ವಿಶ್ವವಾಣಿ ವಿಶೇಷ
ಕುಲಪತಿ ವೇಣುಗೋಪಾಲ್ ನಿರ್ಲಕ್ಷ್ಯದ ಆರೋಪ
ಪಿಡಿಎಫ್’ನಲ್ಲಿ ನುಸುಳಿವೆ ನೂರಾರು ದೋಷಗಳು
ವಿಶೇಷ ವರದಿ: ಅಪರ್ಣಾ.ಎ.ಎಸ್ ಬೆಂಗಳೂರು
ರಾಜ್ಯದಲ್ಲಿ ತನ್ನದೆ ಆದ ಇತಿಹಾಸ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಗೊಂದಲಗಳು ಒಂದೆರಡಲ್ಲ. ಇದೀಗ ಈ ಎಲ್ಲ ಗೊಂದಲಗಳಿಗೆ ಪಠ್ಯ
ಪುಸ್ತಕದ ಗೊಂದಲವೂ ಸೇರಿಕೊಂಡಿದೆ. ಈ ಬಗ್ಗೆ ಕ್ರಮವಹಿಸುವಂತೆ ಕುಲಪತಿ ವೇಣುಗೋಪಾಲ್ ಅವರಿಗೆ ಒತ್ತಡ ಹೇರಿದರೂ, ಯಾವುದೇ ಪ್ರಯೋಜನ ವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬೋಧನೆಗೆ ಆಯ್ಕೆ ಮಾಡಿದ ಪಠ್ಯದಲ್ಲಿ ಆಯ್ದುಕೊಂಡಿರುವ ವಿಷಯಗಳು ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ನೀಡುವಲ್ಲಿ ವಿಫಲ ವಾಗಿದೆ. ಈ ವಿಷಯದ ಅಭ್ಯಾಸದಿಂದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವುದಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರು ವಿಶ್ವ ವಿದ್ಯಾ ಲಯದ ಪ್ರಥಮ ಬಿಕಾಂ ಮತ್ತು ದ್ವಿತೀಯ ಸೆಮಿಸ್ಟರ್ನ ಕನ್ನಡ ಪಠ್ಯಪುಸ್ತಕ ಪಿಡಿಎಫ್ ಅನ್ನು ಬಿಡುಗಡೆಗೊಳಿ ಸಿದ್ದು, ಈ ಪಿಡಿಎಫ್ ನಲ್ಲಿ ಪುಸ್ತಕವೊಂದಕ್ಕೆ ಇರಬೇಕಾದ ಹಲವು ಲಕ್ಷಣಗಳು ಕಾಣೆಯಾಗಿವೆ.
ಪಠ್ಯಪುಸ್ತಕ ರಚಿಸಿರುವ ಕುರಿತು ಮಾಹಿತಿಯೇ ಕಾಣೆಯಾಗಿದ್ದು, ಅಗತ್ಯವಾದಲ್ಲಿ ಉಪನ್ಯಾಸಕರು ವಿಚಾರಿಸಿ ವಿವರ ಪಡೆದುಕೊಳ್ಳುವ ಅವಕಾಶವೇ ಇಲ್ಲದಂತಾ ಗಿದೆ. ಯಾವ ಕಾರಣವೋ, ಪಠ್ಯಪುಸ್ತಕವನ್ನು 4 ವಿಷಯ ಗಳಾಗಿ ವಿಂಗಡಿಸಿದ್ದು, ಆ ಮುಖ್ಯ ವಿಷಯಕ್ಕೆ ಸಂಬಂಧಿಸಿ ಗದ್ಯ, ಪದ್ಯಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಹಲವು ಕಡೆ ಮುಖ್ಯ ವಿಷಯಕ್ಕೂ, ಆಯ್ಕೆ ಮಾಡಿದ ಗದ್ಯ ಪದ್ಯಗಳಿಗೂ ನೇರ ಸಂಬಂಧವಿಲ್ಲ. ಮೊದಲ ಸೆಮಿಸ್ಟರ್ನ ಬಾಲ್ಯ ಎಂಬ ಮುಖ್ಯ ವಿಷಯದಲ್ಲಿ, ಕುವೆಂಪು ಅವರ ಹೇಮಾವತಿ ಎಂಬ ಲೇಖನವಿದೆ.
