗೆಟ್ ಮಾಡುವ ಸಲುವಾಗಿ ಯೋಗಿ ಈ ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆಂದು ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮೋದಿ ವಿರೋಧಿಗಳು ಮಾಡುತ್ತಿದ್ದಾರೆ.

ವಿಪರ್ಯಾಸವೆಂದರೆ ಒಂದೆಡೆ ಭಾರತದ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ, ಮತ್ತೊಂದೆಡೆ ಬೀದಿಗೊಂದರಂತೆ ಬಂಜೆತನ ನಿರ್ಮೂಲನಾ ಆಸ್ಪತ್ರೆ ಗಳೂ ಸಹ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವಿಷ್ಟೇ ಮಕ್ಕಳನ್ನು ಸಾಕುವ ಸಾಮರ್ಥ್ಯವಿರುವವರು ಮದುವೆಯ ನಂತರ ಜೀವನವನ್ನು ಆನಂದಿಸುವ ನಿಟ್ಟಿನಲ್ಲಿ ಸಮಯ ವನ್ನು ವ್ಯರ್ಥ ಮಾಡಿ ಕಾಲ ತಳ್ಳುತ್ತಿದ್ದಾರೆ, ಸಾಕುವ ಸಾಮರ್ಥ್ಯವಿಲ್ಲದವರು ಮೂರು, ನಾಲ್ಕು, ಐದು ಮಕ್ಕಳನ್ನು ಹೆತ್ತು ಸರಕಾರವನ್ನು ಅವಲಂಬಿಸಿದ್ದಾರೆ. ಎರಡು ವರ್ಷದ ಹಿಂದೆ ದೆಹಲಿಯಲ್ಲಿ ನಡೆದ ಘಟನೆಯೊಂದನ್ನು ಓದುತ್ತಿರುವಾಗ ಕಣ್ಣಿನಲ್ಲಿ ನೀರು ಬಂದಿತ್ತು.

ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವವನಿಗೆ ಮೂರು ಜನ ಮಕ್ಕಳಿದ್ದರು. ಅವನಿಗೆ ಸರಿಯಾದ ಸಮಯದಲ್ಲಿ ಕೂಲಿ ಸಿಗದ ಕಾರಣ ಮೂರು ದಿನಗಳ ಕಾಲ ಆತ ಮನೆಗೆ ಬಂದಿರಲಿಲ್ಲ, ಹೊಟ್ಟೆಗೆ ಊಟವಿಲ್ಲದ ಕಾರಣ ಮಕ್ಕಳು ಸತ್ತು ಹೋಗಿದ್ದರು. ತನ್ನನ್ನು ತಾನೇ ಸಾಕಿಕೊಳ್ಳಲು ಯೋಗ್ಯತೆಯಿಲ್ಲದವನಿಗೆ ಮದುವೆ ಯಾಕೆ? ಮಕ್ಕಳ್ಯಾಕೆ? ಅನ್ಯಾಯವಾಗಿ ಇಬ್ಬರು ಮಕ್ಕಳ ಸಾವಿಗೆ ಅಪ್ಪನೇ ಕಾರಣವಾಗಿದ್ದ! ಇನ್ನೂ ಕೆಲವರು ಮೂರು, ನಾಲ್ಕು ಮಕ್ಕಳನ್ನು ಹೆಂಡತಿಯರಿಗೆ ಕೊಟ್ಟು, ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ಮರೆತು, ತಾವು ಮಾತ್ರ ಬಂದ ಹಣದಲ್ಲಿ ಪ್ರತಿನಿತ್ಯ ಕುಡಿತದ ದಾಸರಾಗಿರುತ್ತಾರೆ. ಆ ಮಕ್ಕಳ ಊಟ, ವಸತಿ, ಪೌಷ್ಟಿಕತೆ, ಓದು, ವಿದ್ಯಾಭ್ಯಾಸ ಎಲ್ಲವನ್ನೂ ಸಹ ಸರಕಾರವೇ ನೋಡಿಕೊಳ್ಳಬೇಕಾದಂಥ ಪರಿಸ್ಥಿತಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇದೆ.

ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಗರ್ಭಿಣಿ ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ತಡೆಯುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು, ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ ಗರ್ಭಿಣಿ ಹಾಗೂ ಮಕ್ಕಳ ಅಪೌಷ್ಟಿ ಕತೆಯನ್ನು ತಡೆಯುವ ಜವಾಬ್ದಾರಿಯನ್ನು ನೀಡಿದ್ದರು. ದೇಶವನ್ನು ನಡೆಸುವುದು ಒಂದು ಕುಟುಂಬವನ್ನು ನಡೆಸಿದ ಹಾಗೆ, ಕುಟುಂಬದಲ್ಲಿ ದುಡಿಯುವರ ಸಂಖ್ಯೆ ಕಡಿಮೆಯಾಗಿ ಕಷ್ಟದಲ್ಲಿರುವವರ ಸಂಖ್ಯೆ ಹೆಚ್ಚಾದಾಗ ಉಂಟಾಗುವ ಪರಿಣಾಮಗಳನ್ನೇ ದೇಶವೂ ಸಹ ಎದುರಿಸಬೇಕಾಗುತ್ತದೆ.

137 ಕೋಟಿ ಜನಸಂಖ್ಯೆಯ ಭಾರತದಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆ ಅತ್ಯಂತ ಕಡಿಮೆಯಿದೆ. ಕಡಿಮೆ ತೆರಿಗೆದಾರರ ಆದಾಯದಿಂದ ಇಡೀ ದೇಶವನ್ನೇ ನೋಡಿಕೊಳ್ಳಬೇಕಾದಂಥ ಪರಿಸ್ಥಿತಿ ಭಾರತದ್ದು, ಇದಕ್ಕೆಲ್ಲ ಮೂಲ ಕಾರಣ ಜನಸಂಖ್ಯೆ. ಒಂದು ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ 2050ರ ವೇಳೆಗೆ 150 ಕೋಟಿಯನ್ನು ದಾಟುವುದೆಂದು ಹೇಳಲಾಗುತ್ತಿದೆ. ಈಗಿರುವ ಜನಸಂಖ್ಯೆಯನ್ನೇ ನಿರ್ವಹಿಸಲು ಸಾಧ್ಯವಾಗದಿರುವಾಗ ಇನ್ನು 150 ಕೋಟಿಗೆ ಏರಿದರೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಸರಿಯಾಗಿ ತೆರಿಗೆ ಪಾವತಿಸುವವರಿಗೆ ನಾವ್ಯಾಕೆ ತೆರಿಗೆ ಪಾವತಿಸಲು ಸಾಧ್ಯವಾಗದವರ ಏಳಿಗೆಗಾಗಿ ದುಡಿಯ ಬೇಕೆಂಬ ಯೋಚನೆ ಬರಲು ಶುರುವಾಗಿದೆ.

ನೂತನ ಜನಸಂಖ್ಯಾ ನೀತಿಯನ್ನು ಅತಿ ಹೆಚ್ಚು ವಿರೋಧಿಸುತ್ತಿರುವುದು ಮುಸ್ಲಿಂ ನಾಯಕರು. ಹಲವು ಮುಸ್ಲಿಂ ನಾಯಕರು ಮಾತನಾಡುವ ಭರದಲ್ಲಿ ತಮ್ಮ
ಧರ್ಮದ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಹಿರಂಗವಾಗಿ ಕರೆ ಕೊಟ್ಟಿರುವ ಹಲವು ಉದಾಹರಣೆಗಳಿವೆ, ತಮ್ಮ ಜನಸಂಖ್ಯೆಯು ಹೆಚ್ಚಾದರೆ ತಾವು ಭಾರತ ದಲ್ಲಿ ಬಹುಸಂಖ್ಯಾತರಾಗಿ ತಮಗಿಷ್ಟ ಬಂದಂತೆ ಆಡಳಿತ ನಡೆಸಬಹುದೆಂಬ ಹಗಲು ಕನಸು ಇವರದ್ದು. ಜಗತ್ತೇ ಮುಂದು ಹೋಗುತ್ತಿದ್ದರೆ ಹಲವು ಮುಸಲ್ಮಾನ್ ನಾಯಕರು ಹಿಂದಕ್ಕೆ ಹೋಗಿ ‘ಶರಿಯಾ’ ಕಾನೂನುಗಳನ್ನು ತಮ್ಮ ಆಡಳಿತದಲ್ಲಿ ತರಬೇಕೆಂಬ ಕನಸು ಕಾಣುತ್ತಿದ್ದಾರೆ, ಉತ್ತರ ಪ್ರದೇಶ ಅತಿ ಹೆಚ್ಚು ಮುಸಲ್ಮಾನ ರನ್ನು ಹೊಂದಿರುವ ರಾಜ್ಯ, ಈ ರಾಜ್ಯದಲ್ಲಿ ತಮ್ಮ ಜನಸಂಖ್ಯೆಯ ಬೆಳವಣಿಗೆಗೆ ಕತ್ತರಿ ಬಿದ್ದರೆ, ಎಲ್ಲಿ ತಮ್ಮ ಕನಸು ಈಡೇರುವುದಿಲ್ಲವೆಂಬ ಭಯ ಹಲವು ಮುಸಲ್ಮಾನ್ ನಾಯಕರನ್ನು ಕಾಡುತ್ತಿರುವುದಂತೂ ನಿಜ.

ಆದರೆ ಈ ಕಾಯಿದೆಯಿಂದ ಅತಿ ಹೆಚ್ಚು ಖುಷಿಪಡುವವರು ಮುಸ್ಲಿಂ ಹೆಣ್ಣು ಮಕ್ಕಳು, ಅಂತಿಮವಾಗಿ ಆ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಹೊರುವುದು
ಅವರೇ ತಾನೇ? ಏನೇ ಹೇಳಿ ಒಂದು ಮಾತಂತು ನಿಜ, ಸರಕಾರದ ಯಾವುದೇ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ‘ಮುಸಲ್ಮಾನರು’. ಇವರನ್ನಿಟ್ಟು ಕೊಂಡು ರಾಜಕೀಯ ಮಾಡುವ ಹಲವು ಪಕ್ಷದ ನಾಯಕರು ಮುಸಲ್ಮಾನರಿಗೆ ಸರಕಾರದ ಬಹುತೇಕ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖರಾಗಿರುತ್ತಾರೆ.

ನರೇಂದ್ರ ಮೋದಿಯವರ ಹಲವು ಯೋಜನೆಗಳ ಹೆಚ್ಚಿನ ಫಲಾನುಭವಿಗಳು ‘ಮುಸಲ್ಮಾನ’ರೆಂದರೆ ತಪ್ಪಿಲ್ಲ, ಆದರೂ ಇವರಲ್ಲಿ ಹಲವರಿಗೆ ತಮ್ಮ ಧರ್ಮದ ಆಚರಣೆಗಳೇ ಮುಖ್ಯವಾಗಿ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸುವುದಿಲ್ಲವೆಂಬ ಸತ್ಯ ಎಲ್ಲರಿಗೂ ತಿಳಿದಿರುವ ವಿಷಯ (ಹೆಚ್ಚಾಗಿ ಮುಸಲ್ಮಾನ್ ಗಂಡಸರು ಕಟ್ಟರ್ ನರೇಂದ್ರ ಮೋದಿ ವಿರೋಧಿಗಳು). ಪೆಟ್ರೋಲ್ ಹಾಗೂ ಡೀಸೆಲ್ ವಿಷಯಕ್ಕೆ ಬರುವುದಾದರೆ, ಭಾರತದ ಜನಸಂಖ್ಯೆಗನುಗುಣವಾಗಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಿದೆ. ಹೆಚ್ಚಿನ ಜನಸಂಖ್ಯೆ ಇರುವ ಕಾರಣ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳಬೇಕಿದೆ.

ಸ್ವಾತಂತ್ರ್ಯ ನಂತರ ಪೆಟ್ರೋಲ್ ಹಾಗೂ ಡೀಸೆಲ್‌ಗೆ ಪರ್ಯಾಯ ಮೂಲಗಳನ್ನು ಅಭಿವೃದ್ಧಿಪಡಿಸದ ಕಾರಣ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕಚ್ಚಾ ತೈಲದ ನಿಕ್ಷೇಪಗಳನ್ನು ಗುರುತಿಸುವ ಕೆಲಸವನ್ನೂ ಮಾಡದ ಕಾರಣ ತೈಲದ ಆಮದಿನಲ್ಲಿ ಹೆಚ್ಚಾಗಿದೆ. ಪರ್ಯಾಯವಾಗಿ ಸಾರ್ವಜನಿಕ ಸಾರಿಗೆಗಳು ಅಭಿವೃದ್ಧಿ ಕಾಣದ ಪರಿಣಾಮವಾಗಿ ಜನರು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಾಗಿ ಅವಲಂಬಿಸುವಂತಾಗಿದೆ. ಕಳೆದ ಏಳು ವರ್ಷಗಳಿಂದ ನರೇಂದ್ರ ಮೋದಿಯವರ ಆಡಳಿತ ದಲ್ಲಿ ಪರ್ಯಾಯ ಮಾರ್ಗಗಳಾಗಿ, ‘ಎಲೆಕ್ಟ್ರಿಕ್’ ವಾಹನಗಳ ಬಳಕೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಲಾಗುತ್ತಿದೆ.

ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ಸಣ್ಣ ಸಣ್ಣ ವಿಮಾನ ನಿಲ್ದಾಣಗಳನ್ನು ನವೀಕರಿಸಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇಷ್ಟಾದರೂ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ಆಮದಿನಲ್ಲಿ ಕಡಿಮೆಯಾಗಿಲ್ಲ. ಇನ್ನು ಮುಂದಾದರೂ ಜನಸಂಖ್ಯೆಯನ್ನು ನಿಯಂತ್ರಿಸಿದರೆ ಭವಿಷ್ಯದಗುವ ಬಹುದೊಡ್ಡ ಸಮಸ್ಯೆಯನ್ನು ನಿಲ್ಲಿಸಬಹುದಾಗಿದೆ. ಜನಸಂಖ್ಯೆಯನ್ನೇ ಬಳಸಿಕೊಂಡು ಅಮೆರಿಕ ದೇಶಕ್ಕೆ ಠಕ್ಕರ್ ಕೊಟ್ಟಂಥ ಚೀನಾ ದೇಶದ ನೀತಿಗಳನ್ನೇನಾದರೂ ಭಾರತದಲ್ಲಿ ಕಾರ್ಯಗತಗೊಳಿಸಿದರೆ ಮೋದಿ ವಿರೋಧಿಗಳು ಬೀದಿಗಿಳಿದು ಹಿಟ್ಲರ್ ಆಡಳಿತವೆಂದು
ಪ್ರತಿಭಟಿಸುತ್ತಾರೆ. ಚೀನಾ ದೇಶದಲ್ಲಿ ಒಂದು ಕುಟುಂಬಕ್ಕೆ ಒಂದು ಮಗುವೆಂಬ ನೀತಿಯನ್ನು ಜಾರಿಗೆ ತಂದಾಗ ಅಲ್ಲಿನ ಮುಸಲ್ಮಾನರು ವಿರೋಧಿಸುವ ಕೆಲಸ ವನ್ನು ಮಾಡಲಿಲ್ಲ, ಕಾರಣ ಅಲ್ಲಿನ ಸರಕಾರದ ಮೇಲಿರುವ ಭಯ.

ಮುಸಲ್ಮಾನರ ಮಾತಿಗೆ ಕಿವಿಗೊಡದೆ ಮಸೀದಿಗಳನ್ನು ಕೆಡವಿ ಹಾಕಿದರೂ ಸಹ ಅಲ್ಲಿನ ಮುಸಲ್ಮಾನರು ಪ್ರತಿಭಟಿಸುವ ಗೋಜಿಗೆ ಹೋಗುವುದಿಲ್ಲ. ಮುಸಲ್ಮಾನ ರಿಗೆ ಜಗತ್ತಿನ ಸುರಕ್ಷಾ ತಾಣವೆಂದರೆ ಅದು ಭಾರತ ಮಾತ್ರ, ಇಲ್ಲಿ ಅವರಿಗೆ ವಿರೋಧಿಸುವ ಹಾಗು ಪ್ರತಿಭಟಿಸುವ ಹಕ್ಕನ್ನು ಭಾರತದ ಸಂವಿಧಾನ ನೀಡಿದೆ. ತಮಗೆ ಬೇಕಿರುವ ಸಕಲ ಸೌಲಭ್ಯವನ್ನು ನೀಡಿರುವ ದೇಶದಲ್ಲಿ ಬಹುಸಂಖ್ಯಾತರಾಗುವ ತಮ್ಮ ಕನಸಿಗೆ ಎಲ್ಲಿ ಪೆಟ್ಟು ಬೀಳುತ್ತದೆಯೆಂಬ ಭಯದಿಂದ ನೂತನ
ಜನಸಂಖ್ಯಾ ಕಾಯಿದೆಯನ್ನು ಮುಸಲ್ಮಾನ್ ನಾಯಕರು ವಿರೋಧಿಸುತ್ತಿದ್ದಾರೆ. ಸದಾ ಇವರ ಸಿದ್ಧಾಂತಗಳಿಗೆ ಬೆಂಬಲಿಸುವ ಪ್ರಾದೇಶಿಕ ಪಕ್ಷಗಳು ನೂತನ ಜನಸಂಖ್ಯಾ ನೀತಿಯನ್ನು ವಿರೋಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಜ್ಯಗಳ ಜನಸಂಖ್ಯೆ ಹೆಚ್ಚಾದಷ್ಟು ಪ್ರತಿಯೊಂದು ಬಡ ಕುಟುಂಬಗಳ ಮೇಲಿನ ಸಾಮಾಜಿಕ ಜವಾಬ್ದಾರಿಯು ಸರ್ಕಾರದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತ ಲಿರುತ್ತವೆ. ಹನಿ ಹನಿ ಗೂಡಿದರೆ ಹಳ್ಳವೆಂಬಂತೆ ಸಣ್ಣ ಸಣ್ಣ ಸಾಮಾಜಿಕ ಯೋಜನೆಗಳೂ ಸಹ ಸರಕಾರದ ಆರ್ಥಿಕ ವ್ಯವಸ್ಥೆಯ ಮೇಲೆ ಒಟ್ಟಾಗಿ ಬಹುದೊಡ್ಡ ಪ್ರಮಾಣದ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಾಲವು ಹೆಚ್ಚಾಗಲು ಅವರ ಸಾಮಾಜಿಕ ಯೋಜನೆಗಳ ಮೇಲಿನ ಹೆಚ್ಚಿನ ವೆಚ್ಚವೇ ಕಾರಣ. ಸಾಮಾಜಿಕ ವೆಚ್ಚವನ್ನು ಸರಕಾರ ಭರಿಸುವುದು ತಪ್ಪಲ್ಲ, ಆದರೆ ಜನಸಂಖ್ಯೆ ಹೆಚ್ಚಾದಂತೆ
ಖರ್ಚು ಹೆಚ್ಚಾಗುತ್ತದೆ. ಒಮ್ಮೆ ನೀಡಿದ ಯೋಜನೆಗಳನ್ನು ವಾಪಸ್ ಪಡೆಯುವುದು ಸುಲಭದ ಕೆಲಸವಲ್ಲ.

ಖರ್ಚುಗಳು ಹೆಚ್ಚಾದಂತೆ ಆದಾಯವೂ ಹೆಚ್ಚಾದರೆ ಪರವಾಗಿಲ್ಲ, ಆದರೆ ಸರಕಾರದ ಮೇಲೆ ತಮ್ಮ ಭಾರವನ್ನು ಹೇರಿ ಜೀವನ ನಡೆಸುವವವರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಇದರ ಪರಿಣಾಮ ಸರಕಾರದ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಭಾರತದ ನಿರುದ್ಯೋಗ ಸಮಸ್ಯೆಯ ಮೂಲ ಕಾರಣವೂ ಸಹ ಜನಸಂಖ್ಯೆಯೆಂದರೆ ತಪ್ಪಿಲ್ಲ, ಜನಸಂಖ್ಯೆಯು ಹೆಚ್ಚಾದಷ್ಟೂ ಉದ್ಯೋಗಾಕಾಂಕ್ಷಿಗಳು ಹೆಚ್ಚಾಗುತ್ತಾರೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದೆಂದರೆ ಕೇವಲ ಕೆಲಸವನ್ನು ನೀಡುವುದಲ್ಲ,ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಸ್ವಂತ ವ್ಯವಹಾರವನ್ನು ಕಟ್ಟಿಕೊಳ್ಳುವ
ನಿಟ್ಟಿನಲ್ಲಿ ಸರಕಾರಗಳ ಯೋಜನೆಗಳು ಉದ್ಯೋಗಾಂಕ್ಷಿಗಳಿಗೆ ಸಹಾಯವಾಗುತ್ತವೆ.

