ಚನ್ನಬಸವ ಮೊಕ್ತೆದಾರ ಬೀದರ
ಸೆ.೬ ರಂದು ಔರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ
ಜಿಲ್ಲೆಯ ಔರಾದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸೆಪ್ಟೆಂಬರ್ ೬ ರಂದು ಮಹೂರ್ತ ನಿಗದಿಯಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗದ್ದುಗೆ ಏರಲು ಎರಡು ಪಕ್ಷದ ಸದಸ್ಯರು ಕಸರತ್ತು ನಡೆಸಿದ್ದಾರೆ. ಕಳೆದ ಒಂದು ವರ್ಷಕ್ಕೂ ಅಧಿಕ ಕಾಲ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಇದೀಗ ಚುನಾವಣೆ ದಿನಾಂಕ ಕೂಡ ನಿಗದಿಯಾಗಿದ್ದು, ಅಕಾಂಕ್ಷಿಗಳ ನಿರೀಕ್ಷೆ
ಗರಿಗೆದರಿದೆ. ಕಾಂಗ್ರೆಸ್ ಸದಸ್ಯರು ಹಾಗೂ ಪಕ್ಷದ ಮುಖಂಡರಿಗೆ ಪ್ರತಿಷ್ಠೆಯ ಕಣವಾಗಿದೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಎರಡು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಒಟ್ಟು ೨೦ ಸದಸ್ಯ ಬಲದ ಪಟ್ಟಣ ಪಂಚಾಯತಿಯಲ್ಲಿ ೧೨ ಬಿಜೆಪಿ ೬ ಕಾಂಗ್ರೆಸ್ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಸರಸ್ವತಿ ಘೂಳೆ. ರಾಧಾಬಾಯಿ ನರೋಟೆ ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿದೆ ಆದರೆ ಕೊನೆ ಘಳಿಗೆಯಲ್ಲಿ ಬೇರೆಯವರು ಕೂಡ ಬರಬಹುದು ಎನ್ನುವ ಚರ್ಚೆ ಶುರುವಾಗಿದೆ. ಶಾಸಕರ ನಿರ್ಣಯವೇ ಅಂತಿಮ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲ ಅಸಮಧಾನವಿಲ್ಲದಂತೆ ಮತ್ತು ಪಕ್ಷಕ್ಕಾಗಿ ದುಡಿದವರಿಗೆ ಕುರ್ಚಿಯಲ್ಲಿ ಕೂರಿಸುವ ಶಾಸಕ ಪ್ರಭು ಚವ್ಹಾಣ ಅವರ ನಿರ್ಣಯವೇ ಅಂತಿಮ. ಅವರು ಯಾರಿಗೆ ಅಧ್ಯಕ್ಷ ಉಪಾಧ್ಯಕ್ಷ ಎಂದು ತಿರ್ಮಾನಿಸುತ್ತಾರೋ ಅವರ ನಿರ್ಣಯವನ್ನು ಒಪ್ಪುತ್ತೆವೆ ಎಂದು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.
ಅಂದೇ ನಾಮಪತ್ರ ಸಲ್ಲಿಕೆ. ಫಲಿತಾಂಶ ಜಿಲ್ಲಾಧಿಕಾರಿಗಳ ಆದೇಶದಂತೆ ಸೆ.೬ ರಂದು ಔರಾದ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ಬೆಳಗ್ಗೆ ೧೦ ಗಂಟೆಯಿಂದ
ಮಧ್ಯಾಹ್ನ ೧೨ ಗಂಟೆಯೊಳಗೆ ನಾಮಪತ್ರ ಸಲ್ಲಿಕೆ. ಮಧ್ಯಾಹ್ನ ೨.೩೦ ಗಂಟೆಯೊಳಗೆ ಪರಿಶೀಲನೆ. ೨.೪೫ ರೊಳಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶ ನೀಡಲಾಗಿದೆ. ಅಂದೇ ನಾಮಪತ್ರ ಸಲ್ಲಿಕೆ, ಪರಿಶೀಲನೆ,
ಫಲಿತಾಂಶ ಚುನಾವಣಾ ಅಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.
ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ೬ ಕ್ಕೆ
ಔರಾದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸೆ.೬ರಂದು ಚುನಾವಣೆ ದಿನಾಂಕ ನಿಗದಿ ಯಾಗಿದೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಎರಡೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಳೆದ ಅವಧಿಯಲ್ಲಿ ಬಿಜೆಪಿಯ ಅಂಬಿಕಾ ಕೆರಬಾ ಪವಾರ್ ಅಧ್ಯಕ್ಷ ಸಂತೋಷ ಪೊಕಲವಾರ ಉಪಾಧ್ಯಕ್ಷ ರಾಗಿದ್ದರು.
*
ಕಾಂಗ್ರೆಸ್ ಸದಸ್ಯರ ವಿರುದ್ಧ ಕಾನೂನು ಹೋರಾಟ ಮಾಡಲಾಗುತ್ತಿದೆ. ಮೂವರು ಸದಸ್ಯರು ಕಾಂಗ್ರೆಸ್ ಚಿಹ್ನೆ ಮೇಲೆ ಗೆದ್ದು ನಂತರ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿರುವುದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸಹಿಸೋದಿಲ್ಲ. ಅಂತಹವರ ವಿರುದ್ದ ಕ್ರಮಕೈಗೊಳ್ಳಲು ಕಾನೂನು ಹೋರಾಟ ನಡಿತಾಯಿದೆ. ಪ್ರಕರಣ ನ್ಯಾಯಾಲಯದಲ್ಲಿದೆ.
ಸುಧಾಕರ ಕೊಳ್ಳೂರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಸಂಚಾಲಕ