ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಬಣ ರಾಜಕಾರಣದ ಬಿಸಿ, ಹೊಸ ಸಾರಥಿಗೆ ಶೋಧ, ಆಕಾಂಕ್ಷಿಗಳಲ್ಲಿ ಆಸಕ್ತಿ
ಸದಸ್ಯತ್ವ ಅಭಿಯಾನ ನಂತರ ಹೊಸ ಅಧ್ಯಕ್ಷ ?
ಬಿಜೆಪಿಯಲ್ಲಿ ಈಗ ಬದಲಾವಣೆಯ ಚಿಂತನೆ ಶುರುವಾಗಿದೆ. ಇದು ಬರೀ ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರೀಯ ಸಂಘಟನೆಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಬೇಕೆನ್ನುವ ಚರ್ಚೆ ಆರಂಭವಾಗಿದೆ.
ಅದರಲ್ಲೂ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಮತ್ತು ಬಣ ರಾಜಕಾರಣದ ಬಿರುಗಾಳಿಯನ್ನು ನಿಯಂತ್ರಿಸಲು ಮೊದಲು ರಾಜ್ಯದಲ್ಲಿ ಬದಲಾವಣೆ ಆಗಲೇಬೇಕೆನ್ನುವ ನಿಟ್ಟಿನಲ್ಲಿ ರಾಜ್ಯ ನಾಯಕರ ನಡುವೆ ಗಂಭೀರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ಹಿರಿಯ ನಾಯಕರಾದ ರಮೇಶ್ ಜಾರಕಿಹೊಳಿ(Ramesh Jarkiholi) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal)ಅವರ ವಾಗ್ದಾಳಿಗಳಿಂದ ಬದಲಾವಣೆಯ ಅನಿವಾರ್ಯ ಸ್ಥಿತಿ ಉಂಟಾಗು ತ್ತಿದೆ. ಇದೇ ಸ್ಥಿತಿ ಮುಂದುವರಿದು ಯಾವ ಮುಖಂಡರೂ ಯಾರ ಮಾತನ್ನೂ ಕೇಳಲಾಗದ ಸ್ಥಿತಿ ನಿರ್ಮಾಣವಾದರೆ, ರಾಜ್ಯಾಧ್ಯಕ್ಷರ ಬದಲಾವಣೆ ಅನಿವಾರ್ಯ ವಾಗಲಿದ್ದು, ಆಗ ವಿಜಯೇಂದ್ರ(BY Vijayendra) ಸ್ಥಾನ ತ್ಯಜಿಸಬೇಕಾಗ ಬಹುದು ಎನ್ನುತ್ತವೆ ಮೂಲಗಳು. ಇಂಥ ಸಂದರ್ಭದಲ್ಲಿ ಆ ಸ್ಥಾನಕ್ಕೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಅಂಥವರು ಈಗ ವರಿಷ್ಠರ ಗಮನ ಸೆಳೆಯುವ ಪ್ರಯತ್ನ ಮಾಡು ತ್ತಿದ್ದಾರೆ.
ಒಂದುವೇಳೆ ಕಾಂಗ್ರೆಸ್ ನಲ್ಲಿ ದಲಿತ ಮುಖ್ಯಮಂತ್ರಿ ಪ್ರಸ್ತಾಪಕ್ಕೆ ಬಂದರೆ, ಬಿಜೆಪಿಯಲ್ಲೂ ದಲಿತ ರಾಜ್ಯಾಧ್ಯಕ್ಷ ವಿಚಾರ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಅಷ್ಟೇ ಏಕೆ ಈ ವಿಚಾರ ಈಗಾಗಲೇ ಪಕ್ಷದ ವರಿಷ್ಠರ ವಲಯದಲ್ಲಿ ಪ್ರಸ್ತಾಪ ವಾಗಿದೆ ಎಂದು ದೆಹಲಿ ಬಿಜೆಪಿ ಕಚೇರಿ ಮೂಲಗಳು ತಿಳಿಸಿವೆ. ಅಂದರೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಆರ್ ಎಸ್ ಎಸ್ – ಬಿಜೆಪಿ ನಾಯಕರ ಸಭೆಯಲ್ಲಿ ಪಕ್ಷದೊಳಗಿನ ಅಸಮಾಧಾನ ಹಾಗೂ ವೈಫಲ್ಯಗಳ ಭಾರೀ ಚರ್ಚೆ ಯಾಗಿದ್ದು, ಇದರ ಪರಿಣಾಮ ದೂರದ ದಿಲ್ಲಿ ವರೆಗೂ ಮುಟ್ಟಿದೆ ಎನ್ನಲಾಗಿದೆ. ಅಂದರೆ ರಾಜ್ಯದಲ್ಲಿ ಆಗಬೇಕಿರುವ ಬದಲಾವಣೆಗಳ ಅನಿವಾರ್ಯತೆಯನ್ನು ಕೆಲವು ನಾಯಕರು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿದ್ದು, ಅವರು ಕೂಡ ಬದಲಾವಣೆಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ ವರಿಷ್ಠರು ಉತ್ತರ ರಾಜ್ಯಗಳಾದ ಜಮ್ಮು- ಕಾಶ್ಮೀರ (ಆರಂಭವಾಗಿದೆ) ಹರಿಯಾಣ, ಮಹಾರಾಷ್ಟ್ರ ಹಾಗೂ
ಜಾರ್ಖಂಡ್ ಚುನಾವಣೆ ಗಳ ಕಾರ್ಯ ತಂತ್ರದಲ್ಲಿ ನಿರತರಾಗಿರುವ ಕಾರಣ ರಾಜ್ಯದಲ್ಲಿ ಆಗ ಬೇಕಿರುವ ಬದಲಾವಣೆ ಗಳ ಬಗ್ಗೆ ಚುನಾವಣೆ ಗಳ ನಂತರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಅಧ್ಯಕ್ಷರೂ ಬದಲು ? ಸಾಮಾನ್ಯ ಬಿಜೆಪಿಯಲ್ಲಿ ಸದಸ್ಯತ್ವ ಅಭಿಯಾನದ ನಂತರ ರಾಷ್ಟ್ರೀಯ ಅಥವಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಬದಲಾವಣೆಗಳ ಪರ್ವ ಆರಂಭವಾಗುತ್ತದೆ. ಹಾಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 3 ವರ್ಷಗಳ ಅವಧಿ ಪೂರೈಸಿರುವ ಕಾರಣ ಆ ಸ್ಥಾನಕ್ಕೆ ಹಿರಿಯ ರೊಬ್ಬರನ್ನು ನಿಯೋಜಿಸಬೇಕೆಂಬ ಪ್ರಸ್ತಾಪ ಶುರವಾಗಿದೆ. ಹೀಗಾಗಿ ಆ ಸ್ಥಾನಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್, ಪಕ್ಷದ ಹಿರಿಯ ನಾಯಕ ರಾಜಸ್ಥಾನದ ಭೂಪೇಂದ್ರ ಯಾದವ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ವಿನೋದ್ ತಾವಡೆ ಅವರ ಹೆಸರುಗಳು ಹೆಚ್ಚು ಚರ್ಚೆಗೆ ಬರುತ್ತಿವೆ.