ಸರಕಾರದ ಯೋಜನೆಗಳು ಹೆಚ್ಚಾದಂತೆ ಆರ್ಥಿಕ ಇಲಾಖೆಗಳ ಮೇಲಿನ ಭಾರವೂ ಸಹ ಹೆಚ್ಚುತ್ತದೆ, ಸರಕಾರದ ಬೊಕ್ಕಸಕ್ಕೆ ಹಣದ ಕೊರತೆಯುಂಟಾಗುತ್ತದೆ. ಮತ್ತದೇ ತೆರಿಗೆ ಕಟ್ಟುವವರು ಹಾಗೂ ಯೋಜನೆಯ ಫಲಾನುಭವಿಗಳ ಮಧ್ಯೆ ಬಹುದೊಡ್ಡ ಅಂತರವೇರ್ಪಡುತ್ತದೆ. ಕೇಂದ್ರ ಸರಕಾರದ ’ಮುದ್ರಾ’ ಯೋಜನೆ ಯಡಿಯಲ್ಲಿ ಸುಮಾರು 12 ಕೋಟಿ ಜನರಿಗೆ ಸಾಲವನ್ನು ನೀಡಲಾಗಿದೆ, ಹಾಗಾದರೆ 12 ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಯಿತಲ್ಲ ? ಇದರ ಬಗ್ಗೆ ಯಾರು ಮಾತನಾಡುವುದಿಲ್ಲ, ಕೆಲಸವೆಂದರೆ ಕೇವಲ ಮತ್ತೊಬ್ಬರ ಕೆಳಗೆ ದುಡಿಯುವುದು ಮಾತ್ರವಲ್ಲ.

ನೂತನ ಜನಸಂಖ್ಯಾ ನೀತಿಯಿಂದ ಅತಿ ಹೆಚ್ಚು ನಷ್ಟ ಅನುಭವಿಸುವವರು ಮುಸಲ್ಮಾನರೆಂಬುದು ಆ ಧರ್ಮದ ನಾಯಕರು ಹಾಗು ಮೌಲ್ವಿಗಳ ವಾದ. ಮಕ್ಕಳ ಹೆರುವಿಕೆ ದೇವರು ಕೊಟ್ಟಿರುವ ವರವೆಂದು ಭಾವಿಸಿ ಜನಸಂಖ್ಯೆಯನ್ನು ಹೆಚ್ಚಾಗಿ ಪೋಷಿಸುತ್ತಿರುವ ಧರ್ಮವಿದು. ಆಗಲೇ ಹೇಳಿದ ಹಾಗೆ ಭಾರತದಲ್ಲಿ ಬಹು ಸಂಖ್ಯಾತರಾಗಬೇಕೆಂದು ಕನಸು ಕಾಣುತ್ತಿರುವ ಮುಸಲ್ಮಾನ್ ಧರ್ಮ ಗುರುಗಳಿಗೆ ನೂತನ ಜನಸಂಖ್ಯಾ ನೀತಿ ನುಂಗಲಾರದ ತುತ್ತಾಗಿದೆ. ಇಂದಿರಾ ಗಾಂಧಿ ಯವರ ಮಗ ’ಸಂಜಯ ಗಾಂಧಿ’ 80 ರ ದಶಕದಲ್ಲಿ ದೇಶದಲ್ಲಿನ ಜನಸಂಖ್ಯೆಯನ್ನು ನಿಯಂತ್ರಿಸಲು ತೆಗೆದುಕೊಂಡಿದ್ದಂತಹ ಕ್ರಮಗಳನ್ನು ಅಂದಿನ ಮುಸಲ್ಮಾನ್ ಮುಖಂಡರು ಖಾರವಾಗಿ ಖಂಡಿಸಿದ್ದರು, ಕಾಂಗ್ರೆಸ್ ಪಕ್ಷ ತನ್ನ ವೋಟ್ ಬ್ಯಾಂಕ್ ನೆಲಕಚ್ಚುತ್ತದೆಯೆಂಬ ಭಯದಿಂದ ಸಂಜಯ್ ಗಾಂಧಿಯ ಕ್ರಮಗಳನ್ನು ನಿಲ್ಲಿಸಿ ಮುಸಲ್ಮಾನರ ಸಲುವಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಗಳನ್ನು ಕೈಚೆಲ್ಲಿತ್ತು.