ಲೇಖನವಾಗಿ ಅದು ಅರ್ಥಪೂರ್ಣವೇ. ಆದರೆ, ಪದವಿ ವಿದ್ಯಾರ್ಥಿಗಳಿಗೆ ಬೇಕಾದ ಯಾವ ವಿಷಯವೂ ಅಲ್ಲಿಲ್ಲ. ಯಾವುದೇ ಸಾಧಕರ ಬಾಲ್ಯ, ಅವರ ಬದುಕಿನ ಮೇಲೆ ಬೀರಿದ ಪ್ರಭಾವಗಳನ್ನು ವಿವರಿಸುವ ಪಠ್ಯಗಳಾದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ಈ ಬಗ್ಗೆ ಮಾಹಿತಿಯೂ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನಕ್ಕೂ ಸಹಕಾರಿಯಾಗುತ್ತಿತ್ತು ಎನ್ನುವ ಮಾತುಗಳು ಕೇಳಿಬಂದಿದೆ.
ಪರಿವಿಡಿಯಲ್ಲಿರುವ ಹೆಸರು, ಒಳಗಿಲ್ಲ: ಪರಿವಿಡಿಯಲ್ಲಿರುವ ಪಠ್ಯದ ಶಿರೋನಾಮೆಗಳು, ಪಠ್ಯಪುಸ್ತಕದಲ್ಲಿ ಕಾಣೆಯಾಗಿವೆ. ಪೂಜೆ ಎಂಬ ಡಾ.ಎಚ್. ಜೆ. ಲಕ್ಕಪ್ಪ ಗೌಡರ ಲೇಖನ ಕೇವಲ ಪರಿವಿಡಿಯಲ್ಲಿದೆ. ಅಚ್ಚಿನ ದೋಷಗಳಿಗಂತೂ ಲೆಕ್ಕವೇ ಇಲ್ಲದಂತಾಗಿದೆ. ಎಷ್ಟೋ ಕಡೆಗಳಲ್ಲಿ ಲೇಖನಗಳು ಅರ್ಧಕ್ಕೆ ಮುಗಿದುಹೋಗಿದೆ.
ತಿರುತಿರುಗಿ ಮೊದಲ ಸಾಲುಗಳು ಅಚ್ಚಾಗಿವೆ. ಪಠ್ಯದ ಕೊನೆಯಲ್ಲಿ ಕವಿ-ಲೇಖಕರ ಪರಿಚಯ, ಆ ಪಠ್ಯವನ್ನು ಎಲ್ಲಿಂದ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ವಿವರ,
ಕಠಿಣ ಪದಗಳ ಅರ್ಥಗಳನ್ನು ನೀಡಲಾಗುತ್ತದೆ.
ಕುಲಪತಿಗಳ ನಿರ್ಲಕ್ಷ್ಯ
ಈ ಎಲ್ಲ ವಿಷಯಗಳ ಬಗ್ಗೆ ಗಮನಹರಿಸಬೇಕಾದ ಕುಲಪತಿಗಳು ಹೆಚ್ಚು ಗಮನ ಹರಿಸಿಲ್ಲ. ವಿವಿಧ ಸಮಿತಿಗಳನ್ನು ರಚಿಸಿ, ಆ ಸಮಿತಿಯಲ್ಲಿ ತೀರ್ಮಾನವಾಗಿರು ವುದೇ ಅಂತಿಮ ಎನ್ನುವ ರೀತಿಯಾಗಿರುವುದು ಈ ಸಮಸ್ಯೆಗೆ ಕಾರಣ. ವೇಣುಗೋಪಾಲ್ ಅವರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.