ದಲಿತ ರಾಜ್ಯಾಧ್ಯಕ್ಷರ ಚರ್ಚೆ
ಬಿಜೆಪಿ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಅವರ ನೇರ ವಾಗ್ದಾಳಿ ಹಾಗೂ ಮಾಜಿ ಮುಖ್ಯ ಮಂತ್ರಿಗಳ ಪರೋಕ್ಷ ಆಸಹಕಾರಗಳು ರಾಜ್ಯ ಬಿಜೆಪಿ ಸಾರಥ್ಯವನ್ನು ಅಲುಗಾಡಿಸಿದೆ ಎನ್ನಲಾಗಿದೆ. ಇದರಿಂದ ಕಾಂಗ್ರೆಸ್ ವಿರುದ್ಧ ಹೋರಾಡುವಲ್ಲಿ ಬಿಜೆಪಿಗ ನೈತಿಕತೆ ಪ್ರಶ್ನೆ ಎದುರಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲಾ ಬಣಗಳನ್ನು ಸಂಭಾಳಿಸುವ ನಾಯಕರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಹೇಗೆ ಎನ್ನುವ ಚಿಂತನೆ ಆರಂಭ ವಾಗಿದೆ. ಹಾಗೆಯೇ ಕಾಂಗ್ರೆಸ್ ನಲ್ಲಿ ದಲಿತ ಮುಖ್ಯಮಂತ್ರಿ ಮತ್ತೆ ಹೆಚ್ಚು ಪ್ರಸ್ತಾಪಕ್ಕೆ ಬರುತ್ತಿದ್ದು, ಇದರಿಂದ ದಲಿತರನ್ನು ಬಿಜೆಪಿಯ ಉಳಿಸಿಕೊಳ್ಳಲು ಪಕ್ಷದಲ್ಲಿ ದಲಿತ ರಾಜ್ಯಾಧ್ಯಕ್ಷರನ್ನು ನೇಮಿಸಿದರೆ ಹೇಗೆ ಎನ್ನುವ ಚರ್ಚೆ
ಆರಂಭವಾಗಿದೆ. ಇದು ಬರೀ ರಾಜ್ಯದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ನಾಯಕರ ಬಳಿಯೂ ಪ್ರಸ್ತಾಪವಾಗಿದೆ.
ಇಂಥ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರೂ ಆಗಿರುವ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಹೇಗೆ ಎಂಬ ಚರ್ಚೆ ನಡೆದಿದೆ. ಹಾಗೆ ನೋಡಿದರೆ, ಈ ಹಿಂದೆ ಅವರನ್ನು ದಲಿತ ಮುಖ್ಯಮಂತ್ರಿ ಮಾಡುವ ಬಗ್ಗೆಯೂ ಪ್ರಸ್ತಾಪವಾಗಿತ್ತು. ಹೀಗಾಗಿ ಅವರ ಹೆಸರು ಮಂಚೂಣಿಯಲ್ಲಿದೆ. ಇದೇ ವೇಳೆ ಸಂಘಟನೆಯವರಿಗೆ ಅವಕಾಶ ನೀಡಬೇಕೆನ್ನುವ ನಿಟ್ಟಿನಲ್ಲಿ ದಲಿತ ಸಮುದಾಯದ ಹಿರಿಯ ನಾಯಕರೂ ಆಗಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನೂ ದಲಿತ ರಾಜ್ಯಾಧಕ್ಷರ ಹುದ್ದೆಗೆ ತರುವ ಚಿಂತನೆ ನಡೆದಿದೆ. ಸಂಘಟನೆಯಲ್ಲಿ ಹೆಚ್ಚು ನಿಪುಣರಾಗಿರುವ ಲಿಂಬಾವಳಿ ಪಕ್ಷ ಬಲಪಡಿಸುವಲ್ಲಿ ಸೂಕ್ತ ನಾಯಕ ಎನ್ನುವ ಅಭಿಪ್ರಾಯಗಳನ್ನು ದಿಲ್ಲಿಯಲ್ಲಿರುವ ವರಿಷ್ಠರಿಗೆ ಸಲ್ಲಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?