ಅಂದು ಆ ಯೋಜನೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ ಬಹುಶ 1991ರಲ್ಲಿ ಭಾರತವು ಲಂಡನ್‌ನ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇತರೆ ದೇಶಗಳ ರೀತಿಯಲ್ಲಿ ಭಾರತವೂ ಸಹ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರುತ್ತಿತ್ತು. ಕರೋನಾ ಲಸಿಕೆಯ ವಿಚಾರದಲ್ಲಿ ಮೊದಮೊದಲು ಜನರ ದಾರಿ ತಪ್ಪಿಸಿ ರಾಜಕಾರಣ ಮಾಡಿದ್ದ ಮೋದಿ ವಿರೋಽಗಳು ಈಗ ಲಸಿಕೆಯ ವೇಗವನ್ನು ಹೆಚ್ಚಿಸುವ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. 137 ಕೋಟಿ ಭಾರತೀಯರಿಗೆ ’ಎರಡು ಡೋಸ್’ ಲಸಿಕೆಯನ್ನು ನೀಡುವುದು ಸುಲಭದ ಮಾತಲ್ಲ, ಅಮೆರಿಕ ದೇಶದ ನಾಲ್ಕು ಪಟ್ಟು ಹೆಚ್ಚಿನ
ಜನಸಂಖ್ಯೆಯಿರುವ ಭಾರತೀಯರಿಗೆ ಸಂಪೂರ್ಣವಾಗಿ ಲಸಿಕೆ ಹಾಕಿಸುವುದಕ್ಕೆ ಸಮಯ ಬೇಕಾಗುತ್ತದೆ.

ಅಮೆರಿಕ ದೇಶದ ಜನಸಂಖ್ಯೆ ಹಾಗೂ ಭಾರತದ ಜನಸಂಖ್ಯೆಯನ್ನು ತಾಳೆ ಮಾಡಲಾಗುವುದಿಲ್ಲ, ಲಸಿಕೆಯನ್ನು ಸಂಪೂರ್ಣಗೊಳಿಸಲು ಮತ್ತದೇ ’ಜನಸಂಖ್ಯೆ’ ಅಡ್ಡ ಬರುತ್ತಿದೆ. ವಿರೋಽಗಳ ಲಸಿಕಾ ರಾಜಕೀಯ ಹಾಗು ಜನಸಂಖ್ಯೆಯ ಮದ್ಯೆಯೂ ಕೇಂದ್ರ ಸರಕಾರ ಸುಮಾರು 39 ಕೋಟಿ ಡೋಸ್ ಲಸಿಕೆಯನ್ನು ನೀಡಿರು ವುದು ಬಹುದೊಡ್ಡ ಸಾಧನೆ. ಜಗತ್ತಿನ ಮುಂದುವರೆದ ದೇಶಗಳ ಇತಿಹಾಸವನ್ನು ಗಮನಿಸಿದರೆ ಜನಸಂಖ್ಯಾ ನೀತಿ ಬಹುದೊಡ್ಡ ಪಾತ್ರವನ್ನು ಆ ದೇಶದ ಅಭಿವೃದ್ಧಿಯಲ್ಲಿ ವಹಿಸಿದೆ, ಭಾರತದ ಮುಂದಿನ ಅಭಿವೃದ್ಧಿಯ ನಿಟ್ಟಿನಲ್ಲಿ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಆದಷ್ಟು ಬೇಗ ಎಲ್ಲ ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಬೇಕಿದೆ.

Leave a Reply

Your email address will not be published. Required fields are marked *